🌺ಥೀಮ್: 2022/14/🌺ಥೀಮ್ 🕉️ರಂಗೋಲಿ.🕉️ ಚಿಂತನೆ, ನಿಮಗಾಗಿ

🌺ಥೀಮ್: 2022/14/🌺
ಥೀಮ್ 
🕉️ರಂಗೋಲಿ.🕉️ 
****************
⚛️🔯⚛️🔯⚛️🔯⚛️🔯⚛️🔯⚛️🔯⚛️🔯⚛️

🌺 ಸಂಪ್ರದಾಯ ಸಂಸ್ಕೃತಿಯ ರಂಗೋಲಿ🌺
**************************************
🔯ಪುರಾತನ  ಕಾಲ ಸಂಸ್ಕೃತಿ ಪಾಲಿಸುವ ಆಚರಣೆಯ  ರಂಗೋಲಿ💐

🔯ಬ್ರಹ್ಮ ಮಹೂರ್ತದಲಿ  ಮೂಡಣದಿ ಮೂಡುವ ಹೊಂಬಣ್ಣದ  ಪವಿತ್ರ  ರಂಗೋಲಿ💐

✡️ಸೂರ್ಯನ  ಆಗಮನದಿ ಸ್ವಾಗತ ಕೋರುವ ರಂಗೋಲಿ💐

🔯ಮುಂಬಾಗಿಲಿನ ಮಾವಿನ ತಳಿರು ತೋರಣದಿ ಹೂವಿನ ರಂಗೋಲಿ💐

🔯ಬೃಂದಾವನದಿ ಪವಿತ್ರ ಭಕ್ತಿಯ ದೀಪ ಬೆಳಗುವ ರಂಗೋಲಿ.💐

🔯 ಮನೆಯಂಗಳದಿ  ರಂಗು ರಂಗಿನ ಚಿತ್ತಾರದ  ರಂಗೋಲಿ.💐

🔯ಶುಕ್ರವಾರದ ಪೂಜೆಯಲಿ ಸಹಸ್ರದಳ ಕಮಲದ ರಂಗೋಲಿ.💐

🔯ಸಮಾರಂಭಗಳಲ್ಲಿ  ಶುಭಾರಂಭಕೆ  ಸ್ವಸ್ತಿಕ್ ಮತ್ತು ಕುಬೇರ ರಂಗೋಲಿ.💐

🔯ಹಬ್ಬ ಹರಿದಿನಗಳಲ್ಲಿ ಶುಭ ಸಂದೇಶ ಸಾರುವ  ರಂಗೋಲಿ.💐

🔯ದೇವರ ಸನ್ನಿಧಾನದಿ ಪ್ರಜ್ವಲಿಸುವ ಲಕ್ಷ್ಮೀ ಹೃದಯ  ರಂಗೋಲಿ.💐

🔯ಅಂಧಕಾರ ಕಳೆಯುವ ದೀಪದ ಸಾಲಿನ ದೀಪಗಳ ರಂಗೋಲಿ.💐

🔯ವ್ರತ, ಪೂಜಾ  ಆಚರಣೆಯಲ್ಲಿ ದೈವ ಸಾಕ್ಷಾತ್ಕಾರದ ರಂಗೋಲಿ.💐

🔯ಪ್ರತಿಭೆಯ ಅನಾವರಣದಿ ಕಣ್ಮನ ಸೆಳೆಯುವ ರಂಗೋಲಿ.💐

🔯ನಾಗರಿಕತೆ ಬೆಳವಣಿಗೆಯ ವಿಶೇಷ ಸೂಚನೆ ನೀಡುವ ರಂಗೋಲಿ💐

🔯ವಿವಿಧ ವಿನ್ಯಾಸದ  ಆಕೃತಿಯ ರಮಣೀಯ ರಂಗೋಲಿ💐

🔯ಆಹಾರ ಸಂಪತ್ತಿನ  ಮಹತ್ವ  ಧಾನ್ಯಗಳ  ರಂಗೋಲಿ.💐

🔯ಮುತ್ತು ರತ್ನಗಳಲಿ ಹೊಳೆಯುವ  ಆಕರ್ಷಕ ರಂಗೋಲಿ💐

🔯ಪರಿಸರ ಸಂರಕ್ಷಣೆಯ  ಸಾಕಾರದಲಿ ಹೂ ಎಲೆಗಳ ರಂಗೋಲಿ💐

🔯ಕೈ ಚಳಕದಲಿ ಮೂಡಿ ಬರುವ  ಅದ್ಭುತ ಕಲ್ಪನೆಯ ರಂಗೋಲಿ💐

🔯ಸನಾತನ ಧರ್ಮದ  ಯಜ್ಞ ಯಾಗಾದಿಗಳಲಿ ಆಯಾ ದೈವ ಮಾದರಿಯ ರಂಗೋಲಿ💐

🔯ದೇವಾಲಯಗಳ ಆವರಣದಲಿ
ಬಣ್ಣ ಬಣ್ಣದ ಸುಂದರ  ರಂಗೋಲಿ💐

🔯  ಪ್ರಶಾಂತ ಪ್ರಭಾವ ಬೀರುವ  ತರಂಗ ಹರಿಸುವ ರಂಗೋಲಿ 💐

🔯ಗೃಹಾಲಂಕರಣದಿ  ಕಲಾಭಿರುಚಿಯ ಶೋಭೆಯ  ರಂಗೋಲಿ💐

🔯ವಿವಿಧ ಶಕ್ತಿಗಳ ಆರಾಧನೆಯ ಸಂದರ್ಭದ ಮಂಡಲ ರಂಗೋಲಿ💐

🔯ಮನೋವೈಜ್ಞಾನಿಕ ಹಿನ್ನಲೆಯ
 ಮೇಧಸ್ಸನ್ನು ಪ್ರಚೋದಿಸುವ ರಂಗೋಲಿ.💐

🔯ಸಕಾರಾತ್ಮಕ  ಮನೋಭಾವದ ಸ್ಪಂದನೆಯ  ಸಂತೋಷದ ರಂಗೋಲಿ

🔯ಮನಸ್ಸಿನ ಸಂತೋಷದ ಸ್ವರೂಪವಾದ 
 ಶುಭ ಸಂಕೇತದ ರಂಗೋಲಿ💐

🔯 ಲಕ್ಷ್ಮೀ ಸ್ವರೂಪ  ಗೃಹಿಣಿಯ ಸೌಭಾಗ್ಯದ ಸುಂದರ ರಂಗೋಲಿ. 

ಧನ್ಯವಾದಗಳು 🙏

✍️ಎಂ ನಾಗರೇಖಾ 🌟🌟🌟
🔯⚛️🕉️🔯⚛️🕉️🔯⚛️🕉️🔯⚛️🕉️🔯⚛️

Post a Comment

Previous Post Next Post