CMಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸೆಕೆಂಡರಿ ಕೃಷಿ ನಿರ್ದೇಶನಾಲಯದ ಕಾರ್ಯನಿರ್ವಹಣೆಯ

*ದಿನಾಂಕ 29-1-2021ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸೆಕೆಂಡರಿ ಕೃಷಿ ನಿರ್ದೇಶನಾಲಯದ ಕಾರ್ಯನಿರ್ವಹಣೆಯ ರೂಪುರೇಷೆಗಳಿಗೆ ಸಂಬಂಧಿಸಿದಂತೆ ನಡೆದ ಸಭೆಯ ಮುಖ್ಯಾಂಶಗಳು:* 

 

1.    ಸೆಕೆಂಡರಿ ಕೃಷಿ ನಿರ್ದೇಶನಾಲಯ ಕೃಷಿ ಇಲಾಖೆಗೆ ಹೊಂದಿ ಕೊಂಡಿದ್ದರೂ  ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು.

2.    ಮೀನುಗಾರಿಕೆ, ಪಶು ಸಂಗೋಪನೆ,   ಪಶುವೈದ್ಯಕೀಯ ಸೇರಿದಂತೆ ಸಮಗ್ರ ಕೃಷಿ ಹಾಗೂ ನೂತನ  ಚಟುವಟಿಕೆಗಳನ್ನು ಸೆಕಂಡರಿ  ಕೃಷಿ ನಿರ್ದೇಶನಾಲಯ ಹೊಂದಿರಬೇಕು

3.    ಇತರೆ ಚಟುವಟಿಕೆಗಳಿಗೆ ಭೂಮಿಯ ಸದ್ಬಳಕೆಗೆ ಒತ್ತು ನೀಡಬೇಕು.

4.    ಚಟುವಟಿಕೆಗಳನ್ನು ಗುರುತಿಸಿ ಅವುಗಳಿಗೆ ಬಂಡವಾಳ ತರಬೇಕು

5.    ಹೆಚ್ಚು ಕಾರ್ಮಿಕರನ್ನು ಬೇಡುವ ಚಟುವಟಿಕೆಗಳು ಇರಬಾರದು

6.     ಸೆಕೆಂಡರಿ ಕೃಷಿಯನ್ನು ಎಫ್ ಪಿ ಓಗಳಿಗೆ ಸಂಯೋಜಿಸಬೇಕು.

7.      ಯೋಜನೆಯ ಪ್ರಗತಿಯ ವರದಿಗೆ ವ್ಯವಸ್ಥೆ ರೂಪಿಸಬೇಕು.

8.     ಮೊದಲಿಗೆ ರೈತರು ಮಾನಸಿಕವಾಗಿ ಸಿದ್ಧಗೊಳಿಸಬೇಕು.

9.     ಕುಟುಂಬ ತಂತ್ರಾಂಶವನ್ನು ಬಳಸಿ, ರೈತರ ಕುಟುಂಬದ ಭೂ ಒಡೆತನ, ಮಾನವ ಸಂಪನ್ಮೂಲ ಮತ್ತಿತರ ಮಾಹಿತಿಯನ್ನು ಪಡೆದು, ಅವರ ಆದಾಯ ಹೆಚ್ಚಿಸಲು ಯೋಜನೆ ರೂಪಿಸಬೇಕು.

10.    ಒಳನಾಡು ಮೀನುಗಾರಿಕೆಯ ಆದಾಯ ಹೆಚ್ಚಿಸಲು ಒತ್ತು ನೀಡಬೇಕು ಎಂದು ಸೂಚಿಸಿದರು.

11.     ಪ್ರಾಯೋಗಿಕವಾಗಿ 4 ಜಿಲ್ಲೆಗಳಲ್ಲಿ ಯೋಜನೆ ಜಾರಿಗೆ ತೀರ್ಮಾನಿಸಲಾಯಿತು.

12.    ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಮತ್ತಿತರ ಸಂಬಂಧಿಸಿದ ಇಲಾಖೆಗಳು ಜೊತೆಯಾಗಿ ರೈತ ಕುಟುಂಬಗಳ ಸಮೀಕ್ಷೆ ನಡೆಸುವಂತೆ ಸೂಚಿಸಿದರು.

13.    ಜಿಲ್ಲಾ ಸಮಿತಿಗಳಲ್ಲಿ ಕೃಷಿ ವಿಶ್ವವಿದ್ಯಾಲಯಗಳ ತಜ್ಞರ ನೆರವು ಪಡೆಯಲು ಸೂಚಿಸಲಾಯಿತು.

14.   ಕೃಷಿ ಉತ್ಪನ್ನಗಳ ರಫ್ತು ಹಾಗೂ ವಿಸ್ತೃತ ಮಾರುಕಟ್ಟೆ ಒದಗಿಸಲು ಕೆಪೆಕ್ ನಲ್ಲಿ ಡಿಜಿಟಲ್ ವೇದಿಕೆ ಸೃಜಿಸುವಂತೆ ನಿರ್ದೇಶಿಸಿದರು.

Post a Comment

Previous Post Next Post