ಇಂದು, cm

[04/05, 11:17 AM] Gurulingswami. Holimatha. Vv. Cm: ಬೆಂಗಳೂರು, ಮೇ 04: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಆಯೋಜಿಸಿರುವ ಕರ್ನಾಟಕದ ಏಳು ಅದ್ಭುತಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಅಭಿಯಾನದ ಲಾಂಛನ  ಬಿಡುಗಡೆ ಹಾಗೂ ವೆಬ್ ಸೈಟ್  ಉದ್ಘಾಟಿಸಿದರು.


ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ನಟ ಹಾಗೂ ಅಭಿಯಾನದ ರಾಯಭಾರಿಗಳಾದ ರಮೇಶ್ ಅರವಿಂದ್, ಏಷ್ಯಾನೆಟ್ ನ್ಯೂಸ್ ನೆಟ್‍ವರ್ಕ್‍ನ ಕಾರ್ಯನಿರ್ವಾಹಕ ಅಧ್ಯಕ್ಷ ರಾಜೇಶ್ ಕಾಲ್ರಾ, ಸಿಇಒ ನೀರಜ್ ಕೊಹ್ಲಿ, ಬ್ಯುಸಿನೆಸ್ ಹೆಡ್ ಅಪ್ಪಚ್ಚು, ಜಾಹೀರಾತು ವಿಭಾಗದ ಉಪಾಧ್ಯಕ್ಷ ಅನಿಲ್ ಸುರೇಂದ್ರ, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ,  ಪ್ರವಾಸೋದ್ಯಮ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಹಾಗೂ ಜಂಟಿ ಆಯುಕ್ತೆ ಶ್ವೇತಾ ಉಪಸ್ಥಿತರಿದ್ದರು.
[04/05, 12:10 PM] Gurulingswami. Holimatha. Vv. Cm: ಬೆಂಗಳೂರು, ಮೇ 04: *ಮಾನ್ಯ* *ಮುಖ್ಯಮಂತ್ರಿ ಬಸವರಾಜ* *ಬೊಮ್ಮಾಯಿ* ಅವರು ಇಂದು *ಕನ್ನಡಪ್ರಭ ಮತ್ತು ಏಷ್ಯಾನೆಟ್* *ಸುವರ್ಣ ನ್ಯೂಸ್ ವತಿಯಿಂದ* ಆಯೋಜಿಸಿರುವ *ಕರ್ನಾಟಕದ* *ಏಳು ** *ಅದ್ಭುತಗಳು** ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ *ಮುಖ್ಯಮಂತ್ರಿಗಳು ಅಭಿಯಾನದ* *ಲಾಂಛನ*  *ಬಿಡುಗಡೆ ಹಾಗೂ ವೆಬ್ ** *ಸೈಟ್**  ಉದ್ಘಾಟಿಸಿ *ಮಾತನಾಡಿದರು*
[04/05, 12:11 PM] Gurulingswami. Holimatha. Vv. Cm: ಬೆಂಗಳೂರು, ಮೇ 03:            2022- 23 ನೇ ಆಯವ್ಯಯದಲ್ಲಿ ಘೋಷಣೆಯಾಗಿರುವ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯ 
ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ವೈದ್ಯಕೀಯ ಶಿಕ್ಷಣ ಇಲಾಖೆಯೊಂದಿಗೆ ಸಭೆ ಜರುಗಿತು. 

ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಅಭಿವೃದ್ಧಿ ಆಯುಕ್ತೆ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ , ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್  ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
[04/05, 1:04 PM] Gurulingswami. Holimatha. Vv. Cm: ಬೆಂಗಳೂರು, ಮೇ 04 : 2022- 23 ನೇ ಆಯವ್ಯಯದಲ್ಲಿ ಘೋಷಣೆಯಾಗಿರುವ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯ 
ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಜಲಸಂಪನ್ಮೂಲ  ಇಲಾಖೆಯ  ಸಭೆ ಜರುಗಿತು. 

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ,  ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಅಭಿವೃದ್ಧಿ ಆಯುಕ್ತೆ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್  ಹಾಗೂ  ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
[04/05, 1:55 PM] Gurulingswami. Holimatha. Vv. Cm: ಬೆಂಗಳೂರು, ಮೇ 04: 2022- 23 ನೇ ಆಯವ್ಯಯದಲ್ಲಿ ಘೋಷಣೆಯಾಗಿರುವ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯ 
ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಲೋಕೋಪಯೋಗಿ  ಇಲಾಖೆಯ  ಸಭೆ ಜರುಗಿತು. 

ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಬಿ.ಹೆಚ್.ಅನಿಲ್ ಕುಮಾರ್ ,   ಅಭಿವೃದ್ಧಿ ಆಯುಕ್ತೆ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ,  ಹಾಗೂ  ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
[04/05, 2:02 PM] Gurulingswami. Holimatha. Vv. Cm: ಕರ್ನಾಟಕದ ಏಳು ಅದ್ಭುತಗಳು*
 –ಅಭಿಯಾನಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ*

*ಕರ್ನಾಟಕದ ಪ್ರವಾಸೋದ್ಯಮ ನಕ್ಷೆಯನ್ನು ಸಂಪೂರ್ಣವಾಗಿ ಬದಲಾಯಿಸಲಾಗುವುದು:* *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಬೆಂಗಳೂರು, 03: 
ರಾಜ್ಯದ ಪ್ರವಾಸೋದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸಿ ಕರ್ನಾಟಕದ ಪ್ರವಾಸೋದ್ಯಮ ನಕ್ಷೆಯನ್ನು ಸಂಪೂರ್ಣವಾಗಿ ಬದಲಾಯಿಸಲಾಗುವುದು 
ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಆಯೋಜಿಸಿರುವ ಕರ್ನಾಟಕದ ಏಳು ಅದ್ಭುತಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಕರ್ನಾಟಕ ದೇವರ ಸೃಷ್ಟಿಯ ಅದ್ಭುತಗಳ ನಾಡು.  ಹತ್ತು ಆಗ್ರೋ   ವಲಯಗಳಿವೆ. ಈ ರೀತಿಯ ಹಾವಾಮಾನ, ವೈವಿಧ್ಯಮಯ ಸಂಪತ್ತು ಎಲ್ಲಿ ಇದೆಯೋ ಅಲ್ಲಿನ ನಿಸರ್ಗದ  ರಮ್ಯ ತಾಣವಾಗುತ್ತದೆ. ಇಲ್ಲಿನ  ನೀರು ಹಾಗೂ ಮಣ್ಣಿನ ಗುಣ ವಿಶಿಷ್ಟವಾಗಿದೆ. 330 ಕಿಮೀ ಕರಾವಳಿ, ಅದಕ್ಕೆ ಹೊಂದಿಕೊಂಡಿರುವ ಪಶ್ಚಿಮ ಘಟ್ಟ, ಪಶ್ಚಿಮಘಟ್ಟಗಳಲ್ಲಿ ಕೈಲಾಸ ಎಂಬ ಕಲ್ಪನೆಯ ಎಲ್ಲಾ ಗುಣಲಕ್ಷಣಗಳು ಅಲ್ಲಿವೆ ಎಂದರು. ಅತ್ಯುತ್ತಮ  ಬಯಲುಸೀಮೆ, ಅದಕ್ಕೆ ಹೊಂದಿಕೊಂಡಿರುವಂತೆ ನಮ್ಮ ನದಿಗಳು. ಎಲ್ಲಾ ನದಿಗಳು ಪಶ್ಚಿಮದಲ್ಲಿ ಹುಟ್ಟಿ, ಪೂರ್ವಕ್ಕೆ ಹರಿಯುತ್ತವೆ. ರಾಜ್ಯವನ್ನು ದಾಟಿ ಬಂಗಾಲ ಕೊಲ್ಲಿಗೆ ಸೇರುತ್ತವೆ. ಎಲ್ಲಿ ನದಿಗಳು ಹರಿಯುತ್ತವೆ ಅಲ್ಲಿ ಸಂಸ್ಕøತಿ ಹಾಗೂ ನಾಗರಿಕತೆ  ಬೆಳೆಯುತ್ತವೆ.  ನಮ್ಮನ್ನಾಳಿದ ರಾಷ್ಟ್ರಕೂಟ, ಹೊಯ್ಸಳರಿಂದ ವಿಜಯನಗರ ಸಾಮ್ರಾಜ್ಯದವರೆಗೆ ಶಿಲಾಶಾಸನಗಳನ್ನು ಬಿಟ್ಟುಹೋಗಿದ್ದಾರೆ.  'ಆಳುವುದು ಬೇರೆ ಆಡಳಿತ ಮಾಡುವುದು ಬೇರೆ' ಎನ್ನುವ ತತ್ವವನ್ನು ಶಿಲಾಶಾಸನದಲ್ಲಿ ತಿಳಿಸಿದ್ದಾರೆ. ಇವುಗಳನ್ನು ಹುಡುಕಿ ಜನರ ಮುಂದೆ ಇಡುವ ಕೆಲಸಗಳಾಗಿದ್ದರೂ ಇನ್ನೂ ಪರಿಣಾಮಕಾರಿಯಾಗಿ ಆಗಬೇಕು ಎಂದರು.  

