[04/04, 6:24 AM] Pandit Venkatesh. Astrologer. Kannada: ಶುಭೋದಯ ಎಲ್ಲರಿಗೂ ಶಿವ ತಂದೆ ಒಳೆಯದನ್ನು ಮಾಡಲಿ.
ಎಲ್ಲರಿಗೂ ಶಿವ ತಂದೆ ಅರೋಗ್ಯ ಆಯುಷ್ಯ ನೆಮ್ಮದಿ ಶಾಂತಿ ಯೆಶಸ್ಸು ಸಂಪತ್ತು ಸಮೃದ್ಧಿ ಒಳ್ಳೇಯ ಗುಣಗಳನ್ನು ಕರುಣಿಸಿ ಸದಾ ಕಾಪಾಡು ತಂದೆ 🙏
*ದುಃಖದಲ್ಲಿದ್ದಾಗ ಕರೆಯದೆ ಹೋಗಬೇಕು*
*ಸುಖದಲ್ಲಿದಾಗ ಕರೆದರೆ ಮಾತ್ರ ಹೋಗಬೇಕು*.
*ಕಷ್ಟಕ್ಕೆ ಕೇಳದೆ ಕೊಡಬೇಕು*.
*ಇಷ್ಟಕ್ಕೆ ಕೇಳಿದರಸ್ಟೇ ಕೊಡಬೇಕು*.
*ಇದೆಯೆಂದು ಅಹಂಕಾರ ತೋರಿಸಬೇಡ.*
*ಇಲ್ಲವೆಂದು ಯಾರಲ್ಲೂ ಸಾರಲು ಬೇಡ*.
*ಇದ್ದು ಇಲ್ಲದಂತೆ ಇರಬೇಕು* *ಸತ್ತರೋ ಬದುಕಿದಂತೆ ಇರಬೇಕು *🙏🙏
[04/04, 7:38 AM] Pandit Venkatesh. Astrologer. Kannada: Santhosh bhat astrologer
ಸರ್ವೋಚ್ಚ ಸಂತೋಷವನ್ನು ಪಡೆದುಕೊಳ್ಳಲು ಯಾವ ಮಂತ್ರಗಳನ್ನು ಜಪಿಸಬೇಕು?
ಸರ್ವೋಚ್ಚ ಸಂತೋಷವನ್ನು ಪಡೆದುಕೊಳ್ಳಲು ಯಾವ ಮಂತ್ರಗಳನ್ನು ಜಪಿಸಬೇಕು?
🌷 ಹಿಂದೂ ಧರ್ಮದ ದೇವರುಗಳನ್ನು ಒಲಿಸಿಕೊಳ್ಳಲು ಹಾಗೂ ಪ್ರಾರ್ಥಿಸಲು ಮಂತ್ರಗಳು ಪ್ರಾಮುಖ್ಯತೆ ವಹಿಸುತ್ತವೆ ಎಂಬುದು ಹಲವರ ನಂಬಿಕೆ. ಈ ಹಿನ್ನೆಲೆ ಮಂತ್ರಗಳು ಮನುಷ್ಯನ ಜೀವನದಲ್ಲಿ ಉತ್ತಮ ಬದಲಾವಣೆ ತರಲು, ಮಂತ್ರಗಳು ಎಲ್ಲಾ ವೇದ ಗ್ರಂಥಗಳು ಮತ್ತು ಪುಸ್ತಕಗಳ ಸಂಪೂರ್ಣ ಪಠ್ಯಗಳ ಆಧಾರವಾಗಿವೆ ಮತ್ತು ವ್ಯಕ್ತಿಯಲ್ಲಿ ಆಧ್ಯಾತ್ಮಿಕತೆಯ ಭಾವನೆಗಳನ್ನು ಪ್ರಚೋದಿಸುವ ಪ್ರಬಲ ಮಾಧ್ಯಮವೆಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದಲ್ಲಿ ಋಷಿಮುನಿಗಳು, ಜ್ಯೋತಿಷಿಗಳು ಮತ್ತು ಸಾಮಾನ್ಯ ಜನರು ಧಾರ್ಮಿಕ ಮತ್ತು ಶುಭ ಆಚರಣೆಗಳಿಗಾಗಿ ಮತ್ತು ಧ್ಯಾನ ಉದ್ದೇಶಕ್ಕಾಗಿ ವಿವಿಧ ಪವಿತ್ರ ಮಂತ್ರಗಳನ್ನು ಜಪಿಸುತ್ತಾರೆ.
