[05/04, 8:47 AM] Pandit Venkatesh. Astrologer. Kannada: *ಪ್ರತೀದಿನ ನಮ್ಮೆಲ್ಲರಿಗೂ ಭಗವಂತನು ಹೇಳುವ ಮಾತುಗಳು.*
✓ ಮಗು ನಿನ್ನ ಕನಸುಗಳೆಲ್ಲವೂ ಕಾರ್ಯರೂಪಕ್ಕೆ ಬರಲಿವೆ ಅವಸರ ಬೇಡ, ಸಕಾರಾತ್ಮಕವಾಗಿರು.
✓ ನಾನು ಸಂಪೂರ್ಣವಾಗಿ ನಿನ್ನ ಜೊತೆಗಿದ್ದೇನೆ ,ನಿನ್ನ ಕೈ ಹಿಡಿದು ನಡೆಸುತ್ತೇನೆ. ಈ ಕುರಿತು ಯಾವ ಸಂದರ್ಭದಲ್ಲೂ ನನ್ನಮೇಲೆ ಸಂದೇಹ ಬೇಡ.
✓ ನಿನ್ನ ವೈದ್ಯಕೀಯ ವರದಿ ಏನು ಹೇಳುತ್ತದೆ ಎಂದು ನನಗೆ ತಿಳಿದಿದೆ, ಧೈರ್ಯ ಕೆಡಬೇಡ ಯಾವ ಕಾರಣಕ್ಕೂ ಮಾನಸಿಕ ಉದ್ವೇಗ ಬೇಡ.
✓ ನಿನ್ನ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂದು ನನಗೆ ತಿಳಿದಿದೆ, ಅದರ ಯೋಚನೆ ಬಿಟ್ಟು, ಸತತ ಪರಿಶ್ರಮದಿಂದ ಪ್ರಾಮಾಣಿಕವಾಗಿ ಕೆಲಸಮಾಡು, ಎಂದೂ ಸೋಮಾರಿತನದಲ್ಲಿ ಬರಬೇಡ.
✓ ನಿನ್ನ ವಿರುದ್ಧವಿರುವ ಜನರನ್ನೂ ನಾನು ಸದಾ ನೋಡುತ್ತಿದ್ದೇನೆ, ನಿನ್ನ ಕಷ್ಟದ ಸಮಯದಲ್ಲಿ ಹಾಗೂ ನಿನ್ನ ಒಂಟಿತನದಲ್ಲಿ ನಾನು ಸದಾ ನಿನ್ನ ನೆರಳಾಗಿ ನಿಲ್ಲುತ್ತೇನೆ ಯಾವುದಕ್ಕೂ ಅಂಜಿಕೆ ಪಡಬೇಡ.
✓ ನಿನ್ನ ಕನಸುಗಳು ಎಷ್ಟು ದೊಡ್ಡವು ಎಂದೂ ನನಗೆ ತಿಳಿದಿದೆ, ಸ್ವಾರ್ಥ ಅಥವಾ ವ್ಯರ್ಥ ಚಿಂತೆಗಳ ಗೋಜು ನಿನಗೆ ಬೇಡ, ಪ್ರಾಮಾಣಿಕವಾಗಿ ಕೆಲಸಮಾಡು ಸಫಲತೆ ನಿನ್ನದೇ ಆಗಿದೆ.
✓ ನನ್ನ ಮಾತನ್ನು ಸ್ಪಷ್ಟವಾಗಿ ಕೇಳು; ನಾನು ನಿನ್ನನ್ನು ಎಂದೂ ಸೋಲಲು ಅಥವಾ ಯಾರ ಮುಂದೆಯು ತಲೆ ತಗ್ಗಿಸಲು ಎಂದೂ ಬಿಡುವುದಿಲ್ಲಾ.
