🕉🕉🕉🕉🕉🕉🕉🕉🕉
@ಅನಂತಪದ್ಮನಾಭ ಬಳಗ ಕಾರ್ಕಳ@
*ಉಡುಪಿ ಶ್ರೀ ಪೂರ್ಣಪ್ರಜ್ಞ ಪಂಚಾಂಗ - ಶ್ರೀ ಕೃಷ್ಣ ಪಂಚಾಂಗ ಆಧರಿತ*
(ದೃಕ್ಸಿದ್ಧಾಂತ ಗಣಿತಾನುಸಾರ)
*ನಿತ್ಯ ಪಂಚಾಂಗ*
ಶಾಲಿವಾಹನ ಶಕ ವರ್ಷ-೧೯೪೩
ಕಲಿವರ್ಷ- ೫೧೨೩
ಸಂವತ್ಸರ - ಪ್ಲವ
ಆಯಣ- ಉತ್ತರಾಯಣ
ಋತು -ವಸಂತ ಋತು
ಮಾಸ(ಚಾಂದ್ರ)- ಚೈತ್ರ
ಪಕ್ಷ - ಶುಕ್ಲಪಕ್ಷ
ತಿಥಿ - ನವಮಿ 27:16
ಮಾ.ನಿ - ವಿಷ್ಣು
ಮಾಸ (ಸೌರ) - ಮೀನ (ಸುಗ್ಗಿ)
ದಿನ - 27
ನಕ್ಷತ್ರ - ಪುಷ್ಯ 30:22+
ಯೋಗ - ಸುಕರ್ಮ 12:01
ಕರಣ - ಬಾಳವ 14:23
ವಿಷ - 13:18
ಅಮೃತ - 25:50
ರಾಹುಕಾಲ -05:10-06:42
ಗುಳಿಕ ಕಾಲ -03:37-05:10
ವಾರ - ಭಾನುವಾರ
ಸೂರ್ಯೋದಯ (ಉಡುಪಿ)- 06:22
ಸೂರ್ಯಾಸ್ತ - 06:41
ದಿನ ವಿಶೇಷ- *ಶ್ರೀ ರಾಮನವಮೀ , ಕಣ್ವತೀರ್ಥರಥ , ಪಲಿಮಾರು ಮಠ ಶ್ರೀ ರಾಮದೇವರಿಗೆ ಮಹಾಭಿಷೇಕ , ಕಾರ್ಕಳ ಅನಂತಪದ್ಮನಾಭ ರಾಮನವಮೀ ಉತ್ಸವ , ಶಿರೂರು ಮುಖ್ಯಪ್ರಾಣ ರಥ.*
🕉️🕉️🕉️🕉️🕉️🕉️🕉️🕉️🕉️[09/04, 7:37 PM] Pandit Venkatesh. Astrologer. Kannada: ಶ್ರೀರಾಮ ನವಮಿ 2022: ಯಾವಾಗ? ಆಚರಣೆಯ ವಿಧಿವಿಧಾನಗಳೇನು?
ರಾಮನವಮಿಯ ಆಚರಣೆ 9 ದಿನಗಳ ಮುನ್ನವೇ ಆರಂಭವಾಗುತ್ತದೆ. ಏ.2ರಂದು ರಾಮನವಮಿ ಆರಂಭವಾಗಿದ್ದು, ಏಪ್ರಿಲ್ 10ರಂದು ರಾಮನ ಜನ್ಮ ದಿನವನ್ನು ಆಚರಿಸಲಾಗುತ್ತದೆ.
