ಚಿಂತನ..

[31/03, 8:38 AM] Pandit Venkatesh. Astrologer. Kannada: ಶ್ರಾದ್ಧ ಕ್ರಿಯೆಯ ವೈಜ್ಞಾನಿಕತೆ

ಶ್ರಾದ್ಧ ಕ್ರಿಯೆಯು ದೈವಿಕವಾಗಿದ್ದರೂ ವೈಜ್ಞಾನಿಕತೆಗೆ ಎಟುಕಲಾರದ ವಿಷಯವಲ್ಲ. ಪಂಚಭೂತಗಳಿಂದ
ಭೌತಿಕ ಶರೀರ ಉಂಟಾಗಿದೆ. ಮರಣಾನಂತರ ಇದು ನಾಶವಾದರೂ, ತೇಜಸ್ಸು, ಪಂಚವಾಯು ಮತ್ತು
ಆಕಾಶ ತತ್ವಗಳು ಮನೋಮಯ ಕೋಶದೊಡನೆ ಕರ್ಮಾನುಸಾರ ಶರೀರಾಂತರವನ್ನು ಸೇರುವುದು.
ತಂದೆಯ ಸೂಕ್ಷ್ಮ ಶರೀರಕ್ಕೂ ಪುತ್ರನ ಸೂಕ್ಷ್ಮ ಶರೀರಕ್ಕೂ ಪರಸ್ಪರ ಆಕರ್ಷಣೆಯ ಋಣಾನುಬಂಧವಿದೆ.
ಪಿತೃವಿನ ಮರಣಾನಂತರವೂ ಈ ಸಂಬಂಧವು ತೊಲಗಲಾರದು. ಆದಕಾರಣ ಪುತ್ರಕೃತ ಸಂಸ್ಕಾರಗಳು ಪಿತೃಗಳ ಸದ್ಗತಿಗೆ ಸಾಧಕಗಳಾಗುವುದು. ಇದು ಶಾಸ್ತ್ರಸಿದ್ಧ
 ಮೃತ ವ್ಯಕ್ತಿಯ ಸೂಕ್ಷ್ಮ ಶರೀರವು ಯಾವ ಅಜ್ಞಾತ ಯೋನಿಯಲ್ಲಿದ್ದರೂ (ಆಕಾಶದ ಶಬ್ದ, ವಾಯುವಿನ ಸ್ಪರ್ಶ, ತೇಜಸ್ಸಿನ ತರಂಗಗಳು ಇಲ್ಲಿಂದಲ್ಲಿಗೆ ಸದಾ ಪ್ರವಹಿಸುತ್ತಿರುವ ಕಾರಣ) ಮಾಡುವ ಶ್ರಾದ್ಧದಲ್ಲಿ ಕ್ರಿಯಾಶಕ್ತಿ, ಮಂತ್ರಶಕ್ತಿ, ದ್ರವ್ಯಶಕ್ತಿಗಳು ಸಮ್ಮಿಳಿತವಾಗಿ ಲೋಕಾಂತರದಲ್ಲಿರುವ ಪಿತೃಗಳಿಗೆ (ಪಿಂಡ ತಿಲತರ್ಪಣಗಳು) ರೂಪಾಂತರ ಹೊಂದಿ ಆಹಾರವಾಗಿ ಪರಿಣಮಿಸುತ್ತದೆ. ಮಾನವನ ಸೀಮಿತ ದೃಷ್ಟಿಗೆ ಇದು ಗೋಚರಿಸದಿದ್ದರೂ "ಶ್ರಾದ್ಧೇ ಯೋಗಃ ಪ್ರವರ್ತತೇ' ಎಂದು ಋಷಿಗಳು ಈ ಸೂಕ್ಮ ರಹಸ್ಯವನ್ನು ಮನಗಂಡಿದ್ದಾರೆ.

ಶ್ರಾದ್ಧ ಕರ್ಮದ ಉದ್ದೇಶವೇನು?
ಮರಣಾನಂತರ ಜೀವಿಗೆ ತನ್ನ ಕರ್ಮಾನುಸಾರ ಸ್ವರ್ಗವೋ, ನರಕವೋ ಪ್ರಾಪ್ತಿ. ಸ್ವರ್ಗವಾದರೆ ಮೋಕ್ಷ, ಪುನರ್ಜನ್ಮವಿಲ್ಲವೆಂದು ನಂಬಿಕೆ. ಅವರಿಗೆ ಶ್ರಾದ್ಧಕರ್ಮಗಳಲ್ಲಿನ ತರ್ಪಣಗಳು ಏಕೆ ಬೇಕು? ನರಕವಾದರೆ ಪಾಪದ ಫಲ ಅನುಭವಿಸಿದ ನಂತರ ಪುನರ್ಜನ್ಮ. ಯಾವುದೋ ರೂಪದಲ್ಲಿ ಬೇರೆಯಲ್ಲಿಯೋ ಜನ್ಮ ಪಡೆದ ಪಿತೃಗಳಿಗೆ ನಾವು ಪಿಂಡಪ್ರದಾನ ಮಾಡುವುದರ ಅವಶ್ಯಕತೆಯೇನು? ದೇಹತ್ಯಾಗದ ನಂತರ ಆತ್ಮ ಪರಮಾತ್ಮನಲ್ಲಿ ಐಕ್ಯವಾದ ಮೇಲೆ ಜೀವಿಯ ಆತ್ಮಕ್ಕೆ ಪ್ರತ್ಯೇಕ ಅಸ್ತಿತ್ವವೆಲ್ಲಿದೆ? ಹೀಗಾಗಿ ಇಲ್ಲಿಯೂ ಶ್ರಾದ್ಧದ ಪ್ರಮೇಯವೇನು? 
ಸಾಮಾನ್ಯವಾಗಿ ಆಸ್ತಿಕ ಸಮಾಜದಲ್ಲಿ ಆಸಕ್ತರಿಗೆ ಪಿತೃಶ್ರಾದ್ಧಾದಿ ಕಾರ್ಯ ಒಂದು ಕರ್ತವ್ಯವೆಂತಲೂ, ಅದನ್ನು ಶ್ರದ್ಧೆಯಿಂದ ಮಾಡಬೇಕೆಂತಲೂ ನಂಬಿಕೆಯಿದೆ. ಇದು ಸಾರ್ಥಕ ನಂಬಿಕೆ. ತಲತಲಾಂತರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ ಆಸ್ತಿಕ ಜನರು. ಆದರೆ ಆಚರಣೆಗಳನ್ನು ನೋಡಿ ಹೀಗೆಳೆಯುವ, ನಿಂದೆ ಮಾಡುವ ವರ್ಗವೂ ಇದೆ. ಇದೇಕೆ ಮಾಡಬೇಕು? ಇದರಿಂದೇನು ಉಪಯೋಗ? ಎಂದು ಹಾಸ್ಯ ಮಾಡುವ ಜನರಿಗೂ ಕೊರತೆ ಇಲ್ಲ. ಅವರಿಗೆ ಉತ್ತರಿಸುವ ಉದ್ದೇಶವೂ ನನ್ನದಲ್ಲ. ಆಸ್ತಿಕರಾದ ಜನರಿಗೆ ಅವರ ಪಿತೃಭಕ್ತಿಯ ಜೊತೆಯಲ್ಲಿ ಶ್ರದ್ಧೆ ಹೆಚ್ಚಾಗಲಿ ಎನ್ನುವ ಉದ್ದೇಶದಿಂದ ಶ್ರಾದ್ಧ ಸಾಫಲ್ಯತೆಯ ಕುರಿತು ಈ ಎರಡು ಮಾತನ್ನು ಬರೆಯುತ್ತಿದ್ದೇನೆ. ಇದನ್ನು ಓದಿದ ಪಿತೃಭಕ್ತಿ ಪರಾಯಣರಾದ ಶ್ರದ್ಧಾಳುಗಳು ಇನ್ನೂ ಹೆಚ್ಚಿನ ಶ್ರದ್ಧೆಯಿಂದ ತಮ್ಮ ತಂದೆತಾಯಿಯರ ಮೃತತಿಥ ಅಥವಾ ಪುಣ್ಯತಿಥಿ ಆಚರಿಸೋಣ. 

ಪಿತೃಶ್ರಾದ್ಧದ ಮುಖ್ಯ ಉದ್ದೇಶವೇನು?
ಇಲ್ಲಿ ಪಿತೃವೆಂದರೆ ಯಾರು? ಯಾವುದು? ಅದೇಕೆ ಗೌರವಾನ್ವಿತ ಹಾಗೂ ಪೂಜನೀಯವಾಯ್ತು? ಅದು ವ್ಯಕ್ತಿಯೇ? ದೇಹವೇ? ಶಕ್ತಿಯೇ? ತತ್ವವೇ? ಚಿಂತಿಸೋಣ.
ಸಾಮಾನ್ಯವಾಗಿ ಸೂತ್ರಕಾರರ ಅಭಿಮತದಂತೆ ಪಿತೃ ಎಂಬುದು ಒಂದು ಸ್ಥಾನ, ಹುದ್ದೆ. ಅದಕ್ಕೆ ಅದರದ್ದೇ ಆದ ಜವಾಬ್ದಾರಿ, ಬದ್ಧತೆ ಇರುತ್ತದೆ. ಅದನ್ನು ಹುಟ್ಟಿದ ಪ್ರತಿಯೊಂದು ಜೀವಿಯೂ ಹೊಂದಲೇ ಬೇಕಾದ ಹುದ್ದೆ. ಅದನ್ನು ಪಡೆಯಲು, ಜವಾಬ್ದಾರಿಯುತವಾಗಿ ನಿರ್ವಹಿಸಲು ಅಸಮಾನ್ಯ ಜ್ಞಾನವು ಬೇಕು. ಆ ಜ್ಞಾನವು ಅನುಭವದಿಂದ ಮಾತ್ರ ಪ್ರಾಪ್ತವಾಗುವಂತಹದ್ದು. ಕಲಿಕೆಯಿಂದ ಬರುವಂತಹದ್ದಲ್ಲ. ಅಂತಹಾ ಹುದ್ದೆಯನ್ನು ಅಲಂಕರಿಸಿದ್ದಾರೆ ನಮ್ಮ ಭೌತಿಕ ವ್ಯಾವಹಾರಿಕ ಪ್ರಪಂಚದ ಪಿತೃಗಳು. ಅಂದರೆ ಭಾವನಾತ್ಮಕ ತಂದೆಯೆಂದು ಅರ್ಥ. ವ್ಯಕ್ತಿಗತವಾಗಿ ಆ ಸ್ಥಾನವನ್ನು ಸಮರ್ಥವಾಗಿ ಅವರು ನಿರ್ವಹಿಸಿದ್ದಾರೆ ಎಂದು ಹೇಳುವ ಅರ್ಹತಾ ಪತ್ರವೇ ನಾವು. ಹಾಗಿದ್ದಾಗ ಅವರ ನಿರ್ವಹಣೆಯಲ್ಲಿ ಅನರ್ಹರು ಎಂದರೆ ನಾವು ಅನರ್ಹರು ಎಂದೇ ಅರ್ಥ.

