[29/04, 7:07 AM] Pandit Venkatesh. Astrologer. Kannada: ಶನಿ ಗ್ರಹ :-
29-4-2022 ಶುಕ್ರವಾರ
ಶನಿ ದೇವರ ಬದಲಾವಣೆ ಸಮಯ ಬೆಳಗ್ಗೆ 9-57 ಕ್ಕೆ
ಮಕರ ರಾಶಿಯಿಂದ ಕುಂಭರಾಶಿಗೆ ಬದಲಾಗುವರು
· ಮಕರ ಮತ್ತು ಕುಂಭ ರಾಶಿಯ ಅಧಿಪತಿ ಶನಿ ದೇವ.
· ಪ್ರಥ್ವಿ ತತ್ವ ಹಾಗೂ ವಾಯು ತತ್ವದ ಅಧಿಪತಿ.
· ಇಲ್ಲಿ ಕುಂಭದ ಶನಿಗೆ ಬಹಳ ಮಹತ್ವ ಉಂಟು. ಅಂದರೆ ವಾಯು ತತ್ವದ ಶನಿ ದೇವನಿಗೆ.
· ಹಾಗೆಯೇ ಮಿಥುನದ ವಾಯು ತತ್ವದ ಬುಧನಿಗೆ ಮಹತ್ವ ಕೊಟ್ಟಿರುತ್ತಾರೆ.
· ಇವರುಗಳು ಬಡಕಲು ಶರೀರದವರು.
· ಬಣ್ಣ ಕಪ್ಪು.
· ರೋಗಗ್ರಸ್ಥರಾಗಿ ಕಾಣಿಸುತ್ತಾರೆ.
· ಒಳ್ಳೇ ಶ್ರಮ ಜೀವಿಗಳು ಇವರುಗಳು.
· ತತ್ವ ಜ್ನಾನಿಗಳು. ಅದೂ ಕುಂಭ ರಾಶಿಯವರು ತತ್ವಜಾನಿಗಳು (ಫಿಲೋಸಫರ್ಸ್).
· ಇವರುಗಳಿಗೆ ಸಿದ್ಧಾಂತದ ಮೇಲೆ ನಂಬಿಕೆಯನ್ನ ಇಡುವವರು.
· ಯಾರೂ ಮಾಡದ ಕೆಲಸವನ್ನ ಇವರು ಮಾಡುತ್ತಾರೆ.
· ಇವರು ತಾಂತ್ರಿಕ ವರ್ಗದಲ್ಲಿ ಕೆಲಸವನ್ನ ಮಾಡುವವರು.
· ಯಾವಾಗಲೋ ಮನೆಗೆ ಬರುತ್ತಾರೆಂದರೆ, ಅವರುಗಳು ಶನಿ ತತ್ವದವರು.
· ಇವರುಗಳು ಒಳ್ಳೇ ಸಮಾಜ ಸೇವಕರು. ಅದೇ ಗುರು ತತ್ವದವರು, ಸಮಾಜ ಕಲ್ಯಾಣರು.
· ಇವರುಗಳು ಒಳ್ಳೇ ನ್ಯಾಯವಾದಿಗಳು.
· ಗೆಲ್ಲುವ ತನಕ ಹೋರಾಟವನ್ನ ಮಾಡುವಂತಹ ನಿಧಾನಿಗಳು. ಕಾರಣ ಶನಿಯು ಮಂದ ಗ್ರಹ. ತಾಳ್ಮೆ ಬಹಳ.
· ಅದೇ ಬುಧ ಗ್ರಹ ಫಟ್ಟನೆ ಹೋಗಿ ಕೆಲಸವನ್ನ ಮುಗಿಸಿಯೇ ಬಿಡುತ್ತಾರೆ.
· ಶನಿಯು ಮಂದ ಗ್ರಹ. ತಾಳ್ಮೆಯ ಗ್ರಹ.
· ಕೆಟ್ಟ ಶನಿ ಇದ್ದಲ್ಲಿ ಅವರು ಬಹಳ ಮೋಸಗಾರರು. ಕಳ್ಳ ತನ ಮಾಡುವವರು.
· ಕೆಟ್ಟ ಚಟಗಳಿಗೆ ಬಲಿಯಾಗುವವರು.
