ಇಸ್ಲಾಮಾಬಾದ್: ಸತತ 48 ಗಂಟೆಗಳ ಹೈಡ್ರಾಮಾ ಕೊನೆಗೂ ಮುಕ್ತಾಯವಾಗಿದ್ದು, ಪಾಕ್ ಸಂಸತ್ತಿನಲ್ಲಿ ಪ್ರಧಾನಿ ಇಮ್ರಾನ್ ಖಾನ್ ವಿಶ್ವಾಸ ಕಳೆದುಕೊಂಡಿದ್ದು, ಮಧ್ಯ ರಾತ್ರಿ 1 ಗಂಟೆಗೆ ಅವರ ಪಿಟಿಐ ಸರ್ಕಾರ ಪತನವಾಗಿದೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧದ ಅವಿಶ್ವಾಸ ನಿರ್ಣಯ ಸಂಬಂಧ ನಡೆಯುತ್ತಿದ್ದ ಪಾಕಿಸ್ತಾನ ಸಂಸತ್ ಅಧಿವೇಶನದಲ್ಲಿ ಹೈಡ್ರಾಮ ಕೊನೆಗೂ ಮುಕ್ತಾಯವಾಗಿದ್ದು, ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯದ ಕುರಿತು ನಡೆದ ಮತದಾನದಲ್ಲಿ 175 ಮತಗಳು ಚಲಾವಣೆಯಾಗಿದ್ದು, ಈ ಪೈಕಿ ನಿರ್ಣಯದ ಪರ 174 ಮತ್ತು ನಿರ್ಣಯದ ವಿರುದ್ಧ 1 ಮತ ಚಲಾವಣೆ ಗೊಂಡಿದೆ.

ಇದನ್ನೂ ಓದಿ: ಇಮ್ರಾನ್ ಖಾನ್ ಭವಿಷ್ಯ: ಪಾಕ್ ಸಂಸತ್ ನಲ್ಲಿ ಹೈಡ್ರಾಮಾ; ಉಭಯ ಸದನಗಳ ಸ್ಪೀಕರ್ ಗಳ ದಿಢೀರ್ ರಾಜಿನಾಮೆ

ಆ ಮೂಲಕ ಪ್ರಧಾನಿ ಇಮ್ರಾನ್ ಖಾನ್ ಅವರು ಸದಸ್ಯರ ವಿಶ್ವಾಸ ಕಳೆದುಕೊಂಡಿದ್ದು, ಅವರ ನೇತೃತ್ವದ ಪಿಟಿಐ ಸರ್ಕಾರ ಪತನವಾದಂತಾಗಿದೆ.

ಇದನ್ನೂ ಓದಿ: ಭಾರತ ಅಷ್ಟು ಇಷ್ಟವಾದಲ್ಲಿ ಅಲ್ಲಿಗೇ ಹೋಗಿ: ಇಮ್ರಾನ್ ಖಾನ್ ಗೆ ವಿಪಕ್ಷ ನಾಯಕಿ ಮರ್ಯಮ್

ಸಂಸತ್ ನಲ್ಲಿ ಹೈಡ್ರಾಮಾ ಸ್ಪೀಕರ್ ಗಳ ರಾಜಿನಾಮೆ
ಇದಕ್ಕೂ ಮೊದಲು ಇಮ್ರಾನ್ ಖಾನ್ ಬೆಂಬಲಿಸಿ ಉಭಯ ಸದನಗಳ ಸ್ಪೀಕರ್ ಗಳು ರಾಜಿನಾಮೆ ಸಲ್ಲಿಕೆ ಮಾಡಿದ್ದಾರೆ. ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ಮತಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಸಂಸತ್ ನಲ್ಲಿ ಭಾರೀ ಹೈಡ್ರಾಮಾವೇ ನಡೆದಿದ್ದು, ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ರಾಜೀನಾಮೆ ನೀಡಿದ್ದಾರೆ ಎಂದು ಪಾಕಿಸ್ತಾನದ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ. ಮಧ್ಯರಾತ್ರಿ ನ್ಯಾಯಾಂಗ ನಿಂದನೆ ವಿಚಾರಣೆಯ ನಿರೀಕ್ಷೆಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಇಸ್ಲಾಮಾಬಾದ್ ಹೈಕೋರ್ಟ್ ಕೂಡ ತೆರೆಯಲಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ರಾಜೀನಾಮೆ ನೀಡುವುದಿಲ್ಲ ಎಂದು ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ್ದಾರೆ ಎನ್ನಲಾಗಿದೆ.

Post a Comment

Previous Post Next Post