[04/04, 4:18 PM] Pandit Venkatesh. Astrologer. Kannada: 🕉️🕉️🕉️☸️☸️☸️🕉️🕉️
ಲಕ್ಷ್ಮಿ ಬರುವಾಗ ಚಂದ - ಶನಿ ಹೋಗುವಾಗ ಚಂದ.
🍀 ಲಕ್ಷ್ಮಿ ಬರುವಾಗ ಚಂದ - ಶನಿ ಹೋಗುವಾಗ ಚಂದ 🍀
ಸರ್ವ ಮಂಗಳ ಮಾಂಗಲ್ಯೆ ಶಿವೇ ಸರ್ವಾರ್ಥ ಸಾಧಿಕೆ |
ಶರಣ್ಯೇ ತ್ರ್ಯoಬಕೆ ಗೌರಿ ನಾರಾಯಣೀ ನಮೋಸ್ತುತೇ ||
ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ |
ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ ||
🌸 ಹಿಂದೊಮ್ಮೆ ಪುರಾತನನ ಕಾಲದಲ್ಲಿ, ದೇವಿಲಕ್ಷ್ಮಿ ಮತ್ತು ಶನಿದೇವರ ಭೇಟಿಯಾದಾಗ, ಪರಸ್ಪರ ಮಾತುಕತೆ ಮುಂದುವರಿಯುತ್ತಾ, ತಾನು ಮೇಲೆ, ತಾನು ಮೇಲೆ ಎಂಬ ಪೈಪೊಟಿ ಆರಂಭವಾಯಿತು. ಶನಿ ದೇವರು ತಾನು ಸತ್ಯ, ಧರ್ಮ, ನ್ಯಾಯ ಇತ್ಯಾದಿ ನೈತಿಕತೆಗಳನ್ನು ಪ್ರಪಂಚದಲ್ಲಿ ಕಾಪಾಡುತ್ತಿದ್ದೇನೆ, ನಾನು ಪ್ರವೇಶ ಮಾಡಿದ ಮನುಷ್ಯರು ಸಂಸ್ಕಾರಗಳಿಂದ ಶುದ್ಧವಾಗುತ್ತಾ, ಉತ್ತಮ ರಾಗುವಂತೆ ಮಾಡುತ್ತಿದ್ದೇನೆ ಅಂದಾಗ, ಲಕ್ಷ್ಮಿ ದೇವಿ ತಾನು ಪ್ರವೇಶವಾಗುವಲ್ಲಿ ಸಂಪತ್ತು, ಸಮೃದ್ಧಿ ಬಂದು, ಮನುಷ್ಯರ ಜೀವನದಲ್ಲಿ ಸುಖ ಸಂತೋಷ ನೆಲೆಯಾಗುತ್ತದೆ. ಆದ್ದರಿಂದ ನನ್ನ ಮಹತ್ವ ಹೆಚ್ಚು ಅನ್ನುತ್ತಾಳೆ.
🌸 ಹೀಗೆ ಮಾತು ಮುಂದುವರಿಯುತ್ತಾ, 'ಲಕ್ಷ್ಮಿ ಅಂದರೆ ಮಾಯೇ , ನೀನು ಪ್ರವೇಶ ಮಾಡಿದ ಮನೆಯ ಜನರು ಹೆಚ್ಚಾಗಿ - ದ್ರವ್ಯ ಮಧದಿಂದ, ಧರ್ಮವನ್ನು ಮರೆತು ಅಧರ್ಮ ಮಾರ್ಗದಲ್ಲಿ ನಡೆಯುತ್ತಾ ಅಧೋಗತಿ ಹೊಂದುತ್ತಾರೆ. ಇಷ್ಟಲ್ಲದೆ ನೀನು ಬಹಳ ಚಂಚಲ ಸ್ವಭಾವದವಳು. ಒಂದು ಕಡೆ ಶಾಶ್ವತವಾಗಿ ನೆಲೆಸುವುದಿಲ್ಲ. ಅದರಲ್ಲೂ ನೀನು ಹೆಚ್ಚಾಗಿ ಅಧರ್ಮಿಗಳೊಂದಿಗೆ ಇರುವುದರಿಂದ, ಸಮಾಜದಲ್ಲಿ ನೈತಿಕತೆ ಕ್ಷೀಣವಾಗುತ್ತಾ, ಪಾಪ ಕಾರ್ಯಗಳು ಹೆಚ್ಚಾಗುತ್ತಿದೆ' ಅನ್ನುತ್ತಾರೆ ಶನಿದೇವರು.
