CM, ಇಂದು

[21/04, 11:31 AM] Gurulingswami. Holimatha. Vv. Cm: ಶಿವಮೊಗ್ಗ, ಏಪ್ರಿಲ್ 21: ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಇಂದು ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ ಸರ್ವೋತ್ತಮ ಪ್ರಶಸ್ತಿ ಪ್ರದಾನ ಮಾಡಿದರು.

 ಸಚಿವರಾದ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಆರಗ ಜ್ಞಾನೇಂದ್ರ, ಬಿ.ಎ. ಬಸವರಾಜ, ಲಕ್ಷ್ಮಣ ಸವದಿ, ಸಂಸದ ಬಿ.ವೈ.ರಾಘವೇಂದ್ರ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
[21/04, 2:17 PM] Gurulingswami. Holimatha. Vv. Cm: *ಸ್ಥಿತಪ್ರಜ್ಞೆ ಹಾಗೂ ಸಮಯಪ್ರಜ್ಞೆ ಬಹಳ ಮುಖ್ಯ : ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿಗಳ ಕಿವಿಮಾತು*
 
ಶಿವಮೊಗ್ಗ, ಏಪ್ರಿಲ್ 21 :

 ಸರ್ಕಾರಿ ನೌಕರರಲ್ಲಿ ಸ್ಥಿತಪ್ರಜ್ಞೆ ಹಾಗೂ ಸಮಯಪ್ರಜ್ಞೆ ಬಹಳ ಮುಖ್ಯ. ದಕ್ಷತೆಯಿಂದ ನಿಗದಿತ ಸಮಯದೊಳಗೆ ಜನರಿಗೆ ಕೆಲಸ ಮಾಡಿಕೊಡಬೇಕು. ಪಟ್ಟಭದ್ರಹಿತಾಸಕ್ತಿಗಳು ಅಲ್ಲೋಲಕಲ್ಲೋಲ ಮಾಡಲು ಪ್ರಯತ್ನಿಸುತ್ತಾರೆ. ಅದರೆ ದಕ್ಷತೆ, ಪ್ರಾಮಾಣಿಕತೆ, ಕಾರ್ಯಕ್ಷಮತೆಯಿಂದ ಅವರಿಗೆ ಉತ್ತರ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಸರ್ವೋತ್ತಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

*ಜವಾಬ್ದಾರಿ ಅರಿತು ಹುದ್ದೆಗೆ ನ್ಯಾಯ ಒದಗಿಸಿ*
ದೇಶದಲ್ಲಿ ಅತ್ಯಂತ ದಕ್ಷ ನೌಕರರು ಎಂದು ಕರ್ನಾಟಕದ ಸರ್ಕಾರಿ ನೌಕರರು ಹೆಸರುವಾಸಿಯಾಗಿದ್ದಾರೆ. ಹಲವಾರು ದಶಕಗಳಿಂದ ಕೆಲಸ ಮಾಡಿರುವ ನೌಕರರು ಹಾಗೂ ಅಧಿಕಾರಿಗಳು ಕಾರಣ. ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಕರ್ತವ್ಯ ಹಾಗೂ ನೈತಿಕ ಜವಾಬ್ದಾರಿ ನಮ್ಮದು. ನಮ್ಮ ಜವಾಬ್ದಾರಿಯನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಆಗ ಮಾತ್ರ ನಮ್ಮ ಹುದ್ದೆಗೆ, ಕರ್ತವ್ಯಕ್ಕೆ ನ್ಯಾಯ ಒದಗಿಸಲು ಸಾಧ್ಯ. ಇದರ ಮಹತ್ವ ಅರಿಯುವವವರೆಗೆ ನ್ಯಾಯ ನೀಡಲು ಆಗುವುದಿಲ್ಲ. ಆಡಳಿತ ಹಾಗೂ ಆಡಳಿತ ಎಂದರೇನು ಎನ್ನುವ ಬಗ್ಗೆ ಸ್ಪಷ್ಟತೆ ಇರಬೇಕು. 

 ನಮ್ಮ ಪಾತ್ರವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ಕರ್ನಾಟಕದ ಅಭಿವೃದ್ಧಿಗೆ ಕಾಣಿಕೆ ನೀಡಬಹುದು ಎಂದರು.

