ಕಾಂಗ್ರೇಸ್ ಗೇ CM ಎನ್ ಹೇಳಿದ್ರು*ಕಾಂಗ್ರೆಸ್ ಅವರು ತನಿಖಾಧಿಕಾರಿಗಳಾಗಬೇಕಿಲ್ಲ*: *ಮುಕ್ತ ತನಿಖೆಯಾಗಲು ಬಿಡಬೇಕು* : *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

[15/04, 11:15 AM] Gurulingswami. Holimatha. Vv. Cm: *ಕಾಂಗ್ರೆಸ್ ಅವರು ತನಿಖಾಧಿಕಾರಿಗಳಾಗಬೇಕಿಲ್ಲ*: *ಮುಕ್ತ ತನಿಖೆಯಾಗಲು ಬಿಡಬೇಕು* : *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಹುಬ್ಬಳ್ಳಿ, ಏಪ್ರಿಲ್ 15: ಕಾಂಗ್ರೆಸ್ ಅವರು  ವಕೀಲರು ಹಾಗೂ ನ್ಯಾಯಮೂರ್ತಿಗಳಾಗುವ ಅವಶ್ಯಕತೆ ಇಲ್ಲ. ಸಂತೋಷ್ ಆತ್ಮಹತ್ಯೆ ಪ್ರಕರಣ ಮುಕ್ತವಾಗಿ ತನಿಖೆಯಾಗಲು ಬಿಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. 

ಈಶ್ವರಪ್ಪ ಅವರನ್ನು ಬಂಧಿಸಬೇಕೆಂಬ ವಿರೋಧ ಪಕ್ಷಗಳ ಒತ್ತಾಯದ ಬಗ್ಗೆ ಪ್ರತಿಕ್ರಿಯೆ ನೀಡಿ ಪೊಲೀಸರಿಗೆ ತಮ್ಮ ಕೆಲಸ ಮಾಡಲು ಬಿಡಬೇಕು. ಪೊಲೀಸ್ ಆಗಲಿ ಸಿಬಿಐ ಆಗಲಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ  ಕೆ.ಜೆ.ಜಾರ್ಜ್ ಅವರನ್ನು ಬಂಧಿಸಿರಲಿಲ್ಲ. ಏನು ಅವಶ್ಯಕತೆ ಇದೆ ಇಲ್ಲ ಎನ್ನುವುದನ್ನು ಪೊಲೀಸರು ತೀರ್ಮಾನ ಮಾಡುತ್ತಾರೆ.  ಕಾಂಗ್ರೆಸ್ ಅವರು ಯಾಕೆ ಗಾಬರಿಯಾಗುತ್ತಿದ್ದಾರೆ. ಸತ್ಯ ಹೊರಬರಲಿ ಎಂದರು. 

*ಹಿನ್ನಡೆಯ ಪ್ರಶ್ನೆ ಉದ್ಭವಿಸುವುದಿಲ್ಲ*
ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆ ಘೋಷಣೆಯಿಂದ ಸರ್ಕಾರಕ್ಕೆ ಹಿನ್ನಡೆ ಅಥವಾ  ಮುಜುಗರ ತಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ  ತನಿಖೆಯಾದ ನಂತರ ಈಶ್ವರಪ್ಪ ಅವರಿಗೆ  ಅವರು ಆರೋಪ ಮುಕ್ತರಾಗುವ ಬಗ್ಗೆ  ವಿಶ್ವಾಸ ಇದೆ. ಇಲ್ಲಿ ಯಾರದೂ ವೈಯಕ್ತಿಕ ವಿಚಾರವಿಲ್ಲ.  ಇಲ್ಲಿ ಹಿನ್ನಡೆ, ಮುನ್ನಡೆ ಪ್ರಶ್ನೆ ಬರುವುದಿಲ್ಲ ಎಂದರು.


ಸಚಿವ ಕೆ.ಎಸ್.ಈಶ್ವರಪ್ಪ ಅವರು ಇಂದು ಸಂಜೆ ರಾಜೀನಾಮೆ ನೀಡಲಿದ್ದಾರೆ. ತಮ್ಮ ನಿಲುವಿನ ಬಗ್ಗೆ ಅವರಿಗೆ  ಸ್ಪಷ್ಟತೆ ಇದೆ ಎಂದರು. 

