ಹೊಸ ಸಂವತ್ಸರಕ್ಕೆ ಜ್ಞಾನ ಹೂರಣ ದಲ್ ಹೋಳಿಗೆ

[01/04, 11:29 AM] Pandit Venkatesh. Astrologer. Kannada: 🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌         ‌      ‌                                        ‌
*ಯುಗಾದಿಗೆ ಅಭ್ಯಂಜನ ಸ್ನಾನ* 
                                                                                                                                                      ಮಾವು ಬೇವಿನ ಚಿಗುರೊಡನೆ ಸಂಭ್ರಮದ ಈ ದಿನ ಸಾಂಪ್ರದಾಯಿಕ ಹಾಗೂ ವೈಜ್ಞಾನಿಕ ಕಾರಣಗಳೆರಡರ ನಡುವೆ ಮನೆಮಂದಿಯೆಲ್ಲಾ ಆಹ್ಲಾದಕರ ಅಭ್ಯಂಜನ ಸ್ನಾನವನ್ನು ಮಾಡುವುದು ಈ ಹಬ್ಬದ ವಿಶೇಷ’ ಎನ್ನುತ್ತಾರೆ ತಜ್ಞರು.
ಸಂಪ್ರದಾಯ ಹಾಗೂ ಆರೋಗ್ಯದ ಹೆಸರಲ್ಲಿ ಯುಗಾದಿಗೆ ಅಭ್ಯಂಜನ ಸ್ನಾನ ಮಾಡುವ ರಿವಾಜು ಇದೀಗ ಮರುಕಳಿಸಿದೆ. ‘ಯುಗಾದಿ ಎಲ್ಲೆಡೆ ನವ ಚೈತನ್ಯ ತುಂಬುವ ಹಬ್ಬ. ಹೊಸವರ್ಷದ ಆರಂಭವನ್ನು ಪ್ರತಿಬಿಂಬಿಸುವ ಈ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.

ನಮ್ಮಲ್ಲಿರುವ ತಮೋ ಗುಣಗಳನ್ನು ಕಡಿಮೆ ಮಾಡಿ ಸತ್ವವನ್ನು ಹೆಚ್ಚಿಸುವ ಸಲುವಾಗಿ ಅಭ್ಯಂಜನ ಸ್ನಾನವನ್ನು ಸಂಪ್ರದಾಯದ ಹೆಸರಲ್ಲಿ ಮಾಡಲಾಗುತ್ತದೆ. ವೈಜ್ಞಾನಿಕವಾದ
ಈ ಸ್ನಾನ ದೇಹದ ನಾನಾ ಭಾಗಗಳಿಗೆ ಚೈತನ್ಯ ತುಂಬುತ್ತದೆ. ತಲೆಯಿಂದ ಪಾದದವರೆಗೆ ಹಚ್ಚುವ ವಿವಿಧ ಬಗೆಯ ಎಣ್ಣೆ ಹಾಗೂ ಅವುಗಳ ಸುಗಂಧ ಮಾಂಸಖಂಡಗಳ,
ಕೂದಲಿನ ಹಾಗೂ ತ್ವಚೆಯ ಆರೋಗ್ಯಕ್ಕೆ ಉತ್ತಮವಾದದ್ದು ಎನ್ನುತ್ತಾರೆ ಎಕ್ಸ್‌ಪರ್ಟ್ಸ್.

*ಅಭ್ಯಂಜನ ಸ್ನಾನದ ಮಹತ್ವ*

ದೇಹದ ಎಲ್ಲಾ ಭಾಗಗಳಿಗೂ ಮನೆಯಲ್ಲೇ ತಯಾರಿಸಿದ ಉತ್ತಮ ಸುವಾಸಿತ ಹರ್ಬಲ್‌ ಎಣ್ಣೆಯನ್ನು ಹಚ್ಚಿ. ಬೆರಳುಗಳಿಂದ ಮೃದುವಾಗಿ ಮಸಾಜ್‌ ಮಾಡಿ 30 ರಿಂದ 35 ನಿಮಿಷ ಬಿಟ್ಟು ಬಿಸಿ ನೀರಿನಿಂದ ಸ್ನಾನ ಮಾಡುವುದು ಮನಸ್ಸಿಗೆ ದೇಹಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ.

*ನೀರಿನ ಸಿದ್ಧತೆ*

ಎಣ್ಣೆ ಮಸಾಜ್‌ ಮಾಡಿದ ದೇಹದ ಭಾಗಗಳಿಗೆ ಬಿಸಿ ನೀರನ್ನು ಬಳಸಿ ಸ್ನಾನ ಮಾಡುವುದು ಅಭ್ಯಾಸ. ಆದರೆ ಹೆಚ್ಚು ಬಿಸಿಯಾದ ನೀರಿನ ಬಳಕೆ ತ್ವಚೆಗೆ ಒಳ್ಳೆಯದಲ್ಲ. ತ್ವಚೆ ಒರಟಾಗುತ್ತದೆ. ತಲೆ ಕೂದಲು ಉದುರುತ್ತದೆ. ಸ್ನಾನಕ್ಕೆ ಮೊದಲು ಔಷಧಿಯುಕ್ತ ಅರಿಶಿಣ, ಮಾವಿನ ಎಲೆ, ಬೇವಿನ ಎಲೆ, ಶ್ರೀಗಂಧದೆಣ್ಣೆಯನ್ನು ಬಿಸಿ ನೀರಿಗೆ ಸೇರಿಸುವುದರಿಂದ ತ್ವಚೆ ಸಂಬಂಧಿ ಸಮಸ್ಯೆಗಳನ್ನು ದೂರವಿಡುತ್ತದೆ.

*ಎಚ್ಚರಿಕೆ ವಹಿಸಿ*

ಅಭ್ಯಂಜನ ಸ್ನಾನ ಮಾಡುವ ಮೊದಲು ದೇಹಕ್ಕೆ ಸರಿಹೊಂದುವ ಎಣ್ಣೆಯನ್ನು ಆಯ್ಕೆ ಮಾಡುವುದು ಉತ್ತಮ. ನಾನಾ ಬಗೆಯ ಸುಗಂಧಿತ ಎಣ್ಣೆಗಳನ್ನು ಬಳಸುವಾಗ ಹೆಚ್ಚು
ಸ್ಟ್ರಾಂಗ್‌ ಇರುವುದನ್ನು ಗಮನಿಸಿ ಕಡಿಮೆ ಪ್ರಮಾಣದಲ್ಲಿ ಬಳಸುವುದು ಒಳ್ಳೆಯದು. ಚಿಕ್ಕದಾದ ಸ್ನಾನದ ಕೊಠಡಿಗಳಲ್ಲಿ ಎಣ್ಣೆ ಮಸಾಜ್‌ ಉತ್ತಮವಲ್ಲ. ಹೆಚ್ಚು ಮಂದವಾದ
ಎಣ್ಣೆಯನ್ನು ಕಾಯಿಸಿ ಬಳಸಿ. ಅಭ್ಯಂಜನ ಸ್ನಾನದಲ್ಲಿ ಎಣ್ಣೆ ಜಿಡ್ಡನ್ನು ಸುಲಭವಾಗಿ ತೆಗೆಯಲು ಸೀಗೆಕಾಯಿ ಪುಡಿ ಬಳಸುವುದು ಬಹು ಹಿಂದಿನಿಂದ ಬಂದ ಪದ್ಧತಿ. ಇದು ಜಿಡ್ಡನ್ನು ತೆಗೆಯುವುದರ ಜೊತೆಗೆ ತ್ವಚೆಯಲ್ಲಿನ ಬೇಡದ ಡೆಡ್‌ ಸ್ಕಿನ್‌ ತೆಗೆಯುವಲ್ಲೂ ಸಹಕಾರಿ.

*ಹಬ್ಬದ ಎಣ್ಣೆ ಸ್ನಾನಕ್ಕೆ ನಾನಾ ತೈಲ*

1. ಸಾಮಾನ್ಯವಾಗಿ ಬಹು ಹಿಂದಿನಿಂದಲೂ ಹರಳೆಣ್ಣೆ, ಎಳ್ಳೆಣ್ಣೆ, ಕೊಬ್ಬರಿಎಣ್ಣೆ, ಶ್ರೀಗಂಧದ ಎಣ್ಣೆಯನ್ನು ತ್ವಚೆಯ ಹಾಗೂ ಕೂದಲ ಆರೈಕೆಗೆ ಬಳಸಲಾಗುತ್ತದೆ. ಇದನ್ನು ಬೇಸಿಕ್‌ ತೈಲ ಇಲ್ಲವೇ ಮೂಲ ಎಣ್ಣೆ ಎಂದು ಕರೆಯಲಾಗುತ್ತದೆ. ಇದರ ಜತೆಗೆ ಇತರೇ ತೈಲಗಳನ್ನು ಮಿಕ್ಸ್‌ ಮಾಡಿ ಬಳಸಲಾಗುತ್ತದೆ.

2. ಆಹ್ಲಾದಕ್ಕಾಗಿ ಎಳ್ಳೆಣ್ಣೆಯ ಜೊತೆ 10 ಹನಿ ಶ್ರೀಗಂಧದ ಎಣ್ಣೆ , 5 ಹನಿ ರೋಸ್‌ ವಾಟರ್‌ ಮಿಶ್ರ ಮಾಡಿ ಬಳಸುವುದು ಮನಸ್ಸಿಗೆ ಹಾಗೂ ದೇಹಕ್ಕೆ ಆಹ್ಲಾದ ನೀಡುತ್ತದೆ.

3. ಎಳ್ಳೆಣ್ಣೆಯ ಜೊತೆ 20 ಹನಿ ಸುವಾಸಿತ ಮಲ್ಲಿಗೆ, 8 ಹನಿ ಆರೆಂಜ್‌ ಮಿಶ್ರಮಾಡಿ ಹಚ್ಚುವುದರಿಂದ ಮನಸ್ಸು ರಿಲ್ಯಾಕ್ಸ್‌ ಆಗುತ್ತದೆ.

4. ಮಾನಸಿಕ ಒತ್ತಡ ಕಡಿಮೆಯಾಗಲು ಹೀಗೆ ಮಾಡಬಹುದು. ಮೂಲ ಎಣ್ಣೆಯ ಜೊತೆ 1 ಹನಿ ಶ್ರೀಗಂಧ, 6 ಹನಿ ನಿಂಬೆ ಸೇರಿಸಿ ಬಳಸುವುದು ಮಾನಸಿಕ ಒತ್ತಡ ಕಡಿಮೆ ಮಾಡಿ ಪ್ರಶಾಂತಗೊಳಿಸುತ್ತದೆ.

5. ಹರಳೆಣ್ಣೆಯ ಜೊತೆ ಎಳ್ಳೆಣ್ಣೆ, ಶ್ರೀಗಂಧದೆಣ್ಣೆ ಮಿಶ್ರ ಮಾಡಿ ಕಾಲು ಕೈಗಳ ಭಾಗಗಳಿಗೆ ಅಂಗಾಲಿಗೆ ಹಚ್ಚಿ ಮಸಾಜ್‌ ಮಾಡುವುದರಿಂದ ತ್ವಚೆ ಮೃದುವಾಗುತ್ತದೆ.

6. ಮಾಂಸಖಂಡಗಳ ನೋವು ನಿವಾರಣೆಗೆ ಹೀಗೆ ಮಾಡಿ. ಹರಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅದರೊಂದಿಗೆ ಎಳ್ಳೆಣ್ಣೆ , ನೀಲಗಿರಿ ತೈಲ ಸೇರಿಸಿ ಬಳಸಿ ಮೃದುವಾಗಿ ಮಸಾಜ್‌ ನೀಡುವುದು ಉತ್ತಮ.

ಶ್ರೀ ಸೋಮಸುಂದರ ಶಾಸ್ತ್ರೀ
ಅರ್ಚಕರು ಮತ್ತು ಪುರೋಹಿತರು
ಶ್ರೀ ವಿದ್ಯಾ ಗಣಪತಿ ದೇವಸ್ಥಾನ
ಶಿರಾ, ಶಿರಾ, ತುಮಕೂರು
9632897701
🙏🙏🙏🙏🙏
[01/04, 11:47 AM] Pandit Venkatesh. Astrologer. Kannada: 🙏 ಹರಿಃ ಓಂ
🕉️ ಪ್ಲವ ನಾಮ ಸಂವತ್ಸರಂ ಕೊನೆಯ ದಿನ

🎙️ _ *ಸರಸ್ವತಿ ಶ್ಲೋಕ *

_ ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ ॥ ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ।🙏🙏

 ಯಾ ಕುಂದೇಂದು ತುಷಾರ ಹರ ಧವಲಾ, ಯಾ ಶುಭ್ರ ವಸ್ತ್ರಾವೃತಾ. ಯಾ ವೀಣಾ ವರದಂಡ ಮಂಡಿತಾ ಕರಾ, ಯಾ ಶ್ವೇತಾ ಪದ್ಮಾಸನ. ಯಾ ಬ್ರಹ್ಮಚ್ಯುತ ಶಂಕರಃ ಪ್ರಭೃತಿಭಿರ್-ದೇವೈಃ ಸದಾ ಪೂಜಿತಾ ॥
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶೇಷಜಾದ್ಯಪಹಾ ।🙏🙏

🎙️_ *ಲಕ್ಷ್ಮೀ ಶ್ಲೋಕ *

_ ಲಕ್ಷ್ಮೀ ಕ್ಷೀರಸಮುದ್ರ ರಾಜ ತನಯಾಂ ಶ್ರೀರಂಗ ಧಾಮೇಶ್ವರೀಮ್ । ದಾಸಿಭೂತ ಸಮಸ್ತ ದೇವ ವನಿತಾಂ ಲೋಕೈಕ ದೀಪಾಂಕುರಮ್ । ಶ್ರೀಮನ್ಮಾಂಧ ಕಟಾಕ್ಷ ಲಬ್ಧ ವಿಭವ ಬ್ರಹ್ಮೇಂದ್ರ ಗಂಗಾಧರಮ್ ॥ ತ್ವಾಂ ತ್ರೈಲೋಕ್ಯಕುಟುಂಬಿನೀಂ ಸರಸಿಜಾಂ ವನ್ದೇ ಮುಕುಂದಪ್ರಿಯಾಂ॥ 🙏🙏

🎙️_ * ದುರ್ಗಾ ದೇವಿ ಸ್ತೋತ್ರಮ್ * 

_ ಸರ್ವಶಕ್ತಃ ಸರ್ವಶಕ್ತಃ ಸರ್ವಶಕ್ತಃ ಸಮನ್ವಯತೇ । ಭಯೇಭ್ಯಸ್ತಾಹಿ ನೋ ದೇವಿ ದುರ್ಗಾದೇವಿ ನಮೋಸ್ತುತೇ॥🙏🙏

🎙️_ * ತ್ರಿಪುರಸುಂದರಿ ಸ್ತೋತ್ರಮ್ *

 _ ಓಂಕಾರ ಪಂಜರ ಶುಕೀಂ ಉಪನಿಷಧ್ಯಾನ ಕೇಲಿ ಕಲಾಕಂಠೀಮ್ । ಆಗಮ ವಿಪಿನಾ ಮಯೂರೀಂ ಆರ್ಯಮ್ ಅನ್ತರ್ವಿಭಾವಯೇದ್ಗೌರೀಮ್॥🙏🙏

 🎙️_ *ದೇವಿ ಶ್ಲೋಕ *

_ ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ॥ ಶರಣ್ಯೇ ತ್ರ್ಯಮ್ಬಕೇ ದೇವಿ ನಾರಾಯಣಿ ನಮೋಸ್ತುತೇ ನನ್ನ ಆತ್ಮೀಯ ಬಂಧುಗಳಿಗೆ ಶುಕ್ರವಾರದ ಹಾರ್ದಿಕ ಶುಭಾಶಯಗಳು..🙏🙏

_ *ಲಕ್ಷ್ಮಿ, ಸರಸ್ವತಿ, ಗಾಯತ್ರಿ, ದುರ್ಗಾ ಅಮ್ಮನವರ *_ನಿಮ್ಮ ಮತ್ತು ನಿಮ್ಮ ಕುಟುಂಬದವರ ಕೃಪೆಯಿಂದ ನೂರಾರು ವರ್ಷ ಆಯುರಾರೋಗ್ಯ ಮತ್ತು ಅಷ್ಟೈಶ್ವರ್ಯಗಳಿಂದ ಸುಖವಾಗಿ ಬಾಳಲೆಂದು ಹಾರೈಸುತ್ತೇನೆ...

