[09/05, 7:28 PM] Pannagaraja Kulakarni: *ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು*
ಇಂದು ಉನ್ನತ ಶಿಕ್ಷಣ ಇಲಾಖೆಯ ಎಲ್ಲ ನೇಮಕಾತಿಗಳನ್ನು ಜನ ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಬಹಳ ವಿಷಾದದ ಸಂಗತಿ.
1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅಕ್ಟೋಬರ್ ನಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿ, ಪರೀಕ್ಷೆ ನಡೆಸಲು ಅಧಿಸೂಚನೆ ನೀಡಿದ ನಂತರ 2 ಬಾರಿ ಅದು ಮುಂದೂಡಲ್ಪಡುತ್ತದೆ. ನಂತರ 30 ಸಾವಿರಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಾರೆ.
ರಾಜ್ಯದ ವಿವಿಧ ಭಾಗಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಮಾ.12,13,14,15ರಂದು ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳಾ ಅತಿಥಿ ಉಪನ್ಯಾಸಕಿ ಹಾಗೂ ರಿಜಿಸ್ಟ್ರಾರ್ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಪರೀಕ್ಷೆಯಲ್ಲೂ ಓಎಂಆರ್ ಪತ್ರಿಕೆಗಳನ್ನು ತಿದ್ದಿ ಅಖ್ರಮ ಮಾಡಿದ್ದು, ಇದು ಪಿಎಸ್ ಐ ಅಕ್ರಮಕ್ಕೆ ಸಾಮ್ಯತೆ ಹೊಂದಿದೆ.
ಒಂದೊಂದು ಹುದ್ದೆಗೆ 1 ಕೋಟಿಯಷ್ಟು ಲಂಚ ಪಡೆದಿರುವ ಪ್ರಬಲ ಆರೋಪ ಕೇಳಿಬರುತ್ತಿದೆ. ಇವರು ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಿ.ಪ್ರದೀಪ್ ಎಂಬ ಐಎಎಸ್ ಅಧಿಕಾರಿಯವರನ್ನು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಕ ಮಾಡಿಕೊಳ್ಳುತ್ತಾರೆ. ನಂತರ ಬೊಮ್ಮಾಯಿ ಅವರು ಬಂದ ನಂತರ ಬೇರೆಯವರನ್ನು ಆಪ್ತಸಹಾಯಕರನ್ನಾಗಿ ತೆಗೆದುಕೊಳ್ಳಲಾಗಿದೆ.
ಪ್ರದೀಪ್ ಅವರು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದು, ಇವರು ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥ್ ನಾರಾಯಣ ಅವರ ಸಂಬಂಧಿಗಳಾಗಿದ್ದಾರೆ. ಇವರನ್ನು ಆಪ್ತಸಹಾಯಕರನ್ನಾಗಿ ನೇಮಕಗೊಂಡ ನಂತರ ಉಪಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರನ್ನಾಗಿ ಅವರನ್ನೇ ಮುಂದುವರಿಸುತ್ತಾರೆ.
ಇಂದಿನ ಎಲ್ಲ ಆರೋಪಗಳಲ್ಲಿ ಈ ಇಲಾಖೆಯ ಮೇಲಿನ ಅಪನಂಬಿಕೆ ಹೆಚ್ಚಾಗಿರುವುದರಿಂದ ಅವರ ಹೆಸರು ಪ್ರಸ್ತಾಪ ಮಾಡಬೇಕಾಗಿದೆ. ಕಾಲೇಜು ಶಿಕ್ಷಣ ಇಲಾಖೆಯನ್ನು ಆಯುಕ್ತಾಲಯವನ್ನಾಗಿ ಪರಿವರ್ತಿಸಿ ತಾಂತ್ರಿಕ ಇಲಾಖೆಯನ್ನು ಇವರ ಅಡಿಗೆ ತೆಗೆದುಕೊಂಡು ಬರುತ್ತಾರೆ. ಇಂಜಿನಿಯರಿಂಗ್ ಕಾಲೇಜುಗಳ ಸೀಟ್ ಮಾನ್ಯತೆಗಳೆಲ್ಲವೂ, ಪಾಲಿಟೆಕ್ನಿಕ್ ಈ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತದೆ.