· ಇವರುಗಳು ಕೆಟ್ಟದ್ದನ್ನ ಮಾಡಲೂ ಒಳ್ಳೇ ತಾಳ್ಮೆಯಿರುತ್ತದೆ.
· ಟೆಕ್ನೋಲಜಿಯನ್ನ ಒಳ್ಳೇ ರೀತಿಯಲ್ಲಿ ನಿಭಾಯಿಸುವವರು, ಹಾಗೂ ಸಂಶೋಧನೆಯನ್ನ ಮಾಡುವವರು.
· ಬಡಕಲು ಶರೀರವಾದರೂ ಒಳ್ಳೇ ಬಲವಿರುವಂತಹ ಮೂಳೆಗಳನ್ನ ಹೊಂದಿದವರು. ಆದರೆ ಅದೇ ಮೂಳೆಯಲ್ಲಿ ಶಕ್ತಿ ಹೀನತೆಯನ್ನೂ ಕಾಣುವವರು.
· ಇವರಿಗೆ ಮೊಣಕಾಲಿನ ನೋವು ಕಾಣಿಸಿಕೊಳ್ಳುತ್ತವೆ.
· ಹೊಟ್ಟೇ ಸಂಬಂಧಿತ ತೊಂದರೆಗಳು ಸರ್ವೇ ಸಾಮಾನ್ಯ.
· ಜನ ಸಂಘಟನೆಯನ್ನ ಮಾಡುವವರು.
· ಅದೇ ಮುಷ್ಕರವನ್ನೂ ಮಾಡುವವರು ಇವರೇ.
· ಕೊಳಕು ವಸ್ತ್ರ್ವನ್ನ ಧರಿಸುವವರು.
· ಕೊಳಕು ಮನೆಯಲ್ಲಿ ನೆಲೆಸುವವರು.
· ಯಾರಿಗೆ ಶನಿಯು ಪ್ರಬಲವಾಗಿದ್ದಾನೋ, ಅವರುಗಳು ಕಲ್ಲಿನ ಇಟ್ಟಿಗೆಯ ಮನೆಯನ್ನ ಕಟ್ಟುವವರು.
· ಅದೇ ಕೆಟ್ಟ ಶನಿ ಇದ್ದಲ್ಲಿ, ಹಂಚಿನ ಮನೆಯಲ್ಲಿ ತಂಗುವವರು.
· ಬಾಗಿಲು ತೂತಾಗಿ ಕಾಣಿಸೋದು.
· ಹೊದೆಯುವ ಬಟ್ಟೆಗಳು ಕೊಳಕಾಗಿ ಕಾಣಿಸೋದು.
· ಕಬ್ಬಿಣ ಇವರ ಲೋಹ.
· ಸಂಖೆ :- ೮
· ಕಾರಕತ್ವ:- ಆಯುಷ್ಯ
· ಉಚ್ಚರಾಶಿ :- ತುಲಾ
· ನೀಚ ರಾಶಿ :- ಮೇಷ
· ಉಚ್ಚಾಂಷ :- ೨೦*
· ದಿಕ್ಕು :- ಪಸ್ಚಿಮ
· ಅಂಗಾಂಗ :- ಸ್ನಾಯು
· ಇಂದ್ರಿಯ :- ಚರ್ಮ
· ಧಾನ್ಯ :- ಎಳ್ಳು.
· ಕಾರಕ :- ವಾತ
· ದೃಸ್ಟಿ :- ೩,೭ ಮತ್ತು ೧೦.
· ಮಿತ್ರ ಗ್ರಶಗಳು :- ಶುಕ್ರ ಮತ್ತು ಬುಧ.
· ಶತ್ರು ಗ್ರಹ :- ಸೂರ್ಯ ಮತ್ತು ಕುಜ.
· ಸಮ ಗ್ರಹ :- ಚಂದ್ರ ಮತ್ತು ಗುರು
·"ಶನಿವತ್ ರಾಹು ಕುಜವತ್ ಕೇತು"
ರಾಹು ಗ್ರಹವು ಶನಿ ತತ್ವದ ಮೇಲೆಯೇ ನಿರ್ದರಿಸಿದೆ. ಅಂದರೆ ರಾಹುವಿನ ತತ್ವಗಳೆಲ್ಲಾ ಶನಿಯ ತತ್ವದ್ದು.
