ದಿನ ವಿಶೇಷ: *"ಮೋಹಿನಿ ಏಕಾದಶಿ"* ಶ್ರೀ ಬೃಹ ಸ್ಪ ತಿ ಜಯಂತಿ.....

ದಿನ ವಿಶೇಷ: *"ಮೋಹಿನಿ ಏಕಾದಶಿ"*


🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌   ‌        ‌             ‌    ‌          ‌       ‌        ‌     ‌                                                                           
*ಬೃಹಸ್ಪತಿ ಜಯಂತಿ*

ವೈಶಾಖ ಶುದ್ಧ ಏಕಾದಶಿ ಬೃಹಸ್ಪತಿ ಜಯಂತಿ. ಬೃಹಸ್ಪತಿ ಜಯಂತಿಯನ್ನು  ಆಚರಿಸಲಾಗುತ್ತದೆ.
 ‌                                                                                                                          ಬೃಹಸ್ಪತಿ- ಒಬ್ಬ ಋಷಿ. ದೇವತೆಗಳ ಗುರು.

ಅಂಗೀರಸನೆಂಬ ಮುನಿಯ ಮಗ. ಅಗ್ನಿರೂಪ ಧರಿಸಿ ಲೋಕಗಳನ್ನು ಕಾಪಾಡಿದವ. ಈತನ ಸೋದರಿ ಬ್ರಹ್ಮವಾದಿನಿ; ಪ್ರಭಾಸನ ಪತ್ನಿ. ಪತ್ನಿ ತಾರಾದೇವಿ. ಸುಭೆ ಇವಳ ಇನ್ನೊಂದು ಹೆಸರು. ಬೃಹಸ್ಪತಿಯ ಮತ್ತೊಬ್ಬ ಹೆಂಡತಿ ಚಾಂದ್ರಮಸಿ. ಚಂದ್ರನಿಂದ ಅಪಹೃತಳಾದ ತಾರೆಯೇ ಚಾಂದ್ರಮಸಿಯೆಂಬ ವಾದವೂ ಇದೆ. ಈಕೆಯಲ್ಲಿ ಶಂಯು, ನಿಶ್ಚ್ಯವನ, ವಿಶ್ವಜಿತ್, ವಿಶ್ವಭುಕ್, ಬಡಬಾಗ್ನಿ, ಸ್ಪಿಷ್ಟಕೃತರೆಂಬ ಆರುಮಂದಿ ಪುತ್ರರೂ ಸ್ವಾಹಾ ಎಂಬ ಪುತ್ರಿಯೂ ಜನಿಸಿದರು.

ಈತನ ಮಗನಾದ ಕಚ ಯಾವ ಪತ್ನಿಯಲ್ಲಿ ಜನಿಸಿದವನೆಂದು ತಿಳಿಯದು. ಬೃಹಸ್ಪತಿ ತನ್ನ ಅಣ್ಣನಾದ ಉಚಧ್ಯನ ಪತ್ನಿ ಮಮತಾದೇವಿಯಲ್ಲಿ ಭರದ್ವಾಜನೆಂಬ ಮಗನನ್ನು ಪಡೆದ. ನಹುಷ ಇಂದ್ರನಾಗಿದ್ದಾಗ ಶಚಿದೇವಿಯನ್ನು ನಿರ್ಬಂಧಪಡಿಸಿದ. ನಹುಷನನ್ನು ಅನರ್ಥಕ್ಕೆ ಗುರಿಮಾಡಿ, ಶಚಿದೇವಿಯ ಪಾತಿವ್ರತ್ಯವನ್ನು ಕಾಪಾಡಿದ. ಕೋಸಲ ದೇಶದ ಅರಸನಾದ ವಸುಮನಸನೆಂಬ ರಾಜನಿಗೆ ರಾಜಧರ್ಮಗಳನ್ನು ವಿವರಿಸಿದ. ರಾಜಧರ್ಮವನ್ನು ಕುರಿತು ಇಂದ್ರನೊಡನೆ ಸಂವಾದ ಮಾಡಿದ. ಉಪರಿಚವಸುವಿನಿಂದ ಯಜ್ಞ ಮಾಡಿಸಿದ. ಯಧಿಷ್ಠಿರನಿಗೆ ಧರ್ಮೋಪದೇಶ ನೀಡಿದ. ದ್ರುಪದನ ಅರಮನೆಯಲ್ಲಿ ದ್ರೌಪದಿ ಚಿಕ್ಕವಳಿರುವಾಗ ಒಬ್ಬ ಬ್ರಾಹ್ಮಣ ಬಂದು ಆಕೆಗೆ ಬೃಹಸ್ಪತಿ ನೀತಿಯನ್ನು ಉಪದೇಶಿಸಿದ್ದನೆಂದು ವನವಾಸ ಕಾಲದಲ್ಲಿ ದ್ರೌಪದಿ ಧರ್ಮರಾಜನಿಗೆ ತಿಳಿಸಿದಳು. ಒಮ್ಮೆ ಶುಕ್ರಾಚಾರ್ಯ ಧೂಮವ್ರತವೆಂಬ ತಪಸ್ಸು ಕೈ ಕೊಂಡು, ಶಿವನನ್ನು ಕುರಿತು ತಪಸ್ಸಿನಲ್ಲಿದ್ದಾಗ ಬೃಹಸ್ಪತಿ ಶುಕ್ರಾಚಾರ್ಯನ ರೂಪದಿಂದ ರಾಕ್ಷಸರ ಬಳಿಗೆ ಹೋಗಿ ಅವರೊಡನೆ ಸೇರಿ ಅವರಿಗೆ ನಾಸ್ತಿಕವಾದ ಬೋಧಿಸಿ ಅವರನ್ನು ವಶಪಡಿಸಿಕೊಂಡ. ಮುಂದೆ ತಪಸ್ಸು ಮುಗಿಸಿ ಬಂದ ಶುಕ್ರನನ್ನು ರಾಕ್ಷಸರಾಜ ತಿರಸ್ಕರಿಸಲು ಶುಕ್ರ ರಾಕ್ಸಸರಿಗೆ ಶಾಪವಿತ್ತ. ಬೃಹಸ್ಪತಿ ಸಂತುಷ್ಟನಾಗಿ ತನ್ನ ಕೆಲಸವಾಯಿತೆಂದು ಕಣ್ಮರೆಯಾದ. ಈತ ದೈತ್ಯ ವಿನಾಶಕ್ಕಾಗಿ ಸರಸ್ವತೀ ತೀರದಲ್ಲಿ ಯಾಗ ಮಾಡಿದ. ಇದರ ಫಲವಾಗಿ ಯುದ್ಧದಲ್ಲಿ ದೈತ್ಯರು ಸೋತು ದೇವತೆಗಳು ಗೆದ್ದರು ಎಂದು ಒಂದು ಪೌರಾಣಿಕ ಕಥೆಗಳು.