ಶ್ರೀ ರಾಮ ಎಂದರೆ ಆದರ್ಶ ಪುರುಷ. ವಿಷ್ಣುವಿನ ಏಳನೇ ಅವತಾರವಾಗಿ ರಘುವಂಶದಲ್ಲಿ ಜನಿಸಿದ ರಾಮನ ಹೆಸರಲ್ಲೇ ಅಗ್ನಿ ಬೀಜಾಕ್ಷರ ಮಂತ್ರವಿದೆ. ಪ್ರತಿ ಹೆಣ್ಣೂ ಬಯಸುವುದೇ ಶ್ರೀರಾಮನಂಥ ಪತಿ ಸಿಗಲಿ ಎಂದು. ಆತ ಏಕಪತ್ನೀ ವ್ರತಸ್ಥ. ಶ್ರೀ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಜನಿಸಿದನು. ಹಾಗಾಗಿ ಪ್ರತಿ ವರ್ಷ ಆ ದಿನದಂದು ಶ್ರೀ ರಾಮನವಮಿ ಎಂದು ರಾಮನ ಜನ್ಮ ದಿನ ಆಚರಿಸಲಾಗುತ್ತದೆ. ಅಲ್ಲದೆ ಈ ದಿನವನ್ನು ಕೆಟ್ಟದ್ದರ ವಿರುದ್ಧ ಒಳಿತಿನ ಜಯವಾಗಿಯೂ ನೋಡಲಾಗುತ್ತದೆ. ಭಾರತದಾದ್ಯಂತ ಬಹಳಷ್ಟು ದೇವಾಲಯಗಳಲ್ಲಿ ರಾಮನವಮಿಯನ್ನು ಒಂಬತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಚೈತ್ರ ನವರಾತ್ರಿಯ ಮೊದಲನೇ ದಿನದಿಂದಲೇ ರಾಮನವಮಿ ಆಚರಣೆ ಆರಂಭವಾಗುತ್ತದೆ.
ರಾಮನವಮಿಯು ಹಿಂದೂಗಳ ದೊಡ್ಡ ಹಬ್ಬಗಳಲ್ಲಿ ಒಂದಾಗಿದ್ದು, ಅತ್ಯಂತ ಭಕ್ತಿಯಿಂದ ಜನರು ಇದನ್ನು ಆಚರಿಸುತ್ತಾರೆ. ರಾಮನವಮಿ ಈ ಬಾರಿ ಯಾವತ್ತು? ಹೇಗೆ ಆಚರಿಸಲಾಗುತ್ತದೆ ಎಲ್ಲವನ್ನೂ ನೋಡೋಣ.
ಯಾವಾಗ?
ಈ ಬಾರಿ ರಾಮನವಮಿಯು ಏಪ್ರಿಲ್ 10ರಂದು ಬರಲಿದೆ. ಶ್ರೀ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಮಧ್ಯಾಹ್ನ ಜನಿಸಿದನು ಎನ್ನಲಾಗುತ್ತದೆ. ಹಾಗಾಗಿ, ಸಾಮಾನ್ಯವಾಗಿ ಮಧ್ಯಾಹ್ನದ ಸಮಯವನ್ನು ರಾಮನವಮಿಯಿಂದು ವಿಶೇಷವಾಗಿ ಆಚರಿಸಲಾಗುತ್ತದೆ. ಈ ಬಾರಿ ಬೆಳಗ್ಗೆ 11.10ರಿಂದ ಮಧ್ಯಾಹ್ನ 1.37 ಗಂಟೆಯ ಅವಧಿ ರಾಮನವಮಿ ಆಚರಣೆಗೆ ಮುಹೂರ್ತವಾಗಿದೆ.
ರಾಮನವಮಿ ಆಚರಣೆ ಹೇಗೆ?
ರಾಮನವಮಿ 9 ದಿನಗಳ ಮುನ್ನವೇ ಅಂದರೆ ಚೈತ್ರ ನವರಾತ್ರಿಯ ಮೊದಲನೇ ದಿನದಿಂದಲೇ ದೇವಾಲಯಗಳಲ್ಲಿ, ಮನೆಗಳಲ್ಲಿ ರಾಮಾಯಣದ ಕತೆಯನ್ನು ಹೇಳಲಾಗುತ್ತದೆ. ಈ ಸಂಬಂಧ ನಾಟಕ ನಿರೂಪಣೆಗಳು ನಡೆಯುತ್ತವೆ. ಇದರ ಪಠಣ, ಶ್ರವಣವೆರಡೂ ಅಪಾರ ಲಾಭಗಳನ್ನು ತಂದುಕೊಡಲಿದೆ.