ಪ್ರಕರಣ ಒಂದು ಷಡ್ಯಂತರವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯಲಿದ್ದು, ತನಿಖೆಯಲ್ಲಿ ಸತ್ಯಾಂಶ ಹೊರಬೀಳಲಿದೆ ಎಂದರು.
[15/04, 11:28 AM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು
ಗದುಗಿನ ತ್ರಿವಿಧ ದಾಸೋಹಮೂರ್ತಿ ಪೂಜ್ಯ ಲಿಂಗೈಕ್ಯ ಶ್ರೀ ಜಗದ್ಗುರು ಡಾ. ತೋಂಟದಾರ್ಯ ಸಿದ್ದಲಿಂಗ ಮಹಾಸ್ವಾಮಿಗಳ ಐಕ್ಯಮಂಟಪವನ್ನು ಲೋಕಾರ್ಪಣೆ ಮಾಡಿದರು. 
ಈ ಸಂದರ್ಭದಲ್ಲಿ
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಲೊಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ, ಕೃಷಿ ಹಾಗೂ ಜಿಲ್ಕಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ, ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ, ಶಾಸಕ ಕಳಕಪ್ಪ ಬಂಡಿ, ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ, ಮಾಜಿ ಸಚಿವ ಎಸ್.ಎಸ್.ಪಾಟೀಲ,
ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ದುರದುಂಡಿಶ್ವರ ಮಠ ಅರಬಾವಿ, ಶ್ರೀ. ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ತೋಂಟದಾರ್ಯ ಶಾಖಾಮಠ ಮುಂಡರಗಿ-ಬೈಲೂರ, ಶ್ರೀ ಗುರುಬಸವ ಮಹಾಸ್ವಾಮಿಗಳು ತೋಂಟದಾರ್ಯ ಶಾಖಾ ಮಠ ಶಿರೋಳ, ಶ್ರೀ.ಶಾಂತಲಿಂಗ ಮಹಾಸ್ವಾಮಿಗಳು ದೊರೆಸ್ವಾಮಿ ವೀರಕ್ತಮಠ ಭೈರನಟ್ಟಿ,  ಗದಗ-ಬೆಟಗೇರಿ ನಗರ ಸಭೆ ಅಧ್ಯಕ್ಷೆ ಉಷಾ ದಾಸರ, ಉಪಾದ್ಯಕ್ಷೆ ಸುನಂದಾ ಬಾಕಳೆ, ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ,
ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿ.ಪಂ.ಸಿ.ಇ.ಒ. ಡಾ.ಸುಶೀಲಾ.ಬಿ, ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ಸೇರಿದಂತೆ ಇತರರು ಉಪಸ್ಥಿತರಿದ್ದರು.
[15/04, 12:22 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಗದುಗಿನ ತ್ರಿವಿಧ ದಾಸೋಹಮೂರ್ತಿ ಪೂಜ್ಯ ಲಿಂಗೈಕ್ಯ ಶ್ರೀ ಜಗದ್ಗುರು ಡಾ. ತೋಂಟದಾರ್ಯ ಸಿದ್ದಲಿಂಗ ಮಹಾಸ್ವಾಮಿಗಳ ಐಕ್ಯಮಂಟಪವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
[15/04, 2:03 PM] Gurulingswami. Holimatha. Vv. Cm: *ಜಗದ್ಗುರು ಡಾ: ತೋಂಟದಸಿದ್ಧಲಿಂಗ ಮಹಾಸ್ವಾಮೀಜಿಗಳ ಜನ್ಮದಿನವನ್ನು ಭಾವೈಕ್ಯ ದಿನವಾಗಿ ಆಚರಣೆ:* *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಗದಗ , ಏಪ್ರಿಲ್ 15:-  ಜಗದ್ಗುರು ಡಾ: ತೋಂಟದಸಿದ್ಧಲಿಂಗ ಮಹಾಸ್ವಾಮೀಜಿಗಳ ಜನ್ಮದಿನವನ್ನು ಭಾವೈಕ್ಯ ದಿನವನ್ನಾಗಿ ಆಚರಿಸಲಾಗುವುದು. ಈ ಕುರಿತು  ಸರ್ಕಾರಿ ಆದೇಶವನ್ನು ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ತಿಳಿಸಿದರು. 

ಅವರು ಇಂದು ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ, ಗದಗ ವತಿಯಿಂದ  ಆಯೋಜಿಸಿದ್ದ ತ್ರಿವಿಧ  ದಾಸೋಹಮೂರ್ತಿ ಪೂಜ್ಯ ಲಿಂಗೈಕ್ಯ ಶ್ರೀ ಜಗದ್ಗುರು ಡಾ: ತೋಂಟದ ಸಿದ್ಧಲಿಂಗಮಹಾಸ್ವಾಮೀಜಿಗಳ ಐಕ್ಯ ಮಂಟಪ  ಲೋಕಾರ್ಪಣೆ ಮಾಡಿ ಮಾತನಾಡಿದರು. 

ಅವರ ಜನ್ಮ ದಿನವನ್ನು ಅರ್ಥಪೂರ್ಣ ವಾಗಿ ಆಚರಿಸುವುದು ನಮ್ಮೆಲ್ಲರ ಕರ್ತವ್ಯ. 
 ಪರಮಪೂಜ್ಯರು ಜ್ಞಾನಿಗಳಾಗಿದ್ದರು. ಆಧ್ಯಾತ್ಮಿಕವಾಗಿ ಅವರ ಜ್ಞಾನ ಆಳವಾಗಿತ್ತು. ಆ ಆಳದ ಲೆಕ್ಕ ನಮಗ್ಯಾರಿಗೂ ಸಿಕ್ಕಿಲ್ಲ. ಅವರ ಲೌಕಿಕ ಜ್ಞಾನವೂ ಅಷ್ಟೇ ವಿಸ್ತಾರವಾಗಿತ್ತು. ಭಕ್ತರಿಗೆ ಜ್ಞಾನದ ಮೂಲಕ ಮಾರ್ಗದರ್ಶನ ಮಾಡಿದಾಗ ಅವರು ಸಂತೃಪ್ತರಾಗಿ ಬದುಕಿನ ಮಾರ್ಗವನ್ನು ಪಡೆದುಕೊಂಡು ಯಶಸ್ವಿಯಾಗಿದ್ದಾರೆ. ಪರಮಪೂಜ್ಯರ ಸಂಘಕ್ಕೆ ಬಂದವರು ಅಪಾರವಾದ ಪ್ರೀತಿ, ಆತ್ಮೀಯತೆ, ಆಶೀರ್ವಾದ ನೀಡಿದ್ದಾರೆ ಎಂದರು. 