🌸 ಅದಕ್ಕೆ ಲಕ್ಷ್ಮಿ ದೇವಿ - 'ಹೇಗೆ ಇರಲಿ, ಜನರು ನನ್ನನ್ನು ವಿವಿಧ ಪೂಜೆ ಪುನಸ್ಕಾರಗಳಿಂದ ತಮ್ಮ ಮನೆಗೆ ಆಹ್ವಾನಿಸುತ್ತಾರೆ, ಆದರೆ ಶನಿದೇವ - ನಿನ್ನನ್ನು ಪೂಜಿಸುವುದು, ನಿನ್ನ ತೊಲಗುವಿಕೆಗಾಗಿ. ಎಂತಹ ವಿಪರ್ಯಾಸ. ಇಷ್ಟಾದರೂ ನಿನಗೆ ನಿನ್ನ ಮೇಲೆ ಇಷ್ಟು ಗರ್ವ ಯಾಕೆ ?' ಅನ್ನುತ್ತಾ ಮುಗುಳ್ನಗುತ್ತಾಳೆ.
🌸 ಸಲ್ಪ ಕೋಪಗೊಂಡು ಶನಿದೇವರು - 'ತಾಯೀ ನಿನಗಂತೂ ನ್ಯಾಯ ನೀತಿಯ ಪರಿವೇ ಇಲ್ಲ. ತಪ್ಪು ಜನರಿಗೇ ಹೆಚ್ಚಾಗಿ ಒಲಿಯುತ್ತೀಯ, ಮತ್ತು ಜನರು ನಿನ್ನನ್ನು ತಪ್ಪು ದಾರಿಯಿಂದಾಗಿಯೇ ಹೆಚ್ಚಾಗಿ ಸಂಪಾದಿಸುವುದನ್ನು ನೋಡಿದ್ದೇನೆ. ಆ ತಪ್ಪುಗಳನ್ನು ಸರಿಪಡಿಸಿ ಪುನಃ ಧರ್ಮ ಸಂಸ್ಥಾಪನೆಗೆ ನನ್ನ ಪ್ರವೇಶ ಅನಿವಾರ್ಯ. ಆದ್ದರಿಂದ ಪ್ರಪಂಚದಲ್ಲಿ ನನ್ನ ಮತ್ವವೇ ಹೆಚ್ಚು' ಅನ್ನುತ್ತಾನೆ.
🌸 ಈ ವಾದ - ವಿವಾದಗಳು ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿಯೂ ತೀರ್ಮಾನವಾಗದ ಕಾರಣ - ತ್ರಿಮೂರ್ತಿಯವರ ಸಲಹೆಯಂತೆ, ತ್ರಿಲೋಕ ಸಂಚಾರಿ ನಾರದ ಮಹರ್ಷಿಗಳನ್ನು ಸಂಪರ್ಕಿಸುತ್ತಾರೆ. ಆಗ ನಾರದರು, ಅಮ್ಮ ಲಕ್ಷ್ಮೀ ಮತ್ತು ಶನಿ ದೇವರೇ, ನೀವಿಬ್ಬರೂ ಸಮಾನಾಂತರದೊಂದಿಗೆ, ಸ್ವಲ್ಪ ದೂರ ನಿಧಾನವಾಗಿ ನಡೆದು ಹೋಗಿ, ನಂತರ ತಿರುಗಿ ಬನ್ನಿ, ಆಗ ಈ ಸಮಸ್ಯೆಯ ಪರಿಹಾರವನ್ನು ನಾನು ಹೇಳುತ್ತೇನೆ ಅಂದಾಗ, ಅವರಿಬ್ಬರೂ ಕುತೂಹಲದಿಂದ ನಾರದ ಮಹರ್ಷಿಗಳ ಸಲಹೆಯನ್ನು ಪಾಲಿಸಿದರು.
