ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಗಾವಿಯ ಗುಡಶೆಡ್ ರಸ್ತೆ ಬಳಿ ಜನ ಕಲ್ಯಾಣ ಟ್ರಸ್ಟ್ ವತಿಯಿಂದ ನಿರ್ಮಾಣವಾಗಲಿರುವ ಜಗನ್ನಾಥರಾವ್ ಜೋಷಿ ಜನ್ಮ ಶತಾಬ್ದಿ ಸ್ಮಾರಕ ಭವನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ದರು. ಈ ಸಂದರ್ಭದಲ್ಲಿ ಆರ್ ಎಸ್ ಎಸ್ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ, ಕರ್ನಾಟಕದ ಉತ್ತರ ಭಾಗದ ಸಹ ಪ್ರಾಂತ ಕಾರ್ಯವಾಹ ಅರವಿಂದರಾವ್ ದೇಶಪಾಂಡೆ, ಕ್ರೀಡಾ ಭಾರತಿ ಸಂಚಾಲಕ ಅಶೋಕ ಶಿಂತ್ರೆ, ಸಚಿವರಾದ ಉಮೇಶ ಕತ್ತಿ, ಕಾರಜೋಳ, ಸಿ ಸಿ ಪಾಟೀಲ್,
ಶಾಸಕರಾದ ಅಭಯ ಪಾಟೀಲ, ಮಹದೇವಪ್ಪ ಯಾದವಾಡ, ಅನಿಲ್ ಬೆನಕೆ, ಪಿ ರಾಜೀವ, ಮಹೇಶ ಕುಮಠಳ್ಳಿ, ಅರುಣ ಶಾಹಪೂರ, ಹನಮಂತ ನಿರಾಣಿ, ದುರ್ಯೋಧನ ಐಹೊಳಿ, ಮಹಾಂತೇಶ ದೊಡ್ಡಗೌಡರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಶಾಸಕರಾದ ಮಹಾಂತೇಶ ಕವಟಗಿಮಠ, ಜಗದೀಶ ಮೆಟಗುಡ್ಡ ಮತ್ತು ಇತರೆ ನಾಯಕರು ಉಪಸ್ಥಿತರಿದ್ದರು.
Post a Comment