*ಅಧಿಕಾರವನ್ನು ವೈಯಕ್ತಿಕ ಲಾಭಕ್ಕಾಗಿ ಎಂದೂ ಬಳಕೆ ಮಾಡಬಾರದು*
ಒಕ್ಕೂಟದ ವ್ಯವಸ್ಥೆಯಲ್ಲಿ ರಾಜ್ಯ ಕೇಂದ್ರ ಸರ್ಕಾರಗಳ ಪಾತ್ರವನ್ನು ಸ್ಪಷ್ಟವಾಗಿ ಹೇಳಲಾಗಿದೆ. ಸರ್ಕಾರಿ ನೌಕರರ ಅಧಿಕಾರವನ್ನು ಜನಪರವಾಗಿ ಬಳಕೆ ಮಾಡಬೇಕೆ ಹೊರತು ವೈಯಕ್ತಿಕ ಲಾಭಕ್ಕಾಗಿ ಎಂದೂ ಬಳಕೆ ಮಾಡಬಾರದು. ಕಾನೂನು ಬದ್ಧವಾಗಿ ಕೆಲಸ ಮಾಡಬೇಕು ಎಂದರು.

*ಬಡವರ ಪರವಾಗಿ ಕೆಲಸ ಮಾಡಿ*
ವಿವರಣೆ ನೀಡುವ ಸಂದರ್ಭದಲ್ಲಿ ಸಮಾಜದ ಕಟ್ಟಕಡೆಯ ಬಡವನ ಬಗ್ಗೆ ಚಿಂತನೆ ಮಾಡಿ, ಅವನ ಕಣ್ಣೀರಿನ ನೆನಪು ಮಾಡಿಕೊಂಡು ನಿರ್ಣಯ ಮಾಡಬೇಕು. ಶ್ರೀಮಂತರ ಪರವಾಗಿ ಅಲ್ಲ ಎಂದರು. ಬಡವರಿಗೆ, ಜನಸಾಮಾನ್ಯರಿಗೆ ಒಳ್ಳೆಯದಾಗುವ ಒಂದು ಸಕಾರಣವಿದ್ದರೆ ಆ ಕೆಲಸವನ್ನು ಮಾಡಿ. ಕಡತಗಳಲ್ಲಿ ಅಭಿಪ್ರಾಯಗಳನ್ನು ನಮೂದಿಸಬೇಕು. ಆಗ ಎಲ್ಲಾ ದಿಕ್ಕಿನಿಂದ ವಿಷಯ ಅಭ್ಯಾಸ ಮಾಡಬಹುದು. ನಿರ್ಣಯ ತೆಗೆದುಕೊಳ್ಳುವ ಹಂತಗಳನ್ನು ಕಡಿಮೆ ಮಾಡಲು ಆಡಳಿತ ಸುಧಾರಣಾ 2 ನೇ ಆಯೋಗ ತನ್ನ ಮಧ್ಯಂತರ ವರಡಿಯನ್ನು ನೀಡಿದೆ. ಅವುಗಳ ಸುಧಾರಣೆಗೆ ಎಲ್ಲಾ ಕ್ರಮ ತೆಗೆದುಕೊಳ್ಳುತ್ತೇವೆ.ಕೇವಲ ಏಕಪಕ್ಷೀಯ ವಾಗಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ನಾವೆಲ್ಲರೂ ಸೇರಿ ಒಂದೇ ಮನೋಭಾವದಿಂದ ಕೆಲಸ ಮಾಡಬೇಕು ಎಂದರು.  

*ನಿಗದಿತ ಸಮಯದಲ್ಲಿ ಕೆಲಸ *ಮಾಡಲು ತಂತ್ರಜ್ಞಾನದ ಬಳಕೆ ಮಾಡಿ*
ಜಾಗತೀಕರಣ, ಉದಾರೀಕರಣವಾದ ನಂತರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬದಲಾವಣೆಗಳಾಗಿವೆ.ಇದರ ಪರಿಣಾಮ ಸರ್ಕಾರ ಹಾಗೂ ಸರ್ಕಾರಿ ನೌಕರರ ಮೇಲೂ ಆಗಿದೆ.ಸರ್ಕಾರ, ಖಾಸಗಿ ಸಹಭಾಗಿತ್ವ ದಲ್ಲಿ ಕೆಲಸಗಳಾಗುತ್ತಿವೆ. ಬದಲಾದ ಕಾಲದಲ್ಲಿ ನಮ್ಮ ಕಾರ್ಯವೈಖರಿ ಚಿಂತನೆ, ನಿರ್ಧಾರ ಮಾಡುವ ಮಾಡುವ ರೀತಿ ಬದಲಾಗಬೇಕು. ತಂತ್ರಜ್ಞಾನದ ಬಳಕೆ ಮಾಡಲು ನೀವೆಲ್ಲರೂ ಸಮರ್ಥರಾದರೆ ಬಹಳ ನಿರ್ಣಯಗಳು ಬೇಗ ಆಗುತ್ತದೆ. ನಿಗದಿತ ಸಮಯದಲ್ಲಿ ಕೆಲಸ ಆಗಬೇಕಾದರೆ ತಂತ್ರಜ್ಞಾನದ ಅವಶ್ಯಕತೆ ಇದೆ. ಗ್ರಾಮ ಪಂಚಾಯಿತಿ ಇಂದ ಹಿಡಿದು ವಿಧಾನಸಭೆಯವರೆಗೂ ತಂತ್ರಜ್ಞಾನ ಬಳಕೆಯಾಗಬೇಕು. ನಿಗದಿತ ಸಮಯದಲ್ಲಿ ನಿರ್ಣಯ ಮಾಡಿದರೆ ಅದು ನಿಮ್ಮ ದಕ್ಷತೆ,ಕಳಕಳಿಗೆ ಹಿಡಿದ ಕನ್ನಡಿ ಎಂದರು.

