CM, ಇಂದು ಏನೇನು ಮಾಡಿದ್ರೂ... ಇಲ್ಲಿದೆ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದರು.

[01/05, 12:07 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಇಂದು ಬೆಂಗಳೂರಿನಲ್ಲಿ ಸೆಮೆಕಂಡಕ್ಟರ್   ಪ್ಲಾಂಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ  ಕರ್ನಾಟಕ ಸರ್ಕಾರ ಮತ್ತು ISMC ಅನಲಾಗ ಫ್ಯಾಬ್ ಪ್ರೈವೇಟ್ ಲಿಮಿಟೆಡ್ ಕಂಪನಿ ಜತೆ ಪರಸ್ಪರ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು. ರಾಜ್ಯ ಸರ್ಕಾರದ ಪರವಾಗಿ ಕೈಗಾರಿಕೆ ಇಲಾಖೆಯ ಎಸಿಎಸ್ ರಮಣರೆಡ್ಡಿ ಮತ್ತು ISMC ಅನಲಾಗ ಫ್ಯಾಬ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಿರ್ದೇಶಕ ಅಜಯ ಜಲನ್ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು. ನಂತರ ಒಡಂಬಡಿಕೆ ಪತ್ರವನ್ನು ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಪರಸ್ಪರ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಮತ್ತು ಐಟಿ, ಬಿಟಿ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಐಟಿ ಬಿಟಿ ನಿರ್ದೇಶಕಿ ಮೀನಾ ನಾಗರಾಜ, ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನಾವರ್ ಗಿಲೋನ್, ಇರೇಜ್ ಇಂಬರಮನ್ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.
[01/05, 12:14 PM] Gurulingswami. Holimatha. Vv. Cm: ಈ ಸೆಮಿಕಂಡಕ್ಟರ್ ಕಂಪನಿ‌ ರಾಜ್ಯದಲ್ಲಿ ಸ್ಥಾಪನೆಯಾಗುವುದರಿಂದ ಮುಂದಿನ ೭ ವರ್ಷಗಳಲ್ಲಿ ೨೨೯೦೦ ಕೋಟಿ ರೂಪಾಯಿ ಹೂಡಿಕೆಯಾಗಲಿದೆ. ಒಟ್ಟು ೧೫೦೦ ಜನರಿಗೆ ಉದ್ಯೋಗ ಒದಗಿಸಲಿದೆ. ಇಂಥ ಮಹತ್ವದ ಒಪ್ಪಂದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು..
[01/05, 1:31 PM] Gurulingswami. Holimatha. Vv. Cm: *೨೨,೯೦೦ ಕೋ. ರೂ. ಹೂಡಿಕೆಯ ಸೆಮಿಕಂಡಕ್ಟರ್ ಫ್ಯಾಬ್ ಪ್ಲಾಂಟ್ ನಿರ್ಮಾಣಕ್ಕೆ* 
*ಕರ್ನಾಟಕ ಸರ್ಕಾರ ಹಾಗೂ ಐಎಸ್‍ಎಂಸಿ ಅನಲಾಗ್ ಫ್ಯಾಬ್ ಪ್ರೈ.ಲಿ  ನಡುವೆ ಒಪ್ಪಂದಕ್ಕೆ ಸಹಿ*

ಬೆಂಗಳೂರು, ಮೇ ೧, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ 22,900 ಕೋಟಿ ರೂ.ಗಳ  ( ೩ ಬಿಲಿಯನ್ ಡಾಲರ್) ಹೂಡಿಕೆಯ ದೇಶದ ಮೊತ್ತ ಮೊದಲ ಪ್ರತಿಷ್ಠಿತ ಸೆಮಿಕಂಡಕ್ಟರ್ ಪ್ಲಾಂಟ್ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಹಾಗೂ  ಐಎಸ್‍ಎಂಸಿ ಅನಲಾಗ್ ಫ್ಯಾಬ್ ಪ್ರೈ.ಲಿ  ನಡುವೆ ಒಪ್ಪಂದಕ್ಕೆ ಇಂದು ಸಹಿ ಹಾಕಲಾಯಿತು.  

