kpcc, ಇಂದು

[02/05, 12:38 PM] Ravi Gowda. Kpcc. official: ಫ್ರೆಂಚ್ ಕೌನ್ಸಲರ್ ಜನರಲ್ ಥೀರಿ ಬೆರ್ಥ್ಲಾಟ್ ಅವರು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸೋಮವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
[02/05, 1:32 PM] Ravi Gowda. Kpcc. official: https://twitter.com/DKShivakumar/status/1521024299460530176?t=-EmAXHxKS5zDPKLC3uO_xw&s=08
[02/05, 1:33 PM] Ravi Gowda. Kpcc. official: https://www.facebook.com/100044604631735/posts/547907146706102/?sfnsn=wiwspmo
[02/05, 1:59 PM] Ravi Gowda. Kpcc. official: *ಪಿಎಸ್ಐ ನೇಮಕ ಅಕ್ರಮದಲ್ಲಿ ಮಂತ್ರಿಯ ಸಂಬಂಧಿ ಕೈವಾಡದ ಬಗ್ಗೆ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:*

‘ನನಗೆ ಬಂದಿರುವ ಮಾಹಿತಿ ಪ್ರಕಾರ ಪಿಎಸ್ಐ ನೇಮಕ ಅಕ್ರಮದಲ್ಲಿ ಸಚಿವರ ತಮ್ಮ ಅಂತಾ ಅಲ್ಲ, ಮಂತ್ರಿಗಳ  ಸಂಬಂಧಿ ಭಾಗಿಯಾಗಿದ್ದಾರೆ ಎಂದು ಗೊತ್ತಾಗಿದೆ. ಇದು ಸತ್ಯವಿರಬಹುದು, ಇಲ್ಲದಿರಬಹುದು. ಒಂದೇ ತಾಲೂಕಿನ ಮೂವರು ಈ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು, ಅವರು ಆಸ್ತಿ ಮಾರಿ ಹಣ ನೀಡಿರುವುದು ಇಡೀ ಊರಿಗೆ ಗೊತ್ತಿರುವ ವಿಚಾರ. ಈ ವಿಚಾರವಾಗಿ ನಾನು ನೊಟೀಸ್ ಪಡೆಯುವ ಅಗತ್ಯವಿರುವುದಿಲ್ಲ.

ನನಗೆ ಸಾಕಷ್ಟು ಕರೆಗಳು ಬರುತ್ತಿದ್ದು, ಆಯ್ಕೆಯಾಗಿದ್ದ ಅಭ್ಯರ್ಥಿ ತಂದೆ ಈ ರೀತಿ ಆಯ್ತಲ್ಲಾ ಎಂದು ಹಾಸಿಗೆ ಹಿಡಿದಿದ್ದಾರೆ. ಮತ್ತೊಬ್ಬರನ್ನು ಪ್ರಭಾವಿ ವ್ಯಕ್ತಿಗಳ ಪ್ರಭಾವ ಬಳಸಿ ಪೊಲೀಸರ ತನಿಖೆಯಿಂದ ಬಿಡಿಸಲಾಗಿದೆ. ಆ ಪ್ರಭಾವ ಬೀರಿದವರು ಯಾರು ಎಂದು ನನಗೆ ಗೊತ್ತಿಲ್ಲ. ಈ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಸಿಐಡಿಯವರು ಎಷ್ಟು ಪ್ರಾಮಾಣಿಕವಾಗಿ ಈ ಪ್ರಕರಣದ ತನಿಖೆ ಮಾಡುತ್ತಾರೆ ಎಂಬುದು ಈಗ ಬಹಳ ಮುಖ್ಯ.

ನಾವು ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡಿದರೆ, ಮುಖ್ಯಮಂತ್ರಿಗಳು ನಾವು ರಭಸವಾಗಿ ಆಡಳಿತ ಮಾಡಿದರೆ ಶಿವಕುಮಾರ್ ಉಸಿರು ನಿಂತು ಹೋಗುತ್ತದೆ ಎಂದು ಹೇಳುತ್ತಾರೆ. ಮತ್ತೊಂದು ಕಡೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು, ಇಲ್ಯಾರೂ ಗಂಡಸರಿಲ್ಲ ಎಂದು ಸವಾಲು ಹಾಕುತ್ತಾರೆ. ನಾವು ಗಂಡಸರಲ್ಲ, ಅವರೋಬ್ಬರೇ ಗಂಡಸರು. ಹೀಗಾಗಿ ನಮಗೆ ಭಯ ಆಗುತ್ತಿದೆ.

ಸರ್ಕಾರ ತನಿಖೆ ಮಾಡಿ ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಪ್ರಕಟಿಸುವ ಮುನ್ನವೇ ಪರೀಕ್ಷೆ ರದ್ದು ಮಾಡಿ ಮರು ಪರೀಕ್ಷೆಗೆ ಆದೇಶಿಸಿದ್ದಾರೆ. ಈ ನಿರ್ಧಾರದ ಮೂಲಕ ಸರ್ಕಾರ ಕಾನೂನು ವ್ಯಾಜ್ಯಕ್ಕೆ ದಾರಿ ಮಾಡಿಕೊಡುತ್ತಿದೆ. ಜತೆಗೆ ಪ್ರಭಾವಿಗಳನ್ನು ರಕ್ಷಿಸುವ ಹುನ್ನಾರವಿದೆ.

ಪೊಲೀಸ್ ಇಲಾಖೆಗೆ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕರೇ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಪೊಲೀಸ್ ಮಹಾನಿರ್ದೇಶಕರು, ಗೃಹ ಸಚಿವರ ಹೇಳಿಕೆಗಳು ಭಿನ್ನವಾಗಿರುವುದು ಉತ್ತಮ ಆಡಳಿತವೇ?

ಯಾರೋ ಕರೆ ಮಾಡಿದರು ಎಂದು ವಿಚಾರಣೆ ಮಾಡದೇ ಆರೋಪಿಗಳನ್ನು ಬಿಟ್ಟು ಕಳುಹಿಸುತ್ತಿದ್ದಾರೆ. ಮಾಧ್ಯಮಗಳು ಈ ಮಾಹಿತಿ ಪ್ರಕಟಿಸುತ್ತಿದ್ದು, ಮಾಧ್ಯಮಗಳಿಗೂ ಅವರು ನೊಟೀಸ್ ಕೊಟ್ಟು ವಿಚಾರಣೆ ಮಾಡಲಿ ನೋಡೋಣ.

