[25/04, 7:18 AM] Pandit Venkatesh. Astrologer. Kannada: ಕುಲ ಕುಲ ಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನ್ನೇನಾದರು ಬಲ್ಲಿರಾ ಬಲ್ಲಿರಾ ... ೩
ಕುಲ ಕುಲ ಕುಲವೆಂದು ಹೊಡೆದಾಡದಿರಿ ||
ಹುಟ್ಟದ ಯೋನಿಗಳಿಲ್ಲ
ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ ಹೋಓ ... ೨
ಗುಟ್ಟುಕಾಣಿಸಬಂತು ಹಿರಿದೇನು ಕಿರಿದೇನು
ಗುಟ್ಟುಕಾಣಿಸಬಂತು ಹಿರಿದೇನು ಕಿರಿದೇನು
ಮೆತ್ತನೆ ಸರ್ವಜ್ಞನ ನೆನೆ ಕಂಡ್ಯಾ ಮನುಜ
ಜಲವೆ ಸಕಲ ಕುಲಕ್ಕೆ ತಾಯಲ್ಲವೆ
ಜಲದ ಕುಲವನ್ನೇನಾದರು ಬಲ್ಲಿರಾ
ಜಲದ ಓಕುಳಿಯಂತೆ ಸ್ಥಿರವಲ್ಲ ಈ ದೇಹ
ಜಲದ ಓಕುಳಿಯಂತೆ ಸ್ಥಿರವಲ್ಲ ಈ ದೇಹ
ನೆಲೆಯ ಅರಿತು ನೀ ನೆನೆ ಕಂಡ್ಯಾ ಮನುಜ
ಕುಲ ಕುಲ ಕುಲವೆಂದು ಹೊಡೆದಾಡದಿರಿ
ಹರಿಯೇ ಸರ್ವೋತ್ತಮ
ಹರಿಯೇ ಸರ್ವೇಷ್ವರ
ಹರಿಮಯವೆಲ್ಲವೆನುತ ತಿಳಿದು ಹೋಓ ... ೨
ಸಿರಿ ಕಾಗಿನೆಲೆ ಆದಿ ಕೇಶವರಾಯನ
ಚರಣ ಕಮಲವ ಕೀರ್ತಿಸುವನೆ ಕುಲಜ
ಚರಣ ಕಮಲವ ಕೀರ್ತಿಸುವನೆ ಕುಲಜ
ಕುಲ ಕುಲ ಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನ್ನೇನಾದರು ಬಲ್ಲಿರಾ ಬಲ್ಲಿರಾ
ಕುಲ ಕುಲ ಕುಲವೆಂದು ಹೊಡೆದಾಡದಿರಿ ||
------------------------------------------
ಚಿತ್ರ: ಭಕ್ತ ಕನಕದಾಸ (1960) , ಸಂಗೀತ: ಎಂ ವೆಂಕಟರಾಜು
ಗಾಯನ: ಪಿ.ಬಿ.ಎಸ್, ರಚನೆ: ಕನಕದಾಸ
[25/04, 7:20 AM] Pandit Venkatesh. Astrologer. Kannada: 🙏ಶುಭೋದಯ🙏
ನಾವು ಮಾಡುವ ತಪ್ಪುಗಳಿಂದ ನಮ್ಮ ಯೋಗ್ಯತೆ ಅಳೆಯಲ್ಪಡುತ್ತದೆ. ಹಾಗೆಯೇ ಮಾಡುವ ತಪ್ಪುಗಳು ಕಡಿಮೆಯಾದಂತೆ ಯೋಗ್ಯತೆ ಹೆಚ್ಚಾಗುತ್ತದೆ. ಭಗವಂತನ ಸ್ಮರಣೆ ಯೊಂದಿಗೆ ತಪ್ಪು ಕಡಿಮೆ ಮಾಡ್ತಾ ಯೋಗ್ಯತೆ ಬೆಳೆಸಿಕೊಳ್ಳುವ.