🌷 ಈ ಪೈಕಿ, ಕೆಲವು ಶಕ್ತಿಶಾಲಿ ಮಂತ್ರಗಳ ಜೊತೆಗೆ ಅವುಗಳ ಪ್ರಯೋಜನಗಳನ್ನೂ ಈ ಕೆಳಗೆ ಉಲ್ಲೇಖಿಸಲಾಗಿದೆ.
🌷 ಓಂಕಾರ ಮಂತ್ರ : ಹಿಂದೂ ಧರ್ಮದಲ್ಲಿ, ಈ ಏಕ ಉಚ್ಚಾರ ಮಂತ್ರ (ಓಂ) ಎಲ್ಲಾ ವೇದ, ಮಂತ್ರಗಳು, ಆಚರಣೆಗಳು ಮತ್ತು ಎಲ್ಲದರ ಮೂಲತತ್ವವಾಗಿದೆ. ಇದು ಹಿಂದೂ ಧರ್ಮ, ಜೈನ ಮತ್ತು ಬೌದ್ಧ ಧರ್ಮದ ಜನರಿಂದ ಅಂಗೀಕರಿಸಲ್ಪಟ್ಟ ಮತ್ತು ಒಪ್ಪಿಕೊಂಡ ಒಂದು ವಿಜ್ಞಾನವೇ ಆಗಿದೆ.
🌷 ಇದನ್ನು ಧ್ಯಾನ ಅಥವಾ ಯೋಗದ ಮಹತ್ವದ ಭಾಗವಾಗಿ ಸಹ ಅಳವಡಿಸಿಕೊಳ್ಳಲಾಗಿದೆ. ಈ ಮಂತ್ರವನ್ನು ಜಪಿಸುವ ಜನರು ಪ್ರಶಾಂತ, ಮತ್ತು ಶಾಂತ ಭಾವನೆ ಹೊಂದುತ್ತಾರೆ. ಇದು ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡ, ಹೃದಯದ ತೊಂದರೆಗಳಂತಹ ದೇಹದ ವಿವಿಧ ಕಾಯಿಲೆಗಳಿಗೆ ಸಹಾಯ ಮಾಡುತ್ತದೆ. ಜತೆಗೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ದೇಹದೊಳಗೆ ಸೇರಿಕೊಂಡಿರುವ ವಿಷವನ್ನು ತೆಗೆದುಹಾಕುತ್ತದೆ.
ಮಂತ್ರ : ಓಂ
🌷 ಗಾಯತ್ರಿ ಮಂತ್ರ : ಈ ಮಂತ್ರವು ಧಾರ್ಮಿಕ ಮಹತ್ವವನ್ನು ಹೊಂದಿದೆ ಮತ್ತು ದೈವಿಕ ಮತ್ತು ಪ್ರಾಚೀನವಾಗಿದೆ. ಗಾಯತ್ರಿ ಮಾತೆ ಎಲ್ಲಾ ವೇದಗಳ ತಾಯಿ, ವೇದಮಾತಾ ಎಂದು ಕರೆಯುತ್ತಾರೆ ಮತ್ತು ಎಲ್ಲಾ ಜ್ಞಾನದ ಮೂಲವೆಂದು ನಂಬಲಾಗಿದೆ. ಅವಳು ಸಾವಿತ್ರಿ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಾಳೆ ಮತ್ತು ಸಾಮಾನ್ಯವಾಗಿ ವೇದಗಳ ಪ್ರಕಾರ ಸೌರ ದೇವತೆಯಾದ ಸಾವಿತ್ರನೊಂದಿಗೆ ಸಂಬಂಧ ಹೊಂದಿದ್ದಾಳೆ.
