🌹🍀🌷*ಕ್ಷೀರ ಸಮುದ್ರರಾಜನ ಮಗಳಾಗಿ**ಶ್ರೀ ರಂಗನಾಥನ ಪತ್ನಿಯಾಗಿ**ಸಮಗ್ರ ಲೋಕದ ಎಲ್ಲಾ ಜನರಿಂದಲೂ ಪೂಜಿತಳಾಗಿ**ಬ್ರಹ್ಮ,ಶಿವ, ಇಂದ್ರಾದಿಗಳಿಂದ ಪೂಜಿಸಲ್ಪಟ್ಟು**ಎಲ್ಲರಿಗೂ ಕರುಣಾಕಟಾಕ್ಷ ತೋರಿಸುತ್ತಾ* *ಸಕಲ ಲೋಕ ಜನನಿಯಾದ**ಪದ್ಮಗಳ ಮಧ್ಯೆ* *ಜನಿಸಿ ಬಂದ**ಶ್ರೀ ಲಕ್ಷ್ಮೀ ದೇವಿಗೆ**ಶಿರಸಾಷ್ಟಾಂಗ ನಮಸ್ಕಾರಗಳು !!**ಓಂ ಶ್ರೀ ಸದ್ಗುರುವೇ ನಮಃ !!**ಶುಭೋದಯ*🌷🍀🌹🙏

[29/07, 8:02 AM] Pandit Venkatesh. Astrologer. Kannada: 🌹🍀🌷
*ಕ್ಷೀರ ಸಮುದ್ರರಾಜನ ಮಗಳಾಗಿ*
*ಶ್ರೀ ರಂಗನಾಥನ ಪತ್ನಿಯಾಗಿ*
*ಸಮಗ್ರ ಲೋಕದ ಎಲ್ಲಾ ಜನರಿಂದಲೂ ಪೂಜಿತಳಾಗಿ*
*ಬ್ರಹ್ಮ,ಶಿವ,  ಇಂದ್ರಾದಿಗಳಿಂದ ಪೂಜಿಸಲ್ಪಟ್ಟು*
*ಎಲ್ಲರಿಗೂ ಕರುಣಾಕಟಾಕ್ಷ ತೋರಿಸುತ್ತಾ* 
*ಸಕಲ ಲೋಕ ಜನನಿಯಾದ*
*ಪದ್ಮಗಳ ಮಧ್ಯೆ* *ಜನಿಸಿ ಬಂದ*
*ಶ್ರೀ ಲಕ್ಷ್ಮೀ ದೇವಿಗೆ*
*ಶಿರಸಾಷ್ಟಾಂಗ ನಮಸ್ಕಾರಗಳು !!*

*ಓಂ ಶ್ರೀ ಸದ್ಗುರುವೇ ನಮಃ !!*

*ಶುಭೋದಯ*🌷🍀🌹🙏
[29/07, 8:02 AM] Pandit Venkatesh. Astrologer. Kannada: ದಿನ ವಿಶೇಷ: *"ವರ್ಷ ಋತು ಮತ್ತು ಶ್ರಾವಣ ಮಾಸ ಪ್ರಾರಂಭ,"*

🪔 *ನಿರ್ವನೋ ವಧ್ಯತೇ ವ್ಯಾಘ್ರೋ ನಿರ್ವ್ಯಾಘ್ರಂ ಛಿದ್ಯತೇ ವನಂ|*
*ತಸ್ಮಾತ್ ವ್ಯಾಘ್ರೋ ವನಂ ರಕ್ಷೇತ್ ವನಂ ವ್ಯಾಘ್ರಂ ಚ ಪಾಲಯೇತ್ ||*🪔

🌺 _ಕಾಡಿಲ್ಲದೇ ಇದ್ದರೆ ವ್ಯಾಘ್ರ/ಹುಲಿಗಳು ಹತ್ಯೆಗೊಳಗಾಗುತ್ತದೆ. ವ್ಯಾಘ್ರಗಳಿಲ್ಲದೇ ಇದ್ದರೆ ಕಾಡು ನಾಶವಾಗುತ್ತದೆ. ಆದುದರಿಂದ ವ್ಯಾಘ್ರಗಳು ವನವನ್ನು ರಕ್ಷಿಸಬೇಕು. ವನವು ವ್ಯಾಘ್ರಗಳನ್ನು ಪಾಲಿಸಬೇಕು._🌺

