ತಿಂಡಿ ತರಲು ಹೊರಗೆ ಬಂದ ವಿದ್ಯಾರ್ಥಿ ದಾಳಿ ಯಲ್ಲಿ ಬಲಿ... ಕನ್ನಡಿಗರ ಶೋಕ, cm ಸಾಂತ್ವನ

ಕರ್ನಾಟಕದ ರಾಣೆಬೆನ್ನೂರಿನ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಶೇಖರಪ್ಪ  ಗ್ಯಾನ ಗೌಡ ರ ಉಕ್ರೇನ್‌ನ ಖಾರ್ಕಿವ್‌ನಲ್ಲಿ ನಡೆದ ಶೆಲ್ ದಾಳಿಯಲ್ಲಿ      ಮೃತ ನಾಗಿದ್ದಾನೆ.     ನಿಧನರಾದ ಸುದ್ದಿ ತಿಳಿದು ಅತೀವ ನೋವುಂಟಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು  ನೀಡಲಿ ಎಂದು ಕನ್ನಡಿಗರು ಸಂತಾಪ ವ್ಯಕ್ತ ಪಡಿಸಿ ದ್ದಾರೆಮತ್ತು #ಉಕ್ರೇನ್‌ ನಲ್ಲಿರುವ ಎಲ್ಲಾ ಭಾರತೀಯರ ಸುರಕ್ಷತೆಗಾಗಿ ಪ್ರಾರ್ಥಿಸಿ ದ್ದಾರೆ. 


ಮೃತ ನವೀನ ಕುಟುಂಬದೊಂದಿಗೆ ಮುಖ್ಯ ಮಂತ್ರಿ ತೀವ್ರ ಸಂತಾಪ ಸೂಚಿಸಿದ್ದಾರೆ. 🙏
ಉಕ್ರೇನ್ ನಲ್ಲಿ ಸಾವನ್ನಪ್ಪಿದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ 

ನವೀನ್ ಅವರ ತಂದೆ ಶೇಖರಗೌಡ ಅವರಿಗೆ ಸಾಂತ್ವಾನ ಹೇಳಿದ ಸಿಎಂ ಬಸವರಾಜ ಬೊಮ್ಮಾಯಿ

ದೂರವಾಣಿಯಲ್ಲಿ ಮಾತನಾಡಿ ಸಾವನ್ನಪ್ಪಿದ ನವೀನ್ ಬಗ್ಗೆ ಮಾಹಿತಿ ಪಡೆದ ಸಿಎಂ

ಇದು ನಿಜಕ್ಕೂ ದೊಡ್ಡ ದುರಂತ

 ದೇವರು ನವೀನ್ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ

 ನೀವು ಧೈರ್ಯದಿಂದಿರಿ

 ನವೀನ್ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆದಿದೆ 

ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸಾಂತ್ವಾನ ಹೇಳಿದ ಸಿಎಂ

ಮಗನ ಬಗ್ಗೆ ದುಃಖದಿಂದ ಮಾತನಾಡಿದ ಶೇಖರಗೌಡ ಗ್ಯಾನ ಗೌಡರ್ ಇಂದು ಮುಂಜಾನೆ ತಮ್ಮ ಮಗ ದೂರವಾಣಿ ಕರೆ ಮಾಡಿದ್ದ ಪ್ರತಿ ದಿನ ಎರಡು ಮೂರು ಬಾರಿ ದೂರವಾಣಿ ಮೂಲಕ ಮಾತಾಡುತ್ತಿದ್ದ ಎಂದು ವಿವರಿಸಿದರು

1 Comments

  1. ಭಾರಿ ಅನ್ಯಾಯ ಇದು,ಆ ತಾಯಿ ಯನ್ನೂ ಮೊದಲು ಸಾಂತ್ವನ ಗೊಳಿಸಿ ಅದೆಷ್ಟು ನೊಂದಿದ್ದಾರೋ ಏನೋ,, 😶🙏🙏

    ReplyDelete

Post a Comment

Previous Post Next Post