ಅಭ್ಯರ್ಥಿ ವಿಚಾರಣೆಗೆ ಕೊಟ್ಟ ನೊಟೀಸ್ ನಲ್ಲಿ ಅವರ ಹೆಸರಿದೆ. ಸಿಐಡಿ ಅಧಿಕಾರಿಗಳು ಬಂಧಿತ ಅಭ್ಯರ್ಥಿಗಳ ಊರಿಗೆ ಹೋಗಿ ಅಲ್ಲಿ ತನಿಖೆ ಮಾಡಿಲ್ಲ. ಅವರು ಅಷ್ಟು ಹಣ ಹೇಗೆ ಕೊಟ್ಟಿದ್ದಾರೆ ಎಂಬ ತನಿಖೆಯನ್ನೂ ಮಾಡಿಲ್ಲ. 

ಮುಖ್ಯಮಂತ್ರಿಗಳಿಗೆ ಬದ್ಧತೆ ಇದ್ದರೆ ಈ ಪ್ರಕರಣದಲ್ಲಿ ಭಾಗಿಯಾಗಿರುವವರು ಎಷ್ಟೇ ದೊಡ್ಡವರಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದು ಬಿಜೆಪಿ ಶಾಸಕರು, ನಾಯಕರು, ಮಂತ್ರಿಗಳಾಗಿರಲಿ, ಕಾಂಗ್ರೆಸ್, ಜೆಡಿಎಸ್ ನವರಾಗಿರಲಿ, ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಈಗ ಆ ಅಭ್ಯರ್ಥಿ, ಅವರಿಂದ ಹಣ ಪಡೆದವರ ವಿಚಾರಣೆ ಮಾಡದಂತೆ ಒತ್ತಡ ಹಾಕಿದವರು ಯಾರು? ಎಂಬ ವಿಚಾರವಾಗಿ ಮುಖ್ಯಮಂತ್ರಿಗಳು ಮಾಹಿತಿ ಪಡೆಯಬೇಕು. ಈ ಪ್ರಕರಣದಲ್ಲಿ ಸರ್ಕಾರ ಏನು ಮಾಡುತ್ತದೆ ಎಂದು ಕಾದು ನೋಡುತ್ತೇವೆ. ನಂತರ ನಾವು ಮಾತನಾಡುತ್ತೇವೆ.

ನನಗೂ ಅನೇಕರು ಫೋನ್ ಕರೆ ಮಾಡಿ ಅವರು ಮುಂದೆ ಮುಖ್ಯಮಂತ್ರಿ ಆಗುವವರು, ಅವರ ಹೆಸರು ಎಳೆದು ತರಬೇಡಿ, ಮುಚ್ಚಿಹಾಕಿ ಎಂದು ಹೇಳುತ್ತಿದ್ದಾರೆ. ಬೇಕಾದರೆ ನನ್ನ ಫೋನ್ ಕರೆ ವಿವರ ಪರಿಶೀಲಿಸಿ. ಮಂಡ್ಯದ ನಾಯಕರೊಬ್ಬರು ನನಗೆ ಕರೆ ಮಾಡಿ ಈ ವಿಚಾರದ ಬಗ್ಗೆ ಮಾತನಾಡಬೇಡಿ ಎಂದು ಹೇಳುತ್ತಿದ್ದಾರೆ.

ಬಿಜೆಪಿಯವರು ನಾಯಕತ್ವ ಬದಲಾವಣೆ ಮಾಡುವ ವಿಚಾರ ಅವರಿಗೆ ಬಿಟ್ಟದ್ದು, ಆ ಬಗ್ಗೆ ನಾನು ಮಾತನಾಡುವುದಿಲ್ಲ.’

ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುವ ಭರವಸೆ ಕೊಟ್ಟರೆ ನೀವು ಆ ಸಚಿವರ ಹೆಸರು ಹೇಳುತ್ತೀರಾ ಎಂಬ ಪ್ರಶ್ನೆಗೆ, ‘ಇಲ್ಲಿ ಮುಚ್ಚುಮರೆ ಇಲ್ಲ. ಭ್ರಷ್ಟಾಚಾರ, ಸುಳ್ಳು, ಕೆಮ್ಮು ಹಾಗೂ ಇತರೆ ವಿಚಾರವನ್ನು ಬಚ್ಚಿಡಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಲಂಚ ನೀಡುವಾಗ ಆಸ್ತಿ ಮಾರಬೇಕು, ಇಲ್ಲವೇ ಸಾಲ ಮಾಡಬೇಕು. ಇದೆಲ್ಲವೂ ಆಚೆಗೆ ಬರುತ್ತದೆಯಲ್ಲವೇ? 40 % ಕಮಿಷನ್ ವಿಚಾರದಲ್ಲಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ನಂತರ ಅನೇಕರು ನಾವು ಆತನಿಗೆ ಇಷ್ಟಿಷ್ಟು ಹಣ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಹೀಗೆ ಹಲವು ಪ್ರಕ್ರಿಯೆಗಳಿರುತ್ತವೆ. ಪಿಎಸ್ಐ ಪರೀಕ್ಷೆ ಪ್ರಕಟವಾದಾಗಿನಿಂದ ಹಿಡಿದು ಎಲ್ಲ ವಿಚಾರಗಳ ಬಗ್ಗೆ ತನಿಖೆ ಮಾಡಬೇಕು. ನನ್ನ ಬಳಿಯು ಕೆಲವು ಮುಗ್ಧರು ನಾನು ಅರ್ಜಿ ಹಾಕಿದ್ದೇನೆ. ಅಷ್ಟೋ, ಇಷ್ಟೋ ನೀಡುತ್ತೇವೆ ಕೆಲಸ ಕೊಡಿಸಿ ಎಂದು ಕೇಳುತ್ತಾರೆ. ನಾನು ಅವರಿಗೆ ಬೈಯ್ದು ಕಳಿಸಿದ್ದೇನೆ. ಪ್ರಾಮಾಣಿಕವಾಗಿ ಓದಿ ಪಾಸಾಗಿ ಆಯ್ಕೆಯಾಗಿ ಎಂದು ಹೇಳಿದ್ದೇನೆ. ಮತ್ತೆ ಕೆಲವರು ಇದಕ್ಕೆ ಪ್ರೋತ್ಸಾಹ ನೀಡಿ ಹಣ ಪಡೆದು ಸಿಕ್ಕಿಕೊಳ್ಳುತ್ತಾರೆ. ಈಗಲೂ ನಾನು ಹೇಳುತ್ತಿದ್ದೇನೆ, ನೀವುಗಳು ಕೂಡ ಆ ಊರುಗಳಿಗೆ ಹೋಗಿ ಆಯ್ಕೆಯಾಗಿದ್ದವರ ವಿಚಾರಣೆ ಮಾಡಿ. ಎಲ್ಲರೂ ಇದೇ ರೀತಿ ಆಯ್ಕೆಯಾಗಿದ್ದಾರೆ ಎಂದು ಹೇಳುತ್ತಿಲ್ಲ. ಸರ್ಕಾರಕ್ಕೆ ಅಕ್ರಮದ ಬಗ್ಗೆ ಮಾಹಿತಿ ಇರುವ ಕಾರಣಕ್ಕೆ, ಪರೀಕ್ಷೆ ರದ್ದು ಮಾಡಿದೆ ಅಲ್ಲವೇ? ತನಿಖಾ ವರದಿ ಬರುವ ಮುನ್ನವೇ ರದ್ದು ಮಾಡಿರುವುದು ಕೇವಲ ಅವರ ಪ್ರಭಾವಿ ನಾಯಕರ ರಕ್ಷಣೆಗಾಗಿ. ಮುಖ್ಯಮಂತ್ರಿಗಳೇ ನೀವು ಯಾರನ್ನೂ ರಕ್ಷಣೆ ಮಾಡಬೇಡಿ. ನಿಮ್ಮ ಕಾಲದಲ್ಲಿ ಈ ಅಕ್ರಮ ನಡೆದಿಲ್ಲ. ಆದರೆ ನಿಮ್ಮ ನೆರಳಲ್ಲಿ ಬೇರೆಯವರು ನಿಮ್ಮ ಹೆಸರು ದುರ್ಬಳಕೆ ಮಾಡಿಕೊಂಡು ಹೀಗೆಲ್ಲಾ ಮಾಡುತ್ತಿದ್ದಾರೆ. ಇದಕ್ಕೆ ನೀವೇ ಜವಾಬ್ದಾರರಾಗುತ್ತೀರಿ. ಕಾಂಗ್ರೆಸ್ ಕಾರ್ಯಕರ್ತರು ತಪ್ಪು ಮಾಡಿದರೆ ನೀವುಗಳೆಲ್ಲಾ ನನ್ನನ್ನೇ ಬೈಯ್ಯುತ್ತೀರಿ ಅಲ್ಲವೇ’ ಎಂದರು.