*ಶ್ರಾವಣ ಮಾಸ🌝/ಕರ್ಕಾಟಕ ಮಾಸ☀️ ಶುಕ್ಲ ಪಕ್ಷ ಪ್ರತಿಪದ ಶುಕ್ರವಾರದ ಶುಭಾಶಯಗಳು*
[29/07, 8:02 AM] Pandit Venkatesh. Astrologer. Kannada: 🌹🍀🌷
*ಲಕ್ಷ್ಮೀಂ ಕ್ಷೀರ ಸಮುದ್ರರಾಜ ತನಯಾಂ!* 
*ಶ್ರೀ ರಂಗಧಾಮೇಶ್ವರೀಂ*!
*ದಾಸೀಭೂತ ಸಮಸ್ತದೇವ ವನಿತಾಂ !* 
*ಲೋಕೈಕ ದೀಪಾಂಕುರಾಂ !!* 
*ಶ್ರೀ ಮನ್ಮಂದ ಕಟಾಕ್ಷಲಬ್ಧವೌಭವಾಂ*!
*ಬ್ರಹ್ಮೇಂದ್ರ ಗಂಗಾಧರಾಂ !!*
*ತ್ವಾಂ ತ್ರೈಲೋಕ್ಯ ಕುಟುಂಬಿನೀಂ  ಸರಸಿಜಾಂ!*
*ವಂದೇ ಮುಕುಂದಪ್ರಿಯಾಂ*!
*ಶುಭೋದಯ*🌷🍀🌹🙏
[29/07, 8:03 AM] Pandit Venkatesh. Astrologer. Kannada: ಹಿಂದೂಗಳಿಗೆ ಶ್ರಾವಣ ಮಾಸ(Shravana Masa) ಅತ್ಯಂತ ಪವಿತ್ರವಾದದ್ದು. ವರ್ಷಪೂರ್ತಿ ಇರುವ ಹಲವು ಹಬ್ಬಗಳಲ್ಲಿ ಹೆಚ್ಚಿನ ಹಬ್ಬಗಳು ಈ ತಿಂಗಳಲ್ಲೇ ಬರುತ್ತವೆ. ಈ ತಿಂಗಳಿನಲ್ಲಿ ಅಧ್ಯಾತ್ಮಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತೆ. ಅಲ್ಲದೆ ಶ್ರಾವಣದಲ್ಲಿ ಏನೇ ಮಾಡಿದರೂ ಅದಕ್ಕೆ ಒಳ್ಳೆಯ ಫಲ ಸಿಗುತ್ತದೆ ಎನ್ನಲಾಗಿದೆ. ಹಿಂದೂ ಪಂಚಾಂಗದ 5ನೇ ಮಾಸವಾದ ಶ್ರಾವಣ ಮಾಸವು (ಜುಲೈ 29ರಿಂದ ಆಗಸ್ಟ್ 27) ಶಿವನಿಗೆ ಸಮರ್ಪಿಸಲಾಗಿದೆ. ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಹಾಗೂ ಶಿವ ಒಲಿದು ಬೇಡಿದನ್ನು ನೀಡುತ್ತಾನೆ ಎಂಬ ನಂಬಿಕೆ ಇದೆ. ಈ ತಿಂಗಳಲ್ಲಿ ಬರುವ ಹಬ್ಬ ಹಾಗೂ ವ್ರತಗಳು ಬಹುತೇಕವಾಗಿ ಶಿವ-ಪಾರ್ವತಿಗೆ ಮೀಸಲು.

ಶ್ರಾವಣ ಎಂದರೇನು?