🌸 ಅವರಿಬ್ಬರ ನಡಿಗೆಯನ್ನು ಪರಿಶೀಲಿಸಿದ ನಾರದರು - ಭಾಗ್ಯಲಕ್ಷ್ಮೀ ನೀನು ಬರುವಾಗ ಎಷ್ಟು ಚಂದವಾಗಿ ಕಾಣಿಸಿದೆ. ಹಾಗೆಯೆ ಶನಿ ಹೋಗುವಾಗ ತುಬಾ ಚಂದವಾಗಿ ಕಾಣಿಸಿದ. ಆದ್ದರಿಂದ ಇಬ್ಬರ ಮಹತ್ವವೂ ಪ್ರಪಂಚದಲ್ಲಿ ಸಮಾನ ಎಂದು ತೀರ್ಮಾನ ಮಾಡಿದರು. ಆಗ ದೇವತೆಗಳ ಪುಷ್ಪವೃಷ್ಟಿಯಾಯಿತು.
ಶ್ರೀ ವೆಂಕಟೇಶ್ ಜ್ಯೋತಿಷ್ಯರು📱9482655011
[05/04, 8:20 AM] Pandit Venkatesh. Astrologer. Kannada: ಜಾತಕದಲ್ಲಿ 12 ಮನೆಗಳಿವೆ ಪ್ರತಿಯೊಂದು ಭಾವಗಳೆನ್ನುತ್ತೇವೆ.
1ನೇ ಭಾವ :
ಲಗ್ನ ಭಾವ ಜಾತಕನ ಸ್ವಭಾವ. ಗುಣ ಆಕಾರ ವಿವರಣೆ.
2 ನೆ ಭಾವ :
ಕುಟುಂಬ 'ಧನ
ಇವುಗಳನ್ನು ತಿಳಿಸುತ್ತದೆ.
3ನೆ ಭಾವ
ಭಾತೃ ಬಾವ :
ಸಹೋದರ-ಸಹೋದರಿಯರ ವಿವರಣೆ.
4 ನೇ ಭಾವ :
ಸುಖಸ್ಥಾನ :
ಮಾತೃ ಗೃಹ ವಾಹನ ಸುಖ ಸಂತೋಷ ಗಳ ವಿವರಣೆ. ಮತ್ತು [ವಿದ್ಯೆ ಬುದ್ಧಿ]
5ನೆ ಭಾವ
ಸಂತಾನ ಭಾವ
ಮಕ್ಕಳ ವಿಚಾರ.
ಮತ್ತು ಶಿಕ್ಷಣ.
6ನೇ ಭಾವ :
ರೋಗ ರಿಪು ಋಣ
7 ನೇ ಭಾವ :
ಕಳತ್ರಸ್ಥಾನ.
ಮದುವೆ ಹೆಂಡತಿ ಪಾಲುಗಾರಿಕೆ ಮುಂತಾದ ಬಗ್ಗೆ.
8ನೇ ಭಾವ :
ಆಯುಸ್ಸು ಕಂಟಕ.
ಉಪಜೀವನದ ಬಗ್ಗೆ.
ಮಹಿಳೆಯರಿಗೆ ಮಾಂಗಲ್ಯ ಬಾವ
9ನೇ ಭಾವ :
ಭಾಗ್ಯಸ್ಥಾನ
ಆಸ್ತಿ ಅಂತಸ್ತು
ತಂದೆಯಿಂದ ದೊರೆಯುವ ಪಿತ್ರಾರ್ಜಿತ ಆಸ್ತಿ ಮುಂತಾದವು
10ನೇ ಭಾವ :
ಕರ್ಮ ಸ್ಥಾನ
ಉದ್ಯೋಗದ ಬಗ್ಗೆ
ವಿವರಣೆ.
