ಚಿಂತನೆ, ನಿಮಗಾಗಿ

[19/04, 8:10 AM] Pandit Venkatesh. Astrologer. Kannada: *ಸನಾತನ ಧರ್ಮದಲ್ಲಿ ವಿವಾಹ- ಕೆಲವು ತಪ್ಪು ತಿಳುವಳಿಕೆಗಳು.*

ನಮ್ಮ ಸನಾತನ ಧರ್ಮದಲ್ಲಿ ವಿವಾಹ ಎಂದ ಕೂಡಲೇ ಈ ಮೂರು ಪದಗಳು ಮುಂಚೂಣಿಗೆ ಬರುತ್ತವೆ.

1. *ಕಾಶೀಯಾತ್ರೆ.*
2. *ಕನ್ಯಾದಾನ.*
3. *ವರದಕ್ಷಿಣೆ.*

          ಈಗ ಈ ಮೂರನ್ನೂ ಒಂದೊಂದಾಗಿ ವಿಶ್ಲೇಷಿಸುವಾ.

ಕಾಶಿಯಾತ್ರೆ. 

ಹೀಗೆಂದರೆ ವಿವಾಹಕ್ಕೆ ಸ್ವಲ್ಪ ಮುನ್ನ ಭಾವೀ ಮಾವ ತನ್ನ ಭಾವೀ ಅಳಿಯನಿಗೆ ಕಾಲು ತೊಳೆಯುವುದು, ಹಾಗೂ ಕಾಶಿಗೆ ಹೋಗದಂತೆ ತಡೆದು ತನ್ನ ಮಗಳನ್ನು ಕೊಡುತ್ತೇನೆಂದು ಪ್ರಲೋಭಿಸುವುದು- ಇದು ನಾವು ತಿಳಿದುಕೊಂಡಿರುವುದು ಮತ್ತು ಆಚರಿಸುತ್ತಿರುವುದು.

 ಆದರೆ, ಇದು ಖಂಡಿತ ಹಾಗಲ್ಲ. ಇದಕ್ಕೆ ಬೇರೆಯೇ ಅರ್ಥವಿದೆ. 

ಪ್ರಾಚೀನ ಕಾಲದಲ್ಲಿ ಒಬ್ಬ ವಟುವಿಗೆ ಉಪನಯನ ಆದ ಕೂಡಲೇ ಆತನನ್ನು ವಿದ್ಯಾಭ್ಯಾಸಕ್ಕಾಗಿ ಗುರುಕುಲಗಳಿಗೆ ಕಳುಹಿಸುತ್ತಿದ್ದರು. ಅಲ್ಲಿ, ಈ ಸುಮಾರು ಎಂಟು ವರ್ಷ ವಯಸ್ಸಿನ  ವಟು(ಬ್ರಹ್ಮಚಾರಿ) ತನ್ನ ಸಾಮರ್ಥ್ಯಕ್ಕನುಗುಣವಾಗಿ ಎಂಟು/ಹತ್ತು/ಹನ್ನೆರಡು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡುತ್ತಿದ್ದ. ಅಂದರೆ ಅಷ್ಟೊತ್ತಿಗೆ ಈ ಬಾಲಕ ಹದಿನಾರು/ಹದಿನೆಂಟು/ಇಪ್ಪತ್ತು ವರ್ಷ ವಯಸ್ಸಿನ ಪ್ರೌಢನಾಗಿರುತ್ತಿದ್ದ. ವಿದ್ಯೆ ಪೂರೈಸಿದ ನಂತರ ಆತ ಎಷ್ಟು ಕಲಿತಿದ್ದಾನೆ ಎನ್ನುವುದು ಪರೀಕ್ಷೆಯಾಗಬೇಕಲ್ಲವೇ?  ಆಗಿನ ಕಾಲದಲ್ಲಿ ಕಾಶಿ ನಗರದಲ್ಲಿ ಮಹಾ ಮಹಾ ಪಂಡಿತರಿದ್ದರು. ಈ ಶಿಷ್ಯನಿಗೆ ವಿದ್ಯೆ ಹೇಳಿಕೊಟ್ಟ ಗುರು ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಸಲುವಾಗಿ ಕಾಶಿಗೆ ಕಳುಹಿಸಿಕೊಡುತ್ತಿದ್ದರು. 

ಅಲ್ಲಿಗೆ ಈ ಶಿಷ್ಯ  ಬ್ರಹ್ಮಚಾರಿ ಹಂತವನ್ನು ದಾಟಿ ಸ್ನಾತಕ ಎನಿಸಿಕೊಳ್ಳುತ್ತಿದ್ದ. ವಿದ್ಯಾಭ್ಯಾಸ ಪೂರೈಸಿದ ಸ್ನಾತಕ ಕೂಡಲೇ ತನ್ನ ‌ಮನೆಗೆ ಹೋಗದೆ ತನ್ನನ್ನು ತಾನೇ  ಪರೀಕ್ಷೆಗೆ ಒಡ್ಡಿಕೊಳ್ಳಲು ಕಾಶಿಗೆ ತೆರಳುತ್ತಿದ್ದ. ಕಾಶಿಯಲ್ಲಿನ ಪಂಡಿತರು ಈ ಸ್ನಾತಕನನ್ನು ಎಲ್ಲ ವಿಧದಲ್ಲಿ ಪರೀಕ್ಷಿಸಿ ಅದರಲ್ಲಿ ತೇರ್ಗಡೆ ಹೊಂದಿದರೆ ಮಾತ್ರ ಮುಂದಿನ ಜೀವನವನ್ನು ನಡೆಸಲು, ಅಂದರೆ ಗೃಹಸ್ಥನಾಗಲು ಅರ್ಹ‌ ಎಂದು ತೀರ್ಮಾನಿಸುತ್ತಿದ್ದರು. ಇಂತಹ ವ್ಯಕ್ತಿಯನ್ನು ಗುರುತಿಸಿ ಆತನ ಪಾಂಡಿತ್ಯ ವನ್ನು ಗೌರವಿಸಿ ಎಷ್ಟೋ ಕನ್ಯಾಪಿತೃಗಳು ತಮ್ಮ ಮಗಳನ್ನು ಆತನಿಗೆ ವಿವಾಹ ಮಾಡಿಕೊಡಲು ಇಚ್ಛಿಸುತ್ತಿದ್ದರು. ಅವರು ಮಾಡುತ್ತಿದ್ದ  ಪಾದಪೂಜೆ ಆತನ ಪಾಂಡಿತ್ಯಕ್ಕೇ ಹೊರತು, ಕಾಶಿಗೆ ಹೋಗದಂತೆ ತಡೆಯಲು ಅಲ್ಲ. ಇದು ಕಾಶಿಯಿಂದ ತೇರ್ಗಡೆ ಹೊಂದಿ ಬಂದವನ ಪೂಜೆ. ಹೋಗದಂತೆ ತಡೆಯಲು ಅಲ್ಲ. ಆದರೆ ಈಗಿನ ನಂಬಿಕೆ, ಆಚರಣೆ ಏನಾಗಿದೆ ನೋಡಿ. ಅರ್ಥವಿಲ್ಲದ ಆಚರಣೆಯಾಗಿದೆ ಅಲ್ಲವೇ. 