ನೀವು ಯಾಕೆ ಆ ಸಚಿವರ ಹೆಸರು ಹೇಳುತ್ತಿಲ್ಲ? ಎಂಬ ಪ್ರಶ್ನೆಗೆ, ‘ನನಗೆ ಅವರನ್ನು ಕಂಡರೆ ಭಯ ಇದೆ. ಅದಕ್ಕೆ ನಾನು ಅವರ ಹೆಸರು ಹೇಳುವುದಿಲ್ಲ’ ಎಂದು ಛೇಡಿಸಿದರು.
[02/05, 3:29 PM] Ravi Gowda. Kpcc. official: *ಪಿಎಸ್ಐ ನೇಮಕಾತಿ ಅಕ್ರಮ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರ ಪತ್ರಿಕಾಗೋಷ್ಠಿ:*

*ಹೆಚ್.ಎಂ ರೇವಣ್ಣ:*

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವವರ ವಿಚಾರಣೆ ಜತೆಗೆ ಈ ಇಲಾಖೆಯ ಅಧಿಕಾರಿಗಳ ಕೈವಾಡದ ಬಗ್ಗೆಯೂ ತನಿಖೆ ಆಗಬೇಕು ಎಂದುದು ನಮ್ಮ ಒತ್ತಾಯ. ಈ ಅಕ್ರಮದಲ್ಲಿ ಇಲಾಖೆ ಅಧಿಕಾರಿಗಳ ಹೊಣೆ ಇಲ್ಲವೇ ಎಂಬುದು  ನಮ್ಮ ಪ್ರಶ್ನೆ.

ಎಡಿಜಿಪಿ ಅಧಿಕಾರಿ ವರ್ಗಾವಣೆ ದೊಡ್ಡ ವಿಚಾರವಲ್ಲ. ಇವುಗಳನ್ನು ನೋಡಿದರೆ ಈ ಅಕ್ರಮದಲ್ಲಿ ಮೇಲಿಂದ ಕೆಳಗಿನವರೆಗೆ ಎಲ್ಲರ ಕೈವಾಡ ಇರುವುದು ತಿಳಿಯುತ್ತದೆ. ಇಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಿ, ತಪ್ಪು ಮಾಡದವರಿಗೆ ಅನ್ಯಾಯ ಆಗುವುದನ್ನು ನೋಡಬೇಕು.

ಸಿಐಡಿ ಅವರು ಮಾಗಡಿ ತಾಲೂಕಿನ ಅಭ್ಯರ್ಥಿ ದರ್ಶನ್ ಗೌಡ ಎಂಬಾತನಿಗೆ ವಿಚಾರಣೆಗೆಗೆ ನೊಟೀಸ್ ಜಾರಿ ಮಾಡಿ, ಆತನನ್ನು ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಆತ ಮುಖ್ಯ ಆರೋಪಿಯಾಗಿದ್ದು, ಈ ಸರ್ಕಾರದಲ್ಲಿ ಹೆಚ್ಚಿನ ತಾಕತ್ತು ಇರುವ ವ್ಯಕ್ತಿ ಎಂದರೆ ಆ ಸಚಿವರೇ ಎಂದು ನಮ್ಮ ತಾಲೂಕಿನವರೆಲ್ಲ ಭಾವಿಸಿದ್ದು, ಅವರು ಈ ವಿಚಾರದಲ್ಲಿ ತಮ್ಮ ತಾಕತ್ತು ಪ್ರದರ್ಶಿಸಲಿ. 

ಬಂಧಿತನಾಗಿದ್ದ ಅಭ್ಯರ್ಥಿ ಬಿಡುಗಡೆ ಮಾಡಿಸಿದವರು ಯಾರು? ಈ ಗ್ರಾಮ ಹಾಗೂ ಅಕ್ಕಪಕ್ಕದ ಗ್ರಾಮದಲ್ಲಿ ಸತೀಶ್ ಎಂಬುವವರಿಗೆ ಹಣ ನೀಡಿರುವ ಬಗ್ಗೆ ಮಾತನಾಡಿದ್ದು, ಈತ ಸಚಿವರೊಬ್ಬರ ಸಹೋದರನಾಗಿದ್ದಾರೆ.