"ಕೃಷ್ಣಂ ವಂದೇ ಜಗದ್ಗುರುಂ"
ಓಂ ನಮೋ ಭಗವತೇ ರುದ್ರಾಯಾ
[25/04, 7:20 AM] Pandit Venkatesh. Astrologer. Kannada: ☘️☘️☘️☘️☘️☘️☘️☘️☘️☘️
ಶ್ರೀರಾಮಜಯರಾಮಜಯಜಯರಾಮ
ಶ್ರೀರಾಮಜಯರಾಮಜಯಜಯರಾಮ
ಓ೦ಶ್ರೀಮೃತ್ಯುಂಜಯಾಯನಮಃ
ಓ೦ಶ್ರೀವಿರೂಪಾಕ್ಷೇಶ್ವರಾಯನಮಃ
ಶುಭೋದಯ ಶುಭದಿನ
ಶುಭ ಸೋಮವಾರ
ಬೆಳಗಿನ ನಮನಗಳು
🙏🙏🙏🙏🙏🙏🙏🙏🙏🙏
☘️☘️☘️☘️☘️☘️☘️☘️☘️☘️
[25/04, 7:24 AM] Pandit Venkatesh. Astrologer. Kannada: ಅಕ್ಷಯ ತೃತಿಯದ ಆಚರಣೆ ಮಹತ್ವ ಮತ್ತು ಮಾಡಬೇಕಾದ ದಾನಗಳು
೧. ಮಹತ್ವ
ಅ. ಅಕ್ಷಯ ತೃತೀಯಾದಂದು ಎಲ್ಲ ಸಮಯವು ಶುಭ ಮುಹೂರ್ತವೇ ಆಗಿರುತ್ತದೆ; ಆದ್ದರಿಂದ ಈ ತಿಥಿಯಂದು ಧಾರ್ಮಿಕ ಕೃತಿಗಳನ್ನು ಮಾಡುವಾಗ ಮುಹೂರ್ತವನ್ನು ನೋಡಬೇಕಾಗುವುದಿಲ್ಲ.
ಆ. ಈ ದಿನದಂದು ಹಯಗ್ರೀವ ಅವತಾರ, ನರನಾರಾಯಣ ಪ್ರಕಟೀಕರಣ ಮತ್ತು ಪರಶುರಾಮನ ಅವತಾರವಾಗಿದೆ.
ಇ. ಈ ತಿಥಿಯಂದು ಬ್ರಹ್ಮ ಮತ್ತು ಶ್ರೀವಿಷ್ಣುವಿನ ಮಿಶ್ರ ಲಹರಿಗಳು ಉಚ್ಚ ದೇವತೆಗಳ ಲೋಕದಿಂದ ಪೃಥ್ವಿಯ ಮೇಲೆ ಬರುತ್ತವೆ. ಆದುದರಿಂದ ಪೃಥ್ವಿಯ ಮೇಲಿನ ಸಾತ್ತ್ವಿಕತೆಯು ಶೇ. ೧೦ ರಷ್ಟು ಹೆಚ್ಚಾಗುತ್ತದೆ. ಈ ಕಾಲಮಹಾತ್ಮೆಯಿಂದಾಗಿ ಈ ತಿಥಿಯಂದು ಪವಿತ್ರ ಸ್ನಾನ, ದಾನಗಳಂತಹ ಧರ್ಮಕಾರ್ಯಗಳನ್ನು ಮಾಡಿದರೆ ಅವು ಗಳಿಂದ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ.
ಈ. ಈ ತಿಥಿಯಂದು ದೇವತೆಗಳನ್ನು ಮತ್ತು ಪಿತೃಗಳನ್ನು ಉದ್ದೇಶಿಸಿ ಮಾಡಿದ ಎಲ್ಲ ಕರ್ಮಗಳೂ ಅಕ್ಷಯ (ಅವಿನಾಶಿ) ವಾಗುತ್ತವೆ. (ಆಧಾರ : ‘ಮದನರತ್ನ’)
೨. ಅಕ್ಷಯ ತೃತೀಯಾದಂದು ಮಾಡಬೇಕಾದ ಕೃತಿಗಳು
ಅ. ಪವಿತ್ರ ಜಲದಲ್ಲಿ ಸ್ನಾನ : ಈ ದಿನ ತೀರ್ಥಕ್ಷೇತ್ರದಲ್ಲಿ ಸ್ನಾನ ಮಾಡಬೇಕು, ಸಾಧ್ಯವಿಲ್ಲದಿದ್ದರೆ ಹರಿಯುವ ನೀರಿನಲ್ಲಿ ಸ್ನಾನ ಮಾಡಬೇಕು.