 ಕನ್ಯಾದಾನ.= ಕನ್ಯಾ ಆದಾನ

ಖಂಡಿತವಾಗಿ ಇಲ್ಲಿ ಕನ್ಯಾದಾನದ ಪ್ರಮೇಯವೇ ಇಲ್ಲ.
ಯಾವುದೇ ‌ಕನ್ಯೆ‌ ಒಂದು ವಸ್ತು, ಜಾಗ ಇತ್ಯಾದಿಗಳಲ್ಲ - ದಾನ ಮಾಡಲು.
ನಮ್ಮ ಜನರು ಮೌಢ್ಯದಿಂದ ಇದನ್ನು ಕನ್ಯಾದಾನ ಮಾಡಿಬಿಟ್ಟರು. ಇದಕ್ಕೆ ನಾನು ಒಂದು ಪ್ರಸಂಗವನ್ನು ತಮ್ಮ ಅವಗಾಹನೆಗೆ ತರಲಿಚ್ಛಿಸುತ್ತೇನೆ.
ಪ್ರಸಂಗ ಸೀತಾ ಕಲ್ಯಾಣ.

( ಕೆಲವರು ತಪ್ಪು ತಪ್ಪಾಗಿ ಇದನ್ನು ಸೀತಾ ಸ್ವಯಂವರ ಎಂದು ಬಳಸುತ್ತಾರೆ. ಸೀತೆಗೆ ಸ್ವಯಂವರ ಎಂದಿಗೂ ನಡೆಯಲಿಲ್ಲ- ಇಂದುಮತಿ, ದಮಯಂತಿಯರ ಹಾಗೆ.
ಸೀತೆ, ದ್ರೌಪದಿಯರದು ವೀರ್ಯಶುಲ್ಕ ಆಗಿತ್ತು).

ಜನಕ ಮಹಾರಾಜ ಸೀತಾರಾಮರ ವಿವಾಹಕ್ಕೆ ಮುನ್ನ ಶ್ರೀರಾಮನೊಂದಿಗೆ ಹೀಗೆ ಹೇಳುತ್ತಾನೆ.

" ಇಯಂ ಸೀತಾ ಮಮ ಸುತಾ
   ಸಹಧರ್ಮಚರೀ ತವ |
    ಪ್ರತೀಚ್ಛ ಚೈನಾಂ ಭದ್ರಂ ತೇ
   ಪಾಣಿಂ ಗೃಹ್ಣೀಷ್ವ ಪಾಣಿನಾ ||

ಪತಿವ್ರತಾ ಮಹಾಭಾಗ ಛಾಯೇವಾನುಗತಾ ಸದಾ |
ಇತ್ಯುಕ್ತ್ವಾ ಪ್ರಾಕ್ಷಿಪದ್ರಾಜಾ 
ಮಂತ್ರಪೂತಂ ಜಲಂ ತದಾ ||

ಈ ಎರಡು ಶ್ಲೋಕಗಳ ಅರ್ಥ ಹೀಗಿರುತ್ತದೆ.

" ನನ್ನ ಮಗಳು ಈ ಸೀತೆ ನಿನಗೆ ಸಹ ಧರ್ಮಚಾರಿಣಿಯಾಗಿರುತ್ತಾಳೆ. ಇವಳನ್ನು ಸ್ವೀಕರಿಸು.‌ ನಿನಗೆ ಶುಭವಾಗಲಿ. ಈಕೆಯ ಪಾಣಿಗ್ರಹಣ ಮಾಡು. ಈ ನನ್ನ ಪುತ್ರಿಯು ಪತಿವ್ರತೆಯೂ, ಭಾಗ್ಯಶಾಲಿನಿಯೂ ಆಗಿ ಅನುಗಾಲವೂ ನಿನ್ನನ್ನು ನೆರಳಿನಂತೆ ಅನುಸರಿಸುವಳು".

ನಾವು ಯಾವುದೇ ದಾನ ಕೊಡುವಾಗ/ಹೋಮ ಮಾಡುವಾಗ ಈ ರೀತಿ ಹೇಳಿ ದಾನ/ಹೋಮ ಮಾಡುತ್ತೇವೆ.
' ದದಾಮಿ.  ನ ಮಮ'.
        ಅಥವಾ
' ಸ್ವಾಹಾಃ .ನ ಮಮ'
ಇದರ ಅರ್ಥ = ಇದನ್ನು ನಾನು ದಾನ ಮಾಡುತ್ತಿದ್ದೇನೆ. ಇನ್ನು ಮುಂದೆ ಇದು ನನ್ನದಲ್ಲ. 
               ಅಥವಾ
ಇದನ್ನು ಆಹುತಿ ನೀಡುತ್ತಿದ್ದೇನೆ. ಇನ್ನು ಮುಂದೆ ಇದು ನನ್ನದಲ್ಲ.

