cm ಇಂದು 3

[11/04, 1:39 PM] Gurulingswami. Holimatha. Vv. Cm: *ಕಾನೂನನ್ನು ಕೈಗೆ ತೆಗೆದುಕೊಂಡರೆ ಅಥವಾ ಹಿಂಸೆಗಿಳಿದರೆ ಸರ್ಕಾರ ಸಹಿಸುವುದಿಲ್ಲ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ* 
ಉಡುಪಿ, ಏಪ್ರಿಲ್ 11:    ನಮ್ಮದು ಸಂವಿಧಾನಬದ್ಧವಾಗಿ ರಚನೆಯಾಗಿರುವ ಸರ್ಕಾರ. ಕಾನೂನು ಸುವ್ಯವಸ್ಥೆ ಮತ್ತು ಸಮಾನತೆ ಎಂಬ ದೃಷ್ಟಿಕೋನದಿಂದ ಕೆಲಸ ಮಾಡುತ್ತಿದ್ದೇವೆ. ಅವರವರ ವಿಚಾರಗಳನ್ನು ಪ್ರಚಾರ ಮಾಡಿದರೆ ತೊಂದರೆ ಇಲ್ಲ. ಆದರೆ ಕಾನೂನನ್ನು ಕೈಗೆ ತೆಗೆದುಕೊಂಡಾಗ ಅಥವಾ ಹಿಂಸೆಗಿಳಿದಾಗ ಸರ್ಕಾರ ಅದನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕಳಿಸಿಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಉಡುಪಿ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. 

*ಕಾನೂನಿನ ಪ್ರಕಾರ ನಡೆಯುವುದು ನಮ್ಮ ಕೆಲಸ*
ಮಂಗಳೂರಿನಲ್ಲಿ ಲವ್ ಜಿಹಾದ್ ಬಗ್ಗೆ ಹಿಂದೂ ಟಾಸ್ಕ್ ಫೋರ್ಸ್ ರಚಿಸಲಾಗುತ್ತಿರುವ ಬಗ್ಗೆ ಮಾತನಾಡಿ ಎಲ್ಲದ್ದಕ್ಕೂ ಕಾನೂನಿದೆ. ಮತ್ತು ಕೆಲವು ಕಾನೂನುಗಳನ್ನು ಹಿಂದಿನ ಸರ್ಕಾರಗಳೇ ಮಾಡಿವೆ. ಅವುಗಳನ್ನು ಬಿಟ್ಟು ನಾವು ಹೊಸ ಕಾನೂನು ಮಾಡುತ್ತಿಲ್ಲ. ಕಾನೂನಿನ ಪ್ರಕಾರ ನಡೆಯುವುದು, ಕಾನೂನು ರಕ್ಷಿಸುವುದು ನಮ್ಮ ಕೆಲಸ ಎಂದರು.  

*ನಮ್ಮ ಕೆಲಸಗಳು ಮಾತನಾಡಬೇಕು*
ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಮುಖ್ಯಮಂತ್ರಿಗಳು ಮೌನವಾಗಿದ್ದೀರಿ ಎಂದು ವಿಪಕ್ಷ ಗಳು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನನ್ನ ಕ್ರಮಗಳೇ ಮಾತನಾಡುತ್ತಿವೆ. ನಾವು ಮಾತನಾಡಬಾರದು. ನಮ್ಮ ಕೆಲಸಗಳು ಮಾತನಾಡಬೇಕು. ಯಾವ ಸಂದರ್ಭದಲ್ಲಿ ಏನು ನಿರ್ಧಾರ ತೆಗೆದುಕೊಳ್ಳ ಬೇಕು, ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ನಮಗೆ ತಿಳಿದಿದೆ. ಇವರಿಂದ ಏನು ಕಲಿಯಬೇಕಿಲ್ಲ. ಇವರು ಹಲವಾರು ಕೊಲೆಗಳಿಗೆ ನೇರವಾಗಿ ಆರೋಪ ಇರುವ ಸಂಸ್ಥೆಗಳ ಪ್ರಕರಣಗಳನ್ನು ಸರ್ಕಾರದ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಕೈಬಿಟ್ಟರಲ್ಲ. ಆಗ ಇವರ ಕರ್ತವ್ಯ ಪ್ರಜ್ಞೆ ಎಲ್ಲಿತ್ತು?ನಮ್ಮ ರಾಜ್ಯ ಶಾಂತಿ ಸುವ್ಯವಸ್ಥೆ ಇರುವ ಅತ್ಯಂತ ಪ್ರಗತಿಪರ ರಾಜ್ಯ. ರಾಜ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕೆಂದು ಗೊತ್ತಿದೆ. ಅದನ್ನು ಮಾಡಿ ತೋರಿಸುತ್ತಿದ್ದೇವೆ ಎಂದರು.   

ಸಿದ್ದರಾಮಯ್ಯ ಅವರ ಹೇಳಿಕೆಯೊಂದಕ್ಕೆ  ಹೇಳಿಕೆ ಪ್ರತಿಕ್ರಿಯೆ ನೀಡಿ ಅವರ ಕಾಲದಲ್ಲಿ ಹತ್ತು ಹಲವಾರು ಹಿಂದೂ ಯುವಕರ ಕೊಲೆಗಳಾದವು. ಆ ಸಂಸ್ಥೆಗಳ ಮೇಲಿನ ಪ್ರಕರಣವನ್ನೇ ಹಿಂಪಡೆದರಲ್ಲಾ, ಆಗ ಅವರು ಬುದ್ದಿ ಕಳೆದುಕೊಂಡಿದ್ದರೇ ಎಂದು ಪ್ರಶ್ನಿಸಿದರು. 

