ಉಕ್ರೇನ್ ನಲ್ಲಿ ಮೃತ ಪಟ್ಟಿರುವ ನವೀನ್ ಕುಟುಂಬಕ್ಕೆ ಪರಿಹಾರ: *ರಾಜ್ಯಕ್ಕೆ ನವೀನ್ ಪಾರ್ಥಿವ ಶರೀರ ತರಲು ಆದ್ಯತೆ*

[02/03, 12:11 AM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ಜೆಪಿ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಚಿತ್ರನಟ ಸುದೀಪ್ ಅವರನ್ನು ಸನ್ಮಾನಿಸಲಾಯಿತು. ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ವಚನಾನಂದ ಶ್ರೀಗಳು, ಸಚಿವರಾದ ಬೈರತಿ ಬಸವರಾಜ, ಮುನಿರತ್ನ, ಕೋಲಾರ ಸಂಸದ ಮುನಿಸ್ವಾಮಿ ಮತ್ತು ಇತರರು ಉಪಸ್ಥಿತರಿದ್ದರು.

[02/03, 1:37 PM] Gurulingswami. Holimatha. Vv. Cm: *ಕಾಂಗ್ರೆಸ್ ಗೆ ರಾಜಕಾರಣವೇ  ಮುಖ್ಯ* *ಸಿಎಂ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಮಾರ್ಚ್ 02 :  ಕಾಂಗ್ರೆಸ್ ಗೆ  ಜನರ ಸಂಕಷ್ಟಕ್ಕಿಂತಲೂ ಯಾವಾಗಲೂ ರಾಜಕಾರಣವೇ ಕಾಂಗ್ರೆಸ್ ಗೆ ಮುಖ್ಯ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 


ಉಕ್ರೇನ್ ನಲ್ಲಿ ನವೀನ್ ಮೃತ ಪಟ್ಟಿದ್ದಕ್ಕೆ ಬಿಜೆಪಿ ಯನ್ನು ಹೊಣೆ ಮಾಡಿರುವ ಕಾಂಗ್ರೆಸ್ ಪಕ್ಷದವರ ಟೀಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು,  ಯುದ್ಧದಲ್ಲಿ ಯಾರಾದರೂ ಮಾಡಿದರೆ ರಾಜಕಾರಣ ಮಾಡುತ್ತಾರೆ ಅಂದರೆ ಕಾಂಗ್ರೆಸ್ ಎಷ್ಟು ತಳಮಟ್ಟಕ್ಕೆ ಹೋಗಿದೆ  ಎಂದ ಮುಖ್ಯಮಂತ್ರಿಗಳು, ಹಿಂದೆ ಕೂಡ ಯುಪಿಎ ಸರ್ಕಾರ ಇದ್ದಾಗ ಯುದ್ಧ ನಡೆದಿದ್ದು, ಒಬ್ಬರನ್ನು ಕರೆ ತರಲು ಆಗಲಿಲ್ಲ. ದೊಡ್ಡ ಪ್ರಮಾಣದಲ್ಲಿ ತಮ್ಮ ದೇಶದ ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ತಮ್ಮ ದೇಶಕ್ಕೆ ಮರಳಿ ಕರೆತಂದಿರುವುದು ಭಾರತ ಮಾತ್ರ. ನಾಲ್ಕು ಜನ ಮಂತ್ರಿಗಳು ಉಕ್ರೇನ್ ನಲ್ಲಿದ್ದಾರೆ. ರಾಯಭಾರ ಕಚೇರಿಗಳನ್ನು  ಬಳಪಡಿಸಲಾಗಿದೆ. ಸಂವಹನ ಇದೆ. ಇನ್ನು 26 ವಿಮಾನಗಳು ಮುಂದಿನ 72 ಇಲ್ಲಿಗೆ ಬರಲಿವೆ. ನಿರಂತರವಾಗಿ ಪ್ರಕ್ರಿಯೆ ನಡೆದಿದೆ ಎಂದರು.
[02/03, 1:37 PM] Gurulingswami. Holimatha. Vv. Cm: ಉಕ್ರೇನ್ ನಲ್ಲಿ ಮೃತ ಪಟ್ಟಿರುವ ನವೀನ್ ಕುಟುಂಬಕ್ಕೆ ಪರಿಹಾರ: 
*ರಾಜ್ಯಕ್ಕೆ  ನವೀನ್ ಪಾರ್ಥಿವ ಶರೀರ ತರಲು  ಆದ್ಯತೆ*

ಬೆಂಗಳೂರು, ಮಾರ್ಚ್ 02: ಉಕ್ರೇನ್ ನಲ್ಲಿ ಮೃತಪಟ್ಟಿರುವ ನವೀನ್  ಪಾರ್ಥಿವ ಶರೀರವನ್ನು ತಾಯ್ನಾಡಿಗೆ  ತರುವುದು ಸರ್ಕಾರದ  ಪ್ರಥಮ ಆದ್ಯತೆಯಾಗಿದೆ.    ನವೀನ್ ಕುಟುಂಬಕ್ಕೆ ಎಲ್ಲ ಸಹಾಯ, ಸಹಕಾರ ನೀಡ ಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. 


 ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಗ್ಯಾನಗೌಡರ್ ಅವರು ಹಾಕಿಕೊಂಡಿರುವ ಬಟ್ಟೆಗಳನ್ನು ಹೋಲುವ ಕೆಲವು ಛಾಯಾಚಿತ್ರಗಳನ್ನು ಆತನ ಸ್ನೇಹಿತರು ಕಳುಹಿಸಿಕೊಟ್ಟಿದ್ದಾರೆ. ಶೆಲ್ ದಾಳಿ ನಿಂತ ಮೇಲೆ  ನವೀನ್ ಜೊತೆಗಿದ್ದವರು ತೆಗೆದ ಚಿತ್ರಗಳವು ಅವು. ಈ ಬಗ್ಗೆ  ವಿದೇಶಾಂಗ ಸಚಿವರೊಂದಿಗೆ ಹಾಗೂ ಉಕ್ರೇನಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೂ ಮಾತನಾಡಿ ನವೀನ್ ಪಾರ್ಥಿವ ಶರೀರವನ್ನು ಪಡೆಯಲು ಗಂಭೀರ ಪ್ರಯತ್ನ ಮಾಡಲಾಗುವುದು ಎಂದರು.

ಭಾರತ ಸರ್ಕಾರ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ತೆರವು  ಮಾಡಲು  ತೀವ್ರ ಪ್ರಯತ್ನ ಮಾಡುತ್ತಿದೆ. ಸುಮಾರು 26 ವಿಮಾನಗಳು ಮುಂದಿನ 2-3  ದಿನಗಳಲ್ಲಿ  ಕರೆತರುತ್ತಿದ್ದು, ಇಂಪೈಕಿ ಕನ್ನಡಿಗರನ್ನು ಕರೆತರಲು ಗರಿಷ್ಠ ಪ್ರಯತ್ನ ಮಾಡಲಾಗುವುದು. 
ಬೇರೆ ಬೇರೆ ನಗರಗಳಲ್ಲಿ ಇರುವವರನ್ನು ಬೇರೆ ಬೇರೆ ದಿಕ್ಕಿನಲ್ಲಿ ಬರಲು ತಿಳಿಸಲಾಗಿದೆ. ವನ್ನು ನಿರಂತರವಾಗಿ ಸಮನ್ವಯ ಮಾಡಲಾಗುತ್ತಿದೆ.  

ಯುದ್ಧ ನಡೆಯುತ್ತಿರುವುದರಿಂದ ಸ್ವಲ್ಪ ಕಷ್ಟವಾಗಿದೆ.  ಭಾರತ ಸರ್ಕಾರ ಉಕ್ರೇನ್ ಸರ್ಕಾರದೊಂದಿಗೆ ಮಾತನಾಡಿ ಸುರಕ್ಷಿತ ವಲಯಗಳಿಗೆ ಹೇಗೆ ಹೋಗಬೇಕೆನ್ನುವುದನ್ನು ಯೋಜಿಸಿ ಗುಂಪಿನಲ್ಲಿ ತೆರಳಲು ನಿರ್ದೇಶನ ನೀಡಿದೆ. ಹತ್ತಿರದ ರೈಲ್ವೆ ನಿಲ್ದಾಣದಲ್ಲಿ  ಪಶ್ಚಿಮ ದಿಕ್ಕಿನತ್ತ ಬರಲು ಯೋಜಿಸಿದೆ.  ಯುದ್ಧ ಭೂಮಿಯಿಂದ ಕನ್ನಡಿಗರನ್ನು ಹೊರತರುವ ಪ್ರಯತ್ನ ನಡೆದಿದೆ. 

*ನವೀನ್ ಜೊತೆಗಿದ್ದವರ ಬಗ್ಗೆ ವಿಚಾರಣೆ*

ನವೀನ್ ಜೊತೆಗಿದ್ದ ಗಾಯಾಳು ವಿದ್ಯಾರ್ಥಿಯ ಸ್ಥಿತಿಗತಿಯ ಬಗ್ಗೆ ವಿಚಾರಣೆ ನಡೆದಿದೆ.ಒಂದು ವರದಿಯ ಪ್ರಕಾರ ಜೊತೆಗಿದ್ದ ಎಂದು, ಮತ್ತೊಂದರ ಪ್ರಕಾರ ಇರಲಿಲ್ಲ. ಸುರಕ್ಷಿತವಾಗಿದ್ದಾನೆ ಎಂಬ ಮಾಹಿತಿಗಳಿವೆ. ಈ ಬಗ್ಗೆ ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದರು.

Post a Comment

Previous Post Next Post