🙏 01-04-2022: -ಶುಕ್ರವಾರ

* _ಸ್ವಸ್ತಿ ಶ್ರೀ ಚಂದ್ರಮಾನ ಪ್ಲವ ನಾಮ ಸಂವತ್ಸರಂ_ * *_ಉತ್ತರಾಯಣಮು_* *_ಶರತ್ಕಾಲ_* *_ಫಾಲ್ಗುಣ ಮಾಸ_* *_ಕೃಷ್ಟ ಅಮವಾಸ್ಯೆ_* * _ಭೃಗು ವಾಸರೆ_ * * _ (ಶುಕ್ರವಾರ) _ * ಶ್ರೀ ಪ್ಲಾವ ವರ್ಷ ದೇವಿಯ ಧ್ಯಾನ * _ಅಗ್ನಿಂ ನಮಾಮಿ ಸತತಂ ಜ್ವಾಲಾಮಲಂ ತಮೋಪಹಂ ౹_ * * _ಅಜಾರೂಢಂ ಚತುರ್ಹಸ್ತಂ ದ್ವಿಶೀರ್ಷಂ ಪ್ಲವಸಂಜ್ಞಿಕಂ ౹౹_ *🙏🙏

🎙️ ಇಂದು ಶುಭ ದಿನ ಒಳ್ಳೆಯ ಮಾತುಗಳು

🔮_*ಮನುಷ್ಯನಿಗೆ ಕೌಶಲ್ಯ ಬೇಕು, ಮನಸ್ಸಿಗೆ ತಾಳ್ಮೆ ಬೇಕು, ಸಂಕಟಕ್ಕೆ ಸಾಂತ್ವನ ಬೇಕು, ಪ್ರತಿ ಜೀವನಕ್ಕೂ ಬದಲಾವಣೆ ಬೇಕು. 

🛑_ *ಓದುವಿಕೆ ನಮ್ಮನ್ನು ಫಿಂಗರ್‌ಪ್ರಿಂಟ್‌ನಿಂದ ಸಿಗ್ನೇಚರ್‌ಗೆ ಕರೆದೊಯ್ದರೆ, ಇಂದಿನ ತಂತ್ರಜ್ಞಾನವು಼ ನಮ್ಮನ್ನು ಸಹಿಯಿಂದ ಫಿಂಗರ್‌ಪ್ರಿಂಟ್‌ಗೆ ಹಿಂತಿರುಗಿಸುತ್ತದೆ. *_ 

🔮_* ಗುರಿಯ ಕನಸುಗಳು ರುಚಿಕರ ಆದರೆ ತಲುಪುವ ಹಾದಿಯಲ್ಲಿ ಮುಳ್ಳುಗಳಿವೆ, ಭಯದಲ್ಲಿ ನಿಂತರೆ ಜೀವನ ಮರುಭೂಮಿಯಾಗುತ್ತದೆ, ಮೀರಿ ಹೋದರೆ ಜೀವನ ಹೂವು.

🛑_ * ಲೋಹಗಳಲ್ಲಿ ಪ್ರಬಲವಾದದ್ದು ಕಬ್ಬಿಣ, ಅದು ಎಲ್ಲವನ್ನೂ ಕತ್ತರಿಸುತ್ತದೆ, ಅದರಲ್ಲಿ ಪ್ರಬಲವಾದದ್ದು ಕಬ್ಬಿಣ, ಅದು ಕಬ್ಬಿಣವನ್ನು ಕರಗಿಸುತ್ತದೆ, ಅದರಲ್ಲಿ ಬಲವಾದದ್ದು ನೀರು. ಸಾವು ಮನುಷ್ಯನಿಗಿಂತ ಪ್ರಬಲವಾಗಿದೆ, ಅದು ಮನುಷ್ಯನನ್ನು ಕೊಲ್ಲುತ್ತದೆ. *_ 

🔮_ *ರಾಮಾಯಣ ಜೀವನದಲ್ಲಿ ಏನು ಮಾಡಬೇಕೆಂದು ಹೇಳುತ್ತದೆ. ಏನು ಮಾಡಬಾರದು ಎಂದು ಭಾರತ ಹೇಳುತ್ತದೆ. ಭಗವದ್ಗೀತೆಯು ನಮಗೆ ಜೀವನವನ್ನು ಹೇಗೆ ನಡೆಸಬೇಕೆಂದು ಹೇಳುತ್ತದೆ. *_ 

▶️ ನಮ್ಮ ಹಿಂದೂ  ಸಂಸ್ಕೃತಿ ಉಳಿಸಲು  ನಿಮ್ಮ  ಕೊಡುಗೆ  ಇರಲಿ 😊👍

ಹರಿಯೇ ಪರದೈವ 🙏  
ಜಗತ್ತು ಸತ್ಯ 🙏   
ದೇವರ ಸ್ಮರಣೆ ಮುಖ್ಯ 🙏🙏.
[01/04, 11:50 AM] Pandit Venkatesh. Astrologer. Kannada: ಪಂಚಾಂಗ ಶ್ರವಣಕ್ಕೆ ಉಪಯುಕ್ತವಾದ ನವಸಂವತ್ಸರದ ಮುಖ್ಯಾಂಶಗಳು.

ಶ್ರೀಮತ್ಪುಣ್ಯತರಾಖ್ಯ ಶೋಭನದಿನೇ ಸೂರ್ಯೋದಯಾ ನಂತರೇ
ತೇ ವಕ್ಷಾಮ್ಯಹಮಾಶ್ರಿತೋ ಮರುತರಃ ಕೋದಂಡ ದೀಕ್ಷಾಗುರುಃ |
ಮೇಘಶ್ಯಾಮಲರಾಮ ಚಂದ್ರ ಕರುಣಾ ಸಿಂಧೋ ರಘೂಣಾಂ ಪತೇ
ಹೇ ಸೀತಾಧಿಪ ಮಂಗಲಂ ಪ್ರತಿದಿನಂ ಪಂಚಾಂಗಂ ಆಕರ್ಣ್ಯತಾಂ ||೧||
.
ಆಯುರ್ದ್ರೋಣಸುತೇ ಶ್ರೀಯಂ ದಶರಥೇ ಶತೃಕ್ಷಯಂ ರಾಘವೇ
ಐಶ್ವರ್ಯಂ ನಹುಷೇ ಗತಿಸ್ತು ಪವನೇ ಮಾನಂ ಚ ದುರ್ಯೋದನೇ |
ಶೌರ್ಯಂ ಶಾಂತನಯೇ ಬಲಂ ಹರಿಹರೇ ಸತ್ಯಂ ಚ ಕುಂತೀಸುತೇ
ವಿಜ್ಞಾನೇ ವಿಹರೇ ಭವಂತಿ ಭವತಾಂ ಕೀರ್ತಿಸ್ತು ನಾರಾಯಣೇ ||೨||
--------------------------------------
ಶ್ರೀ ಮಹಾವಿಷ್ಣುವಿನ ನಾಭಿಕಮಲದಲ್ಲಿ ಜನಿಸಿದ ಬ್ರಹ್ಮದೇವರ ಆಯುಷ್ಯವು ನೂರು ವರ್ಷ. ಅದರ ಅರ್ಧ ಅಂದರೇ ಐವತ್ತು ವರ್ಷಗಳು ಕಳೆದು ಈಗ ಐವತ್ತೊಂದನೇ ವರ್ಷದ ಪ್ರಥಮ ಮಾಸದ, ಶುಕ್ಲ ಪಕ್ಷದ, ಪ್ರತಿಪದ ತಿಥಿಯಲ್ಲಿ ಹದಿಮೂರು ಘಟಿ ನಾಲ್ವತ್ತೆರಡು ಪಳ, ಮೂರು ಅಕ್ಷರಗಳು ಪೂರ್ಣವಾಗಿವೆ. ನಾಲ್ಕು ಯುಗಗಳ ಒಂದು ಸಾವಿರ ಚಕ್ರವಾದಾಗ ಬ್ರಹ್ಮ ದೇವರಿಗೆ ಒಂದು ಹಗಲು. ಅದೇ ರೀತಿ ಒಂದು ರಾತ್ರಿಯೂ ಇರುವದು.

ಕೃತಯುಗದ ೧೭ಲಕ್ಷ, ೨೮ಸಾವಿರ ವರ್ಷಗಳು, ತ್ರೇತಾಯುಗದ ೧೨ಲಕ್ಷ, ೯೬ ಸಾವಿರ ವರ್ಷಗಳು, ದ್ವಾಪರ ಯುಗದ ೮ ಲಕ್ಷ ೬೪ ಸಾವಿರ ವರ್ಷಗಳು ಪೂರ್ಣಗೊಂಡಿವೆ. ಕಲಿಯುಗಕ್ಕೆ ೪ಲಕ್ಷ ೩೨ ಸಾವಿರ (೪,೩೨,೦೦೦). ವರ್ಷಗಳಿವೆ. ಈ ನಾಲ್ಕೂ ಯುಗಕಾಲದ ಸಂಖ್ಯೆಯನ್ನು ಕೂಡಿಸಿದರೆ ೪೩,೨೦,೦೦೦.

ಇಲ್ಲಿ ೪, ೩, ೨ ಮತ್ತು ಸೊನ್ನೆ ಮಹತ್ವದ ಸಂಖ್ಯೆಗಳಾಗಿವೆ. ೪ ಚತುರ್ವಿಧ ಪುರುಷಾರ್ಥವನ್ನೂ, ವೇದಗಳ ನ್ನೂ ಹೇಳಿದರೆ ೩ ತ್ರಿಕಾಲವನ್ನೂ, ತ್ರಿಕರಣಗಳನ್ನೂ ಹೇಳುತ್ತದೆ. ೨ ಆತ್ಮ ಪರಮಾತ್ಮ, ಅಂತರ್ಬಾಹ್ಯ ವ್ಯಾಪ್ತನಾದ ಭಗವಂತನ ವಿಭೂತಿ ರೂಪದ ಸಂಕೇತವಾಗಿದೆ. ೪+೩+೨=೯ ಇದು ನವಗ್ರಹಗಳನ್ನು ಸೂಚಿಸುತ್ತದೆ. ೪ x ೩ = ೧೨ ಇದು ದ್ವಾದಶ ಆದಿತ್ಯ ರೂಪ, ದ್ವಾದಶ ಜ್ಯೋತಿಲಿಂಗ, ದ್ವಾದಶ ರಾಶಿ, ಮಾಸಗಳ ಸಂಕೇತವಾಗಿದೆ. ೪ x ೩ = ೧೨, ೧೨ x ೨ =೨೪ ಇದು ಮಹಾವಿಷ್ಣುವಿನ ೨೪ ರೂಪಗಳ ಸಂಕೇತ.

ಶೂನ್ಯ ಅಂದರೆ ಬ್ರಹ್ಮದೇವರನ್ನು ಸೂಚಿಸುತ್ತದೆ, ಜ್ಞಾನ, ಪೂರ್ಣತೆಯ ಸಂಕೇತವಾಗಿದೆ. ಹೀಗೆ ಯುಗಗಳ ಕಾಲದ ಸಂಖ್ಯೆಯಲ್ಲಿ ಸೃಷ್ಟಿಯ ಮಹತ್ವದ ವಿಷಯಗಳು ಸೂಚ್ಯವಾಗಿವೆ.

--------------------------------------
ಬ್ರಹ್ಮದೇವರ ಒಂದು ಹಗಲಿನಲ್ಲಿ ಹದಿನಾಲ್ಕು ಮನ್ವಂತರಗಳು ಆಗುತ್ತವೆ. ೧) ಸ್ವಾಯಂಭುವ ೨) ಸ್ವಾರೋಚಿಷ ೩) ಉತ್ತಮ ೪) ತಾಪಸ ೫) ರೈವತ ೬) ಚಾಕ್ಷುಷ ೭) ವೈವಸ್ವತ ೮) ಸಾವರ್ಣಿ ೯) ದಕ್ಷಸಾವರ್ಣಿ ೧೦) ಬ್ರಹ್ಮಸಾವರ್ಣಿ ೧೧) ಧರ್ಮಸಾವರ್ಣಿ ೧೨) ರುದ್ರಸಾವರ್ಣಿ ೧೩) ದೇವಸಾವರ್ಣಿ ೧೪) ಇಂದ್ರಸಾರ್ವರ್ಣಿ ಎಂಬ ಮನು ಚತುರ್ದಶರು ಮನ್ವಂತರದ ದೇವತೆಗಳಾಗುವರು.

ಕಲಿಯುಗದಲ್ಲಿ ಯುಧಿಷ್ಠಿರ ಶಕೆ, ವಿಕ್ರಮಶಕೆ, ಶಾಲಿವಾಹನ ಶಕೆ, ವಿಜಯಾಭಿನಂದ ಶಕೆ, ನಾಗಾರ್ಜುನ ಶಕೆ ಮತ್ತು ಕಲ್ಕಿಭೂಪತಿ ಶಕೆ ಎಂಬ ೬ ಶಕಕರ್ತರು ಇರುವರು.

ಈಗ ಕಲಿಯುಗದ ೫,೧೨೩ ಕಳೆದ ವರ್ಷಗಳು ಕಳೆದಿವೆ ಅಂದರೆ ೪,೨೬,೮೭೭ ವರ್ಷಗಳು ಉಳಿದಿವೆ. ಇಂದಿನಿಂದ ವೈವಸ್ವತ ಮನ್ವಂತರ, ಶಾಲಿವಾಹನ ಶಕೆ ೧೯೪೪, ಶ್ರೀಶುಭಕೃತ ನಾಮ ಸಂವತ್ಸರ ಆರಂಭವಾಗಿದೆ.