ಆ ಸಂಸ್ಥೆಯನ್ನು ರದ್ದುಗೊಳಿಸಲಾಗುವುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮುಂದಿನ ದಿನಗಳಲ್ಲಿ ನಿಮಗೆ ಗೊತ್ತಾಗಲಿದೆ ಎಂದರು.
[11/04, 4:44 PM] Gurulingswami. Holimatha. Vv. Cm: *ನೇಕಾರರ ಹಾಗೂ ಮೀನುಗಾರರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಉಡುಪಿ, ಏಪ್ರಿಲ್ 11 : 
ಈ ವರ್ಷ ನೇಕಾರರ ಹಾಗೂ ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ  ಯೋಜನೆಯನ್ನು ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ಶ್ರೀ ಕ್ಷೇತ್ರ ಉಚ್ಚಿಲ ಇವರ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮೀನುಗಾರಿಕೆಯನ್ನು ಲಾಭದಾಯಕವನ್ನಾಗಿಸಲು ಕೇಂದ್ರ ಸರ್ಕಾರದ ಯೋಜನೆಯೊಂದಿಗೆ ಸಂಯೋಜಿಸಿ 100 ಆಳ ಸಮುದ್ರ ಮೀನುಗರಿಕಾ ದೋಣಿಗಳನ್ನು ಒದಗಿಸಲಾಗುವುದು. ರಾಜೀವ್ ಗಾಂದಿ ವಸತಿ ಯೋಜನೆಯಡಿ ಮೀನುಗಾರರಿಗೆ 5000 ಮನೆಗಳನ್ನು ನಿರ್ಮಿಸಲಾಗುವುದು. ಮೀನುಗಾರರ 8 ಬಂದರುಗಳಲ್ಲಿ ಹೂಳು ತೆಗೆಯುವ ಕೆಲಸವನ್ನು ಮಾಡಲಾಗುವುದು. ಮೀನುಗಾರ ವೃತ್ತಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಪ್ರತಿ ಗ್ರಾಮಪಂಚಾಯತಿ ಕೆರೆಗಳಲ್ಲಿ ಮೀನುಗಾರರಿಗೆ ಕೆರೆಗಳನ್ನು ಮೀಸಲಿಟ್ಟು, ಮೀನಿನ ಕೃಷಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.

*ಮಹಿಳಾ ಸಬಲೀಕರಣ:*
ಸ್ತ್ರೀಶಕ್ತಿ ಸಂಘಗಳ ಸಾಲಗಳ ಮರುಪಾವತಿ ಶೇ.95 ರಷ್ಟಿದೆ. ಇದು ಮಹಿಳೆಯರ ಪರಿಶ್ರಮ ಹಾಗೂ ಪ್ರಮಾಣಿಕತೆಯನ್ನು ತೋರಿಸುತ್ತದೆ.  ರಾಜ್ಯದ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. 500 ಕೋಟಿ ರೂ. ವೆಚ್ಚದಲ್ಲಿ ಆ್ಯಂಕರ್ ಬ್ಯಾಂಕ್ ಜೋಡಿಸಿ ಸ್ತ್ರೀ ಶಕ್ತಿ ಸಂಘಗಳಿಗೆ 1.5 ಲಕ್ಷ ರೂ.ಗಳಷ್ಟು ಸಾಲ ಸೌಲಭ್ಯ ನೀಡಲಾಗುವುದು. ಇದರಿಂದ ಸುಮಾರು 4 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ. ಕೇವಲ ಜೀವನೋಪಾಯಕ್ಕಾಗಿ ಅಲ್ಲ, ಆರ್ಥಿಕ ಅಭಿವೃದ್ಧಿ ಸಾಧಿಸುವ ಮೂಲಕ ವiಹಿಳಾ ಸಬಲೀಕರಣದ ಧ್ಯೇಯವನ್ನು ಸರ್ಕಾರ ಹೊಂದಿದೆ.

*ಮೀನುಗಾರರಿಗೆ 10 ತಿಂಗಳ ಡೀಸೆಲ್ ಸಬ್ಸಿಡಿ :* 
100 ಡಾ. ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲಾಗುವುದು. ರಾಜ್ಯದ ಆಯ್ದ ಜಿಲ್ಲೆಗಳಲ್ಲಿ 1000 ಹಾಸ್ಟೆಲ್‍ಗಳ ಕ್ಲಸ್ಟರ್ ನಿರ್ಮಿಸಲಾಗುವುದು. ಮೊಗವೀರ ಸಮುದಾಯದ ಮಕ್ಕಳಿಗೆ ವಸತಿ ನಿಲಯ ಸೌಲಭ್ಯವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪೂರೈಸಲಾಗುವುದು. ಮೀನುಗಾರರಿಗೆ 10 ತಿಂಗಳಿಗೆ ಬೇಕಾಗುವ ಡೀಸೆಲ್ ವೆಚ್ಚವನ್ನು ಸಂಪೂರ್ಣವಾಗಿ ಸಬ್ಸಿಡಿ ನೀಡಲಾಗುವುದು. ಮೊಗವೀರರ ಮಹಾಸಂಘ ಕೋರಿರುವಂತೆ  ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ 5 ಕೋಟಿ ರೂ.ಗಳನ್ನು  ಮುಜರಾಯಿ ಇಲಾಖೆ ಮೂಲಕ ನೀಡಲಾಗುವುದು. ಮೀನುಗಾರರ ದುಡಿಮೆ, ಸಾಹಸಗಳನ್ನು ಪ್ರೋತ್ಸಾಹಿಸಿ ಅವರ ಒಳಿತಿಗಾಗಿ ಸರ್ಕಾರ ಸದಾ ಸ್ಪಂದಿಸುತ್ತದೆ ಎಂದರು.