11 ನೇ ಭಾವ :
ಲಾಭ ಬಾವ ಹಣ ಸಂಪಾದನೆ ಮುಂತಾದ್ದುದ್ದು
12ನೇ ಭಾವ :
ವ್ಯಯಸ್ಥಾನ
ಸಂಪಾದನೆಯ ಮಾಡಿದ ಹಣವನ್ನು ಯಾವ ರೀತಿ ಖರ್ಚಾಗುತ್ತದೆ ಎಂಬುದರ ಬಗ್ಗೆ ತಿಳಿಸುತ್ತದೆ.
*✍️ವಿಶುಕುಮಾರ್🦚*
[05/04, 8:20 AM] Pandit Venkatesh. Astrologer. Kannada: ದಡ್ಡಮಕ್ಕಳು
ಮೇಷ ಆಥವಾ ವೃಶ್ಚಿಕ ಲಗ್ನವಾಗಿ ಪಂಚಮದಲ್ಲಿ ಸೂರ್ಯ ಅಷ್ಟಮದಲ್ಲಿ ಶನಿ ಶುಭಪ್ರಭಾವಕ್ಕೆ ಒಳಗಾಗದೆ ಇದ್ದರೆ
ದಡ್ಡ ಮಕ್ಕಳು
ಜನಿಸುತ್ತವೆ.
[05/04, 8:20 AM] Pandit Venkatesh. Astrologer. Kannada: ಉದ್ಯೋಗಜ್ಯೋತಿಷ್ಯ
ಧನಸ್ಸು ರಾಶಿ :
ಅಧಿಪತಿ ಗುರು.
ದ್ವಿಸ್ವಭಾವ ರಾಶಿ
ಅಗ್ನಿತತ್ವರಾಶಿ.
ವಿದ್ಯಾ ವ್ಯಾಸಂಗದಲ್ಲಿ ಮುಂದುವರೆದು ಕಲೆ-ಸಾಹಿತ್ಯ ವೈದ್ಯ ತಂತ್ರಜ್ಞಾನ ಪದವಿಗಳನ್ನು ಗಳಿಸಿ ಪ್ರಸಿದ್ಧರಾಗುತ್ತಾರೆ
ಅಧಿಪತಿ ಗುರು ಆಗಿರುವುದರಿಂದ ಶಿಕ್ಷಣಕ್ಕೆ ಸಂಬಂಧಿಸಿದಂತೆ ವೃತ್ತಿಯನ್ನು ಅವಲಂಬಿಸುತ್ತಾರೆ.
ವೈದ್ಯ ತಂತ್ರಜ್ಞಾನ ಕಂಪ್ಯೂಟರು ಗಣಿತಗಳಲ್ಲಿ ಪ್ರೌಢಿಮೆ.
ಸರಕಾರಿ ಅರೆ ಸರಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ
ಕೈಂಕರ್ಯ
ಸಾಧಿಸುತ್ತಾರೆ.
ದೇವತಾನುಗ್ರಹ ವಿಶೇಷವಾಗಿದ್ದು ವೃತ್ತಿಯಲ್ಲಿ ಹಿತಕರ ವಾತಾವರಣ ನೆಮ್ಮದಿ ಇರುತ್ತದೆ.
ದಶಮ ಸ್ಥಾನಕ್ಕೆ ಬುಧನು ಅಧಿಪತಿ
ಬುದನ ಕಾರಕತ್ವದ ಸೂಕ್ಷ್ಮ ಸಂವೇದನಾಶೀಲ
ವೃತ್ತಿಗಳು ಲಭಿಸುತ್ತವೆ.