*ತಾಲ್ಲೂಕು ಸರ್ಕೀಟ್ ಅಭಿವೃದ್ಧಿ :*
ತಮ್ಮ ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಪ್ರವಾಸಿ ತಾಣಗಳನ್ನು ಗುರುತಿಸಿ, ಬ್ರಾಂಡಿಂಗ್ ಹಾಗೂ ಮಾರ್ಕೆಟಿಂಗ್ ಮಾಡಿ  ಅವುಗಳ ಫೋಟೋಗಳ ಕ್ಯಾಲೆಂಡರ್ ಮಾಡಿ ಎಲ್ಲಾ ಹೆದ್ದಾರಿಗಳಲ್ಲಿ ಹಾಕಿಸಲಾಗಿತ್ತು. ಅದಕ್ಕೆ ಅದ್ಭುತವಾದ ಪ್ರತಿಕ್ರಿಯೆ ದೊರೆತಿತ್ತು.   ಕನಕದಾಸರ ಅರಮನೆಯಲ್ಲಿ ಅವರ  ಜೀವನಚರಿತ್ರೆಯನ್ನು ಬಿಂಬಿಸುವ ಸ್ಟುಡಿಯೋ ಮುಂತಾದವುಗಳನ್ನು  ನಿರ್ಮಿಸಲಾಗಿದೆ. ದೇಶದಲ್ಲಿ ಮೂರನೇ ಅತಿ ದೊಡ್ಡ ನವಿಲು ಉದ್ಯಾನವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು. ಈ ರೀತಿ ತಾಲ್ಲೂಕು ಸರ್ಕಿಟ್ ಅಭಿವೃದ್ಧಿಗೊಳಿಸಲಾಗಿತ್ತು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.

*ಇತಿಹಾಸದ ಭಾಗವಾಗಬೇಕು ಅಥವಾ ಇತಿಹಾಸವನ್ನು ಸೃಷ್ಟಿಸಬೇಕು :*
ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಇದೊಂದು ಅತ್ಯುತ್ತಮ ಅಭಿಯಾನವಾಗಿದೆ. ಪ್ರವಾಸೀ ತಾಣಗಳ ಹುಡುಕಾಟವೇ ಒಂದು ಚಿಮ್ಮುಹಲಗೆ. ಅಲ್ಲಿ ರತ್ನಗಳೇ ಸಿಗಬಹುದು. ಇತಿಹಾಸ ಮರುಸೃಷ್ಟಿಸುವ ಅವಕಾಶವಿದು. ನಿರೀಕ್ಷೆ ಮೀರಿ ಪ್ರತಿಕ್ರಿಯೆ ದೊರಕುವ ವಿಶ್ವಾಸವಿದೆ. ಬೀದರ್,ಕಲಬುರ್ಗಿ, ಬಾದಾಮಿ, ಲಕ್ಕುಂಡಿ, ಮುಂತಾದವುಗಳನ್ನು ಉತ್ತಮವಾಗಿ ನಿರ್ವಹಿಸಿದರೂ ಪ್ರವಾಸಿಗರನ್ನು ಆಕರ್ಷಿಸಬಹುದು. ಹಂಪಿ, ಮೈಸೂರು ಸರ್ಕಿಟ್‍ಗಳನ್ನು ಸೃಜಿಸಲಾಗಿದೆ. ನಂದಿ ಬೆಟ್ಟದಲ್ಲಿ ರೋಪ್ ವೇ, ಹಾಗೂ ಜೋಗ್ ಜಲಪಾತದಲ್ಲಿಯೂ ರೇಪ್ ವೇಗೆ ಚಾಲನೆ ದೊರೆತಿದೆ. ಯಾಣ, ಮುಳ್ಳಯ್ಯನಗಿರಿ, ಚಾಮುಂಡಿಬೆಟ್ಟದಲ್ಲಿ ರೋಪ್ ವೇ ನಿರ್ಮಾಣ, ಯಾತ್ರಿಕರು ಹೊರರಾಜ್ಯಗಳಿಗೆ ಭೇಟಿ ನೀಡುತ್ತಾರೆ ಅಲ್ಲಿ ರಾಜ್ಯದ ಸೌಕರ್ಯಗಳು, ಅಂಜನಾದ್ರಿ ಬೆಟ್ಟದಲ್ಲಿ ರೋಪ್ ವೇ ಹಾಗೂ ಸುತ್ತಮುತ್ತಲಿನ ಸ್ಥಳಗಳ ಅಭಿವೃದ್ದಿಗಾಗಿ ಈ ವರ್ಷ 100 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.  ನಂದಿಬೆಟ್ಟ, ಜೋಗ ಜಲಪಾತಕ್ಕೆ  ಸಿಆರ್ ಜೆಡ್ ಮಾರ್ಗಸೂಚಿಗಳನ್ನು ಪಡೆದುಕೊಂಡು ಕರಾವಳಿ ಭಾಗವನ್ನೂ ಒಳಗೊಂಡಂತೆ ಅಭಿವೃದ್ಧಿಗೊಳಿಸಲಾಗುವುದು ಎಂದರು. 