ಅಂತಹಾ ಪಿತೃಸ್ಥಾನ ಪಟ್ಟವು ಪ್ರತಿಯೊಬ್ಬ ಜೀವಿಯೂ ಬಯಸಿ ಪಡೆಯುವ ಪಟ್ಟ. ಅದರ ಮಹತ್ವವೆಷ್ಟಿರಬಹುದು ಚಿಂತಿಸಿ? ಅದನ್ನು ಪಡೆದು ನಿರ್ವಹಿಸಿ, ಯಶಸ್ವಿಯಾಗಿ ನಮ್ಮನ್ನು ಈ ಲೋಕಕ್ಕೆ, ಸಮಾಜಕ್ಕೆ ಕೊಟ್ಟು ತಾವು ತೇರ್ಗಡೆಯಾಗಿ ವಿರಮಿಸಿದ ತಂದೆತಾಯಿಯ ಸ್ಥಾನ ಪೂಜಾರ್ಹವಲ್ಲವೇ ಚಿಂತಿಸಿ? ಅಂತಹಾ ಸ್ಥಾನವನ್ನು ಗೌರವಿಸುವುದು ಧರ್ಮವಲ್ಲವೇ? ಇದು ಶ್ರಾದ್ಧದ ಹಿನ್ನಲೆಯಲ್ಲಿರುವ ಮಾನವೀಯ ಧರ್ಮ.

ಇನ್ನು ಮೃತಾನಂತರ ಪುನರ್ಜನ್ಮ. ಅವರಿಗೇಕೆ ತರ್ಪಣ? ಪಿಂಡಪ್ರಧಾನ ಎಂಬ ಪ್ರಶ್ನೆಗಳಿವೆ. ಜನರೇ, ಈ ದೃಷ್ಟಿಯಿಂದ ಚಿಂತಿಸಬೇಕು – ತಂದೆಯು ಮೃತನಾಗುವುದಿಲ್ಲ, ದೇಹ ಮಾತ್ರ ನಾಶವಾಗಿದೆ. ತಂದೆಯು ಪುನರ್ಜನ್ಮ ಪಡೆದಿಲ್ಲ, ಆತ್ಮವು ಮಾತ್ರ ಪಡೆದಿದೆ. ತಂದೆ ಎಂಬ ಸ್ಥಾನ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ, ತಂದೆಯಾಗಿಯೇ ಉಳಿದಿರುತ್ತಾರೆ. ಆತ್ಮವು ಮಾತ್ರ ಪುನರ್ಜನ್ಮ ಪಡೆದು ಹುಟ್ಟಿಬರಬಹುದು. ಆದರೆ ಅದು ಪ್ರಾಣಿಯಾಗಿ ಹುಟ್ಟಿತು ಎಂದು ಯಾರೂ ಪ್ರಸಕ್ತಕಾಲದ ವಿಳಾಸ ಹೇಳುವಾಗ ತನ್ನ ತಂದೆಯು ಪ್ರಾಣಿಯಾಗಿ ಪುನರ್ಜನ್ಮ ಪಡೆದಿದ್ದಾರೆ ಎಂದು ಗೊತ್ತಿದ್ದರೂ ತಾನು ಪ್ರಾಣಿಯ ಮಗನೆಂದು ತನ್ನ ಹೆಸರಿನ ಮುಂದೆ ಸೇರಿಸಿಕೊಳ್ಳುವುದಿಲ್ಲ. ಪುನರ್ಜನ್ಮ ಸಿಕ್ಕಿದೆಯೋ, ಬಿಟ್ಟಿದೆಯೇ ಅದು ಬೇರೆಯ ವಿಚಾರ. ಈ ಶ್ರಾದ್ಧವನ್ನು ಮಾಡಬೇಕಾದ ಮಗನು ಬದುಕಿರುವವರೆಗೆ, ತಂದೆ ಎಂಬ ಭಾವನಾತ್ಮಕ ಅಸ್ತಿತ್ವವು ಪುನರ್ಜನ್ಮ ಪಡೆಯುವುದಿಲ್ಲ. ಆ ಪಟ್ಟ ಈ ಮಗನಿಗೆ ಸಿಗದೇ ಇರಬಹುದು. ಅಲ್ಲಿಂದ ಮುಂದೆ ಹುಟ್ಟಿದ ಆ ಮಗನಿಂದ ಶ್ರಾದ್ಧವಿಲ್ಲ, ಬೇಕಿಲ್ಲ. ಆದರೆ ತಂದೆಯ ಸ್ಥಾನ ನಿರ್ವಹಿಸಿದ ಈ ಬ್ರಹ್ಮಚಾರೀ ಮಗನನ್ನಾದರೂ ಈ ಭೂಮಿಗೆ ಕೊಟ್ಟ ತಂದೆಯು ತನ್ನ ಸ್ಥಾನ ನಿರ್ವಹಣೆ ಮಾಡಿದ್ದಾರೆ. ಅಲ್ಲಿಯವರೆಗೆ ಶ್ರಾದ್ಧ ಸಾಧುವೇ, ಸತ್ಯವೇ, ನ್ಯಾಯವೇ ಆಗಿರುತ್ತದೆ. ಅದು ಈ ಮಗನ ಅಸ್ತಿತ್ವವನ್ನು ಉಳಿಸಿಕೊಡುತ್ತದೆ ನೆನಪಿರಲಿ.

ಇಲ್ಲಿಯವರೆಗೆ ಪಿತೃಸ್ಥಾನ ಮತ್ತು ಮಗನ ಕರ್ತವ್ಯ ನಿರ್ವಹಣೆ. ಪ್ರತೀ ಜೀವಿಯೂ ಒಂದೊ ತಂದೆಯಾಗಿ ಅಥವಾ ತಾಯಿಯಾಗಿ ಸಾಫಲ್ಯತೆ ಕಾಣುವ ನಮ್ಮ ಆಧ್ಯಾತ್ಮಿಕ, ದೈವೀಕ ನೆಲೆಗಟ್ಟಿನ ಸಮಾಜ ಜೀವನದ ಪರಮೋನ್ನತ ಪದವಿ ತಂದೆ-ಯಾ- ತಾಯಿ. ಈ ಪದವಿಗಾಗಿ ಪ್ರತೀಜೀವಿಯೂ ಹಾರೈಸುತ್ತದೆ. ಅಂತಹಾ ಪದವಿ ಆಕಾಂಕ್ಷೆಯಾದ ಪ್ರತೀಜೀವಿಯೂ ಆ ಸ್ಥಾನವನ್ನು ಶ್ರದ್ಧೆಯಿಂದ ಗೌರವಿಸಿದರೆ ನಿಸ್ತಂತುವಾಗಿ ವಂಶ ಬೆಳೆಯುತ್ತದೆ. ಇಲ್ಲವಾದರೆ ಮುಂದೆ ಸಂತಾನ ಲಭ್ಯವಿಲ್ಲದೆ ವಂಶ ನಿಂತು ಹೋಗಬಹುದು. ಆದ್ದರಿಂದ ಶ್ರಾದ್ಧ, ತರ್ಪಣ, ಪ್ರತಿಯೊಬ್ಬರ ಮುಖ್ಯ ಕರ್ತವ್ಯ. ಅದು ಆ ಸ್ಥಾನವನ್ನು ಗೌರವಿಸಿದಂತೆ. 

ಪಿತೃ ಋಣವು ಮನುಷ್ಯ ತೀರಿಸಲೇಬೇಕಾದ ಬಹುಮುಖ್ಯ ಋಣಗಳಲ್ಲೊಂದು. ಏಕೆಂದರೆ, ನಮಗೆ ಈ ದೇಹ ದೊರೆತಿರುವುದೇ ಪಿತೃಗಳಿಂದ. ಅವರು ಸಂತೃಪ್ತರಾಗಿ ಆಶೀರ್ವಾದ ಮಾಡಿದರೆ ಅದಕ್ಕಿಂತ ಹೆಚ್ಚಿನ ಬಲ ಇನ್ನೊಂದಿಲ್ಲ. ಹೀಗಾಗಿ ಪಿತೃ ಕಾರ್ಯಕ್ಕೆ ಅರ್ಹರಾದವರು ಅದನ್ನು ಮಾಡಲೇಬೇಕು ಮತ್ತು ಕಿರಿಯರು ಇದರ ಪ್ರಸಾದ, ಮಂತ್ರಾಕ್ಷತೆ ಪಡೆಯಬೇಕು.  

 ಒಬ್ಬರ ಮೂರು ತಲೆಮಾರುವರೆಗಿನ ಹಿರಿಯರು/ಪೂರ್ವಜರು/ಪಿತೃಗಳ ( ಸ್ಥಾನ) ಪಿತೃಲೋಕದಲ್ಲಿ ಅಂದರೆ ಭೂಮಿ ಮತ್ತು ಸ್ವರ್ಗದ ನಡುವಿನ ಪ್ರದೇಶದಲ್ಲಿ ವಾಸ ಮಾಡಿಕೊಂಡಿರುತ್ತಾರೆ 
ಅಂದರೆ ಈ ಪಿತೃಲೋಕದಲ್ಲಿ ಮೂರು ತಲೆಮಾರಿನ ಭಾವನಾಶಕ್ತಿ ಗಳು  ಇರುತ್ತವೆ. ಶ್ರಾದ್ಧ ಮಾಡುವಾಗ ಈ ಲೋಕದಲ್ಲಿರುವ ಮೂರು ತಲೆಮಾರಿನ ಪೂರ್ವಜರಿಗೆ  ಪಿಂಡ ಪ್ರದಾನ ಮತ್ತು ತರ್ಪಣ ಕೊಡುವ ಸಂಪ್ರದಾಯ. 