*ಮನುಷ್ಯರನ್ನು ಮನುಷ್ಯತ್ವದಿಂದ  ಕಟ್ಟಲು ಪ್ರಯತ್ನ*
ಅವರು ಮನಸ್ಸು ಮಾಡಿದ್ದರೆ, ದೊಡ್ಡ ಸಂಸ್ಥೆಗಳನ್ನು ಕಟ್ಟಬಹುದಿತ್ತು. ಅವರ ಚಿಂತನೆಗಳು ಬೇರೆ. ಕಟ್ಟಡಗಳನ್ನು ಕಟ್ಟಲು ಮಹತ್ವ ನೀಡಲಿಲ್ಲ. ಮನುಷ್ಯರನ್ನು ಮನುಷ್ಯತ್ವದಿಂದ  ಕಟ್ಟಲು ಪ್ರಯತ್ನ ಮಾಡಿದ್ದಾರೆ. ಆ ಮೂಲಕ ಸಾಮೂಹಿಕ ಚಿಂತನೆಯ ಸಮಾಜ ಕಟ್ಟಲು ಬಯಸಿದ್ದರು. ಹೊಗಳಿಕೆಗೆ ತೆಗಳಿಕೆಗೆ ಕಿವಿಗೊಡದೆ ಸ್ಥಿತಪ್ರಜ್ಞರಾಗಿದ್ದರು. ಆಧ್ಯಾತ್ಮಿಕವಾಗಿ ಬಹಳ ದೊಡ್ಡ ಸಾಧನೆ ಮಾಡಿದವರಿಗೆ ಮಾತ್ರ ಅದು ಸಾಧ್ಯವಾಗುತ್ತದೆ. ಇಂಥ ಪರಮಪೂಜ್ಯರನ್ನು ಹೊಂದಿದ ಮಠ ಪವಿತ್ರ ಕ್ಷೇತ್ರ. ಇದರ ಪರಂಪರೆ, ಸಂಸ್ಕೃತಿ, ಎಲ್ಲರನ್ನೂ ಒಳಗೊಂಡಿದೆ.   ಜಾತ್ರಾ ಮಾಹೋತ್ಸವದಲ್ಲಿ ಇದನ್ನು ಕಾಣುಬಹುದಾಗಿದೆ. ಅರ್ಥಪೂರ್ಣ ವಾಗಿ ಆಚರಣೆಯಾಗುವ ಹಂಬಲ ಗುರುಗಳದ್ದು. ಕೆರೆಕಟ್ಟೆಗಳ ನಿರ್ಮಾಣಕ್ಕಾಗಿ ಅವರು ತಾಯಿ ಹೃದಯದಿಂದ ಮಿಡಿಯುತ್ತಿದ್ದರು. ಅವರ ಆಶೀರ್ವಾದದಿಂದ  ಅನೇಕ ಕೆರೆ ತುಂಬಿಸುವ ಯೋಜನೆಗಳಾಗಿವೆ ಎಂದರು.  

*ಪರಿಸರ ಕಾಳಜಿ*
ಸ್ವಾಮಿಗಳು ಜನ ಹಾಗೂ ಪರಿಸರದ ಬಗ್ಗೆಯೂ ಕಳಕಳಿ ಇದ್ದವರು. ಕಪ್ಪತಗುಡ್ಡವನ್ನು ವನ್ಯಜೀವಿ ತಾಣವನ್ನಾಗಿ ಘೋಷಿಸಲು ಅವರು ದೊಡ್ಡ ಹೋರಾಟ ಮಾಡಿದರು.  ಕನ್ನಡ ಬಾಷೆಯ ಬಗ್ಗೆಯೂ ಅವರಿಗೆ ಅಭಿಮಾನವಿತ್ತು ಗೋಕಾಕ್ ಚಲವಳಿಯಲ್ಲಿಯೂ ಭಾಗಿಯಾಗಿದ್ದರು.  ಅವರ ಭಾಷಣ ಕೇಳಿ ಡಾ: ರಾಜ್ ಕುಮಾರ್ ಅವರೂ ಪ್ರಶಂಸೆ ವ್ಯಕ್ತಪಡಿಸಿದ್ದರು. ಅವರನ್ನು ಕಳೆದುಕೊಂಡು ನಮ್ಮ ನಾಡು, ಸಂಸ್ಕೃತಿ , ಸಮಾಜ ಬಡವಾಗಿದೆ. , ನಿರ್ಣಾಯಕ ವಿಚಾರಗಳಿದ್ದದ್ದರಿಂದ ವಿವಾದಗಳಿದ್ದವು. ನಿಷ್ಠುರವಾಗಿ  ಸತ್ಯವನ್ನಾಡಿದರೆ ವಿವಾದಗಳಿರುತ್ತವೆ. ಸಕಾರಾತ್ಮಕ, ಜನಕಲ್ಯಾಣಕ್ಕಾಗಿ ವಿವಾದಗಳನ್ನು  ಹುಟ್ಟುತ್ತಿದ್ದವು. ಅವರ ಪ್ರಭಾವ ನಮ್ಮ ಮೇಲಿದೆ ಎಂದರು. 