*ಸರ್ಕಾರದ ಪ್ರವಾಸೋದ್ಯಮ ಅಭಿವೃದ್ಧಿಗೆ ಮುನ್ನುಡಿ :*  ಕರ್ನಾಟಕದ ಏಳು ಅದ್ಭುತಗಳು ಅಭಿಯಾನ ರಾಜ್ಯದ ಪ್ರವಾಸೋದ್ಯಮ ಬ್ರಾಂಡಿಂಗ್ ಗೆ ಮುನ್ನುಡಿ ಬರೆದಿದೆ. ರಮೇಶ್ ಅರವಿಂದ್ ಅತ್ಯಂತ ಸೂಕ್ತ ರಾಯಭಾರಿಯಾಗಿದ್ದಾರೆ. ಅಭಿಯಾನದ ಯಶಸ್ಸು ಕರ್ನಾಟಕದ ಹಾಗೂ ರಾಜ್ಯದ ಪ್ರವಾಸೋದ್ಯಮದ ಯಶಸ್ಸು ಆಗಲಿದೆ.  ಕನ್ನಡನಾಡು ನೈಸರ್ಗಿಕವಾಗಿ ಅದ್ಭುತವಾಗಿರುವ ನಾಡು. ಅಭಿಯಾನದ ಮೂಲಕ ಸರ್ಕಾರದ ಪ್ರವಾಸೋದ್ಯಮ ಅಭಿವೃದ್ಧಿಗೆ  ಮುನ್ನುಡಿ ಬರೆಯಲಾಗಿದೆ.  ಇಲ್ಲಿ ಏಳು ಅದ್ಭುತಗಳನ್ನು ಹುಡುಕುವ ಅಭಿಯಾನ ಯಶಸ್ವಿಯಾಗಲಿ ಎಂದರು. 

ರಾಜ್ಯ ಮುನ್ನಡೆಯಬೇಕೆಂಬ ಹಂಬಲ ಕನ್ನಡಪ್ರಭ ಸಮೂಹಕ್ಕೆ ಇರುವುದು ಸ್ವಾಗತಾರ್ಹ.  ನಮ್ಮಲ್ಲಿರುವುದನ್ನು ನೆನಪು ಮಾಡಿಕೊಳ್ಳುವ ಕೆಲಸವನ್ನು ಸಂಸ್ಥೆ  ಮಾಡುತ್ತಿದೆ ಎಂದರು. ಪ್ರವಾಸೋದ್ಯಮ ಬೆಳವಣಿಗೆಗೆ ಹಂಪಿಯವರೇ ಆದ ಸಚಿವ  ಆನಂದ್ ಸಿಂಗ್ ಅವರು ಪ್ರವಾಸೋದ್ಯಮಕ್ಕೆ  ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಅಭಿಯಾನದ ಲಾಂಛನ ಬಿಡುಗಡೆ  ಹಾಗೂ ವೆಬ್ ಸೈಟ್ ಉದ್ಘಾಟನೆಯನ್ನು  ನೆರವೇರಿಸಿದರು.