ಮಂತ್ರ-ತಂತ್ರ ವೈದ್ಯ ತಂತ್ರಜ್ಞಾನಗಳಲ್ಲಿ
ಪ್ರೌಡಿಮೆ ಸಾಧಿಸಿ ಸಂಶೋಧನೆ ಕೈಗೊಳ್ಳುವ ಇವರು ಸಣ್ಣ ಹುದ್ದೆಯನ್ನು ಪಡೆದರು ಕಾಲಕ್ರಮೇಣ ಉನ್ನತ ಹುದ್ದೆ ಸಂಪಾದಿಸುತ್ತಾರೆ.
ನೇರವಾಗಿ ನಿರ್ದಿಷ್ಟವಾಗಿ ಮಾತನಾಡುವ ಇವರು ಸಹೋದ್ಯೋಗಿಗಳ ಮನಸ್ಸನ ಗೆಲ್ಲುವರು
ಹಿರಿಯ ಅಧಿಕಾರಿಗಳ ಬೆಂಬಲ ಸಹಾಯ ಚೆನ್ನಾಗಿರುತ್ತದೆ.
ಪತ್ರಿಕೋದ್ಯಮ ಮುದ್ರಣ ನಚೆ ತಯಾರಿ ಮುಂತಾದ ವಿಶಿಷ್ಟ ರೀತಿಯ ವೃತ್ತಿಗಳು ಇವರಿಗೆ ಲಭಿಸುತ್ತವೆ.
ಶಿಕ್ಷಣ ಕ್ಷೇತ್ರದಲ್ಲಿ ಮೇಲಾಧಿಕಾರಿ ಯಾಗಿ ಪುಸ್ತಕ ಪ್ರಕಾಶನ ವ್ಯವಸ್ಥೆ ಮಾಡಿಕೊಳ್ಳುವ ಅಧಿಕಾರಿಯಾಗಿ ಇವರು ಸೇವೆ ಸಲ್ಲಿಸುತ್ತಾರೆ.
ಬುಧನು ಕರ್ಮಸ್ಥಾನದ ಅಧಿಪತಿಯಾಗಿರುವುದರಿಂದ ಇವರು ವ್ಯಾಪಾರ ವಹಿವಾಟುಗಳಲ್ಲಿ ಜನಪ್ರಿಯರಾಗುತ್ತಾರೆ.
ಯೋಗಕಾರಕರು ರವಿ ಬುಧ ಆಗಿರುವುದರಿಂದ
ಸರ್ಕಾರಿ ಮೂಲದ ವೃತ್ತಿ ಲಭಿಸುತ್ತದೆ.
ದೇವಸ್ಥಾನದ ನಿರ್ವಹಣೆ
ಮಠಾಧಿಪತಿ ವೃತ್ತಿ ಪೌರೋಹಿತ್ಯ ಮುಂತಾದ ಆಧ್ಯಾತ್ಮಕ ಕ್ಷೇತ್ರದ
ವೃತ್ತಿಗಳಲ್ಲೂ ಪ್ರಕಾಶಿಸುತ್ತಾ ರೆ.
ಶಿಕ್ಷಣ ಕ್ಷೇತ್ರದಲ್ಲಿ ಬೋಧಕರಾಗಿ ಬ್ಯಾಂಕುಗಳಲ್ಲಿ ಕರ್ತವ್ಯ ನಿರ್ವಹಣೆ ಕಚೇರಿ ನಿರ್ವಹಣೆ ವೃತ್ತಿ .ಹಾಗೂ ಬೆರಳಚ್ಚು ಕಂಪ್ಯೂಟರ್ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಇವರಿಗೆ ಅಷ್ಟಮ ಉಪಜೀವನ ಸ್ಥಾನಕ್ಕೆ ಚಂದ್ರನು ಅಧಿಪತಿ.
ವಾಹನ ಚಾಲನೆಯಲ್ಲಿ ಪ್ರೌಢ ಮೀರುತ್ತದೆ.