ಆ. ಶ್ರೀವಿಷ್ಣುಪೂಜೆ, ಜಪ ಮತ್ತು ಹೋಮ : ಅಕ್ಷಯ ತೃತೀಯಾ ದಂದು ಸತತವಾಗಿ ಸುಖ-ಸಮೃದ್ಧಿಯನ್ನು ಪ್ರಾಪ್ತ ಮಾಡಿ ಕೊಡುವ ದೇವತೆಯ ಮೇಲೆ ಕೃತಜ್ಞತೆಯ ಭಾವವನ್ನಿಟ್ಟು ಉಪಾಸನೆ ಮಾಡಿದರೆ ನಮ್ಮ ಮೇಲಾಗುವ ಆ ದೇವತೆಯ ಕೃಪಾದೃಷ್ಟಿಯು ಯಾವತ್ತೂ ಕ್ಷಯವಾಗುವುದಿಲ್ಲ. ಈ ದಿನ ಶ್ರೀವಿಷ್ಣುವಿನೊಂದಿಗೆ ವೈಭವ ಲಕ್ಷ್ಮೀಯ ಪ್ರತಿಮೆಯನ್ನು ಕೃತಜ್ಞತೆಯ ಭಾವವನ್ನಿಟ್ಟು ಭಕ್ತಿಭಾವದಿಂದ ಪೂಜಿಸಬೇಕು. ಈ ದಿನವನ್ನು ಹೋಮ ಹವನ ಮತ್ತು ಜಪ ಮಾಡುತ್ತ ಕಳೆಯಬೇಕು.
ಇ. ಅಕ್ಷಯ ತೃತೀಯಾದಂದು ಶ್ರೀವಿಷ್ಣುವಿನ ತತ್ತ್ವವನ್ನು ಆಕರ್ಷಿ ಸುವ ಮತ್ತು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳನ್ನು ಬಿಡಿಸಬೇಕು.
೩. ಎಳ್ಳುನೀರಿನಿಂದ ತರ್ಪಣ ಏಕೆ ಮಾಡುತ್ತಾರೆ ?
ಅ. ಎಳ್ಳುನೀರಿನ ತರ್ಪಣವೆಂದರೆ ದೇವತೆಗಳು ಮತ್ತು ಪೂರ್ವಜ ರಿಗೆ ಎಳ್ಳು ಮತ್ತು ನೀರನ್ನು ಅರ್ಪಿಸುವುದು. ಎಳ್ಳು ಸಾತ್ತ್ವಿಕತೆಯ ಪ್ರತೀಕವಾಗಿದೆ ಮತ್ತು ನೀರು ಬ್ರಹ್ಮಾಂಡದಲ್ಲಿನ ಶುದ್ಧ ಸ್ರೋತದ ಪ್ರತೀಕವಾಗಿದೆ.
ಆ. ಎಳ್ಳಿನಂತಹ ಸಾತ್ತ್ವಿಕ ಘಟಕದ ಮಾಧ್ಯಮದಿಂದ ತರ್ಪಣ ಕೊಡುವುದರಿಂದ ದೇವತೆಗಳು ಮತ್ತು ಪಿತೃಗಳು ಸಂತುಷ್ಟರಾಗುತ್ತಾರೆ ಮತ್ತು ಅವರ ಆಶೀರ್ವಾದ ಸಿಗುತ್ತದೆ.
ಇ. ನೀರು ಶುದ್ಧತೆಯ ಪ್ರತೀಕವಾಗಿರುವುದರಿಂದ ಜಲ ತರ್ಪಣ ಮಾಡುವವರ ಪಾಪ ನಾಶವಾಗುತ್ತದೆ. (ಆವಶ್ಯಕತೆ ಅನಿಸಿದರೆ ಎಳ್ಳುನೀರಿನ ತರ್ಪಣ ವಿಧಿಯ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಪುರೋಹಿತರಲ್ಲಿ ಕೇಳಿಕೊಳ್ಳಬೇಕು.)