ಸಮಾರಂಭದಲ್ಲಿ ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ನಟ ಹಾಗೂ ಅಭಿಯಾನದ ರಾಯಭಾರಿಗಳಾದ ರಮೇಶ್ ಅರವಿಂದ್, ಏಷ್ಯಾನೆಟ್ ನ್ಯೂಸ್ ನೆಟ್‍ವರ್ಕ್‍ನ ಕಾರ್ಯನಿರ್ವಾಹಕ ಅಧ್ಯಕ್ಷ ರಾಜೇಶ್ ಕಾಲ್ರಾ, ಸಿಇಒ ನೀರಜ್ ಕೊಹ್ಲಿ, ಬ್ಯುಸಿನೆಸ್ ಹೆಡ್ ಅಪ್ಪಚ್ಚು, ಜಾಹೀರಾತು ವಿಭಾಗದ ಉಪಾಧ್ಯಕ್ಷ ಅನಿಲ್ ಸುರೇಂದ್ರ, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ,  ಪ್ರವಾಸೋದ್ಯಮ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಹಾಗೂ ಜಂಟಿ ಆಯುಕ್ತೆ ಶ್ವೇತಾ ಉಪಸ್ಥಿತರಿದ್ದರು.
[04/05, 2:37 PM] Gurulingswami. Holimatha. Vv. Cm: ಬೆಂಗಳೂರು, ಮೇ 04: 2022- 23 ನೇ ಆಯವ್ಯಯದಲ್ಲಿ ಘೋಷಣೆಯಾಗಿರುವ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಇಲಾಖೆಯ  ಸಭೆ ಜರುಗಿತು. 

ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್,  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ,   ಅಭಿವೃದ್ಧಿ ಆಯುಕ್ತೆ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ,  ಹಾಗೂ  ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
[04/05, 5:14 PM] Gurulingswami. Holimatha. Vv. Cm: *ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ*

ಬೆಂಗಳೂರು, ಮೇ 04 :  2022-23 ನೇ ಸಾಲಿನ ಆಯವ್ಯಯದಲ್ಲಿ ಮಾಡಿರುವ ಘೋಷಣೆಗಳ ಅನುಷ್ಠಾನಕ್ಕೆ ಇನ್ನಷ್ಟು ವೇಗ ನೀಡಲು ನಿರ್ಧರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬೆಂಗಳೂರಿನಲ್ಲಿ ಹಲವು ಪ್ರಮುಖ ಇಲಾಖೆಗಳ ಅಧಿಕಾರಿಗಳ ಜತೆ ಪರಿಶೀಲನಾ ಸಭೆ ನಡೆಸಿದರು. 

ತಮ್ಮ ಅಧ್ಯಕ್ಷತೆಯಲ್ಲಿ ಇಂದು ನಡೆದ  ವೈದ್ಯಕೀಯ ಶಿಕ್ಷಣ ಇಲಾಖೆ  ಪರಿಶೀಲನಾ ಸಭೆ ಜರುಗಿತು.  ಸಭೆಯಲ್ಲಿ ಸಿಎಂ ನೀಡಿದ ಸೂಚನೆಗಳು ಇಂತಿವೆ. 



ವೈದ್ಯಕೀಯ ಶಿಕ್ಷಣ ಇಲಾಖೆ:

1.    ಹುಬ್ಬಳ್ಳಿಯಲ್ಲಿ 250 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಾದೇಶಿಕ  ಕೇಂದ್ರಕ್ಕೆ ಆಗಸ್ಟ್ 15 ರೊಳಗೆ ಶಂಕುಸ್ಥಾಪನೆ ನೆರವೇರಿಸಲು ಅಗತ್ಯ ಕ್ರಮ ವಹಿಸುವುದು


ಕರ್ನಾಟಕದಲ್ಲಿ  ಪಿ.ಜಿ ಕೇಂದ್ರವನ್ನು ಸ್ಥಾಪಿಸಲು ಎಲ್ಲಾ ಸೌಕರ್ಯಗಳಿವೆ. ಇದನ್ನು ಪ್ರಾರಂಭಿಸಲು ಅಗತ್ಯವಿರುವ ಅನುಮೋದನೆಯನ್ನು ರಾಷ್ಟ್ರೀಯ ವೈದ್ಯಕೀಯ ಮಂಡಳಿಯಿಂದ ಪಡೆಯಬೇಕು.