*ಕಚೇರಿಗಳಿಗೆ ಜನರ ಓಡಾಟವನ್ನು ತಪ್ಪಿಸಿ :*
ನಿಗದಿತ ಸಮಯದಲ್ಲಿ ಕೆಲಸ ಮಾಡುವ ಮೂಲಕ ಕಚೇರಿಗಳಿಗೆ ಜನರ ಓಡಾಟವನ್ನು ತಪ್ಪಿಸಿ, ಆಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಮುಕ್ತವಾಗುತ್ತದೆ.. ಬಡಜನರ ಬೆವರಿನ ತೆರಿಗೆ ಹಣದಿಂದ ಸರ್ಕಾರಿ ನೌಕರರ ಸಂಬಳ ಬರುತ್ತದೆ. ಆ ಬೆವರಿಗೆ ಬೆಲೆ ಬರುವ ರೀತಿಯಲ್ಲಿ ಕೆಲಸ ಮಾಡಬೇಕು. 2 ಲಕ್ಷಕ್ಕಿಂತ ಹೆಚ್ಚಿನ ಹುದ್ದೆಗಳು ಖಾಲಿಯಿದ್ದರೂ ಕಾರ್ಯಾಂಗಕ್ಕೆ ಯಾವುದೇ ತೊಡಕಾಗದಂತೆ ಕೆಲಸ ನಿರ್ವಹಿಸುತ್ತಿರುವುದು ಸಂತೋಷ ತಂದಿದೆ. ವರ್ಷಕ್ಕೆ ಎರಡು ಬಾರಿ ಡಿಎ ಅನ್ನು ಕೇಂದ್ರ ಸರ್ಕಾರ ಘೋಷಣೆಯ ಕೇವಲ ಒಂದು ದಿನದೊಳಗೆ ಘೋಷಣೆ ಮಾಡಿದೆ. ವೇತನ ಆಯೋಗ ರಚನೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

*ಆಡಳಿತದಲ್ಲಿ ದಕ್ಷತೆಯಿಂದ ಶುದ್ಧತೆ ಬರುತ್ತದೆ :*
ಜನರ ಬಗ್ಗೆ ಸಾಂತ್ವನ, ಬಡವರ ಬಗ್ಗೆ ಕನಿಕರ, ರಾಜ್ಯದ ಅಭಿವೃದ್ಧಿ ಬಗ್ಗೆ ಕಳಕಳಿ ಇರಬೇಕು. ಭ್ರಷ್ಟಾಚಾರಕ್ಕೆ ಸರ್ಕಾರ ಯಾವುದೇ ರಾಜಿ ಇಲ್ಲದೇ ಕ್ರಮ ಕೈಗೊಳ್ಳುತ್ತದೆ. ಆಡಳಿತದ ದಕ್ಷತೆ ಅದರ ಶುದ್ಧತೆಯಿಂದ ಬರುತ್ತದೆ. ವಿವಿಧ ಮಾನದಂಡಗಳು, ವಿವಿಧ ಕ್ಷೇತ್ರಗಳಿಗೆ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ಉತ್ತಮ ಕಾರ್ಯನಿರ್ವಹಿಸಿದ ನೌಕರರನ್ನು ಗುರುತಿಸಿ ಗೌರವಿಸುವ ಚಿಂತನೆ ಇದೆ. ನವಭಾರತಕ್ಕಾಗಿ ನವ ಕರ್ನಾಟಕ ನಿರ್ಮಿಸುವ ಸಂಕಲ್ಪ ಮಾಡೋಣ ಎಂದು ತಿಳಿಸಿದರು.
[21/04, 2:19 PM] Gurulingswami. Holimatha. Vv. Cm: *ಜೆ.ಡಿ.ಎಸ್. ಬಗ್ಗೆ ಸಾಫ್ಟ್ ಕಾರ್ನರ್ ಇಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ತುಮಕೂರು, ಏಪ್ರಿಲ್ 21:
ಜೆ.ಡಿ.ಎಸ್. ಬಗ್ಗೆ ಸಾಫ್ಟ್ ಇಲ್ಲ. ಕಾರ್ನರ್ ರೂ ಇಲ್ಲ. ಅವರ ರಾಜಕಾರಣ ಅವರು ಮಾಡುತ್ತಾರೆ ನಮ್ಮ ರಾಜಕಾರಣ ನಾವು ಮಾಡುತ್ತೇವೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಚಿಕ್ಕನಾಯಕನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. 
ಇತ್ತೀಚೆಗೆ ಹೆಚ್.ಡಿ.ಕುಮಾರಸ್ವಾಮಿ ಅವರು ಬಿ.ಜೆ.ಪಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದಾರೆ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
  
