ಬಿಜೆಪಿಗೆ ಹಲವು ಪ್ರಮುಖ ಮುಖಂಡರ ಸೇರ್ಪಡೆ ......ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ- ನಳಿನ್‍ಕುಮಾರ್ ಕಟೀಲ್ ವಿಶ್ವಾಸ

07-05-2022
ಪ್ರಕಟಣೆಯ ಕೃಪೆಗಾಗಿ
ಬಿಜೆಪಿಗೆ ಹಲವು ಪ್ರಮುಖ ಮುಖಂಡರ ಸೇರ್ಪಡೆ 
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರಾದ ನಳಿನ್‍ಕುಮಾರ್ ಕಟೀಲ್, ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಹಲವು ಮುಖಂಡರು ತಮ್ಮ ಬೆಂಬಲಿಗರ ಜೊತೆ ಬಿಜೆಪಿ ಸೇರಿದರು. 
ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವರ್ತೂರು ಪ್ರಕಾಶ್, ಮಾಜಿ ಶಾಸಕರಾದ ಮಂಜುನಾಥ್ ಗೌಡ, ರಾಜ್ಯಸಭಾ ಮಾಜಿ ಸದಸ್ಯರಾದ ಕೆ.ಬಿ. ಕೃಷ್ಣಮೂರ್ತಿ, ವಿಧಾನಪರಿಷತ್ ಮಾಜಿ ಸದಸ್ಯರಾದ ಸಂದೇಶ್ ನಾಗರಾಜ್, ಮಂಡ್ಯ ಜಿಲ್ಲಾ ಮುಖಂಡರಾದ ಅಶೋಕ್ ಜಯರಾಮ್, ಮಾಜಿ ಐಆರ್‍ಎಸ್ ಅಧಿಕಾರಿಯಾದ ಡಾ|| ಲಕ್ಷ್ಮೀ ಅಶ್ವಿನ್‍ಗೌಡ ಅವರು ಬಿಜೆಪಿ ಸೇರಿದರು.           
                            07-05-2022
ಪ್ರಕಟಣೆಯ ಕೃಪೆಗಾಗಿ
ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ- ನಳಿನ್‍ಕುಮಾರ್ ಕಟೀಲ್ ವಿಶ್ವಾಸ
ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣಗೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರಾದ ನಳಿನ್‍ಕುಮಾರ್ ಕಟೀಲ್ ಅವರು ವಿಶ್ವಾಸದಿಂದ ನುಡಿದರು.                        
ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ “ಹೋಟೆಲ್ ಪರಾಗ್” ನಲ್ಲಿ ಇಂದು ಮಾತನಾಡಿದ ಅವರು, 2023ರಲ್ಲಿ ಬಿಜೆಪಿ 150 ಪ್ಲಸ್ ಸಾಧನೆ ಮಾಡಲಿದೆ. ಮತ್ತೆ ಬಿಜೆಪಿ ಸರಕಾರ ಇಲ್ಲಿ ಆಡಳಿತ ನಡೆಸಲಿದೆ ಎಂದು ತಿಳಿಸಿದರು.
ಹಳ್ಳಿಯಿಂದ ರಾಜ್ಯದ ವರೆಗೆ ಬಿಜೆಪಿ ಮೇಲೆ ವಿಶ್ವಾಸ ಹೆಚ್ಚಾಗಿದೆ. ಅದಕ್ಕಾಗಿ ಅನೇಕ ಮುಖಂಡರು ಬಿಜೆಪಿ ಸೇರುತ್ತಿದ್ದಾರೆ. ಮುಂದಿನ ದಿನಗಳು ನಮ್ಮದು. ಕಾಂಗ್ರೆಸ್ ಮನೆ ಖಾಲಿ ಆಗಲಿದೆ ಎಂದರು.
ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿರುವ ಕಾಂಗ್ರೆಸ್ ಒಳಜಗಳ ಇನ್ನಷ್ಟು ತೀವ್ರಗೊಳ್ಳಲಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮತ್ತು ಕೋಮುಗಲಭೆಗಳು ನಡೆದಿದ್ದವು ಎಂದು ಆರೋಪಿಸಿದರು. 4 ಲಕ್ಷ ಕೋಟಿ ಮೊತ್ತದ ಭ್ರಷ್ಟಾಚಾರ ಹಗರಣಗಳು ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದಿದ್ದವು ಎಂದು ತಿಳಿಸಿದರು.