ಏಳು ವರ್ಷಗಳ ಅವಧಿಯಲ್ಲಿ ಒಟ್ಟು 1500 ಜನರಿಗೆ ಉದ್ಯೋಗ ಒದಗಿಸುವ ನಿರೀಕ್ಷೆ ಇದ್ದು, ಕರ್ನಾಟಕ ಸರ್ಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣರೆಡ್ಡಿ ಹಾಗೂ ಐ.ಎಸ್.ಎಂ.ಇ ಪರವಾಗಿ  ನಿರ್ದೇಶಕ ಅಜಯ್ ಜಲನ್ ಸಹಿ ಹಾಕಿದರು.

ಸೆಮಿಕಂಡಕ್ಟರ್  ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮತ್ತು ಐ.ಎಸ್.ಎಂ.ಸಿ  ಅನಲಾಗ್ ಫ್ಯಾಬ್ ಪ್ರೈ.ಲಿ. ಸಂಸ್ಥೆ ಪರಸ್ಪರ ಮಾಡಿಕೊಂಡಿರುವ  ಒಪ್ಪಂದವು  ವಿಶ್ವದ  ಸೆಮಿಕಂಡಕ್ಟರ್ ನಕ್ಷೆಯಲ್ಲಿ  ಕರ್ನಾಟಕವನ್ನು ಗುರುತಿಸುವಂತೆ ಮಾಡಲಿದೆ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿವಿಧ ರಾಜ್ಯಗಳು ಸೆಮಿಕಂಡಕ್ಟರ್ ಫ್ಯಾಬ್ ಹೂಡಿಕೆಗಳನ್ನು ಆಕರ್ಷಿಸಲು ಸ್ಪರ್ಧಿಸುತ್ತಿದ್ಧ ವೇಳೆಯಲ್ಲಿಯೇ  ಈ ಮಹತ್ವದ ಒಪ್ಪಂದಕ್ಕೆ ಕರ್ನಾಟಕ ಸರ್ಕಾರ ಸಹಿ ಹಾಕಿದೆ. ಕೇವಲ ಆರ್ಥಿಕ ಪ್ರೋತ್ಸಾಹಕಗಳು ಮಾತ್ರವಲ್ಲದೆ, ಒಟ್ಟಾರೆ ಕಾರ್ಯನಿರ್ವಹಣೆಗೆ ಅಗತ್ಯವಿರುವ ವಾತಾವರಣವನ್ನು ನಿರ್ಮಿಸುವುದೂ ಮುಖ್ಯ ಎನ್ನುವುದನ್ನು ಕರ್ನಾಟಕ ಸರ್ಕಾರ ಅರಿತಿದೆ. ದೇಶದಲ್ಲಿಯೇ ಅತ್ಯುತ್ತಮ ಮೂಲಭೂತ ಸೌಕರ್ಯ ಹಾಗೂ ಕೌಶಲ್ಯಯುತ ಮಾನವ ಸಂಪನ್ಮೂಲವನ್ನು ಹೊಂದಿದೆ ಎಂದು ಅವರು ಹೇಳಿದರು. 

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ  ಇದೊಂದು ಬಹುದೊಡ್ಡ ಹೆಜ್ಜೆ. ಸವಾಲುಗಳು ಸಹ ದೊಡ್ಡಮಟ್ಟದಲ್ಲಿ ಇವೆ. ಈ ಸವಾಲುಗಳನ್ನು ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಳ್ಳಲೂ ಈ ಒಪ್ಪಂದ ಅವಕಾಶವನ್ನು ಕಲ್ಪಿಸಿದೆ ಎಂದು ಸಿಎಂ ಹೇಳಿದರು. 

ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರದ ಸೆಮಿಕಂಡಕ್ಟರ್ ಮಿಷನ್ ನ್ನು ಅನುಮೋದಿಸಿರುವುದರಿಂದ ಸೆಮಿಕಂಡಕ್ಟರ್ ವಲಯದಲ್ಲಿ ಕರ್ನಾಟಕ ಮುಂದುವರೆಯಲು ಸಾಧ್ಯವಾಗಿದೆ ಎಂದರು.

 ಒಡಂಬಡಿಕೆಯು  ಇಸ್ರೇಲ್ ಹಾಗೂ ಭಾರತದ ನಡುವೆ ತಂತ್ರಜ್ಞಾನ ಹಾಗೂ ಸಂಸ್ಕೃತಿಗಳ ವಿನಿಮಯಕ್ಕೂ ವೇದಿಕೆ ಕಲ್ಪಿಸಲಿದೆ ಎಂದರು.

 ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಮತ್ತು ಐಟಿ, ಬಿಟಿ ಸಚಿವ ಡಾ. ಸಿ.l ಎನ್ ಅಶ್ವತ್ಥ ನಾರಾಯಣ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಐಟಿ ಬಿಟಿ ನಿರ್ದೇಶಕಿ ಮೀನಾ ನಾಗರಾಜ, ಕೈಗಾರಿಕೆ ಇಲಾಖೆ ಆಯುಕ್ತೆ ಗುಂಜನ ಕೃಷ್ಣಾ, ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನಾವರ್ ಗಿಲೋನ್, ಐಎಸ್ಎಂಸಿ ಮುಖ್ಯಸ್ಥ ಇರೇಜ್ ಇಂಬರಮನ್ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.
[01/05, 2:22 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಬೆಂಗಳೂರಿನಲ್ಲಿ ಹಿಂದುಳಿದ ದಲಿತ  ಮಠಾಧೀಶರ ಒಕ್ಕೂಟದ ವತಿಯಿಂದ ಕೃತಜ್ಞತೆ ಅರ್ಪಿಸುವ ಸಮಾರಂಭವನ್ನು ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಹಿಂದುಳಿದ, ದಲಿತ ಮಠಾಧೀಶರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.  ಸಮಾರಂಭದಲ್ಲಿ ಸಚಿವರಾದ ಬೈರತಿ ಬಸವರಾಜ,  ಮುನಿರತ್ನ, ಮಾಜಿ ಸಚಿವ ವಿಜಯ ಶಂಕರ, ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು,  ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಾದಾರ ಚನ್ನಯ್ಯ ಶ್ರೀಗಳು, ಭಗೀರಥ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ರಾಮಾನುಜ ಸ್ವಾಮೀಜಿ ಇತರೆ ಸ್ವಾಮೀಜಿಗಳು ಉಪಸ್ಥಿತರಿದ್ದರು.
[01/05, 2:53 PM] Gurulingswami. Holimatha. Vv. Cm: *ಎಸ್.ಎಂ.ಕೃಷ್ಣ ಅವರಿಗೆ ಶುಭ ಕೋರಿದ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

 ಬೆಂಗಳೂರು, ಮೇ 01: ಕೇಂದ್ರದ ಮಾಜಿ ಸಚಿವರು ಹಾಗೂ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಎಸ್.ಎಂ.ಕೃಷ್ಣ ಅವರ ಜನುಮ ದಿನವಾದ ಇಂದು  ದೂರವಾಣಿ ಕರೆ ಮಾಡಿ ಮಾತನಾಡಿದರು.