೪. ದಾನ
ಅಕ್ಷಯ ತೃತೀಯಾದಂದು ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ, ಅಂದರೆ ಅದಕ್ಕೆ ತಕ್ಕ ಫಲ ಖಂಡಿತವಾಗಿಯೂ ಸಿಗುತ್ತದೆ.
೪ ಅ. ಸತ್ಪಾತ್ರೆ ದಾನವನ್ನು ಏಕೆ ಮಾಡಬೇಕು ? :
ಅಕ್ಷಯ ತೃತೀಯಾದಂದು ಮಾಡಿದ ದಾನದಿಂದ ವ್ಯಕ್ತಿಯ ಪುಣ್ಯಸಂಗ್ರಹ ಹೆಚ್ಚಾಗುತ್ತದೆ. ಪುಣ್ಯದಿಂದ ವ್ಯಕ್ತಿಗೆ ಸ್ವರ್ಗಪ್ರಾಪ್ತಿಯಾಗುತ್ತದೆ; ಆದರೆ ಸ್ವರ್ಗ ಸುಖವನ್ನು ಭೋಗಿಸಿದ ನಂತರ ಪುನಃ ಪೃಥ್ವಿಯ ಮೇಲೆ ಜನಿಸ ಬೇಕಾಗುತ್ತದೆ. ಮನುಷ್ಯನ ನಿಜವಾದ ಧ್ಯೇಯವು ‘ಪುಣ್ಯವನ್ನು ಗಳಿಸಿ ಸ್ವರ್ಗಪ್ರಾಪ್ತಿ ಮಾಡುವುದಲ್ಲ’, ‘ಪಾಪ-ಪುಣ್ಯಗಳ ಆಚೆಗೆ ಹೋಗಿ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದಾಗಿದೆ’. ಆದ್ದರಿಂದ ಮನುಷ್ಯನು ಸತ್ಪಾತ್ರರಿಗೆ ದಾನ ಮಾಡುವುದು ಆವಶ್ಯಕವಾಗಿದೆ. ಸತ್ಪಾತ್ರೆ ದಾನ ಮಾಡುವುದರಿಂದ ದಾನದ ಕರ್ಮವು ಅಕರ್ಮ ಕರ್ಮ (ಅಕರ್ಮ ಕರ್ಮವೆಂದರೆ ಪಾಪ-ಪುಣ್ಯದ ಲೆಕ್ಕಾಚಾರ ಅನ್ವಯವಾಗದಿರುವುದು.) ವಾಗುವುದರಿಂದ ಮನುಷ್ಯನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ, ಅಂದರೆ ಅವನು ಸ್ವರ್ಗಲೋಕಕ್ಕೆ ಹೋಗದೇ ಅದಕ್ಕಿಂತಲೂ ಮುಂದಿನ ಉಚ್ಚ ಲೋಕಗಳಿಗೆ ಹೋಗುತ್ತಾನೆ. ಸಂತರಿಗೆ, ಧಾರ್ಮಿಕ ಕಾರ್ಯವನ್ನು ಮಾಡುವ ವ್ಯಕ್ತಿಗಳಿಗೆ, ಸಮಾಜದಲ್ಲಿ ಧರ್ಮ ಪ್ರಸಾರವನ್ನು ಮಾಡುವ ಆಧ್ಯಾತ್ಮಿಕ ಸಂಸ್ಥೆಗಳಿಗೆ ಮತ್ತು ರಾಷ್ಟ್ರ ಮತ್ತು ಧರ್ಮ ಜಾಗೃತಿಗಾಗಿ ಕಾರ್ಯ ಮಾಡುವ ಧರ್ಮಾಭಿಮಾನಿಗಳಿಗೆ ಅರ್ಪಣೆ ನೀಡುವುದು (ದಾನ ಕೊಡುವುದು) ‘ಸತ್ಪಾತ್ರೇ ದಾನ’ವಾಗಿದೆ.