ಜನರು ಪ್ರತಿ ಸಂಜೆ ರಾಮರಕ್ಷಾ ಸ್ತ್ರೋತ್ರ ಪಠಣ ಮಾಡುತ್ತಾರೆ.
ರಾಮನ ಕುರಿತ ಭಜನೆಗಳು ಎಲ್ಲೆಡೆ ಭಯಭಕ್ತಿಗಳಿಂದ ನಡೆಯುತ್ತವೆ.
ರಾಮನ ವಿಗ್ರಹವನ್ನು ತೊಟ್ಟಿಲಿಗೆ ಹಾಕಿ ತೂಗಿ ಪೂಜಿಸಲಾಗುತ್ತದೆ.
ಮನೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿ, ದೇವರ ಕೋಣೆಯಲ್ಲಿ ರಾಮನ ವಿಗ್ರಹವಿಟ್ಟು ವಿಶೇಷವಾಗಿ ಪೂಜಿಸಲಾಗುತ್ತದೆ.
ರಾಮನವಮಿಗೂ 8 ದಿನಗಳ ಮೊದಲಿಂದಲೇ ಭಕ್ತರು ಮಾಂಸಾಹಾರ, ಈರುಳ್ಳಿ, ಬೆಳ್ಳುಳ್ಳು ವರ್ಜಿಸಿದ ಆಹಾರವನ್ನು ಮಾತ್ರ ಸೇವಿಸುತ್ತಾರೆ.
ಪೂಜಾ ವಿಧಿ:
ರಾಮನವಮಿಯ ದಿನ ಬೇಗ ಎದ್ದು ಸ್ನಾನ ಮಾಡಿ, ಪೂಜೆಗೆ ಕೂರಬೇಕು. ತುಳಸಿ ಹಾಗೂ ಕಮಲದ ಹೂವು ರಾಮನ ಪೂಜೆಗೆ ಮುಖ್ಯವಾಗಿವೆ. ಶೋಡಶೋಪಚಾರದಿಂದ ಆರಂಭವಾಗಿ 16 ಹಂತಗಳಲ್ಲಿ ರಾಮ ಪೂಜೆ ನಡೆಸಬೇಕು. ಬಳಿಕ ಖೀರು, ಹಣ್ಣುಗಳ ನೈವೇದ್ಯ ಮಾಡಿ ಎಲ್ಲರಿಗೂ ಪಾನಕ, ಮಜ್ಜಿಗೆ ಹಂಚಬೇಕು.
ಪೂಜೆಯ ಬಳಿಕ, ಮನೆಯ ಅತಿ ಕಿರಿಯ ಮಹಿಳೆ ಎಲ್ಲ ಸದಸ್ಯರ ಹಣೆಗೆ ತಿಲಕವಿರಿಸಬೇಕು.
ರಾಮನವಮಿ ವ್ರತ ಕತಾ:
ಲಂಕೆಯ ರಾಜ ರಾವಣನ ಆಡಳಿತದಲ್ಲಿ ಪ್ರಜೆಗಳೆಲ್ಲ ಬಸವಳಿದು ಹೋಗಿದ್ದರು. ಆತನ ಆಡಳಿತ ಕೊನೆಯಾಗಲಿ ಎಂದು ಬಯಸುತ್ತಿದ್ದರು. ಆದರೆ, ರಾವಣನು ಬ್ರಹ್ಮನಿಂದ ತನ್ನನ್ನು ಯಾವ ದೇವರು ಅಥವಾ ಯಕ್ಷರು ಕೊಲ್ಲಲಾಗದಂತೆ ವರ ಪಡೆದಿದ್ದ. ಸಿಕ್ಕಾಪಟ್ಟೆ ಶಕ್ತಿಶಾಲಿಯಾಗಿದ್ದ. ಹಾಗಾಗಿ, ಈತನನ್ನು ಮುಗಿಸಲು ಏನಾದರೂ ಸಹಾಯ ಮಾಡುವಂತೆ ಕೋರಿ ದೇವಾನುದೇವತೆಗಳು ವಿಷ್ಣುವಿನಲ್ಲಿ ಬೇಡಿಕೊಂಡರು. ಆಗ ವಿಷ್ಣುವು ಅಯೋಧ್ಯೆಯ ರಾಜ ದಶರಥ ಹಾಗೂ ಕೌಸಲ್ಯೆಯ ಪ್ರಥಮ ಪುತ್ರನಾಗಿ ರಾಮನ ಅವತಾರವೆತ್ತಿದ. ಹೀಗೆ ರಾಮನಾಗಿ ವಿಷ್ಣು ಜನಿಸಿದ ದಿನವನ್ನು ಅಂದಿನಿಂದಲೂ ರಾಮನವಮಿಯಾಗಿ ಆಚರಿಸಲಾಗುತ್ತಿದೆ. ತುಳಸೀದಾಸರು ರಾಮಚರಿತ ಮಾನಸ ಬರೆಯಲು ಆರಂಭಿಸಿದ್ದು ಕೂಡಾ ಇದೇ ದಿನವಾಗಿದೆ ಎಂಬುದು ವಿಶೇಷ.