   ‌‌  ದಯವಿಟ್ಟು ಗಮನಿಸಿ. ಈ ಮೇಲಿನ ಶ್ಲೋಕಗಳಲ್ಲಿ ' ದದಾಮಿ. ನ ಮಮ' ಎಂಬ ಪದ ಪ್ರಯೋಗವಾಗಿದೆಯೇ, ಖಂಡಿತ ಇಲ್ಲ. ಅಂದರೆ ಜನಕ ಮಹಾರಾಜ ಶ್ರೀರಾಮನಿಗೆ ಕನ್ಯಾದಾನ ಮಾಡಲಿಲ್ಲ ಎಂದೇ ಅರ್ಥ.

ಮತ್ತೆ ಈ ' ಕನ್ಯಾದಾನ' ಎನ್ನುವ ಪದ ಹಾಗೂ ಪದ್ಧತಿ ಹೇಗೆ ಚಾಲ್ತಿಗೆ ಬಂತು?
ವಿವರಿಸುತ್ತೇನೆ, ಕೇಳಿ.
ಇದು ಕನ್ಯಾದಾನವಲ್ಲ. ಸರಿಯಾದ ಪ್ರಯೋಗ ' ಕನ್ಯಾ +ಆಧಾನ = ಕನ್ಯಾಧಾನ.

ಈ ಕನ್ಯಾಧಾನ ಪದ ಕಾಲಾನುಕ್ರಮದಲ್ಲಿ ಅಪಭ್ರಂಶ ಹೊಂದಿ ಕನ್ಯಾದಾನ ಆಗಿರುತ್ತದೆ. ಹಾಗೆಯೇ ಆಚರಣೆಗಳೂ ಸಹ.
ಅಂದರೆ ಕನ್ಯಾಧಾನ ಎಂದರೇನು?
ಆಧಾನ ಎಂದರೆ ನ್ಯಾಸವಾಗಿಡುವುದು ಎಂದು. ದಾನಕ್ಕೂ, ಆಧಾನಕ್ಕೂ ಇದೇ ವ್ಯತ್ಯಾಸ.

 ಒಮ್ಮೆ ದಾನ ಕೊಟ್ಟರೆ ಮುಗಿಯಿತು. ಅದು ಎಂದಿಗೂ ನನ್ನದಲ್ಲ. ನ್ಯಾಸ- ಹಾಗಲ್ಲ. ನಾನು ನನ್ನ ಮಗಳನ್ನು ನ್ಯಾಸ ಮಾಡಿದರೂ ಆಕೆ ಎಂದೆಂದಿಗೂ ನನ್ನ ಮಗಳೇ ಆಗಿರುತ್ತಾಳೆ. ನಮ್ಮಿಬ್ಬರ ಈ ಸಂಬಂಧವನ್ನು ಯಾರಿಂದಲೂ ಕಸಿದುಕೊಳ್ಳಲಾಗದು.
ಇದುವರೆಗೆ ನನ್ನಿಂದ ರಕ್ಷಿತಳಾಗಿದ್ದ ನನ್ನ ಮಗಳು ಇನ್ನು ಮುಂದೆ ನಿನ್ನ ರಕ್ಷಣೆಗೆ ಒಳಪಡುವಳು. ಈಕೆಯನ್ನು ಸರಿಯಾಗಿ ರಕ್ಷಿಸಿಕೊಂಡು ಹೋಗಬೇಕು ಎನ್ನುವ ಎಚ್ಚರಿಕೆಯೂ ಇದೆ. ಯಾವುದೇ ದಾನದಲ್ಲಿ ಹೀಗಾಗುವುದಿಲ್ಲ. ಒಮ್ಮೆ ದಾನ ಕೊಟ್ಟರೆ ಮುಗಿಯಿತು. ದಾನ ಪಡೆದವನು ಅದನ್ನು ಹೇಗೆ ಬೇಕಾದರೂ ಬಳಸಬಹುದು.
ರಾಮಾಯಣದ ಮೇಲಿನ ಎರಡು ಶ್ಲೋಕಗಳೂ ಇದೇ ಅರ್ಥವನ್ನು ಧ್ವನಿಸುತ್ತಿದೆಯಲ್ಲವೇ.

ಸನಾತನ ಧರ್ಮದ ವಿವಾಹ ಆಚರಣೆಯಲ್ಲಿ ಮಗಳನ್ನು ಧಾರೆಯೆರೆದು ಕೊಟ್ಟ ಕನ್ಯಾ ಪಿತೃ ಅಳಿಯನಿಂದ ತನ್ನ ಮಗಳನ್ನು ಕುರಿತು ಕೆಲವೊಂದು ಭರವಸೆಗಳನ್ನು ಅಪೇಕ್ಷಿಸುತ್ತಾನೆ. ಅವುಗಳನ್ನು ವಿವಾಹ ಸಮಯದಲ್ಲಿ ಮಂತ್ರಪೂರ್ವಕ ಕೋರಲಾಗುತ್ತದೆ. ಈಗ ನಾನು ಅವುಗಳಲ್ಲಿ ಕೆಲವನ್ನು ಮಾತ್ರ ಪ್ರಸ್ತಾಪಿಸುತ್ತೇನೆ. ಇಲ್ಲಿ ನಾನು ಮಂತ್ರಗಳನ್ನು ಉದ್ಧರಿಸುತ್ತಿಲ್ಲ. ಈ ಮಂತ್ರಗಳನ್ನು ಎಲ್ಲಿ ಬೇಕಾದರೂ ಪರಾಂಬರಿಸಬಹುದು. ಅವುಗಳ ಭಾವವನ್ನು ಮಾತ್ರ ಉಲ್ಲೇಖಿಸುವೆ.