೫. ಮೃತ್ತಿಕಾಪೂಜೆ,
ಮಣ್ಣಿನಲ್ಲಿ ಹೊಂಡಗಳನ್ನು ಮಾಡುವುದು, ಬೀಜಗಳ ಬಿತ್ತನೆ ಮತ್ತು ಗಿಡಗಳನ್ನು ನೆಡುವುದು.
‘ಯುಗಾದಿ’ಯ ಶುಭಮುಹೂರ್ತದಂದು ಊಳಿದ ಹೊಲದ ಸಾಗುವಳಿಯ ಕೆಲಸವನ್ನು ಅಕ್ಷಯ ತೃತೀಯಾದ ಒಳಗೆ ಪೂರ್ಣ ಗೊಳಿಸಬೇಕು. ಅಕ್ಷಯ ತೃತೀಯಾದಂದು ಸಾಗುವಳಿ ಮಾಡಿದ ಜಮೀನಿನಲ್ಲಿರುವ ಮಣ್ಣನ್ನು ಕೃತಜ್ಞತೆಯ ಭಾವದಿಂದ ಪೂಜಿಸಬೇಕು. ಅನಂತರ ಪೂಜಿಸಿದ ಮಣ್ಣಿನಲ್ಲಿ ಹೊಂಡಗಳನ್ನು ಮಾಡಬೇಕು ಮತ್ತು ಆ ಹೊಂಡಗಳಲ್ಲಿ ಬೀಜಗಳನ್ನು ಬಿತ್ತಬೇಕು. ಅಕ್ಷಯ ತೃತೀಯಾದ ಮುಹೂರ್ತದಲ್ಲಿ ಬೀಜಗಳನ್ನು ಬಿತ್ತಲು ಪ್ರಾರಂಭಿಸಿದರೆ ಆ ದಿನ ವಾತಾವರಣದಲ್ಲಿ ಕಾರ್ಯನಿರತವಾಗಿರುವ ದೈವೀ ಶಕ್ತಿಯು ಬೀಜಗಳಲ್ಲಿ ಬರುವುದರಿಂದ ಸಮೃದ್ಧವಾದ ಫಸಲು ಬರುತ್ತದೆ. ಇದೇ ರೀತಿಯಲ್ಲಿ ಅಕ್ಷಯ ತೃತೀಯಾದಂದು ಹೊಂಡಗಳನ್ನು ಮಾಡಿ ಗಿಡಗಳನ್ನು ನೆಟ್ಟರೆ ಹಣ್ಣಿನ ತೋಟವೂ ಹೇರಳವಾದ ಉತ್ಪಾದನೆಯನ್ನು ನೀಡುತ್ತದೆ.
೬. ಅರಿಶಿನ ಕುಂಕುಮ
ಸ್ತ್ರೀಯರಿಗೆ ಈ ದಿನವು ಮಹತ್ವದ್ದಾಗಿರುತ್ತದೆ. ಚೈತ್ರದಲ್ಲಿ ಪ್ರತಿಷ್ಠಾಪಿಸಿದ ಚೈತ್ರಗೌರಿಯನ್ನು ಅವರಿಗೆ ವಿಸರ್ಜಿಸಬೇಕಾಗಿರುತ್ತದೆ. ಇದಕ್ಕಾಗಿ ಅವರು ಅರಿಶಿನ ಕುಂಕುಮದ ಕಾರ್ಯಕ್ರಮವನ್ನು ಮಾಡುತ್ತಾರೆ.
(ಆಧಾರ ಗ್ರಂಥ : ಸನಾತನ ನಿರ್ಮಿತ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು)
[25/04, 7:30 AM] Pandit Venkatesh. Astrologer. Kannada: ಋಣಸಂದಾಯ ಏನೆಂಬುದನ್ನು ಮನುಷ್ಯರಿಗಿಂತಲೂ ಪ್ರಾಣಿ, ಪ್ರಕೃತಿಯನ್ನು ನೋಡಿ ಕಲಿಯಬೇಕು.
ಪ್ರಾಣಿಗಳಿಗೆ ಹಾಕಿದ ಅನ್ನ,ಹೊಲಕ್ಕೆ ಹಾಕಿದ ಗೊಬ್ಬರ ಯಾವತ್ತೂ ಋಣಸಂದಾಯ ಮಾಡುವಲ್ಲಿ ಮೊದಲು.