--------------------------------------
ಯುಗಾದಿ ಆಚರಣೆಯ ಕ್ರಮ- ಅಚಿಂತ್ಯಾವ್ಯಕ್ತರೂಪಾಯ ನಿರ್ಗುಣಾಯ ಗುಣಾತ್ಮನೇ| ಸಮಸ್ತಜಗದಾಧಾರ ಮೂರ್ತಯೇ ಬ್ರಹ್ಮಣೇ ನಮಃ|| ಎಂಬ ಮಂತ್ರದಿಂದ ಕಾಲನಿಯಾಮಕನಾದ ಶ್ರೀಮನ್ನಾರಾಯಣನ ಪ್ರಾರ್ಥಿಸಿ,

ಮನೆಯನ್ನು ಮಾವಿನ ತಳಿರು ತೋರಣ, ರಂಗೋಲಿಗಳಿಂದ ಅಲಂಕರಿಸಿ, ಅಭ್ಯಂಗಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ಗುರು-ಹಿರಿಯರಿಗೆ ನಮಸ್ಕರಿಸಿ

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟ ವಿನಾಶಾಯ ನಿಂಬಕಂ ದಲ ಭಕ್ಷಣಂ ||

ಎಂಬ ಮಂತ್ರದಿಂದ ಬೇವು-ಬೆಲ್ಲ ಸೇವಿಸಬೇಕು. ಪಂಚಾಂಗ ಪೂಜಿಸಿ ಶ್ರೋತ್ರಿಯರಿಂದ ಶ್ರವಣ ಮಾಡುವದರಿಂದ ವರ್ಷಪೂರ್ಣ ಮಂಗಲಮಯವಾಗುತ್ತದೆ. ಆಯಷ್ಯ ವೃದ್ಧಿಯಾಗುತ್ತದೆ. ರೋಗಾದಿಗಳು ನಾಶವಾಗುತ್ತವೆ. ಅಪಾರಕೀರ್ತಿ ಲಭಿಸುತ್ತದೆ. ಐಶ್ವರ್ಯಾದಿ ಫಲಗಳು ದೊರೆಯುತ್ತವೆ.

--------------------------------------
ಶ್ರೀಶುಭಕೃತ ಸಂವತ್ಸರ ಫಲ

ಶುಭಕೃದ್ ವತ್ಸರೆ ಸರ್ವಸಸ್ಯಾನಾಮತಿವೃದ್ಧಯಃ |

ನೃಪಾಣಾಂ ಸ್ನೇಹಮನ್ಯೋನ್ಯಂ ಪ್ರಜಾನಾಂ ಚ ಪರಸ್ಪರಮ್ ||

ಶುಭಕೃತ ಸಂವತ್ಸರದಲ್ಲಿ ಎಲ್ಲ ಸಸ್ಯಗಳೂ ಸಮೃದ್ಧವಾಗಿ ಬೆಳೆಯುವವು. ಭುವಿಯಲ್ಲಿ ಜೀವಸಂಕುಲ ಸಂತೋಷದಿಂದ ಇರುವದು. ಭಾರತದೊಂದಿಗೆ ಅಂತರಾಷ್ಟ್ರೀಯ ಸ್ನೇಹ ಸಂಬಂಧಗಳು ವೃದ್ಧಿಸುವದರಿಂದ ವ್ಯಾಪಾರ ವಹಿವಾಟು ಹೆಚ್ಚುವದು. ಆರ್ಥಿಕ ಸುಧಾರಣೆ ಕಂಡುಬರುವದು. ಪ್ರಜೆಗಳಲ್ಲಿ ಸ್ವಾರ್ಥ, ದ್ವೇಷ, ಅಸೂಯೆಗಳು ಕಡಿಮೆಯಾಗಿ ಪರಸ್ಪರ ಅಂತಃಕರಣ, ಧರ್ಮ, ಪ್ರೇಮ ವೃದ್ಧಿಸುವದು.

ರಾಜ - ಶನಿ ಫಲ :

ಅತ್ಯಲ್ಪಂ ಅತ್ಯಲ್ಪತರಾ ಚ ವೃಷ್ಟಿಃ ಅಧರ್ಮಯುಕ್ತಾ ಮನುಜಾಶ್ಚ ಸರ್ವೇ|

ತೇ ನೀಚ ಕರ್ಮಾಣಿ ಮನುಜಾಶ್ಚರಂತಿ ನೀಚಾದಿಕಾನಾಂ ಸುಖಮರ್ಕಜೇಬ್ಜೇ ||

ಸಂವತ್ಸರದ ರಾಜ ಶನಿಯಾಗಿರುವಾಗ ಅಲ್ಪವೃಷ್ಟಿಯಾಗುವದು, ಜನರು ಅಧರ್ಮಯುಕ್ತರಾಗುವರು ಹಾಗೂ ನೀಚಕರ್ಮಗಳಲ್ಲಿ ತೊಡಗುವರು. ದುಷ್ಟಜನರಿಗೆ ಸುಕಾಲ, ಶಿಷ್ಟರಿಗೆ ಕಷ್ಟಕಾಲ ಕಂಡುಬರುವದು.

ಮಂತ್ರಿ ಗುರು

ಸುವೃಷ್ಟಿ ಸರ್ವಸಸ್ಯಾನಾಂ ಜಾಯಂತೇ ಸುಖಿನೋಜನಾಃ |

ನಾನಾ ಬುದ್ಧಿವಿಕಾಸಂ ಚ ಮಂತ್ರಿಣೀಜ್ಯಪತೌ ಭವೇತ್ ||

ಗುರು ಮಂತ್ರಿಯಾಗಿರುವಾಗ ಸುವೃಷ್ಟಿಯಾಗುವದು. ಧಾನ್ಯಗಳು ಸಮೃದ್ಧವಾಗಿ ಬೆಳೆಯುವವು. ಪಾಣಿಪಕ್ಷಿಗಳಿಗೆ ಶುಭವಾಗುವದು, ಶೈಕ್ಷಣಿಕ ಅಭಿವೃದ್ಧಿ ಇರುವದು. ಜನರಲ್ಲಿ ಬೌದ್ಧಿಕ ವಿಕಾಸವಾಗುವದು. ಔದ್ಯೋಗಿಕ ಪ್ರಗತಿಯಿಂದ ಜನರು ಸುಖದಿಂದ ಇರುವರು.

ಅರ್ಘಾಧಿಪ ಬುಧ ಸಸ್ಯಾಧಿಪತಿ ಶನಿ ಸೇನಾಧಿಪ ಬುಧ ರಸಾಧಿಪತಿ ಚಂದ್ರ ಧಾನ್ಯಾಧಿಪತಿ ಶುಕ್ರ ನಿರಸಾಧಿಪತಿ ಶನಿ ಮೇಘಾಧಿಪತಿ ಬುಧ ಪಶುಪಾಲಕ ಬಲರಾಮ ನಾಗಿರುವನು.

--------------------------------------
ಆಯವ್ಯಯ

ಮೇಷ,ವೃಶ್ಚಿಕ 8 ಆಯ, 5 ವ್ಯಯ ವೃಷಭ, ತುಲಾ 2 ಆಯ, 14 ವ್ಯಯ ಮಿಥುನ, ಕನ್ಯಾ 8 ಆಯ, 11 ವ್ಯಯ ಕರ್ಕ 2 ಆಯ, 8 ವ್ಯಯ ಸಿಂಹ 5 ಆಯ, 5 ವ್ಯಯ ಧನು, ಮೀನ 5 ಆಯ, 11 ವ್ಯಯ ಮಕರ, ಕುಂಭ 14 ಆಯ, 11 ವ್ಯಯ ಗುರುಬಲ ದಿನಾಂಕ ೧೩/೦೪/೨೦೨೨ರಂದು ಮಧ್ಯಾಹ್ನ ೦೩.೫೧ಕ್ಕೆ ಗುರು ಮೀನರಾಶಿ ಪ್ರವೇಶಿಸುವನು. ಗುರು ಮೀನರಾಶಿಯಲ್ಲಿ ಸಂಚರಿಸುವಾಗ ವೃಷಭ, ಕರ್ಕ, ಕನ್ಯಾ, ವೃಶ್ಚಿಕ ಹಾಗೂ ಕುಂಭ ರಾಶಿಯವರಿಗೆ ಪೂರ್ಣ ಗುರುಬಲವಿದೆ. ಮಿಥುನ, ತುಲಾ, ಮಕರ ಮತ್ತು ಮೀನ ರಾಶಿಯವರಿಗೆ ಮಧ್ಯಮ ಬಲವಿದೆ. ಮೇಷ, ಸಿಂಹ ಹಾಗೂ ಧನು ರಾಶಿಯವರಿಗೆ ಗುರುಬಲ ಇರುವದಿಲ್ಲ. ಗುರುಬಲ ಇಲ್ಲದವರು ಮತ್ತು ಮಧ್ಯಮ ಬಲ ಇದ್ದವರೂ ಕೂಡ ಶಾಂತಿಪೂರ್ವಕ ಮಂಗಲಕಾರ್ಯ ಮಾಡಬೇಕು

--------------------------------------
ಭಾನುರ್ಭೂತಿಕರಂ ಶಶಿಃ ಸುಖಕರಂ ಲಕ್ಷ್ಮೀಕರಂ ಶ್ರೀಕರಂ ಚಿತ್ತಾನಂದಕರಂ ರಣೇ ಜಯಕರಂ ಶ್ರೋತಸ್ಯ ಪುಣ್ಯಾಕರಂ | ಭಾಗ್ಯಾಭೋಗ್ಯ ಕಲತ್ರ ಸಂತತಿಕರಂ ಶ್ರೀಯಸ್ಕರಂ ಸಂಪಾದಾಂ ಪಂಚಾಂಗಂ ಶೃಣು ಸಾವಧಾನ ಸಮಯೇ ತ್ರೈಲೋಕ್ಯ ವಶ್ಯಾಕರಂ ||೭||

ತಿಥೇಶ್ಚಶ್ರೀಯಮಾಪ್ನೋತಿ ವಾರಾದಾಯುಷ್ಯವರ್ಧನಂ ನಕ್ಷತ್ರಾದ್ಧರತೇ ಪಾಪಂ ಯೋಗಾದ್ರೋಗ ನಿವಾರಣಂ | ಕರಣಾತ್ಕಾರ್ಯ ಸಿದ್ಧಿಸ್ಯಾತ್ ಪಂಚಾಂಗ ಫಲಮುತ್ತಮಂ ||೮||

ಸ್ವಸ್ತಿಸ್ತು ತೇ ಕುಶಲಮಸ್ತು ಚಿರಾಯುರಸ್ತು ಗೋ ಹಸ್ತಿ ವಾಜಿ ಧನಧಾನ್ಯ ಸಮೃದ್ಧಿರಸ್ತು | ಐಶ್ಚರ್ಯಮಸ್ತು ವಿಜಯಸ್ತು ರಿಪುಕ್ಷಯಸ್ತು ಕಲ್ಯಾಣಮಸ್ತು ಸತತಂ ಶ್ರೀಹರಿ ಭಕ್ತಿರಸ್ತು
[01/04, 7:08 PM] Pandit Venkatesh. Astrologer. Kannada: ನಮಸ್ಕಾರ ಸ್ನೇಹಿತರ ಯುಗಾದಿ 2022 ದ್ವಾದಶರಾಶಿಗಳಿಗೆ ಆದಾಯ ಎಷ್ಟು ಖರ್ಚೆಷ್ಟು ಒಂದು ಸಣ್ಣ ಪಕ್ಷಿನೋಟ ನೋಡೋಣ ಬನ್ನಿ
1) ಮೇಷ ರಾಶಿ:-14 ಆದಾಯ14 ಖರ್ಚು
2) ವೃಷಭ ರಾಶಿ:- 8 ಆದಾಯ 8 ವ್ಯಯ
3) ಮಿಥುನ ರಾಶಿ:- 11 ಆದಾಯ 5 ಖರ್ಚು
4) ಕಟಕ ರಾಶಿ:- 5 ಆದಾಯ 5 ವ್ಯಯ
5) ಸಿಂಹ ರಾಶಿ:- 8 ಆದಾಯ 14 ಖರ್ಚು
6)ಕನ್ಯಾ ರಾಶಿ:- 11ಆದಾಯ 5 ವ್ಯಯ
7) ತುಲಾ ರಾಶಿ:- 8 ಆದಾಯ 8 ವ್ಯಯ
8) ವೃಶ್ಚಿಕ ರಾಶಿ:- 14 ಆದಾಯ 14ವ್ಯಯ
9) ಧನು ರಾಶಿ:-2 ಆದಾಯ 8 ವ್ಯಯ
10) ಮಕರ ರಾಶಿ:- 5 ಆದಾಯ 2 ವ್ಯಯ
11) ಕುಂಭ ರಾಶಿ:- 5 ಆದಾಯ  2ವ್ಯಯ
12) ಮೀನ ರಾಶಿ:-2ಆದಾಯ 8ವ್ಯಯ
[01/04, 7:22 PM] Pandit Venkatesh. Astrologer. Kannada: ಹಿಂದೂಗಳು ಪ್ರಾಣಿ ಬಲಿ ನೀಡುವಾಗ ಅನುಸರಿಸಬೇಕಾದ ಕ್ರಮ.

ಮೊದಲೇ ನಿಶ್ಚಯಿಸಿದ ಆರೋಗ್ಯವಾಗಿ ಇರುವ ಪ್ರಾಣಿಗೆ ಹೂವಿನ ಹಾರ ಹಾಕಿ, ಅರಸಿನ ಕುಂಕುಮ ಹಚ್ಚಿ " ಚಾಗಾಯ ಪಶುವೇ ನಮಃ " ಎಂದು ಗಂಧ ಅಕ್ಷತೆ ಪುಷ್ಪ ಇವುಗಳಿಂದ ಪೂಜಿಸಬೇಕು. ನಂತರ ಪಶುವಿನ ಕಿವಿಯಲ್ಲಿ " ಓಂ ಪಶು ಪಾಶಾಯ ವಿದ್ಮಹೇ! ವಿಶ್ವ ಕರ್ಮಣಿ ಧೀಮಹಿ! ತನ್ನೋ ಜೀವಃ ಪ್ರಚೋದಯಾತ್!! ಎಂದು ಮೂರು ಬಾರಿ ಹೇಳಿ  "ಫಟ್" ಬೀಜಮಂತ್ರ ಹೇಳುತ್ತಾ ಕಲಶದ ನೀರನ್ನು ಅದರ ಮೇಲೆ ಪ್ರೋಕ್ಷಿಸಬೇಕು. ನೋವು ಹಿಂಸೆ ಆಗದಂತೆ ಅದನ್ನು ವಧಿಸಿ ದೇವರಿಗೆ ನೈವೇದ್ಯ ಇಡಬೇಕು.
[01/04, 9:56 PM] Pandit Venkatesh. Astrologer. Kannada: ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು 🌺🌺🌺

 ಯುಗಾದಿ ಹಬ್ಬವನ್ನು ಆಚರಿಸುವುದರ ಮಹತ್ವ ಮತ್ತು ಕಾರಣಗಳು

ಎಲ್ಲ ವರ್ಷಾರಂಭಗಳಲ್ಲಿ ಅತ್ಯಂತ ಯೋಗ್ಯ ವರ್ಷಾರಂಭದ ದಿನವೆಂದರೆ ‘ಚೈತ್ರ ಶುಕ್ಲ ಪ್ರತಿಪದೆ. ’ಜನವರಿ ೧ ರಂದು ವರ್ಷಾರಂಭವನ್ನು ಏಕೆ ಮಾಡಬೇಕು ಎನ್ನುವುದಕ್ಕೆ ಯಾವುದೇ ಕಾರಣ ಇಲ್ಲ. ಯಾರೋ ಒಬ್ಬರು ನಿರ್ಧರಿಸಿದರು ಮತ್ತು ಅದು ಪ್ರಾರಂಭವಾಯಿತು. ತದ್ವಿರುದ್ಧ ಚೈತ್ರ ಶುಕ್ಲ ಪ್ರತಿಪದೆಯಂದು ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.

