CM, ಇಂದು

[24/04, 12:52 PM] Gurulingswami. Holimatha. Vv. Cm: *ಹುಬ್ಬಳ್ಳಿ ಪ್ರಕರಣವನ್ನು ಸಾಮಾನ್ಯ ಎಂದು ಪರಿಗಣಿಸಿಲ್ಲ: ಗಲಭೆಕೋರರ ವಿರುದ್ಧ ಕಠಿಣ ಕ್ರಮ* *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಹುಬ್ಬಳ್ಳಿ, ಏಪ್ರಿಲ್ 24: 
ಹುಬ್ಬಳ್ಳಿ ಪ್ರಕರಣವನ್ನು  ಸಾಮಾನ್ಯ ಗಲಭೆ ಎಂದು ಪರಿಗಣಿಸಿಲ್ಲ. ಷಡ್ಯಂತ್ರ ಮಾಡಿ ಪೊಲೀಸ್ ಠಾಣೆಯ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಿರುವುದನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದೆ. ಕೆಲವೇ ದಿನಗಳಲ್ಲಿ ಇದರ ಹಿಂದಿರುವ ಸಂಘಟನೆ, ವ್ಯಕ್ತಿಗಳನ್ನು  ಪತ್ತೆ ಹಚ್ಚಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. 

ಪ್ರಕರಣದಲ್ಲಿ ಬೇರೆ ಬೇರೆ ಶಕ್ತಿಗಳ ಹುನ್ನಾರ, ಕುಮ್ಮಕ್ಕು ಏನಿದೆ ಎಂದು ತನಿಖೆಯಾಗುತ್ತಿದೆ. ಈಗಾಗಲೇ ಬಂಧಿಸಿರುವವರಿಂದ ಹೇಳಿಕೆಗಳನ್ನು ಪೊಲೀಸರು ಪಡೆದಿದ್ದಾರೆ ಎಂದರು

*ಶಾಲೆಗಳಿಗೆ ಬೆದರಿಕೆ ಇ- ಮೇಲ್ :ಪೂರ್ಣಪ್ರಮಾಣದ ತನಿಖೆ* 

ಶಾಲೆಗಳಿಗೆ ಬಂದಿರುವ ಇ-ಮೇಲ್ ಪಾಕಿಸ್ತಾನದಿಂದ  ಬಂದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಇಲ್ಲೇ ಕುಳಿತು ದುಬೈ, ಸೌದಿ ಅರೇಬಿಯಾ, ವಿಳಾಸ ಬಳಸುವ ಪ್ರಸಂಗಗಳೂ ಇವೆ. ಪೂರ್ಣಪ್ರಮಾಣದಲ್ಲಿ ತನಿಖೆ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಇ. ಮೇಲ್ ಎಲ್ಲಿಂದ ಬಂದಿದೆ ಎಂದು ಪತ್ತೆ ಹಚ್ಚಿ, ಕೇಂದ್ರ ಸರ್ಕಾರದ ಸಹಾಯದಿಂದ, ಯಾವ ರಾಷ್ಟ್ರದಲ್ಲಿ , ಯಾರು ಇದನ್ನು ಮಾಡಿದ್ದಾರೆ, ಅವರನ್ನು ಬಂಧಿಸುವ ಬಗ್ಗೆ ಆ ದೇಶದ ಸಹಾಯ ಪಡೆಯಲಾಗುವುದು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇದರ ಬುಡಕ್ಕೆ ಹೋಗಿ ಪತ್ತೆ ಹಚ್ಚಲಾಗುವುದು ಎಂದರು. 