ಗುರು - ಇದು ಸೂರ್ಯನಿಂದ 5ನೇ ಗ್ರಹ ಮತ್ತು ಸೌರ ಮಂಡಲದಲ್ಲೇ ಅತಿ ದೊಡ್ಡ ಗ್ರಹ.

ಗುರು ಮತ್ತು ಉಳಿದ ಅನಿಲರೂಪಿಗಳಾದ ಶನಿ, ಯುರೇನಸ್, ಮತ್ತು ನೆಪ್ಚೂನ್ಗಳನ್ನು ಕೆಲವೊಮ್ಮೆ "ಜೋವಿಯನ್ ಗ್ರಹ"ಗಳೆಂದು ಕರೆಯಲಾಗುತ್ತದೆ.

ಸೂರ್ಯ, ಚಂದ್ರ ಮತ್ತು ಶುಕ್ರ ಗ್ರಹಗಳ ನಂತರ, ಗುರು ಗ್ರಹವು ಸಾಮಾನ್ಯವಾಗಿ ಆಗಸದಲ್ಲಿ 4ನೇ ಅತಿ ಪ್ರಕಾಶಮಾನವಾದ ಕಾಯ; ಆದರೆ, ವರ್ಷದ ಕೆಲವು ದಿನಗಳಲ್ಲಿ ಮಂಗಳ ಗ್ರಹವು ಗುರುವಿಗಿಂತ ಹೆಚ್ಚು ಪ್ರಕಾಶಮಾನವಾಗಿ ಕಂಡುಬರುತ್ತದೆ.

ನವಗ್ರಹಗಳಲ್ಲಿ ಅತ್ಯಂತ ದೊಡ್ಡದಾದ ಗ್ರಹ ಗುರು. ವರ್ಷಕ್ಕೊಮ್ಮೆ ತನ್ನ ಪಥವನ್ನು ಗುರುವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಿಸುತ್ತಾನೆ. ಈ ಸಂದರ್ಭಗಳಲ್ಲಿ ಹನ್ನೆರಡು ರಾಶಿಯ ಮೇಲೂ ಗುರು ತನ್ನ ಶುಭ ಹಾಗೂ ಅಶುಭ ಫಲವನ್ನು ಬೀರುತ್ತಾನೆ.

ಗುರುವು ಅದೃಷ್ಟ, ಜ್ಞಾನ, ಸಂಪತ್ತು ವೈವಾಹಿಕ ಸಂತೋಷ ಹಾಗೂ ಸಮೃದ್ಧಿಯನ್ನು ಪ್ರತಿನಿಧಿಸುವಂತಹ ಶುಭ ಗ್ರಹ.

ಯಾವ ರಾಶಿಯಲ್ಲಿ ಗುರು ಪ್ರಬಲನಾಗಿರುತ್ತಾನೋ ಆ ರಾಶಿಯ ವ್ಯಕ್ತಿಯು ಗುರುಬಲದಿಂದಾಗಿ ಅದೃಷ್ಟ, ಸಂಪತ್ತು ಹಾಗೂ ವೈವಾಹಿಕ ಜೀವನದಲ್ಲಿ ಸಂತೋಷವನ್ನು ಗಳಿಸುತ್ತಾನೆ. ಆದಾಗಿಯೂ ವ್ಯಕ್ತಿಯ ಜಾತಕದಲ್ಲಿ ಗ್ರಹವು ಬಲವಾಗಿರದಿದ್ದರೆ ಉನ್ನತ ಸ್ಥಾನದಿಂದ ವ್ಯಕ್ತಿಯು ಕೆಳಗಿಳಿಯಬೇಕಾದ ಪ್ರಸಂಗ ಒದಗಿ ಬರಬಹುದು.

ಗುರು (ಸಂಸ್ಕೃತ:गुरु,ಅಂದರೆ ಒಂದು ನಿರ್ದಿಷ್ಟ ವಿಭಾಗದಲ್ಲಿ ಹೆಚ್ಚಿನ ಜ್ಞಾನ, ಬುದ್ಧಿವಂತಿಕೆ ಮತ್ತು ನಿಪುಣತೆಯನ್ನು ಹೊಂದಿರುವ, ಮತ್ತು ಇತರರಿಗೆ ನಿರ್ದೇಶನವನ್ನು ನೀಡಲು (ಶಿಕ್ಷಕ) ಈ ಬುದ್ಧಿವಂತಿಕೆಗಳನ್ನು ಬಳಸುವ ವ್ಯಕ್ತಿಯಾಗಿರುತ್ತಾನೆ.