ರಾಜ್ಯದಲ್ಲಿ ಗಂಡಸ್ತನದ ಸವಾಲು ಹಾಕಿದವರು, ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿ ಅಕ್ರಮದಲ್ಲಿ ಈಗ ಕೆಲವರು ಬಂಧನವಾಗಿದ್ದಾರೆ. 17 ಸಾವಿರದ ಲ್ಯಾಪ್ ಟಾಪ್ ಅನ್ನು 28 ಸಾವಿರಕ್ಕೆ ಖರೀದಿ ಮಾಡಿದ್ದ ಶಿಕ್ಷಣ ಸಚಿವರಾಗಿದ್ದಾರೆ.

ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ಆಗದಿದ್ದರೆ ಈ ಪ್ರಕರಣವನ್ನು ಮುಚ್ಚಿ ಹಾಕುತ್ತಾರೆ.

*ವಿ.ಎಸ್ ಉಗ್ರಪ್ಪ:* 

ನ ಭೂತೋ ನ ಭವಿಷ್ಯತಿ ಎನ್ನುವ ಹಾಗೆ, ದೇಶದ ಇತಿಹಾಸದಲ್ಲಿ ಇಂದೆಂದೂ ಕಾಣದಂತೆ ಭ್ರಷ್ಟಾಚಾರ ನಡೆಯುತ್ತಿದೆ. ಪ್ರಧಾನ ಮಂತ್ರಿಗಳು ನಾ ಖಾವೂಂಗಾ, ನಾ ಖಾನೇದೂಂಗಾ ಎಂದು ಹೇಳುತ್ತಾರೆ. ಮೋದಿ ಎಲ್ಲಿದ್ದೀಯಪ್ಪಾ?

ಇಂದು ನಿಮ್ಮದೇ ಪಕ್ಷದ ಯತ್ನಾಳ್ ಅಅವರು ಸ್ಪಷ್ಟವಾಗಿ ಹೇಳಿದ್ದು, ಪಿಎಸ್ಐ ಮಾತ್ರವಲ್ಲ, ಕೆಪಿಎಸ್ ಸಿ ಹಾಗೂ ಇತರೆ ಇಲಾಖೆ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಪ್ರಧಾನಮಂತ್ರಿಗಳು ಈ ವಿಚಾರದಲ್ಲಿ ನಿದ್ರೆ ಮಾಡುತ್ತಿದ್ದಾರೋ? ಎಚ್ಛೆತ್ತು ಕ್ರಮ ಕೈಗೊಳ್ಳಲು ಹೊರಟಿದ್ದಾರೋ?

ಇನ್ನು 40% ಕಮಿಷನ್ ವಿಚಾರವಾಗಿ ಕೆಂಪಣ್ಣ ಅವರು ಪ್ರಧಾನಿಗಳಿಗೆ ಪತ್ರ ಬರೆದು ಒಂದು ವರ್ಷಗಳೇ ಕಳೆದಿದ್ದು, ಸಂತೋಷ್ ಪಾಟೀಲ್ ಕೂಡ  ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡರೂ ಪ್ರಧಾನಿಗಳು ಎಚ್ಛೆತ್ತುಕೊಂಡಿಲ್ಲ. ಅಲ್ಲಿಗೆ ಪ್ರಧಾನಮಂತ್ರಿಗಳ ಕಚೇರಿಯಿಂದಲೂ ಭ್ರಷ್ಟಾಚಾರಕ್ಕೆ ಪಾಲನೆ ಪೋಷಣೆ ಆಗುತ್ತಿರುವ ಸಂಶಯವಿದೆ. 

ಯತ್ನಾಳ್ ಅವರು ಇನ್ನೂ ಒಂದು ಹೆಜ್ಜೆ  ಮುಂದೆ ಹೋಗಿ, ಕೆಪಿಎಸ್ ಸಿ ಸದಸ್ಯರಾಗಲು, 5, 10 ಕೋಟಿ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು, ಮಾಜಿ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪನವರನ್ನು ಕೇಳಿ ಎಂದಿದ್ದಾರೆ. 

ನಾನು ಯತ್ನಾಳ್ ಅವರಿಗೆ ಕೇಳಲು ಬಯಸುತ್ತೇನೆ. ಕೇವಲ ಪುಂಗಿ ಊದುವುದರಲ್ಲಿ ಅರ್ಥವಿಲ್ಲ. ಈ ರೀತಿ ಪುಂಗಿ ಊದುವವರು ರಾಜ್ಯದಲ್ಲಿ ಇಬ್ಬರಿದ್ದಾರೆ. ಒಂದು ಯತ್ನಾಳ್ ಹಾಗೂ ಮತ್ತೊಬ್ಬರು ಸಿ.ಟಿ. ರವಿ.

ನೀವು ಮಾಜಿ ಕೇಂದ್ರದ ಮಾಜಿ ಸಚಿವರು. ರಾಜ್ಯದಲ್ಲಿ ಮಂತ್ರಿ ಹಾಗೂ ಮುಖ್ಯಮಂತ್ರಿಯಾಗುವ ಆಸೆ ಹೊಂದಿರುವವರು. ಸಂವಿಧಾನ ಹಾಗೂ ಕಾನೂನು ಎತ್ತಿ ಹಿಡಿಯುವ ಪ್ರಮಾಣ ಮಾಡಿರುವವರು. ಐಪಿಸಿ ಸೆಕ್ಷನ್ 202 ಪ್ರಕಾರ ನಿಮಗೆ ಭ್ರಷ್ಟಾಚಾರ ಆಗಿದೆ ಎಂದು ಮಾಹಿತಿ ಇದ್ದರೆ  ಪೊಲೀಸರಿಗೆ ಯಾಕೆ ಮಾಹಿತಿ ನೀಡಿಲ್ಲ, ದೂರು ನೀಡಿಲ್ಲ? 

ಪೊಲೀಸ್ ಇಲಾಖೆ ಬದುಕಿದ್ದರೆ ಈ ವಿಚಾರವಾಗಿ ದೂರು ಆಧಾರದ ಮೇಲೆ ಅಥಾವ ಸ್ನಯಂಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಬೇಕು. ಯತ್ನಾಳ್ ಅವಭ್ರಷ್ಟಾಚಾರದ ಮಾಹಿತಿ ನೀಡದೇ ಅಪರಾಧಿಯಾಗಿದ್ದಾರೆ. ಜತೆಗೆ ಹಣ್ ಕೊಟ್ಟವರು, ತೆಗೆದುಕೊಂಡವರು ಇಬ್ಬರೂ ಅಪರಾಧಿಗಳೆ. ಹಾಗಾಗಿ ಯತ್ನಾಳ್ ಅವರ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆ ಮಾಡಿ, ಯಾರು 10 ಕೋಟಿ ಕೊಟ್ಟು ಕೆಪಿಎಸ್ ಸಿ ಸದಸ್ಯರಾಗಿದ್ದಾರೆ ಅವರ ವಿರುದ್ಧವೂ ಭ್ರಷ್ಟಾಚಾರ ನಿಗ್ರಹ ಪ್ರಕರಣ ದಾಖಲಿಸಬೇಕು.

