[26/04, 12:34 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆ ಹಾಗೂ ಪೈಪ್ ವಿತರಣಾ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಅರಣ್ಯ ಮತ್ತು ಆಹಾರ ಸಚಿವ ಉಮೇಶ್ ಕತ್ತಿ , ಶಾಸಕರಾದ ಎ ಎಸ್ ಪಾಟೀಲ್ ನಡಹಳ್ಳಿ, ರಮೇಶ್ ಬೂಸನೂರ್, ಶಿವಾನಂದ ಪಾಟೀಲ್ , ಸಂಸದ ರಮೇಶ್ ಜಿಗಜಿಣಗಿ ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
[26/04, 1:14 PM] Gurulingswami. Holimatha. Vv. Cm: ದೇಶದಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆ
ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಲಿದ್ದಾರೆ ವಿಡಿಯೋ ಕಾನ್ಫರೆನ್ಸ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಕ್ಷಿಣ ಕನ್ನಡದಿಂದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಲಿದ್ದಾರೆ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ
ನಾಳೆ ದ ಕ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸಿಗೆ ಸಕಲ ಸಿದ್ಧತೆ
[26/04, 2:50 PM] Gurulingswami. Holimatha. Vv. Cm: *ವಿಜಯಪುರ* (ತಾಳಿಕೋಟೆ) ಏಪ್ರಿಲ್ 26: *ಇಂದು ಮಾನ್ಯ* *ಮುಖ್ಯಮಂತ್ರಿ ಶ್ರೀ ಬಸವರಾಜ್* *ಬೊಮ್ಮಾಯಿ* ಅವರು *ಕೊಡಗಾನೂರ* *ಹೆಲಿಪ್ಯಾಡ್‍ಗೆ ಬಂದಿಳಿದು* ಕಾರ್ಯಕ್ರಮಕ್ಕೆ ತೆರಳುವ ಮುನ್ನ *ಮಾಧ್ಯಮದವರಿಗೆ* ಪ್ರತಿಕ್ರಿಯೆ ನೀಡಿದರು.
[26/04, 3:07 PM] Gurulingswami. Holimatha. Vv. Cm: *ವಿಜಯಪುರ* ( *ತಾಳಿಕೋಟೆ* *) ಏಪ್ರಿಲ್ 26: ಇಂದು* *ಮಾನ್ಯ* *ಮುಖ್ಯಮಂತ್ರಿ ಶ್ರೀ* *ಬಸವರಾಜ್ ಬೊಮ್ಮಾಯಿ ಅವರು* *ಜಲಸಂಪನ್ಮೂಲ* ಇಲಾಖೆ ಹಾಗೂ *ಕೃಷ್ಣಾ ಭಾಗ್ಯ* *ಜಲ ನಿಗಮ* ನಿಯಮಿತದ ವತಿಯಿಂದ *ಕೊಡಗಾನೂರ ಗ್ರಾಮ* ಆಯೋಜಿಸಿರುವ *ಬೂದಿಹಾಳ-ಪೀರಾಪೂರ ಏತ* *ನೀರಾವರಿ ಯೋಜನೆಯ ಹಂತ* - *1ರ ಪೈಪ್ ವಿತರಣಾ* ಜಾಲದ ಕಾಮಗಾರಿಯ *ಶಂಕುಸ್ಥಾಪನಾ ಕಾರ್ಯವನ್ನು* ನೆರವೇರಿಸಿ ಮಾತನಾಡಿದರು.
[26/04, 4:09 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಶ್ರೀ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಧ್ಯಾನಮಂದಿರ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅರಣ್ಯ ಮತ್ತು ಆಹಾರ ಸಚಿವ ಉಮೇಶ್ ಕತ್ತಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಮತ್ತು ಇತರರು ಉಪಸ್ಥಿತರಿದ್ದರು.
