[28/04, 6:59 PM] Pannagaraja Kulakarni: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ತಮ್ಮ ಆರ್ ಟಿ ನಗರ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ,ವಿಡಿಯೋ ಬೈಟ್..
[28/04, 6:59 PM] Pannagaraja Kulakarni: *ಬೆಂಗಳೂರು* , *ಏಪ್ರಿಲ್* *28* -ಮುಖ್ಯಮಂತ್ರಿ *ಬಸವರಾಜ** *ಬೊಮ್ಮಾಯಿ ಅವರು ಇಂದು ತಮ್ಮ* *ಆರ್.ಟಿ.ನಗರದ* *ನಿವಾಸದಲ್ಲಿ ಮಾಧ್ಯಮದವರಿಗೆ* ಪ್ರತಿಕ್ರಿಯೆ ನೀಡಿದರು.
[28/04, 6:59 PM] Pannagaraja Kulakarni: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣ ದಲ್ಲಿ ಇಂದು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸುದ್ದಿಗಾರರ ಜತೆ ಮಾತನಾಡಿದರು.
[28/04, 6:59 PM] Pannagaraja Kulakarni: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶಿಗ್ಗಾವಿ ತಾಲ್ಲೂಕಿನ ಮುನವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶಾಹಿ ಎಕ್ಸ್ಪೋರ್ಟ್ಸ್ ಲಿಮಿಟೆಡ್ ಕಂಪನಿಯ ಸಿದ್ದ ಉಡುಪು ನಿರ್ಮಾಣ ಘಟಕದ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
[28/04, 6:59 PM] Pannagaraja Kulakarni: *ಹಾವೇರಿ* ( *ಶಿಗ್ಗಾಂವ್* ), ಏಪ್ರಿಲ್ 28: *ಇಂದು ಮಾನ್ಯ* *ಮುಖ್ಯಮಂತ್ರಿ ಶ್ರೀ ಬಸವರಾಜ* *ಬೊಮ್ಮಾಯಿ* ಅವರು ಇಂದು ಪಿ.ಬಿ. *ರಸ್ತೆಯ *ಮುನುವಳ್ಳಿ ಗ್ರಾಮದಲ್ಲಿ* ಆಯೋಜಿಸಿರುವ ಮೆ|* *ಶಾಹಿ ಏಕ್ಸ್* *ಪೋಟ್ಸ್‍ನ ಸಿದ್ಧ* *ಉಡುಪು ತಯಾರಿಕಾ ಘಟಕಕ್ಕೆ* *ಭೂಮಿಪೂಜೆ ಮತ್ತು* *ಶಂಕುಸ್ಥಾಪನಾ* *ಕಾರ್ಯಕ್ರಮದಲ್ಲಿ* ಪಾಲ್ಗೊಂಡು ಮಾತನಾಡಿದರು.
[28/04, 6:59 PM] Pannagaraja Kulakarni: ಇತ್ತೀಚೆಗೆ ನಿಧನರಾದ ಬಿಸನಳ್ಳಿ ಗ್ರಾಮದ ದಿ.ಬಾಪುಗೌಡ ಮರಿಲಿಂಗಪ್ಪಗೌಡ ಪಾಟೀಲ್ ಅವರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
[28/04, 6:59 PM] Pannagaraja Kulakarni: *ಎಲ್ಲಾ ಧರ್ಮೀಯರು ಶಾಂತಿಯಿಂದ ನೆಲೆಸಿರುವ ಸ್ಥಳ ಭಾರತ* *ಸಿಎಂ ಬಸವರಾಜ ಬೊಮ್ಮಾಯಿ*
