ಕಾಂಗ್ರೆಸ್ ಚಟುವಟಿಕೆ: . ಈ ಪ್ರಕರಣವನ್ನು ಕೇವಲ ಎಸಿಬಿ ಮಾತ್ರವಲ್ಲ, ಕೇಂದ್ರದ ತನಿಖಾ ಸಂಸ್ಥೆಗಳೂ ತನಿಖೆ ಮಾಡಬೇಕು.

[07/05, 11:52 AM] Ravi Gowda. Kpcc. official: *ಡಿ.ಕೆ. ಶಿವಕುಮಾರ್ ಅವರು ಹುಬ್ಬಳ್ಳಿ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ್ದು...*

ಬಿಜೆಪಿಯಲ್ಲಿ ಯಾರಾದರೂ ಮುಖ್ಯಮಂತ್ರಿ ಆಗಬೇಕಾದರೆ 2500 ಕೋಟಿ ಹಣ ನೀಡಬೇಕು ಎಂದು ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವರು, ಹಾಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯದ ಜನತೆಗೆ ತಿಳಿಸಿದ್ದಾರೆ.

ಇಡೀ ದೇಶವೇ ತಲ್ಲಣಗೊಳ್ಳುವ ಈ ಸುದ್ದಿಯನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದು, ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ.

ಇನ್ನು ಮಂತ್ರಿ ಸ್ಥಾನಕ್ಕೆ 50 ರಿಂದ 100 ಕೋಟಿ ಹಣ ನೀಡಬೇಕು ಎಂದು ಕೇಳಿರುವ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. ಈ ವಿಚಾರವಾಗಿ ಎಸಿಬಿ ತನಿಖೆಯಾಗಬೇಕು ಎಂದು ನಾನು ಒತ್ತಾಯಿಸಿರುವುದಾಗಿ ಮಾಧ್ಯಮಗಳು ಪ್ರಕಟಿಸಿವೆ. ಈ ಪ್ರಕರಣವನ್ನು ಕೇವಲ ಎಸಿಬಿ ಮಾತ್ರವಲ್ಲ, ಕೇಂದ್ರದ ತನಿಖಾ ಸಂಸ್ಥೆಗಳೂ ತನಿಖೆ ಮಾಡಬೇಕು.

ಮುಖ್ಯಮಂತ್ರಿಗಳಿಗೆ ಅವರ ಪಕ್ಷದ ಗೌರವ ಉಳಿಸಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಆದರೆ ಅವರಿಗೆ ರಾಜಕೀಯ ಬದ್ಧತೆ ಇದ್ದರೆ ರಾಜ್ಯದಲ್ಲಿ ನಡೆದಿರುವ ಅನೇಕ ಹಗರಣಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು.

ಈ ಸರ್ಕಾರ ಹುಟ್ಟಿದ್ದೇ ಶಾಸಕರನ್ನು ಖರೀದಿ ಮಾಡಿ. ಶಾಸಕ ಶ್ರೀನಿವಾಸಗೌಡರು ವಿಧಾನಸಭೆಯಲ್ಲಿ ಸಚಿವ ಅಶ್ವಥ್ ನಾರಾಯಣ ಹಾಗೂ ಯೋಗೀಶ್ವರ್ ಅವರು 30 ಕೋಟಿ ಹಣ ನೀಡುವುದಾಗಿ ಹೇಳಿ 5 ಕೋಟಿ ಮುಂಗಡ ಕೊಟ್ಟು ಹೋಗಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ಬಿ.ಸಿ. ಪಾಟೀಲ್ ಮತ್ತಿತರ ನಾಯಕರುಗಳು ಆಮಿಷ ಒಡ್ಡಿರುವ ಸಂಭಾಷಣೆ ಗಮನಿಸಿದ್ದೇವೆ. ಹೆಬ್ಬಾರ್, ರಹೀಂ ಖಾನ್ ಅವರು ಈ ಬಗ್ಗೆ ಬಹಿರಂಗವಾಗಿಯೇ ಹೇಳಿದ್ದರು.

ಅಂತಿಮವಾಗಿ ಬಿಜೆಪಿಯವರು ಆಪರೇಷನ್ ಕಮಲದಲ್ಲಿ ಯಶಸ್ವಿಯಾಗಿ ಈ ಸರ್ಕಾರವನ್ನು ರಚಿಸಿದ್ದಾರೆ.

ನಂತರ ನಡೆದ ಉಪಚುನಾವಣೆಗಳಲ್ಲಿ ಎಷ್ಟು ಹಣ ಖರ್ಚು ಮಾಡಲಾಗಿತ್ತು ಎಂಬ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. 

ಆದರೆ ಈಗ ಕೋವಿಡ್ ಅಕ್ರಮ, ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್, ವಿವಿಧ ಇಲಾಖೆಗಳ ನೇಮಕಾತಿ ಅಕ್ರಮ, ಒಂದೊಂದು ಹುದ್ದೆಗೆ ಒಂದೊಂದು ರೇಟ್ ನಿಗದಿ, ಪೊಲೀಸ್ ಇಲಾಖೆಯಲ್ಲಿ ಎಸ್ಐ, ಎಸ್ಪಿ, ಡಿವೈಎಸ್ಪಿ ಸೇರಿದಂತೆ ವಿವಿಧ ಹುದ್ದೆಗಳಿಗೆ ವಿವಿಧ ದರ ನಿಗದಿ ಆಗಿರುವುದರ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದಿದೆ. 

ಈಗ ಮಂತ್ರಿ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ದರ ನಿಗದಿ ಆಗಿರುವುದರ ಬಗ್ಗೆ ಬಿಜೆಪಿ ಶಾಸಕರು ಆರೋಪ ಮಾಡಿದ್ದಾರೆ. 

ಈ ಹಿಂದೆ ಯಡಿಯೂರಪ್ಪನವರ ವಿರುದ್ಧ ವಿಶ್ವನಾಥ್ ಅವರು ಕೊಟ್ಟ ಹೇಳಿಕೆ ಬಗ್ಗೆ ಯಾವುದೇ ಚರ್ಚೆ ಮಾಡಲಿಲ್ಲ, ತನಿಖೆಯನ್ನೂ ನಡೆಸಿಲ್ಲ. ಇನ್ನು ಯತ್ನಾಳ್ ಅವರು ಕರ್ನಾಟಕ ಲೋಕಸೇವಾ ಆಯೋಗ ಸದಸ್ಯರಾಗಲು ಹಾಗೂ ಅಧ್ಯಕ್ಷರಾಗಲು ಕೋಟ್ಯಂತರ ರೂಪಾಯಿ ಹಣ ನೀಡಬೇಕು ಎಂದು ಹೇಳಿದ್ದಾರೆ. ಅದರ ಬಗ್ಗೆಯೂ ಸರ್ಕಾರ ಮಾತನಾಡಲಿಲ್ಲ.

ಹೀಗೆ ಪ್ರತಿ ವಿಚಾರದಲ್ಲೂ ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗುತ್ತಿರುವಾಗ ಸರ್ಕಾರ ತನಿಖೆ ನಡೆಸದೆ ಸುಮ್ಮನೆ ಕೂತಿರುವುದು ಏಕೆ?

ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ತನಿಖಾ ಸಂಸ್ಥೆಗಳು ಸುಮ್ಮನೆ ಕೂತಿರುವುದು ಏಕೆ? ನನ್ನ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ಹೆಸರಲ್ಲಿ ಸಿಬಿಐಗೆ ತನಿಖೆಗೆ ಅವಕಾಶ ನೀಡಲು ಬರುವುದಿಲ್ಲ ಎಂದು ಅಡ್ವೊಕೇಟ್ ಜನರಲ್ ಅವರು ಸಲಹೆ ನೀಡಿದರೂ ಯಡಿಯೂರಪ್ಪನವರು ಸಿಬಿಐ ವಿಚಾರಣೆಗೆ ಅನುಮತಿ ಕೊಟ್ಟಿದ್ದರು.