ಅದೇ ಕೇತು ಗ್ರಹವು, ಕುಜ ಗ್ರಹದ ಮೇಲೆಯೇ ನಿರ್ದರಿಸಿದೆ. ಕೇತುವಿನ ತತ್ವಗಳೆಲ್ಲಾ ಕುಜನ ತತ್ವದ್ದು.
ಸೂರ್ಯ ಚಂದ್ರಾದಿ ನವಗ್ರಹಗಳ ಕಾರಕತ್ವದ ವಿವರಗಳು 🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು🕉️📱9482655011🙏🙏🙏🙏
[29/04, 7:15 AM] Pandit Venkatesh. Astrologer. Kannada: 👌 *ಅಂದಿನ ಮನೆಗಳು🏡 ಇಂದಿನಂತಿರಲಿಲ್ಲ🏨*
*ಈಗಿನ ಮನೆಗಳೇಕೋ ಮೊದಲಿದ್ದಂತಿಲ್ಲ...!*
*ಮನೆಸುತ್ತ ಕಾಂಪೌಂಡು, ಗೇಟು ಭದ್ರ, ಒಳಗಿರುವ ಮನಸುಗಳೇ ಏಕೋ ಛಿದ್ರ ಛಿದ್ರ...!*
🙉 *ಬಂಧುಗಳೇ ಬಾರದ, ಸ್ನೇಹಿತರೂ ಸೇರದ 👏ಮನೆಗಳ ಮುಂದೆ ಸದಾ ಕಾವಲುಗಾರ...!*
*ಇಂದು ಮನೆಯಲ್ಲಿ 🏡ಅನ್ನವೇ ಬೇಯುತ್ತಿಲ್ಲ, ಮನಸುಗಳು ಮಾತ್ರ ಕುದಿಯುತ್ತಿವೆಯಲ್ಲ🥵😭...!*
*ಅಡುಗೆ ಮನೆ, ಸದಾ ಖಾಲಿ ಖಾಲಿ ಇರುತ್ತೆ. ಫೋನಿಂದ ಕೂತಲ್ಲಿಗೆ ಊಟ ತಿಂಡಿ ಬರುತ್ತೆ...!*
*ಮನೆಗಳಾಗುತ್ತಿವೆ ಮಹಡಿಗಳಿಂದ ಎತ್ತರ... ಎತ್ತರ... ಮನಸ್ಸುಗಳೇ ಆಗುತ್ತಿಲ್ಲ ಹತ್ತಿರ...ಹತ್ತಿರ...! ಸಂತೋಷ ಏನೆಂಬುದಕ್ಕೆ ಸಿಗುತ್ತಿಲ್ಲ ಉತ್ತರ...!*
*ಅಂದು...ಬಿಸಿಲು, ಮಳೆ, ಚಳಿಗೆ ಮೈ ಒಗ್ಗಿತ್ತು, ಮನೆ ತಣ್ಣಗಿತ್ತು. ಒಲೆ ಹೊಗೆಯಾಡುತ್ತಿತ್ತು. ಬಿಸಿನೀರ ಹಂಡೆ ಹಬೆಯಾಡುತ್ತಿತ್ತು...!*
*ಕಣಜದ ತುಂಬಾ... ದವಸ ಧಾನ್ಯ ತುಂಬಿತ್ತು. ಬಂಧುಬಳಗದ ನಡುವೆ ಅನುಬಂಧವಿತ್ತು*
*ಎಲ್ಲರೊಟ್ಟಿಗೆ ಮನೆಯೂ ನಗೆಯಾಡುತಿತ್ತು...!*
*ಮನೆ ಚಿಕ್ಕದಾದ್ರೂ, ಮನಸು ಚೊಕ್ಕವಾಗಿತ್ತು...!*
*ಅಂದು ನನ್ನಜ್ಜ ಕಟ್ಟಿದ ಮನೆಯಲ್ಲಿ...ನಲಿವಿತ್ತು, ಒಲವಿತ್ತು, ಸಂತಸದ ಸೆಲೆಯಿತ್ತು...!*
*ಮುಖ್ಯ ಬಾಗಿಲು* *ಚಿಕ್ಕದಿತ್ತು,* *ತಲೆಬಾಗಬೇಕಿತ್ತು*.