ನೈಸಗಿಕ ಕಾರಣಗಳು: ಸರಿಸುಮಾರು ಪ್ರತಿಪದೆಯ ಸಮಯದಲ್ಲಿ ಸೂರ್ಯನು ವಸಂತ – ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷುವವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು) ಮತ್ತು ವಸಂತ ಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತುವು ನನ್ನ ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ (೧೦:೩೫) ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ. ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ ಮತ್ತು ಪ್ರತಿಪದೆಯ ಸಮಯದಲ್ಲಿ ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು ಚೆನ್ನಾಗಿ ಕಾಣುತ್ತವೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಉತ್ಪತ್ತಿಯ ಕಾಲಚಕ್ರಕ್ಕೆ ಸಂಬಂಧಿಸಿದೆ. ಆದುದರಿಂದ ಸೃಷ್ಟಿಯು ನವಚೇತನದಿಂದ ತುಂಬಿರುತ್ತದೆ. ತದ್ವಿರುದ್ಧವಾಗಿ ಡಿಸೆಂಬರ್ ೩೧ ರಂದು ರಾತ್ರಿ ೧೨ ಗಂಟೆಗೆ ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಲಯಕಾಲಕ್ಕೆ ಸಂಬಂಧಿಸಿದೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ತುಲನೆಯನ್ನು ಸೂರ್ಯೋದಯಕ್ಕೆ ಉದಯವಾಗುವ ತೇಜೋಮಯ ದಿನದೊಂದಿಗೆ ಮಾಡಬಹುದು.

ನಿಸರ್ಗದ ನಿಯಮವನ್ನು ಅನುಸರಿಸಿ ಮಾಡಿದ ವಿಷಯಗಳು ಮನುಷ್ಯರಿಗೆ ಪೂರಕವಾಗಿರುತ್ತವೆ ಮತ್ತು ಅದಕ್ಕೆ ವಿರುದ್ಧವಾಗಿ ಮಾಡಿರುವ ವಿಷಯಗಳು ಮನುಷ್ಯರಿಗೆ ಹಾನಿಕಾರಿಯಾಗಿರುತ್ತವೆ. ಆದುದರಿಂದ ಪಾಶ್ಚಾತ್ಯ ಸಂಸ್ಕೃತಿಗನುಸಾರ ಜನವರಿ ಒಂದರಂದು ಹೊಸವರ್ಷಾರಂಭವನ್ನು ಮಾಡದೇ, ಯುಗಾದಿ ಪಾಡ್ಯದಂದೇ ಹೊಸವರ್ಷವನ್ನು ಆಚರಿಸುವುದರಲ್ಲಿ ನಮ್ಮ ನಿಜವಾದ ಹಿತವಿದೆ.

ಐತಿಹಾಸಿಕ ಕಾರಣಗಳು: ಈ ದಿನದಂದು ರಾಮನು ವಾಲಿಯನ್ನು ವಧಿಸಿದನು. ವಿಜಯದ ಪ್ರತೀಕವು ಎತ್ತರದಲ್ಲಿರುತ್ತದೆ. ಹಾಗಾಗಿ ಬ್ರಹ್ಮಧ್ವಜ ಎತ್ತರದಲ್ಲಿರುತ್ತದೆ. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು, ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದನು.

ಆಧ್ಯಾತ್ಮಿಕ ಕಾರಣಗಳು : ಬ್ರಹ್ಮದೇವನು ಇದೇ ದಿನದಿಂದು ಸೃಷ್ಟಿಯನ್ನು ನಿರ್ಮಿಸಿದನು. ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ. ಯುಗಾದಿಯಂದು ತೇಜ ಮತ್ತು ಪ್ರಜಾಪತಿ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಸೂರ್ಯೋದಯದ ಸಮಯದಲ್ಲಿ ಈ ಲಹರಿಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವು ಹೆಚ್ಚಿನ ಸಮಯದವರೆಗೆ ಉಳಿಯುತ್ತದೆ. ಅದು ಜೀವದ ಜೀವಕೋಶಗಳಲ್ಲಿ ಸಂಗ್ರಹವಾಗುತ್ತದೆ ಹಾಗೂ ಅವಶ್ಯಕತೆಗನುಸಾರ ಆ ಜೀವದಿಂದ ಉಪಯೋಗಿಸಲ್ಪಡುತ್ತದೆ.

*ಯುಗಾದಿ ಹಬ್ಬದ ಮಹತ್ವ* 

ಚೈತ್ರಮಾಸಕ್ಕೆ  ವಿಷ್ಣು  ನಿಯಾಮಕ 
ಚೈತ್ರ ಶುಕ್ಲ ಪ್ರತಿಪತ್ತಿನoದು ಯುಗಾದಿ ಹಬ್ಬದ ದಿನ ನೂತನ ವರ್ಷಾರಂಭ
*ಈ ದಿನ ಅರುಣೋದಯದ ಕಾಲದಲ್ಲಿಯೇ ಎದ್ದು ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾ -ದೇವರ ಮನೆಗೆ ಹೋಗಿ ದೇವರ ಮುoದೆ ಇಟ್ಟಿರುವ  ಪಂಚಾoಗ ,ತರಕಾರಿಗಳು -ಧಾನ್ಯಗಳು ,ಫಲ-ತಾoಬೂಲಗಳು ಎಣ್ಣೆ ನೆಲ್ಲಿಕಾಯಿ* *ಮುoತಾದ ವಸ್ತುಗಳನ್ನು ಹೊಸ ಕನ್ನಡಿಯ ಮೂಲಕ ನೋಡಬೇಕು* .ಯಾವ ಯಾವ ವಸ್ತುಗಳನ್ನು ಕನ್ನಡಿಯ ಮೂಲಕ ನೋಡುವೇವೋ ಅವುಗಳನ್ನು ಬಿoಬರೂಪಿ ಪರಮಾತ್ಮನು ದೊರಕಿಸಿಕೋಡುವನು. ಮುಖಪ್ರಕ್ಷಾಲನೆಯನ್ನು ಮಾಡಿ *ಗಜೇoದ್ರ ಮೋಕ್ಷಪಾರಯಣ ಮಾಡಬೇಕು*

ಯುಗಾದಿಯಂದು ಪ್ರತಿಯೋಬ್ಬನು
ಅಭ್ಯoಜನ ಮಾಡಲೇಬೇಕು . ಈ ಮೊದಲು ಪೂಜಕನು ಸ್ನಾನ ಮಾಡಿ *ಭಗವoತನಿಗೆ ಎಣ್ಣೆ ಸೀಗೆಪುಡಿ -ಬಿಸಿನಿರಿನಿoದ ಅಭ್ಯoಜನವನ್ನು ಮಾಡಿಸಬೇಕು . ಭಗವಂತನಿಗೆ* *ಮಾಡಿ ಉಳಿದ ಎಣ್ಣೆ -ಸೀಗೆಪುಡಿಗೆ ಬೇರೆ ಎಣ್ಣೆ ,ಸೀಗೆಪುಡಿಯನ್ನು ಬೆರೆಸಿ ಪ್ರತಿಯೋಬ್ಬರು ಹಚ್ಚಿಕೊoಡು ನಂತರ ಸ್ನಾನ ಮಾಡಬೇಕು.*

*ಸಪ್ತಚಿರoಜೀವಿಸ್ಮರಣೆ*

ಎಣ್ಣೆಯನ್ನು ಹಚ್ಚಿಕೊಳ್ಳುವಾಗ ಅಶ್ವತ್ಥಾಮಾದಿ ಸಪ್ತ ಚಿರoಜೀವಿಗಳನ್ನು ಮಾರ್ಕoಡೇಯನನ್ನು ಈ ಕೆಳಗೆ ಕೊಟ್ಟಿರುವ ಮಂತ್ರವನ್ನು ಹೇಳಿ  ಸ್ಮರಿಸಬೇಕು .

अश्वत्तामा बलिर्व्यास: हनूमांश्च विभीषण: । कृप: परशुरामश्च सप्तैते चिरंजीविन: ।

ಅಶ್ವತ್ತಾಮಾ ಬಲಿರ್ವ್ಯಾಸ: ಹನೂಮಾಂಶ್ಚ ವಿಭೀಷಣ: | ಕೃಪ: ಪರಶುರಾಮಶ್ಚ ಸಪ್ತೈತೇ ಚಿರಂಜೀವಿನ: |

ಅಭ್ಯoಜನವನ್ನು ಮಾಡಿದ ನಂತರ ಭಗವಂತನ ವಿಶೇಷ ಪೂಜೆಯನ್ನು  ಮಾಡಿ ನಂತರ ಹೊಸಬಟ್ಟೆಯನ್ನು ಧರಿಸಿ ನಿoಬಕ ದಳ ಬಕ್ಷಣ 
(ಬೇವು -ಬೆಲ್ಲ)ವನ್ನು ಮಾಡಬೇಕು

*ಬೇವು ಬೆಲ್ಲ ಭಕ್ಷಣೆ ಮಾಡುವಾಗ ಹೇಳಬೇಕಾದ ಮ oತ್ರ*

*शतायुर्वज्रदेहाय सर्वसंपत्कराय च  सर्वारिष्टविनाशाय निंबकदळभक्षणम*् 

*ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಮ್ |*

*ನೂರು ವರ್ಷಆಯುಸ್ಸು -ವಜ್ರದಂತೆ ಧೃಢವಾದ ಶರೀರ ಸರ್ವಸಂಪತ್ತು ಸರ್ವರಿಷ್ಟನಾಶ* *ಇವುಗಳಿಗಾಗಿ  ಯುಗಾದಿಯoದು ಬೇವು ಬೆಲ್ಲಗಳ ಭಕ್ಷಣೆ ಮಾಡಬೇಕು*
*ನಂತರ ಪಂಚಾoಗ ಶ್ರವಣಮಾಡಬೇಕು*
[02/04, 7:15 AM] Pandit Venkatesh. Astrologer. Kannada: *ಆತ್ಮೀಯರಿಗೆ ಮತ್ತು ಸಹಕುಟುಂಬ ಮಿತ್ರಬಾಂಧವರಿಗೆ,ನೂತನ ಶುಭಕೃತುನಾಮಸಂವತ್ಸರದ ಚಾಂದ್ರಮಾನ ಯುಗಾದಿಯ ಶುಭಾಶಯಗಳು. ಪರಮಾತ್ಮನ ಕೃಪಾಶೀರ್ವಾದಗಳು ಎಲ್ಲರಿಗೂ ದೊರೆತು ನೂತನ ಸಂವತ್ಸರವು ಆಯುರಾರೋಗ್ಯ ಐಶ್ವರ್ಯ ಸುಖ ಶಾಂತಿ ಸಮೃದ್ಧಿ ನೆಮ್ಮದಿಗಳನ್ನು ಹೇರಳವಾಗಿ ತರಲಿ.ರಾಷ್ಟ್ರದ ನೆಮ್ಮದಿ ಅಭಿವೃದ್ಧಿಗಾಗಿ ಅಹರ್ನಿಶಿ *ಸ್ವ* *ವನ್ನು ಬದಿಗೊತ್ತಿ ದುಡಿಯುತ್ತಿರುವ ರಾಷ್ಟ್ರಪುರುಷನಿಗೂ ಅವರ ಸಹೋದ್ಯೋಗಿಗಳಿಗೂ ಎಲ್ಲ ರೀತಿಯ ದೈವಾನುಕೂಲ ಒದಗಿಬರಲಿ.ರಾಷ್ಟ್ರ ತನ್ನ ಹಿಂದಿನ ಪರಂವೈಭವದತ್ತ ಸಾಗಲಿ*
[02/04, 7:17 AM] Pandit Venkatesh. Astrologer. Kannada: *ಚೈತ್ರ ಶುದ್ಧ ಪಾಡ್ಯಮಿ*

ಬ್ರಹ್ಮದೇವನಿಗೆ ದಿನದ ಆದಿ ˌ
ಮನುಜರಿಗೆ ಸಂವತ್ಸರದ ಆದಿ ˌ
ಅದುವೇ ಸಂಭ್ರಮದ ಯುಗಾದಿ

 ˌಯುಗದ ಆದಿ - ಯುಗಾದಿ - ಉಗಾದಿ .

ಹರಿಯು ಮತ್ಸ್ಯಾವತಾರ ತಳೆದು ˌ
         ಶರಧಿಯಲಿ ಅಡಗಿದ್ದ 
ಸೋಮಕಾಸುರನ ಹತಗೈದು ˌ
ಅಪಹೃತ ವೇದಗಳನೈತಂದು ˌ
ಮರಳಿ ಬ್ರಹ್ಮನಿಗೊಪ್ಪಿಸಿದ ಸುದಿನ .

ಚತುರ್ವೇದಗಳ ಪುನರ್ಪಡೆದ ಕಮಲಜ ˌ
ಸೃಷ್ಟಿಕ್ರಿಯೆಯಾರಂಭಿಸಿದ ಮಹಾದಿನ ˌ
ಚೈತ್ರಮಾಸದ ಪ್ರಥಮ ದಿನ ˌ
ವಸಂತನಾಗಮನ ಸೂಚಿಪ ದಿನ
ಕವಿ ˌ ಕೋಗಿಲೆಗಳಿಗೆ ಪರಮಾಪ್ತ ದಿನ .

ಸಂವತ್ಸರಗಳ ಲೆಕ್ಕಿಸಲು ˌ
ನಕ್ಷತ್ರಾಗಮನವ ಗಣಿಸಲು ˌ
( ಉ = ನಕ್ಷತ್ರ ˌ ಗ = ಗಮನ )
ಪ್ರಾರಂಭಿಸಿದ ಪುಣ್ಯದಿನ .