ಹುಬ್ಬಳ್ಳಿ, ಏಪ್ರಿಲ್ 28: ಎಲ್ಲಾ ಧರ್ಮೀಯರು ಶಾಂತಿಯಿಂದ ನೆಲೆಸಿರುವ ಸ್ಥಳ ಭಾರತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ವಿವಿಧ ದೇಶಗಳಲ್ಲಿ ಭಾರತದವರು ನೆಲೆಸಿದ್ದು, ಇಲ್ಲಿ ಕೋಮುವಾದ ಹೆಚ್ಚಾದರೆ ಅಲ್ಲಿ ಯಾವ ಪರಿಸ್ಥಿತಿ ಉಂಟಾಗಬಹುದು ಎಂದು ತೆಲಂಗಾಣ ಮುಖ್ಯಮಂತ್ರಿಗಳು ಹೇಳಿಕೆ ನೀಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು , ಧಾರ್ಮಿಕತೆ, ಕೋಮುವಾದ ಅವರವರ ಮನಸ್ಸಿನಲ್ಲಿದೆ. ಭಾರತದಂಥ ದೇಶದಲ್ಲಿ ಎಲ್ಲಾ ಧರ್ಮದವರು ಒಗ್ಗಟ್ಟಿನಿಂದ ಪ್ರೀತಿ ವಿಶ್ವಾಸದಿಂದ ನೆಲೆಸಿರುವರು. ಇದು ಅಂಥ ಮಹಾನ್ ಸ್ಥಳ ಭಾರತ. ಬೇರೆ ರಾಷ್ಟ್ರಗಳಲ್ಲಿ ಧರ್ಮದ ಹೆಸರಲ್ಲಿ ಭಯೋತ್ಪಾದನೆ ಆಗಿರುವುದನ್ನು ನೋಡಿದ್ದೇವೆ. ನಮ್ಮ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ ಸಂವಿಧಾನವನ್ನು ನಡೆಸಿಕೊಂಡು ಹೋದರೆ ಸಾಕು. ಒಬ್ಬರಿಗೊಬ್ಬರು ಸಲಹೆ ನೀಡುವ ಅಗತ್ಯವಿಲ್ಲ. ಅವರವರ ಕರ್ತವ್ಯವನ್ನು ನಿಭಾಯಿಸುವುದು ಬಹಳ ಮುಖ್ಯ ಎಂದರು.
ಹಾವೇರಿಯಲ್ಲಿ ಗರ್ಭಕೋಶ ಶಸ್ತ್ರಚಿಕಿತ್ಸೆ ಆರೋಪ ಎದುರಿಸುತ್ತಿರುವ ವೈದ್ಯರ ಪ್ರಕರಣದ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
[28/04, 6:59 PM] Pannagaraja Kulakarni: ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮೇಳನ
*ನಾಳೆ ರಾತ್ರಿ ಸಿಎಂ ದೆಹಲಿಗೆ*
ಬೆಂಗಳೂರು, ಏಪ್ರಿಲ್ 28: ಏಪ್ರಿಲ್ 30 ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಹಾಗೂ ಸಿ.ಜೆಗಳ ಸಮ್ಮೇಳನದಲ್ಲಿ ಭಾಗವಹಿಸಲು ನಾಳೆ ರಾತ್ರಿ ದೆಹಲಿಗೆ ತೆರಳು ತ್ತಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ವರಿಷ್ಠರನ್ನು ಭೇಟಿಯಾಗಲು ಸಮಯ ಕೇಳಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು
ಅವಧಿ ಮುಗಿದ ಬಳಿಕ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಆಗಿದೆ. ಅಷ್ಟೇ ಎಂದು ಅವರು ತಿಳಿಸಿದರು.
[28/04, 6:59 PM] Pannagaraja Kulakarni: *ಕೋವಿಡ್ 4ನೇ ಅಲೆ ಬಂದಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಹುಬ್ಬಳ್ಳಿ, ಏಪ್ರಿಲ್ 28: ರಾಜ್ಯದಲ್ಲಿ ಕೋವಿಡ್ 4ನೇ ಅಲೆ ಬಂದಿಲ್ಲ. ಏಪ್ರಿಲ್ 9 ರ ನಂತರ ಸ್ವಲ್ಪ ಪ್ರಮಾಣದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವದುದನ್ನು ಗಮನಿಸಲಾಗಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಯೂರೋಪ್ ಮತ್ತು ಇತರೆ ರಾಷ್ಟ್ರಗಳಲ್ಲಿ ಲಸಿಕೆ ಪಡೆಯದವರಿಂದ ಪುನಃ ಪ್ರಕರಣಗಳು ಉಲ್ಬಣವಾಗಿರುವುದು ಕಂಡುಬಂದಿದೆ. ರಾಜ್ಯದಲ್ಲಿ ಎರಡೂ ಡೋಸ್ ಗಳನ್ನು 98% ರಷ್ಟು ಜನ ಲಸಿಕೆ ಪಡೆದಿದ್ದಾರೆ. ಮುನ್ನೆಚ್ಚರಿಕಾ ಡೋಸ್ ಗಳನ್ನು ಇನ್ನಷ್ಟು ಜನಕ್ಕೆ ನೀಡುವ ಬಗ್ಗೆ ಗಮನ ಹರಿಸಲಾಗುವುದು ಎಂದರು.