ಸಂಸ್ಕೃತದಲ್ಲಿ "ಗು" ಅಂದರೆ ಅಂಧಕಾರ ಮತ್ತು "ರು" ಅಂದರೆ ಬೆಳಕು. ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿಗೆ ಕರೆದುಕೊಂಡು ಹೋಗುವವನೇ ಗುರು. ‌                           ‌   ‌    ‌   ‌   ‌   ‌   ‌   ‌       ‌                   ‌     ‌    ‌                 ‌      ‌                                                                                      ‌" *ಜ್ಯೋತಿಷ್ಯದಲ್ಲಿ ಗುರು ಗ್ರಹದ ಸ್ಥಾನಮಾನ*"

ಭಾರತೀಯ ವೈದಿಕ ಜ್ಯೋತಿಷ್ಯದಲ್ಲಿ ಗುರು ಗ್ರಹವು ಸಂಕೀರ್ಣತೆಯ ಸಮುದ್ರವಾಗಿದೆ. ಜ್ಯೋತಿಷ್ಯವನ್ನು ಸಂಪೂರ್ಣವಾಗಿ ಅನುಸರಿಸುವ ಜನರಿಗೆ ಈ ಗ್ರಹದ ಕುರಿತು ಸಾಕಷ್ಟು ತಿಳುವಳಿಕೆಯನ್ನು ಅರಿಯುವ ಅಗತ್ಯವಿದೆ. ಬ್ರಹ್ಮಾಂಡದೊಳಗಿನ ನವಗ್ರಹಗಳ ಪೈಕಿ ಒಂದಾದ ಗುರು ಅತ್ಯಂತ ಶಕ್ತಿಶಾಲಿ ಗ್ರಹವೆಂದು ಪರಿಗಣಿಸಲಾಗಿದೆ. ಈ ಗ್ರಹವನ್ನು "ದೇವಗುರು" ಅಥವಾ "ಬೃಹಸ್ಪತಿ" ಎಂದೂ ಕರೆಯುತ್ತಾರೆ. ಗುರು ಗ್ರಹವು ವ್ಯಕ್ತಿಯ ಜೀವನದಲ್ಲಿ ಉತ್ತಮ ಪ್ರಭಾವ ಬೀರುವ ಗ್ರಹವಾಗಿದ್ದು, ಜ್ಯೋತಿಷ್ಯದ ಪ್ರಕಾರ, ಗುರುವಿನ ಶಕ್ತಿಯು ನಮ್ಮನ್ನು ಅಪಾರ ಜ್ಞಾನಿಯನ್ನಾಗಿ ಅಥವಾ ಸಮರ್ಪಣಾ ಬುದ್ಧಿವಂತರನ್ನಾಗಿ ಮಾಡಬಹುದು. ಮಾತ್ರವಲ್ಲ, ಗುರು ಗ್ರಹವು ವ್ಯಕ್ತಿಯಲ್ಲಿ ಆಧ್ಯಾತ್ಮಿಕ ಜ್ಞಾನ ಸಾಧನೆಗೆ ಪ್ರೇರಣೆ ನೀಡುತ್ತದೆ. ಅಲ್ಲದೆ, ನಮ್ಮ ಜನ್ಮ ಜಾತಕವು ಸಂಪೂರ್ಣವಾಗಿ ಗುರು ಗ್ರಹದ ಮೇಲೆ ಅವಲಂಭಿತವಾಗಿದೆ. ಏಕೆಂದರೆ, ಗುರು ಗ್ರಹವನ್ನು "ಶುಭಗ್ರಹ"ವೆಂದು ಮತ್ತು "ದೈವಾನುಗ್ರಹ"ವೆಂದು ಕರೆಯುವುದರಿಂದ ಸಂತಾನ ಭಾಗ್ಯ ಮತ್ತು ಸಂಪತ್ತಿಗೆ ನಿಕಟ ಸಂಬಂಧ ಹೊಂದಿರುತ್ತದೆ. ಗುರುವಿನ ಶುಭದಾಯಕವು ನಮಗೆ ಎಲ್ಲಾ ಬಗೆಯ ಸಂಪತ್ತನ್ನು ದಯಪಾಲಿಸುವುದರ ಜೊತೆಗೆ ಬುದ್ಧಿವಂತಿಕೆಯ ಜ್ಞಾನವನ್ನು ಕರುಣಿಸಿ ಆಶೀರ್ವದಿಸುವನು. ಗುರು ಗ್ರಹವು ದೋಷಪೂರಿತನಾದರೆ ಅಥವಾ ದುರ್ಬಲನಾಗಿದ್ದರೆ ಅಂತಹ ವ್ಯಕ್ತಿಯ ಜೀವನವು ನಾನಾ ಸಮಸ್ಯೆಗಳಿಗೀಡು ಮಾಡಬಹುದು. ಅಂದರೆ, ಗುರು ಗ್ರಹದ ದೃಷ್ಟಿ ಅಸಮಂಜಸವಾಗಿದ್ದರೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ಅಂದರೆ, ವ್ಯಕ್ತಿಯು ಸಮಾಜದಲ್ಲಿ ಅಪಖ್ಯಾತಿಯನ್ನೂ ಪಡೆಯಬಹುದು.

" *ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಾಮಾನ್ಯ ಗುಣಲಕ್ಷಣಗಳು* -"

1. ಗುರು ಗ್ರಹವನ್ನು "ಅದೃಷ್ಟದ ಗ್ರಹ"ವೆಂದು ಕರೆಯುತ್ತಾರೆ. ಗುರು ಗ್ರಹವು ಹೆಚ್ಚಿನ ಬುದ್ಧಿಶಕ್ತಿ ಮತ್ತು ಆಧ್ಯಾತ್ಮಿಕ ಜ್ಞಾನ ಸಾಧನೆಗೆ ಪ್ರೇರಣೆ ನೀಡುತ್ತದೆ. ಗುರು ಗ್ರಹವು ನಾನಾ ಬಗೆಯ ಸಿದ್ಧಾಂತವನ್ನು ರೂಪಿಸಲು ಸಹಾಯ ಮಾಡುವುದರ ಜೊತೆಗೆ ಬುದ್ಧಿವಂತಿಕೆಯಿಂದ ಆಧ್ಯಾತ್ಮಿಕತೆಯೆಡೆಗೆ ಒಲವು ಮೂಡುವಂತೆ ಮಾಡಲು ಅವಕಾಶ ಕಲ್ಪಿಸುತ್ತದೆ. 