ದೇಶದೆಲ್ಲೆಡೆಯಲ್ಲೂ ˌ
ಸಮಷ್ಟಿಯಿಂದಾಚರಿಪ 
          ಮಹಾಪರ್ವದಿನ .

ಕನ್ನಡ - ತೆಲುಗು - ಮರಾಠಿಗರಿಗೆ
                ಚಾಂದ್ರಮಾನ ದಿನ ˌ
ಪಂಜಾಬಿ ˌ ಅಸ್ಸಾಮಿ ˌ ಮಲೆಯಾಳಿಗರಿಗೆ 
ಬೇರೆಯದೇ ಉಂಟು  ಸೌರಮಾನ ದಿನ .

ಕರ್ನಾಟಕದಲಿ *ಯುಗಾದಿ*  ಯೆಂದೂ ˌ
ತೆಲುಗುದೇಶದಲಿ *ಉಗಾದಿ*  ಎಂದೂ ˌ
ಪಂಜಾಬಿನಲಿ *ವೈಶಾಖಿ* ಯೆಂದೂ ˌ
ಕೇರಳದಲಿ *ಕೊಲ್ಲವರ್ಷಂ* ಎಂದೂ ˌ
ಮಹಾರಾಷ್ಟ್ರದಲಿ *ಗುಡಿಪದವ* ( *ಗುಡಿಪರ್ವ* ) ˌವೆಂದೂ ˌ
ಅಸ್ಸಾಮಿನಲಿ *ಬಿಹು* ಹಬ್ಬವೆಂದೂ ˌ 
ಆಚರಿಪ ಸಾರ್ವತ್ರಿಕ ಪರ್ವದಿನ ˌ

ಅಭ್ಯಂಗವ ಮಾಡಿ ˌ ನವ ವಸನವನುಟ್ಟು ˌ
ಮಾವು - ಬೇವಿನ ತೋರಣ ಕಟ್ಟಿ ˌ
ದೇವತಾರ್ಚನೆ ಗೈದು .
ಬೇಳೆಹೂರಣದ ಹೋಳಿಗೆಯ ನಿವೇದಿಸಿ ˌ
ಬೇಪೂತ ಪಚ್ಚಡಿ ತಿಂದು ˌ
ಬೇವು ˌ ಬೆಲ್ಲ ˌ ಹುಣಿಸೆ ˌ ಮೆಣಸು ˌ ಉಪ್ಪು ˌ ಮಾವಿನಕಾಯಿ  ಇತ್ಯಾದಿ 
ಷಡ್ರಸಗಳ ಆಸ್ವಾದಿಸಿ ಖುಷಿಪಡುವ ದಿನ .

ತಿಥಿ ˌ ವಾರ ˌ ನಕ್ಷತ್ರ ˌ ಯೋಗ ˌ ಕರಣಗಳೆಂಬ 
ಪಂಚಾಂಗಗಳ ಗುಣಿಸಿ ˌ ಗಣಿಸಿ ˌ ಓದಿ ಅರ್ಥೈಸಿ ನಲಿವ ದಿನ .
ಮುಂಬರುವ ತೊಡಕುಗಳ ˌ
ಆಯ - ವ್ಯಯಗಳ ˌ 
ರೋಗಾರೋಗ್ಯಗಳ ˌ
ಮಳೆ - ಬೆಳೆಗಳ 
ಮುನ್ಸೂಚನೆಯ ಓದಿ ತಿಳಿವ ದಿನ .
ಕೆಲವೆಡೆ ಕವಿಗೋಷ್ಟಿ ˌ ಕವಿಸಮ್ಮೇಳನಗಳ ನಡೆಸುವ ದಿನ .
ನಮ್ಮಜಗಲಿಗಳಲ್ಲಿ ˌ
ಕಾವ್ಯಧಾರೆಯನೆರೆದು ˌ
ಶುಭಾಶಯಗಳ ವಿನಿಮಯಿಸಿ 
                           ಓದಿ ನಲಿದು 
ಮನಸಾರೆ ಖುಷಿಪಡುವ ದಿನ.

" ಶತಾಯುರ್ವಜ್ರ ದೇಹಾಯ 
ಸರ್ವಸಂಪತ್ಕರಾಯಚ 
ಸರ್ವಾರಿಷ್ಟ ವಿನಾಶಾಯ 
ನಿಂಬಕದಳ ಭಕ್ಷಣಂ "
ಎಂದು ಹೇಳಿಕೊಳ್ಳುತ್ತಾ 
ಬೇವು - ಬೆಲ್ಲದ ರುಚಿಯ 
ಸಮಭಾವದಿ ಸ್ವೀಕರಿಸುವ
ಯುಗಾದಿ-  ವರುಷದ ಆದಿ ˌ
               ಹರುಷದ  ಹಾದಿ ˌ
        ಶುಭಾರಂಭಕ್ಕೆ ನಾಂದಿ 
ಆಗಲಿ ಸತ್ಕಾರ್ಯಗಳಿಗೆ          ಬುನಾದಿ .

ಸರ್ವರಿಗೂ *ಯುಗಾದಿ* ಯ
ಶುಭಾಕಾಂಕ್ಷೆಗಳೊಡನೆ ˌ
[02/04, 7:18 AM] Pandit Venkatesh. Astrologer. Kannada: ಯುಗಾದಿಪೂಜೆಯಲ್ಲಿ ಬೇವು-ಬೆಲ್ಲ-ಹೋಳಿಗೆಯ ಪಾತ್ರ!
ಯುಗಾದಿಯೆಂದರೆ ಬೇವು ಬೆಲ್ಲ, ಒಬ್ಬಟ್ಟು (ಹೋಳಿಗೆ), ಪಂಚಾಂಗ ಶ್ರವಣ ಮತ್ತು ಬೇಂದ್ರೆ ಕವನ!..
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ..
ಯುಗಯುಗಗಳು ಕಳೆದರೂ ಮರಳಿ ಬರುತ್ತಲೇ ಇರುವ ಯುಗಾದಿಯು ಪ್ರತಿವರುಷವೂ ಹೊಸೆದು ಹೊಸೆದು ತರುವ ಹೊಸತು ಹೊಸತಾದ ಹರ್ಷವನ್ನು ಕವಿಯು ಸಾರಿದ್ದಾರೆ. ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ ಹಾಗೂ ಸರ್ವೇ ಸಾಮಾನ್ಯವಾಗಿ ಜೀವನದ ಸಿಹಿಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ. ಯುಗಾದಿಪೂಜೆಯಲ್ಲಿ ಬೇವು-ಬೆಲ್ಲ-ಹೋಳಿಗೆಯ ಬಗ್ಗೆ ಸ್ವಲ್ಪ ತಿಳಿದಿಕೊಳ್ಳೋಣ.
ಬೇವಿನ ಗುಣಗಳು
ಬೇವಿನ ಸೇವನೆಯು ಕಣ್ಣಿಗೆ ಹಿತವನ್ನುಂಟುಮಾಡುತ್ತದೆ. ಕ್ರಿಮಿ-ಪಿತ್ತ ಹಾಗೂ ವಿಷಗಳನ್ನು ನಾಶಮಾಡುತ್ತದೆ, ವಾತಕಾರಕವಾಗಿದೆ. ಜೀರ್ಣಾನಂತರದ ವಿಪಾಕದಲ್ಲಿ ಕಟು ಭಾವವನ್ನು ಹೊಂದಿರುತ್ತದೆ ಹಾಗೂ ಎಲ್ಲಾ ರೀತಿಯ ಚರ್ಮದ ಕಾಯಿಲೆಗಳನ್ನು ಮತ್ತು ನಾಲಿಗೆಗೆ ರುಚಿ ಇಲ್ಲದಿರುವ ಅರುಚಿ ರೋಗವನ್ನು ದೂರ ಅಟ್ಟುತ್ತದೆ.
ವಿಶೇಷವಾಗಿ ಬೇವಿನ ಎಲೆಗಳಿಗೆ ಊತವನ್ನು ತಗ್ಗಿಸುವ, ಚರ್ಮವನ್ನು ಉತ್ತೇಜಿಸುವ, ಚರ್ಮದ ಕಾಯಿಲೆಗಳನ್ನು ನಿವಾರಿಸುವ, ಹುಣ್ಣುಗಳನ್ನು ಶುದ್ಧಗೊಳಿಸುವ, ವಾಸಿ ಮಾಡುವ, ಯಕೃತ್ತಿಗೆ ಹಿತವನ್ನು ಉಂಟುಮಾಡುವ ಹಾಗೂ ಕ್ರಿಮಿಗಳನ್ನು ನಾಶಮಾಡುವ ಗುಣವಿದೆ. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದ್ದೇ ಆದರೆ ಇದು ವಾಂತಿಯನ್ನುಂಟುಮಾಡುತ್ತದೆ.
ಬೇವಿನ ಹೂಗಳ ಶೀತಕಷಾಯವು ಜ್ವರ ಬಿಟ್ಟನಂತರ ಕಾಡುವ ದುರ್ಬಲತೆಯನ್ನು ಹೋಗಲಾಡಿಸುತ್ತದೆ ಹಾಗೂ ಜೀರ್ಣ ವಿಕಾರಗಳನ್ನು ಸರಿಪಡಿಸುತ್ತದೆ.
ಚಿಕಿತ್ಸಾ ಉದ್ದೇಶಗಳಿಗಾಗಿ ಎಲೆಯ ರಸವನ್ನು ಒಂದರಿಂದ ಎರಡು ತೊಲ ಅಂದರೆ ೨-೪ ಚಮಚ ಸೇವಿಸಬೇಕು.
ಬೆಲ್ಲದ ಗುಣಗಳು
ಹೊಸಬೆಲ್ಲ ಹಾಗೂ ಹಳೇಬೆಲ್ಲಗಳಿಗೆ ಗುಣಕರ್ಮದಲ್ಲಿ ವ್ಯತ್ಯಾಸವಿದೆ. ಹೊಸಬೆಲ್ಲವು ವೀರ್ಯವರ್ಧಕವಾಗಿದ್ದು ಜೀರ್ಣಕ್ಕೆ ಭಾರವಾಗಿರುತ್ತದೆ. ಸ್ನಿಗ್ಧ ಗುಣವನ್ನು ಹೊಂದಿದ್ದು ವಾತವನ್ನು ನಿಗ್ರಹಿಸುತ್ತದೆ. ಮೂತ್ರವನ್ನು ಶುದ್ಧಗೊಳಿಸುತ್ತದೆ. ಸ್ವಲ್ಪ ಮಟ್ಟಿಗೆ ಪಿತ್ತವನ್ನು ತಹಬದಿಗೆ ತರುತ್ತದೆ ಹಾಗೂ ಶರೀರದಲ್ಲಿ ಮೇದಸ್ಸು, ಕಫ ಹಾಗೂ ಬಲಗಳನ್ನು ವೃದ್ಧಿಸುತ್ತದೆ.
ಹಳೇ ಬೆಲ್ಲವು ಲಘು ಗುಣವನ್ನು ಪಡೆದಿದೆ. ಶರೀರಕ್ಕೆ ಅತ್ಯಂತ ಹಿತವನ್ನುಂಟು ಮಾಡುತ್ತದೆ. ಕಫವನ್ನು ಶೀಘ್ರವಾಗಿ ಹೆಚ್ಚಿಸುವುದಿಲ್ಲ. ಹಸಿವನ್ನು ಹೆಚ್ಚಿಸುತ್ತದೆ. ಶರೀರಕ್ಕೆ ಪುಷ್ಠಿಯನ್ನು ನೀಡುತ್ತದೆ. ಪಿತ್ತವನ್ನು ನಿವಾರಿಸುತ್ತದೆ. ಮಧುರ ರಸವನ್ನು ಹೊಂದಿದ್ದು ವೀರ್ಯವರ್ಧನೆಯನ್ನುಂಟುಮಾಡಿ ವಾತವನ್ನು ನಿಗ್ರಹಿಸುತ್ತದೆ. ರಕ್ತವನ್ನು ದೋಷಗಳಿಂದ ಮುಕ್ತಗೊಳಿಸುತ್ತದೆ. ಹೊಚ್ಚ ಹೊಸ ಬೆಲ್ಲವು ಕಫ, ಕೆಮ್ಮು ದಮ್ಮಿನ ತೊಂದರೆಯನ್ನು ಉಂಟುಮಾಡುತ್ತದೆ. ಹಸಿವನ್ನು ಹೆಚ್ಚಿಸುತ್ತದೆ.
ಬೆಲ್ಲವನ್ನು ವಿವಿಧ ಅನುಪಾನಗಳೊಡನೆ ಸೇವಿಸಿದಾಗ ಅದರ ಗುಣಕರ್ಮಗಳು ಭಿನ್ನವಾಗಿವೆ. ಉದಾಹರಣೆಗೆ ಬೆಲ್ಲವನ್ನು ಹಸಿ ಶುಂಠಿಯ ಜೊತೆ ತಿಂದರೆ ಕಫವನ್ನು ಕೂಡಲೇ ಕಮ್ಮಿ ಮಾಡುತ್ತದೆ. ಅಳಲೇಕಾಯಿಯೊಡನೆ ತಿಂದರೆ ಪಿತ್ತವನ್ನು ದೂರಮಾಡುತ್ತದೆ. ಒಣಶುಂಠಿಯೊಡನೆ ತಿಂದರೆ ಪಿತ್ತವನ್ನು ದೂರೀಕರಿಸುತ್ತದೆ. ಒಣಶುಂಠಿಯೊಡನೆ ತಿಂದಾಗ ಸಂಪೂರ್ಣ ವಾತಸಂಬಂಧಿ ವಿಕಾರಗಳು ದೂರವಾಗುತ್ತವೆ. ಈ ರೀತಿ ಮೂರು ವಿಧವಾದ ದೋಷಗಳನ್ನು ದೂರ ಮಾಡುವ ಬೆಲ್ಲವು ಸರ್ವೋತ್ತಮವಾಗಿದೆ.
ಹೋಳಿಗೆ
ಆಯುರ್ವೇದ ರೀತಿ ಮೈದಾ ಮುಖ್ಯ ಘಟಕವಾಗಿರುವ ಹೋಳಿಗೆಗೆ ಬೃಂಹಣ ಅಂದರೆ ರಸ ರಕ್ತಾದಿಧಾತುಗಳನ್ನು ವರ್ಧಿಸುವ ಗುಣವಿದೆ. ಇದರ ಸೇವನೆಯು ವೀರ್ಯವರ್ಧಕವಾಗಿದ್ದು ಬಲವನ್ನೀಯುತ್ತದೆ. ಅತ್ಯಂತ ರುಚಿಯುಕ್ತವಾಗಿರುತ್ತದೆ. ಪಚನಾನಂತರ ವಿಪಾಕದಲ್ಲಿ ಮಧುರ ರಸವನ್ನು ಹೊಂದಿದ್ದು ಇದರ ಸೇವನೆಯು ತ್ರಿದೋಷನಾಶಕವಾಗಿದ್ದು ಲಘುಗುಣವನ್ನು ಹೊಂದಿದೆ.
ಹೀಗೆ ಈ ಯುಗಾದಿ ಹಬ್ಬದಂದು ಆಚರಿಸುವ ಅನೇಕ ಕ್ರಮಗಳು ಇಡೀ ವಸಂತ ಋತುವಿನಲ್ಲಿ ಆರೋಗ್ಯಕ್ಕಾಗಿ ಅನುಸರಿಸಬೇಕಾದ ಕ್ರಮಗಳೇ ಆಗಿರುವುದರಿಂದ ಆ ದಿನ ಬಳಸುವ ಪದಾರ್ಥಗಳ ಗುಣಧರ್ಮಗಳುಳ್ಳ ಇತರ ಪದಾರ್ಥಗಳನ್ನು ಇಡೀ ವಸಂತ ಋತುಪೂರ್ತಿ ಆರೋಗ್ಯಕ್ಕಾಗಿ ಬಳಸಬೇಕೆಂಬುದು ಹಬ್ಬದ ಸಂಕೇತವಾಗಿದೆ.
ಯುಗಾದಿ ಹಬ್ಬದ ವೈಶಿಷ್ಟ್ಯವೆಂದರೆ ಆ ದಿನ ದೇವರ ಪೂಜೆ, ತೀರ್ಥಪ್ರಸಾದದ ನಂತರ ಬೇವು ಬೆಲ್ಲವನ್ನು ಸ್ವೀಕರಿಸುವುದು. ಈ ರೀತಿ ಸೇವಿಸುವುದರ ಪ್ರಯೋಜನಗಳನ್ನು ಈ ರೀತಿ ಹೇಳಲಾಗಿದೆ;
ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ |
ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಂ ||
ಅಂದರೆ ನೂರು ವರ್ಷಗಳ ಆಯಸ್ಸು, ಗಟ್ಟಿ ಮುಟ್ಟಾದ ಆರೋಗ್ಯ, ಎಲ್ಲ ರೀತಿಯ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಎಲ್ಲ ರೀತಿಯ ಕೆಡಕುಗಳ ನಿವಾರಣೆಗಾಗಿಯೂ ಬೇವು, ಬೆಲ್ಲ ಸೇವನೆ ಮಾಡುತ್ತೇನೆಂದು ಹೇಳಬೇಕು.
ಯುಗಾದಿಯ ದಿನ ಈ ರೀತಿ ಸೇವನೆ ಮಾಡುವುದರಿಂದ ವ್ಯಾಧಿಗಳು ನಾಶವಾಗುತ್ತವೆ. ಸುಖ, ವಿದ್ಯೆ, ಆಯಸ್ಸು, ಧನ ಪ್ರಾಪ್ತವಾಗುತ್ತವೆ. ಸೇವಿಸುವ ಎಲೆಗಳು ಕೋಮಲವಾಗಿರಬೇಕೆಂಬುದು ವಿಶೇಷ ಸೂಚನೆ.
ಆಯುರ್ವೇದದಲ್ಲಿ ಬೇವಿನ ಎಲೆಗಳ ಚೂರ್ಣವನ್ನು ಮೆಣಸು, ಇಂಗು, ಉಪ್ಪು, ಓಮ, ಬೆಲ್ಲ ಹಾಗೂ ಹುಣಸೇಹಣ್ಣಿನೊಡನೆ ಬೆರೆಸಿ ಸೇವಿಸಬೇಕೆಂಬ ವಿಧಾನವೂ ಇದೆ. ಇದರಿಂದ ರೋಗಗಳು ಶಾಂತವಾಗುತ್ತವೆ ಎಂಬ ಪ್ರತೀತಿ ಇದೆ.
ಹಬ್ಬಹರಿದಿನಗಳನ್ನು ಆಚರಿಸುವಾಗ ಅವುಗಳಲ್ಲಿ ಅಡಕವಾಗಿರುವ ಆರೋಗ್ಯದಾಯಕ ಮತ್ತು ರೋಗ ನಿವಾರಕ ಗುಣಗಳನ್ನು ಅರಿತಾಗ ಆಚರಣೆಗೆ ಹೆಚ್ಚಿನ ಮಹತ್ವ ಹಾಗೂ ಅರ್ಥ ಸಿಗುತ್ತದೆ.
ಶುಭಕೃತ ಸಂವತ್ಸರವನ್ನು ಸ್ವಾಗತಿಸುತ್ತಾ, ಯುಗಾದಿಯಂದು ಮನೆಮಂದಿಯೆಲ್ಲಾ ಆಭ್ಯಂಜನ ಮಾಡಿ, ಭಗವಂತನಲ್ಲಿ ಆಯುರಾರೋಗ್ಯವನ್ನು ಬೇಡುತ್ತಾ, ಬೇವುಬೆಲ್ಲವನ್ನು ಸವಿಯೋಣ. ಹಬ್ಬದ ಸಾರ್ಥಕತೆಯನ್ನು ಅನುಭವಿಸೋಣ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು! ಶುಭಕೃತ ಸಂವತ್ಸರ ಸರ್ವರಿಗೂ ಶುಭ, ಸಮೃದ್ಧಿ ತರಲಿ.. ಎಲ್ಲರಿಗೂ ಶುಭವಾಗಲಿ.. ಲೋಕಾಃ ಸಮಸ್ತಾಃ ಸುಖಿನೋ ಭವಂತು!
ಶ್ರೀಕೃಷ್ಣಾರ್ಪಣಮಸ್ತು
[02/04, 7:53 AM] Pandit Venkatesh. Astrologer. Kannada: 🕉️ ಹಿಂದೂ ಭಕ್ತರ ವೇದಿಕೆ🕉️