[26/04, 4:10 PM] Gurulingswami. Holimatha. Vv. Cm: *ವಿಜಯಪುರ* ( *ತಾಳಿಕೋಟೆ* ) ಏಪ್ರಿಲ್ 26: ಇಂದು *ಮಾನ್ಯ ಮುಖ್ಯಮಂತ್ರಿ ಶ್ರೀ* *ಬಸವರಾಜ್ ಬೊಮ್ಮಾಯಿ* ಅವರು ಕೆ.ಹೆಚ್.ಬಿ. ಕಾಲೋನಿಯಲ್ಲಿರುವ ನೂತನವಾಗಿ ನಿರ್ಮಾಣಗೊಂಡಿರುವ *ಹೇಮರೆಡ್ಡಿ* *ಮಲ್ಲಮ್ಮ* *ದೇವಸ್ಥಾನಕ್ಕೆ* *ಭೂಮಿ ಪೂಜೆ* ನೆರವೇರಿಸಿ ಮಾತನಾಡಿದರು
[26/04, 4:25 PM] Gurulingswami. Holimatha. Vv. Cm: *ಕೋವಿಡ್ ಅಲ್ಪಪ್ರಮಾಣದಲ್ಲಿ ಹೆಚ್ಚಳ ಆದರೆ ಗಾಬರಿಯಾಗುವ ಅಗತ್ಯವಿಲ್ಲ: ಮತ್ತೆ ಗಡಿ ಭಾಗದಲ್ಲಿ ಕಟ್ಟೆಚ್ಚರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ವಿಜಯಪುರ, ಏಪ್ರಿಲ್ 26: ರಾಜ್ಯದಲ್ಲಿ ಅಲ್ಪಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ. ಕೋವಿಡ್ ನಿಯಂತ್ರಣಕ್ಕೆ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಅವರು ತಿಳಿಸಿದರು.
ಅವರು ಇಂದು ವಿಜಯಪುರದ ಕೊಡಗಾನೂರ ಹೆಲಿಪ್ಯಾಡ್‍ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವೊಡ್ ಸ್ಥಿತಿಗತಿ ಬಗ್ಗೆ ವೀಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಅವರಿಗೆ ವಿವತಿಸಾಗುವುದು ಎಂದು ಅವರು ಹೇಳಿದರು.
ವಿಮಾನ ನಿಲ್ದಾಣಗಳಲ್ಲಿ ಹಾಗೂ ವಿಶೇಷವಾಗಿ ಮಹಾರಾಷ್ಟ್ರ ಮತ್ತು ಕೇರಳ ಗಡಿಭಾಗಗಳಲ್ಲಿ ತಪಾಸಣೆ ಮತ್ತು ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇತ್ತೀಚೆಗೆ ಎಂಡು ದೇಶಗಳಲ್ಲಿ ಕರೋನಾ ಸಾಂಕ್ರಾಮಿಕ ಉಲ್ಬಣವಾಗಿದೆ. ಭಾರತದ ನೆರೆಯ ದೇಶಗಳಾದ ಥೈಲ್ಯಾಂಡ್, ಇಂಡೋನೇಷ್ಯಾ, ಚೈನಾ ದೇಶಗಳಲ್ಲಿಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲ್ಲಿಯೂ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಪ್ರಧಾನಮಂತ್ರಿಗಳು ಮುಂಜಾಗ್ರತೆ ವಹಿಸಿ ಎಲ್ಲ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ನಿನ್ನೆ ನಡೆದಿರುವ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ಸೇರಿ ಕೆಲವು ಕರೋನಾ ಸೂಕ್ತ ನಡವಳಿಕೆಗಳನ್ನು ಪುನ: ಜಾರಿಗೊಳಿಸಲು ಸೂಚಿಸಲಾಗಿದೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಎಲ್ಲರೂ ಇದನ್ನು ಪಾಲಿಸಿದರೆ ಉತ್ತಮ. ಇದುವರೆಗೂ ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಆದರೂ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
[26/04, 7:27 PM] Gurulingswami. Holimatha. Vv. Cm: *ರೇವಣಸಿದ್ದೇಶ್ವರ ಏತ ನೀರಾವರಿಯ ಮೊದಲನೇ ಹಂತಕ್ಕೆ ಇದೇ ವರ್ಷ ಅನುಮೋದನೆ* :
*ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ವಿಜಯಪುರ, ಏಪ್ರಿಲ್ 26: ರೇವಣಸಿದ್ದೇಶ್ವರ ಏತ ನೀರಾವರಿಯ ಮೊದಲನೇ ಹಂತಕ್ಕೆ ಇದೇ ವರ್ಷ ಅನುಮೋದನೆ ನೀಡಿ ಬರುವ ದಿನಗಳಲ್ಲಿ ನೀರಾವರಿಗೆ ಇನ್ನಷ್ಟು ಕೆಲಸಗಳಿಗೆ ಹೆಚ್ಚಿನ ಇಂಬು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವಿಜಯಪುರದ ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಯ ಹಂತ-1ರ ಪೈಪ್ ವಿತರಣಾ ಜಾಲದ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.
ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಬಹಳ ಜನ ಉದ್ಧಾರವಾಗಿದ್ದಾರೆ. ದೊಡ್ಡ ದೊಡ್ಡ ಮನೆ ಕಟ್ಟಿದ್ದಾರೆ ಎಂದು ಶಾಸಕ ಯತ್ನಾಳ್ ಅವರು ಹೇಳಿದರು. ಆದರೆ ಅದೆಲ್ಲಾ ಹಿಂದಿನ ಕಾಲದಲ್ಲಿ. ನಮ್ಮ ಸರ್ಕಾರ ಬಂದ ನಂತರ 10 -20 % ಕಮಿಷನ್ ಕೊಡುವುದನ್ನು ನಿಲ್ಲಿಸಲಾಗಿದೆ. ತಾಂತ್ರಿಕ ಸಮಿತಿ ಬೇರೆ, ಟೆಂಡರ್ ಪರಿಶೀಲನಾ ಸಮಿತಿ ಬೇರೆ ಅಂದಾಜು ಪಟ್ಟಿ ತಯಾರಿಸುವವರು ಬೇರೆ ಇದ್ದಾರೆ. ಒಂದು ವ್ಯವಸ್ಥೆಯನ್ನು ತರಲಾಗಿದೆ. ಮತ್ತು ಜ್ಯೇಷ್ಠತಾ ಪಟ್ಟಿ ಆಧಾರದ ಮೇಲೆ ಬಿಲ್‍ಗಳನ್ನು ಪಾಸು ಮಾಡಲು ಸೂಚಿಸಲಾಗಿದೆ. ಎಲ್ಲಾ ಇಲಾಖೆಯಲ್ಲಿ ಇದನ್ನು ಪ್ರಾರಂಭಿಸಲಾಗಿದ್ದು ಪಾರದರ್ಶಕತೆಯನ್ನು ಪಾಲಿಸಲಾಗುತ್ತಿದೆ ಎಂದರು.
*ರೈತರ ತ್ಯಾಗ ದೊಡ್ಡದು*
ದೇಶಕ್ಕಾಗಿ ಊರು, ಜಮೀನುಗಳನ್ನು ಕಳೆದುಕೊಂಡು ತ್ಯಾಗ ಮಾಡಿರುವ ರೈತರಿಗೆ ನಮನಗಳನ್ನು ಸಲ್ಲಿಸಿದ ಮುಖ್ಯಮಂತ್ರಿಗಳು, ರೈತರ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಿರಿಯರ ಕಾಲದಿಂದ ಇದ್ದ ಸ್ವಂತ ಮನೆ, ಬದುಕನ್ನು ಬಿಡುವಂಥ ಪರಿಸ್ಥಿತಿ ಮಾನವೀಯತೆಯ ದೃಷ್ಟಿ ಇದ್ದವರು ಮಾತ್ರ ಇಂಥ ತ್ಯಾಗವನ್ನು ಮಾಡುತ್ತಾರೆ. ನಾವು ಸಂಕಲ್ಪ ತೊಟ್ಟು ತ್ಯಾಗದ ಉದ್ದೇಶ ಈಡೇರಿಸಲು ಕೆಲಸ ಮಾಡಬೇಕಾಗುತ್ತದೆ. ನಾನು ನೀರಾವರಿ ಸಚಿವನಾದ ಮೇಲೆ ಕೈಗಳು ಕಟ್ಟಿಹಾಕಿದ್ದ ಪರಿಸ್ಥಿತಿಯಲ್ಲಿಯೂ ನ್ಯಾಯಾಧಿಕರಣದ ಆದೇಶ ಬರುವ ನಿರೀಕ್ಷೆಯಲ್ಲಿ ಮುಳವಾಡಿ, ಚಿಮ್ಮಲಗಿ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಿ ಟೆಂಡರ್ ಕರೆದು ಅಡಿಗಲ್ಲು ಹಾಕಲಾಯಿತು. ಅಂದು ಆ ಕೆಲಸವನ್ನು ಮಾಡಿದ್ದರಿಂದ ನಾಳೆ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524 ಅಡಿಗೆ ಏರಿಸಿದಾಗ ನೀರು ಹರಿಸಲು ಸಾಧ್ಯವಾಗುತ್ತದೆ. ಇದರ ಪ್ರಯೋಜನ ವಿಜಯಪುರ ಜಿಲ್ಲೆಗೆ ಆಗುತ್ತದೆ ಎಂದರು.