*ಹೀಗೆ ಪ್ರತಿದಿನ ನಮ್ಮ ಅಂತರಂಗದ ಬಾಗಿಲು ತೆರೆದು ಭಗವಂತನ ಈ ಮಾತುಗಳನ್ನು ಆಲಿಸುವುದನ್ನು ಬಿಟ್ಟು, ಯಾವುದೇ ಪ್ರಯತ್ನ ಮಾಡದೆ ಸುಮ್ಮನೆ ನಾವು ದೇವರೇ ಇಲ್ಲವೆಂದು ಅವನನ್ನು ದೂರುವ ಬದಲು, ಅವನ ಮಾತುಗಳನ್ನು ಕೇಳಿಸಿಕೊಳ್ಳುವ ತಾಳ್ಮೆ ಮತ್ತು ಶ್ರದ್ಧೆಯನ್ನು ನಮ್ಮಲ್ಲಿ ರೂಢಿಸಿಕೊಳ್ಳಬೇಕಲ್ಲವೆ..? ಅದಕ್ಕೆ ವಿಶ್ವಗುರು ಬಸವಣ್ಣನವರು ಹೇಳಿರುವುದು ನಂಬಿ ಕರೆದರೆ ಓ ಏನ್ನನೆ ಪರಶಿವನು ಎಂದು. ಅಂತರಂಗದ ಬಾಗಿಲು ತೆರೆಯುವುದು ಎಂದರೆ ಏಕಾಂತದಲ್ಲಿ ಕುಳಿತು ಎಲ್ಲಾ ವ್ಯವಹಾರ/ ಜಂಜಾಟಗಳನ್ನು ಮರೆತು ಮನಸ್ಸಿನ ಮೌನದಿಂದ ಭಗವಂತನನ್ನು ಸ್ಮರಿಸುತ್ತಾ ಅವನ ಮಾತುಗಳನ್ನು ಆಲಿಸುವುದಾಗಿದೆ. ಇದಕ್ಕೆ ಧ್ಯಾನ (Meditation) ಎಂದೂ ಸಹ ಕರೆಯಬಹುದು. ಇದನ್ನು Practice ಮಾಡಿದವರಿಗೆ ಖಂಡಿತವಾಗಿ ಹೊಸ ಅನುಭವ ಆಗುವುದು.*
*🙏ಶುಭದಿನ🙏*
[05/04, 8:47 AM] Pandit Venkatesh. Astrologer. Kannada: 🕉️ ಓಂ ಶ್ರೀ ಗುರುಭ್ಯೋ ನಮಃ 🕉️ *ಗೋವುಗಳನ್ನು ಪೂಜಿಸಿದರೆ ಈ ಎಲ್ಲಾ ಗ್ರಹ ದೋಷಗಳು ದೂರಾಗುವುದು ಖಚಿತ..!*
ಗೋವಿನಲ್ಲಿ 33 ಕೋಟಿ ದೇವಾನುದೇವತೆಗಳು ನೆಲೆಸಿದ್ದಾರೆನ್ನುವುದು ಹಿಂದೂ ಧರ್ಮದಲ್ಲಿನ ನಂಬಿಕೆ. ಗೋವಿನ ಸೇವೆಯಿಂದ ಯಾವೆಲ್ಲಾ ಸಮಸ್ಯೆಗಳು ದೂರಾಗಲಿದೆ ಗೊತ್ತೇ..? ಗೋಪೂಜೆಯಿಂದ ಈ ಎಲ್ಲಾ ಸಮಸ್ಯೆಗಳು ದೂರಾಗುವುದು..
