[12/05, 4:53 PM] Gurulingswami. Holimatha. Vv. Cm: *ನವಭಾರತಕ್ಕಾಗಿ ನವಕರ್ನಾಟಕದ ನಿರ್ಮಾಣದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿ - ನಿರ್ಮಾಣ ಸಂಸ್ಥೆಗಳಿಗೆ ಸಿಎಂ ಕರೆ*
ಬೆಂಗಳೂರು, ಮೇ 12 :
ನವಭಾರತಕ್ಕಾಗಿ ನವಕರ್ನಾಟಕದ ನಿರ್ಮಾಣದ ಧ್ಯೇಯವನ್ನು ಸಾಕಾರಗೊಳಿಸಲು ನಿರ್ಮಾಣ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ *ಟನ್ನಲಿಂಗ್* ಮತ್ತು *ಅಂಡರಗ್ರೌಂಡಿಂಗ್ ಕನ್ಸಟ್ರಕ್ಷನ್* ಕುರಿತಾದ ಎರಡು ದಿನಗಳ *ಅಂತಾರಾಷ್ಟ್ರೀಯ* ಸಮ್ಮೇಳನ ' *ನಿರ್ಮಾಣ' ೨೦೨೨ ಕ್ಕೆ* ಚಾಲನೆ ನೀಡಿ ಮಾತನಾಡಿದರು.
ದೇಶದ ನಿರ್ಮಾಣ ಕಾರ್ಯಗಳಲ್ಲಿ ನಿರ್ಮಾಣ ಸಂಸ್ಥೆಗಳು ತಮ್ಮ ವೃತ್ತಿಪರತೆ, ನಿರ್ವಹಣಾ ಕೌಶಲ್ಯಗಳೊಂದಿಗೆ ಸರ್ಕಾರದೊಂದಿಗೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಭಾರತದ ಪ್ರಧಾನಮಂತ್ರಿಗಳ ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ ಆಶಯವನ್ನು ಸಾಕಾರಗೊಳಿಸಲು ಸರ್ಕಾರ ಮತ್ತು ಸಂಸ್ಥೆಗಳು ಉತ್ತಮ ದೇಶವನ್ನು ಕಟ್ಟುವ ಕಾಯಕದಲ್ಲಿ ಒಟ್ಟಾಗಿ ಶ್ರಮಿಸಬೇಕು. ಗುಡ್ಡಪ್ರದೇಶಗಳು, ಭೂಗತ ಪ್ರದೇಶಗಳು ಹಾಗೂ ನಗರ ಪ್ರದೇಶಗಳಲ್ಲಿ ಅಂಡರ್‍ಗ್ರೌಂಡ್ ಕಾಮಗಾರಿಗಳಲ್ಲಿನ ಪರಿಣಿತಿಯೊಂದಿಗೆ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
*ಕರ್ನಾಟಕ ಆಧುನಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ :*
ಸಾರ್ವಜನಿಕರ ಸುಲಲಿತ ಓಡಾಟಕ್ಕೆ ದಾರಿ ಮಾಡಿಕೊಡುವುದು ಸಾರ್ಥಕವಾದ ಕಾರ್ಯ. ಕರ್ನಾಟಕ ಆಧುನಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಡ್ಯಾಂ, ಸುರಂಗ, ವಿದ್ಯುತ್ ಯೋಜನೆಗಳನ್ನು ಈಗಾಗಲೇ ನಿರ್ಮಿಸಿ ನಮ್ಮ ಹಿರಿಯರು ಉತ್ತಮ ಮಾರ್ಗವನ್ನು ಹಾಕಿಕೊಟ್ಟಿದ್ದಾರೆ. ರಾಜ್ಯದಲ್ಲಿ 1970ರಿಂದಲೂ ಬಹಳಷ್ಟು ಸುರಂಗಗಳನ್ನು ನಿರ್ಮಿಸಲಾಗಿದೆ. ಜಲವಿದ್ಯುತ್ ಯೋಜನೆಗಳಲ್ಲಿ ಪೆನ್ಸ್ಟಾಕ್‍ಗಳ ಸ್ಥಾಪನೆಗೆ ಸುರಂಗಗಳನ್ನು ಕೊರೆಯಲಾಗಿದೆ. ಮೆಟ್ರೋ ಕಾಮಗಾರಿಗಳಿಗೆ ಟನಲಿಂಗ್ ನಿಂದ ಸುರಂಗಮಾರ್ಗಗಳನ್ನು ನಿರ್ಮಿಸಲಾಗಿದೆ ಎಂದರು.
*ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು :*
ನಗರ ಪ್ರದೇಶಗಳಲ್ಲಿ ಸುರಂಗಮಾರ್ಗ ನಿರ್ಮಿಸುವುದು ಸವಾಲಿನ ಕೆಲಸ. ಇಂತಹ ಸವಾಲುಗಳನ್ನು ತಂತ್ರಜ್ಞಾನದ ಅಭಿವೃದ್ಧಿಗೆ ಪೂರಕವಾಗಿದೆ. ಇಂತಹ ಕ್ಲಿಷ್ಟಕರ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಇಂಜಿನಿಯರ್ ಹಾಗೂ ಅಂಡರ್‍ಗ್ರೌಂಡ್ ನಿರ್ಮಾಣ ಕಂಪನಿಗಳಿಗೆ ಅಭಿನಂದನೆಗಳು. ಇಲ್ಲಿನ ಕಾರ್ಮಿಕರ ಕೊಡುಗೆ ಅತಿ ಹೆಚ್ಚಿನದು. ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಾರೆ. ಅಂಡರ್‍ಗ್ರೌಂಡ್ ಕಾಮಗಾರಿಗಳಲ್ಲಿ ದುಡಿಯುವ ಕಾರ್ಮಿಕರು ನಿಜವಾದ ದೇಶದ ಆಸ್ತಿಯಾಗಿದ್ದು, ಇವರ ಹಿತರಕ್ಷಣೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.
*ಸವಾಲುಗಳಿಗೆ ತಕ್ಕಂತೆ ತಂತ್ರಜ್ಞಾನವೂ ಆಧುನೀಕರಣಗೊಂಡಿದೆ :*
ಸುರಂಗ ಮಾರ್ಗವೂ ಸೇರಿದಂತೆ ಅಂಡರ್‍ಗ್ರೌಂಡ್ ನಿರ್ಮಾಣಗಳು ಪ್ರಪಂಚಕ್ಕೆ ಹೊಸದಲ್ಲ. ಆದರೆ ಈ ನಿರ್ಮಾಣಗಳಲ್ಲಿ ಎದುರಾಗುವ ಸವಾಲುಗಳಿಗೆ ತಕ್ಕಂತೆ ತಂತ್ರಜ್ಞಾನವೂ ಆಧುನೀಕರಣಗೊಂಡಿದೆ. ಸುರಂಗಗಳು ರೈಲು ರಸ್ತೆ ಸಾರಿಗೆಯಾಗಿ ಬಳಕೆಯಾಗುತ್ತಿತ್ತು. ಈಗ ಪೈಪ್‍ಲೈನ್‍ಗಳಲ್ಲಿ ಅನಿಲ, ನೀರಿನ ಸರಬರಾಜುಗಳಿಗೂ ಸುರಂಗಗಳನ್ನು ಬಳಸಲಾಗುತ್ತಿದೆ. ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಹಸಿಯಾದ ಮನುಷ್ಯ ಈ ಸುರಂಗ ಮಾರ್ಗಗಳ ನಿರ್ಮಾಣದಲ್ಲಿ ಬೆಟ್ಟಗಳು, ಆಳವಾದ ಸಮುದ್ರ ಹೀಗೆ ಎದುರಾಗುವ ಎಲ್ಲ ತೊಡಕುಗಳನ್ನು ತೊಡೆಯಬಲ್ಲವನಾಗಿದ್ದಾನೆ. ಹ್ಯಾಂಡ್‍ಮೇಡ್ ಸಣ್ಣ ಸುರಂಗಗಳಿಂದ ಹಿಡಿದು ದೊಡ್ಡ ಸುರಂಗಮಾರ್ಗಗಳ ನಿರ್ಮಾಣದವರೆಗೆ ತಂತ್ರಜ್ಞಾನದ ಬೆಳವಣಿಗೆಯಾಗಿದೆ. ಸುರಂಗ ಮಾರ್ಗಗಳ ನಿರ್ಮಾಣ ಕಾರ್ಯದಲ್ಲಿ ಎದುರಾಗುವ ಭೌಗೋಳಿಕ ಸವಾಲುಗಳು ಹಾಗೂ ತ್ಯಾಜ್ಯದ ನಿರ್ವಹಣೆಗೆ ವೈಜ್ಞಾನಿಕ ವ್ಯವಸ್ಥೆ ಅಗತ್ಯವಾಗಿದೆ ಎಂದರು.
ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿಯು 2000 ತರಬೇತಿ ಶಿಬಿರಗಳನ್ನು ದೇಶಾದ್ಯಂತ ನಡೆಸಿರುವುದು ಶ್ಲಾಘನೀಯ. ನಿರ್ಮಾಣ ಕ್ಷೇತ್ರದ ಅಭಿವೃದ್ಧಿಗೆ ಟನಲಿಂಗ್ ಮತ್ತು ಅಂಡರ್‍ಗ್ರೌಂಡಿಂಗ್ ಕನ್ಸಟ್ರಕ್ಷನ್ ಕುರಿತ ಸಮಾವೇಶ ಸಹಕಾರಿಯಾಗಲಿದೆ ಎಂದರು.
[12/05, 7:22 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ* ಹಾಗೂ ಆಂಗ್ಲೋ ಇಂಡಿಯನ್ ಯುನಿಟಿ ಸೆಂಟರ್ ಸಹಭಾಗಿತ್ವದಲ್ಲಿ ಗೃಹ ಕಛೇರಿ ಕೃಷ್ಣಾದಲ್ಲಿ ಆಯೋಜಿಸಲಾಗಿದ್ದ *ಅಂತರರಾಷ್ಟ್ರೀಯ ನರ್ಸುಗಳ* *ದಿನಾಚರಣೆ* ಮತ್ತು *20ನೇ* ಕರ್ನಾಟಕ *ರಾಜ್ಯ ಮಟ್ಟದ ಫಾರೆನ್ಸ್* *ನೈಟಿಂಗೇಲ್ ಶುಶ್ರೂಷ* ಅಧಿಕಾರಿಗಳ ಪ್ರಶಸ್ತಿ *2020-2021 ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ, ಮಾಜಿ ಶಾಸಕ ಐವಾನ್ ನೆಗ್ಲಿ ಮತ್ತು ಇತರರು ಉಪಸ್ಥಿತರಿದ್ದರು.
[12/05, 8:11 PM] Gurulingswami. Holimatha. Vv. Cm: *ರಾಜ್ಯದ ನರ್ಸಿಂಗ್ ಕಾಲೇಜುಗಳ ಗುಣಮಟ್ಟ ಸುಧಾರಣೆಗೆ ಆದ್ಯತೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಮೇ 12 :
ರಾಜ್ಯದಲ್ಲಿರುವ ನರ್ಸಿಂಗ್ ಕಾಲೇಜುಗಳ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಂಗ್ಲೋ ಇಂಡಿಯನ್ ಯುನಿಟಿ ಸೆಂಟರ್ ಇವರ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಮತ್ತು 20ನೇ ಕರ್ನಾಟಕ ರಾಜ್ಯ ಮಟ್ಟದ ಫಾರೆನ್ಸ ನೈಟಿಂಗೇಲ್ ಶುಶ್ರೂಷ ಅಧಿಕಾರಿಗಳ ಪ್ರಶಸ್ತಿ 2020-2021 ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್ ವೃತ್ತಿಗೆ ಬಹಳ ಮಹತ್ವವಿದೆ. ಆಧುನಿಕ ವೈದ್ಯಕೀಯ ಉಪಕರಣಗಳ ಬಳಕೆ ಸೇರಿದಂತೆ ವೈದ್ಯಕೀಯ ಕ್ಷೇತ್ರದ ಎಲ್ಲ ಅರಿವು ಶುಶ್ರೂಷಕರಿಗೆ ಅವಶ್ಯಕವಿದೆ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು. ಉತ್ತಮ ಸೇವೆ ಸಲ್ಲಿಸಿದ ಶುಶ್ರೂಷಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ತಿಳಿಸಿದರು.
*ಆರೋಗ್ಯ ಕ್ಷೇತ್ರದ ಅಭಿವೃದ್ಧಿ :*
ಸರ್ಕಾರ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಆರೋಗ್ಯ ಕ್ಷೇತ್ರದ ವಲಯವಾರು ಅಭಿವೃದ್ಧಿಗೆ 108 ತಾಲ್ಲೂಕುಗಳನ್ನು ಗುರುತಿಸಲಾಗಿದೆ. ಅವುಗಳಿಗೆ ಮೂಲಸೌಕರ್ಯ, ಸ್ಟಾಫ್ ನರ್ಸುಗಳು, ಲ್ಯಾಬ್ ಪರಿಣಿತರು, ವೈದರನ್ನು ಒದಗಿಸುವ ಮಹತ್ವದ ಕಾರ್ಯವನ್ನು ಮಾಡಲಾಗುತ್ತಿದೆ. ರಾಜ್ಯದ ಅಭಿವೃದ್ದಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಪ್ರಮುಖವಾದ ಕ್ಷೇತ್ರಗಳು. ಎಲ್ಲ ನಗರಗಳಲ್ಲಿ ‘ನಮ್ಮ ಕ್ಲೀನಿಕ್’ ಸ್ಥಾಪನೆ, 100 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ದರ್ಜೆ, 4 ಜಿಲ್ಲೆಗಳಲ್ಲಿ ಸಂಚಾರಿ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು, 4000 ವೈದ್ಯರು ಹಾಗೂ ನರ್ಸುಗಳ ನೇಮಕಾತಿ ಮಾಡಲಾಗಿದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಅಡಿ ಕೆಲಸ ಮಾಡುತ್ತಿರುವ ನರ್ಸುಗಳ ವೇತನದ ಪಾವತಿಯಲ್ಲಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.