*ಮೌಲಿಕ ಚಿಂತನೆಗಳು*
ಪ್ರಸಿದ್ದಿ ಇದ್ದವರಿಗೆ ಎಲ್ಲರೂ ಪ್ರಶಸ್ತಿ ಕೊಡುತ್ತಾರೆ.  ಸದ್ದಿಲ್ಲದೆ ಸಮಾಜಕ್ಕಾಗಿ ಕೆಲಸ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡಬೇಕೆಂದು ಸ್ವಾಮಿಗಳು ಹೇಳುತ್ತಿದ್ದರು.  ವಿಧವೆಯೊಬ್ಬರು ಬರೆದ ಪುಸ್ತಕಕ್ಕೆ 32 ವರ್ಷಗಳ ನಂತರ  ಪುಸ್ತಕ ಮತ್ತು ಲೇಖಕರಿಗೆ ಪ್ರಶಸ್ತಿ ನೀಡಲಾಯಿತು. ಮೌಲಿಕವಾಗಿ ಚಿಂತನೆ ಮಾಡಿ, ದೊಡ್ಡ ಪ್ರಮಾಣದಲ್ಲಿ ಪ್ರಕಟಣೆಗಳನ್ನು ಹೊರತಂದಿದ್ದಾರೆ. 

ಸಾಧಕನಿಗೆ ಸಾವು ಅಂತ್ಯವಲ್ಲ ಸಾವಿನ ನಂತರವೂ ಬದುಕುವನು ಸಾಧಕ ಎನ್ನುವ ಸ್ವಾಮಿ ವಿವೇಕಾನಂದರ ನುಡಿಗಳಂತೆ  ಅವರು ಸಾಧಕರಾಗಿ ನಮ್ಮ ನಡುವೆ ಬದುಕಿದ್ದಾರೆ.  ಸಿದ್ದರಾಮ ಮಹಾಸ್ವಾಮಿಗಳನ್ನು ಗುರುತಿಸಿ ಪರಂಪರೆ ಮುಂದುವರೆಯಲು ಎಲ್ಲಾ ಕೆಲಸ ಮಾಡಿದ್ದಾರೆ ಎಂದರು.
[15/04, 2:05 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಗದುಗಿನ ಪಂಡಿತ ಪುಟ್ಟರಾಜ ಗವಾಯಿಗಳ ಮಠ ವೀರೇಶ್ವರ ಪುಣ್ಯಾಶ್ರಮ ಕ್ಕೆ ಭೇಟಿ ನೀಡಿ ಗದ್ದುಗೆ ದರ್ಶನ ಪಡೆದರು. ನಂತರ ಶ್ರೀಮಠದ ಕಲ್ಲಯ್ಯಜ್ಜನವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಕೃಷಿ ಮತ್ತು ಗದಗ ಜಿಲ್ಲೆ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ, ಲೋಕೋಪಯೋಗಿ ಇಲಾಖೆ ಸಚಿವ ಸಿಸಿ ಪಾಟೀಲ, ಸಂಸದ ಶಿವಕುಮಾರ ಉದಾಸಿ ಉಪಸ್ಥಿತರಿದ್ದರು.
[15/04, 2:36 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗದಗ ಜಿಲ್ಲೆಗೆ ಬಜೆಟ್ ನಲ್ಲಿ‌ ವಿವಿಧ ಯೋಜನೆಗಳಿಗಾಗಿ ೧೩೦೬ ಕೋಟಿ ರೂಪಾಯಿ ಅನುದಾನ‌ ನೀಡಿರುವ ಹಿನ್ನೆಲೆಯಲ್ಲಿ ಇಂದು ಗದಗ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ  ಗದಗದಲ್ಲಿ  ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ 
 ಲೊಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ, ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ, ಶಾಸಕ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ, ಮುಖಂಡರಾದ ಅನಿಲ ಮೆಣಸಿನಕಾಯಿ, ಗದಗ ಜಿಲ್ಲಾ  ಬಿಜೆಪಿ ಅಧ್ಯಕ್ಷ ಮೋಹನ ಮಾಲಶೆಟ್ಟಿ, ಗದಗ-ಬೆಟಗೇರಿ ನಗರ ಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
[15/04, 2:38 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗದಗ ಜಿಲ್ಲೆಗೆ ಬಜೆಟ್ ನಲ್ಲಿ‌ ವಿವಿಧ ಯೋಜನೆಗಳಿಗಾಗಿ ೧೩೦೬ ಕೋಟಿ ರೂಪಾಯಿ ಅನುದಾನ‌ ನೀಡಿರುವ ಹಿನ್ನೆಲೆಯಲ್ಲಿ ಇಂದು ಗದಗ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ  ಗದಗದಲ್ಲಿ  ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ 
 ಲೊಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ, ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ, ಶಾಸಕ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ, ಮುಖಂಡರಾದ ಅನಿಲ ಮೆಣಸಿನಕಾಯಿ, ಗದಗ ಜಿಲ್ಲಾ  ಬಿಜೆಪಿ ಅಧ್ಯಕ್ಷ ಮೋಹನ ಮಾಲಶೆಟ್ಟಿ, ಗದಗ-ಬೆಟಗೇರಿ ನಗರ ಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
[15/04, 3:28 PM] Gurulingswami. Holimatha. Vv. Cm: *ಗದಗ,* ಏಪ್ರಿಲ್ 15: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು *ಗದಗದ ಎ.ಪಿ.ಎಂ.ಸಿ ಆವರಣದಲ್ಲಿ* ಹಮ್ಮಿಕೊಳ್ಳಲಾಗಿದ್ದ *ಭಾರತೀಯ* *ಜನತಾ ಪಕ್ಷದ* *ಕಾರ್ಯಕ್ರಮದಲ್ಲಿ ಭಾಗವಹಿಸಿ* ಮಾತನಾಡಿದರು.
[15/04, 3:29 PM] Gurulingswami. Holimatha. Vv. Cm: ಗದಗ ನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ಸವ ಭವನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ    ಲೋಕೋಪಯೋಗಿ ಇಲಾಖೆ ಸಚಿವ ಸಿಸಿ ಪಾಟೀಲ, ಸಂಸದ ಶಿವಕುಮಾರ ಉದಾಸಿ, ಅನಿಲ ಮೆಣಸಿನಕಾಯಿ ಹಾಜರಿದ್ದರು.
[15/04, 6:03 PM] Gurulingswami. Holimatha. Vv. Cm: *ಎಸ್.ಆರ್.ಪಾಟೀಲರು ಅಧಿಕಾರದಲ್ಲಿ ಇದ್ದಾಗ ಏನೂ ಮಾಡದೇ ಈಗ ಹೋರಾಟ ಮಾಡುತ್ತಿದ್ದಾರೆ*: *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯ*