*ಪಿ.ಎಸ್.ಐ ನೇಮಕಾತಿ:ಸಮಗ್ರ ತನಿಖೆ*
ಪಿ.ಎಸ್.ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ವೀಡಿಯೋ ವೈರಲ್ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಹತ್ತು ಹಲವಾರು ಪ್ರಕರಣಗಳು ಹೊರಬೀಳುತ್ತಿವೆ.  ಆಡಿಯೋ, ವೀಡಿಯೋ ಪರೀಕ್ಷೆ ಗಳಲ್ಲಿ ಅಕ್ರಮ ಎಸಗುವ ವಿಧಾನಗಳು ಹೊರಬೀಳುತ್ತಿವೆ. ಸಿಐಡಿ ಸಮಗ್ರ ತನಿಖೆ ಮಾಡುವಂತೆ ಸೂಚಿಸಿದೆ. ಯಾರೇ ಇರಲಿ, ಎಷ್ಟೇ ಪ್ರಭಾವಿಗಳು, ಚಾಣಾಕ್ಷರಿರಲಿ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕೆಂದು ಆದೇಶ ನೀಡಲಾಗಿದೆ ಎಂದರು. ಪಿ.ಎಸ್.ಐ ನೇಮಕಾತಿ ನ್ಯಾಯಸಮ್ಮತವಾಗಿ ಆದರೆ ನ್ಯಾಯಸಮ್ಮತ ಪೊಲೀಸ್ ಪಡೆ ನಿರ್ಮಾಣವಾಗುತ್ತದೆ ಎಂದರು. 

*ಕರ್ನಾಟಕ ಮಾದರಿ*
ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಪ್ರಕರಣದಲ್ಲಿ ಕೈಗೊಂಡಂತೆ  ಹಲವಾರು ಕಾನೂನಿನ ಬಲವೂ ಇದೆ. ಇದು ಕರ್ನಾಟಕ ಮಾದರಿ. ದಿವ್ಯಾ ಹಾನರಗಿ ಇನ್ನೂ ಬಂಧನಕ್ಕೊಳಗಾಗಿಲ್ಲ ಎಂಬ ಪ್ರಶ್ನೆಗೆ    ಪ್ರತಿಕ್ರಿಯಿಸಿ  ಅವರ ಸಂಸ್ಥೆ, ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದರು.
[24/04, 12:52 PM] Gurulingswami. Holimatha. Vv. Cm: *ಕೋವಿಡ್ ಕುರಿತು  ಏಪ್ರಿಲ್ 27 ರಂದು ಪ್ರಧಾನಮಂತ್ರಿಗಳ ವೀಡಿಯೊಸಂವಾದ:  ಸಿಎಂ ಬಸವರಾಜ ಬೊಮ್ಮಾಯಿ*

ಹುಬ್ಬಳ್ಳಿ, ಏಪ್ರಿಲ್ 24:ಏಪ್ರಿಲ್ 27 ರಂದು ಪ್ರಧಾನ ಮಂತ್ರಿ ರಾಷ್ಟ್ರದ ಕೋವಿಡ್ ಪರಿಸ್ಥಿತಿ ಹಾಗೂ ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಎಲ್ಲಾ ರಾಜ್ಯಗಳ  ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಕರೆದಿದ್ದಾರೆ ಎಂದು ಮುಖ್ಯಮಂತ್ರಿ. ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಹುಬ್ಬಳ್ಳಿಯ ವಿಮಾನನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. 

 ಕೋವಿಡ್ ಬಗ್ಗೆ ಜಾಗೃತರಾಗಿರುವಂತೆ ಕೇಂದ್ರ ಸರ್ಕಾರ ಈಗಾಗಲೇ ಸೂಚನೆಯನ್ನು ಕೊಟ್ಟಿದೆ. ಕಳೆದ 8-10 ದಿನಗಳಿಂದ ಅಲ್ಪಮಟ್ಟದ ಪ್ರಕರಣಗಳು ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕಂಡುಬಂದಿದೆ.  ಮೂರು ಅಲೆಗಳನ್ನು ನಿಭಾಯಿಸಿರುವ  ಅನುಭವದಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ ಎನ್ನುವ ಮಾತನ್ನು ಪರಿಣಿತರು ಹೇಳಿದ್ದಾರೆ. ಈಗಾಗಲೇ ಆರೋಗ್ಯ ಸಚಿವರೂ ಹಲವಾರು ಸೂಚನೆಗಳನ್ನು ನೀಡಿದ್ದಾರೆ. ಎಪ್ರಿಲ್ 27 ರಂದು ಪ್ರಧಾನ ಮಂತ್ರಿಗಳ   ವೀಡಿಯೋ ಸಂವಾದದ ನಂತರ ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡುತ್ತೇವೆ ಎಂದರು. 

