ಶಿವಮೊಗ್ಗದಲ್ಲಿ kpcc ಅಧ್ಯಕ್ಷರು ಇಂದು

[10/05, 3:40 PM] Ravi Gowda. Kpcc. official: *ಶಿವಮೊಗ್ಗದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ ಮುಖ್ಯಾಂಶಗಳು:*

'ಬಿಜೆಪಿಯವರು ನನ್ನನ್ನು ತಿಹಾರ್ ಜೈಲಿಗಾದರೂ ಕಳುಹಿಸಲಿ, ಪರಪ್ಪನ ಅಗ್ರಹಾರ ಜೈಲಿಗಾದರೂ ಕಳುಹಿಸಲಿ, ಎಲ್ಲಿಗಾದರೂ ಕಳುಹಿಸಲಿ. 

ಬಿಜೆಪಿ ಸರ್ಕಾರ ಎಲ್ಲಾ ನೇಮಕಾತಿಗಳಲ್ಲಿ ಹಗರಣ ಮಾಡುವ ಮೂಲಕ ರಾಜ್ಯಕ್ಕೆ ಅನ್ಯಾಯ, ಯುವಕರಿಗೆ  ದ್ರೋಹ ಬಗೆದಿದೆ. ಸಚಿವ ಅಶ್ವತ್ಥ ನಾರಾಯಣ್ ಅವರು ನಕಲಿ ಸರ್ಟಿಫಿಕೇಟ್ ಕೊಟ್ಟಿರುವ ವಿಚಾರವಾಗಿ ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಇವರ ಎಲ್ಲ ಅಕ್ರಮಗಳನ್ನು ಸರ್ಕಾರ ಬಹಳ ಗೌಪ್ಯವಾಗಿ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ.

ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರು ಯಾವುದೇ ತಪ್ಪು ಮಾಡಿಲ್ಲ, ಅವರು ನಿರ್ದೋಷಿಯೆಂದು ಯಡಿಯೂರಪ್ಪನವರು ಹಾಗೂ ಮುಖ್ಯಮಂತ್ರಿಗಳು ಈಗಾಗಲೇ ಪ್ರಮಾಣಪತ್ರ ನೀಡಿದ್ದಾರೆ. ಸಣ್ಣಪುಟ್ಟ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ವಿರುದ್ಧ ಕ್ರಮ ಕೈಗೊಂಡು ಸಚಿವರ ಎಲ್ಲ ಅಕ್ರಮಗಳನ್ನು ಮುಚ್ಚಿ ಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ.

ಸಚಿವರು ಅಧಿಕಾರಿಗಳಿಗೆ ಫೋನ್ ಕರೆ ಮಾಡಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿಗಳ ತನಿಖೆ ನಡೆಸದಂತೆ ಒತ್ತಡ ಹಾಕಿರುವ ಸಂಗತಿಗಳು ಬಹಿರಂಗವಾಗಿವೆ. ಅಕ್ರಮದಲ್ಲಿ ಭಾಗಿಯಾಗಿರುವ ಕೆಲವರನ್ನು ಬಂಧಿಸಿ ವಿಚಾರಣೆ ಮಾಡಿದರೆ, ಮತ್ತೆ ಕೆಲವರನ್ನು ವಿಚಾರಣೆ ಮಾಡದೆ ಬಿಡುಗಡೆ ಮಾಡಲಾಗಿದೆ. ಇನ್ನು ಮಲ್ಲೇಶ್ವರಂ ಕ್ಷೇತ್ರದಲ್ಲಿ ಒಬ್ಬರಿಗೆ ನೆರವು ನೀಡಲು ಸರಕಾರಿ ಆದೇಶವನ್ನೇ ಬದಲಿಸಲಾಗಿದೆ.'

ಕಾಂಗ್ರೆಸ್ ಪಾದಯಾತ್ರೆ, ಪ್ರತಿಭಟನೆಗಳು ಕೇವಲ ಚುನಾವಣೆ ಗಿಮಿಕ್ ಎಂದು ಗೃಹ ಸಚಿವ ಅರಗ ಜ್ಞಾನೆಂದ್ರ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, 'ನಮ್ಮ ಪಾದಯಾತ್ರೆ ಗಿಮಿಕ್ ಎನ್ನುವುದಾದರೆ, ಲಾಲಕೃಷ್ಣ ಅಡ್ವಾಣಿ ಅವರು ಮಾಡಿದ ರಥಯಾತ್ರೆಯನ್ನು ಏನೆಂದು ಕರೆಯಬೇಕು? ಯಡಿಯೂರಪ್ಪನವರ ಯಾತ್ರೆಗಳನ್ನು ಏನೆಂದು ಕರೆಯಬೇಕು?' ಎಂದು ತಿರುಗೇಟು ನೀಡಿದರು.