ಈ ತಿಂಗಳಲ್ಲೇ ಹೆಚ್ಚಾಗಿ ಸಾಲು ಸಾಲು ಧಾರ್ಮಿಕ ಪೂಜೆ, ಹಬ್ಬ-ಹರಿ ದಿನಗಳು ಬರುತ್ತವೆ. ಜೊತೆಗೆ ಒಳ್ಳೆಯ ಕಾರ್ಯಗಳನ್ನು ಆರಂಭಿಸಲು ಈ ತಿಂಗಳು ಹೆಚ್ಚು ಪ್ರಶಸ್ತವಾಗಿದೆ. ಆಷಾಡ ಮಾಸದ ಬಳಿಕ ಬರುವ ಹುಣ್ಣಿಮೆಯ ನಂತರ ಶ್ರವಣ ಎನ್ನವ ನಕ್ಷತ್ರ ಆಕಾಶವನ್ನು ಆಳುತ್ತದೆ. ಆದ್ದರಿಂದ ಈ ಮಾಸಕ್ಕೆ ಶ್ರಾವಣ ಮಾಸ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಶ್ರಾವಣ ಎಂದರೆ ಆಲಿಸುವುದು ಎಂದರ್ಥ. ಹೀಗಾಗಿ ಈ ಶ್ರಾವಣ ಮಾಸದಲ್ಲಿ ಹೆಚ್ಚಾಗಿ ಪುರಾಣ ಪ್ರವಚನಗಳನ್ನು ಆಲಿಸಬೇಕು. ಶಿವನ ಕುರಿತಾದ ಸ್ತೋತ್ರ ಪಠನೆ, ಧ್ಯಾನ ಮಾಡಬೇಕು.

ಶ್ರಾವಣ ತಿಂಗಳಲ್ಲಿ ಪ್ರಕೃತಿಯಲ್ಲೂ ಕೆಲ ಬದಲಾವಣೆಗಳು ಆಗುತ್ತವೆ. ಈ ತಿಂಗಳಲ್ಲಿ ಹೂಗಳು ಜಾಸ್ತಿ ಬೆಳೆಯುವುದರಿಂದ ಈ ಮಾಸದಲ್ಲಿಯೇ ಚೂಡಿಪೂಜೆ (ಹೂವಿನ ಪೂಜೆ) ನಡೆಯುತ್ತದೆ. ಈ ಪೂಜೆಗೆ 11 ಬಗೆಯ ಹೂಗಳನ್ನು ಬಳಸುತ್ತಾರೆ. ಶ್ರಾವಣ ಮಾಸದಲ್ಲಿ ಈ ಚೂಡಿಯ ತುಳಸಿಗೆ ಪೂಜೆ ಮಾಡುವುದರಿಂದ ಸರ್ವ ಕಷ್ಟವೂ ದೂರವಾಗುತ್ತದೆ, ಸರ್ವರೋಗ ನಿವಾರಣೆಯಾಗುತ್ತದೆ ಅನ್ನೋ ನಂಬಿಕೆ ಇದೆ.

ಶ್ರಾವಣ ಮಾಸದಲ್ಲಿ ಶಿವನಿಗೇಕೆ ಆಧ್ಯತೆ?

ಸಮುದ್ರ ಮಂಥನದ ಸಂದರ್ಭದಲ್ಲಿ ಅಮೃತಕ್ಕಾಗಿ ದೇವತೆಗಳು ಮತ್ತು ದಾನವರು ಕಾದಾಡುವಾಗ 14 ಬೇರೆ ಬೇರೆ ರತ್ನಗಳು ಬರುತ್ತವೆ. ಈ ಪೈಕಿ 13 ರತ್ನಗಳನ್ನು ದೇವತೆಗಳು, ದಾನವರು ಹಂಚಿಕೊಳ್ಳುತ್ತಾರೆ. ಉಳಿದ ಒಂದು ರತ್ನವೇ ಹಾಲಾಹಲ. ಜಗತ್ತನ್ನೇ ನಾಶ ಮಾಡುವ ಶಕ್ತಿ ಇದ್ದ ಹಾಲಾಹಲವನ್ನು ಲೋಕದ ಕಲ್ಯಾಣಕ್ಕಾಗಿ ಭಗವಾನ್ ಶಿವನು ಹಲಾಹಲಾ ವಿಷವನ್ನು ಕುಡಿಯುತ್ತಾನೆ. ಪಾರ್ವತಿ ದೇವಿ ಗಂಟಲನ್ನು ಒತ್ತಿ ಹಿಡಿದ ಕಾರಣ ಹಾಲಾಹಲವು ಗಂಟಲಲ್ಲೇ ಉಳಿದುಕೊಳ್ಳುತ್ತದೆ. ಹೀಗಾಗಿ ಶಿವ ನೀಲಕಂಠನಾಗುತ್ತಾನೆ. ಜಗತ್ತಿನ ಉಳಿವಿಗಾಗಿ ಶಿವ ಹಾಲಾಹಲವನ್ನು ಕುಡಿದದ್ದು ಇದೇ ಶ್ರಾವಣ ಮಾಸದಲ್ಲಿ. ಹೀಗಾಗಿ ಈ ಮಾಸಕ್ಕೆ ಹೆಚ್ಚಿನ ಶಕ್ತಿ ಇದೆ.