*ಮಣ್ಣಿನ ಗೋಡೆ, ಸಾರಿಸಿದ ನೆಲವಿತ್ತು*
*ಮಾಡು ಚಿಕ್ಕದಿತ್ತು, ಬದುಕು ದೊಡ್ಡದಿತ್ತು. ನೋವುಗಳಿದ್ದರೂ ಬದುಕಿಗೆ ಬೆಲೆಯಿತ್ತು.ಚಾಪೆಯಲಿ ಕಣ್ಣಿಗೆ ಚೆಂದದ ನಿದ್ರೆಯಿತ್ತು...!*
*ಅಂದು ಆಸ್ಪತ್ರೆಯ ಹಂಗೇ ಇರಲಿಲ್ಲ. ಎಲ್ಲ ಸಮಸ್ಯೆಗಳಿಗೂ ಮನೆಯಲ್ಲೇ ಮದ್ದಿತ್ತು.ಮಗುವೂ ಕೂಡ ಮನೆಯಲ್ಲೇ ಹುಟ್ಟುತ್ತಿತ್ತು.*
🙏 *ಮದುವೆ ಕೂಡ ಮನೆಯಲ್ಲೇ ನೆಡೆಯುತ್ತಿತ್ತು...ಚಿತ್ರ ವಿಚಿತ್ರದ ಛತ್ರವೇ ಬೇಕಿರಲಿಲ್ಲ...!*
*ಕೆಲಸಕ್ಕೆ ಶ್ರದ್ಧೆ, ದೇವರ ಮೇಲೆ ನಂಬಿಕೆಯಿತ್ತು...!* 🙏
*ಸಾವಿಗೂ ಸಹ ಮನೆಯೇ ಸಾಕ್ಷಿ ಯಾಗುತ್ತಿತ್ತು...!*👍
*ಹಲವು ಮಕ್ಕಳು ಹುಟ್ಟಿದ ಸಂತಸವಿತ್ತು.ಅವರ ಬಾಲ್ಯದ, ಬದುಕಿನ ಸಂಭ್ರಮವಿತ್ತು....!*
😀 *ನೆಂಟರು ಬಂದರೆ, ಹಬ್ಬದ ಸಡಗರವಿತ್ತು.😃ಕೆಲವು ಸಾವುಗಳ ಸೂತಕವೂ ಇತ್ತು.😭ಸತ್ತ ಹಿರಿಯರ ನೆನಪು ಅಚ್ಚಳಿಯದೇ ಉಳಿದಿತ್ತು...!* 🙏🙏
*ಕಷ್ಟಗಳ ಗೆದ್ದ ಗೆಲುವಿನ ಧ್ಯೋತಕ ವೂ ಇತ್ತು...! ಬದುಕಿನ ಸಾಧಕ ಭಾದಕ ಗಳೆಲ್ಲವೂ ಇತ್ತು...!*
*ಇಂದು...? ಮನೆ ರಾಜನಿಲ್ಲದ ಅರಮನೆಯಂತೆ, ಸಕಲ ಸವಲತ್ತು ಗಳಿರುವ ದರ್ಬಾರಿನಂತೆ,ನೆರೆ ಮನೆಯ ಹಂಗಿಲ್ಲದ ಸೆರೆಮನೆ ಯಂತೆ. ಆದ್ರೂ ಮನೆಮಂದಿಗೆಲ್ಲ ಬಹಳ ದುಡ್ಡಿನದೇ ಚಿಂತೆ ಚಿಂತೆ..!*
*ಬೇಕಾಗಿದ್ದಕ್ಕಿಂತ, ಬೇಕೆನಿಸಿದ್ದೇ ತುಂಬಿದೆ, ದೊಡ್ಡದಿದೆ, ಶ್ರೀಮಂತವಾಗಿದೆ, ಸಜ್ಜಾಗಿದೆ. ಮನಸುಗಳು ಮಾತ್ರ ನಜ್ಜು ಗುಜ್ಜಾಗಿವೆ...!*
*ಶುಭ ಕಾರ್ಯಗಳು, 😃ಸಂತೋಷ ಕೂಟಗಳು,😃 ಮನೆಬಿಟ್ಟು, ಹೋಟೆಲ್ಲುಗಳ ಸೇರಿಕೊಂಡಿವೆ. ಬಂಧುತ್ವ🤝 ಮಿತೃತ್ವಗಳು ಬಂಧನದಲ್ಲಿವೆ...!*