ಯತ್ನಾಳ್ ಅವರಿಗೆ ಬದ್ಧತೆ ಇದ್ದರೆ ಎಲ್ಲ ಮಾಹಿತಿ ಜನತೆ ಮುಂದೆ ಇಡಲಿ, ಹಿಟ್ ಅಂಡ್ ರನ್ ಅವರಿಗೆ ಶೋಭೆ ತರುವುದಿಲ್ಲ. ಮೋದಿ ಅವರು ಕೂಡ ಈ ವಿಚಾರವಾಗಿ ಗಮನಹರಿಸಬೇಕು. 

ರಾಜ್ಯವ್ಯಾಪಿ ಆಗುತ್ತಿರುವ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ದೈಹಿಕ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಪ್ರಕರಣ ದಾಖಲಾಗಿದ್ದು, ಇದರಲ್ಲಿ ಮಧ್ಯವರಿತಿಗಳು ಹಾಗೂ ಅಭ್ಯರ್ಥಿಗಳು ಬಂಧಿತರಾಗಿದ್ದು, ಇವರನ್ನು ಪಾಲನೆ ಪೋಷಣೆ ಮಾಡಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ನೇಮಕಾತಿ ಸಮಿತಿ ಅಧಿಕಾರಿಗಳ ಮೇಲೆ ಕ್ರಮ ಆಗಿಲ್ಲ, ಪರೀಕ್ಷಾ ಕೇಂದ್ರ ಶಿಫಾರಸ್ಸು ಮಾಡಿದ ಅಧಿಕಾರಿಗಳ ಮೇಲೂ ಕ್ರಮವಿಲ್ಲ. ಆ ಅಧಿಕಾರಿಗಳ ರಕ್ಷಣೆ ಮಾಡುತ್ತಿರುವವರಿಗೂ ಕ್ರಮವಿಲ್ಲ.

ನಿನ್ನೆಯಿಂದ ಮಾಧ್ಯಮದಲ್ಲಿ ಮಾಗಡಿ ತಾಲೂಕಿನಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿ ದರ್ಶನ್ ಗೌಡ ಅವರಿಂದ 80 ಲಕ್ಷಕ್ಕೂ ಹೆಚ್ಚಿನ ಹಣ ಪಡೆಯಲಾಗಿದ್ದು, ಪ್ರಭಾವಿ ಸಚಿವರ ಸಹೋದರನ ಮೇಲೆ ಆರೋಪವಿದ್ದು, ಪ್ರಭಾವಿ ಸಚಿವರು ಕರೆ ಮಾಡಿ ಆ ಅಭ್ಯರ್ಥಿಯನ್ನು ವಿಚಾರಣೆಯಿಂದ ಬಿಡುಗಡೆಗೊಳಿಸಿದ್ದಾರೆ.

ರಾಮನಗರ ಜಿಲ್ಲೆ ಉಸ್ತುವಾರಿ ಸಚಿವರು ಅಶ್ವತ್ಥ ನಾರಾಯಣ್ ಅವರು. ಈ ವಿಚಾರದಲ್ಲಿ ಅವರು ಮೌನಿ ಬಾಬಾ ಆಗಿರುವುದೇಕೆ? ಇನ್ನು ಉನ್ನತ ಶಿಕ್ಷಣ ಇಲಾಖೆಯಲ್ಲಿ ಸಹಾಯಕ ಪ್ರಾಧ್ಯಪಕ ಹುದ್ದೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ನಾಗರಾಜ್ ಹಾಗೂ ಸೌಮ್ಯ ಅವರ ಬಂಧನವಾಗಿದ್ದು, ಆ ಪ್ರಕರಣದಲ್ಲೂ ಮೌನಿ ಬಾಬಾ ಆಗಿದ್ದೀರಿ. ನಿಮ್ಮ ವರ್ತನೆ ನೋಡಿದರೆ ನಿಮ್ಮ ಕೈವಾಡ ಇರುವ ಸಂಶಯವಾಗುತ್ತಿದೆ. ಇಲ್ಲದಿದ್ದರೆ, ಈ ವಿಚಾರದ ಬಗ್ಗೆ ಮಾತನಾಡಬೇಕಿತ್ತು.

ನೀವು ನನ್ನ ಇಲಾಖೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ ಎಂದು ಹೇಳಿದರೆ ಬಂಧನ ಆಗಿದ್ದು ಯಾಕೆ ಎಂಬ ಪ್ರಶ್ನೆ ಬರುತ್ತದೆ. ನಿಮ್ಮ ಜಿಲ್ಲೆ ಮಾಗಡಿ ತಾಲೂಕಿನಲ್ಲಿ ಮೂವರು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ನಿಮ್ಮ ಸಹೋದರ ಭಾಗಿಯಾಗಿರುವ ವಿಚಾರವಾಗಿ ಜನ ಮಾತನಾಡುತ್ತಿರುವಾಗ ನೀವು ಮೌನವಾಗಿದ್ದು, ಮೌನಂ ಸರ್ವ ಸಮ್ಮತಂ ಎಂಬಂತಾಗಿದೆ. 

ಪ್ರಕರಣ ನಡೆಯುತ್ತಿರುವ ಸಮಯದಲ್ಲಿ ಈ ಪ್ರಕರಣ ಅಶ್ವತ್ ನಾರಾಯಣ ಹಾಗೂ ಅವರ ಸಹೋದರನ ವಿರುದ್ಧ ಬೆರಳು ತೋರುತ್ತಿದೆ. ಅವರು ಇದುವರೆಗೂ ಸಾಕಷ್ಟು ಬಾರಿ ಗಂಡಸ್ಥನದ ಬಗ್ಗೆ ಮಾತನಾಡಿದ್ದು, ನಿಮಗೆ ಗಂಡಸ್ಥನ ತಾಕತ್ತು ಎಂಬುದು ಇದ್ದರೆ, ಈ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ನಿಮಗೆ ಹಾಗೂ ಗೃಹ ಸಚಿವರಿಗೆ ನಾತಿಕತೆ ಇದ್ದರೆ ಕೂಡಲೇ ನಿಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು.