ಸಮಸ್ಯೆಗೆ ಪರಿಹಾರ ಒದಗಿಸುವ ಚಿಂತನೆ ನಾಯಕನಿಗಿರಬೇಕು. ಕೋವಿಡ್ ಸೇರಿದಂತೆ ಯಾವುದೇ ಸಂಕಷ್ಟದ ಸಮಯದಲ್ಲಿನ ಸ್ಪಂದನೆಯಿಂದ ಸರ್ಕಾರದ ಜೀವಂತಿಕೆ ನಿರೂಪಿತವಾಗುತ್ತದೆ. ಕೋವಿಡ್ ಅಲೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಆರ್ಥಿಕತೆಯ ಅಭಿವೃದ್ಧಿಗಾಗಿ ಶ್ರಮವಹಿಸಿ ಸುಮಾರು 15 ಸಾವಿರ ಕೋಟಿಗೂ ಮೀರಿದ ಆರ್ಥಿಕತೆಯನ್ನು ಸರ್ಕಾರ ತಲುಪಿದೆ. ರೈತರಿಗೆ ಡೀಸೆಲ್ ವೆಚ್ಚ,. ಕೋವಿಡ್ ಪ್ರಾಣಕಳೆದುಕೊಂಡವರಿಗೆ ಪರಿಹಾರ, ಪ್ರವಾಹದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರಿಹಾರಗಳನ್ನು ನೀಡಲಾಗಿದೆ ಎಂದರು.
[11/04, 4:44 PM] Gurulingswami. Holimatha. Vv. Cm: ಉಡುಪಿ, ಏಪ್ರಿಲ್ 11: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಡಾ ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ, ಬನ್ನಂಜೆ ಗೋವಿಂದಾಚಾರ್ಯರ  ಪುತ್ಥಳಿಯನ್ನು ಅನಾವರಣಗೊಳಿ ಸಿದರು.

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಶ್ರೇಪಾದರು, ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಶ್ರೀ ಪಾದರು, ಸಚಿವರಾದ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್,  ಶಾಸಕರಾದ ರಘುಪತಿ ಭಟ್, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
[11/04, 4:45 PM] Gurulingswami. Holimatha. Vv. Cm: *ಉಡುಪಿ* ( *ಬನ್ನಂಜೆ* ) ಏಪ್ರಿಲ್ 11: ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು *ಜಿಲ್ಲಾಡಳಿತ ಸಾರ್ವಜನಿಕ* *ಗ್ರಂಥಾಲಯ* *ಇಲಾಖೆ ಹಾಗೂ ಉಡುಪಿ* *ನಗರಾಭಿವೃದ್ಧಿ ಪ್ರಾಧಿಕಾರ* ವತಿಯಿಂದ *ಉಡುಪಿಯ* *ಅಜ್ಜರಕಾಡು* ಇಲ್ಲಿ ಆಯೋಜಿಸಿರುವ ವಿದ್ಯಾ ವಾಚಸ್ಪತಿ *“ಡಾ* *|| ಬನ್ನಂಜೆ* *ಗೋವಿಂದಾಚಾರ್ಯ ಸ್ಮಾರಕ* *ಜಿಲ್ಲಾ ಕೇಂದ್ರ ಗ್ರಂಥಾಲಯ* ಉದ್ಘಾಟನೆ ಮತ್ತು ಜಿಲ್ಲಾ / ನಗರ ಕೇಂದ್ರ ಗ್ರಂಥಾಲಯ ಕಟ್ಟಡ *ಡಿಜಿಟಲ್ ಗ್ರಂಥಾಲಯ* ಉದ್ಘಾಟನೆ ಹಾಗೂ *ಡಾ|| ಬನ್ನಂಜೆ* *ಗೋವಿಂದಾಚಾರ್ಯರವರ* *ಪುತ್ಥಳಿ ಅನಾವರಣ* ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು
[11/04, 5:30 PM] Gurulingswami. Holimatha. Vv. Cm: ಉಡುಪಿ, ಏಪ್ರಿಲ್ 11: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕರ್ನಾಟಕ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗದ ವತಿಯಿಂದ ನೂತನವಾಗಿ ನಿರ್ಮಿಸಿರುವ  ಡಾ: ವಿ.ಎಸ್.ಆಚಾರ್ಯ   ಬಸ್ ನಿಲ್ದಾಣವನ್ನು ಉದ್ಘಾಟಿಸಿದರು.