1242 ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಹಗರಣವಾಗಿರುವ ಸಂದರ್ಭದಲ್ಲಿ, ರಾಜ್ಯದ 3800ಕ್ಕೂ ಹೆಚ್ಚು ಸರ್ಕಾರಿ ಕಾಲೇಜುಗಳ ಪೈಕಿ 430ಕ್ಕೂ ಹೆಚ್ಚು ಪ್ರಾಂಶುಪಾಲರ ಹುದ್ದೆ ಖಾಲಿ ಇದೆ. ಆ ಹುದ್ದೆ ತುಂಬಲು 310 ಹುದ್ದೆಗಳಿಗೆ ಆರ್ಥಿಕ ಇಲಾಖೆಯಿಂದ ತುಂಬಲು ಆರ್ಥಿಕ ಇಳಾಖೆಯಿಂದ ಅನುಮೋದನೆ ಪಡೆದು ಅದರಲ್ಲೂ ಅಕ್ರಮ ಮಾಡಲು ಉನ್ನತ ಶಿಕ್ಷಣ ಸಚಿವರು ಕಾಲೇಜು ಶಿಕ್ಷಣ ಇಲಾಖೆ ಮೂಲಕ ಅಕ್ರಮ ಎಸಗುವ ಪ್ರಯತ್ನ ಮಾಡಿದ್ದಾರೆ. ಆದರೆ ಬೇರೆ ಕಾರಣಕ್ಕೆ ಈ ಹುದ್ದೆ ನೇಮಕಾತಿಗೆ ಅರ್ಜಿ ಕರೆದಿಲ್ಲ.
ಒಂದೆಡೆ ಸಹಾಯಕ ಪ್ರಾದ್ಯಾಪಕರ ಹುದ್ದೆ ಅಕ್ರಮ ಹಾಗೂ ಪ್ರಾಂಶುಪಾಲರ ಹುದ್ದೆಯಲ್ಲಿ ಮಾಡಲು ಹೊರಟಿರುವ ಅಕ್ರಮ ಇವೆರಡು ತನಿಖೆಗೆ ಒಳಪಡಿಸಬೇಕು ಎಂದು ಪಕ್ಷದ ಪರವಾಗಿ ಸರ್ಕಾರವನ್ನು ಒತ್ತಾಯಿಸುತ್ತೇನೆ. ಸಚಿವ ಅಸ್ವತ್ಥ್ ನಾರಾಯಣ ಅವರು ಸಾಕಷ್ಟು ಸಬೂಬುಗಳನ್ನು ಕೊಡಬಹುದು. 1242 ಹುದ್ದೆಗೆ 30 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದು, ಆಗಿರುವ ಅಕ್ರಮ, ಇಬ್ಬರ ಬಂಧನವಾಗಿರುವುದಕ್ಕೆ ಕಾರಣ ಇದೆಲ್ಲದರ ವಿಚಾರ ತನಿಖೆ ನಡೆಯದೇ ಸತ್ಯಾಂಶ ಹೊರಬರುವುದಿಲ್ಲ.
ಈ ಎರಡು ನೇಮಕಾತಿ ಪ್ರಕರಣಗಳಲ್ಲಿ ಉನ್ನತ ಶಿಕ್ಷಣ ಸಚಿವರು ಹಾಗೂ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಭಾಗಿಯಾಗಿದ್ದು, ಸರ್ಕಾರ ಕೂಡಲೇ ಈ ವಿಚಾರವಾಗಿ ತನಿಖೆ ನಡೆಸಬೇಕು. ಅವರು ಯಾವ ತನಿಖೆ ಮಾಡುತ್ತಾರೋ ಮುಖ್ಯಮಂತ್ರಿಗಳು ನಿರ್ಧರಿಸಲಿ, ಆದರೆ ಪಿ.ಎಚ್ಡಿ, ಎಂ ಫಿಲ್, ನೆಟ್, ಸ್ಲೆಟ್ ಅರ್ಹತೆ ಪಡೆದು ಉದ್ಯೋಗದ ಆಕಾಂಕ್ಷೆಯೊಂದಿಗೆ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಮೋಸ ಮಾಡುವ ಪ್ರಕ್ರಿಯೆಗೆ ಸರ್ಕಾರ ಅವಕಾಶ ನೀಡಬಾರದು ಎಂದು ಒತ್ತಾಯಿಸುತ್ತೇನೆ.