2. ಗುರು ಗ್ರಹವು ಒಬ್ಬ ವ್ಯಕ್ತಿಯನ್ನು ಧರ್ಮ ಮತ್ತು ತತ್ತ್ವಶಾಸ್ತ್ರದೆಡೆಗೆ ಒಲವು ತೋರುವಂತೆ ಮಾಡುವನು. ಗುರು ಗ್ರಹದ ಪ್ರಭಾವದಿಂದ ಒಬ್ಬ ವ್ಯಕ್ತಿಯು ಹೆಚ್ಚು ನೀತಿವಂತನಾಗಿ ಮತ್ತು ನೈತಿಕತೆಯ ಮೇಲೆ ಉನ್ನತವಾಗಿ ಜೀವನ ನಡೆಸುವಂತೆ ಅವಕಾಶ ಸೃಷ್ಟಿಸುತ್ತದೆ. 

3. ಗುರು ಗ್ರಹವು ಉದಾತ್ತ ಮತ್ತು ಪರೋಪಕಾರಿ ಗ್ರಹವಾಗಿದ್ದು, ಇದು ಸಮೃದ್ಧಿ ಮತ್ತು ಅದೃಷ್ಟದೊಂದಿಗೆ ನಿಕಟ ಸಂಬಂಧ ಹೊಂದಿದೆ. ಗುರು ಗ್ರಹವು ತನ್ನ ರಾಶಿಚಕ್ರದ ಪ್ರಯಾಣವನ್ನು ಪೂರ್ಣಗೊಳಿಸಲು 12 ವರ್ಷಗಳನ್ನು ತೆಗೆದುಕೊಳ್ಳುತ್ತದೆ. 

4. ಗುರು ಗ್ರಹವು ಧನಸ್ಸು ಮತ್ತು ಮೀನ ರಾಶಿಯ ಅಧಿಪತಿಯಾಗಿದ್ದು, ಕರ್ಕಾಟಕ ರಾಶಿಯು ಗುರು ಗ್ರಹದ ಉಚ್ಛ ಸ್ಥಾನವಾದರೆ, ಮಕರ ರಾಶಿಯು ಗುರು ಗ್ರಹದ ನೀಚ ಸ್ಥಾನವಾಗಿರುತ್ತದೆ. "ಗುರುವಾರವನ್ನು ಬೃಹಸ್ಪತಿಯ ದಿನ"ವೆಂದು ಪರಿಗಣಿಸಲಾಗಿದೆ. 

5. ಗುರು ಗ್ರಹದ ಶುಭ ದೃಷ್ಟಿಯು ವ್ಯಕ್ತಿಯನ್ನು ಹೆಚ್ಚಿನ ಬುದ್ಧಿವಂತರನ್ನಾಗಿ, ಆಧ್ಯಾತ್ಮಿಕ ಚಿಂತಕರನ್ನಾಗಿ, ಶ್ರದ್ಧೆಯುಳ್ಳವರನ್ನಾಗಿ, ಕರುಣಾಳು ಹಾಗೂ ನಂಬಲರ್ಹ ವ್ಯಕ್ತಿಗಳನ್ನಾಗಿ ಸಮರ್ಪಣಾ ಶಕ್ತಿಯಿಂದ ಸೃಷ್ಟಿಸಲ್ಪಟ್ಟಿರುವರು.

6. ಗುರು ಗ್ರಹವು ಆಶಾವಾದಿ ಗ್ರಹವಾಗಿದ್ದು, ಇದು ಕತ್ತಲೆ ಮತ್ತು ಅಜ್ಞಾನವನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ. ಈ ಗ್ರಹವು "ದಕ್ಷಿಣಾಮೂರ್ತಿ ದೇವರನ್ನು" ಪ್ರತಿನಿಧಿಸುತ್ತದೆ. "ದಕ್ಷಿಣಾಮೂರ್ತಿಯ ಮೂಲ ಛೇದನ ಎಂದರೆ ದಕ್ಷಿಣದಲ್ಲಿ ಕಲ್ಲಿನ ಪ್ರತಿಮೆಯ ರೂಪದಲ್ಲಿನ ದೇವರು ಎಂದು ಪರಿಗಣಿಸಲಾಗುತ್ತದೆ". ವೈದಿಕ ಪುರಾಣಗಳಲ್ಲಿ ಗುರು ಗ್ರಹವು ಪರಮಾತ್ಮನನ್ನು ಪ್ರತಿನಿಧಿಸುವುದರಿಂದ ಇದು "ದೈವಿಕ ಶಕ್ತಿ"ಯನ್ನು ಹೊಂದಿದೆ. "ಗುರು ಗ್ರಹವನ್ನು ಬೃಹಸ್ಪತಿ" ಎಂದು ಕರೆಯಲಾಗುತ್ತದೆ.

" *ಜ್ಯೋತಿಷ್ಯದಲ್ಲಿ ಗುರುವಿನ ಮಹತ್ವ* :-"

1. ಗುರು ಗ್ರಹವು ನವಗ್ರಹಗಳ ಪೈಕಿ ಅತ್ಯಂತ ಶಕ್ತಿಶಾಲಿ ಗ್ರಹವಾಗಿದ್ದು, ವೈದಿಕ ಜ್ಯೋತಿಷ್ಯದಲ್ಲಿ ಗುರು ಗ್ರಹವು ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದೆ. ಜ್ಯೋತಿಷ್ಯದಲ್ಲಿ ಗುರು ಗ್ರಹವು ತನ್ನ ಸ್ಥಾನವನ್ನಾವಲಂಬಿಸಿ ಶುಭ ಮತ್ತು ಅಶುಭ ಫಲಗಳನ್ನು ಕರುಣಿಸುವನು. ಜಾತಕದಿ ಬಲಿಷ್ಠವಾದ ಗುರುವು ಅದೃಷ್ಟ, ಅಪಾರ ಸಂಪತ್ತು, ಐಷಾರಾಮಿ ಜೀವನ, ಖ್ಯಾತಿ, ಅಧಿಕಾರ ಮತ್ತು ಸ್ಥಾನ ಇತ್ಯಾದಿಗಳನ್ನು ತರುತ್ತದೆ. ಗುರು ಗ್ರಹದ ಶುಭ ಸಂಚಾರವು ಒಬ್ಬ ವ್ಯಕ್ತಿಗೆ ತನ್ನ ವೃತ್ತಿ ಮತ್ತು ತನ್ನ ಜೀವನದಲ್ಲಿ ಪ್ರಗತಿ ಸಾಧಿಸಲು ಸಹಾಯ ಮಾಡುತ್ತದೆ.

