#SaveSoil - 01 May 2022 PRESS RELEASE*"ಬೆಂಕಿಯ ಭೂಮಿ"- ಅಜೆರ್ಬೈಜಾನ್ನಲ್ಲಿ ಕಿಚ್ಚನ್ನು ಹಚ್ಚಿದ ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನ*ನೂರು ದಿನದ ಮಣ್ಣು ಉಳಿಸಿ ಅಭಿಯಾನದ 40ನೆ ದಿನವಾದ ಇಂದು

#SaveSoil - 01 May 2022 
PRESS RELEASE

#SaveSoil - 01 May 2022 
PRESS RELEASE

*"ಬೆಂಕಿಯ ಭೂಮಿ"- ಅಜೆರ್ಬೈಜಾನ್ನಲ್ಲಿ ಕಿಚ್ಚನ್ನು ಹಚ್ಚಿದ ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನ*
ನೂರು ದಿನದ ಮಣ್ಣು ಉಳಿಸಿ ಅಭಿಯಾನದ 40ನೆ ದಿನವಾದ ಇಂದು ಸದ್ಗುರು ಅಜೆರ್ಬೈಜಾನ ದೇಶದ ರಾಜಧಾನಿಯಾದ ಬಕುವನ್ನು ತಲುಪಿದರು. ಬಕು ನಗರದ ವಾಸಿಗಳು ಸದ್ಗುರು ಅವರನ್ನು ಸ್ವಾಗತಿಸಿ, ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದರು. 
ಸದ್ಗುರು ಬಕುವಿನ ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿದರು. ನಂತರ ಅಜೆರ್ಬೈಜಾನಿನ ಕೃಷಿ ಸಚಿವರು ಮಣ್ಣಿನ ಅಭಿಯಾನದ ಅರಿವಿನ ಬಗ್ಗೆ ಒಡಂಬಡಿಕೆ ಪತ್ರಕೆ ಸಹಿ ಹಾಕಿದರು. ಹಾಗೆಯೇ ಅವರಿಗೆ ಸದ್ಗುರು ಅವರು ನೀತಿಚಾಲಿತ ಪುನರುಜ್ಜೀವನ ಕೈಪಿಡಿಯನ್ನು ನೀಡಿದರು. ಅಲ್ಲಿಯ ಭೂಮಿ ಮಿತ್ರರ ಒಂದು ಅದ್ಭುತ ಗುಂಪು,  ಸದ್ಗುರುಗಳೊಂದಿಗೆದಿ ಮರವನ್ನು ನೆತ್ತಿ ಮಣ್ಣನು ಉಳಿಸುವ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದು ಹೃದಯಸ್ಪರ್ಶಿಯಾಗಿತ್ತು. 500 ಯುವ ಭೂಮಿ ಮಿತ್ರರು ಈ ಅಭಿಯಾನದ ಹಾಡಿಗೆ ಕುಣಿದು ಕುಪ್ಪಳಿಸಿದರು. ನಟ - ನಿರೂಪಕ 
 ತುರಲ್ ಅಸಡೋವ್   ಅವರೊಂದಿಗೆ ಸದ್ಗುರು ಹೇದರ್ ಅಲಿಯೆವ್ ಕೇಂದ್ರದ ಮುಂದೆ ಈ ಅಭಿಯಾನದ ಬಗ್ಗೆ ಮಾತನಾಡಿದರು. 

ಮಣ್ಣಿನ ಮಹತ್ವವನ್ನು ಸಾರುವ ಪ್ರೊಜೆಕ್ಟ್ ಸಂಸ್ಕೃತಿ ಅವರ ಮನಮೋಹಕ ಪ್ರಸ್ತುತಿಯಿಂದ ಈ ಕಾರ್ಯಕ್ರಮ ಪ್ರಾರಂಭವಾಯಿತು. ಸದ್ಗುರುಗಳಿಂದ 
ಕಲ್ಪಿಸಲ್ಪಟ್ಟ ಪ್ರೊಜೆಕ್ಟ್ ಸಂಸ್ಕೃತಿ ಸಂಗೀತ, ನೃತ್ಯ ಮತ್ತು ಕಲರಿಪಯಟ್ಟು (ಸಮರ ಕಲೆಯ ಪ್ರಾಕಾರ) ಅಂತಹ ಭಾರತದ ಶಾಸ್ತ್ರೀಯ ಕಲೆಗಳನ್ನು ಕಲಿಸುವ ಕಾರ್ಯಕ್ರಮಗಳನ್ನು ಹಬ್ಬಿಕೊಂಡಿದೆ.  
*ಅಜೆರ್ಬೈಜಾನ ದೇಶಕ್ಕೆ ಭಾರತ ರಾಯಭಾರಿ ಆಗಿರುವ ಬಿ. ವನಲಾಲ್ವವ್ನಾ ಮಣ್ಣನ್ನು ಉಳಿಸುವ ಅಭಿಯಾನದ ಮಹತ್ವದ ಬಗ್ಗೆ ತಿಳಿಸಿ ಜನರಿಗೆ ಇದರ ಸಂದೇಶವನ್ನು ಪರಿಗಣಿಸುವಂತೆ ಮನವಿ ಮಾಡಿಕೊಂಡರು*.