ಶಿವಮೊಗ್ಗ ಜಿಲ್ಲೆಗೆ ವಿಶೇಷ ಭೇಟಿ ನೀಡಲಾಗಿದೆಯೇ ಎಂಬ ಪ್ರಶ್ನೆಗೆ, 'ಖಂಡಿತವಾಗಿಯೂ ಇದು ವಿಶೇಷ ಭೇಟಿ, ರಾಜ್ಯದ ಜನತೆಯ ಭಾವನೆ, ಶಿವಮೊಗ್ಗ ಜನರ ನೋವನ್ನು ಆಲಿಸಿ, ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುವುದು. ಮಲೆನಾಡಿನ ಈ ಭಾಗದ ಜನರು ಸಾಕಷ್ಟು ವಿದ್ಯಾವಂತರು, ಬುದ್ಧಿವಂತರಾಗಿದ್ದು, ನಾವು ಅವರ ಜೊತೆಗಿದ್ದು ರಕ್ಷಣೆ ನೀಡುತ್ತೇವೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇವೆ.

ಬಿಜೆಪಿಯವರ ಅಧಿಕಾರದಲ್ಲಿ ಏನಾಗಿದೆ ಎಂದು ಜನ ನೋಡಿದ್ದಾರೆ. ಶಿವಮೊಗ್ಗದಲ್ಲಿ ಸೆಕ್ಷನ್ 144 ಯಾಕೆ ಜಾರಿಗೆ ಬಂದಿತು? ಶಿವಮೊಗ್ಗದಲ್ಲಿ ಮತ್ತೊಂದು ಕೋಮು ಗಲಭೆ ಸೃಷ್ಟಿಗೆ ನಡೆಸಲಾಗಿದ್ದ ಪ್ರಯತ್ನವನ್ನು ಪೊಲೀಸ್ ಅಧಿಕಾರಿಗಳು ತಡೆದಿದ್ದು, ಎಲ್ಲವೂ ಬಹಿರಂಗವಾಗಿದೆ. ರಾಜ್ಯ ಸರ್ಕಾರ ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿ ಮಾಡಿದ ನಂತರ ಇಲ್ಲಿ ಆಗಿದ್ದು ಏನು? ಈಗ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಮಾಡಲಿ. ಯಡಿಯೂರಪ್ಪ ಹಾಗೂ ಈಶ್ವರಪ್ಪ ನವರ ನೇತೃತ್ವದಲ್ಲಿ ಈ ಸಮಾವೇಶ ನಡೆಯಲಿ. ಆ ಮೂಲಕ ಶಿವಮೊಗ್ಗದಲ್ಲಿ ಮುಚ್ಚಲಾಗುತ್ತಿರುವ ಕೈಗಾರಿಕೆಗಳು ಹಾಗೂ ಹೊಸ ಕೈಗಾರಿಕೆಗಳು ಆರಂಭವಾಗುವಂತೆ ಮಾಡಲಿ' ಎಂದು ಸವಾಲೆಸೆದರು.

ಆಜಾನ್ ವಿಚಾರದಲ್ಲಿ ಉತ್ತರಪ್ರದೇಶ ಮಾದರಿಯನ್ನು ರಾಜ್ಯದಲ್ಲಿ ಜಾರಿಗೆ ತರುತ್ತೇವೆ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಧರ್ಮದ ಆಚರಣೆ ವಿಚಾರವಾಗಿ ಸುಪ್ರೀಂಕೋರ್ಟ್ ಈಗಾಗಲೇ ತೀರ್ಮಾನ ಕೈಗೊಂಡಿದ್ದು, ಅದಕ್ಕೆ ಕಾನೂನು ಇದೆ. ಮೊದಲ ಕಾನೂನು ಕಾಪಾಡಿಕೊಂಡು, ಈ ಕಾನೂನಿನ ಉಲ್ಲಂಘನೆ ಮಾಡುತ್ತಿರುವ ಬಿಜೆಪಿ ಪಕ್ಷದ ಅಂಗ ಸಂಸ್ಥೆಗಳು ವಿರುದ್ಧ ಕಠಿಣ ಕ್ರಮ ಕೈಗೊಂಡು ಅವರನ್ನು ಒಳಗೆ ಹಾಕಲಿ' ಎಂದು ತಿಳಿಸಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟು ಕ್ಷೇತ್ರಗಳನ್ನು ಗೆಲ್ಲಲಿದೆ ಎಂಬ ಪ್ರಶ್ನೆಗೆ, 'ಇಲ್ಲಿ ಏಳಕ್ಕೆ ಏಳು ಕ್ಷೇತ್ರಗಳನ್ನೂ ಗೆಲ್ಲುತ್ತೇವೆ' ಎಂದು ತಿಳಿಸಿದರು.
[10/05, 4:33 PM] Ravi Gowda. Kpcc. official: ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯ ಹಾಗೂ ಅಕ್ರಮಗಳ ವಿರುದ್ಧ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾದ "ಜನಧ್ವನಿ ಪ್ರತಿಭಟನಾ ಮೆರವಣಿಗೆ" ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ಧ್ರುವನಾರಾಯಣ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್, ಶಾಸಕ ಬಿ.ಕೆ ಸಂಗಮೇಶ್, ಮಾಜಿ ಶಾಸಕ ಮಧು ಬಂಗಾರಪ್ಪ, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಮತ್ತಿತರ ಮುಖಂಡರು ಉಪ್ಥಿತರಿದ್ದರು.
[10/05, 4:49 PM] Ravi Gowda. Kpcc. official: *ತುರ್ತು ಮಾಧ್ಯಮ ಗೋಷ್ಠಿಗೆ ಆಹ್ವಾನ*