ಕಳೆದ ಒಂದು ವಾರದ ಹಿಂದೆ ಕಾಲೇಜು ಶಿಕ್ಷಣ ಇಲಾಖೆಯಿಂದ ಒಂದು ಪ್ರಕಟಣೆ ನೀಡಿದ್ದು, ಯಾರೆಲ್ಲಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕರು, ನಿಯೋಜನೆ ಮೇರೆಗೆ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಿರುವವರನ್ನು ವಾಪಸ್ ಕರೆಸಿಕೊಂಳ್ಲುತ್ತೇವೆ ಎಂದು ಹೇಳಿದೆ. ಆದರೆ ಭಗವಾನ್ ಎಂಬ ಉಪನ್ಯಾಸಕರು ಎಂ.ಎಸ್ ಕಟ್ಟಡದಲ್ಲಿ ಸುಮಾರ್ 20 ವರ್ಷದಿಂದ ಇ ಗವರ್ನೆಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ವಿಧಾನ ಪರಿಷತ್ ಸಮಿತಿಯು ಇದು ಅಕ್ರಮವಾಗಿ ನಿಯೋಜಿಸಿದ್ದು, ಅವರನ್ನು ವಾಪಸ್ ಕರೆತರಬೇಕು ಎಂದು ವರದಿ ನೀಡಿದ್ದರೂ ಅವರನ್ನು ಅಲ್ಲೇ ಮುಂದುವರಿಸಲಾಗಿದೆ.
ಇನ್ನು ರಮೇಶ್ ರೆಡ್ಡಿ ಎಂಬ ಉಪನ್ಯಾಸಕರು ಕಾಲೇಜು ಶಿಕ್ಷಣ ಇಲಾಖೆಯ ಇ ಗವರ್ನೆನ್ಸ್ ನಲ್ಲಿ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಕಾಲೇಜು ಶಿಕ್ಷಣ ಇಲಾಖೆಯಲ್ಲಿ ನಡೆದಿರುವ, ನಡೆಯಬಹುದಾದ ಎಲ್ಲ ಅಕ್ರಮಗಳಿಗೆ ಇವರ ಪಾತ್ರವಿದೆ. ಹೀಗಾಗಿ ಈ ಇಬ್ಬರ ಹೆಸರು ಪ್ರಸ್ತಾಪ ಮಾಡುತ್ತಿದ್ದೇನೆ. ಈ ಎಲ್ಲದರ ಬಗ್ಗೆ ಮಗ್ರ ತನಿಖೆ ಆಗಬೇಕು.
ರಾಜೀವ್ ಗಾಂಧಿ ವಿವಿಯ ರಿಜಿಸ್ಟ್ರಾರ್ ಆಗಿದ್ದ ಅಶೋಕ್ ಕುಮಾರ್ ಅವರಿಗೆ ಅವರದೇ ಆದ ಶಿಷ್ಯವರ್ಗವಿದೆ. ನಾಲ್ಕು ವಿವಿಯ ಉಪಕುಲಪತಿಗಳ ಆಯ್ಕೆ ಪ್ರಕ್ರಿಯೆ ವೇಳೆ 2 ಕೋಟಿ ರೂ. ಲಂಚವನ್ನು ನೀಡಿದ್ದರು. ಅವರು ಆಯ್ಕೆಯಾಗದಿದ್ದಾಗ ತಾವು ಮಾಡಿಕೊಂಡ ಸಾಲಕ್ಕೆ ಭಯಭೀತರಾಗಿ ಅವರು ಆತ್ಮಹತ್ಯೆಗೆ ಶರಣಾದರು. ಆ ದಿನ ನವೆಂಬರ್ 9, 2020ರಂದು ಕರ್ನಾಟಕ ರಾಜ್ಯಪಾಲರಿಗೆ ಈ ಪ್ರಕರಣವನ್ನು ಗಮನಕ್ಕೆ ತಂದಿದೆ.