*ಜನ ಜಾಗೃತರಾಗಿರಬೇಕು*
 ಜನರು ಜಾಗೃತರಾಗಿರುವುದು ಬಹಳ ಮುಖ್ಯ. ಕೋವಿಡ್ 2 ನೇ ಅಲೆ ಬಂದಾಗ ಅತ್ಯಂತ ಕಡಿಮೆ ಸಂಖ್ಯೆ ಯಲ್ಲಿ ಪ್ರಾರಂಭವಾಗಿ ನಂತರ ಉಲ್ಬಣವಾಯಿತು. ಈಗಾಗಲೇ ವಿಜ್ಞಾನಿಗಳು ಯಾವ ಮಾದರಿಯಲ್ಲಿದೆ ಎಂದು ಪರೀಕ್ಷಿಸುತ್ತಿದ್ದಾರೆ ಎಂದರು. 
.
[24/04, 2:27 PM] Gurulingswami. Holimatha. Vv. Cm: We have not taken Hubballi case as an ordinary one; stringent action against the rioters: CM Bommai

Hubballi. April 24.
We have not considered the Hubballi arson case as an ordinary one. The conspiracy and organised attack on the Hubballi police station has been taken very seriously. The people and organisations behind the arson would be identified and dealt with sternly, Chief Minister Basavaraj Bommai said.

Speaking to media persons at the Hubballi Airport Bommai said, investigation is on to unravel the plot and the elements behind the incident. The police have already got the statements from those arrested.

Replying to a question that the email threats received by some of the schools has its origins in Pakistan, Bommai said, "there are instances in the past of sitting here and using the IP addresses of Dubai and Saudi Arabia. A thorough investigation has been ordered into the case. The source of the emails and the culprits involved would be identified and help would be sought from the concerned countries through the External Affairs ministry to arrest them. We will go to the bottom of the case and find the culprits."

Reacting to a video, related to the irregularities in PSI recruitment, which has gone viral, Bommai said, audio, video and new ways of frauds are coming out. CID has been asked to conduct a thorough investigation. Whoever it is, however   influential and smart they may be, the guilty would be arrested and punished, he said.

Replying to a question that Divya Hanagari has not been arrested yet in the PSI recruitment case, the Chief Minister said, her institution and house have been confiscated. She would be arrested soon.
[24/04, 2:27 PM] Gurulingswami. Holimatha. Vv. Cm: Covid threat; Video Conference with PM on April 27: CM Bommai

Hubballi. April 24.
Amid apprehensions of the 4th wave of Covid breaking out, Prime Minister Narendra Modi is set to hold a video conference with the Chief Ministers of the states on April 27 to discuss about the precautions to tackle it, Chief Minister Basavaraj Bommai said.

Speaking to media persons he said, "the Union government has already issued a caution alert. A slight increase in cases has been recorded in Kerala and Maharashtra in the last 8-10 days. Based on the experience of the last three waves, experts too have suggested suitable precautionary measures. Already the Health minister too has issued a few instructions. Clear instructions would be issued for Covid management in the State after the video conference with the Prime Minister."