*ನೆಂಟರಿಷ್ಟರು ಮನೆಗೆ ಬಂದರೆ, ಬರೀ ನಕ್ಕೂ ನಗದೇ... ಕೋಣೆ ಸೇರಿಕೊಳ್ಳುತ್ತಿದ್ದಾರೆ ಮನೆ ಮಕ್ಕಳು.*
*ಸ್ನೇಹ,ಸಂಬಂಧಗಳಲ್ಲೂ ತೋರಿಕೆ, ತಾತ್ಸಾರ, ನಂಬಿಕೆ ಒಗ್ಗಟ್ಟುಗಳಂತೂ ಬಹಳವೇ ದೂರ...!*
🙏🔆 *ಮತ್ತೆ ಬರಲಿ ಆ ತುಂಬು ಕುಟುಂಬದ ಕಾಲ. ಆಗಲಿ ಮನೆ ಮನಗಳೂ ನಂದಗೋಕುಲ...!*
🙏 *ಅರ್ಥವಾಗಲಿ ಸರ್ವರಿಗೂ ಸಂಬಂಧದ ಬೆಲೆ...! ಕಲಿಯಲಿ ಎಲ್ಲರು ಸಂತಸದಿ, ಒಟ್ಟಾಗಿ ನಗುವ ಕಲೆ...!*
*ಆಗಲಿ ದ್ವೇಷ ಸ್ವಾರ್ಥ ಮತ್ಸರಗಳಿಗೆ ಸೋಲು. ಶ್ರೀಮಂತಿಕೆ ಗಿಂತ ಹೃದಯ ವಂತಿಕೆ ಮೇಲು...!* 🙏🙏🙏🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು🕉️📱9482655011🙏🙏🙏
[29/04, 7:18 AM] Pandit Venkatesh. Astrologer. Kannada: ಶನಿ ಸಂಚಾರ 2022
ಮಕರ ದಿಂದ ಕುಂಭಕ್ಕೆ
ಬೇರೆ ಗ್ರಹ ಶುಭ ಅಶುಭ ,ದಶಾಭುಕ್ತಿ ವಿಚಾರ ಸಹ ನೋಡಬೇಕಿದೆ.ಕೇವಲ ಶನೈಶ್ಚರನ ಸ್ಥಾನ ಬದಲಾವಣೆ ವಿಚಾರ ಮಾತ್ರ ಇಲ್ಲಿ ಹೇಳಿದ್ದೇನೆ.
1) ಮೇಷಕ್ಕೆ ..ನಿಧಾನ ಕೆಲಸ ಆದ್ರೂ ಶನಿ 11 ರಲ್ಲಿಇದ್ದು ಅನುಕೂಲ ಮಾಡಿಕೊಡುತ್ತಾನೆ.
2.ವೃಷಭಕ್ಕೆ ..10ರಲ್ಲಿ.ಕೆಲಸ ವಿಚಾರದಲ್ಲಿ ಹೆಚ್ಚಿಗೆ ತೊಂದರೆ.ಪ್ರೆಶರ್ .ನಿಧಾನ ಆಗುವುದು ಮಾನಸಿಕ ಚಿಂತೆ ಗೆ ಕಾರಣ.ಅಹಂ ಬಿಡುವುದು.
3.ಮಿಥುನ ಕ್ಕೆ ..ಅಷ್ಟಮ ಶನಿಯಿಂದ ಮುಕ್ತಿ.ಆದರೂ ಕೆಲ ವಿಚಾರಕ್ಕೆ ತೊಂದರೆ ಕೊಟ್ಟು ಪರೀಕ್ಷೆ ಮಾಡುತ್ತಾನೆ.ಧರ್ಮದಲ್ಲಿ ಇದ್ದರೆ ತೊಂದರೆ ಇಲ್ಲ.ಲಕ್ ಸಡನ್ ಕೊಡುತ್ತಾನೆ
4.ಕರ್ಕಕ್ಕೆ ಅಷ್ಟಮ ಶನಿ ಮುಖ್ಯ ಆರೋಗ್ಯ ದಶಭುಕ್ತಿ ಎಲ್ಲ ಚರ್ಚಿಸಿಕೊಳ್ಳಿ.ವಿನ ಕಾರಣ ನಷ್ಟ ಆಗುವ ಸಾಧ್ಯತೆ ಹೆಚ್ಚು.