ಹಿಂದೂ ಧರ್ಮದಲ್ಲಿ ಗೋವಿಗೆ ಪೂಜ್ಯ ಸ್ಥಾನವನ್ನು ನೀಡಲಾಗಿದೆ. ತಾಯಿ ಹಸುವಿನ ಸೇವೆ ಮಾಡುವುದರಿಂದ ದೊಡ್ಡ ತೊಂದರೆಗಳೂ ದೂರವಾಗುತ್ತವೆ ಎಂಬುದು ನಂಬಿಕೆ. ಗೋವಿನಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ ಎನ್ನುವ ನಂಬಿಕೆಯಿದೆ. ಹಸುವಿನ ಸೇವೆಯಿಂದ ಈ ಎಲ್ಲಾ 33 ಕೋಟಿ ದೇವಾನುದೇವತೆಗಳು ಸಂತೋಷಗೊಂಡು ಆ ವ್ಯಕ್ತಿಯ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯದ ವರವನ್ನು ನೀಡುತ್ತಾರೆ ಎನ್ನುವ ನಂಬಿಕೆಯಿದೆ. ಅಷ್ಟೇ ಅಲ್ಲ, ಗೋವಿನ ಸೇವೆಯಿಂದ ಜಾತಕದ ಎಲ್ಲಾ ದೋಷಗಳೂ ನಿವಾರಣೆಯಾಗುತ್ತದೆ. ನಿಮ್ಮ ಜೀವನದಲ್ಲಿ ಹಲವಾರು ಸಮಸ್ಯೆಗಳಿದ್ದರೆ, ಈ ಹಸುವಿಗೆ ಸಂಬಂಧಿತ ಕ್ರಮಗಳನ್ನು ಮಾಡುವುದರಿಂದ, ನಿಮ್ಮ ತೊಂದರೆಗಳು ಶೀಘ್ರದಲ್ಲೇ ದೂರವಾಗುತ್ತವೆ ಎಂದು ಹೇಳಲಾಗುತ್ತದೆ.
*ಸಮೃದ್ಧಿಗಾಗಿ*
ಗೋವಿಗೆ ತಿನ್ನಿಸಿದ ಯಾವುದೇ ವಸ್ತು ನೇರವಾಗಿ ದೇವರು-ದೇವತೆಗಳನ್ನು ತಲುಪುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಆದ್ದರಿಂದ ಮುಂಜಾನೆ ನಾವು ತಿನ್ನಲು ತಯಾರಿಸಿದ ರೊಟ್ಟಿಯನ್ನು ಅಥವಾ ಇನ್ನಾವುದೇ ಸಾತ್ವಿಕ ಆಹಾರವನ್ನು ಮೊದಲು ಹಸುವಿಗೆ ನೀಡಿ ನಂತರ ನಾವು ಆಹಾರವನ್ನು ತೆಗೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎನ್ನುವ ನಂಬಿಕೆಯಿದೆ.
*ಬುಧ ಗ್ರಹದ ದುಷ್ಪರಿಣಾಮಗಳನ್ನು ನಾಶಮಾಡಲು*
ಜಾತಕದಲ್ಲಿ ಬುಧ ಗ್ರಹ ದುರ್ಬಲವಾಗಿದ್ದರೆ ಅಥವಾ ಇನ್ಯಾವುದೇ ಕಾರಣದಿಂದ ಅದರ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದರೆ ಬುಧವಾರದಂದು ಹಸುವಿಗೆ ಹಸಿರು ಮೇವನ್ನು ತಿನ್ನಿಸಲು ಸಲಹೆ ನೀಡಲಾಗುತ್ತದೆ. ಇದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ನಮ್ಮ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
*ಶನಿಗೆ ಸಂಬಂಧಿಸಿದ ಸಮಸ್ಯೆಗಳಿಗೆ*
ಶನಿಗೆ ಸಂಬಂಧಿಸಿದ ಯಾವುದೇ ರೀತಿಯ (ಸಾಡೇಸಾತಿ, ಚತುರ್ಥ, ಪಂಚಮ, ಕಂಟಕ ಶನಿ, ಶನಿ ದಶಾ/ಭುಕ್ತಿ....) ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಆಗ ಕಪ್ಪು ಬಣ್ಣದ ಹಸುವಿನ ಸೇವೆ ಮಾಡುವುದು ಸೂಕ್ತ. ಅದೇ ಸಮಯದಲ್ಲಿ, ಸಾಧ್ಯವಾದರೆ, ಬ್ರಾಹ್ಮಣರಿಗೆ ಕಪ್ಪು ಬಣ್ಣದ ಹಸುವನ್ನು ದಾನ ಮಾಡುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ.