ಸಾರಿಗೆ ಸಚಿವ ಬಿ.ಶ್ರೀರಾಮುಲು, ಸಚಿವರಾದ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಮೊದಲಾದವರು ಉಪಸ್ಥಿತರಿದ್ದರು.
[11/04, 6:14 PM] Gurulingswami. Holimatha. Vv. Cm: *ಗ್ರಂಥಾಲಯ ಜ್ಞಾನ ಮತ್ತು ತತ್ವಜ್ಞಾನ ಕಲಿಸುವ ಕೇಂದ್ರವಾಗಲಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಉಡುಪಿ, ಏಪ್ರಿಲ್ 11 :

 ಗ್ರಂಥಾಲಯ ಜ್ಞಾನ ಮತ್ತು ತತ್ವಜ್ಞಾನವನ್ನು ಕಲಿಸುವ ಕೇಂದ್ರವಾಗಿ ನಿರಂತರವಾಗಿ ಮುಂದುವರಿಯಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಉಡುಪಿ, ಏಪ್ರಿಲ್ 11: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಡಾ ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ, ಬನ್ನಂಜೆ ಗೋವಿಂದಾಚಾರ್ಯರ  ಪುತ್ಥಳಿಯನ್ನು ಅನಾವರಣಗೊಳಿ ಸಿ ಮಾತನಾಡಿದರು.

ಮನುಷ್ಯ ಬೆಳೆದಂತೆ ಜ್ಞಾನ, ವಿಜ್ಞಾನ, ತಂತ್ರಜ್ಞಾನ, ತಂತ್ರಾಂಶ ಜ್ಞಾನ, ತಂತ್ರಾಂಶ ಜ್ಞಾನ ಬೆಳೆಯಿತು. ಮನುಷ್ಯನ ಚಿಂತನೆಯ ಗುಣಧರ್ಮ ರೂಪಿಸುವುದು ತತ್ವಜ್ಞಾನ. ಸರಿ ತಪ್ಪು, ನ್ಯಾಯ ನೀತಿಗಳ ಪಾಠವೆ ತತ್ವಜ್ಞಾನ. ತತ್ವಜ್ಞಾನ ಹಾಗೂ ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳು.  ಪ್ರತಿ ವಿಜ್ಞಾನದ ಹಿಂದೆ ತತ್ವಜ್ಞಾನ ಬಹಳ ಮುಖ್ಯ ಜ್ಞಾನ ಮತ್ತು ವಿದ್ಯೆಯಲ್ಲಿ ಪಾಂಡಿತ್ಯ ಪಡೆದ ಪದ್ಮಶ್ರೀ ಡಾ.ಬನ್ನಂಜೆ ಗೋವಿಂದಾಚಾರ್ಯ ಅವರು. ಕ್ರಿಯಾಶೀಲವಾದ ಗ್ರಂಥಾಲಯ, ಮಕ್ಕಳ, ತತ್ವಶಾಸ್ತ್ರ, ಸ್ಪರ್ಧಾತ್ಮಕ ಡಿಜಿಟಲ್ ಸೇರಿದಂತೆ ಹಲವು ಗುಣಗಳನ್ನು ಈ ಗ್ರಂಥಾಲಯ ಹೊಂದಿದೆ ಎಂದರು.

ಕರಾವಳಿ ಭಾಗದಲ್ಲಿ ಉದ್ಯಮಶೀಲತೆ ಇದೆ. ನಾಡು ಕಟ್ಟಲು ಬುದ್ಧಿವಂತರು, ಪ್ರಮಾಣಿಕರು ಆಡಳಿತ ವರ್ಗಕ್ಕೆ ಬರಬೇಕು. ಆದ್ದರಿಂದ ಕರಾವಳಿ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಒತ್ತು ನೀಡಬೇಕು.¨ಜೆಟ್‍ನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪಠ್ಯಕ್ರಮ ಪ್ರಶ್ನೆಪತ್ರಿಕೆ  ವ್ಯವಸ್ಥೆಯಿರುವ ‘ಮುಖ್ಯಮಂತ್ರಿ ಮಾರ್ಗದರ್ಶಿ’ವಿಶೇಷ ವೇದಿಕೆ ಗ್ರಂಥಾಲಯದಲ್ಲಿ ಬಳಸಿಕೊಳ್ಳಬೇಕು. ಎಲ್ಲ ಮಕ್ಕಳೂ ಇದರ ಲಾಭವನ್ನು ಪಡೆಯಬೇಕು ಎಂದು ತಿಳಿಸಿದರು.

‘ಯುವಕರು ದೇಶ, ನಾಡು, ಬದುಕಿನ ಬಗ್ಗೆ ಆದರ್ಶಗಳನ್ನು ತುಂಬಿಕೊಂಡಿರುತ್ತಾರೆ. ನಿಮ್ಮ ಆದರ್ಶಗಳು ನಿಮ್ಮ ದಾರಿದೀಪ. ನಿಮ್ಮ ಸಾಧನೆಗಳು ಹಾಗೂ ಅಸ್ತಿತ್ವದ ಮೇಲೆ ನಂಬಿಕೆಯಿಟ್ಟಾಗ ಮಾತ್ರ ಜಗತ್ತನ್ನು ಗೆಲ್ಲಬಹುದು' ಎಂದು ಯುವಕರಿಗೆ ಕಿವಿ ಮಾತು ಹೇಳಿದರು.
[11/04, 6:28 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸಚಿವರಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಸ್ ಅಂಗಾರ, ಶಾಸಕರಾದ ರಘುಪತಿ ಭಟ್ , ಲಾಲಾಜಿ ಮೆಂಡನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
[11/04, 6:44 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಲ್ಪೆಯ ಬಾಲಕರ ಶ್ರೀರಾಮ ಭಜನಾ ಮಂಡಳಿ ಆಯೋಜಿಸಿದ್ದ ಬ್ರಹ್ಮಕಳಶೋತ್ಸವ ಹಾಗೂ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 
 ಈ ಸಂದರ್ಭದಲ್ಲಿ ಸಚಿವರಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಸ್ ಅಂಗಾರ, ಶಾಸಕರಾದ ರಘುಪತಿ ಭಟ್ , ಲಾಲಾಜಿ ಮೆಂಡನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
[11/04, 7:30 PM] Gurulingswami. Holimatha. Vv. Cm: *ಮುಂಬರುವ ದಿನಗಳಲ್ಲಿ ಬೀಚ್ ಟೂರಿಸಂ ಹಾಗೂ ಟೆಂಪಲ್ ಟೂರಿಸಂ ಅಭಿವೃದ್ಧಿಯಾಗಲಿದೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಉಡುಪಿ, ಏಪ್ರಿಲ್ 11 :

 ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಬೀಚ್ ಟೂರಿಸಂ ಹಾಗೂ ಟೆಂಪಲ್ ಟೂರಿಸಂ ಅಭಿವೃದ್ಧಿಯಾಗಲಿದೆ. ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಯಾಗಲು ಸಿಆರ್ಝೆಡ್ ನಿಯಮಾವಳಿಗಳು ಬದಲಾಯಿಸುವ ಬಗ್ಗೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಸೂಕ್ತ ಸ್ಪಂದನೆ ದೊರೆತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕರ್ನಾಟಕ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗದ ವತಿಯಿಂದ ನೂತನವಾಗಿ ನಿರ್ಮಿಸಿರುವ ಡಾ.ವಿ.ಎಸ್.ಆಚಾರ್ಯ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು.

*ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ :*
ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸರ್ಕಾರದ ಆದ್ಯತೆಯಾಗಿದೆ. 250 ಹಾಸಿಗೆ  ಸಾಮಥ್ರ್ಯದ ಆಸ್ಪತ್ರೆಯ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಪಿಪಿಪಿ ಮಾದರಿಯಲ್ಲಿ
ಮೆಡಿಕಲ್ ಕಾಲೇಜು   ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. 200 ಹಾಸಿಗೆ ಸಾಮರ್ಥ್ಯದ ಸುಸಜ್ಜಿತವಾದ ತಾಯಿ ಮಕ್ಕಳ ಆಸ್ಪತ್ರೆಯ ನಿರ್ಮಾಣ ಕೈಗೊಳ್ಳಲಾಗುತ್ತಿದೆ. ಕುಡಿಯುವ ನೀರು ಹಾಗೂ ಒಳಚರಂಡಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಮೀನುಗಾರಿಕೆ, ಪ್ರವಾಸೋದ್ಯಮ ಗಳಿಗೆ ಸದಾ ಪ್ರೋತ್ಸಾಹ ನೀಡಲಿದ್ದು, ಕರಾವಳಿ ಭಾಗದ ಜನರ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸುವ  ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.

*ಬಸ್ ನಿಲ್ದಾಣದಲ್ಲಿ ಸಮಯ ಪರಿಪಾಲನೆ ಹಾಗೂ ಸ್ವಚ್ಛತೆ ಮುಖ್ಯ :*
ಸಾರಿಗೆ ಸೇವೆಯಲ್ಲಿ ಸಮಯ ಮತ್ತು ಬದ್ಧತೆ ಬಹಳ ಮುಖ್ಯ. ಕರಾವಳಿ ಪ್ರದೇಶದಲ್ಲಿ ಖಾಸಗಿ ಸಾರಿಗೆ ದೊಡ್ಡ ಪ್ರಮಾಣದಲ್ಲಿ ಜನರ ಸೇವೆ ಮಾಡುತ್ತಿದೆ. ನಮ್ಮ ಸಾರಿಗೆ ಸಂಸ್ಥೆ ಜನರ ಸೇವೆ , ಖಾಸಗಿಯವರಿಗಿಂತ ಹೆಚ್ಚಿನ ದಕ್ಷತೆ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಬೇಕು. ಶಾಲಾ ಕಾಲೇಜು ಮಕ್ಕಳಿಗೆ, ಆಸ್ಪತ್ರೆಗಳಿಗೆ ಹೋಗುವವರಿಗೆ ಬಸ್ ಸೇವೆ ಅತ್ಯಂತ ಮಹತ್ವವಾದದ್ದು. ಬಸ್ ನಿಲ್ದಾಣದಲ್ಲಿ ಬಸ್ ಓಡಾಟದ ಸಮಯ ಪರಿಪಾಲನೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು. ಬಸ್ ನಿಲ್ದಾಣದ ಆವರಣದಲ್ಲಿ  ಎರಡು ಮಲ್ಟಿಪ್ಲೆಕ್ಸ್ ಚಿತ್ರಮಂದಿರ ನಿರ್ಮಿಸಲು ಅತಿ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