2.   ಇದರ ಜೊತೆಯಲ್ಲಿಯೇ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದಿಂದ ಅಗತ್ಯವಿರುವ ಪಿಜಿ ಸ್ಥಾನಗಳ ಬಗ್ಗೆ ಮಾಹಿತಿ ಪಡೆಯಲು ಸೂಚಿಸಿದರು.  

3.   ರಾಮನಗರ ಜಿಲ್ಲೆಯ ಅರ್ಚಕರಹಳ್ಳಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಪ್ರಕ್ರಿಯೆಗಳನ್ನು ಕೂಡಲೇ ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಕಾಲೇಜು ನಿರ್ಮಾಣ ಕಾರ್ಯ ಪ್ರಾರಂಭಿಸಬೇಕು

4.   ಸೋಮವಾರದೊಳಗೆ ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವ ಎಲ್ಲಾ ಅನುಮೋದನೆಗಳನ್ನು ಪಡೆಯುವುದು

5.   

6.     ಬಜೆಟ್ ಘೋಷಣೆಯಂತೆ ಬೆಂಗಳೂರಿನಲ್ಲಿ    ಅಂಗಾಂಗ ದಾನ  ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ನಿಮ್ಹಾನ್ಸ್ ಮೂಲಕ ಅಂಗಾಂಗ ದಾನ ಪ್ರಕ್ರಿಯೆಯನ್ನು ಈ ವರ್ಷವೇ  ಪ್ರಾರಂಭಿಸಲು  ಸೂಚನೆ

7.   ಚಿತ್ರದುರ್ಗದಲ್ಲಿ ನೂತನ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಕೈಗೊಳ್ಳಲಾಗಿರುವ ಪ್ರಕ್ರಿಯೆಗಳಿಗೆ ವೇಗ ನೀಡುವುದು.
[04/05, 5:45 PM] Gurulingswami. Holimatha. Vv. Cm: *ಗ್ರಾ.ಪಂ ಗಳಲ್ಲಿ ಗ್ರಾಮೀಣ ಹಾಗೂ ದೇಸೀ ಕ್ರೀಡೆಗಳ  ಉತ್ಸವ ಆಯೋಜಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ*

ಜಾತ್ರೆ ಸ್ವರೂಪದಲ್ಲಿ ಕ್ರೀಡಾ ಉತ್ಸವ

ಬೆಂಗಳೂರು, ಮೇ 04: ಗ್ರಾಮೀಣ ಹಾಗೂ ದೇಸೀ ಕ್ರೀಡೆಗಳನ್ನು  ಉತ್ತೇಜಿಸಲು  ಪ್ರಮುಖವಾಗಿ ಕಬ್ಬಡ್ಡಿ, ಖೊ- ಖೋ , ಕುಸ್ತಿ, ಎತ್ತಿನಗಾಡಿ ಸ್ಪರ್ಧೆಗಳು ಸೇರಿದಂತೆ ಒಟ್ಟು ಹತ್ತು  ಗ್ರಾಮೀಣ ಕ್ರೀಡೆಗಳನ್ನು ಗುರುತಿಸಿ 2-3  ತಿಂಗಳ ಕಾಲ  ಖಾಸಗಿ ಪ್ರಾಯೋಜಕತ್ವದಲ್ಲಿ ಆಯೋಜಿಸುವಂತೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.


 ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾತ್ರೆಯ ಮಾದರಿಯಲ್ಲಿ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದರು.