🌷 ಬೆಳಗ್ಗೆ ಮತ್ತು ಸಂಜೆ ಈ ಮಂತ್ರವನ್ನು ಕನಿಷ್ಠ 3 ಬಾರಿ ಜಪಿಸುವುದರಿಂದ ಬುದ್ಧಿವಂತಿಕೆ ಮತ್ತು ಉತ್ತಮ ಜ್ಞಾನವಿರುವ ವ್ಯಕ್ತಿಗೆ ಆಧ್ಯಾತ್ಮಿಕ ಮತ್ತು ದೈಹಿಕ ಲಾಭಗಳು ದೊರೆಯುತ್ತವೆ.
ಮಂತ್ರ : ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿಃ ಧಿಯೋಯೋನಃ ಪ್ರಚೋದಯಾತ್
🌷 ಮೃತ್ಯುಂಜಯ ಮಂತ್ರ: ಶಿವನ ಮಂತ್ರ ಎಂದೂ ಕರೆಯಲ್ಪಡುವ ಮೃತ್ಯುಂಜಯ ಮಂತ್ರವು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ದೈವಿಕ ಮಂತ್ರವಾಗಿದೆ. ಇದನ್ನು ತ್ರಯಂಬಕಂ ಮಂತ್ರ ಮತ್ತು ಮೋಕ್ಷ ಮಂತ್ರ ಎಂದೂ ಕರೆಯುತ್ತಾರೆ. ಇದು ಆಧ್ಯಾತ್ಮಿಕ ಪ್ರಯೋಜನಗಳಿಗಾಗಿ ಮತ್ತು ಮರಣಾನಂತರದ ಜೀವನದಲ್ಲಿ ಮೋಕ್ಷವನ್ನು ಪಡೆಯುವ ಮಂತ್ರವಾಗಿದೆ.
🌷 ಈ ಮಂತ್ರವನ್ನು ನಿಯಮಿತವಾಗಿ ಜಪಿಸುವುದರಿಂದ ಉತ್ತಮ ಆರೋಗ್ಯ, ಶಾಂತಿ, ಸಂಪತ್ತು, ಸಮೃದ್ಧಿ ಮತ್ತು ದೀರ್ಘಾಯುಷ್ಯ ಪಡೆದುಕೊಳ್ಳಲು ವ್ಯಕ್ತಿಗೆ ಪ್ರಯೋಜನವಾಗುತ್ತದೆ. ಇದು ವ್ಯಕ್ತಿಯಲ್ಲಿ ಸಕಾರಾತ್ಮಕ ಕಂಪನಗಳನ್ನು ಉಂಟುಮಾಡುತ್ತದೆ ಮತ್ತು ನೈಸರ್ಗಿಕ ಮತ್ತು ಅಪರಿಚಿತ ವಿಪತ್ತುಗಳಿಂದ ರಕ್ಷಿಸುತ್ತದೆ.
ಮಂತ್ರ : ॐ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ |
ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯಮಾಮೃತಾತ್ ||
🌷 ಗಣೇಶ ಮಂತ್ರ: ಇದು ಗಣೇಶನಿಗೆ ಸಂಬಂಧಿಸಿದ ಮಂತ್ರವಾಗಿದೆ ಮತ್ತು ವ್ಯಕ್ತಿಯ ಜೀವನದಿಂದ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುವ ಸಾಮರ್ಥ್ಯಕ್ಕೆ ಇದು ಹೆಸರುವಾಸಿಯಾಗಿದೆ. ಶುಭ ಚಟುವಟಿಕೆ ನಡೆದಾಗಲೆಲ್ಲಾ ಗಣೇಶ ಮಂತ್ರವು ಮೊದಲ ಮಂತ್ರವಾಗಿದ್ದು, ಯಾವುದೇ ಅಡೆತಡೆಗಳು ಅಥವಾ ಅಡೆತಡೆಗಳಿಲ್ಲದೆ ಚಟುವಟಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಆರಂಭದಲ್ಲಿ ಪಠಿಸಲಾಗುತ್ತದೆ.