*ಡಾ.ವಿ.ಎಸ್.ಆಚಾರ್ಯ ಅವರ ಪ್ರಾಮಾಣಿಕತೆ ಎಲ್ಲರಿಗೂ ಆದರ್ಶ* :
ಸಾರ್ವಜನಿಕ ಬದುಕಿನಲ್ಲಿ ಪ್ರಾಮಾಣಿಕವಾಗಿ ಆಡಳಿತ ನಡೆಸಬಹುದು ಎನ್ನುವುದಕ್ಕೆ ಆದರ್ಶವಾಗಿರುವ  ಡಾ.ವಿ.ಎಸ್.ಆಚಾರ್ಯ ಅವರ ಹೆಸರಿನಲ್ಲಿ ಬಸ್ ನಿಲ್ದಾಣ ಪ್ರಾರಂಭಿಸಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ಸಮಾರಂಭದಲ್ಲಿ  ಸಾರಿಗೆ ಸಚಿವ ಬಿ.ಶ್ರೀರಾಮುಲು, ಸಚಿವರಾದ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಮೊದಲಾದವರು ಉಪಸ್ಥಿತರಿದ್ದರು.
[11/04, 7:43 PM] Gurulingswami. Holimatha. Vv. Cm: *ಮಾನ್ಯ ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ ಅವರು* *ಮಣಿಪಾಲ್ ನ ಕುಂಜಿಬೆಟ್ಟ ದ ಸಗ್ರಿ ಶ್ರೀ ವಾಸುಕಿ* *ಸುಬ್ರಹ್ಮಣ್ಯ ದೇವಸ್ಥಾನದಲ್ಲಿ* ಆಯೋಜಿಸಿದ್ದ *ಧಾರ್ಮಿಕ* *ಕಾರ್ಯಕ್ರಮದಲ್ಲಿ ಪಾಲ್ಗೊಂಡು* ಮಾತನಾಡಿದರು.
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು, 
ವಿದ್ಯಾಪ್ರಸನ್ನತೀರ್ಥ ಶ್ರೀಗಳು ವಿಶ್ವವಲ್ಲಭತೀರ್ಥ ಶ್ರೀಗಳು ಸೋಂದೆ ಸಂಸ್ಥಾನಮಠ, ಶಿರೂರಿನ  ವೇದವರ್ಧನ ತೀರ್ಥ ಶ್ರೀಗಳು, ಸಚಿವರಾದ ವಿ ಸುನಿಲ್ ಕುಮಾರ, ಎಸ್. ಅಂಗಾರಾ, ಕೋಟ  ಶ್ರೀನಿವಾಸ ಪೂಜಾರಿ, ಲಾಲಾಜಿ ಮೆಂಡನ್, ರಘುಪತಿ ಭಟ್ ಮತ್ತು ಇತರರು ಉಪಸ್ಥಿತರಿದ್ದರು.
[11/04, 8:25 PM] Gurulingswami. Holimatha. Vv. Cm: *ಮಾನ್ಯ ಮುಖ್ಯಮಂತ್ರಿ *ಬಸವರಾಜ ಬೊಮ್ಮಾಯಿ ಅವರು*  ಕುಂಜಿಬೆಟ್ಟಿನ ಸಗ್ರಿ ಶ್ರೀ ವಾಸುಕಿ *ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು, 
ವಿದ್ಯಾಪ್ರಸನ್ನತೀರ್ಥ ಶ್ರೀಗಳು ವಿಶ್ವವಲ್ಲಭತೀರ್ಥ ಶ್ರೀಗಳು ಸೋಂದೆ ಸಂಸ್ಥಾನಮಠ, ಶಿರೂರಿನ  ವೇದವರ್ಧನ ತೀರ್ಥ ಶ್ರೀಗಳು, ಸಚಿವರಾದ ವಿ ಸುನಿಲ್ ಕುಮಾರ, ಎಸ್. ಅಂಗಾರ, ಕೋಟ  ಶ್ರೀನಿವಾಸ ಪೂಜಾರಿ, ಲಾಲಾಜಿ ಮೆಂಡನ್, ರಘುಪತಿ ಭಟ್ ಮತ್ತು ಇತರರು ಉಪಸ್ಥಿತರಿದ್ದರು.
[11/04, 8:27 PM] Gurulingswami. Holimatha. Vv. Cm: *ಶ್ರೀ ರಾಮನ ಆದರ್ಶಗಳು ಇಂದಿಗೂ ಪ್ರಸ್ತುತ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಉಡುಪಿ, ಏಪ್ರಿಲ್ 11: ಅರ್ಥಗರ್ಭಿತವಾದ ರಾಮಾಯಣ ಹಾಗೂ ಶ್ರೀ ರಾಮಚಂದ್ರನ ಪ್ರಭಾವ ಆಧುನಿಕ ಕಾಲದಲ್ಲಿಯೂ ಇದೆ. ಅವನ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಮಲ್ಪೆಯ ಬಾಲಕರ ಶ್ರೀರಾಮ ಭಜನಾ ಮಂಡಳಿ ಆಯೋಜಿಸಿದ್ದ ಬ್ರಹ್ಮಕಳಶೋತ್ಸವ ಹಾಗೂ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ಶ್ರೀ ರಾಮನ ಹೆಸರಿನಲ್ಲಿ ನೀತಿ, ಭಕ್ತಿ ಶಕ್ತಿ, ಸುಖ, ಶಾಂತಿ ಮತ್ತು  ನೆಮ್ಮದಿ ಇದೆ. ಅದಕ್ಕಾಗಿ ರಾಮರಾಜ್ಯ ಎಂಬ ಹೆಸರು ಬಂದಿದೆ. ರಾಮ ತನಗಾಗಿ ಏನನ್ನೂ ಮಾಡಿಕೊಳ್ಳದೆ   ಲೋಕ ಕಲ್ಯಾಣಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ. ರಾಮಾಯಣದಲ್ಲಿ ತಂದೆತಾಯಿಯ ಸಂಬಂಧ ಹೇಗಿರಬೇಕು ಎಂದು ದಶರಥ ಹಾಗೂ ಶ್ರೀರಾಮನಿಂದ ತಿಳಿಯುತ್ತದೆ. ಅದು ಆದರ್ಶ. ಅಣ್ಣ ತಮ್ಮಂದಿರ ಸಂಬಂಧ ರಾಮ, ಲಕ್ಷ್ಮಣ, ಭರತರನ್ನು ನೋಡಿ ತಿಳಿಯುತ್ತದೆ. ಶ್ರೀ ರಾಮಸೀತೆಯ ಸಂಬಂಧ ಪತಿ ಪತ್ನಿಯರ ಸಂಬಂಧಕ್ಕೆ ಆದರ್ಶಪ್ರಾಯ. ಶ್ರೀ ರಾಮ ಮತ್ತು ಹನುಮನ ಸಂಬಂಧ ಗುರುಶಿಷ್ಯರ ಸಂಬಂಧಕ್ಕೆ ಆದರ್ಶ. ಶ್ರೀ ರಾಮ ಮಾತು ವಾನರಸೈನ್ಯ ದೇಶಭಕ್ತಿಯ ಪ್ರತೀಕ.  ಲವಕುಶ ಹಾಗೂ ಶ್ರೀ ರಾಮನ ಸಂಬಂಧ ನ್ಯಾಯನಿಷ್ಠುರತೆಯ ಪ್ರತೀಕ.  ಶ್ರೀ ರಾಮ ರಾವಣನ ಸಂಬಂಧ ದುಷ್ಟಶಕ್ತಿಯ ಸಂಹಾರಕ್ಕೆ ದ್ಯೋತಕ ವಾಗಿದೆ ಎಂದರು. 

