ಏಪ್ರಿಲ್ 24, 2022
,
8:04PM
ಮುಂಬೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು
ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇಂದು ಮುಂಬೈನಲ್ಲಿ ಮೊಟ್ಟಮೊದಲ "ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಈ ವರ್ಷದ ಫೆಬ್ರವರಿಯಲ್ಲಿ ನಿಧನರಾದ ಮಧುರ ರಾಣಿ ಭಾರತರತ್ನ ದಿವಂಗತ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಹಿರಿಯ ಗಾಯಕಿಯರಾದ ಆಶಾ ಭೋಸಲೆ, ಉಷಾ ಮಂಗೇಶ್ಕರ್ ಮತ್ತು ಮೀನಾ ಮಂಗೇಶ್ಕರ್-ಖಾಡಿಕರ್ ಮತ್ತು ಆದಿನಾಥ್ ಮಂಗೇಶ್ಕರ್ ಅವರು ರಾಷ್ಟ್ರ ಮತ್ತು ಸಮಾಜಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆಗಾಗಿ ಪ್ರಧಾನಿ ಮೋದಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ಈ ಪ್ರಶಸ್ತಿಯನ್ನು ದೇಶದ ಎಲ್ಲಾ ನಾಗರಿಕರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು. ಲತಾಜಿಯವರು ಹಾಡಿದ ಹಾಡುಗಳ ಸೌಂದರ್ಯದ ಅಂಶವನ್ನು ವಿವರಿಸಿದ ಪ್ರಧಾನಮಂತ್ರಿಯವರು ಸಂಗೀತವು ಮಾತೃತ್ವ ಮತ್ತು ಪ್ರೀತಿಯ ಭಾವನೆಯನ್ನು ನೀಡುತ್ತದೆ ಎಂದು ಹೇಳಿದರು. ಸಂಗೀತವು ನಿಮ್ಮನ್ನು ದೇಶಭಕ್ತಿ ಮತ್ತು ಕರ್ತವ್ಯದ ಪರಾಕಾಷ್ಠೆಗೆ ಕೊಂಡೊಯ್ಯಬಹುದು. ಈ ಸಂಗೀತದ ಶಕ್ತಿಯನ್ನು, ಲತಾ ದೀದಿಯ ರೂಪದಲ್ಲಿ ಈ ಶಕ್ತಿಯನ್ನು ನಾವು ನೋಡಿದ್ದೇವೆ ಎಂಬುದು ನಮ್ಮೆಲ್ಲರ ಅದೃಷ್ಟ. ಸಂಗೀತವೂ ಒಂದು ಸಾಧನ ಮತ್ತು ಭಾವನೆಯಾಗಿದೆ ಎಂದು ಅವರು ಹೇಳಿದರು.
ಅಲ್ಲದೆ, ಹಿರಿಯ ನಟಿ ಆಶಾ ಪರೇಖ್, ಜಾಕಿ ಶ್ರಾಫ್ ಮತ್ತು ಗಾಯಕ ರಾಹುಲ್ ದೇಸ್ಪಾಂಡೆ ಅವರಿಗೆ ಮಾಸ್ಟರ್ ದೀನಂತ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರ ಹೊರತಾಗಿ ಮುಂಬೈ ಡಬ್ಬಾವಾಲಾಗಳಿಗೆ ಆನಂದಮಯಿ ಪ್ರಶಸ್ತಿಯನ್ನು ಸಹ ನೀಡಲಾಯಿತು.
Post a Comment