2. ಜೋತಿಷ್ಯದ ಪ್ರಕಾರ, ಜಾತಕದಲ್ಲಿ ದುರ್ಬಲ ಅಥವಾ ಅಶುಭನಾದ ಗುರು ಗ್ರಹವು ನಮ್ಮ ಜೀವನದಲ್ಲಿ ವಿನಾಶವನ್ನು ತರಬಹುದು. ಜಾತಕದಿ ಗುರು ಗ್ರಹವು ರವಿ, ಶನಿ, ರಾಹು, ಕುಜ, ಶುಕ್ರ ಮತ್ತು ಬುಧ ಗ್ರಹಗಳ ಜೊತೆ ಸಂಯೋಗ ಪಡೆದರೆ ಗುರುವಿನ ಶುಭ ಫಲವು ಮಂಕಾಗುವ ಸಾಧ್ಯತೆಯಿರುವುದು. ಗುರು ಗ್ರಹವು ಜಾತಕದಲ್ಲಿ ಏಕಸ್ಥಿತನಾದರೆ ಸಮಗ್ರವಾದ ಪ್ರಗತಿ ನೀಡುವುದು.

3. ಅಶುಭ ಸ್ಥಾನದಲ್ಲಿರುವ ಗುರು ಗ್ರಹವು ಬಡತನ, ದುರಾದೃಷ್ಟ ಮತ್ತು ಅಪಖ್ಯಾತಿಯನ್ನು ತರಬಹುದು. ಗುರು ಗ್ರಹವು ಕರ್ಕಾಟಕ ರಾಶಿಯಲ್ಲಿ ಉತ್ಕೃಷ್ಟವಾಗಿದ್ದರೆ ಮಕರ ರಾಶಿಯಲ್ಲಿ ದುರ್ಬಲವಾಗಿರುತ್ತದೆ. ಜಾತಕದಲ್ಲಿ ಹತ್ತನೆಯ ಅಂದರೆ, ಕರ್ಮದ ಮನೆಯಲ್ಲಿ ಗುರು ಇದ್ದರೆ ಆ ವ್ಯಕ್ತಿಯನ್ನು ಉತ್ತಮ ಶಿಕ್ಷಕ, ಪ್ರಾಧ್ಯಾಪಕ, ಸಮಾಜ ಸೇವಕ, ಉತ್ತಮ ಅಧಿಕಾರಿ, ಉತ್ತಮ ಜ್ಯೋತಿಷ್ಯ ಅಥವಾ ಪುರೋಹಿತನಾಗುವಂತೆ ಮಾಡಬಲ್ಲದು.

*ಗುರು ಗ್ರಹದ ಸಂಬಂಧಿತ ದಶಾ ಮತ್ತು ಅಂತರದಶಾ ಯಾವುವು* ?

1. ಜ್ಯೋತಿಷ್ಯದ ಪ್ರಕಾರ ಹೇಳುವಂತೆ, ಒಬ್ಬ ವ್ಯಕ್ತಿಯ ಜಾತಕದಲ್ಲಿನ ಗುರುವಿನ ಶುಭ ದೃಷ್ಟಿಯು ತನ್ನ ಬದುಕಿನಲ್ಲಿ ಗುರುವಿನ ದಶಾ ಆರಂಭವಾದಂತೆ ಆತ ತನ್ನ ಜೀವನದಲ್ಲಿ ಮೇಲುಗೈ ಸಾಧಿಸುವನು. ಗುರು ದಶೆಯು ಒಟ್ಟು 16 ವರ್ಷಗಳ ಕಾಲವಿದ್ದು, ಈ ಅವಧಿಯಲ್ಲಿ ಇವರು ತಮ್ಮ ಜೀವನವನ್ನು ಅದೃಷ್ಟದಿಂದ ವೈಶಿಷ್ಟ್ಯತೆಯಾಗಿ ಬದಲಾಯಿಸುವರು. ಆದರೆ, ಒಂದು ವೇಳೆ ಜಾತಕದಲ್ಲಿ ಗುರುಗ್ರಹದ ಸ್ಥಾನ ಮತ್ತು ಇತರ ಗ್ರಹಗಳೊಂದಿಗಿನ ಗುರು ಗ್ರಹದ ಸಂಪರ್ಕವು ಅಶುಭವಾಗಿದ್ದರೆ ಆ 16 ವರ್ಷಗಳು ದುಷ್ಪರಿಣಾಮಕಾರಿಯಾಗಬಲ್ಲದು. 

2. ಗುರು ಗ್ರಹವು ತನ್ನದೇ ಆದ ರಾಶಿಯಲ್ಲಿ ಅಥವಾ ಜಾತಕದಲ್ಲಿ ಉತ್ತುಂಗ ಸ್ಥಾನದಲ್ಲಿದ್ದರೆ ಸ್ನೇಹಪರರೂ, ಉತ್ತಮ ಆರೋಗ್ಯವಂತರೂ, ಸಾಮರಸ್ಯ ಜೀವಿಗಳಾಗಿ, ಸಾಮಾಜಿಕ ಖ್ಯಾತಿಯನ್ನಾಗಿಯೂ ಮತ್ತು ಸಂಪತ್ತಿನ ಒಡೆಯನ್ನನ್ನಾಗಿಯೂ ಮಾಡುತ್ತದೆ. 