*ಶುಶ್ರೂಷಕರ ಮಾನವೀಯ ಸೇವೆ ಬೆಲೆ ಕಟ್ಟಲಾಗದ್ದು :*
ಉದಾತ್ತವಾದ ವೃತ್ತಿಯಲ್ಲಿರುವ ಶುಶ್ರೂಷಕರು ದೇವಧೂತರಂತೆ ಕಾರ್ಯನಿರ್ವಹಿಸುತ್ತಾರೆ. ಶುಶ್ರೂಷಕರ ಮಾನವೀಯ ಸೇವೆ ಬೆಲೆ ಕಟ್ಟಲಾಗದ್ದು. ವೃತ್ತಿಪರ ಶುಶ್ರೂಷಕರಿಂದ ರೋಗಿಗಳ ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ. ಯುದ್ಧಸಂದರ್ಭದಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಅವರು ಮಾಡಿದ ಸೇವೆ ವಿಶ್ವಕ್ಕೆ ಮಾದರಿಯಾಗಿದೆ. ಅವರ ಜಯಂತಿಯಂದು ಶುಶ್ರೂಷ ಅಧಿಕಾರಿಗಳಿಗೆ ಪ್ರಶಸ್ತಿ ನೀಡುತ್ತಿರುವುದು ಅತ್ಯಂತ ಸಮಂಜಸವಾಗಿದೆ. ಆಂಗ್ಲೋ ಇಂಡಿಯನ್ ಯೂನಿಟಿ ಸೆಂಟರ್ನ ಶ್ರೀ ಐವಾನ್ ನಿಗ್ಲಿಯವರು ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿರುವುದಕ್ಕೆ ಅಭಿನಂದನೆಗಳು. ರಾಜ್ಯದ ಶುಶ್ರೂಷಕರು ವಿಶ್ವದಾದ್ಯಂತ ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದರು.
*ಉತ್ತರ ಕರ್ನಾಟಕ ಭಾಗದ ನರ್ಸುಗಳನ್ನು ಪ್ರಶಸ್ತಿಗೆ ಪರಿಗಣಿಸಲು ಸಲಹೆ :*
ಉತ್ತರ ಕರ್ನಾಟಕ ಭಾಗದಲ್ಲಿ ಉತ್ತಮವಾದ ನರ್ಸಿಂಗ್ ಕಾಲೇಜುಗಳು ಹಾಗೂ ಶುಶ್ರೂಷಕರಿದ್ದಾರೆ. ದೂರದ ಊರುಗಳಲ್ಲಿರುವ ನರ್ಸುಗಳ ಸೇವೆಯನ್ನು ಗುರುತಿಸಿದರೆ , ಆ ಪ್ರದೇಶದಲ್ಲಿರುವ ನರ್ಸುಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಆ ಭಾಗದ ನರ್ಸುಗಳನ್ನೂ ಪ್ರಶಸ್ತಿಗೆ ಪರಿಗಣಿಸಬೇಕೆಂದು ಶ್ರೀ ಐವಾನ್ ನಿಗ್ಲಿಯವರಿಗೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.
ಶಿವಮೊಗ್ಗದ ಜಾಹ್ನವಿ ಗೌಡ ಎಂಬ 24 ವರ್ಷದ ಶುಶ್ರೂಷಕಿ ಮೃತಪಟ್ಟಾಗ ತಮ್ಮ ಅಂಗಾಂಗಳನ್ನು ದಾನ ಮಾಡುವ ಮೂಲಕ 6 ಜನರಿಗೆ ಜೀವದಾನ ಮಾಡಿದ್ದಾರೆ. ತಮ್ಮ ಮರಣದ ನಂತರವೂ ತನ್ನ ಅಂಗಾಂಗಗಳು ಇತರರಿಗೆ ಉಪಯೋಗವಾಗಲಿ ಎಂಬ ಉದಾತ್ತ ಭಾವ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು
Post a Comment