BJP ರಾಜ್ಯ ಕಾರ್ಯ ಕಾರಿಣಿ ಗೆ ಹೋಗಿರುವ Cm ಚಟುವಟಿಕೆ ವಿವರ, 1

[16/04, 12:36 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕಟ್ಟಡಗಳನ್ನು ಲೋಕಾರ್ಪಣೆ ಮಾಡಿದರು. ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಅವರು ಪುಸ್ತಕ ಗಳ ಲೋಕಾರ್ಪಣೆ ಮಾಡಿದರು. 
ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಸಂಚಾರಿ ಪುಸ್ತಕ ಮಾರಾಟ ವಾಹನವನ್ನು ಲೋಕಾರ್ಪಣೆ ಮಾಡಿದರು. 

ಈ ಸಂದರ್ಭದಲ್ಲಿ ಸಾರಿಗೆ ಸಚಿವ ಬಿ ಶ್ರೀ ರಾಮುಲು, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾ ಸಾಹೇಬ ಜೊಲ್ಲೆ, ಶಾಸಕ ಸೋಮಶೇಖರ ರೆಡ್ಡಿ, ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ. ಸ ಚಿ ರಮೇಶ ಮತ್ತು ಇತರರು ಉಪಸ್ಥಿತರಿದ್ದರು.
[16/04, 1:24 PM] Gurulingswami. Holimatha. Vv. Cm: *ಬಳ್ಳಾರಿ,* ಏಪ್ರಿಲ್ 16: *ಮುಖ್ಯಮಂತ್ರಿ ಬಸವರಾಜ* *ಬೊಮ್ಮಾಯಿ ಅವರು ಇಂದು* *ಹಂಪಿ ಕನ್ನಡ ವಿಶ್ವವಿದ್ಯಾಲಯದ* ಆವರಣದಲ್ಲಿ ನೂತನವಾಗಿ *ನಿರ್ಮಾಣವಾಗಿರುವ ಕಟ್ಟಡಗಳನ್ನು* *ಲೋಕಾರ್ಪಣೆ* *ಮಾಡಿ* ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
[16/04, 2:55 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದ ಸಂದರ್ಭದಲ್ಲಿ ಡಿ ಆರ್ ನಾಗರಾಜ್ ಅವರ ಸಮಗ್ರ ಸಾಹಿತ್ಯ ಚಿಂತನೆ ಪುಸ್ತಕ ಖರೀದಿ ಮಾಡಿದರು.
[16/04, 3:19 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಿಜಯನಗರದಲ್ಲಿ ಆಯೋಜನೆಯಾಗಿರುವ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ  ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ರಾಜ್ಯ ಬಿಜೆಪಿಯ ಸಹ-ಪ್ರಭಾರಿ ಡಿಕೆ ಅರುಣ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ , ಸದಾನಂದ ಗೌಡ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಮುಜರಾಯಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಶಿಕಲಾ ಜೊಲ್ಲೆ ಸೇರಿದಂತೆ ಸಚಿವರು ಶಾಸಕರು ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
[16/04, 4:09 PM] Gurulingswami. Holimatha. Vv. Cm: *ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸಿದ ಹಿರಿಯರು*:

1) ಶ್ರೀ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಪ್ರಭಾರಿಗಳು.

2) ಶ್ರೀ ಡಿ.ಕೆ.ಅರುಣಾ, ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ರಾಜ್ಯ ಸಹ-ಪ್ರಭಾರಿಗಳು.

3) ಶ್ರೀ ನಳಿನ್ ಕುಮಾರ್ ಕಟೀಲ್, ರಾಜ್ಯದ್ಯಕ್ಷರು.

4) ಶ್ರೀ ಸಿ.ಟಿ.ರವಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು.

5) ಶ್ರೀ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳು.

6) ಶ್ರೀ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು.

7) ಶ್ರೀ ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿಗಳು.

8) ಶ್ರೀ ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿಗಳು.

9) ಶ್ರೀ ಶಶಿಕಲಾ ಜೊಲ್ಲೆ, ಜಿಲ್ಲಾ ಉಸ್ತುವಾರಿ ಸಚಿವರು.