ಪರಮ ದುರ್ಲಭವಾದ ಮನುಷ್ಯಜನ್ಮದ ಸಾಫಲ್ಯತೆಯು ಅದನ್ನು ಪಡೆದ ನಮ್ಮ ಆಚರಣೆಗಳ ಮೇಲೆ ಅವಲಂಬಿತವಾಗಿರುತ್ತದೆ. ಪರಮಾತ್ಮ ನಮಗೆ ಈ ಜನ್ಮವನ್ನು ಏತಕ್ಕಾಗಿ ನೀಡಿದ್ದಾನೆ ಎಂದರೆ ಹಿಂದಿನ ಜನ್ಮದ ಪಾಪ ಶೇಷಗಳನ್ನು ಅನುಭವಿಸಿ ಮುಗಿಸಿ ಮತ್ತೆ ಇನ್ನೂ ಹೆಚ್ಚಿನದಾದ ಪುಣ್ಯಸಂಪಾದನೆ ಮಾಡಿ ಮೋಕ್ಷವನ್ನು ಪಡೆಯಲಿ ಎಂದು. ಶಾಸ್ತ್ರಗಳ ಪ್ರಕಾರ ಮೃತರ ಆತ್ಮಗಳಿಗೆ ಶಾಶ್ವತ ಪಿತೃಲೋಕ ಪ್ರಾಪ್ತಿಯಾಗುವಂತೆ ಮಾಡುವುದು ಅವರ ಮಕ್ಕಳ ಕರ್ತವ್ಯ.

ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಕೂಡ ತನ್ನ ತಂದೆ ದಶರಥನ ಮರಣ ವಾರ್ತೆಯನ್ನು ಕೇಳಿ ತಕ್ಷಣವೇ ಸಮೀಪದ ನದಿಯಲ್ಲಿ ಹೋಗಿ ದಕ್ಷಿಣಾಭಿಮುಖವಾಗಿ ತನ್ನ ಕೈಯ ಬೊಗಸೆಯಲ್ಲಿ ನೀರನ್ನು ಹಿಡಿದುಕೊಂಡು ಗತಿಸಿಹೋದ ತನ್ನ ತಂದೆಗೆ ಉತ್ತಮ ಲೋಕ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾನೆ. ಇದರ ಪರಿಪೂರ್ಣ ಅರ್ಥ ಭಾವನಾತ್ಮಕವಾಗಿ ಪಿತೃಗಳನ್ನು ತೃಪ್ತಿಪಡಿಸಲು ನಮ್ಮ ಭಾವನೆಯನ್ನು ಅದರಲ್ಲಿ ಸೇರಿಸುವಂತಹ ಒಂದು ಪ್ರಕ್ರಿಯೆ

            ಕಚ್ಚಾಡುವ ಮನೆ, ಕಾದಾಡುವ ಮಕ್ಕಳು, ಅಶಾಂತಿ-ಅತೃಪ್ತಿಯ ಗೃಹವಾಸ, ಇವೆಲ್ಲವುಗಳಿಗೆ ಕಾರಣ "ಪಿತೃಶಾಪ" ಎನ್ನುತ್ತದೆ ಜ್ಯೋತಿಃಶಾಸ್ತ್ರ. ಪಿತೃಕಾರ್ಯಗಳು ಸರಿಯಾಗಿ ನಡೆಯದಿದ್ದರೆ ಮೇಲ್ಕಂಡ ಸ್ಥಿತಿ ಏರ್ಪಡುತ್ತದೆ ಎಂದರ್ಥ. 
ಸಂವತ್ಸರ ಪೂರ್ತಿ ಪಿತೃದೇವತೆಗಳು ಸಂತುಷ್ಟರಾಗಿರಬೇಕಾದರೆ  ಪಿತೃಗಳು ಅಂದರೆ ನಮ್ಮ ಹಿರಿಯರು ಗತಿಸಿಹೋದ ದಿನದಂದು ಪಿತೃಗಳನ್ನು ಎಲ್ಲರೂ ನೆನೆಯಬೇಕು .

ಪಿತೃಪ್ರಾರ್ಥನೆ : 
ಅಮೂರ್ತಾನಾಂ ಸುಮೂರ್ತಾನಾಂ ಪಿತೃಣಾಂ ದೀಪ್ತತೇಜಸಾಮ್ | 
ನಮಸ್ಯಾಮಿ ಸದಾ ಭಕ್ತ್ಯಾ ಧ್ಯಾಯಿನಾಂ ಯೋಗಚಕ್ಷುಸಾಮ್ || 
ದೇವತಾಭ್ಯಃ ಪಿತೃಭ್ಯಶ್ಚ ಮಹಾಯೋಗಿಭ್ಯ ಏವ ಚ | 
ನಮಃ ಸ್ವಧಾಯೈ ಸ್ವಾಹಾಯೈ ನಿತ್ಯಮೇವ ನಮೋ ನಮಃ |

ಕೃಷ್ಣಾರ್ಪಣಮಸ್ತು 
ಸದ್ವಿಚಾರ ಸಂಗ್ರಹ
[31/03, 9:33 AM] Pandit Venkatesh. Astrologer. Kannada: 🌹 *ಸುಭಾಷಿತ ಮಂಜರೀ* 🌹
       💐 *ಸಾಮಾನ್ಯ ನೀತಿ* 💐

*ಅಂಜನಸ್ಯ ಕ್ಷಯಂ ‌ದೃಷ್ಟ್ವಾ ವಲ್ಮೀಕಸ್ಯ ಚ ಸಂಚಯಂ |*
*ಅವಂಧ್ಯಂ ದಿವಸಂ ಕುರ್ಯಾತ್ ದಾನಾಧ್ಯಯನಕರ್ಮಸು ||*
-- ಸುಭಾಷಿತ ರತ್ನಭಾಂಡಾಗಾರ.

        ಕಾಡಿಗೆಯು ಕರಗಿಹೋಗುವದನ್ನೂ ಹುತ್ತ ಬೆಳೆಯುವದನ್ನೂ ಕಂಡು ಮನುಷ್ಯನಾದವನು ದಾನ , ಅಧ್ಯಯನ , ಮೊದಲಾದ ಕೆಲಸಗಳಲ್ಲಿ ದಿನವನ್ನು ಸಾರ್ಥಕವಾಗಿ ಕಳೆಯಬೇಕು.

ಸಂಗ್ರಹ ~
*ಗುರುರಾಜಾಚಾರ್ಯ ಕೃ. ಪುಣ್ಯವಂತ*
[31/03, 9:33 AM] Pandit Venkatesh. Astrologer. Kannada: *ಬೇರೆಯವರನ್ನು ಮೆಚ್ಚಿಸಲು ನೀನು ಎಂದಿಗೂ ಜೀವಿಸಬೇಡ. ಯಾಕೆಂದರೆ ಪ್ರತಿಯೊಬ್ಬರ ಅಭಿಪ್ರಾಯಗಳು ಸಂಧರ್ಭಕ್ಕನುಸಾರ ಹೇಗೆ ಬೇಕಾದರೂ ಬದಲಾಗುತ್ತದೆ. ಬದುಕು ವರ್ಣಮಯವಾಗಿರಬೇಕೆ ಹೊರತು ಇಡಿ ಜೀವನ ನಾಟಕೀಯವಾಗಿರಬಾರದು. ನಿನ್ನ ಆತ್ಮಸಾಕ್ಷಿನ್ನು ಬದಿಗಿಟ್ಟು ಜೀವಿಸಬೇಡ ನಿನಗೆ ಯಾರು ಇಲ್ಲದ ಸಮಯದಲ್ಲಿ ನಿನ್ನ ಜೊತೆ ಇರುವುದೆ  ಇದೇ ಆತ್ಮಸಾಕ್ಷಿ.*...

  🇮🇳 *ಮಾತೃಭೂಮಿ ಹಿಂದೂ ಸ್ಪಂದನೆ*🚩
           *ನಮ್ಮವರಿಂದ ನಮಗಾಗಿ*


         *ಸ್ವಚ್ಛ ಹಿಂದೂ ರಾಷ್ಟ್ರ ನಿರ್ಮಾಣ*
[31/03, 9:34 AM] Pandit Venkatesh. Astrologer. Kannada: *ಯುಗಾದಿಯಂದು ಅಭ್ಯಂಜನ!*

*ಬೆಚ್ಚಗಿನ ಎಣ್ಣೆಯನ್ನು ಇಡೀ ದೇಹಕ್ಕೆ ಹಚ್ಚಿ ಮರ್ದನ ಮಾಡಿಕೊಂಡು ಕೆಲ ಹೊತ್ತು ಬಿಟ್ಟು ಸ್ನಾನ* *ಮಾಡೋದನ್ನು* *ʼಅಭ್ಯಂಜನʼ ಸ್ನಾನ ಎನ್ನಲಾಗುತ್ತೆ. ಇದು ನಮ್ಮ ದೇಹಕ್ಕೆ ಆಯುರ್ವೇದ ಔಷಧಿಯಂತೆ ಕೆಲಸ ಮಾಡುತ್ತೆ. 

*ಅಂಗಾಂಗಗಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡುವುದಕ್ಕೆ ನಮ್ಮ ಪೂರ್ವಜರು ಪ್ರಥಮ ಆದ್ಯತೆ ನೀಡಿದ್ರು.*
*ಆಯುರ್ವೇದದ ಮೂಲ ಸಿದ್ಧಾಂತವಾದ ತ್ರಿದೋಷ ತತ್ವದ ಪ್ರಕಾರ, ವಾತ ಪಿತ್ತ ಕಫ ಎಂಬ ಮೂರು ದೋಷಗಳು ಮಾನವನ ದೇಹವನ್ನು* *ವ್ಯಾಪಿಸಿರುತ್ತವೆ. ಈ ದೋಷಗಳನ್ನು* *ಹತೋಟಿಯಲ್ಲಿಟ್ಟರೆ ಮಾತ್ರ ಉಳಿದೆಲ್ಲವೂ* *ನಿಯಂತ್ರಣದಲ್ಲಿರಲು ಸಾಧ್ಯ. ವಾತ ದೋಷದ ಮುಖ್ಯ ಸ್ಥಾನಗಳಲ್ಲಿ ಚರ್ಮವೂ ಒಂದಾಗಿದೆ. ಆದ್ದರಿಂದ ಚರ್ಮಕ್ಕೆ ಎಣ್ಣೆ ಹಚ್ಚುವುದರಿಂದ ವಾತ ದೋಷ* *ಗುಣಮುಖವಾಗುತ್ತೆ ಎನ್ನುತ್ತೆ ವೈದ್ಯಶಾಸ್ತ್ರ.*