🌞 *ಚಾಂದ್ರಮಾನ ಯುಗಾದಿ ಎಂದರೇನು..? ಸೌರಮಾನ ಯುಗಾದಿ ಎಂದರೇನು..?* 🌞


ಯುಗಾದಿ ಹಬ್ಬವನ್ನು ಸಾಮಾನ್ಯವಾಗಿ ದೇಶದ ಮೂಲೆ ಮೂಲೆಯಲ್ಲೂ ಆಚರಿಸುತ್ತಾರೆ. ಕರ್ನಾಟಕದ ಹಲವಾರು ಕಡೆ ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ, ಕರಾವಳಿ ಭಾಗದಲ್ಲಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಹಾಗಾದರೆ, ಸೌರಮಾನ ಯುಗಾದಿ ಮತ್ತಿ ಚಾಂದ್ರಮಾನ ಯುಗಾದಿಗೂ ಇರುವ ವ್ಯತ್ಯಾಸವೇನು..? ಈ ಯುಗಾದಿಗಳು ಭಿನ್ನ ಭಿನ್ನವೇ.? ಈ ಯುಗಾದಿಯ ಮಹತ್ವವೇನು..?

1. ಯುಗಾದಿಯ ಅರ್ಥ:

ಇಂದು ಅಂದರೆ ಏಪ್ರಿಲ್‌ 02 ರಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇಂದು ಚಾಂದ್ರಮಾನ ಯುಗಾದಿಯಾದರೆ,  ಏಪ್ರಿಲ್‌ 14 ರಂದು ಬುಧವಾರ ಸೌರಮಾನ ಯುಗಾದಿ ಹಬ್ಬವನ್ನು ಆಚರಿಸಲಾಗುವುದು. 'ಯುಗಾದಿ' ಎಂಬ ಪದವು ಸಂಸ್ಕೃತ ಭಾಷೆಯಿಂದ ಆಯ್ದುಕೊಂಡ ಪದವಾಗಿದ್ದು, 'ಯುಗ' ಎಂದರೆ 'ವಯಸ್ಸು' ಮತ್ತು 'ಆದಿ' ಎಂದರೆ 'ಪ್ರಾರಂಭ'. ಇದರರ್ಥ, "ಹೊಸ ಯುಗದ ಪ್ರಾರಂಭ" ಎಂದು. ಈ ಸಾಂಪ್ರದಾಯಿಕ ಹಬ್ಬವನ್ನು ಸಾಮಾನ್ಯವಾಗಿ ಮಾರ್ಚ್ ದ್ವಿತೀಯಾರ್ಧದಲ್ಲಿ ಅಥವಾ ಏಪ್ರಿಲ್ ನ ಪ್ರಾರಂಭದಲ್ಲಿ ಆಚರಿಸಲಾಗುತ್ತದೆ.



2. ವಿವಿಧ ರಾಜ್ಯದಲ್ಲಿ ಯುಗಾದಿ:

ವಿಂಧ್ಯ ಬೆಟ್ಟಗಳ ಉತ್ತರದಲ್ಲಿ ವಾಸಿಸುವವರು ಇದನ್ನು "ಬರ್ಹಸ್ಪತ್ಯಮಾನ" ಎಂದು ಆಚರಿಸುತ್ತಾರೆ. ವಿಂಧ್ಯ ಬೆಟ್ಟಗಳ ದಕ್ಷಿಣದಲ್ಲಿ ವಾಸಿಸುವ ಜನರು ಇದನ್ನು "ಸೌರಮಾನ" ಅಥವಾ "ಚಾಂದ್ರಮಾನ" ಎಂದು ಆಚರಿಸುತ್ತಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನರು ಮತ್ತು ಕರ್ನಾಟಕದಲ್ಲಿನ ಜನರು ಇದನ್ನು ಯುಗಾದಿ ಹಬ್ಬವೆಂದು ಆಚರಿಸಿದರೆ, ಇನ್ನು ಮಹಾರಾಷ್ಟ್ರದ ಜನರು ಇದೇ ಹಬ್ಬವನ್ನು 'ಗುಡಿ ಪಾಡ್ವಾ' ಎಂದು ಆಚರಿಸುತ್ತಾರೆ.



3. ಸೌರಮಾನ ಯುಗಾದಿ:

ಸೌರಮಾನ ಯುಗಾದಿಯನ್ನು ತಮಿಳುನಾಡಿನಲ್ಲಿ 'ವರುಷ ಪಿರಪ್ಪು', 'ಚಿತಿರೈವಿಶು', 'ಪುತಂಡು' ಎಂದು ಆಚರಿಸಲಾಗುತ್ತದೆ. ಕೇರಳ ಜನರು ಈ ಮಲಯಾಳಂ ರಾಶಿಚಕ್ರಗಳ ಹೊಸ ವರ್ಷವನ್ನು 'ವಿಷು' ಹೆಸರಿನೊಂದಿಗೆ ಆಚರಿಸುತ್ತಾರೆ. 'ಪೊಹೆಲಾ ಬೋಯ್ಷಾಕ್' ಮತ್ತು 'ನಬಾ ಬರ್ಷ' ಎನ್ನುವುದು ಬಂಗಾಳಿಯಲ್ಲಿ ಹೊಸ ವರ್ಷದ ದಿನವಾದರೆ, 'ಮಹಾ ವಿಷುಬ ಸಂಕ್ರಾಂತಿ' (ಪನ ಸಂಕ್ರಾಂತಿ) ಎಂಬುದು ಒರಿಸ್ಸಾದ ಹೊಸ ವರ್ಷ ದಿನ. 'ಬೊಹಾಗ್ ಬಿಹು' ಅಥವಾ 'ರೊಂಗಾಲಿ ಬಿಹು' ಎನ್ನುವುದು ಅಸ್ಸಾಮೀಯರ ಹೊಸ ವರ್ಷ. ಬೈಸಾಖಿಯಲ್ಲಿ ಪಂಜಾಬಿಗರು ಹೊಸ ವರ್ಷವನ್ನು ಆಚರಿಸುತ್ತಾರೆ. ಮಂಗಳೂರಿನಲ್ಲಿ ಈ ಹಬ್ಬವನ್ನು ವಿಷು ಹಬ್ಬವೆಂದು ಆಚರಿಸುತ್ತಾರೆ.

ಒಂದು ನಕ್ಷತ್ರದ ಅಂತರವನ್ನು ಸರಿದೂಗಿಸಲು ಸೂರ್ಯ, ಸುಮಾರು 13 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಸೂರ್ಯನನ್ನು ಕಾಣುವ ನಕ್ಷತ್ರವನ್ನು 'ಮಹಾನಕ್ಷತ್ರ' ಎಂದು ಕರೆಯಲಾಗುತ್ತದೆ. ಒಂದು ರಾಶಿಯನ್ನು ಆವರಿಸಲು ಸೂರ್ಯ 30 ಅಥವಾ 31 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಕೊನೆಯಲ್ಲಿ ಸೂರ್ಯ ಮತ್ತೊಂದು ನಕ್ಷತ್ರಕ್ಕೆ ದಾಟುತ್ತಾನೆ. ಆ ದಾಟುವ ಸಮಯವನ್ನು 'ಸಂಕ್ರಮಣ' ಎಂದು ಕರೆಯಲಾಗುತ್ತದೆ. ಈ ರೀತಿ, ಸೂರ್ಯ ಈ ಹನ್ನೆರಡು ರಾಶಿಗಳನ್ನು ಆವರಿಸಲು 365.25 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಸೌರ ಮಾರ್ಗದ ಪ್ರಕಾರ (ಭೂಮಿಗೆ ಸಂಬಂಧಿಸಿದಂತೆ), ವರ್ಷದಲ್ಲಿ 365.25 ದಿನಗಳಿವೆ. ಸೂರ್ಯ,ರೇವತಿ ನಕ್ಷತ್ರದಿಂದ ಅಶ್ವಿನಿ ನಕ್ಷತ್ರಕ್ಕೆ ದಾಟಿದ ಮರುದಿನವನ್ನು ಹೊಸ ವರ್ಷದ ದಿನವೆಂದು ಪರಿಗಣಿಸಲಾಗುತ್ತದೆ.

4. ಸೌರಮಾನ ಯುಗಾದಿಯ ಶುಭ ಸಮಯ:

ಸೌರಮಾನ ಯುಗಾದಿಯ ಸಂಕ್ರಾಂತಿಯ ಸಮಯವನ್ನು ಅತ್ಯಂತ ಪವಿತ್ರವಾದ ಹಾಗೂ ಶ್ರೇಷ್ಠ ಸಮಯವೆಂದು ಪರಿಗಣಿಸಲಾಗುತ್ತದೆ. ಈ ದಿನ ಗೃಹ ಪ್ರವೇಶ ಮುಂತಾದ ಶುಭ ಕಾರ್ಯಕ್ಕೆ ತುಂಬಾ ಯೋಗ್ಯವಾದ ದಿನವೆಂದು ಪರಿಗಣಿಸಲಾಗಿದೆ.