" ಇವಳನ್ನು ನೀನು ಯಾವ ರೀತಿ ಪೋಷಿಸಬೇಕು, ಈವರೆಗೆ ನಾನು ಹೇಗೆ ಪೋಷಿಸಿದ್ದೇನೆ, ಇವಳ ಅಪೇಕ್ಷೆಗಳೇನು,
ಯಾವುದರಲ್ಲಿ ಆಸಕ್ತಿ, ಅಭಿರುಚಿ ಇದೆ, 
ಇವಳ ಅಪೇಕ್ಷೆಗಳೇನಿವೆ, ಇವಳಿಗೆ ಅನುರೂಪವಾಗಿ ನೀನು ಯಾವ ರೀತಿ ಸಹಕರಿಸುತ್ತೀಯೆ, ಇವಳು ಈಗ ನಿನ್ನ ಪತ್ನಿಯೇ ಆಗಿದ್ದರೂ, ನನ್ನ ಮಗಳೂ ಆಗಿದ್ದಾಳೆ- ಇವೆಲ್ಲವನ್ನೂ ಕನ್ಯೆಯ ತಂದೆಯು ಅಳಿಯನಿಗೆ ತಿಳಿಸುತ್ತಾನೆ ಹಾಗೂ ಆತನಿಂದ ಭರವಸೆ ಪಡೆಯುತ್ತಾನೆ. ಆದರೆ ದಾನದಲ್ಲಿ ಇವು ‌ಯಾವುವೂ ಉದ್ಭವಿಸುವುದಿಲ್ಲ.

ವರದಕ್ಷಿಣೆ.

ಇದನ್ನೂ ಪರಿಶೀಲಿಸೋಣ.
ಪ್ರಾಚೀನ ಕಾಲದಲ್ಲಿ ಶಾಸ್ತ್ರ ಸಮ್ಮತವಲ್ಲದ ಕನ್ಯಾಶುಲ್ಕ ಪ್ರಚಲಿತವಿತ್ತೇ ಹೊರತು ವರದಕ್ಷಿಣೆ ಎನ್ನುವುದು ಇರಲಿಲ್ಲ.

' ವರದಕ್ಷಿಣೆ' ಎನ್ನುವುದೂ ಅಪಭ್ರಂಶವೇ.
ಇದರ ನಿಜ‌ ಸ್ವರೂಪ ' ವರಹ ದಕ್ಷಿಣೆ'.

ವರಹ ಎಂದರೆ ಹಿಂದಿನ ಕಾಲದಲ್ಲಿ ನಾಲ್ಕೂ ಕಾಲು ರೂಪಾಯಿಗಳು.
ಸಾಲಂಕೃತ ಕನ್ಯೆಯನ್ನು ಒಂದು ವರಹ ದಕ್ಷಿಣೆಯೊಂದಿಗೆ ಧಾರೆ ಎರೆದುಕೊಡಲಾಗುತ್ತಿತ್ತು. 

ಈಗಿನ ಕಾಲದಲ್ಲಿ ನಾವು ತಾಂಬೂಲದೊಂದಿಗೆ ದಕ್ಷಿಣೆ ಇಡುತ್ತೇವಲ್ಲಾ ಹಾಗೆ. ಒಂದು ವರಹಕ್ಕಿಂತಲೂ ಹೆಚ್ಚು ದಕ್ಷಿಣೆ ನೀಡುವುದು ನಿಷಿದ್ಧವಾಗಿತ್ತು.

ನೀವು ಕೇಳಬಹುದು- ಒಂದು ವರಹವೇ ಏಕೆ?- ಎಂದು.
ಹೌದು. ಪ್ರಾಚೀನ ಕಾಲದಲ್ಲಿ ಬಳಸುತ್ತಿದ್ದ ಹಣದ  ಮಾನ ಅಥವಾ ಅಳತೆ ವರಹ.
ಇದಕ್ಕೆ ವರಹ ಎಂದು ಏಕೆ ಕರೆಯುತ್ತಿದ್ದರು?
ಪರಮಾತ್ಮ ನಾರಾಯಣನು ಸಮುದ್ರದಲ್ಲಿ ಮುಳುಗಿಸಲಾಗಿದ್ದ ಭೂಮಿಯನ್ನು ವರಾಹಾವತಾರ ಎತ್ತಿ ಉದ್ಧರಿಸುತ್ತಾನೆ. 

ನಾನು ಕೊಡುತ್ತಿರುವ ಒಂದು ವರಹ ದಕ್ಷಿಣೆ ವರಾಹಸ್ವಾಮಿ ಉದ್ಧರಿಸಿದ ಇಡೀ ಭೂಮಂಡಲಕ್ಕೆ ಸಮಾನ ‌ಎನ್ನುವ ಭಾವನೆ (ನಂಬಿಕೆ). 

ಭೂಮಂಡಲಕ್ಕಿಂತಲೂ ಹೆಚ್ಚು ಬೆಲೆಯುಳ್ಳ ವಸ್ತು ಯಾವುದೂ ಇಲ್ಲವಲ್ಲಾ, ಅದಕ್ಕೆ.
ನಾನು ನೀಡುವ ದಕ್ಷಿಣೆಯಷ್ಷೇ ನನ್ನದಲ್ಲ(ನ ಮಮ). ಆದರೆ ಮಗಳು ಮಾತ್ರ ಎಂದೆಂದಿಗೂ ನನ್ನ ಮಗಳೇ ಆಗಿರುತ್ತಾಳೆ.

ಪ್ರಾಚೀನ ಕಾಲದಲ್ಲಷ್ಟೇ ಅಲ್ಲ. ಇತಿಹಾಸದಲ್ಲಿಯೂ ಅನೇಕ ರಾಜರುಗಳು ತಮ್ಮ ನಾಣ್ಯಗಳನ್ನು 'ವರಹ'ವೆಂದೇ ಟಂಕಿಸುತ್ತಿದ್ದರು. 