3. ಗುರು ಗ್ರಹವು ರಾಹು ಗ್ರಹದ ಜೊತೆ ಅಶುಭ ರೀತಿಯಲ್ಲಿ ಸಂಯೋಜನೆ ಹೊಂದಿದರೆ ದುಷ್ಟ ವ್ಯಕ್ತಿಯನ್ನಾಗಿ ಮಾಡಬಹುದು ಮತ್ತು ಉತ್ತಮ ಫಲಗಳನ್ನು ವ್ಯರ್ಥಗೊಳಿಸುವನು. ಗುರು ಗ್ರಹವನ್ನು "ಗುರು ಚಾಂಡಾಲ ಯೋಗ" ಎಂದು ಕರೆಯಲಾಗುತ್ತದೆ.

4. ಕೇತು ಗ್ರಹದೊಂದಿಗಿನ ಗುರು ಗ್ರಹದ ಸಂಯೋಗವು ವ್ಯಕ್ತಿಯನ್ನು ಉತ್ತಮ ಆಧ್ಯಾತ್ಮ ಚಿಂತಕರನ್ನಾಗಿ ಮಾಡಬಲ್ಲದು.  ಈ ಯೋಗವು ವ್ಯಕ್ತಿಯೊಳಗಿನ ಗುರುವಿನ ಉತ್ಕೃಷ್ಟವಾದ ಶಕ್ತಿಯನ್ನು ಹೊರಹಾಕುತ್ತದೆ. ಈ ಯೋಗವು ಅತ್ಯಂತ ಮಂಗಳಕರವಾಗಿದ್ದು, ಉತ್ತಮ ನಾಯಕತ್ವವನ್ನು ತೆಗೆದುಕೊಳ್ಳಲು ಪ್ರೇರಣೆ ನೀಡುವನು.

" *ವಿವಿಧ ಗ್ರಹಗಳೊಂದಿಗೆ ಸಂಯೋಗ*:-"

ಗುರು ಗ್ರಹವು ವಿಭಿನ್ನವಾದ ಗ್ರಹವಾದ್ದರಿಂದ ಇತರ ಗ್ರಹಗಳೊಂದಿಗಿನ ಸಂಯೋಜನೆಯಿಂದ ವಿಭಿನ್ನ ಫಲಿತಾಂಶಗಳು ಹೊರಬರುತ್ತದೆ. 

1. *ಗುರು* ಗ್ರಹವು *ಚಂದ್ರ* ಗ್ರಹದೊಂದಿಗೆ ಸಂಯೋಗ ಹೊಂದಿದಾಗ "ಗಜಕೇಸರಿ ಯೋಗವು" ಹೊರಬರುತ್ತದೆ. ಇದು ಸಮಾಜದಿ ಉತ್ತಮ ಸ್ಥಾನಮಾನವನ್ನು ನೀಡುತ್ತದೆ. ಮಾತ್ರವಲ್ಲ, ಈ ಯೋಗವು ಸಕಾರಾತ್ಮಕ ಯೋಗವಾಗಿದ್ದು, ಸಂಪತ್ತು, ಶಕ್ತಿ ಮತ್ತು ವಾಕ್ಚಾತುರ್ಯವನ್ನು ನೀಡುವುದರ ಜೊತೆಗೆ ಭೂಮಿಯ ಮೇಲೆ ಉತ್ತಮ ನಾಯಕನನ್ನಾಗಿ ಮಾಡುತ್ತದೆ. 

2. *ರವಿ* ಗ್ರಹದ ಮೇಲಿನ *ಗುರು* ಶುಭ ದೃಷ್ಟಿಯು ಒಬ್ಬ ವ್ಯಕ್ತಿಯನ್ನು ಆಹ್ಲಾದಕರವಾಗಿ ವರ್ತಿಸುವಂತೆಯೂ, ದಯೆಯುಳ್ಳ ಮತ್ತು ಮೃದುವಾಗಿ ಮಾತನಾಡುವಂತೆಯೂ ಮಾಡುತ್ತದೆ. ವ್ಯಕ್ತಿಯು ತನ್ನ ಹೃದಯದಲ್ಲಿ ತಾಮಸಿಕ ಗುಣವಾದ ಕತ್ತಲೆಯನ್ನು ದೂರಗೊಳಿಸಿ ಪರಿಶುದ್ಧನಾಗಿರುವನು. ಅವನು ತನ್ನ ಹೃದಯಕ್ಕೆ ಪ್ರಾಮಾಣಿಕತೆ ಮತ್ತು ಸ್ನೇಹದ ಆಭರಣವನ್ನು ಕರುಣಿಸುವನು. ಮಾತ್ರವಲ್ಲ, ಸರಕಾರದ ಅಧಿಪತಿಗಳಾಗಿ ಸಮಾಜದಿಂದ ಅನೇಕ ಪುರಸ್ಕಾರಗಳನ್ನು ಪಡೆದು ಜೀವನದಲ್ಲಿ ಯಶಸ್ಸನ್ನು ಸಾಧಿಸುವರು.

3. *ಕುಜ* ಗ್ರಹದೊಂದಿಗಿನ *ಗುರು* ಗ್ರಹದ ಶುಭ ದೃಷ್ಟಿಯು ವ್ಯಕ್ತಿಯನ್ನು ಶಕ್ತಿಯುತ ಮತ್ತು ಕ್ರಿಯಾಶೀಲರನ್ನಾಗಿ ಮಾಡುತ್ತದೆ. ಇವರು ರಕ್ಷಣಾ ವಲಯ ಇತರೆ ವಿಭಾಗಗಳ ಮುಖ್ಯಸ್ಥರಾಗಬಹುದು. ಮಾತ್ರವಲ್ಲ, ಗುರು ಮತ್ತು ಕುಜ ಗ್ರಹದ ಶುಭ ಸಂಯೋಗವು ಉತ್ತಮ ಭೂಮಿಯ ಒಡೆಯನನ್ನಾಗಿ ಮಾಡಬಲ್ಲದು. 