ಆತ್ಮೀಯರೇ,

ದಿನಾಂಕ 10-05-2022ರ ಮಂಗಳವಾರ ಸಂಜೆ 06.00 ಗಂಟೆಗೆ  ಬೆಂಗಳೂರಿನ  ಕ್ವೀನ್ಸ್  ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ರಾಮಲಿಂಗಾ ರೆಡ್ಡಿ ಅವರು ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

 ಮಾಧ್ಯಮ ಮಿತ್ರರು ಆಗಮಿಸಲು ಕೋರಿಕೆ.

ಸಂವಹನ ಮತ್ತು ಮಾಧ್ಯಮ ವಿಭಾಗ, ಕೆಪಿಸಿಸಿ
[10/05, 5:51 PM] Ravi Gowda. Kpcc. official: ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ನಿವೃತ್ತ ನೌಕರರ ವೇದಿಕೆ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂದಿಸಲಾಯಿತು. ವೇದಿಕೆ ಅಧ್ಯಕ್ಷ ಪಿ.ಓ.ಶಿವಕುಮಾರ್, ಎನ್.ಎಸ್.ಕುಮಾರ್, ಗಣೇಶಪ್ಪ, ರವಿಕುಮಾರ್, ನಿಂಗಪ್ಪ, ಚಂದ್ರಶೇಖರ್, ಬಸವರಾಜ್ ಮತ್ತಿತರರು ಇದ್ದರು.
[10/05, 6:36 PM] Ravi Gowda. Kpcc. official: *ಶಿವಮೊಗ್ಗದ ಜನಧ್ವನಿ ಪ್ರತಿಭಟನಾ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತಿನ ಮುಖ್ಯಾಂಶಗಳು:*

ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಜನಧ್ವನಿ ಪ್ರತಿಭಟನೆ ಮೆರವಣಿಗೆಯನ್ನು ಹತ್ತು-ಹದಿನೈದು ದಿನಗಳ ಹಿಂದೆಯೇ ಮಾಡಬೇಕಿತ್ತು. ಈಶ್ವರಪ್ಪನವರ ರಾಜೀನಾಮೆಗೆ ನಾವು ಆಗ್ರಹ ಮಾಡಿರಲಿಲ್ಲ.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಆತನ ಸಹೋದರ ಕೊಟ್ಟ ದೂರಿನನ್ವಯ ಪ್ರಕರಣ ದಾಖಲಿಸಬೇಕು ಎಂಬುದು ನಮ್ಮ ಆಗ್ರಹವಾಗಿತ್ತು.

ಸಂತೋಷ್ ಪಾಟೀಲ್ ಸಹೋದರನ ದೂರಿನಲ್ಲಿ ಸಚಿವ ಈಶ್ವರಪ್ಪ ಅವರು 40 ಪರ್ಸೆಂಟ್ ಕಮಿಷನ್ ಗೆ ಬೇಡಿಕೆ ಇಟ್ಟಿದ್ದರು. ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದರೂ ನನಗೆ ಬಿಲ್ ಪಾವತಿ ಮಾಡಿರಲಿಲ್ಲ. ಹೀಗಾಗಿ ಸಂತೋಷ್ ಸಾವಿಗೆ ಈಶ್ವರಪ್ಪನವರೇ ಕಾರಣ ಎಂದು ದಾಖಲಾಗಿತ್ತು.

ಮುಖ್ಯಮಂತ್ರಿ ಬೊಮ್ಮಾಯಿಯವರು ಈಶ್ವರಪ್ಪನವರನ್ನು ಈ ಪ್ರಕರಣದಲ್ಲಿ ರಕ್ಷಣೆ ಮಾಡುವ ಉದ್ದೇಶದಿಂದ ಕೇವಲ ಆತ್ಮಹತ್ಯೆ ಪ್ರಕರಣ ಮಾತ್ರ ದಾಖಲಿಸಿದ್ದಾರೆ. 

ಇದು ಕೇವಲ ಆತ್ಮಹತ್ಯೆ ಮಾತ್ರವಲ್ಲ, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಬೇಕಿತ್ತು. ಆಗ ಅವರಿಗೆ ನ್ಯಾಯ ಸಿಗುತ್ತಿತ್ತು.

ಇನ್ನು ಈಶ್ವರಪ್ಪನವರು ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜದ ಬದಲಿಗೆ ಕೇಸರಿ ದ್ವಜವನ್ನು ಹಾರಿಸುತ್ತೇವೆ ಎಂದು ಹೇಳಿದ್ದರು. ಬಿಜೆಪಿ ನಾಯಕರು ಈಗ ತಮ್ಮ ತಲೆಯ ಮೇಲೆ ಕೇಸರಿ ಟೋಪಿ, ಯುವಕರ ಮೇಲೆ ಕೇಸರಿ ಶಾಲನ್ನು ಹಾಕುತ್ತಿದ್ದಾರೆ. 