ಸಭೆಯಲ್ಲಿ ನೀಡಿದ ಇತರೆ ಸೂಚನೆಗಳು: 


1.ಸ್ವಂತ ಕಟ್ಟಡಗಳಿಲ್ಲದ 1000 ಅಂಗನವಾಡಿಗಳಿಗೆ  ನರೇಗಾ ಯೋಜನೆಯಡಿ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಟ್ಟಡಗಳನ್ನು ಇಲಾಖೆಗಳ ಸಮನ್ವಯದೊಂದಿಗೆ ಗುರುತಿಸಿ ಕ್ಷಿಪ್ರಗತಿಯಲ್ಲಿ ಕೈಗೊಳ್ಳಲು ಸೂಚಿಸಿದರು. ಆರ್.ಡಿ.ಪಿ.ಆರ್ ವತಿಯಿಂದ ಪ್ರತಿ ಘಟಕಕ್ಕೆ  ಒದಗಿಸುವ  5 ಲಕ್ಷ ರೂ.ಗಳ ಮೊತ್ತವನ್ನು ಕ್ರಿಯಾ ಯೋಜನೆಗಳಲ್ಲಿ   ಕಡ್ಡಾಯವಾಗಿ ನಮೂದಿಸುವುದು. ಈ ಬಗ್ಗೆ ಪಿ.ಡಿ.ಒ ಗಳಿಗೆ ನಿರ್ದಿಷ್ಟ ಸೂಚನೆಗಳನ್ನು ಕಳುಹಿಸಲು ಸೂಚಿಸಿದರು.  ಅಭಿವೃದ್ಧಿ 
ಆಕಾಂಕ್ಷಿ  ತಾಲ್ಲೂಕುಗಳಿಗೆ ಆದ್ಯತೆ ನೀಡಲು ತಿಳಿಸಿದರು. 

2. ನರೇಗಾ ಯೋಜನೆಯಡಿ ರೈತರ ಹೊಲಗಳಿಗೆ ಹೋಗುವ ರಸ್ತೆಯನ್ನು ಆದ್ಯತೆ ಮೇರೆಗೆ ಕೈಗೊಳ್ಳುವುದು. ರಸ್ತೆಗಳ ನಿರ್ಮಾಣಕ್ಕೆ ನಿಯಮಗಳನ್ನು ರೂಪಿಸಿ ಪ್ರತಿ ತಾಲ್ಲೂಕಿಗೆ ಹಾಗೂ ಗರಿಷ್ಠ 2 ಕಿಮೀ ಗಳಂತೆ ಕಿ.ಮೀ ಹಾಗೂ ಗಡಿಗಳನ್ನು ನಿಗದಿಪಡಿಸಲು ಸೂಚಿಸಿದರು. ಇದಕ್ಕೆ ಗುರಿ ನಿಗದಿಪಡಿಸಿ ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ಸೂಚಿಸಿದರು. 

3. ಅಮೃತ್ ಗ್ರಾಮ ಪಂಚಾಯತ್ ಯೋಜನೆ ಯಡಿ 750 ಗ್ರಾಮ ಪಂಚಾಯತ್ ಗಳಿಗೆ ತಲಾ 25 ಲಕ್ಷ ರೂ.ಗಳ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಜೂನ್ ಅಂತ್ಯಕ್ಕೆ ಪೂರ್ಣಗೊಳಿಸುವುದು. ಗ್ರಾಮ ಪಂಚಾಯಿತಿ ರಸ್ತೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದು. 
 
4.ಜಲಜೀವನ್ ಮಿಷನ್ ಯೋಜನೆಯ ಬ್ಯಾಚ್ - 1 ರಲ್ಲಿ  ಕೈಗೊಂಡಿರುವ ಕಾಮಗಾರಿಗಳನ್ನು  ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳಿಸುವುದು.

5. ಬ್ಯಾಚ್ ಎರಡರ ಟೆಂಡರ್ ಕಾಮಗಾರಿಗಳನ್ನು ಈ ತಿಂಗಳೊಳಗೆ ಪೂರ್ಣಗೊಳಿಸಲು ಸೂಚಿಸಿದರು.
[04/05, 6:02 PM] Gurulingswami. Holimatha. Vv. Cm: ಬೆಂಗಳೂರು, ಮೇ 04: 2022- 23 ನೇ ಆಯವ್ಯಯದಲ್ಲಿ ಘೋಷಣೆಯಾಗಿರುವ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯ 
ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಸಮಾಜ ಕಲ್ಯಾಣ ಇಲಾಖೆಯ  ಸಭೆ ಜರುಗಿತು. 

ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್,  ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ , ಅಭಿವೃದ್ಧಿ ಆಯುಕ್ತೆ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ,  ಹಾಗೂ  ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು   ಉಪಸ್ಥಿತರಿದ್ದರು.

Post a Comment

Previous Post Next Post