ಶಿವನ ಮುಡಿ ಏರಿದ ಚಂದ್ರ ಪ್ರಜಾಪತಿ ದಕ್ಷನ ಶಾಪದಂತೆ ಚಂದ್ರ ದೇವನ ದೇಹ ವಿಷವಾಗುತ್ತೆ, ಆರೋಗ್ಯ ಹದಗೆಡುತ್ತೆ. ಈ ವೇಳೆ ವಿಷದ ಬಲವಾದ ಪರಿಣಾಮ ಕಡಿಮೆ ಮಾಡಲು ಶಿವನು ಅರ್ಧ ಚಂದ್ರವನ್ನು ತನ್ನ ತಲೆಯ ಮೇಲೆ ಧರಿಸುತ್ತಾನೆ. ನಂತರ ಎಲ್ಲಾ ದೇವರುಗಳು ಶಿವನಿಗೆ ಗಂಗಾ ನೀರನ್ನು ಅರ್ಪಿಸುತ್ತಾರೆ. ಅಂದಿನಿಂದಲೇ ಶ್ರಾವಣ ಮಾಸ ಸಂಭವಿಸಿತ್ತು. ಹೀಗಾಗಿ ಭಕ್ತರು ಶಿವನಿಗೆ ಈ ತಿಂಗಳಲ್ಲಿ ಗಾಂಗಾ ನೀರನ್ನು ಎರೆದು ಭಕ್ತಿಯನ್ನು ತೋರಿಸುತ್ತಾರೆ. ಅಲ್ಲದೆ ವಾಲ್ಮಿಕಿಯ ಅವತಾರವೆನ್ನುವ ಹನುಮಾನ್ ಚಾಲೀಸ ರಚಿಸಿದ ತುಲಸೀದಾಸರು ಕೂಡ ಹುಟ್ಟಿದ ತಿಂಗಳು ಇದುವೇ.

ರುದ್ರಾಕ್ಷಿ ಧರಿಸಿದ್ರೆ ಶುಭವಾಗುತ್ತೆ ಇನ್ನು ಶ್ರಾವಣದಲ್ಲಿ ರುದ್ರಾಕ್ಷಿಯ ಹಾರ, ಓಲೆ ಧರಿಸುವುದು ಅತ್ಯಂತ ಶುಭ ಎನ್ನಲಾಗಿದೆ. ಶ್ರಾವಣ ಸೋಮವಾರದ ವ್ರತ ಮಾಡುವುದು. ರುದ್ರಾಕ್ಷಿಯ ಹಾರ ಧರಿಸುವುದು ಅತ್ಯಂತ ಶ್ರೇಷ್ಠ.

