ನಿಮಗಾಗಿ, ಅಕ್ಷಯ ತೃತೀಯ ಅದರ ಸ್ವಲ್ಪ ಮಾಹಿತಿ ನಿಮಗಾಗಿ.

ಅಕ್ಷಯ ತೃತೀಯ

 ಅದರ ಸ್ವಲ್ಪ ಮಾಹಿತಿ ನಿಮಗಾಗಿ.

ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ತಿಥಿಯಂದು ಅಕ್ಷಯತದಿಗೆಯನ್ನು ಆಚರಿಸಲಾಗುತ್ತದೆ. 
ಈ ದಿನ ಸೂರ್ಯ – ಚಂದ್ರರು ತಮ್ಮ ಗರಿಷ್ಠತಮ ಕಾಂತಿ ಹೊಂದುವುದರಿಂದ ದಿನವಿಡೀ ಮಂಗಳಕರವೇ! 
ಅಕ್ಷರಾಭ್ಯಾಸ, ಮದುವೆ, ಮುಂಜಿ, ಗೃಹಪ್ರವೇಶ, ಹೊಸ ವ್ಯವಹಾರ ಆರಂಭ, ಚಿನ್ನ-ಬೆಳ್ಳಿ ಖರೀದಿಗೂ ಸೂಕ್ತವೆಂದು ಭಕ್ತರಲ್ಲಿ ನಂಬಿಕೆ. ಈ ದಿನ ಕೆಲವೊಂದು ಕಥೆಗಳನ್ನು ತನ್ನಲ್ಲಿ ಹೊಂದಿದ್ದು ಇದನ್ನು ಪುರಾಣಗಳು ಆಧರಿಸಿವೆ. 

• ಅಕ್ಷಯತದಿಗೆ ದಿನದಂದೇ ಮಹರ್ಷಿ ವೇದವ್ಯಾಸರು ಗಣಪತಿಯ ಅಮೃತಹಸ್ತದಿಂದ ಮಹಾಭಾರತ ಮಹಾಕಾವ್ಯದ ಬರವಣಿಗೆ ಆರಂಭಿಸಿದರಂತೆ.

• ಶ್ರೀ ಮಹಾವಿಷ್ಣುವಿನ ಅವತಾರವೆನಿಸಿದ ಪರಶುರಾಮನ ಜನನ ಇದೇ ದಿನವೆಂದು ಪ್ರತೀತಿ.

• ಶ್ರೀಕೃಷ್ಣನ ಅಣ್ಣನಾದ ಬಲರಾಮ ಜನನ.
• ಶ್ರೀಕೃಷ್ಣನು ಪಾಂಡವರಿಗೆ ಅಕ್ಷಯ ಪಾತ್ರೆಯನ್ನು ಕೊಡುಗೆಯಾಗಿತ್ತ ದಿನ ಅಕ್ಷಯ ತದಿಗೆ.

• ಜನ್ಮಾಂತರಗಳ ಪಾಪ, ದೋಷಗಳನ್ನು ತೊಳೆಯಿುವ ಗಂಗಾಮಾತೆ ಸ್ವರ್ಗದಿಂದ ಧರೆಗಿಳಿದ ದಿನವಿದು.

• ಸಂಪತ್ತಿನ ಒಡೆಯ, ದೇವತೆಗಳಲ್ಲೆಲ್ಲಾ ಅತಿ ಸಿರಿವಂತ, ಅಷ್ಟದಿಕ್ಪಾಲಕರಲ್ಲಿ ಒಬ್ಬನಾದ ಯಕ್ಷರಾಜ ಕುಬೇರ, ಮಹಾಲಕ್ಷ್ಮಿಯ ಪೂಜೆ ಮಾಡುವ ಶುಭದಿನ ಈ ಅಕ್ಷಯತದಿಗೆ.

• ತ್ರೇತಾಯುಗಕ್ಕೆ ಇದು ಆರಂಭದ ದಿನವೆಂಬ ನಂಬುಗೆ ನಮ್ಮಲ್ಲಿದೆ.
• ಇಂದಿನ ಶುಭ ದಿನದಂದೇ ಪರಮ ಪವಿತ್ರಳಾದ ಸೀತಾದೇವಿಯ ಅಗ್ನಿ ಪರೀಕ್ಷೆಯಿಂದ ಬಾಹ್ಯವಾಗಿಯೂ ಪರಿಶುದ್ಧತೆಯನ್ನು ಪ್ರಕಟಿಸಿದ ದಿನ.

ಅಕ್ಷಯ ತೃತಿಯ
 ಪುರ

Post a Comment

Previous Post Next Post