ಅವರಿಗೂ ಕೇಸರಿ ಬಣ್ಣಕ್ಕೂ ಏನು ಸಂಬಂಧ? ಸ್ವತಂತ್ರ ಹೋರಾಟದಲ್ಲಿ ಅವರೇನಾದರೂ ತ್ಯಾಗ-ಬಲಿದಾನ ಮಾಡಿದ್ದರಾ? ದೇಶಕ್ಕಾಗಿ ಬಿಜೆಪಿ ನಾಯಕರು ಪ್ರಾಣ ಬಿಟ್ಟಿದ್ದಾರಾ? 

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯವರು ದೇಶದ ಐಕ್ಯತೆ, ಸಮಗ್ರತೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಬಿಜೆಪಿಯಲ್ಲಿ ಯಾರಾದರೂ ಈ ರೀತಿ ಪ್ರಾಣ ಬಿಟ್ಟಿದ್ದಾರಾ?

ಕೇಸರಿ ಶಾಂತಿಯ ಸಂಕೇತ. ಮಠಮಾನ್ಯಗಳಲ್ಲಿ ಸ್ವಾಮೀಜಿಗಳು, ಧರ್ಮಗುರುಗಳು ಕೇಸರಿ ವಸ್ತ್ರವನ್ನು ಧರಿಸುತ್ತಾರೆ ನಾವು ಅವರಿಗೆ ಗೌರವ ನೀಡುತ್ತೇವೆ. ಆದರೆ ಬಿಜೆಪಿಯವರು ಈ ಕೇಸರಿ ಬಣ್ಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಬಿಜೆಪಿಯವರು ಸದಾ ರಕ್ತ ಹಾಗೂ ಹಿಂಸೆ ಮೇಲೆ ಆಸಕ್ತಿ ಹೊಂದಿದ್ದು, ಅವರು ಕೆಂಪುಬಣ್ಣದ ಶಾಲು ಹಾಗೂ ಟೋಪಿಯನ್ನು ಹಾಕಿಕೊಳ್ಳಬೇಕು. 

ನಮ್ಮ ವೇದ-ಉಪನಿಷತ್ತುಗಳಲ್ಲಿ ಗಂಗಾಸ್ನಾನಕ್ಕೆ, ತುಂಗಾಪಾನಕ್ಕೆ ಎಂಬ ಮಾತಿದೆ. ಗಂಗಾ ನದಿಯ ನೀರು ಸ್ನಾನ ಮಾಡಲು ಯೋಗ್ಯ, ತುಂಗಾನದಿಯ ನೀರು ಕುಡಿಯಲು ಯೋಗ್ಯ ಎಂದರ್ಥ. ಆದರೆ ಬಿಜೆಪಿ ಸರ್ಕಾರ ಕೇವಲ ತುಂಗಾ ನದಿಯನ್ನು ಮಾತ್ರವಲ್ಲ ಇಡೀ ರಾಜ್ಯವನ್ನೇ ಕಲ್ಮಶ ಮಾಡಿದೆ.

ಈ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಲು ಮುಂದಾಗಿದೆ. ಯಡಿಯೂರಪ್ಪನವರೇ, ಈಶ್ವರಪ್ಪನವರೇ ನೀವು ಬಂಡವಾಳ ಹೂಡಿಕೆದಾರರನ್ನು ಶಿವಮೊಗ್ಗ ಜಿಲ್ಲೆಗೆ ಕರೆತನ್ನಿ. ಈ ಜಿಲ್ಲೆಯ ಸುಮಾರು 8 ಸಾವಿರ ಜನರಿಗೆ ಉದ್ಯೋಗ ನೀಡಲು ಯಾರಾದರೂ ಧೈರ್ಯವಾಗಿ ಮುಂದೆ ಬರುತ್ತಾರಾ ಎಂಬುದನ್ನು ನೋಡಿ.

ನೀವು ಶಿವಮೊಗ್ಗ ಜಿಲ್ಲೆಗೆ ಇಟ್ಟಿರುವ ಕಪ್ಪುಚುಕ್ಕೆ ಪರಿಣಾಮ ಇಲ್ಲಿ ಉದ್ಯೋಗ ಸೃಷ್ಟಿ ಮಾಡಲು ಯಾವುದೇ ಬಂಡವಾಳ ಹೂಡಿಕೆದಾರರು ಮುಂದೆ ಬರುವುದಿಲ್ಲ.

ಕರ್ನಾಟಕ ರಾಜ್ಯ ಬಸವಣ್ಣನವರ ಕರ್ನಾಟಕ, ಕುವೆಂಪು ಅವರ ಕರ್ನಾಟಕ, ಶಿಶುನಾಳ ಶರೀಫರ ಕರ್ನಾಟಕ, ಕನಕದಾಸರ ಕರ್ನಾಟಕ, ವಿಶ್ವ ಕರ್ನಾಟಕವಾಗಿ ಬೆಳೆಯಬೇಕು. ಇದು ಕಾಂಗ್ರೆಸ್ ಪಕ್ಷದ ಸಂಕಲ್ಪ.