ಇಳಕಲ್: ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಮುಖಂಡ ಎಸ್ ಆರ್ ಪಾಟೀಲ್ ಅವರು ಯಾವುದೇ ಕೆಲಸಗಳನ್ನು ಮಾಡಲಿಲ್ಲ. ಅವರದೇ ಪಕ್ಷ ಅಧಿಕಾರದಲ್ಲಿತು. ಅವರೇ ಸಚಿವರಾಗಿದ್ದರು. ನೀರಾವರಿ ಯೋಜನೆಗಳ ಜಾರಿಗೆ ಯಾವುದೇ ಪ್ರಯತ್ನ ಪಟ್ಟಿದ್ದರೆ ಈಗ ಟ್ರ್ಯಾಕ್ಟರ್ Rally  ಅವಶ್ಯಕತೆ ಇರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಇಂದು ಇಳಕಲ್‌ನಲ್ಲಿ  ಮಾಧ್ಯಮದವರೊಂದಿಗೆ ಮಾತನಾಡಿದರು. 
ನೀರಾವರಿ ಯೋಜನೆಗಳ ಜಾರಿ ಕೆಲಸವನ್ನು ಅವರ ಸರ್ಕಾರ ಇದ್ದಾಗ ಮಾಡಿದ್ದರೆ ಅವರಿಗೆ ಬಹಳಷ್ಟು ಒಳ್ಳೆ ಹೆಸರು ಬರುತ್ತಿತ್ತು. ಮಂತ್ರಿಗಳಿದ್ದರೂ, ಅವರ ಸರ್ಕಾರವಿತ್ತು, ಸಮ್ಮಿಶ್ರ ಸರ್ಕಾರದ ಪಾಲುದಾರರಾಗಿದ್ದರು. ಆಗ ಏನೂ ಮಾಡದೇ ಈಗ rally ಮಾಡುತ್ತಿದ್ದಾರೆ ಎಂದು ಹೇಳಿದರು. 