ಒಂದಕ್ಕಿಂತ ಹೆಚ್ಚು ಉದ್ಯೋಗಗಳಿದ್ದು
ಅಪಾರ ಹಣ ಸಂಪಾದಿಸಿ ಅಷ್ಟೈಶ್ವರ್ಯಗಳನ್ನು ಅನುಭವಿಸುತ್ತಾರೆ.
ಉದ್ಯೋಗದಲ್ಲಿ ಹೆಚ್ಚಿನಅಂತಸ್ತು ಇವರಿಗೆ ದೊರಕುತ್ತದೆ.
*✍️ವಿಶುಕುಮಾರ್🦚*
[05/04, 8:20 AM] Pandit Venkatesh. Astrologer. Kannada: ಮುಪ್ಪಿನಲ್ಲಿ ಮಕ್ಕಳು :
ಪಂಚಮಾಧಿಪತಿಯು
ಮತ್ತು ಶನಿಯು ತೃತಿಯ ಭಾವದಲ್ಲಿದ್ದು
ಭಾಗ್ಯ ಭಾವದಲ್ಲಿ ಗುರುವಿದ್ದರೆ
ಬಹಳ ತಡವಾಗಿ ಇಳಿವಯಸ್ಸಿನಲ್ಲಿ ಮಕ್ಕಳಾಗುತ್ತವೆ.
ಪಂಚಮ ಭಾವದಲ್ಲಿ ದುಷ್ಟಗ್ರಹಗಳು ಇದ್ದರು ಪಂಚಮಾಧಿಪತಿಯು ತ್ರಿಕೋಣದಲ್ಲಿ ಗುರುವಿನೊಂದಿಗೆ ಅಥವಾ ಗುರು ದೃಷ್ಟಿಗೆ ಒಳಗಾದರು ಮುದಿತನದಲ್ಲಿ ಮಕ್ಕಳಾಗುತ್ತವೆ.
[05/04, 8:20 AM] Pandit Venkatesh. Astrologer. Kannada: ನವಗ್ರಹಗಳ ವೃತ್ತಿ ಕಾರಕತ್ವ:
ಉದ್ಯೋಗಂ ಪುರುಷ ಲಕ್ಷಣಂ ಎಂಬ ಉಕ್ತಿಯಂತೆ ಮನುಷ್ಯನು ತನ್ನ ಪುರುಷಾರ್ಥವನ್ನು
[ಧರ್ಮ ಅರ್ಥ ಕಾಮ ಮೋಕ್ಷ ] ಈಡೇರಿಸಿಕೊಳ್ಳಲು ತನ್ನ ವಿದ್ಯೆ ಅಂತಸ್ತಿಗೆ ತಕ್ಕಂತೆ ವೃತ್ತಿಧರ್ಮವನ್ನು ಆಚರಿಸಿಕೊಂಡು ಉದರಂಭರಣ ಮಾಡಬೇಕು:
ಜನ್ಮಸಮಯ ಕಾಲದಲ್ಲಿ ನವಗ್ರಹಗಳು ಹುಟ್ಟಿದ ಮಗುವಿನ ಸಮಸ್ತ ಜೀವನದ ಆಗುಹೋಗುಗಳನ್ನು ನಿರ್ಧರಿಸುತ್ತಾರೆ.
ಮಗುವಿನ ಜಾತಕದಲ್ಲಿ ವಿದ್ಯೆ ಸಂಸ್ಕಾರ ಅದೃಷ್ಟ ಕರ್ಮ ಜೀವನ ಅಂತಸ್ತು ಸ್ಥಾನಮಾನಗಳು ಕ್ರೋಡೀಕರಿಸಲು ಪಟ್ಟು ಇದಮಿತ್ತಂ
ಎಂದು ದಾಖಲಾಗಿರುತ್ತದೆ.