*ರೈತರು ನೀರಿಗಾಗಿ ಬೇಡಬಾರದು*
'ನನಗೆ ಭಗೀರಥ ಆಗುವ ಕನಸೂ, ಇಲ್ಲ, ಮನಸೂ ಇಲ್ಲ. ಆ ಶಕ್ತಿಯೂ ಇಲ್ಲ. ಆದರೆ ನನ್ನ ರೈತರು ಎಂದೂ ಕೂಡ ನೀರಿಗಾಗಿ ಎಲ್ಲಿಯೂ ಬೇಡಿಕೆಯನ್ನು ಇಡಬಾರದು. ಸಮಗ್ರವಾಗಿ ನೀರು ಹರಿಸಿ ಭೂಮಿ ತಾಯಿಗೆ ಹಸಿರು ಸೀರೆಯನ್ನು ಉಡಿಸಬೇಕೆನ್ನುವ ಕಲ್ಪನೆ ಮಾತ್ರ ನನ್ನದು'. ಈ ಭಾಗಕ್ಕೆ ನ್ಯಾಯವನ್ನು ಕೊಡುತ್ತೇನೆ ಎಂದು ಹೇಳಿ ನಾಯಕರಾದವರು ನಾವು. ಇದು ನಮ್ಮ ಕರ್ತವ್ಯ. ನಿಮಗೆ ನ್ಯಾಯ ಕೊಡುವುದು ನಮ್ಮ ಕಾಯಕ. ಬೂದಿಹಾಳ- ಪೀರಾಪುರ ಯೋಜನೆಯಡಿ 50 ಸಾವಿರ ಎಕರೆಗೆ ನೀರು ಹರಿಸಲಾಗುವುದು ಎಂದರು.
*21 ಗ್ರಾಮಗಳ ಪುನಶ್ಚೇತನಕ್ಕೆ ಅನುದಾನ ಬಿಡುಗಡೆ* :
ವಿಜಯಪುರ ಭಾಗಕ್ಕೆ ಹೆಚ್ಚಿನ ನೀರಾವರಿ ಒದಗಿಸುವ 3.48 ಟಿಎಂಸಿ ನೀರಿನ ಯೋಜನೆಗೆ ಅನುಮೋದನೆ ನೀಡಿ, ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಕಾಮಗಾರಿಯನ್ನು ಕಾಲಮಿತಿಯಲ್ಲಿ ಮುಗಿಸಬೇಕು. ರಾಜ್ಯದಲ್ಲಿ ಪ್ರಥಮವಾಗಿ ವಿಜಯಪುರದಲ್ಲಿ ಕೆರೆ ತುಂಬಿಸುವ ಯೋಜನೆಯನ್ನು ಪ್ರಾರಂಭಿಸಲಾಯಿತು. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3 ಅನುಷ್ಠಾನಕ್ಕೆ ಕಾನೂನಾತ್ಮಕ ಹೋರಾಟ ನಡೆಸಲಾಗುತ್ತಿದ್ದು, 55-60 ಸಾವಿರ ಕೋಟಿ ಅನುದಾನದ ಬೇಕಾಗುತ್ತದೆ. ವಿಜಯಪುರದ ನೀರಾವರಿ ಯೋಜನೆಗಳಿಗೆ ಹಣದ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಎಲ್ಲಾ 21 ಗ್ರಾಮಗಳ ಪುನಶ್ಚೇತನಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ, ಪುನರ್ವಸತಿ ಮತ್ತು ಪುನನಿರ್ಮಾಣ ವ್ಯವಸ್ಥೆಗೆ ಬೇಕಾದ ಅನುದಾನವನ್ನು ಮುಂಬರುವ ದಿನಗಳಲ್ಲಿ ನೀಡಲಾಗುವುದು ಎಂದರು.
