ಡೆನ್ಮಾರ್ಕ್, ಮೇ 4: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಲ್ಲಿನ ಟೈಮ್ಸ್ ಸ್ಕ್ವಯರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ರಾಕ್‌ಸ್ಟಾರ್‌ನಂಥ ಭವ್ಯ ಸ್ವಾಗತ ಸಿಕ್ಕಿತ್ತು. ಅದನ್ನು ತಸು ನೆನಪಿಸುವಂತಹ ಸ್ವಾಗತ ಮೋದಿಗೆ ಡೆನ್ಮಾರ್ಕ್‌ನಲ್ಲಿ ದೊರಕಿತು.

ಡೆನ್ಮಾರ್ಕ್, ಮೇ 4: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಲ್ಲಿನ ಟೈಮ್ಸ್ ಸ್ಕ್ವಯರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ರಾಕ್‌ಸ್ಟಾರ್‌ನಂಥ ಭವ್ಯ ಸ್ವಾಗತ ಸಿಕ್ಕಿತ್ತು. ಅದನ್ನು ತಸು ನೆನಪಿಸುವಂತಹ ಸ್ವಾಗತ ಮೋದಿಗೆ ಡೆನ್ಮಾರ್ಕ್‌ನಲ್ಲಿ ದೊರಕಿತು.ಡೆನ್ಮಾರ್ಕ್‌ನಲ್ಲಿರುವ ಭಾರತೀಯ ಮೂಲದ ಸಮುದಾಯದವರು ನರೇಂದ್ರ ಮೋದಿಯನ್ನ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಅಲ್ಲೇ ಇದ್ದ ಡೆನ್ಮಾರ್ಕ್ ಪ್ರಧಾನಿ ಮೆಟೆ ಫ್ರೆಡೆರಿಕ್ಸನ್‌ರನ್ನ (Denmark PM Mette Frederiksen) ಈ ದೃಶ್ಯ ಆಶ್ಚರ್ಯ ಚಕಿತಗೊಳಿಸಿತ್ತು.

"ಒಬ್ಬ ರಾಜಕಾರಣಿಯನ್ನ ಹೇಗೆ ಸ್ವಾಗತ ಮಾಡಬೇಕೆಂಬುದು ಭಾರತೀಯರಿಗೆ ಗೊತ್ತಿದೆ. ನೀವು ನಮ್ಮ ಡೆನ್ಮಾರ್ಕ್ ಜನತೆಗೂ ಕಲಿಸಿಕೊಡಿ" ಎಂದು ಭಾರತೀಯ ಸಮುದಾಯದವರಿಗೆ ಮೆಟೆ ಮನವಿ ಮಾಡಿದರು.

ಭಾಷೆ ಯಾವುದೇ ಆದ್ರೂ, ಸಂಸ್ಕೃತಿಯಲ್ಲಿ ನಾವು ಭಾರತೀಯರು; ಮೋದಿ

ನಿನ್ನೆ ಮಂಗಳವಾರ ಡೆನ್ಮಾರ್ಕ್‌ನ ಕೋಪನ್ ಹೇಗನ್ (Copenhagen) ನಗರದಲ್ಲಿ ಈ ಘಟನೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಾರತೀಯ ಸಮುದಾಯದವರು ನರೇಂದ್ರ ಮೋದಿ ಜೊತೆಗೆ ಡೆನ್ಮಾರ್ಕ್ ಪ್ರಧಾನಿ ಮೆಟೆ ಫ್ರೆಡರಿಕ್ಸನ್ ಅವರನ್ನೂ ಭವ್ಯ ರೀತಿಯಲ್ಲಿ ಸ್ವಾಗತ ಮಾಡಿದರು. "ಮೋದಿ, ಮೋದಿ", "ಮೋದಿ ಹೈ ತೊ ಮುಮ್ಕೀನ್ ಹೈ" (ಮೋದಿ ಇದ್ರೆ ಸಾಧ್ಯ) ಎಂಬಿತ್ಯಾದಿ ಸ್ಲೋಗನ್‌ಗಳು ಕಾರ್ಯಕ್ರಮದ ಆಡಿಟೋರಿಯಂನಲ್ಲಿ ಪ್ರತಿಧ್ವನಿಸಿದವು.

"ಡೆನ್ಮಾರ್ಕ್‌ನಲ್ಲಿ ವಾಸಿಸುತ್ತಿರುವ ಮತ್ತು ಕೆಲಸ ಮಾಡುತ್ತಿರುವ ಎಲ್ಲಾ ಭಾರತೀಯರೂ ಈ ದೇಶದ ಸಮಾಜಕ್ಕೆ ಸಕಾರಾತ್ಕವಾಗಿ ಕೊಡುಗೆ ನೀಡುತ್ತಿದ್ದಾರೆ. ನಿಮ್ಮೆಲ್ಲರಿಗೂ ಧನ್ಯವಾದ... ಭಾರತೀಯರು ವಿಶ್ವದಲ್ಲಿ ಎಲ್ಲೇ ಹೋಗಲಿ ತಮ್ಮ ಕರ್ಮಭೂಮಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾರೆ" ಎಂದು ಭಾರತೀಯ ಸಮುದಾಯದವರನ್ನ ಅವರು ಪ್ರಶಂಸಿಸಿದರು.