*ಆಯುರ್ವೇದ ರೀತಿ ಅಭ್ಯಂಜನಕ್ಕೆ ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಸುಗಂಧ ದ್ರವ್ಯಗಳಿಂದ ತಯಾರಿಸಿದ ಎಣ್ಣೆ,* *ಪುಷ್ಪಸುಗಂಧಿತವಾದ ಎಣ್ಣೆ, ಇತರ ಔಷಧ ದ್ರವ್ಯಗಳನ್ನು ಸೇರಿಸಿ ತಯಾರಿಸಿದ ಎಣ್ಣೆಗಳನ್ನು ಬಳಸಬಹುದೆಂದು ತಿಳಿಸಲಾಗಿದೆ.*

*ಎಣ್ಣೆಯನ್ನು ಮೈಗೆ ತಿಕ್ಕುವುದರಿಂದ ಶರೀರದ ಅಂಗಗಳಿಗೆ ಪುಷ್ಟಿ ದೊರೆಯುತ್ತದೆ, ಇದನ್ನು ತಲೆ, ಪಾದಗಳಿಗೆ ಹೆಚ್ಚಾಗಿ ಹಚ್ಚಬೇಕು.*
*ಶರೀರ ಪೂರ್ತಿ ಎಣ್ಣೆಯನ್ನು ತಿಕ್ಕುವುದರಿಂದ ವಾತ, ಕಫದೋಷಗಳು ಹಾಗು ಆಯಾಸ* *ಪರಿಹಾರವಾಗುವುದು ಮತ್ತು ಬಲ, ಸುಖನಿದ್ರೆ, ವರ್ಣ, ಕೋಮಲೆ,* *ಸುಕುಮಾರತೆ, ಆಯಸ್ಸು, ಶರೀರಪುಷ್ಟಿ ಮುಂತಾದವು ಹೆಚ್ಚಾಗುತ್ತವೆ.*

*ತಲೆಗೆ ಎಣ್ಣೆ* *ಹಚ್ಚುವುದರಿಂದ ಶರೀರದ ಎಲ್ಲ ಇಂದ್ರಿಯಗಳು ತೃಪ್ತಗೊಳ್ಳುತ್ತವೆ. ಮೈ ದಷ್ಟಪುಷ್ಟವಾಗುತ್ತದೆ ಹಾಗೂ ಶಿರಸ್ಸಿಗೆ* *ಸಂಬಂಧಪಟ್ಟ ವ್ಯಾಧಿಗಳು ಇಲ್ಲವಾಗುತ್ತವೆ.* *ಕೂದಲುಗಳು ಒತ್ತಾಗಿದ್ದು ನೀಳವಾಗಿ, ಕೋಮಲವಾಗಿ ದೃಢವಾಗಿ ಹಾಗೂ ಕಪ್ಪು ಬಣ್ಣ ಹೊಂದಿರುತ್ತವೆ.* 

*ಜೊತೆಗೆ ಇತ್ತೀಚೆಗೆ ಮಕ್ಕಳಲ್ಲಿ* *ಕಾಣಿಸಿಕೊಳ್ತಿರುವ ಅಕಾಲಿಕ ನೆರೆ ಕೂದಲು ಸಮಸ್ಯೆಗೆ ಶಿರೋಭ್ಯಂಗ ಉತ್ತಮ ಚಿಕಿತ್ಸೆ. ಇನ್ನು ಕೂದಲು ಉದುರುವಿಕೆ, ತಲೆ ಬೋಳಾಗುವಿಕೆಗೂ ಇದು ಅತ್ಯುತ್ತಮ ಪರಿಹಾರ.*
*ಪಾದಗಳಿಗೆ ಎಣ್ಣೆ* *ತಿಕ್ಕುವುದರಿಂದ ಪಾದಗಳಿಗೆ ದೃಢತೆ ಉಂಟಾಗಿ ನೇತ್ರಗಳು* *ನಿರ್ಮಲವಾಗುತ್ತವೆ. 

*ಶುದ್ಧವಾದ ನಿದ್ದೆ ಬರುತ್ತದೆ.* *ಪಾದಗಳ ಜೋಮು ಹಿಡಿಯುವುದಿಲ್ಲ.* *ತಲೆಸುತ್ತು, ಸ್ತಬ್ಧತೆ, ಹಿಂಡುವುದು ಹಾಗೂ ಕಾಲೊಡೆಯುವುದು ನಿವಾರಣೆಯಾಗುತ್ತದೆ.*
*ತಲೆಯ ಅಭ್ಯಂಜನದಿಂದ ಕಿವಿಗಳು ತಂಪಾಗುತ್ತವೆ.* *ಕಿವಿಗಳ ಅಭ್ಯಂಜನದಿಂದ ಪಾದಗಳು ತಂಪಾಗುತ್ತವೆ.* *ಪಾದಗಳ ಅಭ್ಯಂಜನದಿಂದ ಕಣ್ಣಿನ ರೋಗಗಳು ನಿವಾರಣೆಯಾಗುತ್ತವೆ.*

*ಎಣ್ಣೆಯನ್ನು ಹಚ್ಚಿಕೊಂಡು ಸ್ನಾನ ಮಾಡುವುದರಿಂದ ರೋಮ ಕೂಪಗಳಿಗೂ ನರಗಳ ಸಮೂಹಗಳಿಗೂ ಹಾಗೂ ಧಮನಿಯ ಒಳಗೂ ಎಣ್ಣೆಯ ಅಂಶ ಸೇರಿ ಶರೀರಕ್ಕೆ ತೃಪ್ತಿ ಹಾಗು ಬಲ ಉಂಟಾಗುತ್ತದೆ.*
*ಯಾವ ರೀತಿ ನೀರಿನಿಂದ ತೋಯ್ದ ವೃಕ್ಷದಲ್ಲಿ ಅದರ ಚಿಗುರುಗಳು* *ಬೆಳೆಯುತ್ತವೆಯೋ ಅದೇ ರೀತಿ ಎಣ್ಣೆಯಿಂದ ತೋಯ್ದ ಶರೀರದಲ್ಲಿ ಧಾತುಗಳು ವೃದ್ಧಿ ಹೊಂದುತ್ತವೆ.* *ಅಂದರೆ ಎಣ್ಣೆಯಿಂದ ಮೈಯನ್ನು* *ಮರ್ದಿಸುವುದರಿಂದ ಶರೀರ ಧಾತುಗಳು ವೃದ್ಧಿಯಾಗಿ ಪೋಷಣೆಗೊಳ್ಳುತ್ತವೆ.*

*ಹೊಸದಾಗಿ ಜ್ವರ ಬಂದಿರುವವರೂ, ಅಜೀರ್ಣದಿಂದ* *ನರಳುವವರೂ ಹಾಗು ವಾಂತಿ ಚಿಕಿತ್ಸೆಗಾಗಿ ಔಷಧಿ ತೆಗೆದುಕೊಂಡಿರುವವರೂ ಅಭ್ಯಂಜನ ಅಂದರೆ ಎಣ್ಣೆ ಸ್ನಾನಕ್ಕೆ ಯೋಗ್ಯರಲ್ಲ.*
*ಸ್ನಾನ ಮಾಡುವಾಗ ಜಿಡ್ಡು ತೆಗೆಯಲು ಚೂರ್ಣ ಅಂದರೆ ಪುಡಿ ಇತ್ಯಾದಿಗಳಿಂದ ಮೈ* *ಉಜ್ಜುವುದಕ್ಕೆ ʼಉದ್ವರ್ತನ ಕ್ರಿಯೆʼ ಎನ್ನುತ್ತಾರೆ. ಇದು ಕಫಮೇಧ ರೋಗಗಳನ್ನು ನಿವಾರಿಸುತ್ತದೆ. ಹಾಗೂ ಅತ್ಯಂತ* *ಸುಖದಾಯಕವಾಗಿದ್ದು ಬಲ, ರಕ್ತ ಹಾಗು* *ಮುಖಕಾಂತಿಯನ್ನು ವರ್ಧಿಸುತ್ತದೆ.* 

*ಚರ್ಮವನ್ನು* *ಶುದ್ಧಗೊಳಿಸಿ ಮೃದುಗೊಳಿಸುತ್ತದೆ.*
*ಮುಖದ ಉದ್ವರ್ತನ* *ಕ್ರಿಯೆಯನ್ನು ಮಾಡುವುದರಿಂದ* *ನೇತ್ರಗಳು ದೃಢವಾಗುತ್ತವೆ.* *ಕೆನ್ನೆಗಳು ಮಾಂಸದಿಂದ ತುಂಬಿಕೊಳ್ಳುತ್ತವೆ ಹಾಗೂ ಭಂಗು, ಮೊಡವೆ* *ಮುಂತಾದವುಗಳ* *ನಿವಾರಣೆಯಾಗಿ ಮುಖವು ಕಮಲದ ಹೂವಿನಂತೆ ಸುಂದರವಾಗುತ್ತದೆ.*

*ಈ ಯುಗಾದಿಯಂದು* *ಮನೆಮಂದಿಯೆಲ್ಲಾ ಆಭ್ಯಂಜನ ಮಾಡಿ,* *ಬೇವುಬೆಲ್ಲ ಸವಿಯಿರಿ.*

  ✍️ *ಮಾತೃಭೂಮಿ ಹಿಂದೂ ಸ್ಪಂದನೆ*
          *ನಮ್ಮವರಿಂದ ನಮಗಾಗಿ*


       *ಸ್ವಚ್ಛ ಹಿಂದೂ ರಾಷ್ಟ್ರ ನಿರ್ಮಾಣ*
[31/03, 9:34 AM] Pandit Venkatesh. Astrologer. Kannada: *💐ಮುಂಜಾನೆಗೊಂದು ಮಾತು💐*

*ಅಂತರಜಾಲದಲ್ಲಿ ಎಲ್ಲವನ್ನೂ ಹುಡುಕುವ ನಾವು, ನಮ್ಮವರ ಅಂತರಾಳದಲ್ಲಿ ಏನಿದೇವೋ ಎಂದು ತಿಳಿದುಕೊಳ್ಳುಲು ವಿಫಲರಾಗಿದ್ದೆವೆ.*

*ನನಗೇನೂ ಗೊತ್ತಿಲ್ಲವೆನ್ನುವ ಅರಿವೇ ನಿಜವಾದ ಜ್ಞಾನದ ಆರಂಭ.*
[31/03, 9:34 AM] Pandit Venkatesh. Astrologer. Kannada: 🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌    ‌                                                                                       ‌                                                                     ‌ *ಯುಗಾದಿ ಶುಭ ಮುಹೂರ್ತ ಮತ್ತು ಆಚರಿಸುವ ಸರಳ ವಿಧಾನ..!*

ಈ ವರ್ಷ ಯುಗಾದಿ ಹಬ್ಬವನ್ನು ಶುಭಕೃತ್‌ ನಾಮ ಸಂವತ್ಸರದಲ್ಲಿ ಆಚರಿಸಲಾಗುವುದು. 2022 ರ ಯುಗಾದಿ ಹಬ್ಬದ ಶುಭ ಮುಹೂರ್ತ ಯಾವುದು..? ಯುಗಾದಿ ಹಬ್ಬವನ್ನು ಆಚರಿಸುವುದು ಹೇಗೆ..? ಈ ದಿನ ಯಾವ ಖಾದ್ಯಗಳು ಹೆಚ್ಚು ಮಹತ್ವವನ್ನು ಹೊಂದಿರುತ್ತದೆ ಗೊತ್ತೇ..?