*ಮಂಗಳ ಗ್ರಹಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ*
ಜಾತಕದಲ್ಲಿ ಮಂಗಳ ದೋಷವಿದ್ದರೆ ಆ ವ್ಯಕ್ತಿಯು ತನ್ನ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕೆಂಪು ಬಣ್ಣದ ಹಸುವಿಗೆ ಆಹಾರವನ್ನು ನೀಡಬೇಕು. ನಂತರ ಮಂಗಳವಾರದಂದು ಗೋಮಾತೆಯನ್ನು ಪೂಜಿಸಿ, ತಿನ್ನಲು ಬೆಲ್ಲವನ್ನು ನೀಡಬೇಕು.
*ಗುರುವಿಗೆ ಸಂಬಂಧಿಸಿದ ತೊಂದರೆಗಳಿಗೆ*
ಗುರುವು ಬಲವಾಗಿಲ್ಲದಿದ್ದರೆ ಮದುವೆ ವಿಳಂಬವಾಗುತ್ತದೆ. ಶಿಕ್ಷಣದಲ್ಲಿ ಅಡೆತಡೆಗಳು ಎದುರಾಗುತ್ತದೆ. ಇದರೊಂದಿಗೆ, ಅನೇಕ ಸಮಸ್ಯೆಗಳು (ಆರ್ಥಿಕ, ಉದ್ಯೋಗ, ಸಂತಾನ...( ನಿಮ್ಮನ್ನು ಸುತ್ತುವರೆಯಲು ಆರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಗುರುವಾರ, ಹಸುವಿಗೆ ಅರಿಶಿನದ ತಿಲಕವನ್ನು ಹಣೆಗೆ ಹಚ್ಚಿ ಮತ್ತು ಗೋಧಿ ಹಿಟ್ಟಿನಲ್ಲಿ ಬೆಲ್ಲ, ನೆನೆಸಿದ ಹೆಸರುಬೇಳೆ ಮತ್ತು ಚಿಟಿಕೆ ಅರಿಶಿನ ಸೇರಿಸಿ ತಿನ್ನಿಸಿ.
*ಪಿತೃ ದೋಷವನ್ನು ನಿವಾರಣೆ ಮಾಡಲು*
ವ್ಯಕ್ತಿಯ ಜಾತಕದಲ್ಲಿ ಪಿತೃದೋಷವಿದ್ದರೆ ಅಮಾವಾಸ್ಯೆ ದಿನದಂದು ಹಸುವಿಗೆ ರೊಟ್ಟಿ, ಬೆಲ್ಲ, ಹಸಿರು ಮೇವುಗಳನ್ನು ತಿನ್ನಲು ನೀಡಿ. ಅದೇ ಸಮಯದಲ್ಲಿ, ನೀವು ಹಸುವಿಗೆ ಪ್ರತಿದಿನ ಸೇವೆ ಸಲ್ಲಿಸಿದರೆ, ಅದು ಉತ್ತಮವಾಗಿರುತ್ತದೆ. ಇದರಿಂದ ಪಿತೃದೋಷ ಶಮನವಾಗುವುದರ ಜೊತೆಗೆ ಇತರ ಗ್ರಹಗಳೂ ಕೂಡ ಸಮಾಧಾನಗೊಳ್ಳುತ್ತವೆ ಎನ್ನುವ ನಂಬಿಕಯಿದೆ. ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ಬಹಳಷ್ಟು ಮಹತ್ವವಿದೆ ಗೋವಿನಲ್ಲಿ ಮುಕ್ಕೋಟಿ ದೇವರುಗಳ ವಾಸ ಇರುತ್ತದೆ. ಗೋ ಪೂಜೆ ಮಾಡುವುದರಿಂದ ಸಕಲ ದೇವತೆಗಳ ವಾಸ ಇರುತ್ತದೆ ಪುಣ್ಯಗಳು ಫಲಗಳು ದೊರೆಯುತ್ತವೆ. ಸಕಲ ಸಮಸ್ಯೆಗಳು ನಿವಾರಣೆ ಆಗುತ್ತವೆ ಹಾಗೂ ಆರೋಗ್ಯ ಸಮಸ್ಯೆ ಇದ್ದರೂ ಕೂಡ ನಿವಾರಣೆ ಆಗುತ್ತದೆ. ನೆಮ್ಮದಿ ಜೀವನ ಕಾಣಬಹುದು, ಆರ್ಥಿಕ ಲಾಭವನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ಗೋ ತಾಯಿಯ ಸಮಾನ ಎಂದು ಹೇಳಬಹುದು. ಗೋಮಾತೆ ಯಾರಿಗೂ ಬೇಧ ಭಾವ ವಿಲ್ಲದೆ ಹಾಲನ್ನು ನೀಡುತ್ತದೆ ಹಾಗಾಗಿ ಹಸುವಿಗೆ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ಹಸುವನ್ನು ಪ್ರೀತಿಯಿಂದ ಕಾಣಬೇಕು ಹಾಗೂ ತಿನ್ನಲು ಆಹಾರ ಪದಾರ್ಥಗಳನ್ನು ಕೊಡಬೇಕು. ಗೋ ಮಾತೆಯ ಆಶೀರ್ವಾದರಿಂದ ನಮ್ಮ ಸರ್ವ ಸಂಕಷ್ಟಗಳು ನಿವಾರಣೆ ಆಗುತ್ತವೆ. ಗೋ ಮಾತೆಯನ್ನು ಪೂಜಿಸುವುದರಿಂದಿಗೆ ಈ ಒಂದು ಮಂತ್ರವನ್ನು ಜಪಿಸುವುದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಆ ಮಂತ್ರ ಯಾವುದು ಯಾವ ರೀತಿಯಾಗಿ ಜಪಿಸಬೇಕು ಎಂದು ತಿಳಿಯೋಣ. ಗೋವಿನ ಶರೀರದಲ್ಲಿ ಕೋಟಿ ದೇವತೆಗಳು ಇರುವುದಂರಿದ ಗೋವಿಗೆ ಗೌರವ ಕೊಡುವುದಂರಿದ ಹಾಗೂ ಗೋವನ್ನು ಪೂಜಿಸುವುದರಿಂದ ಗೋ ಸೇವೆ ಮಾಡುವುದರಿಂದ
ತುಂಬಾ ಒಳ್ಳೆಯದಾಗುತ್ತದೆ. ಇನ್ನು ಈ ಒಂದು ವಿಶೇಶವಾದ ಉಪಾಯವನ್ನು ಮಾಡುವುದರಿಂದ ಉತ್ತಮ ಫಲಗಳು ದೊರೆಯುತ್ತವೆ. ಮೊದಲಿಗೆ ಒಂದು ಗೋಧಿ ರೊಟ್ಟಿಯನ್ನು ಮಾಡಬೇಕು. ಗೋ ಮಾತೆಯನ್ನು ಪೂಜಿಸಿ ಗೋಧಿ ರೊಟ್ಟಿಯನ್ನು ತಿನ್ನಿಸಬೇಕು ಹಾಗೂ ಈ ಒಂದು ಮಂತ್ರವನ್ನು ಜಪಿಸಬೇಕು. ಗೋವಿನ ಮೇಲೆ ಕೈ ಇಟ್ಟು ಸವರುತ್ತಾ ಈ ಒಂದು ಮಂತ್ರವನ್ನು ಪಠಿಸಬೇಕು. ಮಂತ್ರ :- *ಓಂ ಸರ್ವ ದೇವಮಯೇ ದೇವೀ ಲೋಕಾನಾಮ್ ಶುಭ ನಂದಿನಿ ಮಾತೃ ಮಾಭಿಷಿತ ಸಫಲ ಪುರೋ ನಂದಿನಿ* . ಈ ಮಂತ್ರವನ್ನು ಕನಿಷ್ಠ 3 ಭಾರಿ ಆದರೂ ಹೇಳಬೇಕು ಗೋವಿನ ಮೈ ಸ್ಪರ್ಶ ಮಾಡುತ್ತಾ ಈ ಒಂದು ಮಂತ್ರವನ್ನು ಹೇಳಬೇಕು. ಗೋಮಾತೆ ಅನುಗ್ರಹದಿಂದ ನಿಮಗೆ ಯಾವುದೇ ರೀತಿ ಸಂಕಷ್ಟ ಇದ್ದರೂ ಕೂಡ ಅವೆಲ್ಲವೂ ನಿವಾರಣೆಯಾಗುತ್ತದೆ. ಮಾಡುವ ಪ್ರತಿಯೊಂದು ಕೆಲಸದಲ್ಲಿ ಒಳ್ಳೆ ಯಶಸ್ಸನ್ನು ಪಡೆದುಕೊಳ್ಳಬಹುದು ಗೋಮಾತೆಯನ್ನು ಪೂಜಿಸಿ ಹಸುವಿಗೆ ಪ್ರೀತಿಯಿಂದ ಆಹಾರ ತಿನ್ನಲು ಕೊಡುವುದರಿಂದ ಸಾಕಷ್ಟು ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳಬಹುದು ಹಾಗೂ ನಿಮ್ಮ ಮನೆಯಲ್ಲಿ ಸಕಾರಾತ್ಮಕತೆ ಇರುತ್ತದೆ ಹಾಗೂ ನಿಮ್ಮ ಒಳ್ಳೆಯ ಧನಾತ್ಮಕ ಆಲೋಚನೆಗಳು ವೃದ್ಧಿಯಾಗುತ್ತವೆ. ಕೆಲಸದಲ್ಲಿ ಆಸಕ್ತಿ ಹೆಚ್ಚುತ್ತದೆ ಹಾಗೂ ಅನಾರೋಗ್ಯ ಸಮಸ್ಯೆ ಕೂಡಾ ನಿವಾರಣೆಯಾಗುತ್ತದೆ. ಗೋ ಮಾತೆಯನ್ನು ಪೂಜಿಸುವುದರಿಂದ ಸಕಲ ದೇವತೆಗಳ ಆಶೀರ್ವಾದ ಕೂಡ ನಿಮಗೆ ದೊರೆಯುತ್ತದೆ. ಸುಖಶಾಂತಿ ನೆಮ್ಮದಿಯಿಂದ ಜೀವಿಸಬಹುದು. ಅಷ್ಟ ಐಶ್ವರ್ಯ ಭೋಗಭಾಗ್ಯಾದಿಗಳು ದೊರೆಯುತ್ತವೆ. ಉತ್ತಮ ಜೀವನವನ್ನು ರೂಪಿಸಿಕೊಳ್ಳಬಹುದು.
[05/04, 8:50 AM] Pandit Venkatesh. Astrologer. Kannada: 🕉🕉🕉🕉🕉🕉🕉🕉🕉
@ಅನಂತಪದ್ಮನಾಭ ಬಳಗ ಕಾರ್ಕಳ@
*ಉಡುಪಿ ಶ್ರೀ ಪೂರ್ಣಪ್ರಜ್ಞ ಪಂಚಾಂಗ - ಶ್ರೀ ಕೃಷ್ಣ ಪಂಚಾಂಗ ಆಧರಿತ*
(ದೃಕ್ಸಿದ್ಧಾಂತ ಗಣಿತಾನುಸಾರ)
*ನಿತ್ಯ ಪಂಚಾಂಗ*
ದಿನಾಂಕ - 05/04/22
ಶಾಲಿವಾಹನ ಶಕ ವರ್ಷ-೧೯೪೩
ಕಲಿವರ್ಷ- ೫೧೨೩
ಸಂವತ್ಸರ - ಪ್ಲವ
ಆಯಣ- ಉತ್ತರಾಯಣ
ಋತು -ವಸಂತ ಋತು
ಮಾಸ(ಚಾಂದ್ರ)- ಚೈತ್ರ