ಮೋದಿ-ಮ್ಯಾಕ್ರೋನ್ ಭೇಟಿಗೆ ಮುನ್ನವೇ ಭಾರತೀಯ ಸಬ್‌ಮರೀನ್ ಪ್ರಾಜೆಕ್ಟ್‌ನಿಂದ ಫ್ರಾನ್ಸ್ ಔಟ್

"ನಿಮ್ಮ ಜೊತೆ ಇಲ್ಲಿಗೆ ಬಂದಿರುವುದು ಸಂತಸದ ವಿಷಯ. ನನ್ನ ಸ್ನೇಹಿತ ಪ್ರಧಾನಿ ಮೋದಿ, ನಿಮಗೆ ಡೆನ್ಮಾರ್ಕ್‌ಗೆ ಸ್ವಾಗತಿಸಲು ಹೆಮ್ಮೆಯಾಗುತ್ತಿದೆ.." ಎಂದು ಡೆನ್ಮಾರ್ಕ್ ಪ್ರಧಾನಿಗಳು ಈ ಸಂದರ್ಭದಲ್ಲಿ ಹೇಳಿದರು. ಬಳಿಕ ಭಾರತ ಪ್ರಧಾನಿ ನರೇಂದ್ರ ಮೋದಿ ಅವರೂ ಭಾರತೀಯ ಸಮುದಾಯದವರನ್ನ ಉದ್ದೇಶಿಸಿ ಭಾಷಣ ಮಾಡಿದರು.

ನರೇಂದ್ರ ಮೋದಿ ಅವರು ಯೂರೋಪ್ ಪ್ರವಾಸ ಸಂಬಂಧ ಜರ್ಮನಿ ಬಳಿಕ ಡೆನ್ಮಾರ್ಕ್‌ಗೆ ಎರಡು ದಿನದ ಭೇಟಿ ಮಾಡಿದ್ದಾರೆ. ನಿನ್ನೆ ಅವರು ಪ್ರಧಾನಿ ಮೆಟೆ ಅವರನ್ನ ಭೇಟಿಯಾಗಿ ವಿವಿಧ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು. ಹಾಗೆಯೇ, ಡೆನ್ಮಾರ್ಕ್ ಸಾಮ್ರಾಜ್ಯದ ರಾಣಿ ಮಾರ್ಗರೆಥೆ-2 (Queen Margrethe II) ಅವರನ್ನ ನರೇಂದ್ರ ಮೋದಿ ಭೇಟಿಯಾದರು. ಇದೇ ವೇಳೆ, ಈ ರಾಜಮನೆತನದ ಇತರ ಸದಸ್ಯರನ್ನೂ ಮೋದಿ ಭೇಟಿಯಾದರು. ಬಳಿಕ ರಾಣಿ ಆಹ್ವಾನದ ಮೇರೆಗೆ ಅರಮನೆಯಲ್ಲಿ ಮೋದಿ ಔತಣಕೂಟದಲ್ಲಿ ಪಾಲ್ಗೊಂಡರು.ಇದೀಗ ನಾರ್ಡಿಕ್ ದೇಶಗಳಾದ (Nordic Nations) ಡೆನ್ಮಾರ್ಕ್, ಐಸ್‌ಲೆಂಡ್, ಫಿನ್ಲೆಂಡ್, ಸ್ವೀಡನ್ ಮತ್ತು ನಾರ್ವೆ ಜೊತೆ ಭಾರತದ ಸಂಬಂಧ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಪರಿಶೀಲಿಸಲು ಇಂದು ಡೆನ್ಮಾರ್ಕ್‌ನಲ್ಲಿ ಇಂಡಿಯಾ-ನಾರ್ಡಿಕ್ ಶೃಂಗಸಭೆ ನಡೆಯಲಿದೆ.

2018ರಲ್ಲಿ ಸ್ವೀಡನ್‌ನ ಸ್ಟಾಕ್‌ಹಾಮ್‌ನಲ್ಲಿ ಮೊದಲ ಶೃಂಗಸಭೆ ನಡೆದಿತ್ತು. ಈಗ ಮೂರ್ನಾಲ್ಕು ವರ್ಷಗಳ ಬಳಿಕ ನಾರ್ಡಿಕ್ ದೇಶಗಳೊಂದಿಗೆ ಭಾರತ ನೇರ ಮಾತುಕತೆ ನಡೆಸುತ್ತಿದೆ. ಡೆನ್ಮಾರ್ಕ್, ಫಿಲ್ನೆಂಡ್, ಐಸ್ಲೆಂಡ್, ಸ್ವೀಡನ್ ಮತ್ತು ನಾರ್ವೆ ದೇಶಗಳ ಮುಖಂಡರ ಜೊತೆ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

Post a Comment

Previous Post Next Post