🌷 ಇದು ಯಶಸ್ಸು, ಸಮೃದ್ಧಿ ಮತ್ತು ಸಂಪತ್ತಿನ ಮಂತ್ರವಾಗಿದೆ. ಮಂತ್ರದ ನಿಯಮಿತ ಪಠಣವು ರಕ್ತ ಪರಿಚಲನೆಯನ್ನು ನಿಯಂತ್ರಿಸುತ್ತದೆ, ಏಕಾಗ್ರತೆಯನ್ನು ಸುಧಾರಿಸುತ್ತದೆ ಮತ್ತು ಚಯಾಪಚಯ ಕ್ರಿಯೆಗೆ ಒಳ್ಳೆಯದು. ಇದು ಒಬ್ಬ ವ್ಯಕ್ತಿಯನ್ನು ತಮ್ಮ ಶತ್ರುಗಳಿಂದ ಮತ್ತು ಜೀವನದ ಇತರ ಸಮಸ್ಯೆಗಳಿಂದ ರಕ್ಷಿಸುತ್ತದೆ.
ಮಂತ್ರ : ಓಂ ಗಂ ಗಣಪತಯೇ ನಮಃ
🌷 ಮಹಾಲಕ್ಷ್ಮೀ ಮಂತ್ರ: ಎಲ್ಲಾ ಸಂಪತ್ತು, ಸಂಪತ್ತು, ಆರೋಗ್ಯ ಮತ್ತು ಸಮೃದ್ಧಿಯ ದೇವತೆ, ಲಕ್ಷ್ಮೀ ದೇವತೆ ಲಕ್ಷ್ಮಿ ಮಂತ್ರದೊಂದಿಗೆ ಸಂಬಂಧ ಹೊಂದಿದ್ದಾರೆ. ಈ ಮಂತ್ರವನ್ನು ಪಠಿಸುವುದು ಎಂದರೆ ನಿಮ್ಮ ಗುರಿಯನ್ನು ತಿಳಿದುಕೊಳ್ಳುವುದು ಮತ್ತು ಅದನ್ನು ಸಾಧಿಸುವುದು. ಇದು ಆರ್ಥಿಕ ಸ್ಥಿರತೆಯನ್ನು ಗಳಿಸುವುದು ಮಾತ್ರವಲ್ಲ, ಬುದ್ಧಿವಂತಿಕೆ ಮತ್ತು ತಿಳುವಳಿಕೆಗಾಗಿ ದೇವಿಯ ಆಶೀರ್ವಾದವನ್ನು ಪಡೆಯುವುದು.
🌷 ಮಂತ್ರವನ್ನು ನಿಯಮಿತವಾಗಿ ಜಪಿಸುವುದರಿಂದ ಆರೋಗ್ಯ, ಸಂಪತ್ತು, ಹಣಕಾಸು ಮತ್ತು ಸಂಬಂಧಗಳು ಹೇರಳವಾಗಿ ತರುತ್ತವೆ ಮತ್ತು ಜೀವನದಲ್ಲಿ ಒಬ್ಬರ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.
ಮಂತ್ರ : ಓಂ ಸರ್ವಾಬಾಧಾ ವಿನಿರ್ಮುಕ್ತೋ ಧನಧಾನ್ಯ ಸಮನ್ವಿತಾ |
ಮನುಷ್ಯೋ ಮತ್ಪ್ರಸಾದೇನ ಭವಿಷ್ಯತಿ ನ ಸನ್ಶಯಃ ಓಂ ||
🌷 ಹೀಗಾಗಿ, ಈ ಎಲ್ಲಾ ಶಕ್ತಿಯುತ ಮಂತ್ರಗಳು ಹಾಗೂ ಇದರ ಜೊತೆಗೆ ದುರ್ಗಾ ಮಂತ್ರ, ಕುಬೇರ ಮಂತ್ರ, ಸರಸ್ವತಿ ಮಂತ್ರ ಮುಂತಾದ ಇತರ ಮಹತ್ವದ ಮಂತ್ರಗಳು ನಿಯಮಿತವಾಗಿ ಜಪ ಮಾಡಿದರೆ ಜನರಿಗೆ ಪ್ರಯೋಜನಕಾರಿಯಾಗುತ್ತದೆ. ಈ ಮಂತ್ರಗಳು ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ, ಪ್ರೀತಿ ಮತ್ತು ಸಂತೋಷ, ಶಾಂತಿ ಮತ್ತು ಸಮೃದ್ಧಿ, ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಸಾಧಿಸಲು, ಒಬ್ಬರ ಅಸ್ತಿತ್ವದ ಅಂತಿಮ ಸತ್ಯವನ್ನು ಪಡೆಯಲು ಮತ್ತು ಸರ್ವಶಕ್ತನೊಡನೆ ಒಂದಾಗಲು ಒಂದು ಮಾರ್ಗವಾಗಿದೆ.