ಯುಗಾದಿಯು ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದ್ದು, ಇದು ಭಾರತದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಹೊಸ ವರ್ಷದ ದಿನವನ್ನು ಸೂಚಿಸುತ್ತದೆ. ಯುಗಾದಿ ಹಬ್ಬವನ್ನು ಹಿಂದೂ ಚಾಂದ್ರಮಾನ ಕ್ಯಾಲೆಂಡರ್‌ನ ಚೈತ್ರ ಮಾಸದ ಮೊದಲ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ಯುಗಾದಿ ಹಬ್ಬವನ್ನು ಏಪ್ರಿಲ್‌ 2 ರಂದು ಶನಿವಾರ ಆಚರಿಸಲಾಗುವುದು. 

1. *ಯುಗಾದಿ 2022 ಶುಭ ಮುಹೂರ್ತ:*
2022 ರ ಯುಗಾದಿ ಹಬ್ಬವನ್ನು ಏಪ್ರಿಲ್‌ 2 ರಂದು ಶನಿವಾರ ಆಚರಿಸಲಾಗುವುದು.
ಪ್ರತಿಪದ ತಿಥಿ ಆರಂಭ: 2022 ರ ಏಪ್ರಿಲ್‌ 1 ರಂದು ಶುಕ್ರವಾರ ಹಗಲು 11:53 ಗಂಟೆಗೆ
ಪ್ರತಿಪದ ತಿಥಿ ಮುಕ್ತಾಯ: 2022 ರ ಏಪ್ರಿಲ್‌ 2 ರಂದು ಶನಿವಾರ 11:57 ಗಂಟೆಯವರೆಗೆ

2. *ಯುಗಾದಿ ಪಂಚಾಂಗ:*
- ಯುಗಾದಿಯನ್ನು ಪಂಚಾಂಗದ ಪ್ರಕಾರ ಚೈತ್ರ ಶುಕ್ಲ ಪ್ರತಿಪದೆ ದಿನದಂದು ಆಚರಿಸಲಾಗುತ್ತದೆ.
- ಪ್ರತಿಪದೆ ತಿಥಿಯು ದಿನದ ಸೂರ್ಯೋದಯದ ಸಮಯದಲ್ಲಿ ಚಾಲ್ತಿಯಲ್ಲಿರಬೇಕು.
- ಒಂದು ವೇಳೆ, 2 ದಿನಗಳ ಸೂರ್ಯೋದಯಗಳು ಪ್ರತಿಪದಕ್ಕೆ ಹೋಲಿಕೆಯಾಗುತ್ತಿದ್ದರೆ ಮೊದಲ ದಿನವನ್ನು ಆಚರಣೆಗೆ ಸೂಕ್ತ ಎಂದು ಪರಿಗಣಿಸಲಾಗುತ್ತದೆ.
- ಯಾವುದೇ ಸೂರ್ಯೋದಯದಂದು ಪ್ರತಿಪದೆ ತಿಥಿಯು ಚಾಲ್ತಿಯಲ್ಲಿಲ್ಲದಿದ್ದರೆ, ತಿಥಿ ಪ್ರಾರಂಭವಾಗುವ ದಿನವನ್ನು ಯುಗಾದಿ ಹಬ್ಬವೆಂದು ಪರಿಗಣಿಸಲಾಗುತ್ತದೆ.
- ಯುಗಾದಿಯನ್ನು ಅಧಿಕ ಮಾಸದಲ್ಲಿ ಆಚರಿಸಲಾಗುವುದಿಲ್ಲ. ಸಂಸ್ಕೃತದಲ್ಲಿ ಯುಗಾದಿಯ ದಿನವನ್ನು ಚೈತ್ರ ಶುದ್ಧ ಪಾಡ್ಯಮಿ ಎಂದು ಕರೆಯಲಾಗುತ್ತದೆ.

3. *ನವ ಸಂವತ್ಸರದ ರಾಜ:*
ಹೊಸ ವರ್ಷದ ಅಂದರೆ ಯುಗಾದಿ ಮೊದಲ ದಿನದ ಭಗವಂತನನ್ನು ಇಡೀ ವರ್ಷದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. 2022 ರಲ್ಲಿ, ಯುಗಾದಿ ವರ್ಷದ ಮೊದಲ ದಿನ ಶನಿವಾರ ಬಂದಿದೆ. ಶನಿಯು ಶನಿವಾರದ ಅಧಿಪತಿಯಾಗಿದ್ದಾನೆ. ಆದ್ದರಿಂದ, ಈ ಹೊಸ ವರ್ಷದ ಅಧಿಪತಿಯನ್ನು ಶನಿಯೆಂದು ಪರಿಗಣಿಸಲಾಗುತ್ತದೆ.

4. *ಯುಗಾದಿ ಆಚರಣೆಗಳು:*
ಯುಗಾದಿಯ ಸಿದ್ಧತೆಗಳು ಒಂದು ವಾರದ ಮುಂಚೆಯೇ ಪ್ರಾರಂಭವಾಗುತ್ತವೆ. ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ನವೀಕರಿಸುತ್ತಾರೆ. ಹಬ್ಬಕ್ಕೆ ಬೇಕಾದ ಹೊಸ ಬಟ್ಟೆ ಹಾಗೂ ಅಗತ್ಯ ವಸ್ತುಗಳ ಖರೀದಿಯು ಈ ಸಮಯದಲ್ಲೇ ನಡೆಯುತ್ತದೆ. ಜನರು ಸೂರ್ಯೋದಯದ ಮೊದಲು ಎದ್ದು ಸ್ನಾನ ಮಾಡುತ್ತಾರೆ ಮತ್ತು ತಾಜಾ ಮಾವಿನ ಎಲೆಗಳಿಂದ ಮನೆಯ ಪ್ರವೇಶ ದ್ವಾರ ಮತ್ತು ಕಿಟಕಿಗಳನ್ನು ಅಲಂಕರಿಸುತ್ತಾರೆ.

5. *ಯುಗಾದಿ ಖಾದ್ಯಗಳು:*
ಕೆಲವರು ಈ ದಿನ 6 ವಿವಿಧ ರುಚಿಯ ಆಹಾರ ಪದಾರ್ಥಗಳನ್ನು ಮನೆಯಲ್ಲೇ ತಯಾರಿಸುತ್ತಾರೆ. 6 ಅಭಿರುಚಿಗಳೊಂದಿಗೆ, ಜೀವನವು ವಿಭಿನ್ನ ಭಾವನೆಗಳ ಮಿಶ್ರಣವಾಗಿದೆ ಮತ್ತು ಪ್ರತಿ ಭಾವನೆಯು ರುಚಿಯಂತೆ ಇರುತ್ತದೆ ಎಂದು ಅವರು ನಂಬುತ್ತಾರೆ. ಯುಗಾದಿ ಪಾಕವಿಧಾನವು ಪ್ರದೇಶದಿಂದ ಪ್ರದೇಶಕ್ಕೆ ಸ್ವಲ್ಪ ಭಿನ್ನವಾಗಿರುತ್ತದೆ, ಆದರೆ ಸಾಮಾನ್ಯವಾಗಿ ಯುಗಾದಿಯಂದು ಬಳಸುವ ಪದಾರ್ಥಗಳು ಹೀಗಿವೆ:
- ಬೆಲ್ಲ
- ಬೇವು
- ಹಸಿರು ಮೆಣಸಿನಕಾಯಿ
- ಉಪ್ಪು
- ಹುಣಸೆ ರಸ
- ಮಾವಿನ ಕಾಯಿ.

ಕರ್ನಾಟಕದಲ್ಲಿ ಹೆಚ್ಚಾಗಿ ಈ ದಿನ ಮುಂಜಾನೆ ಎದ್ದು ಶುದ್ಧರಾದ ಬಳಿಕ ಮೊದಲು ಬೇವು ಬೆಲ್ಲವನ್ನು ಕಡ್ಡಾಯವಾಗಿ ಸವಿಯುತ್ತಾರೆ. ಬೇವು - ಬೆಲ್ಲವನ್ನು ತಿಂದ ನಂತರ ಇತರ ಆಹಾರವನ್ನು ತೆಗೆದುಕೊಳ್ಳುತ್ತಾರೆ. ಹೊಸ ವರ್ಷದ ಆರಂಭದಲ್ಲಿ ಬೇವು - ಬೆಲ್ಲವನ್ನು ತಿನ್ನುವುದರಿಂದ ವರ್ಷಪೂರ್ತಿ ನಮ್ಮ ಜೀವನದಲ್ಲಿ ಸಿಹಿ - ಕಹಿ ಅಂದರೆ ನೋವು - ನಲಿವು ಎರಡೂ ಸಮನಾಗಿರುತ್ತದೆ ಎನ್ನುವ ನಂಬಿಕೆಯಿದೆ.

ಯುಗಾದಿ ಹಬ್ಬವು ಹಿಂದೂ ಧರ್ಮೀಯರಿಗೆ ವರ್ಷದ ಮೊದಲ ಹಬ್ಬವಾಗಿರುತ್ತದೆ. ಈ ದಿನ ಬೇವು - ಬೆಲ್ಲದೊಂದಿಗೆ ಹೊಸ ವರ್ಷವನ್ನು ಆಚರಿಸುತ್ತಾರೆ. ಪ್ರದೇಶಗಳಿಗೆ ತಕ್ಕಂತೆ ಯುಗಾದಿ ಹಬ್ಬದ ಆಚರಣೆಯು ಭಿನ್ನ ಭಿನ್ನವಾಗಿರುತ್ತದೆ. ‌        ‌          ‌          ‌                                                                            ‌                                                                                                                                                    *ಮನೆಬಾಗಿಲಿಗೆ ಮಾವಿನ ಎಲೆ*
   ‌                                                                                            ಜನರು ಬೆಳಗಿನ ಜಾವದಲ್ಲಿ ಸ್ನಾನ ಮಾಡಿ ನಂತರ ಹೊಸ ಬಟ್ಟೆಗಳನ್ನು ಧರಿಸುವ ಮೂಲಕ ಶುಭ ದಿನವನ್ನು ಪ್ರಾರಂಭಿಸುತ್ತಾರೆ.