4. *ಬುಧ* ಗ್ರಹದ ಮೇಲೆ *ಗುರು* ಗ್ರಹದ ಶುಭ ದೃಷ್ಟಿಯು ವ್ಯಕ್ತಿಯ ಬೌದ್ಧಿಕ ಮಟ್ಟವನ್ನು ಹೆಚ್ಚಿಸುತ್ತದೆ. ಇದು ತನ್ನ ವ್ಯವಹಾರ ಕ್ಷೇತ್ರದಲ್ಲಿನ ಪ್ರಗತಿಗೆ ಕಾರಣವಾಗುತ್ತದೆ. ಮಾತ್ರವಲ್ಲ, ಉತ್ತಮ ಲೇಖಕನಾಗಿ ಸಮಾಜದಿ ಮನ್ನಣೆ ಪಡೆಯಲು ಪ್ರೇರಣೆ ನೀಡುತ್ತದೆ. ವ್ಯಕ್ತಿಯು ಹೆಚ್ಚಿನ ಬುದ್ಧಿವಂತಿಕೆಯಿಂದ ಸಂಶೋಧನೆ ಆಧಾರಿತ ಕ್ರಿಯೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಹಾಗೂ ಉತ್ತಮ ಪುಸ್ತಕಗಳನ್ನು ಓದಲು ಅವಕಾಶ ನೀಡುತ್ತದೆ. 

5. *ಶುಕ್ರ* ಗ್ರಹದ ಮೇಲೆ *ಗುರು* ಗ್ರಹದ ಶುಭ ದೃಷ್ಟಿಯು ವ್ಯಕ್ತಿಯನ್ನು ಉತ್ತಮ ಕಲಾವಿದರನ್ನಾಗಿ ಮತ್ತು ಧಾರ್ಮಿಕ ಹಾಗೂ ಪೌರಾಣಿಕ ಕಥೆಗಳಲ್ಲಿನ ಪಾತ್ರಗಳನ್ನು ಪರಮಾತ್ಮನ ಮೇಲೆ ಏಕರೂಪತೆಯ ಸ್ಥಿರಪ್ರಜ್ಞೆಯಿಂದ ಮಾಡುವಂತೆ ಅವಕಾಶ ಒದಗಿಸುತ್ತದೆ. ಮಾತ್ರವಲ್ಲ, ಇದು ವ್ಯಕ್ತಿಗೆ ಎಲ್ಲಾ ರೀತಿಯ ಸಂಪತ್ತು, ಸಮೃದ್ಧಿ ಮತ್ತು ಭೌತಿಕ ಲಾಭಗಳನ್ನು ನೀಡುತ್ತದೆ. ಇದು ವ್ಯಕ್ತಿಯ ಬಡತನ ಅಥವಾ ಕತ್ತಲೆಯ ಜೀವನವನ್ನು ದೂರ ಮಾಡುತ್ತದೆ. "ಗುರು ಮತ್ತು ಶುಕ್ರ ಗ್ರಹದ ಶುಭ ದೃಷ್ಟಿಯು ದೇವಿಯ ಆರಾಧನೆ ಮಾಡಲು" ಪ್ರೇರಣೆ ನೀಡುತ್ತದೆ. 

6. *ಶನಿ* ಗ್ರಹದೊಂದಿಗಿನ *ಗುರು* ಗ್ರಹದ ಶುಭ ದೃಷ್ಟಿಯು ವ್ಯಕ್ತಿಯನ್ನು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತಕರನ್ನಾಗಿ ಮಾಡಲು ಅವಕಾಶ ನೀಡುತ್ತದೆ. ತನ್ನ ಬದುಕನ್ನು ಯಶಸ್ವಿಗೊಳಿಸಲು ಮತ್ತು ಧರ್ಮ ಮಾರ್ಗದಿ ಮುನ್ನಡೆಯಲು ಬೇಕಾದ ಎಲ್ಲಾ ಅವಕಾಶಗಳನ್ನು ಸೃಷ್ಟಿಸುತ್ತದೆ. ಗುರು ಮತ್ತು ಶನಿ ಗ್ರಹದ ಸಂಯೋಗವು ಉತ್ತಮ ವಕೀಲ ಅಥವಾ ಉತ್ತಮ ನ್ಯಾಯಾಧೀಶನನ್ನಾಗಿ ಮಾಡುತ್ತದೆ. ಗುರು ಮತ್ತು ಕೇತುವಿನ ಮೇಲೆ ಶನಿ ಗ್ರಹದ ಉತ್ತಮ ಸಂಯೋಗವು ವ್ಯಕ್ತಿಯನ್ನು ಆಧ್ಯಾತ್ಮಿಕತೆಯ ಕಡೆಗೆ ಸೆಳೆಯುವಲ್ಲಿ ಮತ್ತು ಅಲೌಕಿಕ ಜೀವನದ ಯಶಸ್ಸನ್ನು ನೀಡಲು ಪ್ರೇರಣೆ ನೀಡುತ್ತದೆ.

7. *ರಾಹು* ಗ್ರಹದ ಮೇಲೆ *ಗುರು* ಗ್ರಹದ ಶುಭ ದೃಷ್ಟಿಯು ವ್ಯಕ್ತಿಯ ಯೋಜನೆಯನ್ನು ಉತ್ತಮಗೊಳಿಸಬಲ್ಲದು. ಮಾತ್ರವಲ್ಲ, ಇದು ವ್ಯಕ್ತಿಯನ್ನು ಉತ್ತಮ ಕ್ರಿಯಾಶೀಲರನ್ನಾಗಿ ಮಾಡಲು ಮತ್ತು ಉತ್ತಮ ಕ್ರಿಯಾ ಸಂಶೋಧನೆ ನಡೆಸಲು ಪ್ರೇರಣೆ ನೀಡುತ್ತದೆ. ಹಾಗೆಯೇ ಗುರು ಮತ್ತು ರಾಹು ಗ್ರಹದ ಶುಭ ದೃಷ್ಟಿಯು ವ್ಯಕ್ತಿಯೊಳಗಿನ ಉತ್ತಮ ಚಿಂತನೆ ಅಥವಾ ಉತ್ತಮ ಯೋಜನೆಗಳನ್ನು ರಹಸ್ಯವಾಗಿ ಕಾಪಾಡಲು ಅವಕಾಶ ಸೃಷ್ಟಿಸುತ್ತದೆ. ಮಾತ್ರವಲ್ಲ, ವಿದೇಶ ಪ್ರಯಾಣಗಳಿಗೆ ಪ್ರೇರಣೆ ನೀಡುತ್ತದೆ.