10) ಶ್ರೀ ಆನಂದ್ ಸಿಂಗ್, ಸಚಿವರು ಹಾಗೂ ಹೊಸಪೇಟೆ ಶಾಸಕರು.

11) ಶ್ರೀ ಚೆನ್ನಬಸವನಗೌಡ ಪಾಟೀಲ್, ವಿಜಯನಗರ ಜಿಲ್ಲಾಧ್ಯಕ್ಷರು.
[16/04, 4:57 PM] Gurulingswami. Holimatha. Vv. Cm: *ವಿಜಯನಗರ* , (ಹಂಪಿ), *ಏಪ್ರಿಲ್ 16: ಮಾನ್ಯ ಮುಖ್ಯಮಂತ್ರಿ* ಬಸವರಾಜ ಬೊಮ್ಮಾಯಿ ಅವರು ಇಂದು *ವಿಜಯನಗರದಲ್ಲಿ* *ಆಯೋಜನೆಯಾಗಿರುವ ಬಿಜೆಪಿ* *ರಾಜ್ಯ ಕಾರ್ಯಕಾರಣಿ* *ಸಭೆಯನ್ನು* *ಉದ್ಘಾಟಿಸಿ ಮಾತನಾಡಿದರು.*
[16/04, 5:47 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಿಜಯನಗರದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಗೂ ಮುನ್ನ ಹಸುವಿಗೆ ಮುತ್ತಿಕ್ಕುವ  ಮೂಲಕ ತಮ್ಮ ಪ್ರೀತಿಯನ್ನು ಅಭಿವ್ಯಕ್ತಿ ಪಡಿಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಉಪಸ್ಥಿತರಿದ್ದರು.
[16/04, 5:51 PM] Gurulingswami. Holimatha. Vv. Cm: *ಕಾಂಗ್ರೆಸ್ಸಿನವರ  ಬೀರುಗಳಲ್ಲಿ ಭ್ರಷ್ಟಾಚಾರದ ಅಸ್ಥಿಪಂಜರ ಎಷ್ಟಿದೆ ಎಂದು  ಲೆಕ್ಕಹಾಕಲಿ: ಸಿಎಂ ಬಸವರಾಜ ಬೊಮ್ಮಾಯಿ*

ಬೆಂಗಳೂರು, ಏಪ್ರಿಲ್ 16: ಭ್ರಷ್ಟಾಚಾರದ  ವಿರುದ್ಧ ಯಾತ್ರೆ ಹೊರಟಿರುವ ಕಾಂಗ್ರೆಸ್ಸಿನವರ  ಬೀರುಗಳಲ್ಲಿ ಭ್ರಷ್ಟಾಚಾರದ ಅಸ್ಥಿಪಂಜರಗಳು ಎಷ್ಟಿವೆ ಎಂದು ಮೊದಲು  ಲೆಕ್ಕಹಾಕಿಕೊಳ್ಳಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. 

ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಅಭಿಯಾನ ಹಮ್ಮಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ  ಬಹಳ ಶುದ್ಧಹಸ್ತರು, ಪವಿತ್ರ ಹಸ್ತದವರು  ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಯಾತ್ರೆ ಹೊರಟಿದ್ದಾರೆ. ಜನಕ್ಕೆ ಗೊತ್ತಿದೆ. ಇದ್ಯಾವುದರಿಂದಲೂ ಪ್ರಯೋಜನವಾಗುವುದಿಲ್ಲ ಎಂದು ಗೊತ್ತಿದೆ. ಇಂಥ ಹಲವಾರು ಸಲಗೆಹಾರರನ್ನು ಪಡೆದು  ನಿರೂಪಣೆ ಸೃಷ್ಟಿಸಲು ಹೊರಟಿದ್ದಾರೆ. ಕರ್ನಾಟಕದ ಜನತೆ ಕಾಂಗ್ರೆಸ್ ನ್ನು ಬಹಳ ವರ್ಷಗಳಿಂದ ನೋಡಿದ್ದಾರೆ. ಯಾವ ಯಾವ ಹಗರಣಗಳಾಗಿವೆ ಎಂದು ಅವರಿಗೆ  ತಿಳಿದಿದೆ. ನಾವೂ ಜನರ ಮುಂದೆ ಅವರು ಮಾಡಿರುವ ಹಗರಣಗಳನ್ನು ಇಡಬೇಕಾದ ಕಾಲ ಬರುತ್ತಿದೆ ಎಂದರು. 