ಕಾರ್ತಿಕೇಯ ಮತ್ತು ಗಣೇಶನನ್ನು ಮೆಚ್ಚಿಸಲು ಮನೆಗಳ ಪ್ರವೇಶದ್ವಾರವನ್ನು ಅಲಂಕರಿಸಲು ಮಾವಿನ ಎಲೆಗಳನ್ನು ಬಳಸಲಾಗುತ್ತದೆ. ಈ ಇಬ್ಬರು ಭಗವಂತರು ಮಾವಿನ ಹಣ್ಣನ್ನು ಇಷ್ಟಪಡುತ್ತಾರೆ ಎಂದು ನಂಬಲಾಗಿದೆ. ಇದರಿಂದ ದೇವರು ಅವರಿಗೆ ಸಮೃದ್ಧಿ ಮತ್ತು ಯೋಗಕ್ಷೇಮವನ್ನು ನೀಡುತ್ತಾನೆ. ಹೊಸ ಮಾವಿನ ಎಲೆಗಳು ಬಾಗಿಲಿಗೆ ಉತ್ತಮ ಇಳುವರಿಯನ್ನು ಸಂಕೇತಿಸುತ್ತವೆ.   ‌       ‌                          ‌                                                                                                                                                                         ಯುಗಾದಿಯಂದು ಜನರು ತಮ್ಮ ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಹಸುವಿನ ಸಗಣಿಯಿಂದ ಶುದ್ಧೀಕರಿಸುತ್ತಾರೆ. ಇದನ್ನು ಹಿಂದೂ ಪದ್ಧತಿಗಳ ಪ್ರಕಾರ ಶುಭವೆಂದು ಪರಿಗಣಿಸಲಾಗುತ್ತದೆ.

ಮನೆಗಳ ಹೊರಗೆ ರಂಗೋಲಿಗಳನ್ನು ಹಾಕುವುದು ಯುಗಾದಿ ಹಬ್ಬದ ಪ್ರಮುಖ ಮತ್ತು ಮಹತ್ವದ ಚಟುವಟಿಕೆಗಳಲ್ಲಿ ಒಂದಾಗಿದೆ.

ಈ ಯುಗಾದಿ ಹಬ್ಬದ ಆಚರಣೆಯ ಪ್ರಕಾರ, ಮನೆಯ ಸದಸ್ಯರು ಪಂಡಿತರನ್ನು ಕರೆಸುತ್ತಾರೆ. ಯುಗಾದಿಯ ದಿನದಂದು ಭವಿಷ್ಯವನ್ನು ಊಹಿಸುವ ಈ ಆಚರಣೆಯು ಯುಗಾದಿ ಹಬ್ಬದ ಅನೇಕ ಜನಪ್ರಿಯ ಚಟುವಟಿಕೆಗಳಲ್ಲಿ ಒಂದಾಗಿದೆ.

ಕವಿಸಮ್ಮೇಳನವು ಯುಗಾದಿ ಹಬ್ಬದ ಪ್ರಮುಖ ಚಟುವಟಿಕೆಗಳಲ್ಲಿ ಒಂದಾಗಿದೆ. ಇಲ್ಲಿ ಜನರು ಸಾಹಿತ್ಯಿಕ ಚರ್ಚೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಮತ್ತು ಕವಿತೆಗಳನ್ನು ಓದುತ್ತಾರೆ.

ಯುಗಾದಿ ಹಬ್ಬದ ಆಚರಣೆಯ ಅಂಗವಾಗಿ ರುಚಿಕರವಾದ ಸಸ್ಯಾಹಾರಿ ಊಟವನ್ನು ತಯಾರಿಸಲಾಗುತ್ತದೆ.

ಈ ದಿನ ವಿಶೇಷ ಖಾದ್ಯವನ್ನು ತಯಾರಿಸುವುದು ಕಡ್ಡಾಯ. ಈ ವಿಶೇಷ ಖಾದ್ಯವನ್ನು ಬೇವು, ಬೆಲ್ಲ (ಸಿಹಿ), ಉಪ್ಪು (ಉಪ್ಪು), ಹುಣಸೆಹಣ್ಣು (ಹುಳಿ), ಬೇವಿನ ಹೂವುಗಳು (ಕಹಿ), ಹಸಿ ಮಾವು (ಕಟುವಾದ), ಮತ್ತು ಕೊನೆಯದಾಗಿ ಕೊಂಚ ಮೆಣಸಿನ ಪುಡಿ (ಮಸಾಲೆ) ನಂತಹ ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ.

ವಿಶೇಷ ಖಾದ್ಯ
ಯುಗಾದಿಗೆ ತಯಾರಿಸುವ ವಿಶೇಷ ಖಾದ್ಯದಲ್ಲಿ ಪಚ್ಚಡಿ ಒಂದು. ಪಚ್ಚಡಿ ಹಬ್ಬದ ಊಟವನ್ನು ಜನರಿಗೆ ನೆನಪಿಸುತ್ತದೆ. ಸಿಹಿ, ಹುಳಿ, ಉಪ್ಪು ಮತ್ತು ಕಹಿ ಘಟನೆಗಳ ಮಿಶ್ರಣದಿಂದ ಜೀವನ ಹೆಣೆದುಕೊಂಡಿರುವುದನ್ನು ಈ ಸಿಹಿ ಸೂಚಿಸುತ್ತದೆ.
[31/03, 9:34 AM] Pandit Venkatesh. Astrologer. Kannada: 🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌                                                                          ‌                                                                                ‌ *ನಾವೇಕೇ ಯುಗಾದಿ ಆಚರಿಸಬೇಕು..? ಇದರ ಐತಿಹ್ಯವೇನು ಗೊತ್ತೇ..?*

ಯುಗ ಯುಗಾದಿ ಕಳೆದರೂ.. ಯುಗಾದಿ ಮರಳಿ ಬರುತಿದೆ ಎನ್ನುವ ಹಾಡನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಹೌದು, ಈ ವರ್ಷ ಕೂಡ ಮತ್ತೆ ಯುಗಾದಿ ಮರಳಿ ಬಂದಿದೆ. 2022 ರ ಯುಗಾದಿ ಹಬ್ಬವನ್ನು ಏಪ್ರಿಲ್‌ 2 ರಂದು ಶನಿವಾರ ಆಚರಿಸಲಾಗುತ್ತಿದ್ದು, ಯುಗಾದಿ ಹಿನ್ನೆಲೆ ಅಥವಾ ಇತಿಹಾಸವನ್ನು ತಿಳಿದುಕೊಳ್ಳುವ...

ಮರಗಿಡಗಳ ಹೊಸ ಚಿಗುರು. ಎಲ್ಲೆಡೆ ಹಸಿರು. ಮೊದಲ ಮಳೆ. ಹೊಸದು ಹೊಸತನ, ಹೊಸ ಜೀವನ. ಹೀಗೆ ಎಲ್ಲರದರ ಪ್ರತೀಕ ಯುಗಾದಿ ಹಬ್ಬ. ಇನ್ನೇನು ಕೆಲವೇ ದಿನಗಳಲ್ಲಿ ಯುಗಾದಿ ಹಬ್ಬ ಆಚರಿಸಲಾಗುತ್ತದೆ. ಕಳೆದ ಎರಡು ವರ್ಷಗಳಿಗಿಂತ ಈ ಬಾರಿ ಆಚರಿಸಲ್ಪಡುವ ಯುಗಾದಿ ಹಬ್ಬ ಕೊಂಚ ವಿಭಿನ್ನವಾಗಿದೆ. ಈ ವರ್ಷ ಎರಡು ವರ್ಷಗಳ ಕಷ್ಟಗಳೆಲ್ಲಾ ಕಳೆದು ಜನ ಸಹಜ ಜೀವನದತ್ತ ಸಾಗುತ್ತಿದ್ದಾರೆ. ಹೀಗಾಗಿ ಈ ಬಾರಿ ಆಚರಿಸಲ್ಪಡು ಯುಗಾದಿ ಹಬ್ಬ ಹೊಸ ಉಲ್ಲಾಸ ಉತ್ಸಾಹವನ್ನು ತಂದಿದೆ.

ದೇಶದೆಲ್ಲೆಡೆ ಯುಗಾದಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಕರ್ನಾಟಕ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯದ ಜನರು ಯುಗಾದಿಯನ್ನು ವರ್ಷದ ಮೊದಲ ಹಬ್ಬವಾಗಿ ಆಚರಿಸುತ್ತಾರೆ. ಈ ದಿನ ಹೊಸ ಸಂವತ್ಸರ ಪ್ರಾರಂಭವಾಗುತ್ತದೆ.        ‌       ‌   ‌    ‌     ‌                                                                                                                      ಯುಗಾದಿ ಎಂಬ ಹೆಸರು ಯುಗ (ಹೊಸ ವರ್ಷ) ಮತ್ತು ಆದಿ (ಪ್ರಾರಂಭ) ಎಂಬ ಎರಡು ಶಬ್ದಗಳಿಂದ ಕೂಡಿದೆ. ಯುಗಾದಿ ಎಂಬ ಶಬ್ದವು "ಹೊಸ ಯುಗದ ಆರಂಭ" ಎಂಬ ಸಂಸ್ಕೃತ ಪದದಿಂದ ಬಂದಿದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಗುಜರಾತ್ ಗಳಲ್ಲಿ ಚಾಂದ್ರಮಾನ ಯುಗಾದಿ ಆಚರಿಸಿದರೆ ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ. ಉತ್ತರಭಾರತದಲ್ಲಿ ಕಾರ್ತಿಕ ಶುದ್ಧ ಪಾಡ್ಯಮಿಯನ್ನು ಯುಗಾದಿಯೆನ್ನುವರು. ಈ ಹಬ್ಬವನ್ನು ಭಾರತದಲ್ಲಿ ಬೇರೆ-ಬೇರೆ ಹೆಸರಿನಿಂದ ಆಚರಿಸುವರು. ಕರ್ನಾಟಕದಲ್ಲಿ 'ಯುಗಾದಿ', ಮಹಾರಾಷ್ಟ್ರದಲ್ಲಿ 'ಗುಡಿಪಾಡವಾ' (gudi padwa), ಆಂಧ್ರ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ 'ಹೊಸ ವರ್ಷದ ಹಬ್ಬ'ವೆಂದು, ಉತ್ತರ ಭಾರತದಲ್ಲಿ 'ಬೈಸಾಖಿ' ಎಂದು ಇದು ಆಚರಿಸಲ್ಪಡುತ್ತದೆ. ಹೊಸ ವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ-ಬಲ್ಲಿದರೆಂಬ ತಾರತಮ್ಯವಿಲ್ಲದೇ ಎಲ್ಲಾ ಹಿಂದೂಗಳೂ ಆಚರಿಸುತ್ತಾರೆ. ರೈತರು ಎತ್ತುಗಳನ್ನು ಶೃಂಗರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ವ್ಯಾಪಾರಿಗಳು ಹಾಗೂ ಇನ್ನಿತರರು ಕೂಡ ಅಂದಿನ ದಿನವೇ ಶುಭ ಕಾರ್ಯವನ್ನು ಮಾಡುತ್ತಾರೆ.