ಅಶ್ವತ್ಥ್ ನಾರಾಯಣ ಅವರು ಉನ್ನತ ಶಿಕ್ಷಣ ಸಚಿವರಾಗಿರುವ ಸಂದರ್ಭದಲ್ಲಿ ರಾಷ್ಟ್ರೀಯ ಮಾನ್ಯತೆ ಪಡೆದ 9 ವಿವಿಗಳು ರಾಜ್ಯದಲ್ಲಿದ್ದು, ಕೇಂದ್ರ ಸರ್ಕಾರದ ಮಾನ್ಯತೆ ಪಡೆದಿರುವ 1 ವಿವಿ, 13 ಡೀಮ್ಡ್ ವಿವಿಗಳು, ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ 29 ವಿವಿ, 17 ಖಾಸಗಿ ವಿವಿಗಳು ಇವರ ಅಡಿಯಲ್ಲಿ ಬರುತ್ತಿದೆ. ಇವರು 2019ರಿಂದ ಈ ಇಲಾಖೆ ಸಚಿವರಾಗಿದ್ದು, ಸುಮಾರು 45 ಉಪಕುಲಸಚಿವರ ನೇಮಕಾತಿಯಾಗಿದೆ. ನಾಮಕಾವಸ್ಥೆಗೆ ಆಯ್ಕೆ ಸಮಿತಿ ಮಾಡಿದ್ದು, ಇವರು ಮೂರು ಹೆಸರುಗಳನ್ನು ಶಿಫಾರಸ್ಸು ಮಾಡಿ ನಂತರ ಒಂದು ಹೆಸರನ್ನು ಅಂತಿಮ ಹೆಸರನ್ನು ರಾಜ್ಯಪಾಲರಿಗೆ ರನೃವಾನಿಸಬೇಕು. ಇವರು ಸಚಿವರಾದ ನಂತರ ಎಲ್ಲ ಕುಲಸಚಿವರ ಹುದ್ದೆಗಳನ್ನು ವ್ಯಾಪಾರಕ್ಕೆ ಇಟ್ಟಿದ್ದಾರೆ.
ಇದು ಸಾಮಾನ್ಯ ಜನ ಬೀದಿಯಲ್ಲಿ ನಿಂತು ಮಾತನಾಡುತ್ತಿರುವ ವಿಚಾರ. ಈ ಪರಿಸ್ಥಿತಿ ತಂದ ಕೀರ್ತಿ ಸಚಿವರದ್ದಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಅಶೋಕ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಇವರು ದಾಖಲೆ ಕೇಳುತ್ತಾರೆ. ಈ ಪ್ರಕರಣವನ್ನು ತನಿಖೆಗೆ ಒಳಪಡಿಸಿ ಅಶೋಕ್ ಕುಮಾರ್ ಅವರ ಖಾತೆಯಿಂದ ಯಾರಿಗೆ ಹಣ ಹೋಗಿದೆ ಎಂದು ನೋಡಿದರೆ ಸಚಿವರ ಕಚೇರಿಯಲ್ಲಿ ಕೆಲಸ ಮಾಡುವ ಎಲ್ಲರೂ ಹೆಸರು ಬಹಿರಂಗವಾಗುತ್ತದೆ. ಸಚಿವರ ಆಪ್ತಸಹಾಯಕರ ಖಾತೆಗೆ ದೊಡ್ಡ ಮಟ್ಟದಲ್ಲಿ ಹಣ ಸಂದಾಯವಾಗಿದೆ. ನ್ಯಾಯಾಂಗ ತನಿಖೆ ಹೊರತಾಗಿ ಸತ್ಯಾಂಶ ಹೊರಬರುವುದಿಲ್ಲ.
ಹೀಗಾಗಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು, ನಂತರ ಅಶ್ವತ್ಥ್ ನಾರಾಯಣ ಅವರು ಸಚಿವರಾದ ನಂತರ ಎಲ್ಲೆಲ್ಲಿ ಕುಲಪತಿಗಳ ನೇಮಕವಾಗಿದೆ ಎಲ್ಲ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತೇನೆ.
ಕಿಯೋನಿಕ್ಸ್ ನಿಗಮ ಅಸ್ವತ್ಥ್ ನಾರಾಯಣ್ ಅವರ ವ್ಯಾಪ್ತಿಗೆ ಬರುತ್ತಿದ್ದು, ಇದರ ಉಪಯೋಗ ಮಾಡಿಕೊಂಡು ಖಾಗಿಯವರಿಗೆ ಗುತ್ತಿಗೆ ಕೊಡಿಸುವ ಕೆಲಸವಾಗುತ್ತಿದೆ. ಹೀಗಾಗಿ ಇವರು ಸಚಿವರಾದ ನಂತರ ಕಿಯೋನಿಕ್ಸ್ ನಲ್ಲಿ ನೀಡಲಾಗಿರುವ ಎಲ್ಲ ಗುತ್ತಿಗೆಗಳನ್ನು ತನಿಖೆಗೆಗೆ ಒಳಪಡಿಸಬೇಕಿದೆ. ಕಿಯೋನಿಕ್ಸ್ ನಲ್ಲಿ ನೇರ ಸಿಬ್ಬಂದಿಗಳು 45 ಮಾತ್ರ. ಆದರೆ ಒಂದು ಸಾವಿರ ರೂ.ಗಿಂತ ಮೇಲ್ಪಟ್ಟ ಗುತ್ತಿಗೆಗಳನ್ನು ಪಡೆದು ಖಾಸಗಿಯವರಿಗೆ ಹೊರಗುತ್ತಿಗೆ ನೀಡಲಾಗುತ್ತಿದೆ. ಈ ಎಲ್ಲ ಅವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕು.