🌷 ನಿಮ್ಮ ಇಂದ್ರಿಯಗಳನ್ನು ಶಾಂತಗೊಳಿಸುವ, ದೈವಿಕ ಕಂಪನಗಳನ್ನು ಅನುಭವಿಸುವ ಮತ್ತು ನಿಮ್ಮ ದೇಹ ಮತ್ತು ಆತ್ಮದ ಪ್ರತಿಯೊಂದು ಭಾಗವನ್ನು ಶುದ್ಧೀಕರಿಸುವ ಮೂಲವೂ ಈ ಮಂತ್ರಗಳು. ಆದ್ದರಿಂದ, ಪ್ರತಿ ಮಂತ್ರವನ್ನು ಜಪಿಸಿದರೆ ಆರೋಗ್ಯಕರ, ಸಂತೋಷ ಮತ್ತು ಯಶಸ್ವಿ ಜೀವನಕ್ಕಾಗಿ ಮಂತ್ರಗಳನ್ನು ಜಪಿಸಲು ಪ್ರಾರಂಭಿಸಿ!
ಶ್ರೀ ವೆಂಕಟೇಶ್ ಜ್ಯೋತಿಷ್ಯರು📱9482655011
[04/04, 8:04 AM] Pandit Venkatesh. Astrologer. Kannada: 🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು🕉️📱9482655011🙏🙏
ಸಗಣಿ ಮತ್ತು ದೂರ್ವೆಯಲ್ಲಿ ಗಣೇಶನ ಶ್ರೇಷ್ಠತೆ.
🌹 ಸಗಣಿ ಮತ್ತು ದೂರ್ವೆಯಲ್ಲಿ ಗಣೇಶನ ಶ್ರೇಷ್ಠತೆ 🌹
🌷 ಶನಿ ಮಹಾರಾಜನ ಮಹಿಮೆ ಎಲ್ಲರಿಗೂ ಗೊತ್ತಿದೆ, ಶನಿಮಹಾತ್ಮ ಸಾಕ್ಷಾತ್ ಪರಮೇಶ್ವರನನ್ನೆ ಬಿಟ್ಟಿಲ್ಲ. ಅಂದಮೇಲೆ ಮನುಷ್ಯನನ್ನು ಬಿಟ್ಟಾನೆಯೇ, ಇಂತಹ ಶನಿದೇವನಿಗೆ, ದೇವಾನು ದೇವತೆಗಳು ಹೆದರಿ ನಡುಗುತ್ತಾರೆ. ಆದರೆ ಆಂಜನೇಯ ಮತ್ತು ಗಣಪತಿ ಮಾತ್ರ ಶನಿದೇವರಿಗೆ ಹೆದರುವುದಿಲ್ಲ. ಶನಿ ಪರಿಹಾರಕ್ಕೆ ಆಂಜನೇಯ ಹಾಗೂ ಗಣಪತಿ ಪೂಜೆ ಮಾಡಿದರೆ ಪರಿಹಾರ ಎಂದು ಹೇಳುತ್ತಾರೆ. ಶನಿ ದೋಷ ನಿವಾರಣೆಗೆ ಆಂಜನೇಯನ ಗುಡಿಗೆ ಜನ ಹೋಗುವುದನ್ನು ನೋಡಿರುತ್ತೇವೆ, ಹಾಗೆಯೇ ಪ್ರಥಮ ಪೂಜಕ, ಆದಿ ದೈವ, ವಿಘ್ನನಿವಾರಕ, ವಿದ್ಯಾಗಣಪತಿ, ಹೀಗೆ ನಾನಾ ಹೆಸರುಗಳಿಂದ ಕರೆಯುವ ಗಣೇಶನನ್ನು ಪೂಜಿಸಿದರೆ ಶನಿ ದೋಷ ನಿವಾರಣೆಯಾಗುತ್ತದೆ ಎಂಬುದರ ಕುರಿತಾಗಿ ಒಂದು ಕಥೆಯಿದೆ.