ಸೂಕ್ಷ್ಮಮತಿಗಳು ಮಾತ್ರ ಜಾತಕವನ್ನು ಪರಿಶೀಲಿಸಿ ಮಗುವಿನ ಜೀವನವಿಧಾನವನ್ನು ಪುರುಷಾರ್ಥಗಳ ಬಲಾಬಲವನ್ನು ವಿಮರ್ಶಿಸಿ ಹೇಳಬಲ್ಲರು.
ನವಗ್ರಹಗಳ ಕಾರಕತ್ವ ದಿಂದ ಮನಸ್ಸಿನ ದೇಹ-ಮನಸ್ಸು ಪ್ರಾಣ ಹುಟ್ಟಿದ್ದು ಜೀವನ ಕ್ರಮಗಳ ಬಗ್ಗೆ ಪ್ರತಿಯೊಂದು ಮಗುವಿನ ಜಾತಕದಲ್ಲಿ ಸಂಕ್ಷಿಪ್ತವಾಗಿ ಅಡಕವಾಗಿರುತ್ತವೆ
ಸೂರ್ಯನು ಮನುಷ್ಯನ ದೇಹದ ಆರೋಗ್ಯವನ್ನು ನಿಯಂತ್ರಿಸುತ್ತಾನೆ.
ಚಂದ್ರನು ಮನುಷ್ಯನ ಮಾನಸಿಕ ಆರೋಗ್ಯವನ್ನು ನೀಡುತ್ತಾನೆ.
ಸೂರ್ಯಚಂದ್ರರು ಮಾನವನ ಜೀವಿತದ ಮೇಲೆ ಬಹಳ ಪರಿಣಾಮ ಬೀರುತ್ತಾರೆ.
ವ್ಯಕ್ತಿಯ ಜಾತಕದಲ್ಲಿ ಲಗ್ನಕ್ಕೆ ಹತ್ತನೆಯ ಅಥವಾ ಕರ್ಮಸ್ಥಾನದ ಮೇಲೆ
ಉದ್ಯೋಗವನ್ನು ನಿಷ್ಕರ್ಷಿಸಿ ಬೇಕು.
ಜನ್ಮಲಗ್ನ ಮತ್ತು ಚಂದ್ರ ಲಗ್ನಕ್ಕೆ ಕರ್ಮಸ್ಥಾನದ ಅಧಿಪತಿಯ ಬಲಾಬಲಗಳ ಮೇಲೆ ವೃತ್ತಿಧರ್ಮವನ್ನು ಹೇಳಬೇಕು.
ಜನ್ಮ ಲಗ್ನ ಅಥವಾ ಚಂದ್ರ ಲಗ್ನಕ್ಕೆ ದಶಮ ಕೇಂದ್ರಸ್ಥಾನದಲ್ಲಿ
ಯಾವುದೇ ಗ್ರಹಗಳು ಇಲ್ಲದಿದ್ದರೆ ಜಾತಕನಿಗೆ ಉದ್ಯೋಗ ದೊರೆಯುವುದು
ಕ್ಲಿಷ್ಟದಾಯಕವಾಗಿದೆ.
ವಿದ್ಯೆಯ ಅಂತಸ್ತಿಗೆ ತಕ್ಕನಾದ ವೃತ್ತಿಯು ಲಭಿಸದೆ ಇರಬಹುದು.