*ಸಂಪುಟ ವಿಸ್ತರಣೆ*
ಸಂಪುಟ ವಿಸ್ತರಣೆ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ಇಲ್ಲಿಗೆ ಬಂದಾಗ ಚರ್ಚೆಯಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
[15/04, 6:04 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನರಗುಂದ  ವಿಧಾನ ಸಭಾ ಮತ ಕ್ಷೇತ್ರದಲ್ಲಿ ಒಟ್ಟು 271.84 ಕೋಟಿ ರೂ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾನೆ ಹಾಗೂ ಕೆಲ ಯೋಜನೆಗಳನ್ನು ಲೋಕಾರ್ಪಣೆ ಮಾಡಿದರು. 
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ,
ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್, 
ಕೃಷಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ,  ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಕಳಕಪ್ಪ ಬಂಡಿ, ಸಂಸದರುಗಳಾದ ಪಿ.ಸಿ.ಗದ್ದಿಗೌಡರ, ಶಿವಕುಮಾರ ಉದಾಸಿ,  ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ,   ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ, ನರಗುಂದ ಪುರಸಭೆ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಹವಾಲ್ದಾರ, ಉಪಾಧ್ಯಕ್ಷೆ ಶ್ರೀಮತಿ ಅನ್ನಪೂರ್ಣ ಯಲಿಗಾರ ಗದಗ-ಬೆಟಗೇರಿ ನಗರ ಸಭೆ ಅಧ್ಯಜ್ಷೆ ಶ್ರಿಮತಿ ಉಷಾ ದಾಸರ, ಉಪಾದ್ಯಕ್ಷೆ ಸುನಂದಾ ಬಾಕಳೆ  ಉಪಸ್ಥಿತರಿದ್ದರು. 
ಇದೇ ಸಂದರ್ಭದಲ್ಲಿ ಪುರಸಭೆ ವತಿಯಿಂದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು.
[15/04, 7:32 PM] Gurulingswami. Holimatha. Vv. Cm: *ಜಿ.ವಿ. ಶ್ರೀರಾಮರೆಡ್ಡಿ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ*

ಬೆಂಗಳೂರು, ಏಪ್ರಿಲ್ 15: ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕ, ಖ್ಯಾತ ಜನಪರ ಹೋರಾಟಗಾರ ಜಿ.ವಿ ಶ್ರೀರಾಮರೆಡ್ಡಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ  ಶ್ರೀರಾಮರೆಡ್ಡಿಯವರು, ಉತ್ತಮ ವಾಗ್ಮಿಗಳಾಗಿದ್ದರು. ರಾಜ್ಯ ಸಿಪಿಎಂ ಕಾರ್ಯದರ್ಶಿಯಾಗಿ  ರೈತರ  ಹಾಗೂ ಕಾರ್ಮಿಕ ಧ್ವನಿಯಾಗಿ ಅನೇಕ ಜನಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.  ಅವರ ನಿಧನದಿಂದ  ನಾಡು ಓರ್ವ ಜನಪರ ನಾಯಕನನ್ನು ಕಳೆದುಕೊಂಡಂತಾಗಿದೆ. 

ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯ ಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
[15/04, 8:28 PM] Gurulingswami. Holimatha. Vv. Cm: *ಕರ್ನಾಟಕಕ್ಕೆ ಅಭಿವೃದ್ಧಿಯ ಮನ್ವಂತರ*ಬಸವರಾಜ ಬೊಮ್ಮಾಯಿ* 
ಗದಗ(ನರಗುಂದ), ಏಪ್ರಿಲ್ 15: ಕರ್ನಾಟಕ ರಾಜ್ಯದಲ್ಲಿ ಅಭಿವೃದ್ಧಿಯ ಮನ್ವಂತರ ತರುವ ಮೂಲಕ ಮಾದರಿ ರಾಜ್ಯವನ್ನಾಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ನರಗುಂದದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೆಯಿಸಿ ಮಾತನಾಡಿದರು. 

 ದೇಶದಲ್ಲಿಯೇ ರಾಜ್ಯ ವನ್ನು ಮಾದರಿ ರಾಜ್ಯವಾಗಿಸಿ ಪ್ರತಿ ಕನ್ನಡಿಗನಿಗೆ ಅವಕಾಶ, ಸಹಾಯ ಮತ್ತು ಆರ್ಥಿಕವಾಗಿ  ಸ್ವಾವಲಂಬಿಯಾಗಿಸಲಾಗುವುದು.  ಇದಕ್ಕೆ ಯಾವುದೇ ಅಡೆತಡೆ ಒಡ್ಡಿದರೂ ಇದಕ್ಕೆ ಅವಕಾಶ ಕೊಡುವುದಿಲ್ಲ.  ನಮ್ಮ ಕಣ್ಣ ಮುಂದೆ ಸಮಗ್ರ ಕರ್ನಾಟಕದ ಜನತೆ ಇದ್ದಾರೆ. ಈ ಗುರಿಯನ್ನು ಯಾರೂ  ತಡೆಯಲು ಸಾಧ್ಯವಿಲ್ಲ ಎಂದರು. 