It is important for people to be careful. The Covid second wave started slowly and later exploded. The scientists are studying the virus variants, Bommai said.
[24/04, 4:54 PM] Gurulingswami. Holimatha. Vv. Cm: ಬೆಂಗಳೂರು, ಏಪ್ರಿಲ್ 24: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಇಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021 ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ, ಸಂಸದ ಪಿ ಸಿ ಮೋಹನ್, ಶಾಸಕ ಗೋವಿಂದ ರಾಜ್ ಮೊದಲಾದವರು ಉಪಸ್ಥಿತರಿದ್ದರು.
[24/04, 5:05 PM] Gurulingswami. Holimatha. Vv. Cm: ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಉಪಸ್ಥಿತರಿದ್ದರು.
[24/04, 7:48 PM] Gurulingswami. Holimatha. Vv. Cm: *ಸೋಲಿನ ಭಯ ಇಲ್ಲದೇ ಗೆಲ್ಲಲೇಬೇಕೆಂದು ಆಡಬೇಕು:  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ*
ಬೆಂಗಳೂರು, ಏಪ್ರಿಲ್ 24:
ಗೆಲ್ಲಲೇಬೇಕೆಂಬ ಛಲದೊಂದಿಗೆ ಆಟ ಆಡಿ.  ಸೋಲಲೇಬಾರದು ಎಂದು ಆಡಿ. ಸೋಲಿನ ಭಯ ಇಲ್ಲದಿದ್ದರೆ ಗೆಲುವು ನಿಮ್ಮದಾಗುತ್ತದೆ ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರೀಡಾಪಟುಗಳಿಗೆ ಕರೆ ನೀಡಿದರು

ಇಂದು ಕಂಠೀರವ ಕ್ರೀಡಾಂಗಣದಲ್ಲಿ ಇಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಉದ್ಘಾಟಿಸಿದ  ಖೇಲೋ ಇಂಡಿಯಾ ಯೂನಿವರ್ಸಿಟಿ ಕ್ರೀಡಾಕೂಟದ  ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. 

 ರಾಷ್ಟಮಟ್ಟದಲ್ಲಿ ಯಾವುದೇ ಕ್ರೀಡಾ ಕೂಟ  ಇದ್ದರೂ ಪ್ರಥಮ ಆದ್ಯತೆಯನ್ನು ಬೆಂಗಳೂರಿಗೆ ನೀಡಬೇಕು. ಈ ಬಾರಿ ಖೇಲೋ ಇಂಡಿಯಾ ಯೂನಿವರ್ಸಿಟಿ ಕ್ರೀಡಾಕೂಟ ಆಯೋಜಿಸಲು ನಮ್ಮ ಮೂಲಭೂತ ಸೌಕರ್ಯಗಳನ್ನು ಹಾಗೂ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದೇವೆ. ಕ್ರೀಡಾಕೂಟ ಆಯೋಜಿಸಲು  ಜೈನ್ ಯೂನಿವರ್ಸಿಟಿ ಬಹಳ ದೊಡ್ಡ ಬೆಂಬಲವನ್ನು ನೀಡಿದೆ. ಕ್ರೀಡಾಕೂಟದ ನಂತರ ಮೌಲ್ಯ ಮಾಪನವನ್ನು ಮಾಡಿ ಕ್ರೀಡಾಕೂಟ ಗಳನ್ನು ಆಯೋಜಿಸಲು ಬೆಂಗಳೂರಿಗೆ  ಆದ್ಯತೆ ನೀಡಬೇಕು ಎಂದರು. 

*ಗೆಲ್ಲಲೇಬೇಕೆಂದು ಆಟವಾಡಿ*
ಕ್ರೀಡಾ ಪಟುಗಳು ಕ್ರೀಡೆಗಳನ್ನು ಪ್ರಾಮಾಣಿಕವಾಗಿ ಆಡಬೇಕು.  ಸೋಲು, ಗೆಲುವು ಆಟದ ಭಾಗ. ಎರಡನ್ನೂ ಸಮನಾಗಿ ತೆಗೆದುಕೊಂಡು ಕ್ರೀಡಾ ಸ್ಪೂರ್ತಿಯಿಂದ ಮುಂದೆಹೋಗೋಣ.  ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಆದರೆ ಭಾಗವಹಿಸಲು ಅವಕಾಶ ಸಿಕ್ಕಿದೆ. ಸೋತವರಿಗೆ ಗೆಲ್ಲಲು ಮತ್ತೊಂದು ಅವಕಾಶ ದೊರೆಯುತ್ತದೆ.  
ಗೆಲ್ಲಲೆಂದೇ ಆಡಿ, ಸೋಲಬಾರದು ಎಂದು ಆಡಿ. ಸೋಲಿನ ಭಯ ಇಲ್ಲದಿದ್ದರೆ ಗೆಲುವು ನಿಮ್ಮದಾಗುತ್ತದೆ ಎಂದು  ಕರೆ ನೀಡಿದರು. 