 ದೇವರು ತಮಗೆ ಆಯುಷ್ಯ ಮತ್ತು ಆರೋಗ್ಯವನ್ನು ನೀಡಲಿ ಎಂದು ಬಸವರಾಜ ಬೊಮ್ಮಾಯಿ ಅವರು ಶುಭಕೋರಿದರು.
[01/05, 3:42 PM] Gurulingswami. Holimatha. Vv. Cm: *ಬೆಂಗಳೂರು* ,  ಮೇ  01:  
 *ಮಾನ್ಯಮುಖ್ಯಮಂತ್ರಿ ಬಸವರಾಜ* *ಬೊಮ್ಮಾಯಿ* *ಅವರು ಇಂದು* *ಹಿಂದುಳಿದ ದಲಿತ  ಮಠಾಧೀಶರ* *ಒಕ್ಕೂಟದ* ವತಿಯಿಂದ *ಕೃತಜ್ಞತೆ* ಅರ್ಪಿಸುವ *ಸಮಾರಂಭದಲ್ಲಿ ಪಾಲ್ಗೊಂಡು* *ಮಾತನಾಡಿದರು.* 

 .
[01/05, 5:31 PM] Gurulingswami. Holimatha. Vv. Cm: *ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀತಿಯನ್ನು ಸಾಕಾರಗೊಳಿಸಿರುವ ಬಜೆಟ್ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಬೆಂಗಳೂರು, ಮೇ 1 :

 ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ನೀತಿಯಂತೆ ರಾಜ್ಯ ಕಟ್ಟುವ ಕೆಲಸ ಮಾಡಲಾಗುತ್ತಿದೆ. ಇದೇ ನೀತಿಯ ಆಧಾರದ ಮೇಲೆ ಬಜೆಟ್ ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟದ ವತಿಯಿಂದ ಕೃತಜ್ಞತೆ ಅರ್ಪಿಸುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಶಕ್ತಿ ಇಲ್ಲದವನಿಗೆ ಶಕ್ತಿ,ಆರ್ಥಿಕವಾಗಿ ಹಿಂದುಳಿದವರಲ್ಲಿ ಸಾಮರ್ಥ್ಯ ತುಂಬುವುದೇ ಸಾಮರ್ಥ್ಯ. ಸೂರಿಲ್ಲದವರಿಗೆ  ಸೂರು, ಉದ್ಯೋಗವಿಲ್ಲದವರಿಗೆ ಉದ್ಯೋಗ, ವಿದ್ಯೆಯಿಲ್ಲದವರಿಗೆ ವಿದ್ಯೆ ಕೊಡುವಂತಹ  ಕೆಲಸ ಮಾಡುವುದೇ ನಿಜವಾದ ಆಡಳಿತಗಾರನ ಸಾಮರ್ಥ್ಯ. ಅದೇ ದಾರಿಯಲ್ಲಿ ನಾನು ನಡೆಯುತ್ತಿದ್ದೇನೆ . ಪ್ರಧಾನ ಮಂತ್ರಿಗಳ ವಿಕಾಸ್, ಸಬ್ ಕಾ ವಿಶ್ವಾಸ್, ಸಬಾ ಕಾ ಪ್ರಯಾಸ್  ತತ್ವದಡಿ ಕೆಲಸ ಮಾಡಲಾಗುತ್ತಿದೆ. ಅಸಮತೋಲನವಿರುವ ಸಮಾಜದಲ್ಲಿ ಕ್ಷೋಭೆ ಉಂಟಾಗಿ, ಪ್ರಗತಿ ಸಾಧ್ಯವಾಗುವುದಿಲ್ಲ. ಮಾತಿನಲ್ಲಿ ಅಲ್ಲ ಕೃತಿಯಲ್ಲಿ ನಮ್ಮನ್ನು ಅಳಿಯಿರಿ. ಸರ್ಕಾರ ಮಾಡಿರುವ ಕೆಲಸಗಳ ರಿಪೋರ್ಟ್ ಕಾರ್ಡನ್ನು ಮುಂದಿಟ್ಟು ಸಕಾರಾತ್ಮಕ ಚಿಂತನೆಯೊಂದಿಗೆ ಜನರ ಮುಂದೆ ಬರಲಾಗುವುದು.  ಇನ್ನೊಬ್ಬರನ್ನು ಹೀಗಳೆದು ನಕಾರಾತ್ಮಕತೆಯೊಂದಿಗೆ ವೋಟು ಕೇಳುವ ಕೆಲಸವನ್ನು ಮಾಡುವುದಿಲ್ಲ. ಸರ್ಕಾರ ಮಾಡಿರುವ ಕೆಲಸಗಳ ಸಾಮರ್ಥ್ಯಗಳ ಮೇಲೆ ಜನರಿಂದ ವೋಟು ಕೇಳುತ್ತೇವೆ ಎಂದು ತಿಳಿಸಿದರು.