*ಕ್ಷೇತ್ರ ನೀರಾವರಿ ಕಾಲುವೆ(ಎಫ್‍ಐಸಿ) ನಿರ್ಮಾಣ* :
ರೈತರ ಭೂಮಿಗೆ ನೀರುಣಿಸಲು ಇಲ್ಲಿನ ನೀರಾವರಿ ಯೋಜನಗೆಗಳು ಸಂಪೂರ್ಣವಾಗುವುದರೊಳಗೆ ಕ್ಷೇತ್ರ ನೀರಾವರಿ ಕಾಲುವೆ(ಎಫ್‍ಐಸಿ) ನಿರ್ಮಾಣಕ್ಕೆ ಯೋಜನೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದರು.
*ಕೋವಿಡ್ ನಡುವೆಯೂ ಆರ್ಥಿಕ ಸಬಲತೆ :*
ಕೋವಿಡ್ ಆರ್ಥಿಕ ಹಿಂಜರಿಕೆಯ ನಡುವೆಯೂ 16 ಸಾವಿರ ಕೋಟಿ ಗುರಿಗೂ ಮೀರಿ ಆದಾಯ ಬಂದಿದ್ದು, ರಾಜ್ಯದ ಆರ್ಥಿಕ ಸಬಲತೆಯನ್ನು ಸಾಧಿಸಿದಂತಾಗಿದೆ. ಕೇಂದ್ರ ಸರ್ಕಾರದ 9600 ಕೋಟಿ ರೂ.ನೆರವು ಬಂದಿತು. ರಾಜ್ಯ 67 ಸಾವಿರ ಕೋಟಿ ಸಾಲ ಪಡೆಯಬಹುದಾಗಿತ್ತು. ಆದರೆ ರಾಜ್ಯದ ಆದಾಯ ಹೆಚ್ಚಳದಿಂದ ಕೇವಲ 63000 ಕೋಟಿ ರೂ. ಸಾಲ ಮಾತ್ರ ಪಡೆಯಲಾಯಿತು. 4000 ಕೋಟಿ ಸಾಲ ಪಡೆಯುವುದನ್ನು ತಡೆಯಲಾಗಿದೆ. ಇದು ನಮ್ಮ ಪ್ರಾಮಾಣಿಕ ಕೆಲಸಯನ್ನು ತೋರಿಸುತ್ತದೆ. ಹಣ ಸೋರಿಕೆಯನ್ನು ನಿಲ್ಲಿಸಿ ಆದಾಯವನ್ನು ಹೆಚ್ಚಿಸಿ ಅನಾವಶ್ಯಕ ವೆಚ್ಚವನ್ನು ಕಡಿತಗೊಳಿಸಿ ಇಂತಹ ನೀರಾವರಿಯ ಉಪಯುಕ್ತ ಯೋಜನೆಗಳಿಗೆ ಹಣ ವಿನಿಯೋಗಿಸಲಾಗುತ್ತಿದೆ ಎಂದರು.
*ಬರದ ನಾಡನ್ನು ಜಲದ ನಾಡನ್ನು ಮಾಡುವ ಕನಸು:*
ರೈತ ಆರ್ಥಿಕವಾಗಿ ಸಬಲರಾಗಬೇಕು. ಬರದ ನಾಡನ್ನು ಜಲದ ನಾಡನ್ನು ಮಾಡುವ ಕನಸನ್ನು ಈಡೇರಿಸಲಾಗುವುದು. ಈ ನಿಟ್ಟಿನಲ್ಲಿ ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.
[26/04, 7:30 PM] Gurulingswami. Holimatha. Vv. Cm: ಕೋವಿಡ್ ಕುರಿತು ಸಿಎಂಗಳೊಂದಿಗೆ ಪ್ರಧಾನಿಗಳ ವೀಡಿಯೋ ಸಂವಾದ
*ಮಂಗಳೂರಿನಿಂದ ವೀಡಿಯೊ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಳಿರುವ ಸಿಎಂ ಬಸವರಾಜ ಬೊಮ್ಮಾಯಿ*
ಏಪ್ರಿಲ್ 26: ದೇಶದಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿ ಮಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಲಿದ್ದಾರೆ.