ಎಲ್ಲ ಅಕ್ರಮಗಳನ್ನು ಮುಖ್ಯಮಂತ್ರಿಗಳು ರಕ್ಷಣೆ ಮಾಡುತ್ತಿದ್ದಾರೋ ಅಥವಾ ಅವರ ಪಕ್ಷದವರು ರಕ್ಷಣೆ ಮಾಡುತ್ತಿದ್ದಾರೋ? ಆ ಮೂಲಕ ಸಂವಿಧಾನವನ್ನು ಸುಡಲು ನಿರ್ಧರಿಸಿದ್ದಾರೋ? ಎಲ್ಲಾ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳೇ ಉತ್ತರ ನೀಡಬೇಕು.

ಕೇಂದ್ರದ ತನಿಖಾ ಸಂಸ್ಥೆಗಳು 24 ಗಂಟೆಗಳಲ್ಲಿ ಯತ್ನಾಳ್ ಅವರನ್ನು ವಶಕ್ಕೆ ಪಡೆದು ಯಾರು ಅವರ ಬಳಿ ಬಂದು ಲಂಚ ಕೇಳಿದ್ದರು ಎಂಬ ಮಾಹಿತಿ ಪಡೆದು, ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸುತ್ತೇನೆ.'

*ಪ್ರಶೋತ್ತರ:*

ಯತ್ನಾಳ್ ಅವರ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, 'ಹಾಗಾದರೆ ಈ ಅಕ್ರಮದಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಭಾಗಿಯಾಗಿದ್ದಾರೆ. ಹೀಗಾಗಿ ಅವರು ಈ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಯತ್ನಾಳ್ ಅವರು ಯಾರ ಹೆಸರು  ಹೇಳದಿದ್ದರು, ಮುಖ್ಯಮಂತ್ರಿ ಸ್ಥಾನಕ್ಕೆ ಲಂಚ ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಪ್ರಕರಣದ ವಿಚಾರಣೆ ನಡೆಯಬೇಕು. ಈ ಅಕ್ರಮವನ್ನು ಕಟೀಲ್ ಅವರು ರಕ್ಷಣೆ ಮಾಡುತ್ತಿದ್ದಾರೆ. ಪಕ್ಷ ಹಾಗೂ ಪಕ್ಷದ ನಾಯಕರ ದುರಾಡಳಿತ,  ಲಂಚದ ನಾಟ್ಯವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ನಮ್ಮ ದಲಿತ ಶಾಸಕರು ಪಕ್ಷದ ಪರವಾಗಿ ಪತ್ರಿಕಾಗೋಷ್ಠಿ ನಡೆಸಿ ಬಯಲಿಗೆಳೆದರೆ, ಅವರಿಗೆ ನೋಟಿಸ್ ನೀಡುವ ಸರ್ಕಾರ ಬಿಜೆಪಿ ನಾಯಕರುಗಳಿಗೆ ಯಾಕೆ ನೋಟಿಸ್ ನೀಡುತ್ತಿಲ್ಲ? ಯತ್ನಾಳ್ ಅವರು ಕೇಂದ್ರದ ಮಾಜಿ ಸಚಿವರಾಗಿದ್ದವರು, ಜವಾಬ್ದಾರಿಯುತ ನಾಯಕರು. ಅವರು ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸ್ಥಿತಿಯಲ್ಲಿಲ್ಲ. ಅವರು ನಮ್ಮನ್ನು ಬೇಕಾದರೆ ಮಾನಸಿಕ ಆಸ್ಪತ್ರೆಗೆ ದಾಖಲಿಸುತ್ತಾರೆ. ಮಿಸ್ಟರ್ ಬಿಜೆಪಿ ರಾಜ್ಯಾಧ್ಯಕ್ಷರೇ, ನಿಮ್ಮ ಮುಖಂಡತ್ವದಲ್ಲಿ ನಿಮ್ಮ ಪಕ್ಷದ ನಾಯಕರು ರಾಜ್ಯದಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ನಿಮ್ಮ ಮುಖ್ಯಮಂತ್ರಿಗಳು ನನ್ನ ಆಡಳಿತ ಚುರುಕು ಮಾಡಿದರೆ ಶಿವಕುಮಾರ್ ಅವರ ರಾಜಕಾರಣ ಮುಕ್ತಾಯವಾಗಲಿದೆ ಎಂದು ಹೇಳುತ್ತಾರೆ. ಮೊದಲು ನಿಮ್ಮ ಪಕ್ಷದ ಶಾಸಕರು ಹೇಳುತ್ತಿರುವ ವಿಚಾರವಾಗಿ ರಾಜ್ಯದ ಜನತೆಗೆ ಉತ್ತರ ನೀಡಿ ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ' ಎಂದರು.

ಪಿಎಸ್ಐ ನೇಮಕಾತಿ ಅಕ್ರಮ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 'ನೇಮಕಾತಿ ಅಕ್ರಮದಲ್ಲಿ ಸರ್ಕಾರ ಕೇವಲ ಫಲಾನುಭವಿಗಳನ್ನು ಮಾತ್ರ ಬಂಧಿಸುತ್ತದೆ. ಇವರು ಅಕ್ರಮದ ಅಂಗಡಿ ತೆರೆದ ಕಾರಣಕ್ಕೆ ಅವರು ಇದರಲ್ಲಿ ಭಾಗಿಯಾಗಿದ್ದಾರೆ. ಆದರೆ ಈ ಅಕ್ರಮದಲ್ಲಿ ಯಾರೆಲ್ಲಾ ಪ್ರಭಾವಿ ಮಂತ್ರಿಗಳು ಭಾಗಿಯಾಗಿದ್ದಾರೆ, ಬೆಂಬಲವಾಗಿ ನಿಂತಿದ್ದಾರೆ ಎಂಬುದು ಗೊತ್ತಾಗಬೇಕು. ಸಚಿವ ಸ್ವತಃ ನಾರಾಯಣ್ ಅವರು ಕರೆ ಮಾಡದಿದ್ದರೆ ಅಕ್ರಮ ಆರೋಪ ಹೊತ್ತಿರುವ ಅಭ್ಯರ್ಥಿಯನ್ನು ಪೊಲೀಸರು ವಿಚಾರಣೆ ಮಾಡದೆ ಬಿಡುತ್ತಿದ್ದರೇ? ಎಲ್ಲರನ್ನೂ ಕರೆಸಿ ವಿಚಾರಣೆ ಮಾಡುವಾಗ, ಸಚಿವರಿಗೆ ಬೇಕಾದ ಅಭ್ಯರ್ಥಿಯನ್ನು ಮಾತ್ರ ಬಿಟ್ಟು ಕಳುಹಿಸಿದ್ದಾರೆ. ಈ ವಿಚಾರವಾಗಿ ಕುಮಾರಸ್ವಾಮಿಯವರು ಸತ್ಯ ತಿಳಿಸಿದ್ದಾರೆ. ಅಶ್ವತ್ ನಾರಾಯಣ್ ಅವರು ಮೊದಲಿನಿಂದಲೂ ನರ್ಸಿಂಗ್ ಮಾರ್ಕ್ಸ್ ಕಾರ್ಡ್, ಸರ್ಟಿಫಿಕೇಟ್ ಗಳನ್ನು ಕೊಟ್ಟು ದಂಧೆ ನಡೆಸುತ್ತಿದ್ದರು ಎಂದು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿಯೊಬ್ಬರು ಈ ಗಂಭೀರ ಆರೋಪ ಮಾಡಿದ್ದು ಈ ವಿಚಾರವಾಗಿ ಸರ್ಕಾರ ಕೂಡಲೇ ತನಿಖೆಗೆ ಆದೇಶಿಸಬೇಕು. ಮುಖ್ಯಮಂತ್ರಿಗಳಾಗಿದ್ದವರು ಆಧಾರ ಇಲ್ಲದೆ ಆರೋಪ ಮಾಡುತ್ತಾರಾ? ಅವರ ಆರೋಪ ಸುಳ್ಳಾಗಿದ್ದರೆ ಸುಳ್ಳು ಹೇಳಿದ ಕಾರಣಕ್ಕೆ ಅವರ ವಿರುದ್ಧವೇ ಪ್ರಕರಣ ದಾಖಲಿಸಲಿ' ಎಂದು ಆಗ್ರಹಿಸಿದರು.