*ರಾಜ್ಯದ ಆರ್ಥಿಕತೆಯ ಹೆಚ್ಚಳ :*
ರಾಜ್ಯದ ಜನರು ಕೆಲವರಿಗೆ ತಮ್ಮ ಸ್ಥಾನವನ್ನು ತೋರಿಸಿದ್ದರೂ,ತಾವೇ ಸಮರ್ಥರು ಎನ್ನುವ ಭ್ರಮೆಯಲ್ಲಿ ಬಹಳಷ್ಟು ಜನ ಇನ್ನೂ ಇದ್ದಾರೆ. ರಾಜ್ಯವನ್ನು, ದೀನದಲಿತರನ್ನು, ಬಡಜನರನ್ನು ಸಮರ್ಥವಾಗಿ ಬದುಕು ಕಟ್ಟಿಕೊಳ್ಳುವಂತೆ ಮಾಡಲಾಗುತ್ತಿರುವುದು ನಮ್ಮ ಸಾಮರ್ಥ್ಯ. ನಾಡಿನ ಬೊಕ್ಕಸದಿಂದ ಹಣದ ಸೋರಿಕೆಯನ್ನು ತಡೆದು ಆರ್ಥಿಕತೆಯನ್ನು 15000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.ರೈತರ ಮಕ್ಕಳಿಗೆ ವಿದ್ಯಾನಿಧಿ ಯಾವುದೇ ಸರ್ಕಾರವೂ ಕೊಟ್ಟಿರಲಿಲ್ಲ. ನಮ್ಮ ಸರ್ಕಾರ ಹೆಣ್ಣುಮಕ್ಕಳಿಗೆ,  ರೈತ ಮಕ್ಕಳಿಗೆ ರೈತ ವಿದ್ಯಾನಿಧಿ. ಅಂಗವಿಕಲರ, ವಿಧವೆಯವರ ಮಾಸಾಶನ ಹೆಚ್ಚಳ, ಎಸ್ ಸಿ ಎಸ್ ಟಿ ಜನಾಂಗಕ್ಕೆ 75 ಯೂನಿಟ್ ಉಚಿತ ವಿದ್ಯುತ್ , ಮನೆಗಳ ನಿರ್ಮಾಣಕ್ಕೆ 1.75 ಲಕ್ಷ ದಿಂದ 2 ಲಕ್ಷ ರೂ.ಗಳಿಗೆ ಹೆಚ್ಚಳ, ಜಮೀನು ಪಡೆಯಲು 20 ಲಕ್ಷ ರೂ. ಸಹಾಯಧನ, ಪ್ರತಿ ತಾಲ್ಲೂಕಿನಲ್ಲಿ 100 ಉದ್ಯೋಗ ಸೃಷ್ಟಿಗೆ, ಹಾಲು ಉತ್ಪಾದಕರಿಗೆ ಕ್ಷೀರ ಬ್ಯಾಂಕ್, 4 ಲಕ್ಷ ಸ್ತ್ರೀಶಕ್ತಿ ಸಂಘಗಳಿಗೆ 1.50 ಲಕ್ಷ ಸಾಲ ಸೌಲಭ್ಯವನ್ನು ನೀಡಲು ಆ್ಯಂಕರ್ ಬ್ಯಾಂಕ್ ಜೋಡಣೆ ಮೂಲಕ 8 -10 ಲಕ್ಷ ಮಹಿಳೆಯರ ಆರ್ಥಿಕ ಸಬಲೀಕರಣ, ಯುವಕರಿಗೆ ಉದ್ಯೋಗ,. ಇದು ಸಾಮರ್ಥ್ಯ  ಎಂದರು.