ಅದಕ್ಕಾಗಿಯೇ ನಮ್ಮ ಹಿರಿಯರು ಮನುಷ್ಯನನ್ನು ಪೂಜಿಸುವುದಕ್ಕಿಂತ ಪ್ರಾಣಿ, ಪ್ರಕೃತಿಯನ್ನು ಪೂಜಿಸುತ್ತಿದ್ದದ್ದು.
🌹ಶುಭೋದಯ 🌹
[25/04, 7:30 AM] Pandit Venkatesh. Astrologer. Kannada: ✍️🌼🌸☀️🌻🌞
*ಯಾವುದೇ ಯಶಸ್ಸು ಅಂತಿಮವಲ್ಲ. ಸೋಲೂ ಕೊನೆಯಲ್ಲ, ಇವೆರಡನ್ನೂ ಸರಿದೂಗಿಸಿಕೊಂಡು ಸಾಗುವ ಧೈರ್ಯವೇ ಬದುಕು.*
*ಶುಭೋದಯ*
*ಶುಭದಿನ*
*ಜೈ ಜಿನೇಂದ್ರಗಳು*🙏🙏🙏
[25/04, 8:33 AM] Pandit Venkatesh. Astrologer. Kannada: ರವಿಯುತ ಗುರು ಸಂಯೋಗ
ಫಲ.
ರವಿಯು ಆತ್ಮ ಕಾರಕ, ಗುರುವು ಜೀವಕಾರಕ.ಈ ಎರಡು ಗ್ರಹ ಸಂಯೋಗವೇ
'ಜೀವಾತ್ಮ ಸಂಯೋಗ'. ಇದರಿಂದ ಜಾತಕನು ವಿಶೇಷ ಜ್ಞಾನವುಳ್ಳವನು, ಗೌರವ ಘನತೆಗಾಗಿ ಶ್ರಮಿಸುವನು, ಸಮಾಜದಲ್ಲಿಗಣ್ಯವ್ಯಕ್ತಿಯಾಗಿ ಶೋಭಿಸುವವನು. ಸಮಾಜದಲ್ಲಿ ಎಲ್ಲರೂ ಈತನನ್ನುಗೌರವಿಸುವರು.ರಾಜಕೀಯವ್ಯಕ್ತಿಗಳು,ಹಣವಂತರುಗಳೇ ಈತನ ಸ್ನೇಹಿತರಾಗುವರು. ಜಾತಕನು ಪೂರ್ವ ಜನ್ಮದ ಲ್ಲಿ ಈತನ ಮನೆತನದಲ್ಲಿ ಒಬ್ಬನಾಗಿಹುಟ್ಟಿದವನೆಂದೂ
ಹೇಳಿದೆ. (ಈಗ ಜನಿಸಿರುವಮನೆತನದಲ್ಲಿ)
ಕಾರಣವೆಂದರೆ ಮನೆತನದ ಪೂರ್ವಿಕರೊಬ್ಬರ ಗುಣವು ಇವನಲ್ಲಿ ಕಂಡುಬರುವುದು.
ಈತನ ಪಿತೃವೂ ದೈವಿಕಚಿಂತಕನು.ಸಮಾಜದಲ್ಲಿ ಗೌರವವುಳ್ಳವನು.ವಿವಿದ ವಿಷಯಗಳನ್ನು ಅರಿತವನು.
ಈ ಜಾತಕನ ಪುತ್ರನೊಬ್ಬನು
ವಿಶೇಷ ವಿದ್ಯೆ, ವಿನಯ ಸಂಪನ್ನನು, ಉನ್ನತ ಅಧಿಕಾರಿಯು, ವಂಶದಲ್ಲಿಯೇ ವಿಶೇಷ ಕೀರ್ತಿ ಗಳಿಸುವನು, ಅನೇಕ ಧರ್ಮ ಕಾರ್ಯ ಗಳನ್ನು
ಮಾಡುವವನಾಗಿರುತ್ತಾನೆ. ಇವರುಗಳು ನಿರ್ಧರವಾಗಿಯೂ,ಸತ್ಯಾಂಶಪೂರ್ಣವಾಗಿಯೂ ಮಾತುಗಳನ್ನಾಡುವರು. ಈ ಗ್ರಹಗಳು ಸಮಸಪ್ತಮದಲ್ಲಿ ಒಬ್ಬರಿಗೊಬ್ಬರು ಇದ್ದರೂ
ಸಹ ಮೇಲಿನ ಫಲವೆಂದೇಹೇಳಬಹುದು.
ಸ್ತ್ರೀಜಾತಕವಾದರೆಆಕೆಯೂ ವಜ್ರ,ವೈಢೂರ್ಯಾದಿ ನಾನಾ
ಆಭರಣಗಳನ್ನು ಪಡೆಯುವಳು.ಅನೇಕ ಸೇವಕರುಗಳುಳ್ಳವಳು.ತಂದೆಯಮನೆ
ಯಲ್ಲಿ ಹಾಗೂ ಪತಿಯಮನೆಯಲ್ಲಿ ಈಕೆಯ ಮಾತಿಗೆ ಪ್ರತಿಹೇಳುವವರು ಇರುವುದಿಲ್ಲ.ಬಂಧುವರ್ಗದಲ್ಲಿ ಅತಿ ಮುಖ್ಯಸ್ಥಳೆನಿಸಿಕೊಳ್ಳುವಳು.
ಈರೀತಿರವಿ,ಗುರುಸಂಯೋಗವಿರುವವರಿಗೆಮೂಗು ಬಹಳ ಲಕ್ಷಣವಾಗಿರುತ್ತದೆ. ಮುಖದ ಎಲ್ಲಾ ಭಾಗಗಳಿಗಿಂತ ಮೂಗಿನ
ಲಕ್ಷಣವುದೃಷ್ಟಿಗೆಮನೋಹರವಾಗಿರುತ್ತದೆ.
ಇತರೇ ಗ್ರಹಗಳ ದೃಷ್ಟಿ ಸಂಬಂಧ ಸಂಯೋಗ ಪರಿವರ್ತನೆ ಇತ್ಯಾದಿ ಗಳಿಂದ ಫಲದಲ್ಲಿ ಅಲ್ಪ ವ್ಯತ್ಯಾಸ ವಾಗಲು ಸಾಧ್ಯ.🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು📱9482655011 7975508110 🕉️🙏🙏🙏
[25/04, 5:01 PM] Pandit Venkatesh. Astrologer. Kannada: ನೋಡಿ ಕನಸ್ಸು ಬೀಳೋದು ಸಾಮಾನ್ಯ ಆದರೆ ಕೆಲವು ಕನಸ್ಸುಗಳು ಸತ್ಯವಾಗ್ತವೆ.ಮತ್ತು ಕೆಲವು ಕನಸ್ಸುಗಳು ಶಕುನವಾಗ್ತವೆ ಅದೂ ಕೂಡ ಆರೋಗ್ಯವಂತ ಮನುಷ್ಯನಿಗೆ ಮತ್ತು ಮದ್ಯಪಾನ ಯಾವುದೆ ನಶೇ ಪದಾರ್ಥ ಸೇವಿಸದೆ ಮಲಗಿರುವವನಿಗೆ ಮಾತ್ರ.ಅದರಲ್ಲಿ ಕೆಲವು ಕನಸ್ಸುಗಳು ಶಕುನವೂ ಆಗೋದಿಲ್ಲ ನಿಜವೂ ಆಗೋದಿಲ್ಲ.ಕನಸ್ಸು ಬೀಳೋದು ಪ್ರತಿ ಪ್ರಾಣಿಯ ಮನಸ್ಸಿನ ಸಹಜ ಗುಣ.ಆದರೆ ಕೆಲವೊಮ್ಮೆ ಸತ್ತವರು ಕನಸ್ಸಲ್ಲಿ ಬಂದರೆ ಮುಗಿದು ಹೋಯ್ತು ,ಭಯ ಭಯ ಭಯ ,ಈ ಭಯದ ಕಾರಣದಿಂದ ಶಿಖಾಮಣಿಗಳ ಕೇಳಿದ್ರೆ ಮುಗಿತು. ನಿನಗೆ ಪಿತೃದೋಷ.