ಖೇಲೋ ಇಂಡಿಯಾ ಕಾರ್ಯಕ್ರಮ ವನ್ನು ಬೆಂಗಳೂರಿನಲ್ಲಿ ಆಯೋಜಿಸಿರುವುದು ನಮಗೆ ಅತ್ಯಂತ ಹೆಮ್ಮೆಯ ಸಂಗತಿ. 
ಬೆಂಗಳೂರು ಇಡೀ ಭಾರದ ದೇಶದಲ್ಲಿಯೇ ಅತ್ಯಂತ ಪ್ರಗತಿಪರವಾಗಿರುವ ರಾಜಧಾನಿ. ಅಂತರರಾಷ್ಟ್ರೀಯ ನಗರ. ಸಿಲಿಕಾನ್ ವ್ಯಾಲಿ ಎಂದು  ಕರೆಯಲ್ಪಡುವ ಬೆಂಗಳೂರಿನಲ್ಲಿ  ಯೂನಿವರ್ಸಿಟಿ ಕ್ರೀಡಾಕೂಟ ಜರುಗುತ್ತಿದೆ. ಸುಮಾರು 3800 ಕ್ರೀಡಾಪಟುಗಳು 20 ಕ್ರೀಡೆಗಳಲ್ಲಿ  ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು. 

ಜೈನ್ ಕ್ರೀಡಾ ವಿಶ್ವವಿದ್ಯಾಲಯದ   ಅವರ ಸಹಯೋಗದಲ್ಲಿ ಕ್ರೀಡಾಕೂಟ ಆಯೋಜಿಸಿರುವುದು ಹೆಮ್ಮೆಯ ಸಂಗತಿ. ಕ್ರೀಡೆಗೆ ಮೀಸಲಾಗಿರುವ ರಾಷ್ಟ್ರ ಮಟ್ಟದ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಇರುವುದು ನಮ್ಮ ಹೆಮ್ಮೆ  ಎಂದರು. 

ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ ಹಾಗೂ ಹಿರಿಯ ಅಧಿಕಾರಿಗಳು ಕಾರ್ಯಕ್ರಮ ಆಯೋಜಿಸಲು ಹಗಲಿರುಳು ಶ್ರಮಿಸಿ,  ಯಶಸ್ವಿಗೊಳಿಸಲು ಪಣ ತೊಟ್ಟಿದ್ದಾರೆ.  ಅವರಿಗೆ ಅಭಿನಂದನೆಗಳನ್ನು ತಿಳಿಸಿದರು. 

*ಆತಿಥ್ಯ ಒದಗಿಸಲು ಅವಕಾಶ* 
ಬೆಂಗಳೂರಿನಲ್ಲಿ  ಕ್ರೀಡಾಕೂಟ ಅಯೋಜಿಸುವ ಮೂಲಕ ಕರ್ನಾಟಕದ ಆತಿಥ್ಯ, ಕ್ರೀಡೆಗಳ ಕುರಿತಾದ ಪ್ರೀತಿ ಮತ್ತು ರಾಷ್ಟ್ರದ ಒಗ್ಗಟ್ಟಿಗೆ ಕೊಡುಗೆ ನೀಡುವ ಅವಕಾಶ ಒದಗಿದೆ. ಕ್ರೀಡೆಗಳ   ಹಾಗೂ ಸಂಸ್ಕೃತಿಗಳ ಸಮನ್ವಯಕ್ಕೂ ಇದೊಂದು ಅವಕಾಶ ಕಲ್ಪಿಸಿದಂತಾಗಿದೆ ಎಂದರು. 