*ಲಸಿಕೆಗೆ ಮಹತ್ವ*
ಮೊನ್ನೆ ಕೇಂದ್ರ ಸರ್ಕಾರ 6ರಿಂದ 12 ವರ್ಷದ ಮಕ್ಕಳಿಗೆ ಲಸಿಕೆ ಹಾಕಲು ಅನುಮೋದನೆ ನೀಡಿದೆ. ಅದನ್ನು ಪ್ರಾಥಮಿಕ ಶಾಲೆಗಳಲ್ಲಿ ಪ್ರಾರಂಭಿಸುವ ತೀರ್ಮಾನ ಮಾಡಲಾಗಿದೆ. ಲಸಿಕೆ ಹಾಕಲು ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಕೋವಿಡ್ ಸೂಕ್ತ ನಡವಳಿಕೆ ಪಾಲಿಸಲು ಸೂಚನೆ ನೀಡಲಾಗಿದೆ. ಪರೀಕ್ಷೆ ಗಳನ್ನು ಹೆಚ್ಚಿಸಲಾಗುತ್ತಿದೆ. ವಿಶೇಷವಾಗಿ ಐ.ಎಲ್.ಐ ಮತ್ತು SARI ಪ್ರಕರಣಗಳು ಆಸ್ಪತ್ರೆಗಳಿಗೆ ದಾಖಲಾಗಿರುವವರ ಪರೀಕ್ಷೆ ಮಾಡಿ , ಅವರಲ್ಲಿ ಪಾಸಿಟಿವ್ ಬಂದರೆ, ಅದನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗುವುದು. ಇದನ್ನು ಮಾಡಿದರೆ ಬೇರೆ ಬೇರೆ ರೂಪಾಂತರ ತಳಿಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಈಗಾಗಲೇ 8500 ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ಗಳನ್ನು ರಾಜ್ಯದಲ್ಲಿ ಮಾಡಲಾಗಿದೆ. 4 ಸಾವಿರ ಬೆಂಗಳೂರಿನಲ್ಲಿ ಹಾಗೂ ಇನ್ನಿತರೆ ಕಡೆಗಳಲ್ಲಿ 4 ಸಾವಿರ ಪರೀಕ್ಷೆಗಳನ್ನು ಮಾಡಲಾಗಿದೆ ಎಂದರು.
[28/04, 6:59 PM] Pannagaraja Kulakarni: *ದ್ವೇಷ ಭಾಷಣ ನಿಯಂತ್ರಿಸಲು ಸಮಿತಿ ರಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಹುಬ್ಬಳ್ಳಿ, ಏಪ್ರಿಲ್ 28:
ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ದ್ವೇಷ ಭಾಷಣ ನಿಯಂತ್ರಿಸಲು ಸಮಿತಿ ರಚಿಸಲಾಗುವುದು ಎಂದು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ದ್ವೇಷ ಭಾಷಣವನ್ನು ನಿಯಂತ್ರಿಸುವ ಬಗ್ಗೆ ಸಮಿತಿ ರಚಿಸಲು ಸರ್ವೋಚ್ಚ ನ್ಯಾಯಾಲಯವು ಸೂಚಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಅವರು, ಇಡೀ ದೇಶದಲ್ಲಿ ದ್ವೇಷ ಭಾಷಣ ನಡೆಯುತ್ತಿದೆ. ವಿಶೇಷವಾಗಿ ಸಾಮಾಜಿಕ ಮಾಧ್ಯಮ ಜಾಲತಾಣಗಳಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ನಿಯಂತ್ರಣ ಹಾಕಲು ನ್ಯಾಯಾಲಯದ ಆದೇಶಗಳನ್ನು ಮಾರ್ಗಸೂಚಿಗಳಂತೆ ಪಾಲಿಸಲಾಗುವುದು ಎಂದರು.