ಮೇಷ ಸಂಕ್ರಾಂತಿ ಮಹಾ ಪುಣ್ಯಕಾಲ: ಬೆಳಗ್ಗೆ 05:46 ರಿಂದ 07:53 ರವರೆಗೆ

ಮೇಷ ಸಂಕ್ರಾಂತಿ ಪುಣ್ಯ ಕಾಲ: ಬೆಳಗ್ಗೆ 05:46 ರಿಂದ ಮಧ್ಯಾಹ್ನ 12:07 ರವರೆಗೆ



5. ಚಾಂದ್ರಮಾನ ಯುಗಾದಿ

ಚಂದ್ರನ ಸ್ಥಾನ ಬದಲಾವಣೆಯನ್ನುಅನುಸರಿಸುವ ಮೂಲಕ ವರ್ಷದಲ್ಲಿನ ದಿನಗಳನ್ನು ಲೆಕ್ಕಮಾಡುವುದಕ್ಕೆ ಚಾಂದ್ರಮಾನ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯ ಪ್ರಕಾರ, ಹನ್ನೆರಡು ತಿಂಗಳು ಸೇರಿ ಒಂದು ವರ್ಷ. ಈ ವ್ಯವಸ್ಥೆಯ ಪ್ರಕಾರ ವರ್ಷದಲ್ಲಿ 354 ದಿನಗಳಿವೆ. ಇದು ಸೌರಮಾನ ಮತ್ತು ಚಾಂದ್ರಮಾನ ವರ್ಷಗಳ ನಡುವೆ ಹನ್ನೊಂದು ದಿನಗಳ ಕೊರತೆಗೆ ಕಾರಣವಾಗುತ್ತದೆ. ಆದ್ದರಿಂದ ಮೂರು ವರ್ಷಗಳಿಗೊಮ್ಮೆ, ವ್ಯತ್ಯಾಸವು ಒಂದು ತಿಂಗಳಿಗೆ ಸಮನಾಗಿರುವಾಗ ನಾವು ಒಂದು ತಿಂಗಳನ್ನು ಹೆಚ್ಚಾಗಿ ಸೇರಿಸಿ, ಆ ತಿಂಗಳನ್ನು 'ಚಂದ್ರ ಅಧಿಕ ಮಾಸ' ಎಂದು ಕರೆದು ಸೌರಮಾನ ವರ್ಷಕ್ಕೆ ಸೇರಿಸುತ್ತೇವೆ. ಈ ಕಾರಣಕ್ಕಾಗಿಯೇ 'ಸೌರ ಸಂವತ್ಸರ' ವನ್ನು ಸ್ಥಿರ ಸಂವತ್ಸರ ಎಂದೂ 'ಚಂದ್ರ ಸಂವತ್ಸರ' ವನ್ನು ಅಸ್ಥಿರ ಸಂವತ್ಸರವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಕರಾವಳಿಯ ಭಾಗದಲ್ಲಿ ಸೂರ್ಯಮಾನ ಯುಗಾದಿ ಅಂದರೆ 'ವಿಷು' ಹಬ್ಬವನ್ನು ಆಚರಿಸುತ್ತಾರೆ. ಕರ್ನಾಟದ ಇತರ ಭಾಗಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ. ಈ ದಿನ ಕುಟುಂಬದ ಸದಸ್ಯರೆಲ್ಲರೂ ಬೇವು - ಬೆಲ್ಲ ಸವಿದು ಹಿರಿಯರ ಆಶೀರ್ವಾದವನ್ನು ಪಡೆದು ನಂತರ ತಮ್ಮ ದಿನವನ್ನು ನಡೆಸುತ್ತಾರೆ. ಕೇರಳದಲ್ಲಿ ವಿಷು ಕಣಿ ಇಡುವ ಸಂಪ್ರದಾಯವಿದೆ. ಈ ದಿನ ವಿಷು ಕಣಿಗೆ ಇಟ್ಟ ವಸ್ತುಗಳನ್ನು ಮೊದಲು ನೋಡುವುದರಿಂದ ಜೀವನದುದ್ದಕ್ಕೂ ಸಮೃದ್ಧಿ, ಸಂಪತ್ತು ಮತ್ತು ಸಂತೋಷ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ.
[02/04, 4:21 PM] Pandit Venkatesh. Astrologer. Kannada: 🙏 ಹರಿಃ ಓಂ
🕉️ ಸಂವತ್ಸರ ಪಂಚಾಂಗ

🎙️ ಹೊಸ  ಸಂವತ್ಸರ ಪಂಚಾಂಗ ಅನ್ನು ಏಕೆ ಓದಲಾಗುತ್ತದೆ..

💠ಹೊಸ ವರ್ಷ ಹನ್ನೆರಡು ತಿಂಗಳುಗಳು, ತೋಳುಗಳು, ಕಾಲಗಳು, ಮುಖಗಳನ್ನು ಅಂಗ ಎಂದು ಹೇಳಲಾಗುತ್ತದೆ. 

🛑ನವಗ್ರಹ ನಾಯಕರು (9) ಸೂರ್ಯನೊಂದಿಗೆ ಜಗತ್ತನ್ನು ಆಳುತ್ತಾರೆ.

💠ಆದ್ದರಿಂದ ಹೊಸ ವರ್ಷದ ದಿನವು ಆ ವರ್ಷಕ್ಕೆ ಸಂಬಂಧಿಸಿದೆ (5 ಅಂಗಗಳು) ಯೋಗ, ತಿಥಿ, ಕರಣಂ, ವರಂ ಮತ್ತು ನಕ್ಷತ್ರದ ಐದು ಅಂಶಗಳನ್ನು ವಿವರಿಸುವು಼ದರಿಂದ ಇದನ್ನು ಪಂಚಾಂಗ ಎಂದು ಕರೆಯಲಾಗುತ್ತದೆ.

🎙️ ಯೋಗವು ರೋಗಗಳನ್ನು ನಿವಾರಿಸುತ್ತದೆ.

🔮 ತಿಧಿ .. ಅದೃಷ್ಟವನ್ನು ಉತ್ತೇಜಿಸುತ್ತದೆ. 
🛑ಕರಣಂ..ಯಶಸ್ಸನ್ನು ನೀಡುತ್ತದೆ. 
🔮ವಾರ..ಆಯುರ್  ಬೆಳವಣಿಗೆ. 
🛑ನಕ್ಷತ್ರ .. ಪಾಪಗಳನ್ನು ಹೋಗಲಾಡಿಸುತ್ತದೆ.

 ಹೀಗೆ ಹೊಸ ವರ್ಷದ ದಿನ ಕ್ಯಾಲೆಂಡರ್ ಪಠಣ ಬೇರೆಡೆಗೆ ಹೋಗಲು ವರ್ಷಗಳು ಮಳೆ, ಬೇಳೆ, ಹಣ್ಣುಗಳನ್ನು ತಿಳಿದುಕೊಳ್ಳಬೇಕು.

ಕೆಲವರು ಯುಗಾದಿಯಂದು ಹೊಸ ಪಂಚಾಂಗವನ್ನು ಪೂಜಿಸುತ್ತಾರೆ ಮನೆಗಳಲ್ಲಿ ಅಭ್ಯಾಸ ಮಾಡುತ್ತಾರೆ.

🎙️ ಪಂಚಾಂಗ ಶ್ರವಣ

ಈ ಆಚರಣೆ ಹೆಚ್ಚಾಗಿ ಮನೆಗಳಲ್ಲಿ ಸೂರ್ಯಾಸ್ತದ ಬಳಿಕ ನಡೆಸುವರು. ಹೊಸದಾಗಿ ತಂದ ಪಂಚಾಂಗವನ್ನು ದೇವರ ಮುಂದೆ ಇಟ್ಟು. ಅದನ್ನು ಹೂಗಳಿಂದ ಅಲಂಕರಿಸಿ, ಕುಂಕುಮ, ಅರಿಶಿಣ ಮತ್ತು ಅಕ್ಷತೆ ಹಾಕಿ ಪೂಜೆ ಮಾಡಲಾಗುತ್ತದೆ. ಕುಟುಂಬದ ಹಿರಿಯ ವ್ಯಕ್ತಿಯು ಈ ಪಂಚಾಂಗವನ್ನು ಸಂಜೆ ಪಠಿಸುವ ಮೂಲಕ ಮುಂದಿನ ದಿನಗಳಲ್ಲಿನ ಭವಿಷ್ಯದ ಸ್ಥಿತಿಗತಿಗಳ ಬಗ್ಗೆ ಹೇಳುತ್ತಾರೆ.

🎙️ ಯುಗಾದಿ ಪಂಚಾಂಗ ಪೂಜೆ

ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದು ಪ್ರಮುಖ ಅಂಶವಾಗಿದೆ. ಇದನ್ನು ಯುಗಾದಿಯಂದು ಸಂಜೆ ವೇಳೆ ಮಾಡಲಾಗುತ್ತದೆ. ಪಂಚಾಂಗವನ್ನು ಒಂದು ಕಾಲ್ಮಣೆಯಲ್ಲಿ ಇಟ್ಟುಕೊಂಡು ಅದರ ಮೇಲೆ ಹೂ, ಅರಶಿನ, ಗಂಧ ಮತ್ತು ಅಕ್ಕಿಯನ್ನು ಹಾಕಿ. ಇದರ ಬಳಿಕ ಪೂಜೆ ಮಾಡಲಾಗುತ್ತದೆ. ಈ ವೇಳೆ ವರ್ಷದ ಜ್ಯೋತಿಷ್ಯವನ್ನು ಹೇಳಲಾಗುತ್ತದೆ.

ಪಂಚಾಂಗ ಹಿಂದೂ ಸಂಪ್ರದಾಯದ ಕ್ಯಾಲೆಂಡರ್. ಇದು ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಒಟ್ಟರೆ ಜನಜೀವನದ ಸ್ಥಿತಿಯನ್ನು ಸೂಚಿಸಿರುವುದು. ಅಂದು ಹಿರಿಯ ಕಿರಿಯರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ನಲಿವರು.

🎙️  ಹಿಂದೂ ಪಂಚಾಂಗ

ಹಿಂದೂಗಳ ಸೌರಮಾನ,ಚಾಂದ್ರಮಾನ ರೀತಿಯ ಕಾಲಗಣನೆಗೆ ಪಂಚಾಂಗವೆಂದು ಕರೆಯುತ್ತಾರೆ. ಪಂಚಾಂಗವೆಂದರೆ, ಪಂಚ + ಅಂಗ = ಐದು ಅಂಗಗಳನ್ನು ಒಳಗೊಂಡದ್ದು. ತಿಥಿ, ವಾರ, ನಕ್ಷತ್ರ, ಯೋಗ, ಮತ್ತು ಕರಣಗಳು – ಇವೇ ಆ ಐದು ಅಂಗಗಳು.ಇವುಗಳಿಗೆ ಸಂಬಂಧಪಟ್ಟ ಮಾ಼ಹಿತಿಯನ್ನು ತಿಳಿಸುವಂಥದ್ದು ಪಂಚಾಂಗ.

ಈ ಐದು ಅಂಗಗಳಿಗೆ ಪಂಚಾಂಗ ಎನ್ನುತ್ತಾರೆ. ಪಂಚಾಂಗದಲ್ಲಿ ಜ್ಯೋತಿಷ್ಯಕ್ಕೆ ಸಂಬಂಧಪಟ್ಟ ಕಾಲದ ವಿವರ, ಗ್ರಹ ಸ್ಥಿತಿ , ಸೂರ್ಯೋದಯ, ಸೂರ್ಯಾಸ್ತ , ಕಾಲಗಳು , ಮುಹೂರ್ಥಕ್ಕೆ ಸಂಬಂಧಪಟ್ಟ ವಿಷಯಗಳು ಹಬ್ಬ ಹರಿದಿನಗಳು, ಜಾತಕ ಹೊಂದಾಣಿಕೆಗೆ ಬೇಕಾದ ವಿಷಯಗಳು ಹೀಗೆ ಇನ್ನೂ ಅನೇಕ ವಿಷಯಗಳು ಇರುತ್ತವೆ. ಇರುತ್ತವೆ. ಒಟ್ಟಿನಲ್ಲಿ ನಮ್ಮ ದಿನ ದಿನನಿತ್ಯ ಕಾರ್ಯಗಳ ಆಚರಣೆಗೆ, ಪ್ರಯಾಣಕ್ಕೆ, ಶಾಸ್ತ್ರ ಸಂಬಂಧ ವಿಷಯಗಳಿಗೆ ಇದರ ಅವಶ್ಯಕತೆ ಹೆಚ್ಚು .

ನಾವು ಯಾವುದೇ ಏಕ ವಿಶಾಂತಿಕರ್ಮ ಮಾಡುವಾಗ ಈ ಐದು ಅಂಗಗಳು ಶುದ್ಧವಾಗಿರಬೇಕು , ಇದನ್ನೇ ನಾವು ಪಂಚಾಂಗ ಶುದ್ಧಿ ಎನ್ನುತ್ತೇವೆ . ಈ ಶುದ್ಧಿ ಇಲ್ಲದ ದಿನದಂದು ಶುಭ ಕಾರ್ಯಗಳನ್ನು ಆರಂಭಿಸಿದರೆ ನಿಷ್ಫಲ ದೊರೆಯುತ್ತದೆ ಎಂದು ಮುಹೂರ್ತ ಜ್ಯೋತಿಷ್ಯದಲ್ಲಿ ನಮ್ಮ ಹಿರಿಯ ಋಷಿ ಮುನಿಗಳು ವಿವರಿಸಿದ್ದಾರೆ.

ಆದ್ದರಿಂದ ಆ ದಿನದ ಶುದ್ಧಿ ಯನ್ನು ತಿಳಿಯುವುದಕ್ಕೋಸ್ಕರ ನಮ್ಮ ಹಿರಿಯರು ಆಯಾ ದಿನದಲ್ಲಿ ಬರುವ ವಾರ, ತಿಥಿ, ನಕ್ಷತ್ರ, ಯೋಗ, ಕರಣಗಳನ್ನು ಆರ್ಯಭಟ್ಟ ಸಿಂದ್ಧಾಂತ , ದೃಗ್ಗಣಿತದ ರೀತಿ ಲೆಕ್ಕಾಚಾರ ಮಾಡಿ ಒಂದು ಸಂವತ್ಸರದ ಪೂರ್ತಿ ವಿವರಗಳನ್ನು ಪುಸ್ತಕದ ರೀತಿ ಪ್ರತಿ ಸಂವತ್ಸರಕ್ಕೂ ಹೊರತರುತ್ತಾರೆ, ಇಂದನ್ನು ಪಂಚಾಂಗ ಎನ್ನುತ್ತೇವೆ.

ಇದು ಶುಭ ಕಾರ್ಯಗಳಿಗೆ ಮುಹೂರ್ತ ಕಾಲವನ್ನು ತಿಳಿಯಲು ಉಪಯುಕ್ತವಾಗಿದೆ . ಈ ಪಂಚಾಂಗ ಪದ್ಧತಿಯು ಆರ್ಯಭಟ್ಟ ಕಾಲದಿಂದ ಅನುಸರಣೆಗೆ ಬಂದಿತು . 