ಪಕ್ಷ - ಶುಕ್ಲಪಕ್ಷ
ತಿಥಿ - ಚತುರ್ಥಿ 15:46
ಮಾ.ನಿ - ವಿಷ್ಣು
ಮಾಸ (ಸೌರ) - ಮೀನ (ಸುಗ್ಗಿ)
ದಿನ - 22
ನಕ್ಷತ್ರ - ಕೃತ್ತಿಕಾ 16:52
ಯೋಗ - ಪ್ರೀತಿ 07:57
ಕರಣ - ಭದ್ರ 15:44
ವಿಷಾಭಾವ
ಅಮೃತ - 14:44
ರಾಹುಕಾಲ -03:38-05:10
ಗುಳಿಕ ಕಾಲ -12:34-02:06
ವಾರ - ಮಂಗಳವಾರ
ಸೂರ್ಯೋದಯ (ಉಡುಪಿ)- 06:26
ಸೂರ್ಯಾಸ್ತ - 06:41
ದಿನ ವಿಶೇಷ-
🕉️🕉️🕉️🕉️🕉️🕉️🕉️🕉️🕉️
[05/04, 9:15 AM] Pandit Venkatesh. Astrologer. Kannada: ಆತ್ಮೀಯ ವಿಪ್ರ ಬಾಂಧವರೇ, ಎಲ್ಲರಿಗೂ ನಮಸ್ಕಾರಗಳು, ಶ್ರೀಘ್ರದಲ್ಲೇ, ಚಿಂತಾಮಣಿ ತಾಲೂಕಿನ ಮಿಂಚಿಲಹಳ್ಳಿ ಎನ್ನುವ ನಮ್ಮ ಸ್ವಗ್ರಾಮದಲ್ಲಿ ಪ್ರಾರಂಭವಾಗಲಿರುವ ಬ್ರಾಹ್ಮಣ ವೃದ್ಧಾಶ್ರಮದಲ್ಲಿ ಸೇರಲು ಇಚ್ಛಿಸುವ ಬ್ರಾಹ್ಮಣ ವೃದ್ಧರಿಗೆ ನನ್ನ ಆಹ್ವಾನ ಇದಾಗಿದೆ.
ನಾವು ಯಾವುದೇ ರೀತಿಯ ಶುಲ್ಕವನ್ನು ಕೇಳುವುದಿಲ್ಲ ಮತ್ತು ಅವರಿಗೆ ಊಟ, ವಸತಿ, ವಸ್ತ್ರ, ಔಷಧಿ ಎಲ್ಲವೂ ಉಚಿತ.
ಆಸಕ್ತಿ ಇರುವವರು ಸಂಪರ್ಕಿಸಿ, ಅಲ್ಲದೆ ನಿಮ್ಮ ಗಮನದಲ್ಲಿ ಯಾರಾದರೂ ಈ ಪರಿಸ್ಥಿತಿಯಲ್ಲಿ ಇರುವ ಬ್ರಾಹ್ಮಣ ವೃದ್ಧರು ಇದ್ದರೆ ದಯವಿಟ್ಟು ತಿಳಿಸಿ.
ಅಲ್ಲದೆ, ಇದೇ ಊರಿನಲ್ಲಿ ಪ್ರಾರಂಭವಾಗಲಿರುವ ವೇದ ಪಾಠಶಾಲೆ ಹಾಗೂ ಗೋಶಾಲೆಯ ಮೇಲ್ವಿಚಾರಣಗೆ ಸಹ ಸ್ವಯಂ ಸೇವಕರು (Volunteers) ಬೇಕಾಗಿದ್ದಾರೆ. ಅವರಿಗೆ ಊಟ, ವಸತಿ - ಉಚಿತ ಅಲ್ಲದೆ, ಗೌರವ ಧನ ಸಹ ನೀಡಲಾಗುತ್ತದೆ.
*ವಿವರಗಳಿಗೆ ಸಂಪರ್ಕಿಸಿ :*
*ಲಕ್ಷ್ಮಣರಾವ್* - *7899993989* ಶ್ರೀ ವೆಂಕಟೇಶ್ ಜ್ಯೋತಿಷ್ಯರು9482655011. 7975508110🙏🙏🙏🙏
Post a Comment