ಈ ಪ್ರಕರಣವನ್ನು ಸರ್ಕಾರ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ, 'ಖಂಡಿತವಾಗಿಯೂ ಸರ್ಕಾರ ಎಲ್ಲಾ ಅಕ್ರಮಗಳನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ. ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ರಾಜಕಾರಣಿಗಳು, ಮಂತ್ರಿಗಳು, ಶಾಸಕರು ಹೆಸರನ್ನು ಬಹಿರಂಗಪಡಿಸುತ್ತಿಲ್ಲ. ಈ ಅಕ್ರಮಗಳಿಗೆ ಯಾರು ಬೆಂಬಲವಾಗಿ ನಿಂತರು, ಯಾರು ಅಕ್ರಮವಾಗಿ ಕೆಲಸ ಕೊಡಿಸಲು ಮುಂದಾದರು ಎಂಬುದರ ಬಗ್ಗೆ ದೊಡ್ಡ ಪಟ್ಟಿಯೇ ನನ್ನ ಕಿವಿಗೆ ಬೀಳುತ್ತಿದೆ' ಎಂದರು.

ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದ ನೇಮಕದಲ್ಲಿ ಅಕ್ರಮ ನಡೆದಿರುವ ಗುಮಾನಿ ಇದೆ ಎಂಬ ಪ್ರಶ್ನೆಗೆ, 'ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಲಿ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆಗಲಿ ನೇಮಕಾತಿ ಅಕ್ರಮ ನಡೆದಿದ್ದರೆ ಅದರ ಬಗ್ಗೆಯೂ ಸರ್ಕಾರ ತನಿಖೆಗೆ ಆದೇಶಿಸಲಿ. ನಾನು ಇಂಧನ ಸಚಿವನಾಗಿದ್ದ ಸಮಯದಲ್ಲಿ ಸುಮಾರು ಮೂವತ್ತು ಸಾವಿರ ಹುದ್ದೆಗಳ ನೇಮಕ ಮಾಡಿದ್ದೇನೆ.  ಯಾರಾದರೂ ಒಬ್ಬರು ನಾನು ಶಿವಕುಮಾರ್ ಅವರಿಗೆ ಲಂಚ ಕೊಟ್ಟು ಕೆಲಸಕ್ಕೆ ಸೇರಿದ್ದೇನೆ ಎಂದು ಹೇಳಿದರೆ ನಮಗೂ ಹಗ್ಗ ಹಾಕಿ' ಎಂದರು.

ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸುತ್ತೀರಾ ಎಂಬ ಪ್ರಶ್ನೆಗೆ, 'ಈ ಹಗರಣಗಳ ಬಗ್ಗೆ ಮೊದಲು ತನಿಖೆ ಮಾಡಬೇಕು. ಅವರ ರಾಜೀನಾಮೆ ಪಡೆಯುವುದು, ಬಿಡುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ರಾಜಿನಾಮೆ ಕೊಡಿ ಎಂದು ಆಗ್ರಹಿಸಿದ ಮಾತ್ರಕ್ಕೆ ಅವರು ರಾಜೀನಾಮೆ ನೀಡುತ್ತಾರಾ? ಕೇವಲ ಮಾಧ್ಯಮಗಳಲ್ಲಿ ಸುದ್ದಿಯಾಗಲು ಇಂತಹ ಆಗ್ರಹಗಳನ್ನು ನಾನು ಮಾಡುವುದಿಲ್ಲ. ಮುಖ್ಯಮಂತ್ರಿಗಳ ಹುದ್ದೆಗೆ ಲಂಚ ನೀಡಬೇಕು ಎಂಬ ವಿಚಾರ ಎಲ್ಲಾ ಮಾಧ್ಯಮಗಳಲ್ಲೂ ವರದಿಯಾಗಿವೆ. ಇದೊಂದು ಗಂಭೀರ ಆರೋಪವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹದೊಂದು ಗಂಭೀರ ಆರೋಪವನ್ನು ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಕೇಳಿರಲಿಲ್ಲ' ಎಂದರು.

ಈ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಮುಂದಿನ ನಡೆ ಏನು ಎಂಬ ಪ್ರಶ್ನೆಗೆ, 'ಈ ವಿಚಾರವನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ರಾಜಕೀಯ ಪಕ್ಷವಾಗಿ ನಾವು ರಾಜ್ಯದ ಪ್ರತಿ ತಾಲೂಕಿನಲ್ಲೂ ಜನರಿಗೆ ಈ ವಿಚಾರ ತಿಳಿಸುತ್ತೇವೆ. ಈ ಕುರಿತು ಹೋರಾಟ ರೂಪಿಸುತ್ತೇವೆ' ಎಂದು ಉತ್ತರಿಸಿದರು.

ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ನ್ಯಾಯ ಸಿಗುತ್ತಿಲ್ಲ ಎಂಬ ಬಗ್ಗೆ ಉತ್ತರಿಸಿದ ಅವರು, 'ಸಚಿವ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ರಮೇಶ್ ಜಾರಕಿಹೊಳಿ ಅವರು ಸಂತೋಷ್ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿ ಏನು ಹೇಳಿದ್ದಾರೆ? ಸಂತೋಷ್ ಪಾಟೀಲ್ ಕೆಲಸ ಮಾಡಿರುವುದಾಗಿ ಇವರೆಲ್ಲರೂ ಹೇಳಿದ್ದಾರೆ. ಅನೇಕರು ಸಂತೋಷ್ ಪಾಟೀಲ್ ಕಾಮಗಾರಿಗಾಗಿ ಹಣ ನೀಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಮಂತ್ರಿಗಳೇ ಅಲ್ಲಿ ಕೆಲಸ ನಡೆದಿರುವುದಾಗಿ ಹೇಳಿರುವಾಗ ಸರ್ಕಾರ ಮೊದಲು ಆ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಆ ಕುಟುಂಬ ಸಂತೋಷ್ ಪಾಟೀಲ್ ಅವರನ್ನು ಕಳೆದುಕೊಂಡಿದೆ. ಆತ ಸಾಯುವ ಮುನ್ನ ದೆಹಲಿಯಲ್ಲಿ ಮಾಧ್ಯಮದವರ ಜತೆ ಮಾತಾಡಿದ್ದರು ಹಾಗೂ ಮುಖ್ಯಮಂತ್ರಿಗಳು, ಕೇಂದ್ರ ಸಚಿವರಿಗೆ ಮನವಿ ಮಾಡಿದ್ದರು. ಸರ್ಕಾರ ಈ ವಿಚಾರವಾಗಿ ಯಾವ ರೀತಿ ತನಿಖೆ ಮಾಡುತ್ತದೆ ಎಂಬುದನ್ನು ಕಾದು ನೋಡೋಣ' ಎಂದರು.

ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ ಪಾಟೀಲ, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ ಮತ್ತಿತರರು ಇದ್ದರು.
[07/05, 3:34 PM] Ravi Gowda. Kpcc. official: ಬೆಳಗಾವಿ ತಾಲೂಕಿನ ಅರಳೀಕಟ್ಟಿ ಗ್ರಾಮದ ಶ್ರೀ ತೋಂಟದಾರ್ಯ ವಿರಕ್ತ ಮಠದ ಶ್ರೀ ಶಿವಮೂರ್ತಿ ದೇವರ ಪಟ್ಟಾಧಿಕಾರ ಮಹೋತ್ಸವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಗದಗದ ತೋಂಟದಾರ್ಯ ಮಠದ ಶ್ರೀ ತೋಂಟದ ಸಿದ್ದರಾಮಸ್ವಾಮಿ, ಹುಕ್ಕೇರಿಯ ಗುರುಶಾಂತೇಶ್ವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್, ಮಹಾಂತೇಶ ಕೌಜಲಗಿ, ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ‌ ಮತ್ತಿತರರು ಭಾಗವಹಿಸಿದ್ದರು.
[07/05, 4:32 PM] Ravi Gowda. Kpcc. official: ಮಾನ್ಯ ಗೃಹ ಸಚಿವರೇ,

ದಕ್ಷತೆಗೆ ಹೆಸರಾಗಿದ್ದ ಪೊಲೀಸ್ ವ್ಯವಸ್ಥೆ ನಿಮ್ಮ ಉಸ್ತುವಾರಿಯಲ್ಲಿ ಅನಗ್ಯವಾದ ಕಳಂಕ ಹೊತ್ತುಕೊಳ್ಳುತ್ತಿದೆ. ಸಾರ್ವಜನಿಕ ವಲಯದಲ್ಲಿರುವ ಆಡಿಯೋ ಕ್ಲಿಪ್ ನ ನೈಜ್ಯತೆಯನ್ನು ದೃಢಪಡಿಸಿಕೊಳ್ಳಲಾಗದಷ್ಟು ಮಟ್ಟಿಗೆ ಸಿಐಡಿ ದುರ್ಬಲವಾಗಿದೆ ಎಂದು ಅನಿಸುವುದಿಲ್ಲ. ನಿಮ್ಮ ಒತ್ತಡದಿಂದ ಕೈಕಟ್ಟಿಕೊಂಡು, ಕುದುರೆ ಕಣ್ಣಿನಂತೆ ಹಗರಣವನ್ನು ನೋಡುತ್ತಿದೆ.

ಈಗಾಗಲೇ ನಡೆದಿರುವ ಪಿಎಸ್‍ಐನ 545 ಮತ್ತು ಮುಂದೆ ನಡೆಯಬೇಕಿರುವ 402 ಪಿಎಸ್‍ಐ ಹುದ್ದೆಗಳ ಅಕ್ರಮಗಳಿಂದ ಕಂಗಾಲಾಗಿರುವ ನೀವು ಹೊಣೆಗಾರಿಕೆ ತಪ್ಪಿಸಿಕೊಳ್ಳಲು ಪ್ರತಿಕ್ರಿಯಿಸುತ್ತಿದ್ದೀರಾ ಎನಿಸುತ್ತಿದೆ.

ಹಗರಣದಲ್ಲಿ ವಸೂಲಿ ಮಾಡಲಾದ ಹಣ ಮರೆ ಮಾಚಲು ತನಿಖೆಯಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿದೆ. ಸಣ್ಣಪುಟ್ಟ ಆರೋಪಿಗಳನ್ನು ಹಿಡಿದು ಜಂಬ ಕೊಚ್ಚಿಕೊಳ್ಳಬೇಡಿ. ಪಿಎಸ್‍ಐ ಹುದ್ದೆ ಕೊಡಿಸಲು ಸಂಗ್ರಹಿಸಲಾದ ಹಣ ಎಲ್ಲೆಲ್ಲಿ ಹೋಗಿದೆ, ಯಾರಿಗೆಲ್ಲಾ ಹಂಚಿಕೆಯಾಗಿದೆ ಎಂದು ಪತ್ತೆ ಹಚ್ಚಿ, ವಶ ಪಡಿಸಿಕೊಳ್ಳಲು ಶುರು ಮಾಡಿಸಿ ಸಾಕು, ನಿಮ್ಮ ಸರ್ಕಾರ ತನ್ನಷ್ಟೆಕ್ಕೆ ತಾನೆ ಪತನಗೊಳ್ಳುತ್ತದೆ ಎಂಬ ಮಾತುಗಳಿವೆ.

ಸತ್ಯ ಕಹಿ, ನಿಮಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿ ಪ್ರತಿಪಕ್ಷಗಳತ್ತ ಬೆರಳು ತೋರಿಸಿ ತಮ್ಮನ್ನು ತಾವು ಸಾಚಾ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದೀರಾ. ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ದಿವ್ಯಾ ಹಾಗರಗಿ ಅವರ ಕಾರು, ಆಕೆ ತಲೆ ಮರೆಸಿಕೊಂಡ ಕಾಲಾವಧಿಯಲ್ಲಿ ಯಾರ ಊರಿನಲ್ಲಿ ನಿಂತಿತ್ತು ಎಂಬ ವದ್ಧಂತಿಗಳು ಸಾರ್ವಜನಿಕವಾಗಿ ಹರಿದಾಡುತ್ತಿವೆ. ಜೆ.ಜೆ.ನಗರ ಕೊಲೆ ಪ್ರಕರಣದಲ್ಲಿ ವದ್ಧಂತಿಗಳನ್ನೇ ನಂಬಿ ಹೇಳಿಕೆ ನೀಡಿ, ಕೆಲವೇ ಗಂಟೆಗಳಲ್ಲಿ ಕ್ಷಮೆಯಾಚಿಸಿದ ನಿಮಗೆ, ಪಿಎಸ್‍ಐ ಹಗರಣದಲ್ಲಿನ ವದ್ಧಂತಿಗಳ ಬಗ್ಗೆ ಮಾಹಿತಿ ಇರುವುದಿಲ್ಲವೇ ? ಮೊದಲು ದಿವ್ಯ ಅವರ ಕಾರು ನಿಲುಗಡೆ ಬಗ್ಗೆ ಸ್ಪಷ್ಟನೆ ನೀಡಿ.

ಸಿಐಡಿ ತನಿಖೆಯಲ್ಲಿ ಪಿಎಸ್‍ಐ ಹಗರಣದ ಆರೋಪಿಗಳು ನೀಡಿರುವ ಎಲ್ಲಾ ಹೇಳಿಕೆಗಳನ್ನು ಪಾರದರ್ಶಕವಾಗಿ ಸಾರ್ವಜನಿಕಗೊಳಿಸಿ, ಚೆರಿ ಪಿಕ್ ನಡವಳಿಕೆ ಬಿಡಿ. ಯಾವುದರಲ್ಲೂ ನಿಮ್ಮ ತಪ್ಪಿಲ್ಲ ಎಂದಾದರೆ ಎಲ್ಲದಕ್ಕೂ ಯಾಕೆ ಮೈ ಪರೆಚಿಕೊಳ್ಳುತ್ತಿರಾ ? ಗೃಹ ಸಚಿವರ ಹುದ್ದೆಯ ಘನತೆಯಂತೆ ನಡೆದುಕೊಳ್ಳಿ ಎಂದು ಹಿರಿಯರಾದ ನಿಮಗೆ ಹೇಳಬೇಕೆ ?

ಸಿಐಡಿ ನನಗೆ ನೀಡಿರುವ ನೋಟಿಸ್‍ಗೆ ನಾನು ಲಿಖಿತವಾಗಿ ಉತ್ತರ ನೀಡಿದ್ದೇನೆ. ಎಲ್ಲಿಯೂ ಓಡಿ ಹೋಗಿಲ್ಲ, ‘ನನ್ನ ಕಡೆಯವರು ಅಥವಾ ನಾನು ಯಾರೇ ಭಾಗಿಯಾಗಿದ್ದರು ಮುಲ್ಲಾಜಿಲ್ಲದೆ ಕ್ರಮ ಕೈಗೊಳ್ಳಿ’ ಎಂದು ಮೊದಲ ದಿನದ ಪತ್ರಿಕಾಗೋಷ್ಠಿಯಲ್ಲೇ ನಾನು ಹೇಳಿದ್ದೇನೆ. 