🎙️ತಿಥಿಗಳು

ತಿಥಿಗಳು ಮೂವತ್ತು(೩೦). ೩೦ ತಿಥಿಗಳನ್ನು ಎರಡು ಪಕ್ಷಗಳಲ್ಲಿ ೧೫ರಂತೆ ಎಣಿಕೆ ಮಾಡಲಾಗುತ್ತದೆ. ಪಾಡ್ಯ(ಪ್ರತಿಪದೆ)ದಿಂದ ಮೊದಲುಗೊಂಡು ಹುಣ್ಣಿಮೆಯವರೆಗೆ ಬರುವ ಮೊದಲ ೧೫ ತಿಥಿ(ದಿನ)ಗಳಿಗೆ ಶುಕ್ಲಪಕ್ಷವೆಂತಲೂ, ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮುಂದಿನ ೧೫ ತಿಥಿ(ದಿನ)ಗಳಿಗೆ ಕೃಷ್ಣಪಕ್ಷವೆಂತಲೂ ಕರೆಯುತ್ತಾರೆ. ಪ್ರತಿ ಮಾಸದ ಪಕ್ಷ ಮತ್ತು ತಿಥಿಗಳನ್ನು ಕೆಳಗಿನ ನೀಡಿವೆ.

ಶುಕ್ಲಪಕ್ಷ:   ಪಾಡ್ಯ (೧); ಬಿದಿಗೆ (೨); ತದಿಗೆ (೩); ಚೌತಿ (೪); ಪಂಚಮಿ (೫); ಷಷ್ಠಿ (೬ ); ಸಪ್ತಮಿ (೭); ಅಷ್ಟಮಿ (೮); ನವಮಿ (೯); ದಶಮಿ (೧೦); ಏಕಾದಶಿ (೧೧); ದ್ವಾದಶಿ (೧೨); ತ್ರಯೋದಶಿ (೧೩); ಚತುರ್ದಶಿ (೧೪); ಹುಣ್ಣಿಮೆ (೧೫)

ಕೃಷ್ಣಪಕ್ಷ:  ಪಾಡ್ಯ (೧); ಬಿದಿಗೆ (೨); ತದಿಗೆ (೩); ಚೌತಿ (೪); ಪಂಚಮಿ (೫); ಷಷ್ಠಿ (೬ ); ಸಪ್ತಮಿ (೭); ಅಷ್ಟಮಿ (೮); ನವಮಿ (೯); ದಶಮಿ (೧೦); ಏಕಾದಶಿ (೧೧); ದ್ವಾದಶಿ (೧೨); ತ್ರಯೋದಶಿ (೧೩); ಚತುರ್ದಶಿ (೧೪); ಅಮಾವಾಸ್ಯೆ (೩೦)

🎙️ವಾರಗಳು 

ವಾರಗಳು ಏಳು (೭). ಅವು ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ. ನವಗ್ರಹಗಳಲ್ಲಿ ರಾಹು,ಕೇತುಗಳನ್ನು ಬಿಟ್ಟು ಮಿಕ್ಕ ಏಳು ಅಂದರೆ ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ ಹಾಗೂ ರವಿ -ಈ ಗ್ರಹಗಳ ಹೆಸರಿನಿಂದ ವಾರಗಳಿಗೆ ಹೆಸರಿಸಿದೆ.

🎙️ ನಕ್ಷತ್ರಗಳು 

💠 ನಕ್ಷತ್ರಗಳು ಇಪ್ಪತ್ತೇಳು (೨೭). ಅವು:

೧. ಅಶ್ವಿನಿ ೨. ಭರಣಿ ೩. ಕೃತ್ತಿಕೆ ೪.ರೋಹಿಣಿ ೫.ಮೃಗಶಿರ ೬.ಆರ್ದ್ರೆ ೭.ಪುನರ್ವಸು ೮.ಪುಷ್ಯ ೯.ಆಶ್ಲೇಷ ೧೦. ಮಖೆ೧೧. ಪುಬ್ಬೆ ೧೨. ಉತ್ತರೆ ೧೩. ಹಸ್ತ ೧೪.ಚಿತ್ತೆ ೧೫.ಸ್ವಾತಿ ೧೬.ವಿಶಾಖ ೧೭.ಅನೂರಾಧ  ೧೮. ಜ್ಯೇಷ್ಠ ೧೯. ಮೂಲ ೨೦. ಪೂರ್ವಾಷಾಢ ೨೧.ಉತ್ತರಾಷಾಢ ೨೨.ಶ್ರವಣ ೨೩.ಧನಿಷ್ಥೆ ೨೪.ಶತಭಿಷೆ ೨೫.ಪೂರ್ವಾಭಾದ್ರೆ ೨೬. ಉತ್ತರಾಭಾದ್ರೆ ೨೭. ರೇವತಿ.

🎙️ಕರಣಗಳು 

ಕರಣಗಳು ಒಟ್ಟು ೧೧. ಅವುಗಳೆಂದರೆ: ಬವ, ಬಾಲವ, ಕೌಲವ, ತೈತಲೆ, ಗರಜೆ, ವಣಿಕ್, ಭದ್ರೆ, ಶಕುನಿ, ಚತುಷ್ಪಾತ್, ನಾಗವಾ಼ನ್ ಹಾಗೂ ಕಿಂಸ್ತುಘ್ನ

🎙️ಯೋಗಗಳು 

ಯೋಗಗಳು ಒಟ್ಟು ೨೭. ಅವು: ೧. ವಿಷ್ಕಂಭ ೨. ಪ್ರೀತಿ ೩. ಆಯುಷ್ಮಾನ್ ೪.ಸೌಭಾಗ್ಯ ೫.ಶೋಭನ ೬.ಅತಿಗಂಡ ೭.ಸುಕರ್ಮ ೮.ಧೃತಿ ೯.ಶೂಲ ೧೦. ಗಂಡ ೧೧. ವೃದ್ಢಿ ೧೨. ಧ್ರುವ ೧೩. ವ್ಯಾಘಾತ ೧೪. ಹರ್ಷಣ ೧೫. ವಜ್ರ ೧೬.ಸಿದ್ಧಿ ೧೭. ವ್ಯತೀಪಾತ ೧೮. ವರಿಯಾನ್ ೧೯.ಪರಿಘ ೨೦.ಶಿವ ೨೧.ಸಿದ್ಧ ೨೨. ಸಾಧ್ಯ ೨೩. ಶುಭ ೨೪. ಶುಕ್ಲ ೨೫.ಬ್ರಹ್ಮ ೨೬. ಐಂದ್ರ ೨೭. ವೈಧೃತಿ

🎙️ಮಾಸಗಳು 

💠ಚಾಂದ್ರಮಾನ ಮಾಸಗಳು 
ವರ್ಷದಲ್ಲಿ, ಕೆಲವು ನಕ್ಷತ್ರದ ಹೆಸರಿನೆ ಮೂಲಕ, ಚಾಂದ್ರಮಾನದ ಹನ್ನೆರಡು (೧೨) ಮಾಸಗಲನ್ನು ಕೆಳಗೆ ನೀಡಿವೆ.

೧. ಚೈತ್ರ (ಚಿತ್ರ/ಚಿತ್ತ); ೨. ವೈಶಾಖ (ವಿಶಾಖ); ೩. ಜ್ಯೇಷ್ಠ (ಜ್ಯೇಷ್ಠ); ೪. ಆಷಾಢ (ಆಷಾಢ)
೫. ಶ್ರಾವಣ (ಶ್ರವಣ); ೬. ಭಾದ್ರಪದ (ಭದ್ರ); ೭. ಆಶ್ವೀಜ (ಅಶ್ವಿನಿ); ೮. ಕಾರ್ತೀಕ (ಕೃತ್ತಿಕ/ಕೃತ್ತಿಕೆ)
೯. ಮಾರ್ಗಶಿರ (ಮೃಗಶಿರ); ೧೦. ಪುಷ್ಯ (ಪುಷ್ಯ/ಪುಬ್ಬ); ೧೧. ಮಾಘ (ಮಘ/ಮಖ); ೧೨. ಫಾಲ್ಗುಣ (ಫಾಲ್ಗುಣಿ)

🛑 ಅಧಿಕ ಮಾಸಗಳು 

ಸೂರ್ಯನು ಯಾವುದೇ ರಾಶಿಯಲ್ಲೂ ಪ್ರಯಾಣಿಸದೇ ಒಂದು ಚಾಂದ್ರಮಾನ ಮಾಸದಲ್ಲಿ ಸಂಪೂರ್ಣವಾಗಿ ಒಂದು ರಾಶಿಯ ಒಳಗೇ ಚಲಿಸುತ್ತದ್ದರೇ (ಅಂದರೆ ಅಮಾವಾಸ್ಯೆಗೆ ಮೊದಲು), ಆ ಚಾಂದ್ರಮಾನ ಮಾಸವನ್ನು ಮುಂಬರುವ ಮೊದಲ ಸಂಕ್ರಮಣದ ಪ್ರಕಾರ ಹೆಸರಿಸಲಾಗುತ್ತದೆ. ಅದು ಅಧಿಕ ಎಂಬ ಉಪಾಧಿಯನ್ನು ತೆಗೆದುಕೊಳ್ಳುತ್ತದೆ. ಉದಾಹರಣೆಗೆ, ಒಂದು ಚಾಂದ್ರಮಾನ ಮಾಸವು ಸಂಕ್ರಮಣವಿಲ್ಲದೆಯೇ ಸರಿದುಹೋದರೆ ಮತ್ತು ಮುಂದಿನ ಸಂಕ್ರಮಣವು ಮೇಷದಲ್ಲಿದ್ದರೆ, ಸಂಕ್ರಮಣವಿಲ್ಲದ ಆ ಮಾಸವನ್ನು ಅಧಿಕ ಚೈತ್ರವೆಂದು ಹೆಸರಿಸಲಾಗುತ್ತದೆ. ಸಂಕ್ರಮಣವಾಗಿರುವ ಮಾಸವನ್ನು ಶುದ್ಧ ಚೈತ್ರ ಅಥವಾ ನಿಜ ಚೈತ್ರ ಮಾಸವೆನ್ನುತ್ತಾರೆ.

💠 ಸೌರಮಾನ ಮಾಸಗಳು 

ಸೂರ್ಯನು ಹನ್ನೆರಡು (೧೨) ರಾಶಿಗಳಲ್ಲಿ, ಒಂದು ರಾಶಿಯಿಂದ ಮುಂದಿನ ರಾಶಿಯಲ್ಲಿ ಪ್ರವೇಶ ಮಾಡುವತ್ತಾನೆ. ಇದನ್ನು ಸಂಕ್ರಮಣವೆನ್ನುತ್ತಾರೆ. ಓಂದು ರಾಶಿಯಲ್ಲಿರುವಾಗ ಆ ಮಾಸದ ಹೆಸರು, ರಾಶಿಯ ಹೆಸರನಿಂದ ಕರೆಯುತ್ತಾರೆ. ಹೀಗೆ ಸೌರಮಾನದ ಮಾಸಗಳು, ಹೇಗೆ ಕರೆಯಲಾಗಿದೆ.

೧. ಮೇಷ; ೨. ವೃಷಭ; ೩. ಮಿಥುನ; ೪. ಕರ್ಕ; ೫. ಸಿಂಹ; ೬. ಕನ್ಯ
೭. ತುಲ; ೮. ವೃಷ್ಚಿಕ; ೯. ಧನು; ೧೦. ಮಕರ; ೧೧. ಕುಂಭ; ೧೨, ಮೀನ
ಸೂರ್ಯನ ಧನು ಸಂಕ್ರಮಣ ದಿಂದ ಮಕರಸಂಕ್ರಮಣ ವರೆಗೆ ಬರುವ ಮಾಸವನ್ನು ಧನುರ್ಮಾಸವೆಂತ ಕರೆಯಲಾಗಿದೆ. ಈ ಮಾಸ ಧರ್ಮ ಶಾಸ್ತ್ರದಲ್ಲಿ ವಿಶೇಷವಾದದ್ದು.

🎙️ಋತುಗಳು ೬ (೨ ಮಾಸಗಳಿಗೆ ಒಂದು ಋತು) 

🔮೧. ವಸಂತ ಋತು (ಚೈತ್ರ – ವೈಶಾಖ)
🛑೨. ಗ್ರೀಷ್ಮ ಋತು (ಜ್ಯೇಷ್ಠ – ಆಷಾಢ)
🔮೩. ವರ್ಷ ಋತು (ಶ್ರಾವಣ – ಭಾದ್ರಪದ)
🛑೪. ಶರದೃತು (ಆಶ್ವೀಜ – ಕಾರ್ತೀಕ)
🔮೫. ಹೇಮಂತ ಋತು (ಮಾರ್ಗಶಿರ – ಪುಷ್ಯ)
🛑೬. ಶಿಶಿರ ಋತು (ಮಾಘ – ಪಾಲ್ಗುಣ)

🎙️ ಆಯನಗಳು – ೨ 

ಉತ್ತರಾಯಣ ಮತ್ತು ದಕ್ಷಿಣಾಯನ ಪ್ರತಿ ವರ್ಷದ ಜನವರಿ ೧೪ (ಪುಷ್ಯ, ಮಕರ ಸಂಕ್ರಮಣ) ರಿಂದ ಜುಲೈ ೧೬ (ಆಷಾಢ, ಕರ್ಕ ಸಂಕ್ರಮಣ) ರವರೆಗೆ ಸೂರ್ಯನು ಉತ್ತರಕ್ಕೆ ಸಂಚರಿಸುವುದರಿಂದ ಉತ್ತರಾಯಣವೆಂದೂ, ಜುಲೈ ೧೬ ರಿಂದ ಜನವರಿ ೧೪ ರವರೆಗೆ ಸೂರ್ಯನು ದಕ್ಷಿಣ ದಿಕ್ಕಿಗೆ ಬಾಗಿ ಸಂಚರಿಸುವುದರಿಂದ ದಕ್ಷಿಣಾಯಣವೆಂದೂ ಗುರುತಿಸಲಾಗಿದೆ.

🎊🎊 ವೇದಾಂತ ಜ್ಞಾನಯವರಿಂದ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು! 🎊 🙏 ಶ್ರೀ ಶಾಲಿವಾಹನ ಶಕೆ ೧೯೪೪  ಶುಭಕೃತ  ನಾಮ ಸಂವತ್ಸರ , ವಿಕ್ರಮ ಸಂವತ್ ೨೦೭೮ ಸರ್ವರಿಗೂ ಶುಭ, ಸಮೃದ್ಧಿ ತರಲಿ.. ಎಲ್ಲರಿಗೂ ಶುಭವಾಗಲಿ..🙏

➡️  1 ಲೈಕ್ / 1ಕಾಮೆಂಟ್  👇
                       ➡️  ಶೇರ್ ಮಾಡಿ ,

 ▶️ ನಮ್ಮ ಹಿಂದೂ  ಸಂಸ್ಕೃತಿ ಉಳಿಸಲು  ನಿಮ್ಮ  ಕೊಡುಗೆ  ಇರಲಿ 😊👍

ಹರಿಯೇ ಪರದೈವ 🙏  
ಜಗತ್ತು ಸತ್ಯ 🙏   
ದೇವರ ಸ್ಮರಣೆ ಮುಖ್ಯ 🙏🙏

Post a Comment

Previous Post Next Post