ಯುಗಾದಿ ಎಂದೂ ಕರೆಯಲ್ಪಡುವ ಯುಗಾದಿ ಎಂಬ ಪದವು ಯುಗ ಮತ್ತು ಆದಿ ಎನ್ನುವ ಎರಡು ಶಬ್ಧಗಳಿಂದ ರೂಪುಗೊಂಡಿದೆ. ಇಲ್ಲಿ ಯುಗ ಎಂದರೆ ಯುಗ ಮತ್ತು ಆದಿ ಎಂದರೆ ಹೊಸ. ಯುಗಾದಿ ಎಂದರೆ ಹೊಸ ಯುಗದ ಆರಂಭ ಎನ್ನುವ ಅರ್ಥವನ್ನು ನೀಡುತ್ತದೆ. ಯುಗಾದಿಯು ನಾವು ಜೀವಿಸುತ್ತಿರುವ ಯುಗವನ್ನು ಸೂಚಿಸುತ್ತದೆ, ಪ್ರಸ್ತುತ ನಾವು ಕಲಿಯುಗದಲ್ಲಿದ್ದೇವೆ. ಆದ್ದರಿಂದ ಈ ಯುಗದ ಯುಗಾದಿಯು ಕಲಿಯುಗವನ್ನು ಸೂಚಿಸುತ್ತದೆ. ಕಲಿಯುಗವು ಭಗವಾನ್ ಕೃಷ್ಣ ಲೋಕದಿಂದ ನಿರ್ಗಮಿಸಿದ ನಂತರ ಪ್ರಾರಂಭವಾಯಿತು ಎಂದು ನಂಬಲಾಗಿದೆ. ಈ ಘಟನೆಯನ್ನು ಮಹರ್ಷಿ ವೇದವ್ಯಾಸರು "ಯಸ್ಮಿನ್ ಕೃಷ್ಣೋ ದಿವಾಮ್ವ್ಯಾತಾಃ, ತಸ್ಮತ್‌ ಈವಾ ಪ್ರತಿಪನ್ನಂ ಕಲಿಯುಗಂ" ಎಂದು ವಿವರಿಸಿದ್ದಾರೆ. ಯುಗಾದಿ ಹಬ್ಬವು ಯಾವಾಗಲೂ ಭಾರತದ ಚೈತ್ರ ಮಾಸದ ಚೈತ್ರ ಶುದ್ಧ ಪಾಡ್ಯಮಿಯಲ್ಲಿ ಬರುತ್ತದೆ ಮತ್ತು ಗ್ರೆಗೋರಿಯನ್ ಕ್ಯಾಲೆಂಡರ್‌ ಪ್ರಕಾರ, ಇದು ಹೆಚ್ಚಾಗಿ ಏಪ್ರಿಲ್‌ ಅಥವಾ ಮಾರ್ಚ್‌ನಲ್ಲಿ ಬರುತ್ತದೆ. ಈ ವರ್ಷ ಯುಗಾದಿ ಹಬ್ಬವನ್ನು ಏಪ್ರಿಲ್‌ 2 ರಂದು ಶನಿವಾರ ಆಚರಿಸಲಾಗುವುದು. ಹೊಸ ಯುಗಾದಿ ಆರಂಭವನ್ನು ಸೂಚಿಸುವ ಯುಗಾದಿ ಹಬ್ಬದ ಇತಿಹಾಸವೇನು ನೋಡೋಣ..
                                                                                      *​ಗೌತಮೀಪುತ್ರ ಶಾತಕರ್ಣಿಯ ಚಾಂದ್ರಮಾನ ಪಂಚಾಂಗ*

ಚಂದ್ರನ ಪಂಚಾಂಗವು ಅರವತ್ತು ವರ್ಷಗಳ ಚಕ್ರವನ್ನು ಹೊಂದಿದೆ ಮತ್ತು ಚೈತ್ರ ಶುದ್ಧ ಪಾಡ್ಯಮಿಯಂದು ಯುಗಾದಿಯ ದಿನದಂದು ಹೊಸ ವರ್ಷವು ಪ್ರಾರಂಭವಾಗುತ್ತದೆ. ಪ್ರತಿ ಅರವತ್ತು ವರ್ಷಗಳು ಪೂರ್ಣಗೊಂಡ ನಂತರ, ಕ್ಯಾಲೆಂಡರ್ ಕೂಡ ಹೊಸ ವರ್ಷದಿಂದ ಪ್ರಾರಂಭವಾಗುತ್ತದೆ. ಕ್ಯಾಲೆಂಡರ್ ಶಾಲಿವಾಹನ ಯುಗಕ್ಕೂ ಹಿಂದಿನದು, ದಂತಕಥೆಯ ಪ್ರಕಾರ, ಇದನ್ನು ಮಹಾನ್ ಶಾಲಿವಾಹನ ನಿರ್ಮಿಸಿದನು ಎಂದು ಹೇಳಲಾಗುತ್ತದೆ. ರಾಜ ಶಾಲಿವಾಹನನನ್ನು ಗೌತಮಿಪುತ್ರ ಶಾತಕರ್ಣಿ ಎಂದು ಕೂಡ ಉಲ್ಲೇಖಿಸಲಾಗಿದೆ. ಶಾಲಿವಾಹನ ಯುಗವು ಈತನಿಂದ ಪ್ರಾರಂಭವಾಯಿತು ಎನ್ನುವುದು ನಂಬಿಕೆ.

ಯುಗಾದಿ ಹಬ್ಬವು ಕಾವೇರಿ ನದಿ ಮತ್ತು ವಿಂಧ್ಯದ ನಡುವೆ ವಾಸಿಸುವವರಿಗೆ ಮತ್ತು ಚಂದ್ರನ ಕ್ಯಾಲೆಂಡರ್ ಅನ್ನು ಅನುಸರಿಸುವವರಿಗೆ, ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ.

*​ವಸಂತ ಋತು*

ಹಬ್ಬದ ಸಮಯದಲ್ಲಿ, ವಸಂತ ಋತುವು ಪೂರ್ಣವಾಗಿ ಆಗಮಿಸುವುದು ಎನ್ನುವ ನಂಬಿಕೆಯಿದೆ. ಮತ್ತು ಎಲ್ಲೆಡೆ ಹಬ್ಬಗಳ ಬಣ್ಣಗಳನ್ನು ನಾವೀ ಸಂದರ್ಭದಲ್ಲಿ ಕಾಣಬಹುದು. ಮರಗಳ ಮೇಲೆ ಮೊಳಕೆಯೊಡೆಯುವ ಹೊಸ ಎಲೆಗಳು ಸೃಷ್ಟಿಯನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ವಸಂತ ಋತುವಿನ ಆಗಮನವು ಈ ಹಬ್ಬವನ್ನು ಆಚರಿಸಲು ಜನರಲ್ಲಿ ಮತ್ತಷ್ಟು ಹುರುಪನ್ನು ತರುತ್ತದೆ. ಈ ಕಾರಣದಿಂದ ಕೂಸ ಜನರ ಮನಸ್ಸಿನಲ್ಲಿ ಯುಗಾದಿ ಬಂದಾಕ್ಷಣ ಹೊಸ ಯುಗಕ್ಕೆ ಕಾಲಿಟ್ಟಂತೆ ಭಾಸವಾಗುವುದು.

*​ಬ್ರಹ್ಮಾಂಡದ ಸೃಷ್ಟಿ*

ನಾವು ಈ ಹಬ್ಬವನ್ನು ಆಚರಿಸಲು ಮುಖ್ಯ ಕಾರಣವೇನೆಂದರೆ ಈ ದಿನದಂದು ಬ್ರಹ್ಮ ದೇವನು ಸಂಪೂರ್ಣ ವಿಶ್ವವನ್ನು ಸೃಷ್ಟಿಸಿದನು ಎನ್ನುವ ನಂಬಿಕೆಯಿದೆ. ಆದ್ದರಿಂದ, ಈ ದಿನವನ್ನು ಎಲ್ಲಾ ಹಿಂದೂಗಳು ಹೊಸ ವರ್ಷವೆಂದು ಆಚರಿಸುತ್ತಾರೆ. ಹಿಂದೂ ಪುರಾಣಗಳ ಪ್ರಕಾರ, ಬ್ರಹ್ಮಾಂಡದ ವಿಕಾಸದ ಸಮಯದಲ್ಲಿ, ಸೃಷ್ಟಿಕರ್ತ ಯುಗಾದಿಯ ದಿನದಂದು ಸೃಷ್ಟಿ ಕಾರ್ಯವನ್ನು ಪ್ರಾರಂಭಿಸಿದನು. ಮತ್ತು ಹಿಂದೂಗಳ ನಂಬಿಕೆಯ ಪ್ರಕಾರ, ಬ್ರಹ್ಮ ದೇವರು ಇಡೀ ವಿಶ್ವವನ್ನು ಸೃಷ್ಟಿಸಿದನು ಮತ್ತು ಭೂಮಿಯ ಮೇಲಿನ ನಮ್ಮ ಒಂದು ವರ್ಷವು ಬ್ರಹ್ಮ ದೇವರಿಗೆ ಒಂದು ದಿನಕ್ಕೆ ಸಮಾನವಾಗಿರುತ್ತದೆ. ಆದ್ದರಿಂದ, ನಾವು ಯುಗಾದಿಯ ಹೊಸ ವರ್ಷವನ್ನು ಪ್ರಾರಂಭಿಸಿದಾಗ ಬ್ರಹ್ಮ ದೇವನು ಹೊಸ ದಿನವನ್ನು ಪ್ರಾರಂಭಿಸುತ್ತಾನೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಯುಗಾದಿಯನ್ನು ಭೂಮಿಯು ಮತ್ತು ಅದರ ಮೇಲಿನ ಜೀವ ರೂಪಗಳು ಹೊರಹೊಮ್ಮಲು ಪ್ರಾರಂಭಿಸಿದ ಸೃಷ್ಟಿಯ ಪ್ರಾರಂಭದ ನೆನಪಿಗಾಗಿ ಆಚರಿಸಲಾಗುತ್ತದೆ.