🙏🙏🙏🙏🙏
[10/04, 6:36 AM] Pandit Venkatesh. Astrologer. Kannada: 🕉🕉🕉🕉🕉🕉🕉🕉🕉
@ಅನಂತಪದ್ಮನಾಭ ಬಳಗ ಕಾರ್ಕಳ@
*ಉಡುಪಿ ಶ್ರೀ ಪೂರ್ಣಪ್ರಜ್ಞ ಪಂಚಾಂಗ - ಶ್ರೀ ಕೃಷ್ಣ ಪಂಚಾಂಗ ಆಧರಿತ*
(ದೃಕ್ಸಿದ್ಧಾಂತ ಗಣಿತಾನುಸಾರ)
*ನಿತ್ಯ ಪಂಚಾಂಗ*
ದಿನಾಂಕ - 10/04/22
ಶಾಲಿವಾಹನ ಶಕ ವರ್ಷ-೧೯೪೩
ಕಲಿವರ್ಷ- ೫೧೨೩
ಸಂವತ್ಸರ - ಪ್ಲವ
ಆಯಣ- ಉತ್ತರಾಯಣ
ಋತು -ವಸಂತ ಋತು
ಮಾಸ(ಚಾಂದ್ರ)- ಚೈತ್ರ
ಪಕ್ಷ - ಶುಕ್ಲಪಕ್ಷ
ತಿಥಿ - ನವಮಿ 27:16
ಮಾ.ನಿ - ವಿಷ್ಣು
ಮಾಸ (ಸೌರ) - ಮೀನ (ಸುಗ್ಗಿ)
ದಿನ - 27
ನಕ್ಷತ್ರ - ಪುಷ್ಯ 30:22+
ಯೋಗ - ಸುಕರ್ಮ 12:01
ಕರಣ - ಬಾಳವ 14:23
ವಿಷ - 13:18
ಅಮೃತ - 25:50
ರಾಹುಕಾಲ -05:10-06:42
ಗುಳಿಕ ಕಾಲ -03:37-05:10
ವಾರ - ಭಾನುವಾರ
ಸೂರ್ಯೋದಯ (ಉಡುಪಿ)- 06:22
ಸೂರ್ಯಾಸ್ತ - 06:41
ದಿನ ವಿಶೇಷ- *ಶ್ರೀ ರಾಮನವಮೀ , ಕಣ್ವತೀರ್ಥರಥ , ಪಲಿಮಾರು ಮಠ ಶ್ರೀ ರಾಮದೇವರಿಗೆ ಮಹಾಭಿಷೇಕ , ಕಾರ್ಕಳ ಅನಂತಪದ್ಮನಾಭ ರಾಮನವಮೀ ಉತ್ಸವ , ಶಿರೂರು ಮುಖ್ಯಪ್ರಾಣ ರಥ.*
🕉️🕉️🕉️🕉️🕉️🕉️🕉️🕉️🕉️
Post a Comment