[28/04, 6:59 PM] Pannagaraja Kulakarni: *ಮಾತೃಭಾಷೆಗಳೇ ಸಾರ್ವಭೌಮ: ಎಲ್ಲರೂ ಇದನ್ನು ಮನಗಂಡು ಗೌರವಿಸಬೇಕು : ಸಿಎಂ ಬಸವರಾಜ ಬೊಮ್ಮಾಯಿ*
ಹುಬ್ಬಳ್ಳಿ, ಏಪ್ರಿಲ್ 28: ಮಾತೃಭಾಷೆಗಳೇ ಸಾರ್ವಭೌಮ. ಎಲ್ಲರೂ ಇದನ್ನು ಮನಗಂಡು ಗೌರವಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಅಜಯ ದೇವಗನ್ ಅವರ ಟ್ವೀಟ್ ಗೆ ಸುದೀಪ್ ಅವರು ಪ್ರತಿಯಾಗಿ ಟ್ವೀಟ್ ಮಾಡಿರುವುದು ಸರಿ ಇದೆ.
ನಮ್ಮ ರಾಜ್ಯಗಳು ಭಾಷಾವಾರು ಪ್ರಾಂತ್ಯಗಳಾದ ಮೇಲೆ ಆ ರಾಜ್ಯ ಗಳಲ್ಲಿ ಮಾತೃಭಾಷೆಗಳಿಗೆ ಪ್ರಾಧ್ಯಾನ್ಯತೆ ಇದೆ. ಅದೇ ಸಾರ್ವಭೌಮ. ಇದನ್ನು ಎಲ್ಲರೂ ಮನಗಂಡು ಗೌರವಿಸಬೇಕು ಎಂದು ಸಿಎಂ ಹೇಳಿದರು.
[28/04, 6:59 PM] Pannagaraja Kulakarni: *ಬೆಳಗಾವಿ* , ಏಪ್ರಿಲ್ 28: ಇಂದು *ಮಾನ್ಯ ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ ಅವರು* ಇಂದು *ಬೆಳಗಾವಿಯಲ್ಲಿ* *ಮಾದ್ಯಮದವರಿಗೆ* ಪ್ರತಿಕ್ರಿಯೆ ನೀಡಿದರು.
[28/04, 6:59 PM] Pannagaraja Kulakarni: Chief Ministers' Conference; CM heading to Delhi tomorrow night
Bengaluru. April 28.
"I will be leaving for Delhi tomorrow night to participate in the Conference of Chief Ministers and Chief Justices of all States to be held on April 30," Chief Minister Basavaraj Bommai said.
Speaking to media persons Bommai said, "there is no possibility of meeting the party top brass as I have not sought their appointment."
Replying to a question on transfer of many senior police officers, Bommai said, it is a routine exercise as they had completed a long stint in their present positions.
[28/04, 6:59 PM] Pannagaraja Kulakarni: Slight rise in cases, not the fourth wave: CM Bommai
Hubballi. April 28.
There has been a slight rise in Covid positive cases in the State after April 9. It cannot be termed as the 4th wave. The rise in cases is being monitored and precautionary measures are being taken, Chief Minister Basavaraj Bommai said.
Speaking to media persons at Hubballi Airport he said, "a spike in Covid cases is being reported in Europe and a few other countries especially among those who have not been vaccinated. About 98% of the eligible population has been vaccinated in Karnataka. Attention is being given to administer Precautionary Vaccine doses in the State."
The Union government has approved vaccination for children in the age group of 6 to 12. It has been decided to launch the vaccination drive at primary schools. Greater emphasis is being given for vaccination, Bommai said.
Officials have been instructed to ramp up testing, special monitoring of ILI and SARI cases is being done. If found positive, their reports are being sent for Genome Sequencing to ascertain the exact variant of the virus. Already 8500 Genome Sequencing tests have been done in the State, over 4000 in Bengaluru and the rest in other parts of the State," Bommai said.
[28/04, 6:59 PM] Pannagaraja Kulakarni: State to form committee to control hate speeches: CM Bommai
Hubballi. April 28.
The State would form a committee to control hate speeches in accordance with instructions of the Supreme Court, Chief Minister Basavaraj Bommai said.
Speaking to media persons at Hubballi Airport Bommai in response to a question on the issue said, hate speeches are on the rise all over the country, especially on social media platforms. The Supreme Court orders would be followed and a committee would be constituted to control it.