 ವಿಜಯನಗರದ ಅರಸರ ಕಾಲದ ನಾಣ್ಯಗಳಲ್ಲಿ ವರಾಹ(ಹಂದಿಯ) ಚಿತ್ರವಿರುತ್ತಿತ್ತು.
ಈ ವರಹದಕ್ಷಿಣೆಯೇ ಕಾಲಾನುಕ್ರಮದಲ್ಲಿ ಶಾಸ್ತ್ರಸಮ್ಮತವಲ್ಲದ  ವರದಕ್ಷಿಣೆ'ಯಾಗಿ ಪರಿವರ್ತನೆಯಾಗಿದೆ.

ಮೇಲಿನ ವಿಚಾರವನ್ನು ಸಮರ್ಥಿಸಲು ಇನ್ನೊಂದು ವಿಷಯವನ್ನೂ ಪ್ರಸ್ತಾಪಿಸುತ್ತೇನೆ.

ಈಗಿನ ಕಾಲದಲ್ಲಿ ಮದುವೆಯಾದ ಕೂಡಲೇ ಹೆಣ್ಣು ತಾನು ಜನಿಸಿದ ಕುಲದ ಹೆಸರನ್ನು ತ್ಯಜಿಸಿ, ತನ್ನ ಹೆಸರಿನ ಮುಂದೆ ಗಂಡನ ಹೆಸರನ್ನು ಸೇರಿಸಿಕೊಳ್ಳುವುದು ಒಂದು ಪದ್ಧತಿಯಾಗಿದೆ. ಇದು ಶುದ್ಧಾಂಗ ತಪ್ಪು. ಕೇವಲ ಪಾಶ್ಚಿಮಾತ್ಯರ ಅಂಧಾನುಕರಣೆ.

ಇದಕ್ಕೆ  ಉದಾಹರಣೆ.

ಸೀತೆ ಜಾನಕಿ ಅಥವಾ ಮೈಥಿಲಿ ಎಂದು ಕರೆಸಿಕೊಂಡಳೇ ವಿನಾ ಎಂದೂ 'ರಾಮಿ' ಆಗಲಿಲ್ಲ. 

( ಸೀತಾರಾಮ ಎಂಬ ಪದ ಬಳಕೆಯಲ್ಲಿದೆ, ಇದು ರಾಮನಿಗೆ ಅನ್ವಯವಾಗುತ್ತದೆಯೇ ಹೊರತು ಸೀತೆಗಲ್ಲ).

ಕೃಷ್ಣೆ- ದ್ರೌಪದಿ ಅಥವಾ ಪಾಂಚಾಲಿ ಎನ್ನಿಸಿಕೊಂಡಳೇ ಹೊರತು ಪಾಂಡವಿ ಆಗಲಿಲ್ಲ. 
ಪೃಥೆಯು ಕುಂತಿಯಾದಳೇ ವಿನಾ ಪಾಂಡವಿ ಆಗಲಿಲ್ಲ. 
ಗಾಂಧಾರಿ ಗಾಂಧಾರಿಯಾಗಿಯೇ ಉಳಿದಳು. ಧೃತರಾಷ್ಟ್ರನ ಹೆಸರನ್ನು ತನ್ನ ಹೆಸರಿನ ಮುಂದೆ ತರಲಿಲ್ಲ.
ರುಕ್ಮಿಣಿ ಎಂದೂ ತನ್ನ ಹೆಸರಿನ ಮುಂದೆ ಕೃಷ್ಣನ ಹೆಸರನ್ನು ಸೇರಿಸಿಕೊಳ್ಳಲಿಲ್ಲ.

ತನ್ನ ಹೆಸರಿನ ಮುಂದೆ ಗಂಡನ ಹೆಸರನ್ನು ಸೇರಿಸಿಕೊಳ್ಳುವ ಪದ್ಧತಿ ನಮ್ಮದಲ್ಲ.✍📮 (ಸಂಗ್ರಹ)

(ಮಾಹಿತಿ ಸಂಗ್ರಹ) 

📖 *ನಮೋ ರಾಷ್ಟ್ರಭಕ್ತರು*

ನಮೋ ಹಿಂದೂ ಸನಾತನ ಧರ್ಮ, ಜೈ ಹಿಂದ್🌺

!!!!Jai HINDUTWA!!!🚩🚩🚩

⛳ ​" ​*ಒಂದೂ ಗೂಡಿ ಬನ್ನಿ *ರಾಷ್ಟ್ರ ಸೇವೆಗೆ, ಶುದ್ದ ಮನದಿ ಶ್ರಧ್ದೆಯಿಂದ ಧರ್ಮಸೇವೆಗೆ*  "​ ⛳ ​
[20/04, 6:24 AM] Pandit Venkatesh. Astrologer. Kannada: ಯಾವ ಹೂವು ಯಾವ ಫಲವನ್ನು ಕೊಡುತ್ತದೆ

ದೇವರಿಗೆ ಪುಷ್ಪವನ್ನು ಅರ್ಪಿಸಿ, ಪ್ರಸಾದ ಸ್ವೀಕರಿಸುವುದರಿಂದ ಯಾವ ಫಲ ದೊರೆಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ

 1. ಜಾಜಿ ಹೂ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಕೆಲಸದಲ್ಲಿರುವ ತೊಂದರೆ ನಿವಾರಣೆಯಾಗುತ್ತದೆ.

 2. ಸಂಪಿಗೆ ಹೂ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಶತ್ರುದೋಷ ನಿವಾರಣೆಯಾಗುತ್ತದೆ.

 3.  ಪಾರಿಜಾತ ಹೂ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಕಾಳಸರ್ಪದೋಷ ನಿವಾರಣೆಯಾಗುತ್ತದೆ.

 4.  ರುದ್ರಾಕ್ಷಿ ಹೂ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಎಷ್ಟೇ ಕಷ್ಟ ಬಂದರೂ ಜಯ ಸಿದ್ಧಿಸುತ್ತದೆ.

 5.  ಕೇದಗೆ ಹೂ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಅಧಿಕಾರಗಳಲ್ಲಿ ಇರುವ ಮನಸ್ತಾಪ ನಿವಾರಣೆಯಾಗುತ್ತದೆ.