ವೀಡಿಯೋ ಕಾನ್ಫರೆನ್ಸ್ ಗಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ, ಪ್ರಕರಣಗಳ ಸಂಖ್ಯೆ, ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಪ್ರಧಾನಿಗಳಿಗೆ ವಿವರಿಸಲಿದ್ದಾರೆ.
[26/04, 8:24 PM] Gurulingswami. Holimatha. Vv. Cm: *ಹೇಮರೆಡ್ಡಿ ಮಲ್ಲಮ್ಮನವರ ಆದರ್ಶಗಳು ಇಂದಿಗೂ ಪ್ರಸ್ತುತ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ವಿಜಯಪುರ, ಏಪ್ರಿಲ್ 26 :
ಹೇಮರೆಡ್ಡಿ ಮಲ್ಲಮ್ಮನವರ ಆದರ್ಶಗಳು ಇಂದಿಗೂ ಪ್ರಸ್ತುತ. ಅವರ ಪ್ರಾಮಾಣಿಕತೆ ಮತ್ತು ಸತ್ಯಸಂಧತೆಯ ಗುಣಗಳು ಅನುಕರಣೀಯವಾದುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವಿಜಯಪುರ ಜಿಲ್ಲೆ ತಾಳಿಕೋಟೆಯ ಕೆಹೆಚ್‍ಬಿ ಕಾಲೋನಿಯ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಧ್ಯಾನ ಮಂದಿರ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಬದುಕಿನ ಎಲ್ಲ ಹಂತಗಳಲ್ಲಿ ಹೇಮರೆಡ್ಡಿ ಮಲ್ಲಮ್ಮ ಆದರ್ಶವಾಗಿದ್ದಾರೆ ಮಲ್ಲಮ್ಮನವರ ಚಿಂತನೆಗಳಿಂದ ಮನುಕುಲ ಸುಖಶಾಂತಿಯಿಂದ ಬದುಕಲು ಸಾಧ್ಯ. ಸಜ್ಜನ ಶಿವಶರಣೆಯಾದ ಹೇಮರೆಡ್ಡಿ ಮಲ್ಲಮ್ಮ ಒಬ್ಬ ಸಾಮಾನ್ಯ ಗೃಹಣಿಯಾಗಿ ತತ್ವಾಧಾರಿತವಾದ ಬದಲಾವಣೆಗಳನ್ನು ತರಲು ಸಾಧ್ಯ ಎಂದು ನಿರೂಪಿಸಿದರು. ಮಲ್ಲಮ್ಮನವರ ವಿಚಾರಗಳು, ಸಾತ್ವಿಕತೆ, ಭಕ್ತಿ, ಆದರ್ಶಪ್ರಾಯವಾಗಿದೆ ಎಂದರು.
ರೆಡ್ಡಿ ಸಮುದಾಯದವರೊಂದಿಗೆ ನಮ್ಮದು ಪ್ರೀತಿವಿಶ್ವಾಸದ ಸಂಬಂಧ. ಗ್ರಾಮೀಣ ಪ್ರದೇಶದಲ್ಲಿನ ಅತ್ಯಂತ ಕಠಿಣ ಪರಿಶ್ರಮ ಮಾಡುವ ರೆಡ್ಡಿ ಸಮುದಾಯ ಶುದ್ಧತೆ, ಶುಭ್ರತೆ ಹಾಗೂ ಪ್ರಾಮಾಣಿಕತೆಗೆ ಹೆಸರು ಮಾಡಿದವರು. ದುಡಿಮೆಯೇ ದೊಡ್ಡಪ್ಪ ಎನ್ನುವ ಮಾತನ್ನು ನಿರೂಪಿಸಿದ್ದಾರೆ. ದುಡಿಯುವ ವರ್ಗವನ್ನು ಸರ್ಕಾರ ಗೌರವಿಸುತ್ತದೆ. ರೆಡ್ಡಿ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ಸಹಕಾರ ನೀಡಲಿದೆ ಎಂದರು.
Post a Comment