[28/04, 6:59 PM] Pannagaraja Kulakarni: *ಶಿಗ್ಗಾವಿ ತಾಲ್ಲೂಕನ್ನು ಭಾರತದ ಟೆಕ್ಸ್ ಟೈಲ್ ಮತ್ತು ಸಿದ್ದಉಡುಪು ಹಬ್ ಆಗಿಸುವ ಕನಸು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಹಾವೇರಿ, ಏಪ್ರಿಲ್ 28 :
ಶಿಗ್ಗಾವಿ ತಾಲ್ಲೂಕನ್ನು ಭಾರತದ ಒಂದು ಟೆಕ್ಸ್ ಟೈಲ್ ಮತ್ತು ಸಿದ್ದಉಡುಪು ಹಬ್ ಆಗಿಸುವ ಕನಸು ನನ್ನದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಶಾಹಿ ಎಕ್ಸ್ ಪೋರ್ಟ್ಸ್ ನ ಸಿದ್ಧ ಉಡುಪು ತಯಾರಿಕಾ ಘಟಕಕ್ಕೆ ಭೂಮಿಪೂಜೆ, ಶಂಕುಸ್ಥಾಪನೆ ನೆರವೇರಸಿ ಮಾತನಾಡಿದರು.
ರಾಜ್ಯದ ಜನರ ಕೈಗೆ ಉದ್ಯೋಗ ದೊರೆತು ಸ್ವಾಭಿಮಾನ, ಸ್ವಾವಲಂಬಿ ಬದುಕನ್ನು ಬದುಕಬೇಕು. ಶಿಗ್ಗಾವಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ ಪ್ರಾರಂಭ ವಾಗುತ್ತಿದ್ದು, 29 ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿದೆ. 8-10 ಸಾವಿರ ಜನರಿಗೆ ಬರುವ ಏಪ್ರಿಲ್- ಮೇ ಮಾಹೆಯಲ್ಲಿ ಉದ್ಯೋಗ ನೀಡುವ ಕೆಲಸ ಕ್ಷೇತ್ರದಲ್ಲಿ ಆಗಲಿದೆ. ತಿರುಪ್ಪೂರದ ಜವಳಿ ಉದ್ಯಮದಂತೆ ಬೆಂಗಳೂರಿನಲ್ಲಿ ದೊಡ್ಡ ಗಾರ್ಮೆಂಟ್ ಫ್ಯಾಕ್ಟರಿ ಬಂದಿದೆ. ಅದೇ ರೀತಿ ಶಿಗ್ಗಾವಿಯೂ ಆಗಬೇಕು. ಹಾವೇರಿಯಲ್ಲಿ 1000 ಎಕರೆ ಪ್ರದೇಶದಲ್ಲಿ ಟೌನ್ ಶಿಪ್ ಗಳನ್ನು ಮಾಡಲು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಮುಂಬೈ ಚೆನ್ನೈ ಕಾರಿಡಾರ್ ನಲ್ಲಿ ಬೆಳಗಾವಿ, ಹಾವೇರಿ,ದಾವಣಗೆರೆ , ಚಿತ್ರದುರ್ಗ, ತುಮಕೂರು ವರೆಗೂ ಟೌನ್ ಶಿಪ್ ಆಗುತ್ತಿದ್ದು, ಔದ್ಯೋಗಿಕ ಕ್ರಾಂತಿ ಆಗಲಿದೆ. ದುಡಿಯುವ ವರ್ಗಕ್ಕೆ ಲಾಭ ತಲುಪುವಂತಾಗಬೇಕು. ಹಾವೇರಿಯಲ್ಲಿ ಮೆಗಾ ಡೈರಿ ಕೆಲಸ ಪ್ರಾರಂಭವಾಗಿದೆ. ಹಾವೇರಿ ಹಾಲು ಒಕ್ಕೂಟ ಸ್ಥಾಪನೆಗೆ 30 ಕೋಟಿ ರು. ಮೀಸಲಿಡಲಾಗಿದೆ ಎಂದರು.