1970ರ ಸಮಾರಿನಲ್ಲಿ ಎಂ.ವಿ ರಾಮರಾಯರು ಎಂಬ ಗೃಹಸಚಿವರಿದ್ದರು, ತಮ್ಮ ಇಳಾಖೆಯಲ್ಲಿ ಪಲೀಸ್ ಠಾಣೆಯಲ್ಲಿ ಮಹಿಳೆ ಮೇಲೆ ಕೈಮಾಡಿದರು ಎಂಬ ಕಾರಣಕ್ಕೆ ಅವರು ಗೃಹ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೈಲ್ವೇ ಅಪಘಾತ ಆದಾಗ ತಮ್ಮ ಪಾತ್ರ ಇಲ್ಲದಿದ್ದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು.

ರಾಜ್ಯದ ಯುವಕರ ಭವಿಷ್ಯ ಸಮಾಧಿ ಮಾಡುವ ಯತ್ನ ನಡೆಯುತ್ತಿದ್ದು, ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಿದೆ. ಹೀಗಾಗಿ ಸಚಿವರುಗಳು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳು ಅವರನ್ನು ವಜಾಗೊಳಿಸಬೇಕು. ಮುಖ್ಯಮಂತ್ರಿಗಳು ಮಾಡದಿದ್ದರೆ ಪ್ರಧಾನಿಗಳು ಈ ವಿಚಾರವಾಗಿ ಕ್ರಮ ಕೈಗೊಳ್ಳಬೇಕು. ಆಗ ಅವರ ಮಾತಿಗೂ ಸಾರ್ಥಕತೆ ಬರುತ್ತದೆ. ಇಲ್ಲವಾದರೆ ಈ ರಾಜ್ಯದ ಯುವಕರು, ಉದ್ಯೋಗಾಕಾಂಕ್ಷಿಗಳು ಸರ್ಕಾರದ ವಿರುದ್ಧ ಸಿಡಿದೇಳುವ ದಿನಗಳು ದೂರ ಇಲ್ಲ ಎಂದು ಹೇಳಲು ಬಯಸುತ್ತೇನೆ. 

ಈ ಎಲ್ಲ ವಿಚಾರ ಸುತ್ತುತ್ತಿರುವುದು ರಾಮನಗರ ಜಿಲ್ಲೆಯಲ್ಲಿ. ಪ್ರಭಾವ ಸಚಿವರು ಎಂದು ಮಾಧ್ಯಮಗಳಲ್ಲಿ ಪ್ರಕಟಿಸುತ್ತಿದ್ದರೂ ರಾಮನಗರ ಜಿಲ್ಲಾ ಮಂತ್ರಿಗಳು ಬಾಯಿ ಬಿಡುತ್ತಿಲ್ಲ ಯಾಕೆ? 

ನೊಟೀಸ್ ಕೊಟ್ಟಿರುವ ದರ್ಶನ್ ಗೌಡನನ್ನು ಇದುವರೆಗೂ ಬಂಧಿಸಿಲ್ಲ ಯಾಕೆ? ಈ ಹಗರಣದಲ್ಲಿ ಅಕ್ರಮ ಮಾಡಿರುವ ಕಾರಣಕ್ಕೆ ನೊಟೀಸ್ ನೀಡಲಾಗಿದೆ ಅಲ್ಲವೇ? ಆದರೂ ಅವರ ಬಂಧನ ಯಾಕಿಲ್ಲ? ಆತ ಬಂಧನವಾದರೆ ಯಾರಿಗೆ 80 ಲಕ್ಷ ಹಣ ನೀಡಲಾಗಿದೆ ಎಂಬುದು ಬಹರಂಗವಾಗಲಿದೆ ಎಂಬುದು ಬಹಿರಂಗವಾಗುತ್ತದೆ ಎಂದು ಆತನನ್ನು ಬಂಧಿಸದೇ, ವಿಚಾರಣೆ ನಡೆಸದಂತೆ ಸಂಚು ರೂಪಿಸಲಾಗಿದೆ. 

ಹಾಗಾಗಿ ಪ್ರಕರಣದ ತನಿಖೆಯನ್ನು ಹೈಕೋರ್ಟ್ ನ್ಯಾಯಾಧೀಶರಿಂದ ಅಥವಾ ಅವರ ಮೇಲ್ವಿಚಾರಣೆಯಲ್ಲಿ ನಡೆಸಬೇಕು. ಆಗ ನೇಮಕಾತಿ ಅಕ್ರಮ, ಕಮಿಷನ್ ಅಕ್ರಮಗಳು ಹೊರಗೆ ಬರಲಿದೆ. ಹೀಗಾಗಿ ಈ ತನಿಖೆ ಮಾಡಬೇಕು ಎಂದು ಆಗ್ರಹಿಸುತ್ತೇವೆ.

ಸಿದ್ದರಾಮಯ್ಯ ಅವರ ಮೇಲೆ ಟೀಕೆ ಮಾಡಿರುವ ಸಿ.ಟಿ ರವಿ ಅವರು ಕೆಂಪಣ್ಣ ಆಯೋಗದ ವರದಿ ಬಂದರೆ ಅವರ ಬಣ್ಣ ಹೊರಗೆ ಬರುತ್ತದೆ ಎಂದಿದ್ದಾರೆ. ನಾನು ಅವರಿಗೆ ಸವಾಲು ಹಾಕುತ್ತಿದ್ದೇನೆ, ನಿಮಗೆ ಧಮ್ಮು, ತಾಕತ್ತು ಎನ್ನುವುದು ಇದ್ದರೆ, ಸಿದ್ದರಾಮಯ್ಯ ಅವರ ವಿರುದ್ಧ ಯಾವುದಾದರೂ ಸಾಕ್ಷ್ಯಾಧಾರಗಳಿದ್ದರೆ ಅವರ ವಿರುದ್ಧ ಕೇಸ್ ದಾಖಲಿಸಿ ಬಂಧಿಸಿ. ಕೆಂಪಣ್ಣ ಆಯೋಗ ವರದಿ ಏನಿದೆ ಎಂಬ ವರದಿ ಬಗ್ಗೆ ನಿಮಗೆ ಅರಿವಿದೆಯಾ? ಸಿದ್ದರಾಮಯ್ಯ ಅವರ ಅವಧಿಯಲ್ಲಿ ಯಾವುದೇ ಡಿನೋಟಿಫಿಕೇಶನ್ ಆಗಿಲ್ಲ ಎಂದು ಕೆಂಪಣ್ಣ ಅವರ ವರದಿಯಲ್ಲಿದೆ.