ಇನ್ನೂ ಯಾಕೆ ಮೀನಾಮೇಶ ಎಣಿಸುತ್ತಿದ್ದೀರಿ ?  ಸಾರ್ವಜನಿಕವಾಗಿ ಕೆಸರು ಎರಚಿ ನಿಮ್ಮ ಹುದ್ದೆಯ ಘನತೆಗೆ ಕುಂದುಂಟು ಮಾಡುವ ಬದಲು ದಿಟ್ಟತನ ಕ್ರಮ ಜರುಗಿಸಿ, ದುರ್ಬಲ ಗೃಹ ಸಚಿವ ಎಂಬ ಕಳಂಕದಿಂದ ಹೊರ ಬನ್ನಿ. ನಾವು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಿ ಎಂದು ಕಾಂಗ್ರೆಸ್‍ನವರು ಹೇಳಿದಂತೆ, ಬಿಜೆಪಿಯವರು ಮತ್ತು ನಿಮ್ಮ ಸರ್ಕಾರದ ಸಚಿವರು ಹೇಳಲು ಸಾಧ್ಯವೇ ?

“ನಾನು ಪ್ರಿಯಾಂಕ್ ಖರ್ಗೆ ನಿಮ್ಮ ಸರ್ಕಾರದ ಬಿಟ್ ಕಾಯಿನ್ ಹಗರಣದಿಂದ ಈವರೆಗೂ ಮಾತು ಬದಲಿಸಿಲ್ಲ. ನನ್ನ ಮಾತುಗಳು ಸುಳ್ಳು ಎಂದು ಸಾಬೀತು ಪಡಿಸಲು ನಿಮ್ಮಿಂದ ಆಗಿಲ್ಲ, ಈಗಲೂ ನಿಮ್ಮ ಮುಂದೆ ನನ್ನ ಆರೋಪಗಳ ಸವಾಲಿದೆ. ಮೊದಲು ಅದಕ್ಕೆ ಉತ್ತರಿಸಿ”

https://www.facebook.com/100044474557773/posts/542227683936379/
[07/05, 5:23 PM] Ravi Gowda. Kpcc. official: *ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು*

ನೀರವ್ ಮೋದಿ ವಿಜಯ್ ಮಲ್ಯ ಮೆಕುಲ್ ಚೋಕ್ಸಿ ಅವರು ಯಾವ ರೀತಿ ಹಗರಣ ಮಾಡಿ ದೇಶವನ್ನು ತೊರೆದು ಹೋಗಿದ್ದಾರೋ ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಮಹಾ ವಂಚನೆಯ ಹಗರಣವನ್ನು ಜನರಿಗೆ ತಿಳಿಸಲು ಈ ಪತ್ರಿಕಾಗೋಷ್ಠಿ ಕರೆಯಲಾಗಿದೆ.

ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ ಸೌಭಾಗ್ಯಲಕ್ಷಿ ಶುಗರ್ ಲಿಮಿಟೆಡ್ ಎಂಬ ಸಕ್ಕರೆ ಕಾರ್ಖಾನೆ ಇದ್ದು, ಇದರ ಮಾಲೀಕರು ಶ್ರೀ ಶ್ರೀ ಶ್ರೀ ಸಾಹುಕಾರ್ ರಮೇಶ್ ಜಾರಕಿಹೊಳಿ.

ಅಪೆಕ್ಸ್ ಬ್ಯಾಂಕುಗಳ ಅಡಿಯಲ್ಲಿ ಬರುವ ಸುಮಾರು 15 ಬ್ಯಾಂಕುಗಳಿಂದ 366 ಕೋಟಿ ಸಾಲ ಮಾಡಿದ್ದು, ಯೂನಿಯನ್ ಬ್ಯಾಂಕಿನಿಂದ 20 ಕೋಟಿ, ತೆರಿಗೆ ಇಲಾಖೆಯಿಂದ 200 ಕೋಟಿ ಬಾಕಿ ಉಳಿಸಿಕೊಂಡಿದ್ದು, ಹರಿಯಂತ್ ಸಹಕಾರಿ ಬ್ಯಾಂಕ್ ನಿಂದ 20 ಕೋಟಿ, ಒಟ್ಟು 660 ಕೋಟಿ ಸಾಲ ಹೊಂದಿದ್ದಾರೆ.

2017ರಲ್ಲಿ ಅಪೆಕ್ಸ್ ಬ್ಯಾಂಕಿನವರು ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪನಿಯನ್ನು NPA ಎಂದು ಘೋಷಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಸುಮಾರು 11 ಲಕ್ಷ ಕೋಟಿಯಷ್ಟು ಸಾಲವನ್ನು NPA ಎಂದು ಘೋ,ಣೆ ಮಾಡಿ ಮನ್ನಾ ಮಾಡಲಾಗಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಮೊತ್ತದ NPA ಆಗಿರುವ ಕಂಪನಿ ಸೌಭಾಗ್ಯ ಲಕ್ಷ್ಮಿ ಶುಗರ್ಸ್. 

ನಂತರ ಬ್ಯಾಂಕಿನವರು ನಿಮ್ಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದು ನೊಟೀಸ್ ಜಾರಿಗೊಳಿಸುತ್ತಾರೆ. ಆಗ ಅವರು 2019ರವರೆಗೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ನಂತರ ಆ ನೊಟೀಸ್ ಅನ್ನು ಧಾರವಾಡ ಹೈಕೋರ್ಟ್ ನಲ್ಲಿರುವ ದ್ವಿಸದಸ್ಯಪೀಠಕ್ಕೆ ತಡೆಯಾಜ್ಞೆ ನೀಡುವಂತೆ ಅರ್ಜಿ ಸಲ್ಲಿಸುತ್ತಾರೆ. ನಂತರ ನ್ಯಾಯಾಲಯ 28-11-2019ರಲ್ಲಿ ಮಧ್ಯಂತರ ತೀರ್ಪು ನೀಡಿ, ‘ನೀವು ಆರು ವಾರಗಳ ಒಳಗಾಗಿ 366 ಕೋಟಿ ಸಾಲದಲ್ಲಿ ಅರ್ಧದಷ್ಟು ಹಣವನ್ನು ಪಾವತಿಸಿ ನಂತರ ನ್ಯಾಯಾಲಯಕ್ಕೆ ಬನ್ನಿ’ ಎಂದು ಸೂಚಿಸುತ್ತದೆ. 

ಆ ಆದೇಶಕ್ಕೆ ರಮೇಶ್ ಜಾರಕಿಹೊಳಿ ಅವರು ನಯಾಪೈಸೆ ಗೌರವ ನೀಡಲಿಲ್ಲ. ನಂತರ 2-12-2021ರಲ್ಲಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾದ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಅವರು ಒಂದು ನೊಟೀಸ್ ಅನ್ನು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತಾರೆ. ಆದರೆ ಜಿಲ್ಲಾಧಿಕಾರಿಗಳು ಕಳೆದ ಐದು ತಿಂಗಳಿಂದ ಈ ಪತ್ರದ ಬಗ್ಗೆ ತಲೆ ಕೆಡೆಸಿಕೊಳ್ಳದೆ ನಿದ್ದೆ ಮಾಡುತ್ತಿದ್ದಾರೆ. ಪತ್ರದ ಸಾರಾಂಶ ಏನೆಂದರೆ, ‘366 ಕೋಟಿ ಸಾಲ ವಸೂಲಾತಿಗೆ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪನಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿ ಹರಾಜು ಮಾಡಿ ಅಲ್ಲಿಂದ ಬರುವ ಹಣವನ್ನು ಬ್ಯಾಂಕಿಗೆ ಕೊಡಿಸುವ ಜವಾಬ್ದಾರಿ ತಮ್ಮದಾಗಿದೆ’ ಎಂದು ತಿಳಿಸಲಾಗಿದೆ.

