ಬಾಗಲಕೋಟೆ ಜಿಲ್ಲೆ ಬಾದಾಮಿ (Badami) ತಾಲೂಕಿನಲ್ಲಿರುವ ರಡ್ಡೇರ ತಿಮ್ಮಾಪುರದ ತಮ್ಮ ಸ್ವಗ್ರಾಮದಲ್ಲಿ ಹೃದಯಾಘಾತಕ್ಕೊಳಗಾಗಿದ್ದರು, ಅವರನ್ನು ತಕ್ಷಣವೇ ಬಾಗಲಕೋಟೆಯ ಕೆರೂಡಿ ಆಸ್ಪತ್ರೆಗೆ ಸೇರಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಎಚ್ ಬಿ ಪಾಟೀಲ ಎಂದು ಪ್ರಸಿದ್ಧರಾಗಿದ್ದ ಇವರಿಗೆ 80 ವರ್ಷ ವಯಸ್ಸಾಗಿತ್ತು. ಪತ್ನಿ, ಐವರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನನ್ನು ಅಗಲಿದ್ದಾರೆ. ಎಚ್ ಬಿ ಪಾಟೀಲ ನಿಧನದಿಂದ ಕಾಂಗ್ರೆಸ್ನ ಹಿರಿಯಕೊಂಡಿ ಒಂದು ಕಳಚಿದ ಹಾಗೆ ಆಗಿದ್ದು, ಪಕ್ಷಕ್ಕೆ ತುಂಬಲಾರದ ನಷ್ಟ ಎನ್ನಬಹುದು.
ಪಾಟೀಲರ ಮಗ ಡಾ ಭೀಮನಗೌಡ ಪಾಟೀಲ್ ಲಂಡನ್ ನಲ್ಲಿ ನ್ಯೂರೋಲಾಜಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಅವರು ಅಲ್ಲಿಂದ ಬರಬೇಕಿದ್ದು, ಅವರ ಅಂತಿಮ ಸಂಸ್ಕಾರ ಬುಧವಾರ ಮಧ್ಯಾಹ್ನ 12 ಗಂಟೆಗೆ ಸ್ವಗ್ರಾಮದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
Goa ತನ್ನದೆಂದಿದ್ದ ಎರಡು ತಾಲೂಕುಗಳು ಈಗ ಅಧಿಕೃತವಾಗಿ ಕರ್ನಾಟಕಕ್ಕೆ ಸೇರ್ಪಡೆ
ಪಾಟೀಲರು 1984-89 ರ ಸಮಯದಲ್ಲಿ ಬಾಗಲಕೋಟೆಯ ಸಂಸದರಾಗಿದ್ದರು. ಇಂದಿರಾ ಗಾಂಧಿಯವರ ನಿಧನದ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 414ಕ್ಕೂ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆದ ಸಂದರ್ಭದಲ್ಲಿ ಪಾಟೀಲ್ ಅವರು ಬಾಗಲಕೋಟೆಯಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು.
ಇನ್ನು ಈ ಚುನಾವಣೆಯ ನಂತರ ರಾಜೀವ್ ಗಾಂಧಿ ಸರ್ಕಾರದಲ್ಲಿ ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಹೇಳಲಾಗುತ್ತಿತ್ತು, ಆದರೆ ಅವರಿಗೆ ಸಚಿವ ಸ್ಥಾನ ಲಭ್ಯವಾಗಲಿಲ್ಲ. ಪಕ್ಷದಲ್ಲಿ ಯಾವುದೇ ಸ್ಥಾನಮಾನ ಸಿಗಲಿ ಬಿಡಲಿ ಎಂದಿಗೂ ಪಕ್ಷದ ವಿರುದ್ಧ ಮಾತನಾಡದೇ, ಅಸಮಾಧಾನ ವ್ಯಕ್ತಪಡಿಸಿದ ಪಕ್ಷ ನಿಷ್ಠೆ ಮೆರೆದಿದ್ದರು.
ಎಮ್ ಎ ಪದವಿ ಪಡೆದಿದ್ದ ಹೆಚ್ ಬಿ ಪಾಟೀಲ್ ಅವರು ವಿದ್ಯಾರ್ಥಿಯಾಗಿದ್ದ ಸಮಯದಿಂದಲೂ ಆಗಿನ ಲೋಕಸಭೆ ಸದಸ್ಯರಾಗಿದ್ದ ಗದಗದ ಕೆ ಹೆಚ್ ಪಾಟಿಲ್ ಹಾಗೂ ದಿ. ಎಸ್ ಬಿ ಪಾಟೀಲ್ ಜೊತೆ ಸಂಪರ್ಕದಲ್ಲಿದ್ದು, ಅವರುಗಳು ಹಾಕಿಕೊಟ್ಟ ದಾರಿಯಲ್ಲಿಯೇ ರಾಜಕೀಯಕ್ಕೆ ಬಂದಿದ್ದರು.
ಇನ್ನು ಸಂಸದರಾಗಿದ್ದ ಸಮಯದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದರು. ವಿಜಯಪುರ ಜಿಲ್ಲೆಯ ನಂದಿ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಲೈಸೆನ್ಸ್ ನೀಡುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ, ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ನೂಲಿನ ಗಿರಣಿ ಚೇರ್ಮನ್ ಆಗಿ ಕಾರ್ಯನಿರ್ವಹಿಸಿದ್ದರು.

ತುಂಬಾ ಸರಳ ಬದುಕನ್ನು ನಡೆಸಿದ್ದ ಪಾಟೀಲ್ ಅವರ ನಿಧನ ನಿಜಕ್ಕೂ ಬಾಗಲಕೋಟೆ ಜನರಿಗೆ ದೊಡ್ಡ ನಷ್ಟ ಎನ್ನಬಹುದು. ಅಲ್ಲದೇ ಎಂದಿಗೂ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರಲಿಲ್ಲ, ಕುಟುಂಬ ರಾಜಕಾರಣದ ವಿಚಾರದಲ್ಲಿ ಸಹ ಎಂದಿಗೂ ದೂರವಿದ್ದವರು, ಒಂದು ರೀತಿಯ ಮಾದರಿ ಬದುಕು ನಡೆಸಿದವರು ಎನ್ನಬಹುದು.
Post a Comment