ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರಿನಲ್ಲಿ ಬೆಂಗಳೂರು ಟೆಕ್ ಸಮಿಟ್ ೨೦೨೨ ಅಂಗವಾಗಿ ಐಟಿ ಬಿಟಿ ಕಂಪನಿಗಳ ಸಿಇಒಗಳ ಜತೆ ಸಮಾಲೋಚನೆ ನಡೆಸಿದರು. ಇದೇ ಸಂದರ್ಭದಲ್ಲಿ ಅವರು ಟೆಕ್ ಸಮಿಟ್ ಥೀಮ್ ಬಿಡುಗಡೆ ಮಾಡಿದರು. ಐಟಿ, ಬಿಟಿ ಖಾತೆ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಅವರು ಟೆಕ್ ಸಮಿಟ್ ನ ಬ್ರೌಷರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಐಟಿ ಬಿಟಿ ಇಲಾಖೆ ಎಸಿಎಸ್ ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ, ಐಟಿ ದಿಗ್ಗಜರಾದ ಕ್ರಿಸ್ ಗೋಪಾಲಕೃಷ್ಣ ಸೇರಿದಂತೆ ಇತರೆ ಸಿಇಒಗಳು ಸಭೆಯಲ್ಲಿ ಭಾಗವಹಿಸಿದ್ದರು.
Post a Comment