 6.  ಲಕ್ಕಿ ಹೂ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಪತ್ನಿಪುತ್ರರಲ್ಲಿ ಕಲಹವಿಲ್ಲದೆ ಸಂತೋಷವಾಗಿರುತ್ತಾರೆ.

 7.  ಕಮಲದ ಹೂ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ದರಿದ್ರನಿವಾರಣೆಯಾಗಿ, ಶ್ರೀಮಂತಿಕೆ ಪ್ರಾಪ್ತಿಯಾಗುತ್ತದೆ.

 8.  ಮಲ್ಲಿಗೆ ಹೂ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಸಮಸ್ತರೋಗ ನಿವಾರಣೆಯಾಗಿ, ಆರೋಗ್ಯ ಪ್ರಾಪ್ತಿಯಾಗುತ್ತದೆ.

 9.  ಕರವೀರ ಪುಷ್ಪ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಕವಿಗಳಿಗೆ ಕಲ್ಪನಾ ಸಾಹಿತ್ಯ ಹೆಚ್ಚಾಗುತ್ತದೆ.

10.  ಕಲ್ಹಾರ ಪುಷ್ಪ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಎಲ್ಲರಿಂದಲೂ ನಾವು ಆಕರ್ಷಿತರಾಗುತ್ತೇವೆ.

11.  ಪಾಟಲೀ ಪುಷ್ಪ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ವ್ಯಾಪಾರ-ವ್ಯವಹಾರಗಳಲ್ಲಿ ಅಧಿಕ ಲಾಭವಾಗುತ್ತದೆ.

12.  ಕುಂದ ಪುಷ್ಪ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಮುಖದಲ್ಲಿ ಅಧಿಕವಾದ ತೇಜಸ್ಸು ಹಾಗೂ ಕಾಂತಿಯು ಬರುತ್ತದೆ.

13.  ಕನಕಾಂಬರ ಹೂ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಜೀವನದಲ್ಲಿ ವೈರಾಗ್ಯ ಬರುವುದು.

14.  ಮಾಧವಿ ಹೂ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ವಾಕ್ಸಿದ್ಧಿ ಬಂದು ನುಡಿದಂತೆ ನಡೆಯುತ್ತದೆ.

15.  ತುಂಬೆ ಹೂ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ದೇವರಲ್ಲಿ ಭಕ್ತಿಯು ಹೆಚ್ಚಾಗುವುದು.

16.  ನಂದಿ ಬಟ್ಟಲು ಹೂ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ.

17.  ಕಣಗಲೇ ಹೂ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ನಮ್ಮನ್ನು ಕಾಡಿಸುವ ಭಯ, ಭೀತಿ ನಿವಾರಣೆಯಾಗುತ್ತದೆ.

18.  ಅಶೋಕ ಪುಷ್ಪ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಸಂಸಾರದಲ್ಲಿ ಸಮಸ್ತ ದುಃಖ ನಾಶವಾಗುತ್ತದೆ.

19.  ನೀಲಾಂಬರಿ ಪುಷ್ಪ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಶನಿಕಾಟ ಕಡಿಮೆಯಾಗುತ್ತದೆ.

20.  ಮಾಲತಿ ಪುಷ್ಪ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಸಕಲ ಪಾಪಗಳು ನಿವೃತ್ತಿಯಾಗುತ್ತವೆ.

21.  ಪುನ್ನಾಗ ಪುಷ್ಪ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಉತ್ತಮ ಸಂತಾನ ಪ್ರಾಪ್ತಿ.

22.  ಬಕುಳ ಪುಷ್ಪ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಸ್ವಂತ ಮನೆ ಹೊಂದುವ ಯೋಗ ಬರುತ್ತದೆ.

23.  ಉತ್ಪಲ ಪುಷ್ಪ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಶೀಘ್ರ ಅಭಿವೃದ್ಧಿ ಹೊಂದುತ್ತಾರೆ.

24.  ಬಿಳಿ ಎಕ್ಕದ ಹೂ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ರೋಗ ನಿವಾರಣೆ, ಆರೋಗ್ಯ ಪ್ರಾಪ್ತಿ.

25.  ಪುನ್ನಾಗ ಪುಷ್ಪ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಸರ್ಪ (ನಾಗ) ದೋಷ ನಿವಾರಣೆಯಾಗುತ್ತದೆ.

26.  ನಂದ್ಯಾವರ್ತ ಪುಷ್ಪ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಸಮಸ್ತ ದುಃಖ ನಿವಾರಣೆ, ಶಾಂತಿ ಲಭಿಸುತ್ತದೆ.

27.  ದ್ರೋಣ ಪುಷ್ಪ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಶತ್ರುನಾಶ, ಮಿತ್ರಲಾಭ, ಅಧಿಕಾರ ಪ್ರಾಪ್ತಿಯಾಗುತ್ತದೆ.

28.  ಬಂಧೂಕ ಪುಷ್ಪ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಬಂಧುಗಳು ಕ್ಷೇಮವಾಗಿರುತ್ತಾರೆ.

29.  ಅಗಸೀ ಪುಷ್ಪ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಪಾಪನಾಶವಾಗುತ್ತದೆ.

30.  ಸುರಭಿ ಪುಷ್ಪ ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ಇಷ್ಟಾರ್ಥ ಸಿದ್ಧಿಕೊಡುತ್ತದೆ.