🌷 ಒಂದು ದಿನ ಗಣೇಶ ನಿಧಾನವಾಗಿ ವಾಯು ವಿಹಾರ ಹೋಗ್ತಾ ಇದ್ದ. ಹೀಗೆ ಹೋಗ್ತಾ ಇರುವಾಗ ಶನಿದೇವ ಎದುರಿಗೆ ಬರುತ್ತಿದ್ದ. ಗಿಡ್ಡ ಬುಡ್ಡಕ್ಕೆ, ಮುದ್ದು ಮುದ್ದಾಗಿರುವ ಗಣೇಶನನ್ನ ನೋಡಿ ಶನಿಗೆ ಕೀಟಲೆ ಮಾಡಬೇಕೆನಿಸಿತು. ಹೀಗೆ ಮನಸ್ಸಿನಲ್ಲಿ ಅಂದುಕೊಂಡ ಶನಿ ಗಣೇಶನಿಗೆ ಎದುರಾಗೆ ಹೊರಟ, ಗಣೇಶ ತನ್ನ ಕಡೆಗೆ ಶನಿ ಬರುವುದನ್ನು ನೋಡಿದ, ಶನಿಗೆ ಸ್ವಲ್ಪ ಆಟ ಆಡಿಸಬೇಕು ಎಂದು ಅನಿಸಿತು. ಶಿವನಿಗೆ ಹೆದರದ ಪಾರ್ವತಿ ಪುತ್ರ ಗಣೇಶ ಇನ್ನು ಶನಿಗೆ ಹೆದರುತ್ತಾನಾ? ಗಣೇಶ ತಕ್ಷಣ ಓಡತೊಡಗಿದ, ಶನಿಯು ಹಿಂದೆ ಒಡಿದ. ಆದರೆ ಗಣೇಶ ತನ್ನ ದೊಡ್ಡ ಹೊಟ್ಟೆಯನ್ನು ಹೊತ್ತುಕೊಂಡು ಓಡಿ ಓಡಿ, ಸುಸ್ತಾದ. ಶನಿಗೆ, ತನ್ನನ್ನು ನೋಡಿ ಓಡುತ್ತಿರುವ ಗಣೇಶನನ್ನು ನೋಡಿ ಕೋಪ ಬಂದಿತು.
🌷 ಹೇಗಾದರೂ ಮಾಡಿ ಗಣೇಶನನ್ನು ಮುಟ್ಟಲೇ ಬೇಕೆಂದು ಬಿರ - ಬಿರನೆ, ನಡೆಯತೊಡಗಿದ. ಗಣೇಶ ಸುತ್ತಮುತ್ತ ನೋಡಿದ ಹುಲ್ಲು ಮೇಯುತ್ತಿರುವ ಹಸು ಕಂಡಿತು ಕೂಡಲೇ ಓಡಿಹೋಗಿ ಹಸುವಿನ ಮುಂದೆ ಗರಿಕೆಯಾಗಿ ಕುಳಿತನು. ಗರಿಕೆ ಯಾಗಿ ಕುಳಿತ ಗಣೇಶನನ್ನು ಶನಿ ಗುರುತಿಸಿ ಹಿಡಿಯಲು ಬರುತ್ತಿದ್ದ. ಆದರೆ ಅಷ್ಟರಲ್ಲಿ ಹಸು ಗರಿಕೆಯನ್ನು ತಿಂದುಬಿಟ್ಟಿತು. ಶನಿ ಒಡಿ ಬಂದು ಹಸುವಿನ ಒಳಗೆ ಹೋಗಿ ಹುಡುಕಲು ಶುರುಮಾಡಿದ. ಗಣೇಶನಿಗೆ ಏನು ಮಾಡುವುದೆಂದು ತಿಳಿಯದೆ ಯೋಚಿಸಿ ಹಸುವಿನ ಸಗಣಿಯಾಗಿ ಹೊರಬಂದನು. ಸಗಣಿ ಒಳಗಿರುವ ಗಣೇಶನನ್ನು ನೋಡಿ ಶನಿಗೆ ಅಸಹ್ಯವಾಯಿತು. ಸಗಣಿಯನ್ನು ಮುಟ್ಟಲು ನಿರಾಕರಿಸಿ ಶನಿ ಹಾಗೆ ಹೋಗಿಬಿಟ್ಟನು. ಹೀಗಾಗಿ ಗಣೇಶನನ್ನು ಎಂದಿಗೂ ಅವನಿಂದ ಮುಟ್ಟಲು ಆಗಲೇ ಇಲ್ಲ.