ಶ್ರಾವಣದಲ್ಲಿ ಆಚರಿಸುವ ವ್ರತಗಳು

1) ಏಕ ಭುಕ್ತವ್ರತ. 2) ಮಂಗಳ ಗೌರಿ ವ್ರತ. 3) ಬುಧ,ಭ್ರಹಸ್ಪತಿ ವ್ರತ. 4) ಜೀವಂತಿಕಾ ವ್ರತ. 5) ಶನೇಶ್ವರ ವ್ರತ. 6) ರೋಟಿಕಾ ವ್ರತ. 7) ದೂರ್ವಾಗಣಪತಿ ವ್ರತ. 8) ಅನಂತ ವ್ರತ. 9) ನಾಗಚತುರ್ಥಿ 10) ನಾಗ ಪಂಚಮಿ 11) ಗರುಡ ಪಂಚಮಿ. 12) ಸಿರಿಯಾಳ ಷಷ್ಟಿ. 13) ಅವ್ಯಂಗ ವೃತ. 14) ಶೀತಲಾಸಪ್ತಮಿ ವ್ರತ. 15) ಪುತ್ರದಾ ಏಕಾದಶಿ ವ್ರತ. 16) ಪವಿತ್ರಾರೋಪಣವೃತ 17) ದುರ್ಗಾಷ್ಟಮಿ. 18) ಕೃಷ್ಣಾಷ್ಟಮಿ. 19) ವಾಮನ ಜಯಂತಿ. 20) ಅಗಸ್ತ್ಯಾರ್ಘ್ಯ 21) ಮಹಾಲಕ್ಷ್ಮೀವ್ರತ.