31.  ಸೂರ್ಯಕಾಂತಿ ಹೂ ಹೋಮದ ಪೂರ್ಣಾಹುತಿಗೆ ಸಮರ್ಪಿಸಿದರೆ, ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ.
ಪೂಜಾ ವಿಧಿ-ವಿಧಾನಗಳನ್ನು ಅರಿತು, ಶಾಸ್ತ್ರೋಕ್ತವಾಗಿ ಪೂಜಾಧಿಗಳನ್ನು ಮಾಡಿದರೆ ಅಥವಾ ಮಾಡಿಸಿದರೆ, ಎಂದೆಂದೂ ದೇವರ ಅನುಗ್ರಹ ಕುಟುಂಬದವರ ಸಹಿತ ಎಲ್ಲರನ್ನೂ ರಕ್ಷಿಸುತ್ತದೆ.
[20/04, 6:26 AM] Pandit Venkatesh. Astrologer. Kannada: |ಮಹಾ ಮೃತ್ಯುಂಜಯ ಮಂತ್ರ|

ಬಹುತೇಕರು ಮೃತ್ಯುಂಜಯ ಮಹಾ ಮಂತ್ರವನನ್ನು ಪ್ರತಿದಿನ ಪಠನೆ ಮಾಡುವ ಅಭ್ಯಾಸ ರೂಢಿಸಿಕೊಂಡಿರುವುದು ಉತ್ತಮ ಮಾರ್ಗವೇ ಸರಿ.
ಅದು ಬೆಳಗಿನ ಜಾವ ಅಥವ ರಾತ್ರಿ ಮಲಗುವ ಮೊದಲು ಕನಿಷ್ಠ ಹನ್ನೊಂದು ಬಾರಿ ಪಠನೆ ಮಾಡುವುದು ಸಾಮಾನ್ಯ ಕ್ರಮ.

ಈ ಮಂತ್ರವನ್ನು ಪಠನ ಮಾಡುವುದು ಒಂದು ಭಾಗವಾದರೆ, ಅದರ ಅರ್ಥ ತಿಳಿದು ಪಠನೆ ಮಾಡುವುದು ಮತ್ತೊಂದು ಭಾಗ, ಇದರಿಂದ ಮನಸ್ಸಿಗೆ ಹೆಚ್ಚು ನೆಮ್ಮದಿ ಮತ್ತು ಫಲವೂ ಅಧಿಕ.

ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ|
ಊರ್ವಾರು ಕಮಿವ ಬಂಧನಾತ್‌ ಮೃತ್ಯೋಮೃಕ್ಷೀಯ ಮಾಮೃತಾತ್‌||

||ಮೃತ್ಯುಂಜಯ ಮಂತ್ರದಲ್ಲಿ ಬರುವ 'ಉರ್ವಾರು' (ಸೌತೆಕಾಯಿಯ) ಸಂಭಂದ ಹೇಗೆ ಎಂಬುದನ್ನು ತಿಳಿಯೋಣ.||
ಓಂ = ಪ್ರಣವ 🕉
ತ್ರಯಂಬಕಂ = ಮೂರು ಕಣ್ಣಿನ ಪರಮೇಶ್ವರನೇ...
ಯಜಾಮಹೇ = ಪೂಜನೀಯನೇ....
ಸುಗಂಧಿಂ = ಸುಗಂಧದಿಂದ ಕೂಡಿದ,
ಪುಷ್ಟಿ ವರ್ಧನಂ = ಇಷ್ಟ ಕಾಮ್ಯ, ಆರೋಗ್ಯವು ವೃದ್ಧಿಯಾಗಲಿ
ಊರ್ವಾರು+ಕಮಿವ+ ಬಂಧನಾತ್ = (ಊರ್ವಾರುಕಮಿವ ಬಂಧನಾತ್)  =  ಹೇಗೆ ಸೌತೆಕಾಯಿಯ ತೊಟ್ಟು ತನ್ನ ಬಳ್ಳಿಯೊಂದಿಗೆ ಬಹಳ ಸೂಕ್ಷ್ಮವಾಗಿ ಅಂಟಿಕೊಂಡಿರುತ್ತದೆಯೋ ಆ ರೀತಿಯಲ್ಲಿ..... 
ಮೃತ್ಯೋಮೃಕ್ಷೀ = ಅಂತಹ ಮೃತ್ಯುವಿನಿಂದ, ಮುಕ್ತಿ ದೊರೆಯಲಿ.
ಮಾಮೃತಾತ್ = ಅಮೃತತ್ವವನ್ನು ಪಡಯುವಂತಾಗಲಿ.

ಇಲ್ಲಿ "ಊರ್ವಾರು ಕಮಿಕ" ಬಂಧನದ ಬಗ್ಗೆ ಸ್ವಲ್ಪ ಹೆಚ್ಚಿನ ವಿವರಣೆಯ ಅಗತ್ಯವಿದೆ. ಆ ಅದ್ಭುತ ವಿವರಣೆಯನ್ನು ನೋಡೋಣ.

ಪರಶಿವನೇ......
ಈ ಜಗತ್ತಿನೊಂದಿಗೆ ನಮ್ಮ ಬಂಧನವು ಹೇಗಿರಬೇಕು ಎಂದರೆ, ಸೌತೆಕಾಯಿಯು ತನ್ನ ಬಳ್ಳಿಯೊಂದಿಗೆ ಎಷ್ಟು ಸೂಕ್ಷ್ಮವಾಗಿ ಅಂಟಿಕೊಂಡಿರುತ್ತದೆಯೋ, ಅದೇ ರೀತಿಯಲ್ಲಿ ಈ ಲೌಕಿಕ ಜಗತ್ತಿನೊಂದಿಗಿನ ನಮ್ಮ ಬಂಧನವು ಸಾಕು ಎಂಬ ಅರ್ಥ ಅಧ್ಬುತ.

