ಜುಲೈ 31, 2022
,
2:24PM
ಮುಂಬೈನಲ್ಲಿ ಚಾಹಬರ್ ಡೇ ಸಮ್ಮೇಳನ ಆರಂಭ
ಕೇಂದ್ರ ಶಿಪ್ಪಿಂಗ್ ಸಚಿವ ಸರ್ಬಾನಂದ್ ಸೋನೊವಾಲ್ ಮತ್ತು ಶಿಪ್ಪಿಂಗ್ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಅವರು ಇಂದು ಮುಂಬೈನಲ್ಲಿ ಚಾಬಹರ್ ಡೇ ಸಮ್ಮೇಳನವನ್ನು ಉದ್ಘಾಟಿಸಿದರು.
ಇರಾನ್, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಅಫ್ಘಾನಿಸ್ತಾನದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚಬಹಾರ್ ಬಂದರು ಯುರೇಷಿಯಾವನ್ನು ಹಿಂದೂ ಮಹಾಸಾಗರದ ಪ್ರದೇಶದೊಂದಿಗೆ ಸಂಪರ್ಕಿಸಲು ಭಾರತದ ಇಂಡೋ-ಪೆಸಿಫಿಕ್ ದೃಷ್ಟಿಕೋನದ ಪ್ರಮುಖ ಆಧಾರಸ್ತಂಭವಾಗಿದೆ.
ಈ ಬಂದರು ಭಾರತವನ್ನು ಸಂಪರ್ಕಿಸುವ ಅಂತರಾಷ್ಟ್ರೀಯ ಉತ್ತರ ದಕ್ಷಿಣ ಸಾರಿಗೆ ಕಾರಿಡಾರ್ ಜಾಲದ ಭಾಗವಾಗಿದೆ.
ಭಾರತ ಮತ್ತು ಇರಾನ್‌ನ ಆರ್ಥಿಕ ಅಭಿವೃದ್ಧಿಯಲ್ಲಿ ಚಬಹಾರ್ ಬಂದರು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಇರಾನ್‌ನ ಬಂದರು ಮತ್ತು ಸಾಗರ ಸಂಸ್ಥೆಯ ಉಪ ಮುಖ್ಯಸ್ಥ ಜಲೀಲ್ ಎಸ್ಲಾಮಿ ಹೇಳಿದರು.
ಈ ವ್ಯಾಪಾರ ಮಾರ್ಗವು ಭಾರತ ಮತ್ತು ಯುರೇಷಿಯನ್ ದೇಶಗಳಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಚಬಹಾರ್ ಬಂದರಿನ ಮೂಲಕ ಭಾರತ ಮತ್ತು ಇರಾನ್ ನಡುವಿನ ವ್ಯಾಪಾರ ಸಹಕಾರ ಚಟುವಟಿಕೆಗಳನ್ನು ಹೆಚ್ಚಿಸಲು ಇರಾನ್ ವಿಶೇಷ ಪ್ರೋತ್ಸಾಹವನ್ನು ನೀಡಿದೆ ಎಂದು ಅವರು ಹೇಳಿದರು.
Post a Comment