2019-20ನೇಸಾಲಿನಲ್ಲಿ ಪದವಿ ಕಾಲೋಜುಗಳಲ್ಲಿ 1,09,916 ಲ್ಯಾಪ್ ಟಾಪ್ ವಿತರಿಸಿದ್ದು, ನಂತರ 2020-21ನೇ ಸಾಲಿನಲ್ಲಿ 1,55,000 ಟ್ಯಾಬ್ಲೆಟ್ ವಿತರಿಸಿದ್ದು, ಇದರಲ್ಲೂ ಸಾಕಷ್ಟು ಅಕ್ರಮಗಳು ನಡೆದಿವೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಬಸವರಾಜ ರಾಯರೆಡ್ಡಿ ಅವರು ಉನ್ನತಶಿಕ್ಷಣ ಸಚಿವರಾಗಿದ್ದಾಗ ಬಿಜೆಪಿಯ ಮಿತ್ರರು ವಿಧಾನ ಪರಿಷತ್ ನಲ್ಲಿ ಚರ್ಚೆ ಮಾಡಿ ಲ್ಯಾಪ್ ಟಾಪ್ ದರದಲ್ಲಿ ವ್ಯಾತ್ಯಾಸ ಇದ್ದು ತನಿಖೆ ಮಾಡಬೇಕು ಎಂದರು. ಆದರೆ ಇಂದು ಇವರು ವಿತರಿಸಿರುವ ಲ್ಯಾಪ್ ಟಾಪ್ ಹಾಗೂ ಟ್ಯಾಬ್ಲೆಟ್ ಖರೀದಿಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ.
ಹೀಗೆ ಅಶ್ವತ್ಥ್ ನಾರಾಯಣ ಅವರು ಉನ್ನತಶಿಕ್ಷಣ ಇಲಾಖೆ ಸಚಿವರಾದ ನಂತರ ಹಲವು ಹಂತಗಳಲ್ಲಿ ಅವ್ಯವಹಾರ ಮಾಡಿ ಇಡೀ ಉನ್ನತ ಶಿಕ್,ಣ ಇಲಾಖೆಯನ್ನು ಕಲುಷಿತ ಮಾಡಿದ್ದಾರೆ. ಈ ಎಳ್ಲ ವಿಚಾರವಾಗಿ ತನಿಖೆ ಮಾಡಬೇಕು ಎಂದು ನಾನು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ.
[09/05, 7:28 PM] Pannagaraja Kulakarni: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕೆಂಪಲಿಂಗನಹಳ್ಳಿ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನದ ದೇವಾಂಗ ಶಾಖಾಮಠದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರೀ ದಯಾನಂದಪುರಿ ಸ್ವಾಮೀಜಿಯವರ 33ನೇ ಪೀಠಾರೋಹಣ ವಾರ್ಷಿಕೋತ್ಸವ, ನೂತನ ಸಮುದಾಯ ಭವನ, ಕಾಲೇಜು ಕಟ್ಟಡದ ಉದ್ಘಾಟನೆ, ಕರ್ನಾಟಕ ರಾಜ್ಯ ದೇವಾಂಗ ಸಂಘ ನೂತನ ಕಟ್ಟಡದ ಶಂಕುಸ್ಥಾಪನೆ ಮತ್ತು ಜನಜಾಗೃತಿ ಸಮಾವೇಶದಲ್ಲಿ ಶ್ರೀ ದಯಾನಂದಾಪುರಿ ಸ್ವಾಮೀಜಿಗಳು, ಸಿಎಂ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಆರೋಗ್ಯ ಸಚಿವ ಸುಧಾಕರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಡಿ. ಲಕ್ಷ್ಮೀನಾರಾಯಣ್, ಮಾಜಿ ಎಂಎಲ್ಸಿ ವೇಣುಗೋಪಾಲ್ ಮತ್ತಿತರರು ಪಾಲ್ಗೊಂಡರು.
Post a Comment