ಇದಕ್ಕಾಗಿ ಕಾಂಗ್ರೆಸ್ ಪಕ್ಷ ಕಾರ್ಯಕ್ರಮ ರೂಪಿಸುತ್ತಿದೆ. ಬಿಜೆಪಿ ಸರ್ಕಾರ ರಾಜ್ಯಕ್ಕೆ ತಂದಿರುವ ಕಳಂಕವನ್ನು ತೊಳೆಯಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ. 

ಹಿಂದೆ ಬಂಗಾರಪ್ಪನವರ ಕಾಲದಲ್ಲಿ ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಎಷ್ಟು ಜನ ಶಿವಮೊಗ್ಗ ಜಿಲ್ಲೆಯಲ್ಲಿ ಗೆದ್ದಿದ್ದರು ಎಂಬ ಅರಿವು ನಮಗಿದೆ. ನಾನು ಕೂಡ ಈ ಭಾಗದಲ್ಲಿ ಮೂರು ಸಮೀಕ್ಷೆಗಳನ್ನು ಮಾಡಿಸಿದ್ದು, ಅದರ ಪ್ರಕಾರ ಶಿವಮೊಗ್ಗ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್ ಗೆಲ್ಲಿಸಲು ಮತದಾರ ತೀರ್ಮಾನಿಸಿದ್ದಾನೆ.

ಬಿಜೆಪಿ ಪಕ್ಷದ ಚಿನ್ಹೆಯ ಕಮಲ ಕೆಸರಿನಲ್ಲಿ ಬೆಳೆಯುತ್ತದೆ. ಅದೇ ರೀತಿ ಬಿಜೆಪಿಯವರು ಸಮಾಜದಲ್ಲಿ ಅಶಾಂತಿ ಎಂಬ ಕೆಸರನ್ನು ಸೃಷ್ಟಿಸಿ, ಅಲ್ಲಿ ತಮ್ಮ ಪಕ್ಷವನ್ನು ಅರಳಿಸಲು ಪ್ರಯತ್ನಿಸುತ್ತಾರೆ.

ದೇಶದಲ್ಲಿ ಆಪರೇಷನ್ ಕಮಲ ಆರಂಭವಾಗಿದ್ದು ಈ ರಾಜ್ಯ, ಅದರಲ್ಲೂ ಈ ಜಿಲ್ಲೆಯಿಂದ. 

ಬಿಜೆಪಿ ಆಡಳಿತದಲ್ಲಿ ಸರ್ಕಾರದ ಹುದ್ದೆಗಳಿಗೆ ಒಂದೊಂದಕ್ಕೆ ಒಂದೊಂದು ದರ ನಿಗದಿಯಾಗಿದೆ. ಸರ್ಕಲ್ ಇನ್ಸ್ಪೆಕ್ಟರ್ ಗೆ 50 ಲಕ್ಷ, ಸಬ್ ಇನ್ಸ್ಪೆಕ್ಟರ್ ಗೆ 25 ಲಕ್ಷ, ಡಿವೈಎಸ್ಪಿ ಗೆ ಒಂದು ಕೋಟಿ, ಎಸ್ಪಿಗೆ 1.50 ಕೋಟಿ ನಿಗದಿಯಾಗಿದೆ.

ಇನ್ನು ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮಗಳು ನಡೆಯುತ್ತಿವೆ. ಪಿಎಸ್ಐ ನೇಮಕಾತಿಯಲ್ಲಿ 50 ಲಕ್ಷದಿಂದ ಒಂದು ಕೋಟಿವರೆಗೂ, ಬೇರೆಬೇರೆ ಹುದ್ದೆಗಳಿಗೆ 75 ರಿಂದ 80 ಲಕ್ಷ ನಿಗದಿ ಮಾಡಲಾಗಿದೆ. 

ನಾನು ಕೂಡ ಹಿಂದೆ ಇಂಧನ ಸಚಿವನಾಗಿದ್ದೆ, ಆ ಸಂದರ್ಭದಲ್ಲಿ ಮೂವತ್ತು ಸಾವಿರ ಜನರಿಗೆ ಉದ್ಯೋಗ ನೀಡಲಾಗಿತ್ತು. ನಮ್ಮ ಅವಧಿಯಲ್ಲಿ ಯಾವುದಾದರೂ ಒಬ್ಬ ಅಭ್ಯರ್ಥಿಯನ್ನು ಅಕ್ರಮವಾಗಿ ನೇಮಕ ಮಾಡಿದ್ದರೆ ನಾನು ಈಗಲೇ ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ. 

ಕಾಂಗ್ರೆಸ್ ಪಕ್ಷ ಶುದ್ಧ ರಾಜಕಾರಣ ಕೊಟ್ಟಿದೆ. ಆದರೆ ಈಗ ದಿನಬೆಳಗಾದರೆ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಸರ್ಕಾರದ ಅಕ್ರಮಗಳು ಬಹಿರಂಗವಾಗುತ್ತಿವೆ.