ಮಲ್ಪೆಯ ಗ್ರಾಮದಲ್ಲಿ ಬಾಲಕರಿದ್ದಾಗ ಪ್ರಾರಂಭವಾದ  ಶ್ರೀರಾಮನ ಸೇವೆಯನ್ನು 50  ವರ್ಷಗಳಿಂದ  ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು  ಶ್ಲಾಘನೀಯ ಎಂದರು.  ಈ  ಪುಣ್ಯ ತಲೆಮಾರುಗಳಿಗೆ ವ್ಯಾಪಿಸಲಿದೆ ಎಂದರು. 

ಈ ಸಂದರ್ಭದಲ್ಲಿ ಸಚಿವರಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಸ್ ಅಂಗಾರ, ಶಾಸಕರಾದ ರಘುಪತಿ ಭಟ್ , ಲಾಲಾಜಿ ಮೆಂಡನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
[11/04, 8:45 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು  ಮಣಿಪಾಲದಲ್ಲಿ ಉಡುಪಿ ಜಿಲ್ಲೆಯ ವಿವಿಧ ಸಮುದಾಯಗಳ ಮುಖಂಡರುಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಚಿವರಾದ ವಿ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಸ್ ಅಂಗಾರ, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯ್ಲಿಡಿ ಸುರೇಶ ನಾಯಕ್ ಮತ್ತು ಇತರರು ಉಪಸ್ಥಿತರಿದ್ದರು.
[11/04, 8:48 PM] Gurulingswami. Holimatha. Vv. Cm: *ಉಡುಪಿ*  ಏಪ್ರಿಲ  11,-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು *ಉಡುಪಿ ಮಣಿಪಾಲ್ ನಲ್ಲಿ* *ಜಿಲ್ಲೆಯ ವಿವಿಧ ಸಮುದಾಯಗಳ* *ಮುಖಂಡರುಗಳೊಂದಿಗೆ ಸಂವಾದ* ಕಾರ್ಯಕ್ರಮದಲ್ಲಿ ಭಾಗವಹಿಸಿ *ಮಾತನಾಡಿದರು* . ಈ ಸಂದರ್ಭದಲ್ಲಿ ಸಚಿವರಾದ ವಿ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಸ್ ಅಂಗಾರಾ, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯ್ಲಿಡಿ ಸುರೇಶ ನಾಯಕ್ ಮತ್ತು ಇತರರು ಉಪಸ್ಥಿತರಿದ್ದರು.
[11/04, 10:06 PM] Gurulingswami. Holimatha. Vv. Cm: *ನಾಡನ್ನು ಸುಭಿಕ್ಷಗೊಳಿಸಲು ಶಕ್ತಿ ಮೀರಿ ಪ್ರಯತ್ನ:  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಭರವಸೆ*

ಉಡುಪಿ, ಏಪ್ರಿಲ್ 11:  ನಾಡನ್ನು ಮುನ್ನಡೆಸುವ ಅವಕಾಶ ದೊರೆತಿದೆ. ಭಗವಂತನಿಂದ  ನಿಷ್ಠೆ ಪ್ರಾಮಾಣಿಕತೆ ಹಾಗೂ ವಿಶ್ವಾಸಕ್ಕೆ ಕುಂದುಬಾರದ ರೀತಿಯಲ್ಲಿ ಆಡಳಿತ ನಡೆಸುವುದಾಗಿ ಹಾಗೂ  ನಾಡನ್ನು ಸುಭಿಕ್ಷ ಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ  ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ  ಭರವಸೆ ಇತ್ತರು. 