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್ ಈಶ್ವರಪ್ಪ ಅವರ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ನಿಯಮವನ್ನು  ಏಕೆ ಹಾಕಲಾಗಿಲ್ಲ ಎಂಬ ಪ್ರಶ್ನೆಗೆ  ಸಂತೋಷ್ ಎನ್ನುವ ವ್ಯಕ್ತಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪ ಇದ್ದು, ತನಿಖೆಯಾಗುತ್ತಿದೆ. ಶವಪರೀಕ್ಷೆಯ ನಂತರ ಬರುವ ಎಫ್.ಎಸ್.ಎಲ್ ಆಧಾರದ ಮೇಲೆ ವೈಜ್ಞಾನಿಕವಾಗಿ ಏನು ನಡೆಯಿತು ಎಂದು ಗೊತ್ತಾ ಗಲಿದೆ ಎಂದರು. 

*ಹಸ್ತಕ್ಷೇಪ ಮಾಡಿಲ್ಲ*
ಸಿದ್ದರಾಮಯ್ಯ ಅವರು ಜಾರ್ಜ್ ವಿಚಾರದಲ್ಲಿ  ವಿಡಿಯೋ ಹಾಗೂ ಮರಣಪತ್ರವೂ ಇತ್ತು. ಆದರೆ ಎಫ್. ಐ.ಆರ್ ನಲ್ಲಿ ಹೆಸರು ಬಂದಿತ್ತಾ?  ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡಲಿಲ್ಲವೇ? ಕೋರ್ಟಿನಿಂದ ಆದೇಶ ಬಂದ ನಂತರ ಎಫ್.ಐ.ಆರ್.ಆಯಿತು. ಅವರ ಮನೆಯವರು ಕೋರ್ಟಿಗೆ ಹೋಗ ಬೇಕಾಯಿತು ಎಫ್.ಐ.ಆರ್. ಆಗಲು. ಆದರೆ ನಾವು  ದೂರಿನ ಮೇಲೆ ಎಫ್.ಐ.ಆರ್. ದಾಖಲಿಸಿ ತನಿಖೆ ಮಾಡಿಸುತ್ತಿದ್ದೇವೆ ಎಂದರು. ಈ ಪ್ರಕರಣದ ತನಿಖೆಯ ಆಧಾರದ ಮೇಲೆ ಮುಂದಿನ ಸೆಕ್ಷನ್ ಗಳನ್ನು ಹಾಕಲಾಗುವುದು. ತನಿಖೆಯಾಗಲು ಬಿಡಿ. ಯಾವಾಗ ಯಾವ ಸೆಕ್ಷನ್ ಹಾಕಬೇಕು ಎನ್ನುವುದು ಕಾನೂನು ಬದ್ಧವಾಗಿ ಆಗುತ್ತದೆ. ನಾವು ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದರು. 

*ಕಾನೂನಿನ ಪ್ರಕಾರ ತನಿಖೆ*
 ಕಾನೂನಿದೆ, ತನಿಖೆಯಾಗುತ್ತದೆ. ಚಾರ್ಚ್ ಶೀಟ್ ಆದ ಮೇಲೆ ಕೋರ್ಟಿನಲ್ಲಿ ಸರಿ ಇದೆಯೇ ಎಂದು ಮತ್ತೊಮ್ಮೆ ವಿಶ್ಲೇಷಣೆ ಆಗುತ್ತದೆ. ನಮ್ಮಲ್ಲಿರುವ ವ್ಯವಸ್ಥೆ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ.ಪ್ರಾಥಮಿಕ ತನಿಖೆಯಾದ ನಂತರ ಉನ್ನತ ಮಟ್ಟದ ತನಿಖೆ ವಹಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
[16/04, 5:58 PM] Gurulingswami. Holimatha. Vv. Cm: *ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ 20 ಕೋಟಿ ರೂ. ಬಿಡುಗಡೆ* : *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಬಳ್ಳಾರಿ, ಏಪ್ರಿಲ್ 16 :

 ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ 20 ಕೋಟಿ ರೂ.ಗಳನ್ನು  ಕೆ.ಕೆ.ಆರ್.ಡಿ.ಬಿ ವಿವೇಚನಾ ನಿಧಿಯಿಂದ  ಕೂಡಲೇ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ 
 ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕಟ್ಟಡಗಳನ್ನು ಲೋಕಾರ್ಪಣೆ ಮಾಡಿ  ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಮುಖ್ಯಮಂತ್ರಿಗಳ  ವಿವೇಚನಾ ನಿಧಿಯಿಂದ 80 ಕೋಟಿ ರೂ.ಗಳ ಬೇಡಿಕೆಯಲ್ಲಿ   ಉಳಿದ ಮೊತ್ತವನ್ನು  ಹಂತ ಹಂತವಾಗಿ ನೀಡಲಾಗುವುದು.    2-3 ವಿಭಾಗಗಳನ್ನು ಮಾಡಿ ಅವುಗಳನ್ನು ಪೂರೈಸುವುದಾಗಿ ಭರವಸೆಯಿತ್ತರು. 

*ಕನ್ನಡ ಬಿಚ್ಚಿಡುವ ವಸ್ತು*
ವಿವಿಗಳು ಕ್ಯಾಂಪಸ್ಸಿಗೆ ಸೀಮಿತವಾಗಿರಬಾರದು. ಕಾಲ ಬದಲಾವಣೆಯಾಗಿದೆ, ಜಾಗತೀಕರಣ, ಉದಾರೀಕರಣವಾಗಿದೆ.  ಕನ್ನಡ ಮುಚ್ಚಿಡುವ ವಸ್ತು ಅಲ್ಲ. ಬಿಚ್ಚಿಡುವ ವಸ್ತು. ಬಹಳಷ್ಟು ಜನ ಸಾಹಿತಿಗಳು ಅದನ್ನು ಮುಚ್ಚಿಡುವ ಪ್ರಯತ್ನದಲ್ಲಿಯೇ ಬಂಡಾಯ ಸಾಹಿತ್ಯ ಹುಟ್ಟಿರುವುದು. . ತುಳಿತಕ್ಕೆ ಒಳಗಾದವರ ಧ್ವನಿ ಬಂಡಾಯ ಸಾಹಿತ್ಯ ಎಂದರು. 

*ಸಂಶೋಧನಾ ಕ್ಷೇತ್ರದಲ್ಲಿಯೂ ಕನ್ನಡ ಬಳಕೆಯಾಗಬೇಕು*
ಕನ್ನಡ ನಾಡು, ನುಡಿ, ನಮ್ಮ ಸಂಸ್ಕøತಿಗೆ ಮಹತ್ವದ ಕೊಡುಗೆ ನೀಡುತ್ತದೆ. ಭಾಷೆಯಿಂದ ಭಾವನೆ ಬಂತು. ಹೀಗಾಗಿ ಭಾಷೆಯಿಲ್ಲದೇ ನಮ್ಮ ಬದುಕೇ ಇಲ್ಲ. ಕನ್ನಡ ನಾಡನ್ನು ಸುಸಂಸ್ಕೃತ  ರಾಜ್ಯವನ್ನಾಗಿ ಮಾಡುವ ಹಂಬಲವೂ ಕನ್ನಡ ಭಾಷೆಯಿಂದಲೇ ಬಂದಿದೆ. ನಮ್ಮ ಬದುಕನ್ನು ಹಾಗೂ ವ್ಯಕ್ತಿತ್ವವನ್ನು ರೂಪಿಸುವ ಕನ್ನಡ ಭಾಷೆಯನ್ನು ನಿತ್ಯದ ವ್ಯವಹಾರದ ಬಳಕೆಗೆ ಮಾತ್ರ ಸೀಮಿತಗೊಳಿಸಿದ್ದು, ಭಾಷೆಯ ಮೌಲ್ಯವನ್ನು ಕಡಿಮೆ ಮಾಡಲಾಗಿದೆ. ಈ ಮೌಲ್ಯವನ್ನು ಹೆಚ್ಚಿಸಬೇಕಾದರೆ ಭಾಷೆಯ ಬೆಳವಣಿಗೆ, ಸಂಶೋಧನೆ ಹಾಗೂ ತಂತ್ರಜ್ಞಾನ ಅಳವಡಿಕೆಗೆ ಒತ್ತು ನೀಡಬೇಕು. ಯಾವುದೇ ರಂಗದಲ್ಲಿ ಕನ್ನಡ ಹಿಂದುಳಿಯಬಾರದು. ಸಂಶೋಧನಾ ಕ್ಷೇತ್ರದಲ್ಲಿಯೂ ಕನ್ನಡ ಬಳಕೆಯಾಗಬೇಕು ಎಂದರು.