ಈ ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ನಡೆಯುತ್ತಿರುವುದು ನಿಜವಲ್ಲವೇ? ಪಂಚಾಯಿತಿ ಕಛೇರಿಗಳಲ್ಲಿ ಲಂಚ ಇಲ್ಲದೆ ಕೆಲಸಗಳು ನಡೆಯುತ್ತಿದೆಯೇ? 

ಹಿಂದೆ ಇಲ್ಲಿನ ಜನ ಒಂದು ಮಾತು ಹೇಳುತ್ತಿದ್ದರು, YES ಎಂದರೆ ಯಡಿಯೂರಪ್ಪ-ಈಶ್ವರಪ್ಪ ಹಾಗೂ ಶಂಕರಮೂರ್ತಿ ಎಂದು. ಇಲ್ಲಿನ ಎಲ್ಲ ಆಸ್ತಿಗಳು ಅವರಿಗೇ ಆಗಿದೆ ಎಂದು.

ಅದೇ ರೀತಿ ಈಗಲೂ ಪ್ರತಿಯೊಂದು ವಿಚಾರದಲ್ಲೂ ಕಮಿಷನ್ ಪಡೆಯಲಾಗುತ್ತಿದೆ. ಗ್ರಾಮ ಪಂಚಾಯಿತಿ ಕಛೇರಿಗಳಲ್ಲಿ, ನಗರಸಭೆ, ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಅಕ್ರಮಗಳು ನಡೆಯುತ್ತಿವೆ. ಈ ಅಕ್ರಮಗಳನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ನಾಯಕರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದೆವು.

ಬಿಜೆಪಿ ಸರ್ಕಾರದ ಆಡಳಿತದಲ್ಲಿ ವಿಧಾನಸೌಧದ ಗೋಡೆಗಳು ಕಾಸು, ಕಾಸು ಎಂದು ಕೇಳುತ್ತಿವೆ. ಬಿಜೆಪಿಯಲ್ಲಿ ಯಾವ ಕಾರಣಕ್ಕೆ ಯಡಿಯೂರಪ್ಪನವರಿಂದ ರಾಜೀನಾಮೆ ಪಡೆಯಲಾಯಿತು? ಅವರು ಕಣ್ಣೀರು ಹಾಕುತ್ತ ರಾಜೀನಾಮೆ ಕೊಟ್ಟಿದ್ದು ಯಾಕೆ? ನಂತರ ಕೇಂದ್ರ ಸರ್ಕಾರದವರು ಯಡಿಯೂರಪ್ಪನವರ ಆಪ್ತರ ಮೇಲೆ ದಾಳಿ ನಡೆಸಿದರು. ಆಗ ಅವರ ಬಳಿ ಎಷ್ಟು ಕೋಟಿ ಸಿಕ್ಕಿತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಪ್ರಕರಣದಲ್ಲಿ ಏನಾಯಿತು ಎಂದು ಜನರಿಗೆ ಮಾಹಿತಿ ಕೊಟ್ಟರೇ? 

ಇಡೀ ದೇಶಕ್ಕೆ ಭ್ರಷ್ಟಾಚಾರದ ರಾಜಧಾನಿ ಎಂದರೆ ಅದು ಕರ್ನಾಟಕ ಎಂದು ಮುದ್ರೆ ಒತ್ತಿದ್ದಾರೆ. ಈ ಮುದ್ರೆಯನ್ನು ನಾವು ಅಳಿಸಿ ಹಾಕಬೇಕು. ಈ ಕೆಲಸ ಮಾಡುವವರು ನೀವುಗಳು. ಶಿವಮೊಗ್ಗ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು. ಆಗ ಕಾಂಗ್ರೆಸ್ ಪಕ್ಷ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ನಿಶ್ಚಿತ.

ಬಂಗಾರಪ್ಪನವರ ಹಾಗೂ ಎಸ್ ಎಂ ಕೃಷ್ಣ ಅವರು ಅವರ ಸಮಯದಲ್ಲಿ ತಂತ್ರಗಾರಿಕೆ ರೂಪಿಸಿದ್ದರು. ರೈತರ ಭೂಮಿ ಉಳಿಸಲು, ಅರಣ್ಯಭೂಮಿ ಉಳಿಸಲು, ಬಂಗಾರಪ್ಪನವರು ಹಾಗೂ ಕಾಗೋಡು ತಿಮ್ಮಪ್ಪನವರು ಕೊಟ್ಟ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ.

ಬಿಜೆಪಿಯವರು ಈಗ ಪ್ರಕರಣ ದಾಖಲಿಸಿ ತಿದ್ದುಪಡಿ ತರಲು ಹೊರಟಿದ್ದಾರೆ. ಆಗಸ್ಟ್ 9 ರಂದು ಕ್ವಿಟ್ ಇಂಡಿಯಾ ಚಳುವಳಿಯ ದಿನದಂದು ಕಾಂಗ್ರೆಸ್ ನಾಯಕರೆಲ್ಲರು ಕಾಗೋಡಿನಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಅಲ್ಲಿ ರೈತನ ರಕ್ಷಣೆಗಾಗಿ, ರೈತರ ಜಮೀನು ಉಳಿಸಲು, ಬಗರ್ ಹುಕುಂ ಸಾಗುವಳಿ ಮೂಲಕ ನ್ಯಾಯ ಕೊಡಿಸಲು, ಎಲ್ಲರ ರಕ್ಷಣೆ ಮಾಡಲು ಕಾಂಗ್ರೆಸ್ ಪಕ್ಷ ಕಾರ್ಯಕ್ರಮ ರೂಪಿಸಲಿದೆ.