ಅವರು ಇಂದು ಕುಂಜಿಬೆಟ್ಟಿನ ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

 ನಾಗದೇವತೆಗೆ ವಿಶಿಷ್ಟ ಸ್ಥಾನವಿದೆ. ಅತ್ಯಂತ ಸೌಮ್ಯ ಹಾಗೂ  ಭಯಂಕರ. ಪೂಜೆ ಮಾಡಿದ್ರೆ ವರ ತೊಂದರೆ ಕೊಟ್ಟರೆ ಪ್ರಾಣ ತೆಗೆಯುವ ಶಕ್ತಿ ಇದೆ. ಇದರ ಅರ್ಥ ನಮ್ಮ ಸದ್ಗುಣ ನಮಗೆ ವರವಾಗಿ ಪರಿಣಮಿಸುತ್ತದೆ. ದುರ್ಗುಣಗಳು  ಶಾಪವಾಗುತ್ತವೆ. ನಮ್ಮ ದುರ್ಗುಣಗಳ ನಾಶಕ್ಕೆ  ಈ ರೀತಿಯ ನಾಗ ಮಂಡಲ ಉತ್ಸವ ಅಗತ್ಯವಿದೆ ಎಂದರು.

 ಹಸಿವು ಬಡತನಕ್ಕೆ ಸಾಮ್ಯವಿದೆ. ಹಸಿವು ಎಂದರೆ ದೇವರು ಕೊಟ್ಟ ಶಾಪವೋ ವರವೋ ಅರ್ಥಮಾಡಿಕೊಳ್ಳಬೇಕು. ಹಸಿವು ಇರದಿದ್ದರೆ, ಮನುಷ್ಯ ಅಭಿವೃದ್ದಿಯಾಗುತ್ತಿರಲಿಲ್ಲ. ಮನುಷ್ಯ ಕುಲದ ಅಭಿವೃದ್ಧಿಗಾಗಿಯೇ ಭಗವಂತ ಹಸಿವು ಎಂಬ ವಾರ ನೀಡಿದ್ದಾನೆ ಎಂದರು. 

ನಾಗಮಂಡಲ ಅರಿವು ಮೂಡಿಸುತ್ತದೆ. ಮಾನವನ ಅರಿವೇ ಅವನ ಅಸ್ತಿತ್ವ. ಇಲ್ಲದಿದ್ದರೆ ಪ್ರಾಣಿ ಹಾಗೂ ಮನುಷ್ಯನಿಗೆ  ವ್ಯತ್ಯಾಸ ವಿರುತ್ತಿರಲಿಲ್ಲ. ಪಾಪ ಪುಣ್ಯದ ಅರಿವು ದೇವರು ಕೊಟ್ಟ ವರ. ಮರೆವು ಸಹ ಒಂದು ರೀತಿಯ ವರವೇ. ನಕಾರಾತ್ಮಕ ನೆನೆಪುಗಳೆ ಮಾನವನಿಗೆ ಹೆಚ್ಚು. ದ್ವೇಷ  ಸಮಾಜದಲ್ಲಿನ ಹರಡುತ್ತಿತ್ತು. ಮರೆವು ಇರುವುದರಿಂದ ಬದುಕು ಸುಂದರವಾಗಿದೆ ಎಂದರು.

ಸಾವು ಇಲ್ಲದಿದ್ದಿದ್ದರೆ ಭೂಮಿಯ ಮೇಲೆ ಸ್ಥಳವಿರುತ್ತಿರಲಿಲ್ಲ. ಸಾವು ಸಹ ಹುಟ್ಟಿನಷ್ಟೇ ಮುಖ್ಯ. ಅದಕ್ಕಿಂತ ಬದುಕು ಮುಖ್ಯ. ಬದುಕು ಮಾತ್ರ ಪ್ರಸ್ತುತ. ಬದುಕನ್ನು ಹಲವಾರು ವಿಧಾನಗಳಲ್ಲಿ ಬದುಕಿನ ಧರ್ಮವಿದೆ. ಒಬ್ಬೊಬ್ಬರ ಆಚರಣೆಗಳು ವಿಭಿನ್ನ. ಎಲ್ಲರಿಗೂ ತಿಳಿಹೇಳಿ ಪ್ರಜ್ಞೆಯನ್ನು ಜಾಗೃತಿ ಮೂಡಿಸಿ, ಭಾವನೆಗಳನ್ನು ಪವಿತ್ರಗೊಳಿಸಿ, ಆಚಾರ ವಿಚಾರಗಳನ್ನು ಇನ್ನಷ್ಟು ಉತ್ತಮಗೊಳಿಸಿ, ಸಮಾಜಕ್ಕೆ ಒಳ್ಳೆ ಕೆಲಸ ಮಾಡಲು ನಾಗಮಂಡಲೋತ್ಸವ ಪ್ರೇರೇಪಿಸುತ್ತದೆ ಎಂದು ಭಾವಿಸಿರುವುದಾಗಿ ತಿಳಿಸಿದರು.  

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು, 
ವಿದ್ಯಾಪ್ರಸನ್ನತೀರ್ಥ ಶ್ರೀಗಳು ವಿಶ್ವವಲ್ಲಭತೀರ್ಥ ಶ್ರೀಗಳು ಸೋಂದೆ ಸಂಸ್ಥಾನಮಠ, ಶಿರೂರಿನ  ವೇದವರ್ಧನ ತೀರ್ಥ ಶ್ರೀಗಳು, ಸಚಿವರಾದ ವಿ ಸುನಿಲ್ ಕುಮಾರ, ಎಸ್. ಅಂಗಾರ, ಕೋಟ  ಶ್ರೀನಿವಾಸ ಪೂಜಾರಿ, ಲಾಲಾಜಿ ಮೆಂಡನ್, ರಘುಪತಿ ಭಟ್ ಮತ್ತು ಇತರರು ಉಪಸ್ಥಿತರಿದ್ದರು.

Post a Comment

Previous Post Next Post