 ಯೋಜನೆಗಾಗಿ ಹೋರಾಟವು  ದೊಡ್ಡ ಆಂದೋಲನವಾಗಿ ಪರಿವರ್ತನೆಯಾಗಿ  ಬಿ.ಎಸ್.ಯಡಿಯೂರಪ್ಪ ಹಾಗೂ ಅಂದಿನ ಜಲಸಂಪನ್ಮೂಲ ಸಚಿವ ಕೆ.ಎಸ್.ಈಶ್ವರಪ್ಪ  ಅವರ ಇಚ್ಛಾಶಕ್ತಿಯಿಂದ ಅಡಿಗಲ್ಲು ಹಾಕಲಾಯಿತು.  ದಿಟ್ಟತನದ ಆ ನಿರ್ಣಯ ಮುಂದೆ 2008 ರಲ್ಲಿ ಜಲಸಂಪನ್ಮೂಲ ಸಚಿವನಾಗಿ   5.5 ಕಿಮೀ ಇಂಟರ್ ಲಿಂಕಿಂಗ್ ಕಾಲುವೆಯನ್ನು ಪೂರ್ಣ ಮಾಡಲು ಸಾಧ್ಯವಾಯಿತು. ಕೇವಲ ನದಿ ನೀರನ್ನು ಸ್ವಲ್ಪ ಮಟ್ಟಿಗೆ ತಿರುಗಿಸಿದರೆ ಕಾಲುವೆ ಮೂಲಕ ಮಹದಾಯಿ, ಕಳಸಾ ಬಂಡೂರಿ, ಮಲಪ್ರಭೆಯನ್ನು ಸೇರುತ್ತವೆ. ಆದರೆ ಅಂದಿನ ಗೋವಾ ಸರ್ಕಾರ  ಹಾಗೂ ಅವರ ರಾಷ್ಟ್ರೀಯ ನಾಯಕಿ ಒಂದು ಹನಿ ನೀರನ್ನು ಕರ್ನಾಟಕಕ್ಕೆ  ಬಿಟ್ಟುಕೊಡುವುದಿಲ್ಲ ಎಂದು ಘೋಷಿಸಿ, ನ್ಯಾಯಾಲಯಕ್ಕೆ ಹೋದರು. ನ್ಯಾಯಾಧಿಕರಣದ ಆದೇಶವನ್ನು ಅಂದಿನ ಯು.ಪಿ.ಎ ಸರ್ಕಾರ ರಾಜ್ಯದ ವಿರುದ್ಧ ನೀಡಿದರು. ನಾನು ಇದನ್ನು ನೆನಪಿಟ್ಟುಕೊಳ್ಳಬೇಕು. ಈ ಯೋಜನೆಗೆ ಈಗ ಪಾದಯಾತ್ರೆ ಮಾಡುತ್ತಾರಂತೆ. ಯಾರು ನಮ್ಮ ವಿರುದ್ಧ ತೀರ್ಪು ನೀಡಿ , ನೀರು ಕೊಡುವುದಿಲ್ಲ ಎಂದು  ಹೇಳಿದ್ದರೋ ಅವರು ಇಂದು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ.  ನಾವೆಲ್ಲರೂ ನಂಗೆ ನ್ಯಾಯ ಸಿಗಬೇಕೆಂದು ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿ ಹಠ ಬಿಡದೆ ಹೋಗಿದ್ದಾಗ ನೀರು ಹರಿಸುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ ಎಂದು ನ್ಯಾಯಾಧಿಕಾರಣದವರ ಪ್ರಶ್ನೆಗೆ ನೀರು ಹರಿಯದಂತೆ ಗೋಡೆ ಕಟ್ಟುತ್ತೇವೆ ಎಂದು ಬರೆದುಕೊಟ್ಟವರು ಇವರು.  ಗೋಡೆ ಕಟ್ಟಿದರೆ ನಾವು  ಕಟ್ಟಿರುವ ಕಾಲುವೆಗೆ ಗೋಡೆ ಕಟ್ಟಿದ್ದಾರೆ. ಈಗ ಅವರೇ ಪಾದಯಾತ್ರೆ ಮಾಡುತ್ತಿದ್ದಾರೆ. ನ್ಯಾಯಾಧಿಕರಣ ಮಾಡಿ, ಹನಿ ನೀರನ್ನು ಕೊಡದವರಿಗೆ ಬೆಂಬಲ ಕೊಡುತ್ತೀರೋ ತೀರ್ಮಾನ ನಿಮ್ಮದು ಎಂದರು. 

ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ನ್ಯಾಯಾಧಿಕರಣದ ಆದೇಶಕ್ಕೆ ಗೆಜೆಟ್ ಅಧಿಸೂಚನೆ ಹೊರಡಿಸಿದ್ದಾರೆ.  ಈಗ ಅದನ್ನು ಪೂರ್ಣಗೊಳಿಸಬೇಕು.  ನಮ್ಮ ನೀರು ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಅದನ್ನು ಕಾಯುವ ಕೆಲಸವನ್ನು ಅವರು ಮಾಡಿದ್ದಾರೆ. ರೈತ ಸಂಘಟನೆಗಳು ಹೋರಾಟಕ್ಕೆ ಇಳಿದಾಗ ಎರಡೂ ಕಡೆ ಪೊಲೀಸ್ ಗಾಡಿ ನಿಲ್ಲಿಸಿ ಒಬ್ಬೊಬ್ಬರನ್ನೇ ಬಿಟ್ಟು ಲಾಠಿಯಲ್ಲಿ ಅಮಾನವೀಯ ರೀತಿಯಲ್ಲಿ ಹೊಡೆದು ರೈತ ಸಂಘಟನೆಯನ್ನು ಮುರಿಯುವ ಕೆಲಸ ಮಾಡಿದವರು ಯಾರು?  ನವಲಗುಂದ, ನರಗುಂದ ಗ್ರಾಮಗಳಿಗೆ ಹೊಕ್ಕು ಗಂಡುಮಕ್ಕಳು ರೈತರು ಇಲ್ಲದ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ಬೂಟುಗಳಲ್ಲಿ ಒದ್ದವರು ಯಾರು ಎಂದು ನೆನಪಿಟ್ಟುಕೊಳ್ಳಬೇಕು ಎಂದರು.