🌷 ಶನಿ ಹತ್ತಿರವೂ ಸುಳಿಯದ, ಸಗಣಿಯನ್ನು ಗೋಪುರದ ತರ ಮಾಡಿ ಅದಕ್ಕೆ ಇಪ್ಪತ್ತೂಂದು ಗರಿಕೆ ಸಿಕ್ಕಿಸಿ, ವಿಧಿವತ್ತಾಗಿ ಪೂಜಿಸಿದರೆ, ಶನಿ ದೋಷ ನಿವಾರಣೆಯಾಗುತ್ತದೆ. ಈ ಮೂಲಕ ತಿಳಿಯುವುದೇನೆಂದರೆ ಗರಿಕೆ ಔಷಧಿ ಸಸ್ಯವಾದರೆ, ಸಗಣಿ ಪವಿತ್ರತೆಗೆ ಸಾಕ್ಷಿಯಾಗಿದೆ, ಗೋಮಯದಿಂದ ಸಾರಿಸಿದ ಜಾಗದಲ್ಲಿ ಸೊಳ್ಳೆಗಳು ಬರುವುದಿಲ್ಲ. ಮತ್ತು ಗೋಮಯದಿಂದ ಸಾರಿಸಿದ ನೆಲದ ಮೇಲೆ ಮಲಗಿದರೆ ಬೆನ್ನುನೋವು ಹೋಗುತ್ತದೆ. ಸಗಣಿಯನ್ನು ತಟ್ಟಿ ಒಣಗಿಸಿ ಕುರುಳು ಮಾಡಿ ಸುಟ್ಟ ಭಸ್ಮವು ಪವಿತ್ರ ವಿಭೂತಿ ಯಾಗುತ್ತದೆ.
🌷 ಪುರುಷರು ಸ್ನಾನ ಮಾಡಿ ಭಸ್ಮ ಧರಿಸಿ, ಸಂಧ್ಯಾವಂದನೆ, ಪೂಜಾದಿಗಳನ್ನು ಮಾಡಿದಾಗ, ಸಕಲ ದೋಷಗಳು ನಿವಾರಣೆಯಾಗಿ ಅಗೋಚರ ಶಕ್ತಿ ದೇಹಕ್ಕೆ ವ್ಯಾಪಿಸಿ, ಪರಮೇಶ್ವರನ ಕೃಪೆಗೆ ಪಾತ್ರರಾಗುತ್ತಾರೆ. ಹಾಗೆಯೇ ಇಂದ್ರಾಕ್ಷಿ ಮಂತ್ರ ಪಠಿಸಿದ ಭಸ್ಮವನ್ನು ಮಕ್ಕಳಿಗೆ ಹಚ್ಚಿದರೆ, ದೃಷ್ಟಿ ದೋಷ, ರಚ್ಚೆ ಹಿಡಿದು ಅಳುವುದು, ಹೆದರಿಕೆ, ಜ್ವರ, ಇಂಥವುಗಳಿಗೆಲ್ಲ, ತತ್ಕಕ್ಷಣದ ಪರಿಹಾರಕ್ಕೆ, ಸುಲಭ ಉಪಾಯವಾಗಿದೆ.