ಉದ್ಯೋಗ ಪ್ರಕರಣದಲ್ಲಿ
ನವಗ್ರಹಗಳು
ಯಾವ ರೀತಿಯಲ್ಲಿ ವೃತ್ತಿಗಳ ಮೇಲೆ ಕಾರಕತ್ವಗಳನ್ನು ಹೊಂದಿದ್ದಾರೆ ಎಂದು ಪರಿಶೀಲಿಸಿ ತಿಳಿಯಬೇಕು:
*✍️ವಿಶುಕುಮಾರ್🦚*
[05/04, 8:21 AM] Pandit Venkatesh. Astrologer. Kannada: ಲಕ್ಷ್ಮೀ ಪಂಚಮಿ ಸಮಯ
ಲಕ್ಷ್ಮಿ ಪಂಚಮಿ ಮಂಗಳವಾರ, ಏಪ್ರಿಲ್ 5, 2022
ಪಂಚಮಿ ತಿಥಿ ಆರಂಭ - 03:45
ಏಪ್ರಿಲ್ 05, 2022
ಪಂಚಮಿ ತಿಥಿ ಕೊನೆಗೊಳ್ಳುತ್ತದೆ - 06:01 PM ಏಪ್ರಿಲ್ 06, 2022 ರಂದು
2022 ಲಕ್ಷ್ಮಿ ಪಂಚಮಿ
ಚೈತ್ರ ಶುಕ್ಲ ಪಂಚಮಿ ಕಲ್ಪಾದಿ ತಿಥಿ. ಸಮಯದ ವೈದಿಕ ವಿಭಾಗದ ಪ್ರಕಾರ, ಈ ದಿನವು ಕಲ್ಪದ ಆರಂಭಕ್ಕೆ ಸಂಬಂಧಿಸಿದೆ. ಹಿಂದೂ ಪಂಚಾಂಗದ ಪ್ರಕಾರ ಗುಡಿ ಪಾಡ್ವಾ/ಯುಗಾದಿ ಮತ್ತು ಅಕ್ಷಯ ತೃತೀಯ ದಿನಗಳು ಸೇರಿದಂತೆ ವರ್ಷದಲ್ಲಿ ಏಳು ಕಲ್ಪಾಡಿ ದಿನಗಳಿವೆ.
ಕಲ್ಪಾಡಿಯಲ್ಲದೆ, ಈ ದಿನವನ್ನು ಲಕ್ಷ್ಮಿ ಪಂಚಮಿ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ಹೆಸರೇ ಸೂಚಿಸುವಂತೆ, ಈ ದಿನವನ್ನು ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆಯಾದ ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ.
ಲಕ್ಷ್ಮೀ ಪಂಚಮಿಯನ್ನು ಶ್ರೀ ಪಂಚಮಿ ಮತ್ತು ಶ್ರೀ ವ್ರತ ಎಂದೂ ಕರೆಯಲಾಗುತ್ತದೆ. ಶ್ರೀ ಎಂಬುದು ಲಕ್ಷ್ಮಿ ದೇವಿಯ ಇನ್ನೊಂದು ಹೆಸರು. ಈ ದಿನವನ್ನು ವಸಂತ ಪಂಚಮಿಯೊಂದಿಗೆ ಗೊಂದಲಗೊಳಿಸಬಾರದು, ಇದನ್ನು ಶ್ರೀ ಪಂಚಮಿ ಎಂದೂ ಕರೆಯಲಾಗುತ್ತದೆ ಆದರೆ ಕಲೆ ಮತ್ತು ಜ್ಞಾನದ ದೇವತೆಯಾದ ಸರಸ್ವತಿ ದೇವಿಗೆ ಸಮರ್ಪಿತವಾಗಿದೆ.
ಲಕ್ಷ್ಮಿ ಪಂಚಮಿಯ ದಿನವು ಹಿಂದೂ ಹೊಸ ವರ್ಷದ ಮೊದಲ ವಾರದಲ್ಲಿ ಬರುತ್ತದೆ.
ವರ್ಷದ ಆರಂಭದಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಜನರು ಒಂದು ದಿನದ ಉಪವಾಸವನ್ನು ಆಚರಿಸುತ್ತಾರೆ ಮತ್ತು ಮನೆಯಲ್ಲಿ ಮತ್ತು ಕಚೇರಿಯಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ಕೆಲವು ವ್ಯಾಪಾರ ಸಂಸ್ಥೆಗಳು ಮತ್ತು ವ್ಯಾಪಾರಿಗಳು ಅದೇ ದಿನದಲ್ಲಿ ವಿಸ್ತಾರವಾದ ಪೂಜೆಯನ್ನು ಮಾಡುತ್ತಾರೆ.
Post a Comment