BJP ಇಂದು

[23/04, 8:50 PM] Karunakar. Khasale. Bjp. Media: 23-4-2022
ಪ್ರಕಟಣೆಯ ಕೃಪೆಗಾಗಿ
ಡಾ. ರಾಜ್‍ಕುಮಾರ್ ಜನ್ಮದಿನಾಚರಣೆ-
ನಳಿನ್‍ಕುಮಾರ್ ಕಟೀಲ್ ಶುಭಾಶಯ
ಬೆಂಗಳೂರು: ಪ್ರಸಿದ್ದ ಚಲನಚಿತ್ರ ನಟರಾದ ಡಾ. ರಾಜ್‍ಕುಮಾರ್ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ಕನ್ನಡದ ಜನತೆಗೆ ಮತ್ತು ಚಲನಚಿತ್ರ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ.
ಅಣ್ಣಾವ್ರು ಎಂದೇ ಜನಪ್ರಿಯತೆ ಪಡೆದಿದ್ದ ಡಾ. ರಾಜ್‍ಕುಮಾರ್ ಅವರು ಕೇವಲ ಸಿನಿಮಾ ರಂಗಕ್ಕೆ ಸೀಮಿತರಾಗದೆ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರಾಗಿದ್ದರು.. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದರು. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಅವರಿಗೆ ಕೊಡಲಾಗಿತ್ತು. ಅಲ್ಲದೆ, ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದರು ಎಂದು ತಿಳಿಸಿದ್ದಾರೆ. 
ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ. ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕøತರಾದ ಮಹಾನ್ ವ್ಯಕ್ತಿ ಅವರು. 2000ನೇ ವರ್ಷದಲ್ಲಿ ದಂತಚೋರ ವೀರಪ್ಪನ್‍ನಿಂದ ಅಪಹರಣವಾಗಿದ್ದ ರಾಜ್‍ಕುಮಾರ್, 108 ದಿನಗಳ ನಂತರ ಬಿಡುಗಡೆಯಾಗಿದ್ದರು. ಅವರ ಜೀವನಾದರ್ಶಗಳು ಕನ್ನಡಿಗರಿಗೆ ಸದಾ ಅನುಕರಣೀಯ ಎಂದು ತಿಳಿಸಿದ್ದಾರೆ.

          
                                                                    
  ಕರುಣಾಕರ ಖಾಸಲೆ
 ಮಾಧ್ಯಮ ಸಂಚಾಲಕರು
    ಬಿಜೆಪಿ ಕರ್ನಾಟಕ
[23/04, 9:48 PM] Karunakar. Khasale. Bjp. Media: 23-04-2022
ಪತ್ರಿಕಾ ಆಹ್ವಾನ
ಬೆಂಗಳೂರು: ಮಹಾನ್ ನಟರಾದ ಡಾ. ರಾಜ್‍ಕುಮಾರ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್‍ಕುಮಾರ್ ಕಟೀಲ್ ಮತ್ತು ರಾಜ್ಯದ ತೋಟಗಾರಿಕೆ ಸಚಿವರಾದ ಶ್ರೀ ಮುನಿರತ್ನ ಅವರು 24-4-2022ರ ಭಾನುವಾರ ಬೆಳಿಗ್ಗೆ 8.30ಕ್ಕೆ ಕಂಠೀರವ ಸ್ಟುಡಿಯೋದ ಡಾ.ರಾಜ್‍ಕುಮಾರ್ ಅವರ ಸ್ಮಾರಕಕ್ಕೆ ತೆರಳಿ ಗೌರವ ಸಮರ್ಪಿಸುವರು.
ತಮ್ಮ ಪತ್ರಿಕೆಯ ವರದಿಗಾರರು, ಛಾಯಾಗ್ರಾಹಕರು ಮತ್ತು ಟಿ.ವಿ. ಮಾಧ್ಯಮಗಳ ವರದಿಗಾರರು ಈ ಸಂದರ್ಭದಲ್ಲ್ಲಿ ಭಾಗವಹಿಸಿ ಸೂಕ್ತ ಪ್ರಚಾರ ನೀಡಬೇಕೆಂದು ವಿನಂತಿಸುತ್ತೇನೆ.

            
                                                                    
  ಕರುಣಾಕರ ಖಾಸಲೆ
 ಮಾಧ್ಯಮ ಸಂಚಾಲಕರು
    ಬಿಜೆಪಿ ಕರ್ನಾಟಕ

Post a Comment

Previous Post Next Post