8. *ಕೇತು* ಗ್ರಹದ ಮೇಲೆ *ಗುರು* ಗ್ರಹದ ಶುಭ ದೃಷ್ಟಿಯು ವ್ಯಕ್ತಿಯನ್ನು ಉತ್ತಮ ಆಧ್ಯಾತ್ಮ ಚಿಂತಕರನ್ನಾಗಿ ಮಾಡಬಲ್ಲದು. ಇವರು ಹೆಚ್ಚಾಗಿ ಪರಮಾತ್ಮನ ಅದ್ಬುತ ಸೃಷ್ಟಿಯೊಳಗಿನ ನಾನಾ ಜ್ಞಾನ ಸಾಧನೆಗೆ ತಮ್ಮ ಬದುಕನ್ನು ಮೀಸಲಿಡುವರು. ಇವರ ಉದ್ದೇಶವು ಮೋಕ್ಷ ಮಾರ್ಗವೇ ಆಗಿರುವುದು. ಇವರು ಐಹಿಕ ಬಯಕೆಗಳ ಪಟ್ಟಿಗಳಿಂದ ದೂರವುಳಿದು ತಮ್ಮ ಬದುಕನ್ನು ಸಂನ್ಯಾಸಮಯಗೊಳಿಸುವರು. ಕೇತು ಮತ್ತು ಗುರು ಗ್ರಹದ ಉತ್ತಮ ಸಂಯೋಗವು ವ್ಯಕ್ತಿಯನ್ನು ಧರ್ಮ ಮಾರ್ಗದಿ ಮುನ್ನಡೆಯುವಂತೆ ನಾನಾ ಅವಕಾಶವನ್ನು ಸೃಷ್ಟಿಸುತ್ತದೆ. ‌    ‌     ‌                                                                                          ‌                                                                                                    ನಾಳೆ ಮೇ‌ 12 ಗುರುವಾರ,  ವೈಶಾಖ ಶುದ್ಧ ಏಕಾದಶಿ *ಬೃಹಸ್ಪತಿ ಜಯಂತಿ*. ದೇವ ಗುರು ಬೃಹಸ್ಪತಿ ಯನ್ನು ಆರಾಧನೆ ಮಾಡಿ.              ‌         ‌                                                                                                                  ‌          ‌                                                                                              ನವಗ್ರಹ ದೇವಾಲಯದಲ್ಲಿ ಮಧ್ಯ ಭಾಗದಲ್ಲಿರುವ ಸೂರ್ಯನಿಗೆ ಎಡ‌ ಭಾಗದಲ್ಲಿ ಉತ್ತರಾಭಿಮುಖವಾಗಿ ಇರುವ ಗ್ರಹವೇ ಗುರು. ಗುರುವಿಗೆ *ಹಳದಿ* ವಸ್ತ್ರ, *ಹಳದಿ* ಪುಷ್ಪ (ಸೇವಂತಿಗೆ.....),  *ಚಣಕ* ಧಾನ್ಯ (ಕಡಲೆಕಾಳು) ಮಾಲೆ (108 ಕಾಳುಗಳು) ಯನ್ನು ಅರ್ಪಣೆ ಮಾಡಿ. ಸಾಧ್ಯವಾದರೆ ಉಪವಾಸ ಮಾಡಿ, ಆಗದವರು ಫಲ - ಫಲಾಹಾರ (ಈರುಳ್ಳಿ ಬೆಳುಳ್ಳಿ ರಹಿತ) ಸೇವನೆ ಮಾಡಬಹುದು. ಸತ್ಪಾತ್ರರಿಗೆ ದಾನ ಮಾಡಿ. ಶ್ರೀ ವೆಂಕಟೇಶ್ ಜ್ಯೋತಿಷ್ಯರು📱9482655011🕉️🙏🙏🙏


🪔 *ಅಕೃತ್ವಾ ಪರಸಂತಾಪಮ್ ಅಗತ್ವಾ ಖಲನಮ್ರತಾಂ |*
*ಅನುಸೃತ್ಯ ಸತಾಂ ಮಾರ್ಗಂ ಯತ್ಸ್ವಲ್ಪಮಪಿ ತದ್ಬಹು ||*🪔

🌺 _ಬೇರೆಯವರಿಗೆ ಪೀಡೆ ಕೊಡದೆ, ದುಷ್ಟರಿಗೆ ತಲೆ ಬಾಗದೆ, ಸಜ್ಜನರಸಂಗ  ಸನ್ಮಾರ್ಗವನ್ನು ಬಿಡದೆ ಇರುವ ಧೀರವೃತ್ತಿಯವರು ಗಳಿಸಿದ್ದು ತೀರ ಸ್ವಲ್ಪವಾದರೂ  ಅದು ಗುಣದಿಂದ ಹೆಚ್ಚಿನದ್ದಾಗಿರುತ್ತದೆ._🌺

*ವೈಶಾಖ ಮಾಸ🌝/ಮೇಷ ಮಾಸ☀️ ಶುಕ್ಲ ಪಕ್ಷ ಏಕಾದಶಿ ಗುರುವಾರದ ಶುಭಾಶಯಗಳು*

Post a Comment

Previous Post Next Post