*ಎಂ.ಪಿ. ಪ್ರಕಾಶ್ ಅವರ ಹೆಸರಿನಲ್ಲಿ ಸಂಶೋಧನಾ ಕೇಂದ್ರ*
ಹಂಪಿ ವಿಶ್ವವಿದ್ಯಾಲಯಲ್ಲಿ ಭಾಷೆ ಮತ್ತು ಸಂಸ್ಕøತಿ ಎರಡೂ ಬೆಸೆದುಕೊಂಡು ಸಂಶೋಧನೆ ನಡೆಯಬೇಕು. ವಿಭಿನ್ನ ವಿಚಾರಣೆಗಳ ಬಗ್ಗೆ ಸಂಶೋಧನೆಗಳು ನಡೆಯಬೇಕು. ಸ್ಥಾಪಿತವಾಗಿರುವ ಹಾದಿಯ  ಮೂಲಕ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ. ಹೊಸ ಚಿಂತನೆಯ ವಿಭಿನ್ನ ಧ್ವನಿಗಳಿಗೂ ಅವಕಾಶವಿರಬೇಕು. ಈ ವಿಶ್ವವಿದ್ಯಾಲಯ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಬೇಕು. 10 ಕೇಂದ್ರಗಳಿಗೆ ವಿಶೇಷ ಅನುದಾನ ನೀಡಿ, ಒಂದು ಕೇಂದ್ರ ಮೂರು ಜಿಲ್ಲೆಗಳನ್ನು ತೆಗೆದುಕೊಂಡು, ಕನ್ನಡ ಹಂಪಿ ವಿಶ್ವವಿದ್ಯಾಲಯದ ಚಟುವಟಿಕೆಗಳನ್ನು ಭಾಷೆ , ಸಾಹಿತ್ಯ ಮತ್ತು ಜನರ ಭಾವನೆಗಳನ್ನು ಅರಿತು ಕೆಲಸ ಮಾಡುಬೇಕು.  10 ಕೇಂದ್ರಗಳು ಚಟುವಟಿಕೆಗಳು ಪೂರ್ತಿಯಾಗಿ ಮಾಡಬೇಕು. ಎಂ.ಪಿ. ಪ್ರಕಾಶ್ ಅವರ ಹೆಸರಿನಲ್ಲಿ ಸಂಶೋಧನಾ ಕೇಂದ್ರ ಮಾಡಲಾಗುವುದು. ಈ ಯೋಜನೆಗೆ ವಿಶೇಷ ಸಹಾಯ ಸಹಕಾರವನ್ನು ಸರ್ಕಾರದ ವತಿಯಿಂದ ನೀಡಲಾಗುವುದು ಎಂದರು.

ಜ್ಞಾನವನ್ನು ಬಳಕೆ ಮಾಡಿ ವಿವಿಧ ರಂಗದಲ್ಲಿ ವಿದ್ಯಾರ್ಥಿಗಳು ಬಳಸಿಕೊಂಡರೆ ದೊಡ್ಡ ಪ್ರಮಾಣ ಅನುಕೂಲವಾಗಲಿದೆ. ಈ ಬಗ್ಗೆ ಹೊಸ ಚಿಂತನೆ ಮಾಡಬೇಕು. ಯುವಜನತೆಯ ಕೈಯಲ್ಲಿ ಕನ್ನಡದ ಅತ್ಯುತ್ತಮ ಭವಿಷ್ಯ ಅಡಗಿದೆ ಎಂದರು.