| ಅದು ಹೇಗೆಂಬುದನ್ನು ನೋಡೋಣ |

ನಾವು ಇಲ್ಲಿ ಗಮನಿಸಬೇಕಾದದ್ದು, ಗಿಡದ ಬಳ್ಳಿಯಿಂದ ಬೆಳೆಯುವ ಕುಂಬಳಕಾಯಿ, ಸೋರೇಕಾಯಿ, ಹೀರೇಕಾಯಿ ಮುಂತಾದವುಗಳಿಗೂ ಮತ್ತು ಅದೇರೀತಿ ಬಳ್ಳಿಯಿಂದ ಬೆಳೆಯುವ  ಸೌತೆಕಾಯಿಗೂ  ಕಾಣುವ ವ್ಯತ್ಯಾಸ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದಾಗ......!
1. ಸೌತೆಕಾಯಿಯನ್ನು ಗಿಡದ ಬಳ್ಳಿಯಿಂದ ಬೇರ್ಪಡಿಸುವಾಗ, ಕಾಯಿಯ ಜೊತೆ ಬಳ್ಳಿಯ ತೊಟ್ಟು ಅಂಟಿಕೊಂಡು ಬರುವುದಿಲ್ಲ, ಅದು ಗಿಡದ ಬಳ್ಳಿಯೊಂದಿಗೆ ಗಿಡದಲ್ಲೇ ಉಳಿಯುತ್ತದೆ. 
2. ಆದರೆ, ಬಳ್ಳಿಯಿಂದ ಬೆಳೆಯುವ ಕುಂಬಳಕಾಯಿ, ಸೋರೇಕಾಯಿ, ಹೀರೇಕಾಯಿ ಮುಂತಾದವುಗಳು ಬಳ್ಳಿಯ ತೊಟ್ಟು ಕಾಯಿಯೊಂದಿಗೆ ಗಟ್ಟಿಯಾಗಿ ಅಂಟಿಕೊಂಡಿವುದನ್ನು ನಾವು ಗಮನಿದ್ದೇವೆ. 
3. ಗಿಡದ ಬಳ್ಳಿಯಿಂದ ಉತ್ಪತ್ತಿಯಾದ
ತರಕಾರಿಗಳನ್ನು ಮಾರುಕಟ್ಟೆಯಿಂದ ತರುವಾಗ ಕುಂಬಳಕಾಯಿ, ಹೀರೇಕಾಯಿ, ಸೋರೇಕಾಯಿ ಮುಂತಾದವುಗಳು ತೊಟ್ಟಿನ ಸಮೇತ ಕೊಳ್ಳುತ್ತೇವೆ. ಆದರೆ ತೊಟ್ಟಿನೊಂದಿಗೆ ಇರುವ ಸೌತೆಕಾಯಿ ಮಾರುಕಟ್ಟೆಯಲ್ಲಿ ದೊರೆಯುವುದು ಅತಿ ವಿರಳ..!
ಕಾರಣ....!  ಸೌತೆಕಾಯಿ ಮತ್ತು ಅದರ ಗಿಡದ ಬಳ್ಳಿಯ  ಸಂಭಂದ ಬಹಳ ಸೂಕ್ಷ್ಮ. ಸೌತೆಕಾಯಿಯನ್ನು ಗಿಡದ ಬಳ್ಳಿಯಿಂದ ಬೇರ್ಪಡಿಸು ಸಮಯದಲ್ಲಿ, ಕಾಯಿಯೊಂದಿಗೆ  ಅಂಟಿಕೊಂಡಿದ್ದ ಅದರ ತೊಟ್ಟು ಬಳ್ಳಿಯಲ್ಲೇ ಉಳಿಯುತ್ತದೆ ಎನ್ನುವ ಅಧ್ಬುತವಾದ ವಿವರಣೆ. ಅದೇ ರೀತಿಯಲ್ಲಿ ಲೌಕಿಕ ಜಗತ್ತಿನ ನಮ್ಮ ಬಂಧನಗಳು ಇರಬೇಕು ಎಂಬ ಸಂದೇಶ.
[20/04, 7:06 AM] Pandit Venkatesh. Astrologer. Kannada: ಗಣೇಶ ಗಾಯತ್ರಿ ಮಂತ್ರ

ಗುರು ಪರಶುರಾಮನೊಂದಿಗೆ ಜಗಳವಾಡುವಾಗ, ಪರಶುರಾಮನು ಶಿವನಿಂದ ವರವಾಗಿ ಪಡೆದ ಕೊಡಲಿಯನ್ನು ಗಣೇಶನ ಮೇಲೆ ಎಸೆದನು. 

ಆಗ ಗಣೇಶನು ತನ್ನ ತಂದೆಯಾದ ಶಿವನೇ ಪರುಶುರಾಮನಿಗೆ ನೀಡಿದ ಅಸ್ತ್ರ ಕೊಡಲಿಯಾದುದರಿಂದ ಅದಕ್ಕೆ ಗೌರವ ಸಲ್ಲಿಸಬೇಕು ಎನ್ನುವ ದೃಷ್ಟಿಯಿಂದ ಪರುಶುರಾಮ ಬೀಸಿದ ಕೊಡಲಿಗೆ ಅಡ್ಡವಾಗಲಿಲ್ಲ.

 ಆ ಅಸ್ತ್ರವು ಗಣೇಶನ ಒಂದು ದಂತವನ್ನು ತುಂಡರಿಸಿತು. ಗಣೇಶನು ತನ್ನ ಒಂದು ದಂತವನ್ನು ಕಳೆದುಕೊಂಡನು.

 ಆದರೆ ಅವನು ವಿನಯ ಮತ್ತು ಭಾವನಾತ್ಮಕ ಶಕ್ತಿಯನ್ನು ಗಳಿಸಿದನು ಎನ್ನುವ ಕಥೆಯಿದೆ. ಇದಕ್ಕೆ ಸಂಬಂಧಿಸಿದಂತೆ

"ಓಂ ಏಕದಂತಾಯ ವಿದ್ಮಹೇ, ವಕ್ರತುಂಡಾಯ ಧೀಮಹಿ,
ತನ್ನೋ ದಂತಿ ಪ್ರಚೋದಯಾತ್." ಎನ್ನುವ ಮಂತ್ರ ಹುಟ್ಟಿಕೊಂಡಿತು. 

ಈ ಮಂತ್ರವನ್ನು ನಿತ್ಯವೂ ಜಪಿಸಿದರೆ ವ್ಯಕ್ತಿಯು ನಮ್ರತೆ, ಸದಾಚಾರ, ಉನ್ನತಿ ಹಾಗೂ ಬುದ್ಧಿವಂತಿಕೆಯನ್ನು ಪಡೆದುಕೊಳ್ಳುತ್ತಾರೆ.

▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬

Post a Comment

Previous Post Next Post