ಸಂಸದ ಹೆಚ್.ಡಿ. ದೇವೇಗೌಡರು ತಮಗೆ ಕರೆ ಮಾಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ದೇವೇಗೌಡರು ನಮ್ಮ ಹಿರಿಯರು. ನನಗೆ ಕರೆ ಮಾಡಿ ಬೆಂಗಳೂರಿಗೆ ಯಾವಾಗ ಹಿಂದಿರುಗುತ್ತೀರಿ ಎಂದು ಪ್ರಶ್ನಿಸಿದರು. ಬಂದಾಗ ಕರೆ ಮಾಡಲು ತಿಳಿಸಿದರು ಎಂದರು.
[21/04, 4:16 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ಕಲಬುರಗಿ ಯಲ್ಲಿ ಕಲಬುರಗಿ ವಿಭಾಗ ಬಿಜೆಪಿ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಷಿ, ಸಚಿವ ಮುರುಗೇಶ ನಿರಾಣಿ, ಪ್ರಭು ಚವ್ಹಾಣ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ ಜಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ರಾಘವೇಂದ್ರ ಸೇರಿದಂತೆ ಇತರೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.
[21/04, 4:23 PM] Gurulingswami. Holimatha. Vv. Cm: Timesense and dutysense very important for government employees: CM Bommai

Shivamogga. April 21.
Dutysense and timesense are very important for government employees. They should get people's work done within a time frame with efficiency. The vested interests would try to upset the system, but they should be resisted with efficiency and honesty, Chief Minister Basavaraj Bommai said.

The Chief Minister was speaking at a function to celebrate the State Government Employees' Day. 

Karnataka government employees are acknowledged as the most efficient workers in the country. "It is our responsibility to continue the tradition. We should be clear about our responsibility. Then only we could do justice to our post and duty," Bommai said.

Government employees should use their power to serve the people and it should not be used for personal gains. You should stick to rules, Bommai said.

Work for the cause of the poor

Exhorting the workers to work for the welfare of the poor, the Chief Minister said, "we should think about the man at the bottom of the social order. Our services should reach the last man in the line. The Administrative Reforms Commission-2 has submitted its interim report to reduce the number of layers in the decision making process. We will take all possible measures to reform the administration," Bommai said.

In the post-globalisation, liberalisation, privatisation era we have to change the style of our functioning according to the demands of the change. You should be able to adopt modern technology so the decision making could be faster. Technology should be used to speed up the administration from Gram Panchayat to Vidhana Soudha, Bommai said.

He asked the government employees to accomplish their work within the time frame to avoid people from going around the offices, eliminate corruption. Government employees are drawing their salary from the sweat money of the common man paying the taxes. You should work in a manner that is worthy of the sweat of the common man. State government has declared DA hikes two times an an year within a week after the announcement by the Union government. Action would be taken to constitute the Pay Commission, Bommai said. 

State government would go hard against corruption in administration. There would be no compromise in fighting against corruption. There is a proposal to honour the efficient and honest workers at district and taluk levels. Let us resolve to build a New India from New Karnataka, he said.
[21/04, 4:34 PM] Gurulingswami. Holimatha. Vv. Cm: No soft corner for JDS: CM Bommai

Tumakuru. April 21.
"We do not have any soft corner JDS. They are doing their politics and we are doing ours," Chief Minister Basavaraj Bommai said.

Speaking to media persons in Chikkanayakanahalli he rejected the view that HD Kumaraswamy is having a soft corner for BJP. 

Reacting to the call he received from HD Deve Gowda, he said, "Deve Gowda is our senior. He called me and asked when I would be returning to Bengaluru. He wanted me to call him on my return to Bengaluru," Bommai said.

Post a Comment

Previous Post Next Post