ಈ ಸಮಯದಲ್ಲಿ ರಮೇಶ್ ಜಾರಕಿಹೊಳಿ ಅವರು ಹರಿಯಂತ್ ಸಹಕಾರಿ ಬ್ಯಾಂಕಿಗೆ 20 ಕೋಟಿ ಸಾಲ ಹಾಗೂ ಬಡ್ಡಿ ಸೇರಿ ಒಟ್ಟು 35 ಕೋಟಿ ನೀಡಬೇಕು. ಹೀಗಾಗಿ ಬ್ಯಾಂಕಿನವರು ಅವರು NCLT ನ್ಯಾಯಾಧಿಕರಣಕ್ಕೆ ಮನವಿ ಸಲ್ಲಿಸಿ, ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪನಿಯಿಂದ ತಮಗೆ ಬರಬೇಕಾದ ಸಾಲ ಕೊಡಿಸಿ ಎಂದು ಮನವಿ ಮಾಡಿದರು. ನಂತರ ನ್ಯಾಯಾಧಿಕರಣ ದಿವಾಳಿಯಾಗಿರು ಕಂಪನಿ ಆಸ್ತಿ ಹರಾಜು ಮಾಡಲು ಇನ್ಸಾರ್ವೆನ್ಸಿ ಎಂಬ ಸಂಸ್ಥೆಗೆ ಸೂಚಿಸುತ್ತಾರೆ. 

ಈ ಹರಾಜು ಪ್ರಕ್ರಿಯೆ ಕುರಿತು ತಕರಾರು ಇದ್ದರೆ ಅದನ್ನು ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಬೇಕು. ಆದರೆ ಈ ಜಾಹೀರಾತನ್ನು ಪತ್ರಿಕೆಗಳಲ್ಲಿ ಪ್ರಕಟಿಸದೇ, ಕೇವಲ ತಮ್ಮ ಜಯನಗರ ಕಚೇರಿ ಮುಂದೆ ಹಾಕಲಾಗಿದೆ. ಈ ಸಕ್ಕರೆ ಕಾರ್ಖಾನೆ ಇರುವುದು ಗೋಕಾಕ್ ತಾಲೂಕಿನಲ್ಲಿ ಆದರೆ ಈ ಪ್ರಕಟಣೆಯನ್ನು ಹಾಕಿರುವುದು ಬೆಂಗಳೂರಿನ ಜಯನಗರದ ಕಚೇರಿ ಮುಂದೆ. 

ತಕರಾರು ಸಲ್ಲಿಸಲು ನೀಡಲಾಗಿದ್ದ ಅಂತಿಮ ದಿನಾಂಕ ನಿನ್ನೆಗೆ ಮುಕ್ತಾಯವಾಗಿದ್ದು, ಹರಿಯಂತ್ ಸಹಕಾರಿ ಬ್ಯಾಂಕ್ ನವರು ಆರ್ಬಿಟ್ರೇಟರ್ ಮೂಲಕ 1 ಸಾವಿರ ಎಕರೆ ಜಾಗದಲ್ಲಿ ನಿರ್ಮಾಣವಾಗಿರುವ ಕಂಪನಿ ಆಸ್ತಿಯ ಮೌಲ್ಯವನ್ನು ಮಾಡಲಾಗುತ್ತದೆ. ನಮಗಿರುವ ಮಾಹಿತಿ ಪ್ರಕಾರ ಈ ಆಸ್ತಿಯ ಮೊತ್ತ 900 ಕೋಟಿ. ಆದರೆ ಈ ಸಹಕಾರಿ ಬ್ಯಾಂಕಿನವರು ಈ ಆಸ್ತಿಯ ಮೌಲ್ಯವನ್ನು ಕೇವಲ 60 ಕೋಟಿಗೆ ಮಾಡಿಸುತ್ತಾರೆ. 

ಈ ಹರಾಜು ಪ್ರಕ್ರಿಯೆಗೆ ಸರ್ಕಾರವಾಗಲಿ, ಅಪೆಕ್ಸ್ ಬ್ಯಾಂಕಿನವರಾಗಲಿ, ಅಲ್ಲಿನ ಸುತ್ತಮುತ್ತಲಿನವರಾಗಲಿ ಅಥವಾ ಅಲ್ಲಿನ ನೌಕರರಾಗಲಿ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಈ ಆಕ್ಷೇಪ ವ್ಯಕ್ತಪಡಿಸುವ ಕಾಲಾವಕಾಶ ನಿನ್ನೆಗೆ ಮುಕ್ತಾಯವಾಗಿದೆ. 

ಈ ಮೂಲಕ 650 ಕೋಟಿ ಸಾಲವನ್ನು ತಮ್ಮ ಬೇನಾಮಿ ಹರಿಯಂತ್ ಬ್ಯಾಂಕಿಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ. 60 ಕೋಟಿ ಮೌಲ್ಯವನ್ನು ಮಾಡಿಸಲಾಗಿದೆ. ಆಗ NCLT ಅವರು ನಿಮಗೆ 35 ಕೋಟಿ ಬರಬೇಕಾಗಿದೆ, ಉಳಿದ 25 ಕೋಟಿಯನ್ನು ಕೊಟ್ಟರೆ ಈ ಆಸ್ತಿಯನ್ನು ನಿಮಗೆ ನೀಡಲಾಗುತ್ತದೆ ಎಂಬ ಅವಕಾಶ ನೀಡಲಾಗುತ್ತದೆ. ಆಗ ಇಡೀ ಆಸ್ತಿ ಬ್ಯಾಂಕಿನ ಪಾಲಾಗುತ್ತದೆ.

ಆದರೆ ಉಳಿದ ಅಪೆಕ್ಸ್ ಬ್ಯಾಂಕಿನ ಕತೆ ಏನು? ಈ ಕಂಪನಿ ದಿವಾಳಿಯಾಗಿದೆ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಬೇರೆ ಬ್ಯಾಂಕುಗಳಿಗೆ ಮೂರು ನಾಮ ಹಾಕುವ ವ್ಯವಸ್ಥಿತವಾದ ಸಂಚು ರೂಪಿಸಲಾಗಿದೆ.

ಸರ್ಕಾರ ಇಲ್ಲಿಯವರೆಗೂ ಯಾವುದೇ ಆಕ್ಷೇಪ ಸಲ್ಲಿಸಿಲ್ಲ. ಈ ಷಡ್ಯಂತ್ರದ ಹಿಂದೆ ರಾಜ್ಯ ಸರ್ಕಾರ, ಕೇಂದ್ರದ ಸಹಕಾರ ಸಚಿವಾಲಯದ ಮಂತ್ರಿಗಳು ಅಂದರೆ ಅಮಿತ್ ಶಾ ಅವರು ಇದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ಅವರು ಕಳೆದ 10 ತಿಂಗಳಲ್ಲಿ 8 ಬಾರಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಅವರು ಇಷ್ಟು ಬಾರಿ ಭೇಟಿ ಮಾಡಿರುವುದು ಏಕೆ ಎಂಬುದು ಈಗ ಅರ್ಥವಾಗುತ್ತದೆ. 

ಜನ ಸಾಮಾನ್ಯರು ಸಾಲ ಮಾಡಿ ವಾಹನ ಖರೀದಿ ಮಾಡಿದಾಗ ಒಂದು ತಿಂಗಳು ಇಎಂಐ ಕಟ್ಟಲಿಲ್ಲ ಎಂದರೆ ವಾಹನ ಜಪ್ತಿ ಮಾಡುತ್ತದೆ. ಆದರೆ ಈ ಕಂಪನಿಯನ್ನು ನೀವು 2017ರಲ್ಲೇ NPA ಎಂದು ಡಿಕ್ಲೇರ್ ಮಾಡುತ್ತೀರಿ. ಆದರೆ ಅದೇ ಕಂಪನಿ 2022ರ ಮಾರ್ಚ್ 31ಕ್ಕೆ ಅವರ ಆಡಿಟೆಡ್ ಖಾತೆ ಪರಿಶೀಲಿಸಿದರೆ ಆ ಕಂಪನಿ ಸುಮಾರು 60 ಕೋಟಿ ಲಾಭ ಮಾಡಿದೆ. ಇಂತಹ ಕಂಪನಿಯನ್ನು ದಿವಾಳಿ ಕಂಪನಿ ಎಂದು ಘೋಷಿಸಲಾಗುತ್ತದೆ. 

ಇದೆಲ್ಲವನ್ನು ನೋಡಿಕೊಂಡು ಸರ್ಕಾರ ಸುಮ್ಮನೆ ಕೂತಿರುವುದೇಕೆ? ಎಸ್.ಟಿ ಸೋಮಶೇಖರ್ ಅವರು ಸಹಕಾರ ಮಂತ್ರಿಯಾಗಿದ್ದು, ಅವರು ಏನು ಮಾಡುತ್ತಿದ್ದಾರೆ? ಬೊಮ್ಮಾಯಿ ಅವರು ಏನು ಮಾಡುತ್ತಿದ್ದಾರೆ? ಸತ್ಯ ಹರಿಶ್ಚಂದ್ರದ ಮೊಮ್ಮಕ್ಕಳಂತೆ ವರ್ತಿಸುವ ಸಿ.ಟಿ ರವಿ ಅವರೇ ಮುಂದಿನ ವಾರ ನಿಮ್ಮ ದಾಖಲೆಗಳನ್ನು ಬಹಿರಂಗ ಪಡಿಸುತ್ತೇನೆ. ನಾನು ಈ ವಿಚಾರವಾಗಿ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಕ್ಕೆ ನನಗೆ ಲೀಗಲ್ ನೊಟೀಸ್ ನೀಡುತ್ತಾರೆ. ಅಲ್ಲಿನ ಪೊಲೀಸ್ ಠಾಣೆಗಳಲ್ಲಿ ನನ್ನ ವಿರುದ್ಧ ಕೇಸ್ ಹಾಕಿಸುತ್ತಾರೆ. ಬಿಜೆಪಿಯವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲವೇ?

ಈ 660 ಕೋಟಿ ಜನ ಸಾಮಾನ್ಯರ ಹಣವೇ ಹೊರತು, ನಿಮ್ಮಪ್ಪನ ಮನೆ ಆಸ್ತಿಯಲ್ಲಿ. ಆದಾಯ ತೆರಿಗೆ ಇಲಾಖೆಯವರು ಒಂದು ತಿಂಗಳ ತಡವಾಗಿ ಐಟಿ ರಿಟರ್ನ್ಸ್ ಸಲ್ಲಿಸಿದ್ದಕ್ಕೆ 300 ಮೆಸೇಜ್ ಹಾಕಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ಅವರು 200 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ, ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿಯವರಿಗೆ ಪ್ರತ್ಯೇಕ ಕಾನೂನು ಇದೆಯೇ? 

ಬೆಳ್ಳಿ ಪ್ರಕಾಶ್ ಅವರೇ ನೀವು NCLTಗೆ ಯಾಕೆ ಅರ್ಜಿ ಹಾಕಲಿಲ್ಲ, ಬೆಳಗಾವಿ ಜಿಲ್ಲಾಧಿಕಾರಿಗಳು ಏನು ಮಾಡುತ್ತಿದ್ದಾರೆ? ಈ ಪ್ರಕ್ರಿಯೆ ಆರಂಭಿಸದಂತೆ ಜಿಲ್ಲಾಧಿಕಾರಿಗಳ ಮೇಲೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರೇ ನೇರವಾಗಿ ಒತ್ತಡ ಹಾಕಿದ್ದಾರೆ ಎಂಬ ಮಾಹಿತಿ ಇದೆ. ರಮೇಶ್ ಜಾರಕಿಹೊಳಿ ಅವರು ಉದ್ದೇಶಿತ ಸುಸ್ಥಿದಾರನಾಗಿದ್ದು, ಜನಸಾಮಾನ್ಯರ 660 ಕೋಟಿ ಹಣವನ್ನು ಮೋಸ ಮಾಡಲಾಗುತ್ತಿದೆ. 

ಬಿಜೆಪಿಯವರು ಮಾತೆತ್ತಿದರೆ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಾರೆ. ಬಿಜೆಪಿಯವರ ಕುಟುಂಬದಲ್ಲಿ ಏನೇ ಆದರೂ ಅದಕ್ಕೆ ಕಾಂಗ್ರೆಸ್ ಹೊಣೆ ಎನ್ನುತ್ತಾರೆ. ಇದು ಎಂತಹ ದುರಂತ.

ಸಿ.ಟಿ ರವಿ ಅವರೇ ನಾನು ನಿಮ್ಮ ಬಿಜೆಪಿ ಕಚೇರಿಗೆ ನಾನು ಈ ದಾಖಲೆಗಳನ್ನೆಲ್ಲ ತೆಗೆದುಕೊಂಡು ಬರುತ್ತೇನೆ. ನೀವು ನಿಮ್ಮ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಕೂರಿಸಿಕೊಂಡು ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಚರ್ಚೆ ಮಾಡೋಣ. 

ಇಡಿ ಏನು ಮಾಡುತ್ತಿದೆ? 50 ಲಕ್ಷ, ಒಂದೂವರೆ ಕೋಟಿ ಡಿಫಾಲ್ಟರ್ ಆಗಿದ್ದಕ್ಕೆ ಅಜಿತ್ ಪವಾರ್ ಅವರನ್ನು ಬಂಧಿಸುವ ಹಂತಕ್ಕೆ ಹೋಗಿದ್ದೀರಿ. ಆದರೆ ಲ್ಲಿ ನಿಮ್ಮ ನಾಯಕರಿಗೆ ಒಂದು ನೊಟೀಸ್ ಕೊಡಲು ಸಾಧ್ಯವಿಲ್ಲವೇ? 2017ರಲ್ಲಿ ಇವರ ಸಂಸ್ಥೆಯನ್ನು NPA ಎಂದು ಹೇಗೆ ಘೋಷಣೆ ಮಾಡಿದಿರಿ. ಪ್ರತಿ ವರ್ಷ ಲಾಭಾಂಶ ತೋರುತ್ತಿರುವ ಕಂಪನಿಯನ್ನು ದಿವಾಳಿ ಎಂದು ಹೇಗೆ ತೀರ್ಮಾನಿಸಿದಿರಿ? ಈ ವಿಚಾರವಾಗಿ ನಾವು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ.

ಸರ್ಕಾರ ಹಾಗೂ ಸಹಕಾರ ಇಲಾಖೆ ಈ ಹರಾಜು ಪ್ರಕ್ರಿಯೆ ಕುರಿತು NCLTಗೆ ಆಕ್ಷೇಪಣಾ ಅರ್ಜಿ ಸಲ್ಲಿಸಬೇಕು. ನೊಟೀಸ್ ಜಾರಿ ಮಾಡಿ ಇಡೀ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಯತ್ನ ಮಾಡಬೇಕು.