5.ಸಿಂಹಕ್ಕೆ..ಸಪ್ತಮ ..ಪತಿ ಪತ್ನಿ ವಿಚಾರ ದಲ್ಲಿ ಮನಸ್ತಾಪ ಹೆಚ್ಚಲಿದೆ.ಆರೋಗ್ಯ ನೋಡಿಕೊಳ್ಳಬೇಕು.
6.ಕನ್ಯಾಕ್ಕೆ ಷಷ್ಟ .. ಶತ್ರು ನಾಶ .ಧನ ವೃದ್ಧಿ.ರೋಗ ದಿಂದ ಮುಕ್ತಿ.ಆಸ್ತಿ ಖರೀದಿ.,ಹೊಸ ಸ್ಥಾನ ಮಾನ
7.ತುಲಾ. .ಪಂಚಮ ಶನಿ ..ಕಾರ್ಯಹಾನಿ ಬಂಧು ವಿರೋಧ.ಮಕ್ಕಳಿಂದ ದೂರ ಇಲ್ಲವೇ ಸಂತಾನಬಗ್ಗೆ ಚಿಂತೆ
8.ವೃಶ್ಚಿಕ..ಚತುರ್ಥ .ಸ್ಥಾನ ನಷ್ಟ.ಆಸ್ತಿ ಕಳೆದುಕೊಳ್ಳೋ ಪ್ರಮೇಯ.ಮಾತೃ ವಿಚಾರದಲ್ಲಿ ಚಿಂತೆ.ಸದಾ ಚಿಂತೆ.
9.ಧನು..ತೃತೀಯ.ಸಾಡೇ ಸಾತಿ ರಿಂದ ಮುಕ್ತಿ ಹೊಂದಿ ಅನುಕೂಲ ಪಡೆದಿದ್ದೀರಿ ಅಂತ ಭಾವನೆ.ಸ್ವಸ್ಥಳ ಸೇರುತ್ತೀರಿ.ಆಸ್ತಿ ಖರೀದಿ ಯಾ ಲಾಭ ಆ ವಿಚಾರ ಕ್ಕೆ.ಅನುಕೂಲ ಇರಲಿದೆ.
10.ಮಕರ .ದ್ವಿತೀಯ .ಕೊನೆ ಸಾಡೇಸಾತ್ ಭಾಗ.ಇಷ್ಟು ದಿನ ಒಳ್ಳೇದು ಇದ್ದಿದ್ರೆ ಈಗ ಕಷ್ಟ ..ಕಷ್ಟ ಇಷ್ಟು ದಿನ ಇದ್ದಿದ್ರೆ ಅನುಕೂಲ ಸ್ವಲ್ಪ ಮಟ್ಟಿಗೆ ಕೊಡುತ್ತಾನೆ.ಅನುಕೂಲ ಮಾಡುತ್ತಾನೆ.ಆದರೂ ಸಾಡೆಸಾತ್ ವಿಚಾರಕ್ಕೆ ಈಶ್ವರ ,ಹನುಮಂತ,ಶನೈಶ್ಚರ ,ಶ್ರೀಶಾಸ್ತವು ಸೇವೆ ಬೇಕಿದೇ
11.ಕುಂಭ ..ಲಗ್ನದಲ್ಲೆ .ಜನ್ಮ ಶನಿ ಮನ ಸಂತೋಷ ಕ್ಕೆ ಧಕ್ಕೆ.ಮಾನ ನಷ್ಟ .ಅನಾರೋಗ್ಯ ಕಾಡಬಹುದು.
ಸಾಡೇ ಸಾತ್ ಪರಿಹಾರ ಮಾಡಿ.
12.ಮೀನಕ್ಕೆ ಗುರು ಲಗ್ನ ದಲ್ಲಿ ಶನಿ ವ್ಯಯದಲ್ಲಿ .ಸಾಡೆಸತಿ ಅನುಕೂಲ ಇಲ್ಲದ ದಿನಗಳು.ಈಶ್ವರ ಸೇವೆ ಅಗತ್ಯ ಇದೇ.
ಒಟ್ಟಿನಲ್ಲಿ ಧರ್ಮಾಚರಣೆ ,ಧರ್ಮಪೀಠ ದರ್ಶನ,ಮಠ ಮಂದಿರ ದಲ್ಲಿ ಸೇವೆ ಯೇ ಶನೈಶ್ಚರ ರನ್ನು ಪ್ರೀತ ಗೊಳಿಸುವುದು.
Post a Comment