ಪಿಎಸ್ ಐ ನೇಮಕಾತಿ ಹಗರಣದ ತನಿಖೆಗೆ ಕೂಡಲೇ ಆದೇಶಿಸಿದ ಮುಖ್ಯಮಂತ್ರಿಯವರು ಅಭಿನಂದನಾರ್ಹರು ಎಂದು ತಿಳಿಸಿದರು. ಆದರೆ, ಕಾಂಗ್ರೆಸ್‍ನ ಸಿದ್ರಾಮಣ್ಣ ತೋರಿಸಿರಲಿಲ್ಲ. ಹತ್ತಾರು ಹಗರಣ ನಡೆದರೂ ಅದರ ತನಿಖೆಗೆ ಅವರು ಆದೇಶಿಸಿರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಬೊಮ್ಮಾಯಿ ಅವರ ಪಾರದರ್ಶಕ ಮತ್ತು ಅಭಿವೃದ್ಧಿಪರ ಆಡಳಿತದಿಂದ ಜನರ ವಿಶ್ವಾಸ ಹೆಚ್ಚಾಗಿದೆ ಎಂದರು.
ಇಂದು ದೇಶದಲ್ಲಿ ಮೋದಿ ಯುಗ ಆರಂಭವಾಗಿದೆ. ಪರಿವರ್ತನೆಯ ಯುಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುನ್ನಡೆಸುತ್ತಿದ್ದಾರೆ. ಅವರ ಜನಪರ ಆಡಳಿತ, ಜನಮಾನಸದಲ್ಲಿ ನೆಲೆಯೂರಿರುವ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರ ಆಡಳಿತವನ್ನು ಮೆಚ್ಚಿಕೊಂಡು ಅನೇಕ ಮುಖಂಡರು ಪಕ್ಷ ಸೇರುತ್ತಿದ್ದಾರೆ. ರಾಜ್ಯಾಧ್ಯಕ್ಷನಾಗಿ ಅವರನ್ನು ಅಭಿನಂದಿಸಿ ಸ್ವಾಗತಿಸುತ್ತೇನೆ ಎಂದರು.
ದೇಶ ರಕ್ಷಿಸಲು ನರೇಂದ್ರ ಮೋದಿ ನೇತೃತ್ವ ಮತ್ತು ರಾಜ್ಯದಲ್ಲಿ ಬೊಮ್ಮಾಯಿ ಅವರ ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂಬ ಇರಾದೆ ಜನತೆಯದು ಎಂದು ನುಡಿದರು.
ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, 5 ರಾಜ್ಯಗಳ ಚುನಾವಣೆಯ ಬಳಿಕ ವಿರೋಧ ಪಕ್ಷಗಳ ಅನೇಕ ಜನರು ನಮ್ಮತ್ತ ಬಂದಿದ್ದರು. ನಮಗೆ ಹೊಸ ಶಕ್ತಿ ಬರುತ್ತಿದೆ. ಸಂಯಮ ವಹಿಸಿರಿ. ಸಮಾಧಾನದಿಂದಿರಿ. ಮುಂದೆ ನಿರ್ಧಾರ ಮಾಡಿ ಎಂದು ಹೇಳಿ ಕಳುಹಿಸಿದ್ದೇನೆ. ವಿರೋಧ ಪಕ್ಷದಲ್ಲೂ ದೊಡ್ಡ ಬದಲಾವಣೆ ಆಗಲಿದೆ ಎಂದರು.
ಬಿಜೆಪಿ ಭಾರತ ಮಾತೆಯ ಭೂಮಿಯಲ್ಲಿ ಆಳವಾಗಿ ಬೇರೂರಿನ ಹೆಮ್ಮರ. ಅದು ಕುಂಡದಲ್ಲಿರುವ ಗಿಡವಲ್ಲ. ಅದು ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಅದಕ್ಕಾಗಿ ನಮ್ಮ ಹಿರಿಯರ ಪರಿಶ್ರಮ ಪಟ್ಟಿದ್ದಾರೆ. 2023 ರಾಜ್ಯದಲ್ಲಿ ಮತ್ತು 2024ರಲ್ಲಿ ದೇಶದಲ್ಲಿ ಬಿಜೆಪಿ ಅಧಿಕಾರ ಗಳಿಸಲಿದೆ ಎಂದು ನುಡಿದರು.
ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ. ರಾಜಕಾರಣ ನಿಂತ ನೀರಲ್ಲ. ಶಿಕ್ಷಣದಲ್ಲಿ ಕ್ರಾಂತಿ ಮಾಡಿದ ಪ್ರದೇಶವಿದು. ಹೀಗಾಗಿ ಪ್ರಗತಿಯ ಈ ಪ್ರದೇಶ ಹಲವು ಸಮಯದಿಂದ ಎರಡು ಪಕ್ಷಗಳನ್ನು ಬೆಂಬಲಿಸುತ್ತಿತ್ತು. ಈಗ ಆ ಪಕ್ಷಗಳ ಬಗ್ಗೆ ಎಲ್ಲ ವರ್ಗದ ಜನರು ಭ್ರಮ ನಿರಸನಗೊಂಡು ಬಿಜೆಪಿ ಬೆಂಬಲಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಸಮಗ್ರ ಅಭಿವೃದ್ಧಿಗೆ ಜನರು ಮತ್ತು ಅದರಲ್ಲೂ ವಿಶೇಷವಾಗಿ ಯುವಜನತೆ ಬಿಜೆಪಿ ಸರಕಾರ ಅಗತ್ಯ ಎಂದು ಭಾವಿಸುತ್ತಿದೆ. ವಿಶ್ವ ನಾಯಕತ್ವ ಹೊಂದಿದ ನರೇಂದ್ರ ಮೋದಿ ಅವರ ನೇತೃತ್ವ ಬಿಜೆಪಿಗಿದೆ. ದೇಶಾಭಿಮಾನ, ಅಭಿವೃದ್ಧಿ, ಸಾಮಾಜಿಕ ನ್ಯಾಯದ ರಾಜಕಾರಣವೇ ಮೋದಿಯವರ ಪರಿಕಲ್ಪನೆ ಎಂದು ವಿವರಿಸಿದರು.
ಟೀಕೆ ಮಾಡುವುದು ಸುಲಭ. ಆದರೆ, ಅನೇಕ ಸವಾಲುಗಳನ್ನು ಮೆಟ್ಟಿನಿಂತು ದೇಶವನ್ನು ಮುನ್ನಡೆಸುವ ನಿರಂತರ ಪ್ರಯತ್ನ ಮೋದಿಯವರದು. ಕೋವಿಡ್ ವೇಳೆ ಆರೋಗ್ಯ ಸುರಕ್ಷತೆ ಕೊಟ್ಟ ದೇಶ ಭಾರತ. ಭಾರತದ ನಾಯಕತ್ವವನ್ನು ಅವರು ತೋರಿಸಿಕೊಟ್ಟಿದ್ದಾರೆ. ಪ್ರತಿ ಮನೆಗೆ ನಳ್ಳಿ ನೀರು ಕೊಡುವ ಕೆಲಸ ನಡೆಯುತ್ತಿದೆ. ಜನರು ಕೇಂದ್ರ- ರಾಜ್ಯ ಸರಕಾರದ ಬಗ್ಗೆ ವಿಶ್ವಾಸ ಇಟ್ಟಿದ್ದಾರೆ ಎಂದು ತಿಳಿಸಿದರು.
ಬೊಕ್ಕಸ ತುಂಬಿಸಿ ಎಲ್ಲ ಜಿಲ್ಲೆಗಳು, ಎಲ್ಲ ಜನಾಂಗದ ಕಡೆ ಗಮನ ಕೊಡುವ ಬಜೆಟ್ ಮಂಡಿಸಿ ಅದರ ಅನುಷ್ಠಾನಕ್ಕೆ ಮುಂದಾಗಿದ್ದೇವೆ. ಕೇವಲ ನಾಲ್ಕೈದು ತಿಂಗಳಿನಲ್ಲಿ ಸಾಧನೆ ಮಾಡಿ ಆ ರಿಪೋರ್ಟ್ ಕಾರ್ಡ್ ಜೊತೆ ಚುನಾವಣೆ ಎದುರಿಸಲಿದ್ದೇವೆ ಎಂದು ವಿವರಿಸಿದರು.
2023ರಲ್ಲಿ ವಿಧಾನಸಭೆಯಲ್ಲಿ ಬಿಜೆಪಿ ಸರಕಾರ ಸ್ಥಾಪನೆ ಆಗಲಿದೆ. 150 ಪ್ಲಸ್ ಗುರಿಗೆ ಈಗ ಆನೆಬಲ ಬಂದಿದೆ. ಅನೇಕ ಮುಂದಾಳುಗಳು ಪಕ್ಷ ಸೇರಿದ್ದಾರೆ. ಇದು ಬಿಜೆಪಿ ಪರವಾದ ಬದಲಾವಣೆಯ ಪರ್ವ ಎಂದು ತಿಳಿಸಿದರು.
ಕಾಂಗ್ರೆಸ್‍ನಲ್ಲಿ ಈಗ ಸಚಿವಸಂಪುಟದ ಸ್ಥಾನಮಾನಕ್ಕಾಗಿ ಜಗಳ ನಡೆದಿದೆ. ಆದರೆ, ಅವರ ಭ್ರಮೆ ಕೇವಲ ಭ್ರಮೆಯಾಗಿಯೇ ಉಳಿಯಲಿದೆ. ಕಾಂಗ್ರೆಸ್‍ನ ದೌರ್ಭಾಗ್ಯದ ಸರಕಾರ ಬೇಡ ಎಂದು ಜನತೆ ನಿರ್ಧರಿಸಿದ್ದಾರೆ. ಸ್ವಾಭಿಮಾನ, ಸ್ವಾವಲಂಬನೆಯ ಸರಕಾರ ಇಲ್ಲಿ ಮತ್ತೆ ಬಿಜೆಪಿ ಮೂಲಕ ಸ್ಥಾಪನೆ ಆಗಲಿದೆ ಎಂದು ತಿಳಿಸಿದರು.