*​ವಿಷ್ಣುವಿನ ಮತ್ಸ್ಯ ಅವತಾರ*

ಯುಗಾದಿ ಹಬ್ಬದ ಹಿಂದೆ ಪೌರಾಣಿಕ ಕಥೆಯೂ ಇದೆ. ಒಮ್ಮೆ ಸಂಭಬಕಾಸುರನೆಂಬ ರಾಕ್ಷಸನಿದ್ದ. ಒಂದು ದಿನ ಈ ರಾಕ್ಷಸನು ಬ್ರಹ್ಮದೇವನ ವೇದಗಳನ್ನು ಕದ್ದು ಸಮುದ್ರದಲ್ಲಿ ಅಡಗಿಕೊಂಡನು. ದೈತ್ಯನೊಬ್ಬ ಬ್ರಹ್ಮನ ವೇದಗಳನ್ನು ಕದ್ದಿದ್ದಾನೆ ಎಂದು ವಿಷ್ಣುವಿಗೆ ತಿಳಿದಾಗ. ಆಗ ವಿಷ್ಣುವು ಮತ್ಸ್ಯ ರೂಪವನ್ನು ತಳೆದು ಸಮುದ್ರದ ಆಳಕ್ಕೆ ಹೋಗಿ ಆ ರಾಕ್ಷಸನೊಂದಿಗೆ ಹೋರಾಡಿದನು. ಮತ್ತು ಆ ರಾಕ್ಷಸನನ್ನು ತನ್ನ ಸುದರ್ಶನ ಚಕ್ರದಿಂದ ಸಂಹಾರ ಮಾಡಿದನು. ಮತ್ತು ವೇದಗಳನ್ನು ಮರಳಿ ತಂದು, ಅದನ್ನು ಬ್ರಹ್ಮ ದೇವನಿಗೆ ಹಿಂದಿರುಗಿಸಿದನು. ಈ ಸಂಪೂರ್ಣ ಘಟನೆಯು ಚೈತ್ರ ಮಾಸದ ಮೊದಲ ದಿನದಂದು ಸಂಭವಿಸಿತು ಎನ್ನುವ ನಂಬಿಕೆ ಹಿಂದೂ ಧರ್ಮೀಯರದ್ದು. ಬ್ರಹ್ಮ ದೇವನು ವೇದಗಳನ್ನು ಮರಳಿ ಪಡೆದು ವಿಶ್ವವನ್ನು ಸೃಷ್ಟಿಸಿದ ದಿನ. ಆದ್ದರಿಂದ, ನಾವು ಈ ದಿನ ಹೊಸ ವರ್ಷವನ್ನು ಆಚರಿಸುತ್ತೇವೆ.

*​ಬ್ರಹ್ಮ ದೇವನ ಮೇಲೆ ಶಿವನ ಶಾಪ*

ಈ ದಿನದಂದು ಭಗವಾನ್‌ ಶಿವನು ಕೋಪದಿಂದ ಬ್ರಹ್ಮದೇವನಿಗೆ ಭೂಮಿಯಲ್ಲಿ ಯಾರು ಕೂಡ ಪೂಜಿಸಬಾರದು ಎನ್ನುವ ಶಾಪವನ್ನು ನೀಡಿದನು ಎನ್ನುವ ದಂತಕಥೆಯಿದೆ. ಆದರೆ ಬ್ರಹ್ಮ ದೇವನು ತನ್ನ ತಪ್ಪಿಗೆ ಪಶ್ಚತ್ತಾಪ ಪಟ್ಟನೆನ್ನುವ ಕಾರಣದಿಂದ ಶಿವನು ಅವನಿಗೆ ಯುಗಾದಿ ದಿನದಂದು ಜನರು ನಿನ್ನನ್ನು ಪೂಜಿಸುವಂತಾಗಲಿ ಎಂದು ವರವನ್ನು ನೀಡುತ್ತಾನೆ. ಆದ್ದರಿಂದ ಈ ದಿನದಂದು ವಿಶೇಷವಾಗಿ ಬ್ರಹ್ಮ ದೇವನನ್ನು ಪೂಜಿಸಲಾಗುತ್ತದೆ ಎನ್ನುವ ನಂಬಿಕೆಯಿದೆ.

*​ಭಗವಾನ್ ರಾಮನ ಪಟ್ಟಾಭಿಷೇಕ*

ಎಲ್ಲಾ ಹಿಂದೂ ಧರ್ಮಗ್ರಂಥಗಳ ಪ್ರಕಾರ, ಈ ದಿನದಂದು ಭಗವಾನ್ ರಾಮನ ಪಟ್ಟಾಭಿಷೇಕವನ್ನು ನಡೆಸಲಾಯಿತು ಎನ್ನುವ ಉಲ್ಲೇಖವಿದೆ. ಆದ್ದರಿಂದ ಈ ಹಬ್ಬವನ್ನು ಪ್ರತಿ ವರ್ಷ ಯುಗಾದಿಯ ದಿನದಂದು ಬಹಳ ವಿಜೃಂಭಣೆಯಿಂದ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಯುಗಾದಿಯ ದಿನದಂದು ಜನರು ತಮ್ಮ ಮನೆ ಮತ್ತು ಹತ್ತಿರದ ಪ್ರದೇಶವನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ತಮ್ಮ ಮನೆಯ ಪ್ರವೇಶದ್ವಾರವನ್ನು ಮಾವಿನ ಎಲೆಗಳಿಂದ ಅಲಂಕರಿಸುತ್ತಾರೆ. ಕುಟುಂಬದ ಸದಸ್ಯರು ಹೊಸ ಬಟ್ಟೆಯನ್ನು ಧರಿಸಿ ಬೆವು - ಬೆಲ್ಲವನ್ನು ಸವಿಯುತ್ತಾರೆ.
[31/03, 9:34 AM] Pandit Venkatesh. Astrologer. Kannada: ಆಚಾರ ಪ್ರಿಯರು ವಿಚಾರ ಶೂನ್ಯರು. 

ಆಚಾರ ಹೇಳಲು ನಾನು ಮುಂದು ತಾ ಮುಂದು
ವಿಚಾರ ಮಾಡಲು ಎಲ್ಲರೂ ಹಿಂದು
ಅನಾಚಾರ ಮಾಡುವುದರಲಿ ಅದೆಷ್ಟು ಮಂದಿ ಮುಂದು
ಗ್ರಹಚಾರ ಕಾಡಿದಾಗಲೇ ವೇದಾಂತ ರುಚಿಸುವುದು ಎಂದೆಂದೂ.
[31/03, 9:34 AM] Pandit Venkatesh. Astrologer. Kannada: 🙏 ಶುಭ ಚಿಂತನ ವಾಣಿ 520
ಹೆಸರಿಗಾಗಿ ಚಿಂತಿಸಬಾರದು
ಏಕೆಂದರೆ ಹೆಸರು ಮನುಜನ ದೇಹವನ್ನು ಗುರುತಿಸಲಿಕ್ಕೆ ಮಾತ್ರ
ಪ್ರಾಮಾಣಿಕವಾದ ಕೆಲಸಗಳಿಂದ
ಹೆಸರು ಕೀರ್ತಿ ಬಯಸದೆ ತಾನಾಗಿ ಬರುತ್ತದೆ. ಅದು ಭಗವಂತನ ವರಪ್ರಸಾದ.
ವಿ.ರಾಧಾ ಗುರುರಾಜ್
[31/03, 9:34 AM] Pandit Venkatesh. Astrologer. Kannada: 🕉🙏  *ಸುಪ್ರಭಾತ* 🙏🕉
          
         ▬▬▬ஜ۩۞۩ஜ▬▬▬                            

 🌺 🍁 ꧂⌒*✰‿✰
꧂⌒*✰‿✰ *ಸ್ಪೂರ್ತಿ ಕಿರಣ*
           
*☘“ತಪ್ಪು ಮಾಡಿದಾಗ ಕ್ಷಮೆ ಕೇಳಲು ಹಿಂದೇಟು ಹಾಕಬಾರದು. ಕೆಲವೊಮ್ಮೆ ತಪ್ಪಿಗಿಂತ ಕ್ಷಮೆ ಕೇಳದಿರುವುದು ದೊಡ್ಡ ತಪ್ಪು ಎಂದು ಪರಿಗಣಿತವಾಗುತ್ತದೆ. ಆದ ತಪ್ಪಿಗೆ ಕ್ಷಮೆ ಕೇಳಿ ದೊಡ್ಡ ಗುಣವನ್ನು ಮೆರೆಯಬೇಕು”🌿...✍️*
         ----------------~--------------
        *ಧರ್ಮೋ ರಕ್ಷತಿ ರಕ್ಷಿತಃ* 

 _🍵ಶುಭೋದಯ ಸ್ನೇಹಿತರೆ ☕_ 
   
*॥ಸರ್ವೆಜನಃ ಸುಖಿನೋಭವಂತು॥*
 ▬▬▬▬▬ஜ۩۞۩ஜ▬▬▬▬▬

“🌱ನೆರಳಿಗಾಗಿ ಗಿಡ ನೆಡಿ - 
ಶುದ್ಧವಾದ ಗಾಳಿಗಾಗಿ ಮರ ರಕ್ಷಿಸಿ!!!🌳”

📖 *ನಮೋ ರಾಷ್ಟ್ರಭಕ್ತರು*🚩

🚩🌹ಬನ್ನಿ *ಸೋದರರೆ*... ಬನ್ನಿ *ಬಾಂಧವರೆ*.... ಹೃದಯ ಹೃದಯಗಳ *ಬೆಸೆಯೋಣ*...  ಹೃದಯ ಹೃದಯಗಳ *ಬೆಸೆಯೋಣ*....!!!🚩🦚

Post a Comment

Previous Post Next Post