🌷 ನಮ್ಮ ಹಿರಿಯರು, ಗೋಮೂತ್ರ, ಸಗಣಿ, ಇವುಗಳು ಉಪಯೋಗಗಳನ್ನು ನೇರವಾಗಿ ಹೇಳಿದರೆ ಅರ್ಥವಾಗುವುದಿಲ್ಲವೆಂದು ಪುರಾಣ ಕಥೆಗಳ ಮೂಲಕ ತಿಳಿಸಿ ಅವುಗಳ ಮೇಲಿನ ಗೌರವ, ನಂಬಿಕೆ ಹೆಚ್ಚಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಧಾರ್ಮಿಕವಾಗಿಯೂ, ವೈಜ್ಞಾನಿಕವಾಗಿಯೂ, ಗೋವಿನ ಯಾವುದೇ ಅಂಶವಾಗಲಿ ಔಷಧಯುಕ್ತವಾಗಿದ್ದು ಗೋವು ಜನಮಾನಸದಲ್ಲಿ ಪೂಜ್ಯನೀಯ ಸ್ಥಾನವನ್ನು ಪಡೆದು ಕೊಂಡಿದೆ.
ಶ್ರೀ ವೆಂಕಟೇಶ್ ಜ್ಯೋತಿಷ್ಯರು📱9482655011🙏🙏
[04/04, 8:05 AM] Pandit Venkatesh. Astrologer. Kannada: 💐🌹💐ಶುಭೋದಯ 🙏🏽🌹💐
ನಮೋ ಚಿದಂಬರ, ವಿಶ್ವಂಭರ, ,ಮಾಯಾತೀತ
ಗುಣಗಂಭೀರ, , ನಿತ್ಯಾನಂದ ನಿರ್ವಿಕಾರ ವಿಶ್ವೇಶ್ವರ ತುಝನಮೋ. 🙏🙏
*ಸಂಬಂಧಗಳನ್ನು ಜೊಡಿಸುವದು ಒಂದು ಕಲೆಯಾದರೆ, ಸಂಬಂಧಗಳನ್ನು ಉಳಿಸಿಕೊಳ್ಳುವದು ಒಂದು ಸಾಧನೆ.
ಜೀವನದಲ್ಲಿ ನಾವು ಎಷ್ಟು ಒಳ್ಳೆಯವರು
ಎಷ್ಟು ಕೆಟ್ಟವರು ಎಂಬುದು ಇಬ್ಬರಿಗೆ
ಮಾತ್ರ ತಿಳಿದಿರುತ್ತದೆ.....
ನಮ್ಮೆಲ್ಲರ ಪರಮಾತ್ಮ
,. ಇನ್ನೊಂದು ನಮ್ಮ ಅಂತರಾತ್ಮ*
[04/04, 8:06 AM] Pandit Venkatesh. Astrologer. Kannada: ಶುಭೋದಯ ಎಲ್ಲರಿಗೂ ಶಿವ ತಂದೆ ಒಳೆಯದನ್ನು ಮಾಡಲಿ.
ಎಲ್ಲರಿಗೂ ಶಿವ ತಂದೆ ಅರೋಗ್ಯ ಆಯುಷ್ಯ ನೆಮ್ಮದಿ ಶಾಂತಿ ಯೆಶಸ್ಸು ಸಂಪತ್ತು ಸಮೃದ್ಧಿ ಒಳ್ಳೇಯ ಗುಣಗಳನ್ನು ಕರುಣಿಸಿ ಸದಾ ಕಾಪಾಡು ತಂದೆ 🙏
*ದುಃಖದಲ್ಲಿದ್ದಾಗ ಕರೆಯದೆ ಹೋಗಬೇಕು*
*ಸುಖದಲ್ಲಿದಾಗ ಕರೆದರೆ ಮಾತ್ರ ಹೋಗಬೇಕು*.
*ಕಷ್ಟಕ್ಕೆ ಕೇಳದೆ ಕೊಡಬೇಕು*.
*ಇಷ್ಟಕ್ಕೆ ಕೇಳಿದರಸ್ಟೇ ಕೊಡಬೇಕು*.
*ಇದೆಯೆಂದು ಅಹಂಕಾರ ತೋರಿಸಬೇಡ.*
*ಇಲ್ಲವೆಂದು ಯಾರಲ್ಲೂ ಸಾರಲು ಬೇಡ*.
*ಇದ್ದು ಇಲ್ಲದಂತೆ ಇರಬೇಕು* *ಸತ್ತರೋ ಬದುಕಿದಂತೆ ಇರಬೇಕು *🙏🙏
Post a Comment