*ಕನ್ನಡವನ್ನು ಪ್ರೀತಿಸಿ*
ಕೇವಲ  ನಾಗರಿಕತೆಯ ಬೆಳವಣಿಗೆಗೆ ನಮ್ಮ ಸಂಸ್ಕøತಿಯ ಬೆಳವಣಿಗೆ  ಎನ್ನುವ ಕಲ್ಪನೆ ತಪ್ಪು ಎನ್ನುವುದನ್ನು ಈ ವಿಶ್ವವಿದ್ಯಾಲಯ ಪದೇ ಪದೇ ಬೇರೆ ಬೇರೆ ಪ್ರಸಂಗಗಳ ಮೂಲಕ ತೋರಿಸಿಕೊಟ್ಟಿದೆ. ನಮ್ಮ ಭಾಷೆ ಮತ್ತು ಸಂಸ್ಕøತಿ ಬಹಳ ಗಟ್ಟಿಯಾಗಿದೆ. ಕನ್ನಡಿಗನೊಬ್ಬ ಏನಾಗಿದ್ದ, ಈಗ ಏನಾಗಿದ್ದಾನೆ, ಏನಾಗಬೇಕು,  ವಿಶ್ವದ ಭೂಪಟದಲ್ಲಿ ಕನ್ನಡ ಏನಾಗಿದೆ,  ಕನ್ನಡಿಗನ ಸ್ಥಾನ ಏನು ಎನ್ನುವ ತೀರ್ಮಾನಗಳನ್ನು ಈ ವಿಶ್ವವಿದ್ಯಾಲಯದಲ್ಲಿ ಆಗಬೇಕು.  ಕನ್ನಡ ಬಹಳ ಶ್ರೀಮಂತ ಭಾಷೆ, ಕನ್ನಡವನ್ನು ಪ್ರೀತಿ ಮಾಡಿ ನಿಮ್ಮ ಸಂಶೋಧನೆಗೆ ನೂರಾರು  ಅವಕಾಶಗಳನ್ನು ಕೊಡುತ್ತದೆ ಎಂದರು.   

*ಕನ್ನಡ ವಿವಿಗೆ ಜೀವಂತಿಕೆ ಇದೆ*
ನನ್ನ ಪ್ರಕಾರ ಒಂದು ಜೀವಂತಿಕೆ ಇರುವ ವಿಶ್ವವಿದ್ಯಾಲಯ. ಉತ್ಕೃಷ್ಟವಾದ ಅವಕಾಶ ತಮಗೆ ಸಿಕ್ಕಿದೆ. ನಿಮ್ಮ ಯೋಜನೆ ಮತ್ತು ಯೋಚನೆಗಳನ್ನು ಬದಲಾಯಿಸುವ ಅಗತ್ಯವಿದೆ. ಕನ್ನಡದ ಇತಿಹಾಸ ಮತ್ತು ಕನ್ನಡದ ಭವಿಷ್ಯ ಎರಡನ್ನೂ  ನಿರ್ಣಯ ಮಾಡಬೇಕಾದರೆ ವರ್ತಮಾನದಲ್ಲಿ ಏನಿದೆ ಎಂದು ತಿಳಿದುಕೊಳ್ಳಬೇಕು. ಇದೊಂದು ವಿಶಿಷ್ಟಪೂರ್ಣ ಸ್ಥಳ. 