ಸಂಗ್ರಹ:- ಜಗದೀಶ ಬಳಿಗಾರ ಗೋಕಾಕ
[29/07, 8:03 AM] Pandit Venkatesh. Astrologer. Kannada: ಗುರುವಿನ ಮಹಿಮೆ
ಪರಮಾತ್ಮನಿಗೆ ಎರಡು ರೀತಿಯ ಅವತಾರಗಳಿವೆ. ಒಂದು ಕ್ರಿಯಾಶಕ್ತಿ ಮತ್ತೊಂದು ಜ್ಞಾನಶಕ್ತಿ. ವಿಷ್ಣುವಿನ ಮತ್ಸ್ಯಾದಿ ಹತ್ತು ಅವತಾರಗಳನ್ನು ಕ್ರಿಯಾಶಕ್ತಿಯ ಅವತಾರಗಳೆಂದು ಹೇಳಬಹುದು. ಆ ಅವತಾರಗಳು ಮುಖ್ಯವಾಗಿ ತಮ್ಮ ಕ್ರಿಯೆಯ ಮೂಲಕ ಲೋಕಕ್ಕೆ ಉಪಕಾರವನ್ನು ಮಾಡಿ, ಸಂತಸವನ್ನು ತಂದಿದ್ದಾರೆ. ಜ್ಞಾನಶಕ್ತಿಯ ಅವತಾರೀ ಪುರುಷರೆಂದರೆ ಕೃತಯುಗದಲ್ಲಿ ದಕ್ಷಿಣಾಮೂರ್ತಿ, ತ್ರೇತೆಯಲ್ಲಿ ದತ್ತಾತ್ರೇಯ, ದ್ವಾಪರದಲ್ಲಿ ವೇದವ್ಯಾಸ, ಕಲಿಯುಗದಲ್ಲಿ ಶಂಕರರೇ ಮುಂತಾದ ಜ್ಞಾನದೀವಿಟೆಗಳು. ಗುರುಪರಂಪರೆಯಲ್ಲಿ ಅಗ್ರೇಸರರೇ ದಕ್ಷಿಣಾಮೂರ್ತಿ. ದಕ್ಷಿಣಾಮೂರ್ತಿಯ ಕೃಪಾಕಟಾಕ್ಷವೇ ಅದ್ಭುತ. ಈ ಮಹಾತ್ಮನ ನೆನಪೇ ಅಜ್ಞಾನವನ್ನು ಹೋಗಿಸುವಂತಹ ಅಪ್ರತಿಮವಾದ ಸೂರ್ಯಪ್ರಕಾಶ ಇದ್ದಂತೆ, ಜೊತೆಗೆ ಭವರೋಗವನ್ನು ಹೋಗಿಸುವ ವೈದ್ಯರಿಗೆ ವೈದ್ಯನಾದ, ಸಕಲರಿಗೂ ಜ್ಞಾನವನ್ನು ಹಂಚುವ ಆ ಮಹಾತ್ಮನನ್ನಲ್ಲದೆ, ಇನ್ಯಾರಿಗೆ ತಾನೆ ನಾವು ಪ್ರಾತಃಕಾಲದಲ್ಲಿ ನಮಿಸೋಣ.
ಗುರುವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಂ |
ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ ||
ಕೆಲಸವನ್ನು ಸಾಧಿಸಲು ಗುರಿ ಬಹಳ ಮುಖ್ಯ. ಗುರಿಯನ್ನು ತಲುಪಲು ಸಹಾಯ ಮಾಡುವ, ನಮ್ಮೊಡನೆ ಸದಾ ಬೆಂಗಾವಲಾಗಿದ್ದು ಮೇಲಕ್ಕೆತ್ತುವ ಮಹಾತ್ಮನೇ ಗುರು. ಆದರ್ಶ ಪುರುಷರಾಗಿರುವ ರಾಮ, ಕೃಷ್ಣ, ಛತ್ರಪತಿ ಶಿವಾಜಿ, ಚಂದ್ರಗುಪ್ತ ಮೌರ್ಯ, ಹಕ್ಕ-ಬುಕ್ಕ ಮುಂತಾದವರನ್ನು ಮನಸ್ಸಿಗೆ ತಂದುಕೊಂಡಾಗ ಅವರ ಹಿಂದೆ ಇದ್ದು, ಅವರಿಗೆ ಸಕಲವಿಧವಾದ ಶ್ರೇಯಸ್ಸನ್ನು ಬಯಸಿ, ಅವರಿಂದ ಲೋಕಸಂಗ್ರಹ ಮಾಡಿಸಿದ ಗುರುಗಳು ಜ್ಞಾಪಕವಾಗದೇ ಇರಲು ಸಾಧ್ಯವೇ ಇಲ್ಲ. ವಸಿಷ್ಠ, ವಿಶ್ವಾಮಿತ್ರರು ರಾಮನಿಗೆ ಸಕಲ ವಿದ್ಯೆಯನ್ನು ಧಾರೆಯೆರೆದರೆ, ಕೃಷ್ಣ ಸಾಂದೀಪನಿಯವರಿಂದ ಕೃತಕೃತ್ಯನಾದ.