*ಕ್ರೀಡೆಗಳಲ್ಲಿ ತೊಡಗಿರುವವರು ಉತ್ತಮ ಗುಣವುಳ್ಳವರು*  
ಕ್ರೀಡೆಗಳು ಮಾನವನ ಅವಿಭಾಜ್ಯ ಅಂಗ. ಸ್ವಾಭಾವಿಕವಾಗಿ ಮಾನವ ಸಾಹಸಿ. ಕ್ರೀಡೆ ಹಾಗಾಗಿ ಸ್ವಾಭಾವಿಕ ಚಟುವಟಿಕೆ.  ಕ್ರೀಡೆಗಳು ಛಲ, ಶಿಸ್ತು  ಮತ್ತು ಚಾರಿತ್ರ್ಯವನ್ನು ಬೆಳೆಸುತ್ತದೆ. ಛಲ, ಪರಿಶ್ರಮ, ಕ್ರೀಡೆಗಳು  ಚಾರಿತ್ರ್ಯವನ್ನು ಕಟ್ಟುವ ಚಟುವಟಿಕೆಯ ಭಾಗವಾಗಿದೆ. ಈ ಗುಣಗಳು ಇರುವುದರಿಂದ ಕ್ರೀಡೆಗಳಲ್ಲಿ ತೊಡಗಿರುವವರು ಉತ್ತಮ ಗುಣವುಳ್ಳ  ವ್ಯಕ್ತಿಗಳಾಗಿರುತ್ತಾರೆ. ಅವರು ಸಾಧಕರು ಎಂದರು. 

*ಪ್ರಧಾನಿಗಳ ಬೆಂಬಲ*
ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕ್ರೀಡಾ ಜಗತ್ತಿಗೆ ಹೊಸ ಆಯಾಮವನ್ನು ನೀಡಿದ್ದಾರೆ. ಕ್ರೀಡಾಪಟುಗಳ
ಮನಸ್ಥಿತಿಯನ್ನು ಬದಲಾಯಿಸಿದ್ದಾರೆ.  ಒಲಂಪಿಕ್ಸ್ ನಲ್ಲಿ ನಾವು ಭಾಗವಹಿಸಿದರೂ ಪದಕ ಗೆಲ್ಲಲಾಗುವುದಿಲ್ಲ ಎಂಬ  ಮಾತಿತ್ತು. ಆದರೆ ಪ್ರಧಾನಿಗಳು 'ಖೇಲೋ ಇಂಡಿಯಾ' , ಫಿಟ್ ಇಂಡಿಯಾ, ಜೀತೋ ಇಂಡಿಯಾ ಘೋಷವಾಕ್ಯಗಳನ್ನು ನೀಡಿದರು. ಅದರ  ಫಲಿತಾಂಶವಾಗಿ ಭಾರತ ಅತಿ ಹೆಚ್ಚು ಪದಕಗಳನ್ನು ಟೋಕಿಯೋ ಒಲಂಪಿಕ್ಸ್ ನಲ್ಲಿ ಗೆದ್ದಿತು. ನರೇಂದ್ರ ಮೋದಿಯವರ ಸ್ಫೂರ್ತಿ ಹಾಗೂ ಬೆಂಬಲದಿಂದ ಕ್ರೀಡಾಪಟುಗಳ ಸಾಹಸಗಾಥೆ, ಪರಿಶ್ರಮ ಮತ್ತು ಸಾಧನೆ  ಮುಂದುವರಿಯಬೇಕು. ಆದ್ದರಿಂದ ವಿಶ್ವವಿದ್ಯಾಲಯ ಕ್ರೀಡಾಕೂಟಗಳು ಖೇಲೋ ಇಂಡಿಯಾದ ಪ್ರಮುಖ ಭಾಗ ಎಂದರು. 