ಇಷ್ಟಾದರೂ ಸಿದ್ದರಾಮಯ್ಯ ಅವರ ಮೇಲೆ ಕೆಸರೆರೆಚುವ ಪ್ರಯತ್ನ ಸಿ.ಟಿ ರವಿ ಅವರು ಮಾಡುತ್ತಿದ್ದಾರೆ. ಅವರ ವಿರುದ್ಧ ಕೇಸ್ ದಾಖಲಿಸಿ ಇಲ್ಲದಿದ್ದರೆ ನಮ್ಮ ಶಾಸಕಾಂಗ ಪಕ್ಷದ ನಾಯಕರ ವಿರುದ್ಧ ಮಾತನಾಡಿರುವುದಕ್ಕೆ ಬೇಷರತ್ ಕ್ಷಮೆ ಕೋರಬೇಕು.

*ಚಂದ್ರಮೌಳಿ*

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಓರೋಪಿಗಳನ್ನು ವಿಚಾರಣೆ ಮಾಡಿದರೆ, ಮತ್ತೆ ಕೆಲವರನ್ನು ಬಿಟ್ಟು ಕಳುಹಿಸಲಾಗುತ್ತಿದೆ. ಇಂತಹ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಇದು ಯಾವುದೋ ಸಣ್ಮ ಪರೀಕ್ಷೆಯಲ್ಲ. ಇದರಲ್ಲಿ ದೈಹಿಕ ಹಾಗೂ ಲಿಖಿತ ಪರೀಕ್ಷೆಗಳು ಅಡಗಿವೆ. ದೈಹಿಕ ಪರೀಕ್ಷೆಯಲ್ಲೇ ಅಕ್ರಮ ನಡೆದಿದೆ ಎಂದಾದರೆ, ಲಿಖಿತ ಮರುಪರೀಕಷೆ ನಡೆಸುವುದರಲ್ಲಿ ಯಾವ ಅರ್ಥವಿದೆ? 545 ಭ್ರಷ್ಟರನ್ನು ಪೊಲೀಸ್ ಠಾಣೆಯಲ್ಲಿ ಕೂರಿಸಿದರೆ ಭವಿಷ್ಯದಲ್ಲಿ ಎಂತಹ ಸ್ಥಿತಿ ನಿರ್ಮಾಣವಾಗಬಹುದು? 

ರಮೇಶ್ ಜಾರಕಿಹೊಳಿ ಅವರ ಪ್ರಕರಣ, ಈಶ್ವರಪ್ಪ ಅವರ ಪ್ರಕರಣ ಏನಾಗಿದೆ ಎಂದು ಎಲ್ಲರಿಗೂ ಗೊತ್ತಾಗಿದೆ. ಈಶ್ವರಪ್ಪನವರು ಸಾರ್ವಜನಿಕ ಸಭೆಗಳಲ್ಲಿ ಇನ್ನು 15 ದಿನಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಲಿದ್ದು, ನಾನು ಮತ್ತೆ ಮಂತ್ರಿಯಾಗುತ್ತೇನೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಯಾಗಬೇಕು.

ಗೌರಿ ಲಂಕೇಶ್, ಕಲ್ಬುರ್ಗಿ ಅವರ ಪತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಎಸ್ ಐಟಿ ತಂಡ ರಚನೆಗೆ ಆದೇಶ ನೀಡಿ, ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿತ್ತು. ಆ ರೀತಿ ಈ ಪ್ರಕರಣಗಳಲ್ಲಿ ಮಾಡದಿದ್ದರೆ ಮತ್ತೊಂದು ಬಿ ರಿಪೋರ್ಟ್ ಸಲ್ಲಿಕೆಯಾಗಿ ಭ್ರಷ್ಟರು ಪಿಎಸ್ಐಗಳಾಗಿ ಭ್ರಷ್ಟಾಚಾರ ತಾಂಡವವಾಡಲಿದೆ.
[02/05, 4:03 PM] Ravi Gowda. Kpcc. official: ರಾಮ್ ಗೋಪಾಲ್ ವರ್ಮಾ ನಿರ್ದೇಶನದ, ಉಪೇಂದ್ರ ಅಭಿನಯದ ರಾಮ್ ಐ Am R ಚಲನಚಿತ್ರ ನಿರ್ಮಾಪಕ ರಾಜ್ ಯಜಮಾನ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಸೋಮವಾರ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.
[02/05, 4:03 PM] Ravi Gowda. Kpcc. official: ಸಚಿವ ಅಶ್ವತ್ ನಾರಾಯಣ್ ಅವರ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಸೋಮವಾರ ನೀಡಿದ ಪ್ರತಿಕ್ರಿಯೆ...
[02/05, 5:01 PM] Ravi Gowda. Kpcc. official: *ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡಿ ನೋಡಿಕೊಂಡಿದ್ದೇಕೆ? ಸಚಿವ ಅಶ್ವತ್ಥ್ ನಾರಾಯಣ್ ಗೆ ಡಿ.ಕೆ. ಶಿವಕುಮಾರ್ ತಿರುಗೇಟು*

*ಬೆಂಗಳೂರು:*

‘ಮಾಧ್ಯಮಗಳು ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಪ್ರಭಾವಿ ಸಚಿವರ ಪಾತ್ರ ಇದೆ ಎಂದು ಬಿಚ್ಚಿಟ್ಟಿದ್ದಾರೆ. ನಾನು ಅದರ ಬಗ್ಗೆ ಮಾತನಾಡಿದ್ದು, ಕುಂಬಳಕಾಯಿ ಕಳ್ಳ ಅಂದ್ರೆ ಅಶ್ವಥ್ ನಾರಾಯಣ್ ಹೆಗಲು ಮುಟ್ಟಿ ನೋಡಿಕೊಂಡಿದ್ದೇಕೆ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಈ ಪ್ರಕರಣದ ವಿಚಾರವಾಗಿ ನನ್ನ ವಿರುದ್ಧ ದಾಖಲೆ ಇದ್ದರೆ ಶಿವಕುಮಾರ್ ಅವರು ಪ್ರಕಟಿಸಲಿ ಎಂದು ಸಚಿವ ಅಶ್ವಥ್ ನಾರಾಯಣ್ ಅವರು ನೀಡಿರುವ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ಅವರು ದೊಡ್ಡವರು, ದೊಡ್ಡವರಾಗಬೇಕು ಎಂದುಕೊಂಡಿರುವವರು. ಅವರ ವಿಚಾರವನ್ನು ನಾನು ಬಿಚ್ಚಿಡಲಿಲ್ಲ. ಮಾಧ್ಯಮಗಳು ಮಾಗಡಿಯ ಮೂವರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಹೇಳಿದಾಗ ಸಂತೋಷವಾಗಿತ್ತು. ಆನಂತರ ನಮ್ಮ ಪಕ್ಷದಲ್ಲಿದ್ದ ಕಾರ್ಯಕರ್ತರ ಕುಟುಂಬದವರು ಆಗಿದ್ದಾರೆ ಎಂದು ಹೇಳಿದ್ದು ಕೇಳಿ ಖುಷಿ ಆಯ್ತು. ಪರಿಸ್ಥಿತಿ ಹೀಗಿರುವಾಗ ಅನುಮಾನಗಳೆಲ್ಲವೂ ತಮ್ಮ ವಿರುದ್ಧವೇ ತಿರುಗುತ್ತಿದೆ ಎಂದು ಸಚಿವರು ಯಾಕೆ ಭಾವಿಸುತ್ತಿದ್ದಾರೆ?’ ಎಂದು ಪ್ರಶ್ನಿಸಿದರು.

