ಏಪ್ರಿಲ್ 01, 2022
,
6:33PM
ರಾಷ್ಟ್ರಪತಿ ಕೋವಿಂದ್ ಅವರು ತುರ್ಕಮೆನಿಸ್ತಾನದ ರಾಜಧಾನಿ ಅಶ್ಗಾಬಾತ್‌ಗೆ ಆಗಮಿಸಿದರು
ತುರ್ಕಮೆನಿಸ್ತಾನ್ ಮತ್ತು ನೆದರ್ಲೆಂಡ್‌ಗೆ ಎರಡು ರಾಷ್ಟ್ರಗಳ ಪ್ರವಾಸದ ಭಾಗವಾಗಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತುರ್ಕಮೆನಿಸ್ತಾನದ ರಾಜಧಾನಿ ಅಶ್ಗಾಬಾತ್‌ಗೆ ಸ್ವಲ್ಪ ಸಮಯದ ಹಿಂದೆ ಆಗಮಿಸಿದ್ದಾರೆ. ತುರ್ಕಮೆನಿಸ್ತಾನ್ ಅಧ್ಯಕ್ಷ ಸೆರ್ದಾರ್ ಬರ್ಡಿಮುಹಮೆಡೋವ್ ಅವರು ರಾಷ್ಟ್ರಪತಿ ಕೋವಿಂದ್ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಅವರಿಗೆ ವಿಮಾನ ನಿಲ್ದಾಣದಲ್ಲಿ ವಿಧ್ಯುಕ್ತ ಸ್ವಾಗತ ಮತ್ತು ಗೌರವ ರಕ್ಷೆಯನ್ನು ನೀಡಲಾಯಿತು.
Post a Comment