ಪಕ್ಷಕ್ಕೆ ಹಲವು ಮುಖಂಡರ ಸೇರ್ಪಡೆಯಿಂದ ಪಕ್ಷ ರಾಜ್ಯದಲ್ಲಿ ಇನ್ನಷ್ಟು ಸದೃಢವಾಗಲಿದೆ ಎಂದು ರಾಜ್ಯದ ಸಚಿವರಾದ ಆರ್.ಅಶೋಕ್ ಅವರು ವಿಶ್ವಾಸದಿಂದ ನುಡಿದರು.
ಪಕ್ಷದ ಸೇರಿದವರ ಪೈಕಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಯಕತ್ವದ ಮೇಲೆ ವಿಶ್ವಾಸವಿಟ್ಟು ಯಾವುದೇ ಶರ್ತವಿಲ್ಲದೆ ಬಿಜೆಪಿ ಸೇರುತ್ತಿದ್ದೇನೆ ಎಂದರು.
ಬಿಜೆಪಿ ಸೇರಿದ ಮಾಜಿ ಸಚಿವರಾದ ವರ್ತೂರು ಪ್ರಕಾಶ್ ಅವರು ಮಾತನಾಡಿ, ಅಮಿತ್ ಶಾ ಅವರ 150 ಪ್ಲಸ್ ಗುರಿಯ ಹಿನ್ನೆಲೆಯಲ್ಲಿ ನಾವು ಸೇರುತ್ತಿದ್ದೇವೆ. ಅದು 175 ಪ್ಲಸ್ ಆಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದಕ್ಕಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡಲಿದ್ದೇನೆ ಎಂದರು.
ರಾಜ್ಯಸಭಾ ಮಾಜಿ ಸದಸ್ಯರಾದ ಕೆ.ಬಿ. ಕೃಷ್ಣಮೂರ್ತಿ ಅವರು ಮಾತನಾಡಿ, ಪಕ್ಷದ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಮಾಜಿ ಐಆರ್‍ಎಸ್ ಅಧಿಕಾರಿಯಾದ ಡಾ|| ಲಕ್ಷ್ಮೀ ಅಶ್ವಿನ್ ಗೌಡ ಅವರು ಮಾತನಾಡಿ, ನರೇಂದ್ರ ಮೋದಿಯವರು ಆರ್ಥಿಕತೆಯ ಸುಧಾರಣೆಗೆ ವಿಶೇಷ ಶ್ರಮ ವಹಿಸಿದ್ದಾರೆ. ಕೋವಿಡ್ ಸಂದರ್ಭದಲ್ಲೂ ಅರ್ಥಿಕತೆ ಸದೃಢಗೊಳ್ಳಲು ಕೇಂದ್ರ- ರಾಜ್ಯ ಸರಕಾರಗಳ ಯೋಜನೆಗಳು ಕಾರಣ ಎಂದು ತಿಳಿಸಿದರು.
ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವರ್ತೂರು ಪ್ರಕಾಶ್, ಮಾಜಿ ಶಾಸಕರಾದ ಮಂಜುನಾಥ್ ಗೌಡ, ರಾಜ್ಯಸಭಾ ಮಾಜಿ ಸದಸ್ಯರಾದ ಕೆ.ಬಿ. ಕೃಷ್ಣಮೂರ್ತಿ, ವಿಧಾನಪರಿಷತ್ ಮಾಜಿ ಸದಸ್ಯರಾದ ಸಂದೇಶ್ ನಾಗರಾಜ್, ಮಂಡ್ಯ ಜಿಲ್ಲಾ ಮುಖಂಡರಾದ ಅಶೋಕ್ ಜಯರಾಮ್, ಮಾಜಿ ಐಆರ್‍ಎಸ್ ಅಧಿಕಾರಿಯಾದ ಡಾ|| ಲಕ್ಷ್ಮೀ ಅಶ್ವಿನ್‍ಗೌಡ ಅವರು ಬಿಜೆಪಿ ಸೇರಿದರು. ರಾಜ್ಯದ ಸಚಿವರು, ಸಂಸದರು, ಜನಪ್ರತಿನಿಧಿಗಳು, ಪಕ್ಷದ ಅನೇಕ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



                                                                    

   ಕರುಣಾಕರ ಖಾಸಲೆ
  ಮಾಧ್ಯಮ ಸಂಚಾಲಕರು
     ಬಿಜೆಪಿ ಕರ್ನಾಟಕ                                    

ಕರುಣಾಕರ ಖಾಸಲೆ
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ

Post a Comment

Previous Post Next Post