*ಎಂ.ಪಿ.ಪ್ರಕಾಶ ಕೊಡುಗೆ ಅಪಾರ*

ಕನ್ನಡ  ವಿಶ್ವವಿದ್ಯಾಲಯ ಸ್ಥಾಪನೆಗೆ ಮಾಜಿ ಸಚಿವ ಎಂ.ಪಿ.ಪ್ರಕಾಶ್ ಅವರು ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆ.  ಸುಮಾರು ಏಳೆಂಟು ವರ್ಷ ಚಿಂತನೆ ಮಾಡಿ,  ಈ ಸ್ಥಳ ಇಷ್ಟು ಸುಂದರವಾಗಿ ನಿರ್ಮಿಸಲು  ಪರಿಕಲ್ಪನೆ ಹುಟ್ಟಿತು.  ಚಂದ್ರಶೇಖರ ಕಂಬಾರರು  ಕನ್ನಡ ವಿವಿ ಮೊದಲ ಕುಲಪತಿಗಳು ನನಗೆ ಮಾರ್ಗದರ್ಶಕರೂ ಆತ್ಮೀಯರೂ ಹೌದು ಎಂದು ಸ್ಮರಿಸಿದರು. 

 ಕನ್ನಡ ಹಲವಾರು ಆಯಾಮಗಳಲ್ಲಿವೆ. ಜಾನಪದದಲ್ಲಿ, ದಾಸ ಸಾಹಿತ್ಯ, ವಚನ ಸಾಹಿತ್ಯ, ಹಳೆಗನ್ನಡ, ನವಗನ್ನಡ,ವೈಚಾರಿಕ,  ವ್ಯವಹಾರಿಕ,  ಬಂಡಾಯ ಮುಂತಾದ ಪ್ರಾಕಾರಗಳಲ್ಲಿದೆ. ಇವೆಲ್ಲವೂ ವಿವಿಯ ಒಂದು ಪ್ರಮುಖ ಅಂಗವಾಗಬೇಕು, ಆಗ ಇಡೀ ವಿಶ್ವಕ್ಕೆ  ವಿವಿಯ ಚಟುವಟಿಕೆ ಪರಿಚಯವಾಗುತ್ತದೆ. ಕನ್ನಡ ನಾಡಿನಲ್ಲಿ , ಜಾನಪದ, ಕನ್ನಡ ಸಂಗೀತ, ಸಾಂಸ್ಕøತಿಕ  ವಿಶ್ವವಿದ್ಯಾಲಯ ಇದೆ. ವಿವಿಗೆ ದೊಡ್ಡ ಶಕ್ತಿಯನ್ನು ತುಂಬುವ ಅವಕಾಶ  ಒದಗಿಬಂದಿದೆ ಎಂದರು.
[16/04, 6:42 PM] Gurulingswami. Holimatha. Vv. Cm: *ಈಶಣ್ಣ ಗುಳಗಣ್ಣವರ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ*

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ  ಬಿಜೆಪಿ ಮಾಜಿ ಶಾಸಕ ಈಶಣ್ಣ ಗುಳಗಣ್ಣವರ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸೌಮ್ಯ ಸ್ವಭಾವದ ಈಶಣ್ಣ,  ನೀರಾವರಿ, ರಸ್ತೆ ಮುಂತಾದ  ಅಭಿವೃದ್ಧಿ ಕಾರ್ಯಗಳನ್ನು ತಮ್ಮ ಕ್ಷೇತ್ರದಲ್ಲಿ ಕೈಗೊಂಡು ಜನಪ್ರಿಯರಾಗಿದ್ದರು.  ಪಾರ್ಶ್ವವಾಯು ಪೀಡಿತರಾಗಿದ್ದರೂ   ಬಿ.ಜೆ.ಪಿ ಸರ್ಕಾರಕ್ಕೆ ನಿರ್ಣಾಯಕ ಘಟ್ಟದಲ್ಲಿ ಈಶಣ್ಣ ಜೀವದಾನ ನೀಡಿದ್ದರು.  ಜನಕಲ್ಯಾಣಕ್ಕೆ ಶ್ರಮಿಸಿದ ಅಪರೂಪದ ನಾಯಕರು. ಅವರ ನಿಧನದಿಂದ ರಾಜ್ಯ ಒಬ್ಬ ಉತ್ತಮ ಜನನಾಯಕನನ್ನು ಕಳೆದುಕೊಂಡಂತಾಗಿದೆ.

ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಖ: ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Post a Comment

Previous Post Next Post