2017ರಲ್ಲಿ ನಿಮ್ಮ ಸರ್ಕಾರವೇ ಅಧಿಕಾರಿದಲ್ಲಿತ್ತು, ಆಗ ನಿಮ್ಮ ಬಳಿ ಮಾಹಿತಿ ಇರಲಿಲ್ಲವೇ, ‘ಈ ಕಂಪನಿ NPA ಎಂದು ಘೋಷಣೆ ಆದಾಗ ನಮ್ಮ ಸರ್ಕಾರವೇ ಅಧಿಕಾರದಲ್ಲಿತ್ತು. ಆದರೆ ಆಗ ರಾಜ್ಯ ಸರ್ಕಾರ ನೇರವಾಗಿ ಹಸ್ತಕ್ಷೇಪ ಮಾಡಲು ಸಾಧ್ಯವಿರಲಿಲ್ಲ. 2019ರಲ್ಲಿ ಧಾರವಾಡ ಹೈಕೋರ್ಟ್ ನಿರ್ದೇಶನ ನೀಡಿತ್ತು. ಅದರ ಆಧಾರದ  ಮೇಲೆ ಪ್ರಕ್ರಿಯೆ ಮಾಡಲಾಗುತ್ತಿದೆ. ಸಾಲ ವಸೂಲಿ ಮಾಡಲು ಅದರದೇ ಆದ ಪ್ರಕ್ರಿಯೆ ಇವೆ. ಈ ವಿಚಾರದಲ್ಲಿ ಸರ್ಕಾರ ಆಕ್ಷೇಪಕ್ಕೆ ಅರ್ಜಿ ಸಲ್ಲಿಸುವ ಅವಕಾಶ ಬಂದಾಗ ಯಾಕೆ ತನ್ನ ಅರ್ಜಿಯನ್ನು ಸಲ್ಲಿಸುತ್ತಿಲ್ಲ ಎಂದು ನಾವು ಪ್ರಶ್ನೆ ಮಾಡುತ್ತಿದ್ದೇವೆ. ಇದರ ಉದ್ದೇಶವೇನು? ಇನ್ನು ಈ ಸಾಲ ವಸೂಲಾತಿ ಪ್ರಕ್ರಿಯೆ ಆರಂಭವಾಗಿದ್ದು, 2019ರಿಂದ ಅಲ್ಲ, 2021ರ ಡಿಸೆಂಬರ್ ನಿಂದ. ಈ ಸಂದರ್ಭದಲ್ಲಿ ಆಕ್ಷೇಪಕ್ಕೆ ಆಹ್ವಾನ ಕೊಟ್ಟಾಗ ಸರ್ಕಾರ ಆಕ್ಷೇಪ ಅರ್ಜಿ ಸಲ್ಲಿಸಬೇಕಿತ್ತು ಎಂಬುದು ನಮ್ಮ ಬಲವಾದ ವಾದ. ಸಾಲ ತೆಗೆದುಕೊಂಡಿರುವ ಎಲ್ಲರ ಮೇಲೂ ನಾವು ಪ್ರಶ್ನೆ ಮಾಡಲು ಆಗುವುದಿಲ್ಲ. ಅಂದು ಅವರು ಕೇವಲ ಸಾಲ ಮಾಡಿದ್ದರು, ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆ ಸಾಲವನ್ನೇ ಮೋಸ ಮಾಡುವ ಪ್ರಕ್ರಿಯೆ ನಡೆಸುತ್ತಿದ್ದು, ಇದನ್ನು ನಾವು ಪ್ರಶ್ನಿಸುತ್ತಿದ್ದೇವೆ’ ಎಂದರು.

ರಮೇಶ್ ಜಾರಕಿಹೊಳಿ ಹಾಗೂ ಹರಿಯಂತ್ ಬ್ಯಾಂಕಿಗೆ ಹೇಗೆ ಸಂಬಂಧ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಬ್ಯಾಂಕಿನ ಮಾಲೀಕ ಅಭಿನಂದನ್ ಪಾಟೀಲ್ ಅವರು ರಮೇಶ್ ಜಾರಕಿಹೊಳಿ ಅವರ ಅತ್ಯಂತ ಆಪ್ತರಾಗಿದ್ದಾರೆ. ಅವರು ರಮೇಶ್ ಜಾರಕಿಹೊಳಿ ಅವರ ಬೇನಾಮಿ ಆಗಿದ್ದಾರೆ. ಈ 900 ಕೋಟಿ ಆಸ್ತಿಯನ್ನು ಹರಿಯಂತ್ ಬ್ಯಾಂಕಿಗೆ ಬರೆಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ’ ಎಂದು ಉತ್ತರಿಸಿದ್ದಾರೆ.

ರಮೇಶ್ ಜಾರಕಿಹೊಳಿ ಅವರು ಈ ಸಾಲ ಪಡೆಯಲು ಬೇರೆಯವರ 12 ಸಾವಿರ ಎಕರೆ ಜಮೀನನ್ನು ಅಡವಿಟ್ಟಿದ್ದಾರೆ ಎಂಬ ಪ್ರಶ್ನೆಗೆ, ‘ಬ್ಯಾಂಕಿನವರು ಹಣ ವಸೂಲಿ ಮಾಡಲು ಹರಾಜು ಹಾಕುವಾಗ ಅಡವಿಟ್ಟಿರುವ ಜಮೀನು ಅವರದ್ದೋ ಅಥವಾ ಬೇರೆಯವರದ್ದೋ ಎಂಬುದು ಬೇಕಾಗಿಲ್ಲ’ ಎಂದರು.

ರಮೇಶ್ ಜಾರಕಿಹೊಳಿ ಅವರಂತೆಯೇ ನಿಮ್ಮ ನಾಯಕರು ಸಾಕಷ್ಟು ಮಂದಿ ಸಾಲ ಪಡೆದಿದ್ದಾರೆ ಎಂಬ ಪ್ರಶ್ನೆಗೆ, ‘ಅವರು ಸಾಲ ಪಡೆದಿರಬಹುದು ಆದರೆ ಅವರು NPA ಆಗಿಲ್ಲ. ಸಾಲ ತೆಗೆದುಕೊಂಡು ಮೋಸ ಮಾಡುವವರು ಯಾವುದೇ ಪಕ್ಷದವರಾಗಿರಲಿ, ಶಿಕ್ಷೆ ಆಗಬೇಕು. ನಾನು ಇಲ್ಲಿ ಮಾತನಾಡುತ್ತಿರುವುದು NPA ಎಂದು ಘೋ,ಣೆಯಾಗಿ ಹರಾಜು ಪ್ರಕ್ರಿಯೆಯಲ್ಲಿ ಮೋಸ ಮಾಡುತ್ತಿರುವುದರ ಬಗ್ಗೆ’ ಎಂದು ಉತ್ತರಿಸಿದರು.

*ಭವ್ಯ ನರಸಿಂಹಮೂರ್ತಿ;*    

‘ಯಾವುದೇ ಪಕ್ಷದವರು ಸಾಲ ಪಡೆದು NPA ಆಗಿ ಸಾಲ ಮರುಪಾವತಿ ಮಾಡದಿದ್ದರೆ ಎಲ್ಲರೂ ಪ್ರಶ್ನೆ ಮಾಡಬೇಕು. ಆದರೆ ಸಾಲ ಪಡೆದ ಎಲ್ಲರನ್ನೂ ಸುಸ್ಥಿದಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ರಮೇಶ್ ಜಾರಕಿಹೊಳಿ ಅವರು ಉದ್ದೇಶಿತ ಸುಸ್ಥಿದಾರನಾಗಿದ್ದಾರೆ. 

ಈ ಸಂಪೂರ್ಣ ಹಗರಣ ನಡೆದಿರುವುದು ಸಹಕಾರಿ ಬ್ಯಾಂಕುಗಳಲ್ಲಿ ನಡೆದಿದ್ದು, ಇನ್ನು ರಮೇಶ್ ಜಾರಕಿಹೊಳಿ  ಅವರು ಕಳೆದ 8 ತಿಂಗಳಲ್ಲಿ ಕೇಂದ್ರದ ಸಹಕಾರ ಮಂತ್ರಿಯಾಗಿರುವ ಅಮಿತ್ ಸಾ ಅವರನ್ನು 8 ಬಾರಿ ಭೇಟಿ ಮಾಡಿದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ಅವರು 2019ರಲ್ಲಿ ಧಾರವಾಡ ಹೈಕೋರ್ಟ್ ನೀಡಿರುವ ಆದೇಶವನ್ನು ಉಲ್ಲಂಘಿಸಿದ್ದಾರೆ. 

ಇನ್ನು ಇವರು ಕೊಟ್ಟಿರುವ ಜಾಹೀರಾತಿನ ವಿಳಾಸ ನಕಲಿ ವಿಳಾಸವಾಗಿವೆ. ಈ ಸರ್ಕಾರದಲ್ಲಿ ಒಂದರಹಿಂದೆ ಒಂದು ದೊಡ್ಡ ಹಗರಣಗಳು ಬೆಳಕಿಗೆ ಬರುತ್ತಿದ್ದು, ದೊಡ್ಡ ನಾಯಕರ ಹೆಸರು ಕೇಳಿಬರುತ್ತಿದೆ. ಮಾಧ್ಯಮದವರು ಈ ಎಲ್ಲ ವಿಚಾರಗಳ ಬಗ್ಗೆ ಸರ್ಕಾರವನ್ನು ಪ್ರಶ್ನೆ ಮಾಡಬೇಕಿದೆ.’

Post a Comment

Previous Post Next Post