ಮಣ್ಣಿನ ಅವನತಿಯ ಬಗ್ಗೆ ನೀತಿಗಳ ಪುನರ್ ರಚನೆಯ ಅಗತ್ಯವನ್ನು ಸದ್ಗುರು ಎತ್ತಿ ತೋರಿಸಿದರು.  ಹಾಗೆಯೇ ಮಣ್ಣು ಅತಿ ದೊಡ್ಡ ಜೀವನದ ವ್ಯವಸ್ಥೆ ಎಂದು ನೆನಪಿಸಿದರು. "ಒಂದು ಹುಳ, ಕೀಟ, ಚಿಟ್ಟೆ, ಗಂಡು, ಹೆಣ್ಣು, ಅಥವಾ ಯಾವುದೇ ಪ್ರಾಣಿ - ಇವು ಎಲ್ಲವೂ ಬರುವುದು ಮಣ್ಣಿನಿಂದ. ನಾನು ಮಣ್ಣು ಎಂದು ಕರೆಯುವುದು, ಕೇವಲ 15-18 ಇಂಚಿನ ಮಣ್ಣು. ಇದೇ ಇಡೀ ಮಣ್ಣಿನ ಜೀವಾಳವಾಗಿದೆ. 

ಮುಂದಿನ ಪೀಳಿಗೆಯವರು ಮಣ್ಣಿನ ಆರೋಗ್ಯವನ್ನು ಕಾಪಡುವುದು ಖಚಿತವಿಲ್ಲ ಎಂದ ಸದ್ಗುರು " ಒಂದು ವೇಳೆ ನಿಮ್ಮ ಕೃಷಿ ಭೂಮಿ ಇದ್ದರೆ, ಅದರಲ್ಲಿ ಕನಿಷ್ಠ  3-6% ಸಾವಯವ ಅಂಶವನ್ನು ತರಬೇಕು. ಇದನ್ನು ಪ್ರೋತ್ಸಾಹಿಸುವ ನೀತಿಯ ರಚನೆ ಆಗಬೇಕಾಗಿದೆ" ಎಂದು ಹೇಳಿದರು.

   ಸರಕಾರಗಳೊಂದಿಗೆ ಸಹಿ ಮಾಡಿದ MOUಗಳ ಬಗ್ಗೆ ಸದ್ಗುರು ವಿವರಣೆಯನ್ನು ನೀಡಿದರು, " ಇವುಗಳ ಮೂಲಕ ಮಣ್ಣಿನ ಗುಣಮಟ್ಟವನ್ನು ಸುಧಾರಿಸಲು ಸರಕಾರ ಬದ್ದವಾಗಿದೆ ಎಂಬುದು ಗೊತ್ತಾಗುತ್ತದೆ. ಈಗಾಗಲೇ ಇದರ ಬಗ್ಗೆ 192 ದೇಶಗಳು ಏನು ಮಾಡಬೇಕೆಂಬುದನ್ನು ಒಂದು ಕೈಪಿಡಿಯಲ್ಲಿ ದಾಖಲಿಸಿದ್ದೇವೆ. ಒಟ್ಟು 192 ನೀತಿ ದಾಖಲೆಗಳನ್ನು ರೂಪಿಸಿದ್ದೇವೆ. ಈ ಕೈಪಿಡಿಗಳಲ್ಲಿ ನೀತಿಯನ್ನು ಹೇಗೆ ರಚಿಸಬೇಕೆಂದು ಹೇಳಲಾಗಿದೆ. ರಾಷ್ಟ್ರಗಳು ಅವರವರ ನೀತಿಯನ್ನು ರಚಿಸಲು ಒಂದು ಮುನ್ನುಡಿಯನ್ನು ಪ್ರಸ್ತುತ ಪಡಿಸಲಾಗಿದೆ. ಖ್ಯಾತ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಈ ಕೈಪಿಡಿಯನ್ನು ಮಾಡಲು ಸುಮಾರು ಎರಡು ವರುಷ ಹಿಡಿದಿದೆ.

Post a Comment

Previous Post Next Post