ಒಟ್ಟು GST ಆದಾಯ ಸಂಗ್ರಹವು ಏಪ್ರಿಲ್ 2022 ರಲ್ಲಿ ಸಾರ್ವಕಾಲಿಕ ಗರಿಷ್ಠ 1.68 ಲಕ್ಷ ಕೋಟಿ ರೂ.

 ಮೇ 01, 2022

,

2:13PM

ಒಟ್ಟು GST ಆದಾಯ ಸಂಗ್ರಹವು ಏಪ್ರಿಲ್ 2022 ರಲ್ಲಿ ಸಾರ್ವಕಾಲಿಕ ಗರಿಷ್ಠ 1.68 ಲಕ್ಷ ಕೋಟಿ ರೂ.

ಒಟ್ಟು ಸರಕು ಮತ್ತು ಸೇವಾ ತೆರಿಗೆ, GST ಆದಾಯ ಸಂಗ್ರಹವು ಏಪ್ರಿಲ್ 2022 ರಲ್ಲಿ ಸುಮಾರು 1.68 ಲಕ್ಷ ಕೋಟಿ ರೂಪಾಯಿಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಏಪ್ರಿಲ್‌ನಲ್ಲಿ ಒಟ್ಟು GST ಸಂಗ್ರಹವು ಒಂದು ಲಕ್ಷದ 67 ಸಾವಿರದ 540 ಕೋಟಿ ರೂಪಾಯಿಗಳು. ಈ ವರ್ಷದ ಏಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹವು ಮಾರ್ಚ್ 2022 ರಲ್ಲಿ ಇದ್ದ ಒಂದು ಲಕ್ಷದ 42 ಸಾವಿರದ 95 ಕೋಟಿ ರೂಪಾಯಿಗಳ ನಂತರದ ಗರಿಷ್ಠ ಸಂಗ್ರಹಕ್ಕಿಂತ 25 ಸಾವಿರ ಕೋಟಿ ರೂಪಾಯಿ ಹೆಚ್ಚಾಗಿದೆ.


ಈ ವರ್ಷದ ಏಪ್ರಿಲ್‌ನಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹದಲ್ಲಿ ಕೇಂದ್ರ ಸರಕು ಮತ್ತು ಸೇವಾ ತೆರಿಗೆ, ಸಿಜಿಎಸ್‌ಟಿ ಸಂಗ್ರಹ 33 ಸಾವಿರದ 159 ಕೋಟಿ ರೂ., ರಾಜ್ಯ ಸರಕು ಮತ್ತು ಸೇವಾ ತೆರಿಗೆ, ಎಸ್‌ಜಿಎಸ್‌ಟಿ 41 ಸಾವಿರದ 793 ಕೋಟಿ ರೂ., ಸಮಗ್ರ ಸರಕು ಮತ್ತು ಸೇವಾ ತೆರಿಗೆ, ಐಜಿಎಸ್‌ಟಿ 81 ಸಾವಿರದ 939 ಕೋಟಿ ಮತ್ತು ಸೆಸ್ 10 ಸಾವಿರದ 649 ಕೋಟಿ ರೂ.


ಹಣಕಾಸು ಸಚಿವಾಲಯದ ಪ್ರಕಾರ, ಏಪ್ರಿಲ್ 2022 ರ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್‌ಟಿ ಆದಾಯಕ್ಕಿಂತ ಶೇಕಡಾ 20 ರಷ್ಟು ಹೆಚ್ಚಾಗಿದೆ. ತಿಂಗಳಿನಲ್ಲಿ, ಸರಕುಗಳ ಆಮದು ಆದಾಯವು ಶೇಕಡಾ 30 ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ ಬರುವ ಆದಾಯವು ಕಳೆದ ವರ್ಷದ ಇದೇ ತಿಂಗಳಿನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ 17 ಶೇಕಡಾ ಹೆಚ್ಚಾಗಿದೆ.

 

ಮೊದಲ ಬಾರಿಗೆ ಒಟ್ಟು ಜಿಎಸ್‌ಟಿ ಸಂಗ್ರಹವು 1.5 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟಿದೆ ಎಂದು ಹಣಕಾಸು ಸಚಿವಾಲಯ ಉಲ್ಲೇಖಿಸಿದೆ.


ಮಾರ್ಚ್ 2022 ರಲ್ಲಿ ಒಟ್ಟು ಇ-ವೇ ಬಿಲ್‌ಗಳ ಸಂಖ್ಯೆ 7.7 ಕೋಟಿಯಾಗಿದೆ, ಇದು ಫೆಬ್ರವರಿ 2022 ರಲ್ಲಿ ಉತ್ಪತ್ತಿಯಾದ 6.8 ಕೋಟಿ ಇ-ವೇ ಬಿಲ್‌ಗಳಿಗಿಂತ 13 ಪ್ರತಿಶತ ಅಧಿಕವಾಗಿದೆ, ಇದು ವ್ಯಾಪಾರ ಚಟುವಟಿಕೆಯ ವೇಗದ ಚೇತರಿಕೆಯನ್ನು ಪ್ರತಿಬಿಂಬಿಸುತ್ತದೆ.

---

Post a Comment

Previous Post Next Post