ದಿಂಗಾಲೇಶ್ವರ ಸ್ವಾಮಿಗಳ ಹೇಳಿಕೆ: *ವಿವರಗಳನ್ನು ನೀಡಿದರೆ ಸಂಪೂರ್ಣ ತನಿಖೆ*:* *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ**ಹೆಚ್ಚುವರಿಯಾಗಿ 1.14 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ತೀರ್ಮಾನ:*

[18/04, 8:07 PM] Gurulingswami. Holimatha. Vv. Cm: *ಹೆಚ್ಚುವರಿಯಾಗಿ 1.14 ಲಕ್ಷ ಮೆಟ್ರಿಕ್ ಟನ್  ರಾಗಿ ಖರೀದಿಗೆ ತೀರ್ಮಾನ:*
*ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಬೆಂಗಳೂರು, ಏಪ್ರಿಲ್ 18: ಕನಿಷ್ಠ ಬೆಂಬಲ ಯೋಜನೆಯಡಿ ಸರ್ಕಾರ ಹೆಚ್ಚುವರಿಯಾಗಿ 1.14 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ ಮಾಡಲು ತೀರ್ಮಾನ ಮಾಡಿದೆ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಧಾನಸೌಧದ ತಮ್ಮ ಕಚೇರಿಯಲ್ಲಿ  ಮಾಧ್ಯಮದವರೊಂದಿಗೆ  ಮಾತನಾಡಿದರು.

ಕೆಲವು ಜಿಲ್ಲೆಗಳಲ್ಲಿ ರಾಗಿ ಖರೀದಿ ಮಾಡಬೇಕೆಂಬ ರೈತರ  ಬೇಡಿಕೆಯ ಮೇರೆಗೆ  ಈಗಾಗಲೇ 2.1 ಲಕ್ಷ ಟನ್ ರಾಗಿ ಖರೀದಿ ಮಾಡಿರುವ ಜೊತೆಗೆ ಹೆಚ್ಚುವರಿಯಾಗಿ ಸರ್ಕಾರ  ಖರೀದಿ ಮಾಡುತ್ತಿದೆ. ಇದಕ್ಕೆ ಒಟ್ಟು 487 ಕೋಟಿ ರೂ.ಗಳ ವೆಚ್ಚವಾಗಲಿದೆ ಎಂದರು.
[18/04, 8:09 PM] Gurulingswami. Holimatha. Vv. Cm: ದಿಂಗಾಲೇಶ್ವರ ಸ್ವಾಮಿಗಳ ಹೇಳಿಕೆ: 

*ವಿವರಗಳನ್ನು ನೀಡಿದರೆ ಸಂಪೂರ್ಣ ತನಿಖೆ*:* *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಬೆಂಗಳೂರು, ಏಪ್ರಿಲ್ 18:  ದಿಂಗಾಲೇಶ್ವರ ಸ್ವಾಮಿಗಳು ಸರ್ಕಾರದ ಕಮಿಷನ್  ಬಗ್ಗೆ ವಿವರಗಳನ್ನು  ನೀಡಿದರೆ ಸಂಪೂರ್ಣವಾಗಿ ತನಿಖೆ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.  

ದಿಂಗಾಲೇಶ್ವರ ಸ್ವಾಮಿಗಳು ಅನುದಾನ ಬಿಡುಗಡೆ ಮಾಡಲು ಕಮಿಷನ್  ನೀಡುವ ಕುರಿತು ಹೇಳಿಕೆ ನೀಡಿರುವ ಬಗ್ಗೆ ಮುಖ್ಯಮಂತ್ರಿಗಳು ಮಾಧ್ಯಮದವರಿಗೆ   ಪ್ರತಿಕ್ರಿಯೆ ನೀಡಿದರು.  

 ದಿಂಗಾಲೇಶ್ವರರು ಪರಮಪೂಜ್ಯರು, ಮಹಾತ್ಮರು,  ತಪಸ್ವಿಗಳು.  ಮಠಾಧೀಶರು ಹೇಳಿಕೆ  ನೀಡಿದರೆ ಸಾಲುವುದಿಲ್ಲ ಅವರು ಯಾರು,  ಯಾರಿಗೆ, ಯಾವುದಕ್ಕಾಗಿ ಎಷ್ಟು ಪರ್ಸೆಂಟ್ ಹಣ ಕೊಟ್ಟಿದ್ದಾರೆ ಎಂದು ವಿವರಗಳನ್ನು  ನೀಡಿದರೆ ಸಂಪೂರ್ಣವಾಗಿ ಅದರ ಆಳಕ್ಕೆ ಹೋಗಿ  ತನಿಖೆ ಮಾಡಿಸುವುದಾಗಿ ಹೇಳಿದರು.

Post a Comment

Previous Post Next Post