ಅಧಿಕಾರದ ದರ್ಪ ಹಾಗೂ ಭ್ರಷ್ಟಾಚಾರ ಡಿ.ಕೆ. ಶಿವಕುಮಾರ್ ಅವರ ಕುಟುಂಬದಲ್ಲಿದೆ ಎಂಬ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಹೆಣದಲ್ಲಿ ಹಣ, ಸಹಾಯಕ ಪ್ರಾಧ್ಯಾಪಕ ಹುದ್ದೆ ಅಕ್ರಮ ಇವುಗಳನ್ನೆಲ್ಲಾ ನಾನು ಮಾಡಿದ್ದೀನಾ? ಈಗ ಸಾಲು ಸಾಲು ಹಗರಣಗಳು ಬೆಳಕಿಗೆ ಬಂದವಲ್ಲಾ? ಅದನ್ನು ನಾವು ಮಾಡಿದ್ದೇವಾ? ನಮ್ಮ ಸರ್ಕಾರದಲ್ಲಿ ಈ ರೀತಿ ಆಗಿದೆಯಾ? ನಾವು ಕೇಳುತ್ತಿರುವುದು ಪಿಎಸ್ಐ ಅಕ್ರಮದ ಬಗ್ಗೆ ತನಿಖೆ ಮಾಡಿ, ನಂತರ ತೀರ್ಮಾನಿಸಿ ಎಂದು. ದರ್ಶನ್ ಗೌಡಗೆ ನೊಟೀಸ್ ಜಾರಿ ಮಾಡಿದ್ದೀರಿ. ಅವನ ವಿಚಾರಣೆ ಮಾಡಿದ ವರದಿ ಬಂದಿಲ್ಲ. ಆತ ಏಕಾಏಕಿ ಬಿಡುಗಡೆಯಾದ ಎಂದರೆ ಆತ ನಿರ್ದೋಷಿ ಎಂದು ಸಾಬೀತಾಯ್ತಾ? ಅವನ ವಿರುದ್ಧ ಯಾವ ರೀತಿ ತನಿಖೆ ನಡೆದಿದೆ? ಆತ ವಿಚಾರಣೆ ಮುಕ್ತನಾಗಲು ಯಾರು ಕಾರಣ? ಇದರ ಹಿನ್ನೆಲೆ ಏನು?ಯಾರು? ಮಾಧ್ಯಮಗಳು ನಿಮಗೆ ಬರುವ ಮಾಹಿತಿ ಎಲ್ಲಿಂದ ಬಂದಿದೆ ಎಂದು ಮೂಲದ ಬಗ್ಗೆ ಹೇಳುತ್ತೀರಾ? ನಾವು ನಮಗೆ ಯಾರು ಕರೆ ಮಾಡಿ ಹೇಳಿದ್ದಾರೆ ಎಂದು ಹೇಳಲು ಸಾಧ್ಯವೇ? ಸಮಯ ಬಂದಾಗ ಅದನ್ನೂ ಮಾಡುತ್ತೇವೆ’ ಎಂದರು.

ರಾಮನಗರಕ್ಕೂ ಶಿವಕುಮಾರ್ ಅವರಿಗೂ ಸಂಬಂಧವಿಲ್ಲ, ಅಮಿತ್ ಶಾ ಬರುತ್ತಾರೆ ಎಂಬ ಕಾರಣಕ್ಕೆ ಈ ರೀತಿ ಪೂರ್ವನಿಯೋಜಿತ ಷಡ್ಯಂತ್ರ ಮಾಡಲಾಗಿದೆ ಎಂಬ ಸುಧಾಕರ್ ಅವರ ಆರೋಪಕ್ಕೆ ಕುರಿತು ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, ‘ನಾನು ಹಳ್ಳಿಯವನು. ದೊಡ್ಡಾಲಹಳ್ಳಿ ಕೆಂಪೇಗೌಡನ ಮಗ ಶಿವಕುಮಾರ್. ಹಳ್ಳಿಯಿಂದ ಇಲ್ಲಿಗೆ ಬಂದು ರಾಜಕಾರಣ ಮಾಡುತ್ತಿದ್ದೇನೆ. ಅವರು ರಾಮನಗರ ಸ್ವಚ್ಛ ಮಾಡಲು ಬಂದಿದ್ದಾರೆ, ಮಾಡಲಿ ಸಂತೋಷ’ ಎಂದರು.

ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಭಯಪಡುತ್ತಿದ್ದಾರೆ, ಇನ್ನು ಮುಖ್ಯಮಂತ್ರಿ ಆದರೆ ಇನ್ನೆಷ್ಟು ಭಯ ಪಡಬೇಡ ಎಂಬ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾನು ಗಡಗಡನೆ ನಡುಗುತ್ತಿದ್ದೇನೆ. ಈಗಲೂ ಭಯವಾಗುತ್ತಿದೆ’ ಎಂದು ಛೇಡಿಸಿದರು.

ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಪ್ರತಿನಿತ್ಯ ಬಂಡವಾಳ ಬಿಚ್ಚಿಡುತ್ತೇನೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಮೊದಲು ಅವರು ವಿವಿಧ ನೇಮಕಾತಿ ಅಕ್ರಮದಲ್ಲಿ ಯುವಕರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲಿ, ನಂತರ ಉಳಿದ ವಿಚಾರ ಮಾತನಾಡೋಣ’ ಎಂದರು.

Post a Comment

Previous Post Next Post