ದೇವ್ವವಾಗಿದ್ದಾರೆ.ಆತ್ಮಕ್ಕೆ ಶಾಂತಿಸಿಕ್ಕಿಲ್ಲ.ನಿನಗೆ ಮಾಟ ಮಾಡಿದಾರೆ ಈ ಕಥೆಗಳು ಹುಟ್ಟಿಕೊಳ್ತವೆ.ಕಂಡಿತ ಅದು ಸುಳ್ಳು ಮತ್ತು ಭ್ರಮೆಯಷ್ಟೆ.ನೀವು ಯಾವ ವ್ಯಕ್ತಿಯನ್ನೋ ವಸ್ತು ವನ್ನೊ ಹೆಚ್ಚಾಗಿ ಪ್ರೀತಿಸ್ತೀರೋ ಆ ವ್ಯಕ್ತಿ ಅಥವಾ ವಸ್ತುವಿಗೆ ತೊಂದರೆ ಯಾದಂತೆ ಅದು ಸತ್ತಂತೆ ಕನಸ್ಸು ಬಿದ್ದುಬಿಳುತ್ತೆ ಕಾರಣ ಆವಸ್ತುವಿನ ಅಥವಾ ವ್ಯಕ್ತಿಯ ಮೇಲೆ ನೀವಿಟ್ಟಿರುವ ಪ್ರೀತಿಯಿಂದ ನಿಮ್ಮಲ್ಲಿರುವ ಭಯ ಅದನ್ನು ಕನಸಿನ ರೂಪದಲ್ಲಿ ಪ್ರಕಟಿಸಿಬಿಡುತ್ತೆ.ನೀವು ನಿಮ್ಮ ಅಜ್ಜಿಯನ್ನು ನೋಡಿದ್ರೆ ನಿಮ್ಮ ಅಪ್ಪನನ್ನು ನೋಡಿದ್ರೆ ನೀವು ಅವರ ಮೇಲಿಟ್ಟಿದ್ದ ಪ್ರೀತಿಯಿಂದ ಮನಸ್ಸು ಕನಸಾಗಿ ತೋರಿಸಬಲ್ಲದೇ ಹೊರತು ನೀವು ಹುಟ್ಟುವ ಮೊದಲೆ ಅವರು ಸತ್ತು ಹೋಗಿ ಅವರ ಮುಖಃವನ್ನೆ ನೋಡಿರದಿದ್ದರೆ ಅವರು ಕನಸ್ಸಿನಲ್ಲಿ ಬರೋಕೆ ಸಾದ್ಯವಿಲ್ಲ.ಕೆಲವು ಮಕ್ಕಳು ತಂದೆಯ ಮುಖವನ್ನೆ ನೋಡಿರಲ್ಲ ಅಂತವರಿಗೆ ತಂದೆ ಯಾವ ಕಾರಣಕ್ಕು ಕನಸಲ್ಲಿ ಕಾಣಲ್ಲ.ಅದೇ ತಾಯಿಗೆ ಕಾಣುತ್ತಾರೆ ಯಾಕೆ ಅಂದ್ರೆ ತಾಯಿ ಅವನ ನೋಡಿರ್ತಾಳೆ.ಹೀಗೆಯೆ ಕೆಲವು ಕನಸ್ಸುಗಳು ಕೂಡ ಮನಸ್ಸಿನಲ್ಲಿ ಇದ್ದರೆ ಮಾತ್ರ ಬರ್ತಾವೆ.ಇದಕ್ಕೆ ಭಯಪಡಬೇಕಾಗು ಇಲ್ಲ.ಯಾಕೆಂದರೆ ಸಾವಿನ ನಂತರ ಆತ್ಮಕ್ಕೆ ಯಾವ ಸಂಭಂದವು ಇರುವುದಿಲ್ಲ.ಶರೀರಕ್ಕೆ ಮಾತ್ರ ಸಂಭಂದ ಅಷ್ಟೆ.
Post a Comment