*ಜವಳಿ ಉದ್ಯಮ – ಉದ್ಯೋಗ ಮತ್ತು ವಿದೇಶಿ ವಿನಿಮಯಕ್ಕೆ ಪೂರಕ :*
ಜವಳಿ ಉದ್ಯಮ ಹೆಚ್ಚಿನ ಉದ್ಯೋಗಾವಕಾಶವನ್ನು ಒದಗಿಸುತ್ತದೆ. ಉದ್ಯೋಗಾವಕಾಶದ ಜೊತೆಗೆ ವಿದೇಶಿ ವಿನಿಮಯವನ್ನು ಜವಳಿ ಉದ್ಯಮ ಸಾಧ್ಯವಾಗಿಸುತ್ತದೆ. ದೇಶದ ಆರ್ಥಿಕತೆ ಹೆಚ್ಚಾಗಲು ಶಾಹಿ ಸಂಸ್ಥೆಯ ಕಾರ್ಖಾನೆಗಳು ಎಲ್ಲ ಪ್ರದೇಶಗಳಲ್ಲಿ ಬರಬೇಕು. ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಖಾನೆಗಳು ಬಂದಾಗ ಗ್ರಾಮೀಣ ಪ್ರದೇಶದ ಆರ್ಥಿಕತೆ ಅಭಿವೃದ್ಧಿ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯುತ್ತದೆ. ಸಂಸ್ಥೆಯ ಹತ್ತಾರು ಕಾರ್ಖಾನೆಗಳು ಸ್ಥಾಪನೆಯಾಗಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಲಿದೆ. ಸಂಸ್ಥೆಯಲ್ಲಿ ನಮ್ಮ ಮಹಿಳೆಯರು ಮತ್ತು ಪುರುಷರು ಉತ್ತಮವಾಗಿ ಕೆಲಸ ಮಾಡಿ ಸಿದ್ಧ ಉಡುಪುಗಳ ರಿಜೆಕ್ಷನ್ ಪ್ರಮಾಣವನ್ನು ಕಡಿಮೆ ಮಾಡುತ್ತಾರೆ. ನಿರಾಕರಣೆ ಕಡಿಮೆಯಾದರೆ ಲಾಭ ಜಾಸ್ತಿಯಾಗುತ್ತದೆ. ಎಂದು ಭರವಸೆ ನೀಡಿದರು.
*ದೇಶವನ್ನು ಮುನ್ನಡೆಸುವುದು ರೈತ ಮತ್ತು ಕಾರ್ಮಿಕ :*
21 ನೇ ಶತಮಾನ ಜ್ಞಾನದ ಶತಮಾನ, ವಿದ್ಯೆ, ಜ್ಞಾನ ಇದ್ದವರು ಮಾತ್ರ ಜಗತ್ತನ್ನು ಆಳುತ್ತಾರೆ. ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯನ್ನು ಪ್ರಾರಂಭಿಸಿ 1000 ಕೋಟಿ ರೂ. ಮೀಸಲಿಡಲಾಗಿದೆ. ಈ ವರ್ಷ 14 ಲಕ್ಷ ರೈತ ಕುಟುಂಬಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ದುಡಿಮೆಯೇ ದೊಡ್ಡಪ್ಪ ಎಂಬ ಈ ಕಾಲಮಾನದಲ್ಲಿ ದುಡಿಮೆಗೆ ಅವಕಾಶ ಮಾಡಿಕೊಡಲಾಗುವುದು. ರೈತ ಮತ್ತು ಕಾರ್ಮಿಕ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದರು.
*ವಿದ್ಯೆ ಮತ್ತು ಉದ್ಯೋಗಕ್ಕೆ ಪ್ರಾಶಸ್ತ್ಯ:*
ರೈತರಿಗಾಗಿ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ನಲ್ಲಿ ಹೈನುಗಾರಿಕೆ ಮಾತ್ರವಲ್ಲದೆ ಇನ್ನಿತರ ಕೃಷಿ ಕಸುಬುಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮೂಲಕ ಯುವಜನತೆಯ ಆರ್ಥಿಕ ಸಬಲೀಕರಣಕ್ಕೆ ಪ್ರಯತ್ನಿಸಲಾಗುವುದು. ಶಿಕ್ಷಣ ಸಂಸ್ಥೆಗಳೂ ಇಲ್ಲಿ ಬರಲಿದೆ. ವಿದ್ಯೆ ಮತ್ತು ಉದ್ಯೋಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ಕೃಷಿ ಆಧಾರಿತ ಹಾಗೂ ಹತ್ತಿ ಆಧಾರಿತ ಬೆಳೆಗಾರರಿಗೆ
ಅನುಕೂಲ ಕಲ್ಪಿಸಲಾಗುವುದು ಎಂದರು.
Post a Comment