*ಎಲ್ಲ ವರ್ಗದ ಜನರ ಸರ್ವತೋಮುಖ ಅಭಿವೃದ್ಧಿ:*
ಶಿಕ್ಷಣ, ಆರೋಗ್ಯ, ದೀನದಲಿತರ ಕಲ್ಯಾಣ ವಿಶೇಷ ಕಾರ್ಯಕ್ರಮಗಳು, ಎಸ್ ಸಿ ಎಸ್ ಪಿ, ಟಿಎಸ್ ಪಿ ಕಾರ್ಯಕ್ರಮಗಳಿಗೆ 28 ಸಾವಿರ ಕೋಟಿ ರೂ. ಇಡಲಾಗಿದೆ. ಬಜೆಟ್ ನಂತರ ಶೇ.90 ರಷ್ಟು ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಆದೇಶವನ್ನು ಮಾಡಲಾಗಿದೆ. ಹಿಂದುಳಿದ ವರ್ಗ, ಎಸ್ ಸಿ ಎಸ್ ಟಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಶೈಕ್ಷಣಿಕ ಕೇಂದ್ರಗಳಾದ ಧಾರವಾಡ, ಗುಲ್ಬಗಾ , ಮೈಸೂರು, ಬೆಂಗಳೂರು, ಮಂಗಳೂರಿನಲ್ಲಿ 1000 ಕೊಠಡಿಗಳ ವಿದ್ಯಾರ್ಥಿ ಸಮುಚ್ಛಗಳನ್ನು  ನಿರ್ಮಿಸಲಾಗುವುದು. ಜನಾಂಗದ  ಮಹಿಳಾ ಉದ್ಯೋಗಿಗಳಿಗೆ ವಸತಿ ನಿಲಯಗಳನ್ನು ನಿರ್ಮಿಸಲಾಗುವುದು. ಅಮೂಲಾಗ್ರ ಬದಲಾವಣೆ, ಶಿಕ್ಷಣ, ಉದ್ಯೋಗ, ಸಬಲೀಕರಣ ಸಾಧಿಸಲಾಗುತ್ತಿದೆ. ಸಮಾಜದ ಎಲ್ಲ ವರ್ಗಗಳ ಸರ್ವತೋಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜನರ ಆಶೀರ್ವಾದ ಬೇಕು ಎಂದು ತಿಳಿಸಿದರು.

*ಸಾಮಾಜಿಕ ನ್ಯಾಯ ಕೇವಲ ಭಾಷಣದ ಸರಕಾಗಬಾರದು:*
ಸರ್ಕಾರವಾಗಿ ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ತಕ್ಕಡಿ  ಸಮಾನವಾಗಿರಬೇಕು. ಆಗ ಮಾತ್ರ ಸಮಾನತೆ ಸಾಧ್ಯವಿದೆ. ಸಾಮಾಜಿಕ ನ್ಯಾಯ ಭಾಷಣದ ವಸ್ತುವಾಗಿದೆ. ಇರುವರೆಗೂ ಏನು ಸಾಮಾಜಿಕ ನ್ಯಾಯವನ್ನು ಕೊಟ್ಟಿದ್ದಾರೆ? ಯಾರಿಗೆ ನ್ಯಾಯ ಕೊಟ್ಟಿದ್ದೀರಿ. ಒಂದು ವರ್ಗಕ್ಕಾದರೂ ಕೊಟ್ಟಿದ್ದೀರಾ? ಕೇವಲ ಭಾಷಣದ ಸರಕಾಗಿದೆ. ಮೂಲಭೂತವಾಗಿ ಬೇಕಾಗಿರುವುದನ್ನು  ಒದಗಿಸಿದರೆ ಅವರೇ ನ್ಯಾಯವನ್ನು ಪಡೆದುಕೊಳ್ಳುತ್ತಾರೆ ಎಂದರು.