ಆಗಸ್ಟ್ 9ರಂದು ಕಾಡಿನಲ್ಲಿ ದೊಡ್ಡ ಚಳವಳಿ ಕಾರ್ಯಕ್ರಮ ರೂಪಿಸಲಾಗುವುದು.

ಈ ಜಿಲ್ಲೆಯ ಯುವಕ ಸಾವನ್ನಪ್ಪಿದ್ದಾನೆ. ತಪ್ಪು ಯಾರು ಮಾಡಿದರೂ ತಪ್ಪೇ, ಆದರೆ ಅದೇ ರೀತಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಈ ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸಲು ಮತ್ತೊಂದು ಕೊಲೆಯನ್ನು ಮಾಡಲು ಸಂಚು ರೂಪಿಸಲಾಗಿತ್ತು. ಪೊಲೀಸ್ ಅಧಿಕಾರಿಗಳು ಅದನ್ನು ತಡೆದು 13 ಮಂದಿಯನ್ನು ಬಂಧಿಸಿದ್ದು, ಪರಿಸ್ಥಿತಿ ನಿಭಾಯಿಸಿದ್ದಾರೆ. ಈಶ್ವರಪ್ಪನವರು ಇಷ್ಟೆಲ್ಲಾ ಸಂಚು ರೂಪಿಸುತ್ತಿದ್ದಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ. ಇಷ್ಟೆಲ್ಲಾ ಆಗುತ್ತಿದ್ದರೂ ಯಡಿಯೂರಪ್ಪನವರು ಹಾಗೂ ಬೊಮ್ಮಾಯಿಯವರು ಯಾವ ಕಾರಣಕ್ಕೆ ಈಶ್ವರಪ್ಪನವರ ಬೆಂಬಲಕ್ಕೆ ನಿಂತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ.

ಇನ್ನು ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದ್ದು ಸಾಮಾನ್ಯ ಜನ ದಿನನಿತ್ಯದ ಜೀವನಕ್ಕೆ ಪರದಾಡುವ ಸ್ಥಿತಿ ಎದುರಾಗಿದೆ. ಯೂರಿಯಾ ಗೊಬ್ಬರ 1700ರೂ. ಆಗಿದೆ. ಇನ್ನು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

226 ರೂಪಾಯಿಗೆ ಖರೀದಿ ಮಾಡಿ ಮೂರು ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಸಿಮೆಂಟ್ 450 ರಿಂದ 500ರೂ. ಆಗಿದೆ. ಅಡುಗೆ ಅನಿಲ 1050 ಆಗಿದೆ. ಅಡುಗೆ ಎಣ್ಣೆ 200 ರೂಪಾಯಿಗಿಂತ ಹೆಚ್ಚಾಗಿದೆ. ಕಬ್ಬಿಣ ಪ್ರತಿ ಟನ್ನಿಗೆ 90000 ದಿಂದ ಲಕ್ಷದವರೆಗೆ ಆಗಿದೆ. ಈ ರೀತಿ ದಿನನಿತ್ಯ ಜನಸಾಮಾನ್ಯರ ಜೇಬು ಪಿಕ್ ಪಾಕೆಟ್ ಆಗುತ್ತಿದೆ.

ನಿಮ್ಮ ಮಕ್ಕಳು ಸರ್ಕಾರಿ ಕೆಲಸಕ್ಕೆ ಸೇರಬೇಕು ಎಂದು ಬಯಸುತ್ತಿದ್ದೀರಿ. ಯಾವುದಾದರೂ ಒಂದು ಇಲಾಖೆ ನೇಮಕಾತಿ ಹಣವಿಲ್ಲದೆ ನಡೆಯುತ್ತಿದೆಯೇ? ಪಿಎಸ್ಐ ನೇಮಕಾತಿ ಅಕ್ರಮವನ್ನು ನಾವು ಬಯಲಿಗೆಳೆದೆವು. ಈ ಪ್ರಕರಣದ ತನಿಖೆ ವರದಿ ಬರುವ ಮುನ್ನವೇ ಅರ್ಧ ಜ್ಞಾನೇಂದ್ರ ಅವರು ನೇಮಕಾತಿ ಪರೀಕ್ಷೆಯನ್ನು ರದ್ದು ಮಾಡಿದ್ದಾರೆ. ಇವರು ಅಕ್ರಮಕ್ಕೆ ಅವಕಾಶ ಕಲ್ಪಿಸಿದ ಕಾರಣದಿಂದ ಅಭ್ಯರ್ಥಿಗಳು ಅಕ್ರಮಕ್ಕೆ ಮುಂದಾಗಿದ್ದಾರೆ. ಬಿಜೆಪಿ ನಾಯಕರುಗಳು, ಪೊಲೀಸ್ ಅಧಿಕಾರಿಗಳು ಈ ಅಕ್ರಮದ ಅಂಗಡಿ ತೆರೆದಿದ್ದಾರೆ.