*ಅಸಾಧ್ಯವಾದುದನ್ನು ಸಾಧಿಸಬಹುದು*
ವಿಶ್ವವಿದ್ಯಾಲಯಗಳು ನಿಮ್ಮೊಳಗಿನ ಅತ್ಯುತ್ತಮವಾದುದನ್ನು ಹೊರಕ್ಕೆ ತೆಗೆದು  ಅವಕಾಶಗಳನ್ನು ಒದಗಿಸುವ ಸ್ಥಳ.  ಶಿಕ್ಷಣ, ಕ್ರೀಡೆ ಹಾಗೂ ವ್ಯಕ್ತಿತ್ವಗಳನ್ನು ರೂಪಿಸುತ್ತದೆ. ನಿಮ್ಮ ರೆಕ್ಕೆಗಳನ್ನು ತೆರೆದು ಅಸಾಧ್ಯವಾದುದನ್ನು ಸಾಧಿಸಬಹುದು.  ಬೆಂಗಳೂರಿನಲ್ಲಿ ಅತ್ಯುತ್ತಮ ಸ್ಥಳಗಳು, ಸಂಸ್ಕೃತಿ, ಹವಾಮಾನವನ್ನು ಆಸ್ವಾದಿಸಲು ಕ್ರೀಡಾ ಜಗತ್ತಿಗೆ  ಆಹ್ವಾನ ನೀಡಿದ ಮುಖ್ಯಮಂತ್ರಿಗಳು ಇಲ್ಲಿನ ವ್ಯವಸ್ಥೆ ಮಾತ್ರವಲ್ಲ,  ಆತಿಥ್ಯ, ಸ್ನೇಹ, ಮಾರ್ಗದರ್ಶನವನ್ನು    ಇತರೆ ರಾಜ್ಯ ಗಳಿಂದ ಆಗಮಿಸಿರುವವರಿಗೆ ನೀಡುತ್ತೇವೆ. ಈ ಕಾರ್ಯಕ್ರಮವನ್ನು ನೆನಪಿಟ್ಟುಕೊಳ್ಳುವ ರೀತಿಯಲ್ಲಿ ನಮ್ಮ ಆತಿಥ್ಯವಿರುತ್ತದೆ. ಕರ್ನಾಟಕಕ್ಕೆ  ಈ ಅವಕಾಶವನ್ನು ನೀಡಿದ್ದಕ್ಕಾಗಿ ಭಾರತ ಸರ್ಕಾರ ಹಾಗೂ ಕ್ರೀಡಾ ಮಂತ್ರಾಲಯಕ್ಕೆ ಮುಖ್ಯಮಂತ್ರಿಗಳು ಧನ್ಯವಾದಗಳನ್ನು ಸಲ್ಲಿಸಿದರು.
[24/04, 8:42 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಡಾ. ರಾಜ್ ಕುಮಾರ್ ಅವರ ಜನ್ಮ ದಿನಾಚರಣೆ ಹಾಗೂ ೨೦೧೭ ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿದರು. ಚಿತ್ರನಟಿ ಲಕ್ಷ್ಮೀ ಅವರಿಗೆ ಜೀವಮಾನ ಸಾಧನೆಗೆ ಡಾ. ರಾಜಕುಮಾರ ಪ್ರಶಸ್ತಿ ಪ್ರದಾನ ಮಾಡಿದರು. ಖ್ಯಾತ ನಿರ್ದೇಶಕ ಎಸ್ ನಾರಾಯಣ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪ್ರದಾನ ಮಾಡಿದರು. ವಿಷ್ಣು ವರ್ಧನ ಪ್ರಶಸ್ತಿ ದಿ. ಜಿ ಎಂ ಲಕ್ಷ್ಮೀಪತಿ ಅವರಿಗೆ ಘೋಷಿಸಲಾಯಿತು. ಪ್ರಶಸ್ತಿಯನ್ನು ಲಕ್ಷ್ಮೀಪತಿ ಅವರ ಪರವಾಗಿ ಅವರ ಪುತ್ರ ರಾಮ್ ಪ್ರಸಾದ ಅವರು ಸ್ವೀಕರಿಸಿದರು. ಇನ್ನುಳಿದಂತೆ ೨೦೧೭ ನೇ ಸಾಲಿನ ಕನ್ಮಡ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.  ಈ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಮ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಆಯುಕ್ತ ಡಾ. ಪಿ ಎಸ್ ಹರ್ಷ, ಚಿನ್ನೇಗೌಡ ಮತ್ತು ಇತರರು ಉಪಸ್ಥಿತರಿದ್ದರು.

Post a Comment

Previous Post Next Post