*ಅರ್ಹತೆ ಇರುವವರಿಗೆ ಸರ್ಕಾರ ಬೆನ್ನೆಲುಬಾಗಿ ನಿಲ್ಲಲಿದೆ*
 ದುರ್ಬಲ ವರ್ಗದ ಜನರಿಗೆ ಶಕ್ತಿಯ ಜೊತೆ ಸಂಸ್ಕಾರದ ಅಗತ್ಯ ವಿದೆ. ಅದನ್ನು ಕೊಡಲು ಮಠಗಳು ಸಿದ್ಧವಾಗಿವೆ. ಹೀಗಾಗಿ ಮಠಗಳ ಮೂಲಕ ಸಂಸ್ಕಾರ, ವಿದ್ಯೆ ಸಿಗಲಿ ಎನ್ನುವ ಮಹದಾಸೆಯಿಂದ ಈ ಕೆಲಸವನ್ನು ಮಾಡಿದ್ದೇನೆ. ಒಳ್ಳೆಯ ಕೆಲಸ ಮಾಡುತ್ತಿರುವ ಮಠಗಳಿಗೆ ಸರ್ಕಾರದ ಸಹಕಾರವಿರುತ್ತದೆ. ಅರ್ಹತೆ ಇರುವವರಿಗೆ, ಮುಂದು ಬರಬೇಕೆನ್ನುವ ಹಂಬಲವಿರುವವರಿಗೆ ಸರ್ಕಾರ ಬೆನ್ನೆಲುಬಾಗಿ ನಿಲ್ಲಲಿದೆ.  ಎಲ್ಲಾ ವರ್ಗದ ಜನರನ್ನು ಸರಿ ಸಮಾನವಾಗಿ ನೋಡಿಕೊಳ್ಳುವ ಕೆಲಸವನ್ನು ಮಾಡಲಾಗುವುದು ಎಂದರು. 

*ಗುರು ಮತ್ತು ಭಕ್ತನ ಸಂಬಂಧ*
ಕಾಗಿನೆಲೆಯ ಶ್ರೀ ಗಳು ಸದಾ ಮಾರ್ಗದರ್ಶನ ಮಾಡಿದ್ದಾರೆ. ಶಕ್ತಿ ತುಂಬಿದ್ದಾರೆ. ಗುರು ಮತ್ತು ಭಕ್ತನ ಸಂಬಂಧವಿದು.  ಕರಾರುರಹಿತ ಪ್ರೀತಿಯ ಸಂಬಂಧವಿದೆ. ಅಧಿಕಾರ ವಿರಲಿ, ಇಲ್ಲದಿರಲಿ ಇದೆ ವಿಶ್ವಾಸ ನಮ್ಮ ಮೇಲೆ ಇದೆ. ಸಾಮಾಜಿಕ, ಶೈಕ್ಷಣಿಕ , ಧಾರ್ಮಿಕ ವಾಗಿ ಅಗತ್ಯವಿರುವುದನ್ನು ಮಾಡುವುದಾಗಿ ಭರವಸೆ ನೀಡಿದರು.
[01/05, 7:57 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಜಸ್ಟಿಸ್ ಎಂ ರಾಮಕೃಷ್ಣ ಅವರ ೮೬ ನೇ ಜನ್ಮ‌ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ  ನೀಡಿ ಇಸ್ಕೂಲಪ್ಪ ಅಭಿನಂದನ ಗ್ರಂಥವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಜಸ್ಟಿಸ್ ಎಂ ರಾಮಕೃಷ್ಣ, ನಿಡುಮಾಮಿಡಿ ಸ್ವಾಮೀಜಿ, ಮಾಜಿ ಸಚಿವ ಅಂಜನಮೂರ್ತಿ, ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ, ಆದಿಜಾಂಬವ ಜಾಗೃತಿ ಪಾಕ್ಷಿಕ  ಪತ್ರಿಕೆ ಸಂಪಾದಕ ಎಂ ಗಂಗಾಧರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Post a Comment

Previous Post Next Post