*ಎಲ್ಲಮ್ಮನ ಅಡಿಯಿಂದ ಬಾದಾಮಿ ಬನಶಂಕರಿಯ ಮುಡಿಯವರೆಗೂ ಮಹದಾಯಿ, ಮಲಪ್ರಭಾ ಹರಿಯಬೇಕು* ಎಂಬ ಇಚ್ಛಾಶಕ್ತಿ ನಮ್ಮದು. 
ಹೋರಾಟ ಮಾಡುವಾಗ ಬದ್ದತೆ ಇರಬೇಕು. ಈಗ ನಾವು ಯೋಜನೆಯನ್ನು ಕೈಗೆಟ್ಟಿಕೊಂಡಿದ್ದೇವೆ.  ದಿಲ್ಲಿಗೆ ಹೋದಾಗ ಬಜೆಟ್ ನಲ್ಲಿ 1 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಕೂಡಲೇ ಅನುಮತಿಗಳನ್ನು ನೀಡಬೇಕು ಎಂದು ಜಲಶಕ್ತಿ ಮಂತ್ರಿಗಳಿಗೆ ಬೇಡಿಕೆ ಇಡಲಾಗಿದೆ. ಆದಷ್ಟು ಬೇಗನೆ ಕೆಲಸ ಮಾಡಿಕೊಡುವುದಾಗಿ ಭರವಸೆ  ಸಚಿವರು ಕೊಟ್ಟಿದ್ದಾರೆ ಎಂದರು.
ಕಾನೂನಿನ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದ ಎಲ್ಲಾ ಅನುಮತಿ ಪಡೆದು ಕಾಮಗಾರಿಯನ್ನು ಕೂಡಲೇ ಪ್ರಾರಂಭ ಮಾಡುತ್ತೇವೆ. ಇದು ನಮ್ಮ ಬದ್ದತೆ.  ಅಧಿಕಾರ ಇರಲಿ, ಇಲ್ಲದಿರಲಿ ನಮ್ಮ ಬದ್ಧತೆ ಇದ್ದೆ ಇರುತ್ತದೆ ಎಂದರು.   


*ಚಿರಋಣಿ*
ಈ ಸಂದರ್ಭದಲ್ಲಿ ನನ್ನ ಜೊತೆ ನಿಂತ ಸಿ. ಸಿ ಪಾಟೀಲರನ್ನು ಎಂದೂ ಮರೆಯಲು ಸಾಧ್ಯವಿಲ್ಲ. ನನ್ನೊಂದಿಗೆ ಗಟ್ಟಿಯಾಗಿ ನಿಂತವರು. ಹೋರಾಟ ಹಾಗೂ ಬೆಂಬಲ ಕೊಟ್ಟ ಎಲ್ಲಾ ನಾಯಕರಿಗೆ ನಾನು ಚಿರಋಣಿ ಯಾಗಿದ್ದೇನೆ ಎಂದರು. ಈ ನರಗುಂದದ  ಬಂಡಾಯದ ಮಣ್ಣಿನ ನಿಜವಾದ ಮಗ ಸಿ.ಸಿ. ಪಾಟೀಲರು ಎಂದು ಬಣ್ಣಿಸಿದರು. 


*ಎಲ್ಲರೂ ರೈತನಿಗೆ ಸೇರಿದ್ದಾರೆ*
ರೈತ ಯಾರಿಗೂ ಸೇರಿಲ್ಲ.ಎಲ್ಲರೂ ರೈತನಿಗೆ ಸೇರಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ರೈತರ, ರಾಜ್ಯದ ನೆಲ, ಜಾಲದ ವಿಷಯ ಬಂದಾಗ ನಾವೆಲ್ಲರೂ ಒಟ್ಟಾಗಬೇಕು. ಆಗ ರಾಜ್ಯ ದ ಹಾಗೂ ರೈತರ ಹಿತಾಸಕ್ತಿ ಯನ್ನು ಕಾಪಾಡಲು ಸಾಧ್ಯ. ರೈತ ನಮಗೆ  ಬಹಳ ಮುಖ್ಯ. ದೇವರು ರೈತರ ಬೆವರಿನಲ್ಲಿ , ಕಾರ್ಮಿಕರ ಶ್ರಮದಲ್ಲಿದ್ದಾನೆ ಎಂದು ರವೀಂದ್ರನಾಥ ಟ್ಯಾಗೋರರು ಹೇಳಿದ್ದಾರೆ. ಅದರಂತೆ ರೈತರ ಶ್ರೇಯೋಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ ಎಂದರು.

Post a Comment

Previous Post Next Post