 ಸಚಿವರು, ಬಿಜೆಪಿ ನಾಯಕರ ಹೆಸರು ಬಹಿರಂಗವಾಗುತ್ತದೆ ಎಂಬ ಕಾರಣಕ್ಕೆ ಪರೀಕ್ಷೆಯನ್ನು ರದ್ದು ಮಾಡಿರುವುದು ನ್ಯಾಯವೇ? ಈ ಅಕ್ರಮದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಿದ ನಂತರ ಪರೀಕ್ಷೆಯನ್ನು ವಜಾಗೊಳಿಸುವ ನಿರ್ಧಾರಕ್ಕೆ ಬರಬೇಕಿತ್ತು.

ಈಶ್ವರಪ್ಪನವರು ಬಹಳ ಸತ್ಯವಂತರು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅವರೇ ರಾಜ್ಯಪಾಲರಿಗೆ ಪತ್ರ ಬರೆದು, ನನ್ನ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರು ನೀಡುತ್ತಾರೆ. ಆದರೂ ಈಶ್ವರಪ್ಪನವರನ್ನು ತೆಗೆದುಹಾಕಲು ಯಡಿಯೂರಪ್ಪನವರಿಗೆ ತಾಕತ್ತು ಇರಲಿಲ್ಲ.

ಈಗ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿರುವಾಗ ಮುರುಗೇಶ್ ನಿರಾಣಿ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಈಶ್ವರಪ್ಪನವರು ಹೇಳುತ್ತಾರೆ. ಈ ರೀತಿ ಈಶ್ವರಪ್ಪನವರು ತಮಗೆ ನೆರವಾದವರಿಗೆ ಬಾಂಬ್ ಹಾಕುವ ಕೆಲಸ ಮಾಡುತ್ತಾರೆ. ಶಿವಮೊಗ್ಗ ಜಿಲ್ಲೆಗೆ ಕೋಮುಗಲಭೆ ಮೂಲಕ ಕಪ್ಪುಚುಕ್ಕೆ ಇಟ್ಟು ಇಡೀ ಜಿಲ್ಲೆಯ ಜನತೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ನೀವೆಲ್ಲರೂ ಅವರನ್ನು ಮನೆಗೆ ಕಳುಹಿಸಬೇಕು, ಈ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು.

ಬಿಜೆಪಿಯಲ್ಲಿ ಮುಖ್ಯಮಂತ್ರಿ ಕುರ್ಚಿಗೆ 2500 ಕೋಟಿ, ಮಂತ್ರಿ ಕುರ್ಚಿಗೆ ನೂರು ಕೋಟಿ ಬೆಲೆ ನಿಗದಿಯಾಗಿದೆ. ಈಶ್ವರಪ್ಪನವರು ನೂರು ಕೋಟಿ ಕೊಟ್ಟಮೇಲೆ ಸಾವಿರ ಕೋಟಿಯನ್ನಾದರೂ ಮಾಡಬಾರದೇ? ಯತ್ನಾಳ್ ಅವರು ಹೇಳಿರುವ ಪ್ರಕಾರ ಯಡಿಯೂರಪ್ಪನವರು 2500 ಕೋಟಿ ಕೊಟ್ಟಿರಬೇಕಲ್ಲವೇ?

ನಮ್ಮ ಪಕ್ಷದಲ್ಲಿ ಯಾರಾದರೂ ಈ ರೀತಿ ಮಾತನಾಡಿದ್ದರೆ ಮರುದಿನವೇ ಪಕ್ಷದಿಂದ ಹೊರಗೆ ಹಾಕುತ್ತಿದ್ದೆ.

ಶಿವಮೊಗ್ಗದ ಮಹಾಜನತೆ ನಮ್ಮ ಮೇಲೆ ಪ್ರೀತಿ ಹಾಗೂ ನಂಬಿಕೆ ಇಡಬೇಕು. ಬಿಜೆಪಿ ಹಾಗೂ ಜನತಾದಳದಿಂದ ಸಾಕಷ್ಟು ಜನ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ. ಈಗ ನಾನು ಯಾರ ಹೆಸರನ್ನು ಹೇಳುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ನೀವು ತ್ಯಾಗಕ್ಕೆ ಸಿದ್ಧರಾಗಬೇಕು ಹಾಗೂ ಪಕ್ಷವನ್ನು ಅಧಿಕಾರಕ್ಕೆ ತರಲು ತಾವೆಲ್ಲರೂ ಬದ್ಧರಾಗಬೇಕು, ಸಂಕಲ್ಪ ಮಾಡಬೇಕು. ಕಾಂಗ್ರೆಸ್ ಪಕ್ಷ ನಿಮ್ಮ ಜೊತೆ ಇರುತ್ತದೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಲಿದೆ.

Post a Comment

Previous Post Next Post