ದೇಶವು ಪಾಶ್ಚಿಮಾತ್ಯ ಸಂಸ್ಕೃತಿಯಿಂದ ತತ್ತರಿಸಿದಾಗ ಸಮರ್ಥ ರಾಮದಾಸರು ಬಂದು ಶಿವಾಜಿಯನ್ನೂ, ಶೃಂಗಗಿರಯ ಮಹಾನುಭಾವರಾದ ವಿದ್ಯಾರಣ್ಯರು ಹಕ್ಕ-ಬುಕ್ಕರನ್ನೂ ಪ್ರೇರೇಪಿಸಿ, ಸಾಯಣಾದಿಗಳನ್ನು ಹುರಿದುಂಬಿಸಲು ಹೇಳುವ, "ಏಳು ಸಾಯಣ, ಕಟ್ಟು ಗ್ರಂಥವ, ಹೊರಡು ಪಂಪಾಕ್ಷೇತ್ರಕೆ" ಮಾತುಗಳು ನಮ್ಮಗಳಿಗೆಲ್ಲ ವೇದಮಂತ್ರವಾಗಿ ಮೊಳಗಿದೆ. ರಾಮಕೃಷ್ಣಾದಿಗಳಿಗಾಗಲೀ, ಶಿವಾಜಿ ಹಕ್ಕ-ಬುಕ್ಕರಿಗಾಗಲೀ ಶಕ್ತಿ ಇರಲಿಲ್ಲವೆಂದಲ್ಲ. ಗುರುವಿನ ವಾಣಿ, ಮಂಕಾಗಿರುವ ಆಲಸ್ಯದಿಂದ ಕೂಡಿರುವ, ಉದ್ಭೋಧಗೊಳ್ಳದ ಚೈತನ್ಯವನ್ನು ಬಡಿದೆಬ್ಬಿಸುವ ಸಾಮರ್ಥ್ಯವನ್ನು ಪಡೆದಿರುತ್ತದೆ. ಅಂತಹ ಗುರುಗಳ ತಪಃಶಕ್ತಿಯನ್ನಾಗಲೀ, ಅನುಕಂಪವನ್ನಾಗಲೀ, ಪ್ರತಿಭೆಯನ್ನಾಗಲೀ, ಪ್ರಸನ್ನತೆಯನ್ನಾಗಲಿ ಅಳೆಯಲು ನಮ್ಮಿಂದ ಹೇಗೆ ತಾನೆ ಸಾಧ್ಯ.
ಶಂಕರರ ಜೀವನವನ್ನು ಒಂದು ಸಲ ಅವಲೋಕಿಸೋಣ. ಜನ್ಮತಃ ಮೇಧಾವಿಗಳು. ಅಂತಹವರು ಗುರುಗಳನ್ನು ಅರಸುತ್ತಾ ನರ್ಮದಾ ತೀರಕ್ಕೆ ಹೋಗುತ್ತಾರೆ. ಅಲ್ಲಿ ಗೋವಿಂದ ಭಗವತ್ಪಾದರನ್ನು ಕಾಣುತ್ತಾರೆ. ಅವರನ್ನು ತಮ್ಮ ಗುರುವನ್ನಾಗಿ ಅಂಗೀಕರಿಸಿ ಕೊಳ್ಳುತ್ತಾರೆಂದರೆ, ಇದಕ್ಕಿಂತಲೂ ಬೇರೆ ಉದಾಹರಣೆ ನಮಗೆ ಬೇಕೆ? ಹೀಗೆ ಜೀವನದಲ್ಲಿ ಮೇಲಕ್ಕೇರಬೇಕಾದರೆ ಒಬ್ಬ ಗುರುವು ಬೇಕೇ ಬೇಕು. ಜೀವನದಲ್ಲಿ ಬರುವ ಅನೇಕ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ಗುರುವಿಗಿರುತ್ತದೆ. ಜೊತೆಗೆ ಜ್ಞಾನದಾಹವನ್ನು ನೀಗಿಸುವ ಚಿಲುಮೆಯೂ ಗುರುವಾಗಿರುತ್ತಾನೆ. ಅಜ್ಞಾನ, ಅಹಂಕಾರ ಐಶ್ವರ್ಯಾದಿಗಳಿಂದ ತುಂಬಿದ ಜಗತ್ತಿನ ಈ ತಮಸ್ಸನ್ನು ಗುರುವಲ್ಲದೆ ಯಾರು ತಾನೇ ಕಳೆಯುವರು! ಶಂಕರರಿಗೆ ನಾಲ್ವರು ಶಿಷ್ಯಂದಿರು. ಪದ್ಮಪಾದ, ಹಸ್ತಾಮಲಕ, ಸುರೇಶ್ವರ, ತ್ರೋಟಕ ಎಂದು. ತ್ರೋಟಕರು ಅಷ್ಟಾಗಿ ಪಂಡಿತರಲ್ಲ. ಆದರೆ ಗುರು ಶಂಕರರ ಮೇಲೆ ಅಗಾಧವಾದ ಭಕ್ತಿ!. ಒಂದು ಸಲ ಪಾಠ-ಪ್ರವಚನ ನಡೆಯುವಾಗ ತ್ರೋಟಕ ಇನ್ನೂ ಬಂದಿರಲಿಲ್ಲ. ಶಿಷ್ಯರಲ್ಲೊಬ್ಬರು - "ಆಚಾರ್ಯರೇ! ಸಮಯವಾಯ್ತು. ತ್ರೋಟಕನಿಗೆ ಭಾಷ್ಯಪಾಠ ಅರ್ಥವಾಗುವುದಿಲ್ಲ. ಈ ಕಂಬವನ್ನೇ ಅವನೆಂದು ಭಾವಿಸೋಣ. ಪಾಠ ಪ್ರಾರಂಭಿಸಬಹುದಲ್ಲ!" ಎಂದಾಗ, ಶಂಕರರಿಗೆ ತ್ರೋಟಕರ ಬಗ್ಗೆ ಮನಸ್ಸು ಕರಗಿ ʼಸರ್ವಜ್ಞನಾಗಲಿʼ ಎಂದು ಹರಸಿದರಂತೆ. ನದಿಯಲ್ಲಿ ಗುರುಗಳ ವಸ್ತ್ರವನ್ನು ಕ್ಷಾಲನೆ ಮಾಡುತ್ತಿದ್ದ ತ್ರೋಟಕರಿಗೆ ಜ್ಞಾನೋದಯವಾಗಿ "ಹೃದಯೇ ಕಲಯೇ ವಿಮಲಂ ಚರಣಂ ಭವ ಶಂಕರದೇಶಿಕ ಮೇ ಶರಣಂ ಅತಿದೀನಮಿಮಂ ಪರಿಪಾಲಯ ಮಾಂ ಭವ ಶಂಕರದೇಶಿಕ ಮೇ ಶರಣಂ" (ಹೇ ಶಂಕರ ಗುರೋ! ನನ್ನನ್ನು ಕಾಪಾಡು) ಎಂದು ಗದ್ಗದಿತನಾಗಿ ಹಾಡುತ್ತ ಬಂದಿದ್ದನ್ನು ಕಂಡು ಉಳಿದವರು ತಮ್ಮ ಗರ್ವವನ್ನು ಕಳೆದುಕೊಂಡು ವಿಸ್ಮಿತರಾದರಂತೆ. ಹೀಗಿರುವಾಗ ಗುರುವಿನ ಕೃಪಾಕಟಾಕ್ಷದ ಬಗ್ಗೆ ಏನು ತಿಳಿಸೋಣ? ಜೀವನದಲ್ಲಿ ಮಾತಾಪಿತೃಗಳೇ ಸರ್ವಸ್ವ! ಪಾಲಿಸಿ, ಪೋಷಿಸಿ ನಮ್ಮನ್ನು ಮುಂದಕ್ಕೆ ನಡೆಸಿರುತ್ತಾರೆ. ಅಂತಹ ನಮಗೆ ಜೀವನದಲ್ಲಿ ʼಸದ್ಗುರುʼ ದೊರಕುವುದಾದರೆ, ಅಂತಹ ಸದ್ಗುರುವಿನಿಂದ ಜ್ಞಾನೋದಯವಾದರೆ, ಆ ಗುರುವಿನ ಸ್ಥಾನವನ್ನು ಬೇರೆ ಯಾರಿಂದ ತಾನೆ ತುಂಬಲು ಸಾಧ್ಯ! ದತ್ತಾತ್ರೇಯ, ವೇದವ್ಯಾಸರು ಅಂತಹ ಸ್ಥಾನದಲ್ಲಿರುವವರು.
ಆಚತುರ್ವದನೋ ಬ್ರಹ್ಮಾ ದ್ವಿಬಾಹುರಪರೋ ಹರಿಃ  | ಅಫಾಲಲೋಚನಃ ಶಂಭುಃ ಭಗವಾನ್‌ ಬಾದರಾಯಣಃ || 
ವೇದವ್ಯಾಸರು ಮಾನವ ಕಲ್ಯಾಣಕ್ಕಾಗಿ ವೇದವನ್ನು ವಿಭಾಗ ಮಾಡಿದ್ದಾರೆ. ಮಹಾಭಾರತಾದಿ ಗ್ರಂಥಗಳನ್ನು ನಿರ್ಮಿಸಿದ್ದಾರೆ. ಸ್ವಾರ್ಥದ ಲವಲೇಶವಿಲ್ಲದೆ, ಪರೋಪಕಾರಕ್ಕಾಗಿಯೇ ಜೀವನವನ್ನು ಸವೆಸಿದ ಕೃಷ್ಣ-ಪಾಂಡವರಂತಹ ಮಹಾತ್ಮರನ್ನು ಸೃಷ್ಟಿಸಿ, ಬ್ರಹ್ಮನ ಕೆಲಸ ಮಾಡಿದ್ದಾರೆ. ಕೃಷ್ಣನಿಂದ, ಪಾಂಡವರಿಂದ ವರ್ಣಾಶ್ರಮಗಳನ್ನು ಕಾಪಾಡಿಸುವ ಕಾರ್ಯ ಮಾಡಿಸಿ, ದುಷ್ಟ ಶಿಕ್ಷಣ, ಶಿಷ್ಟರಕ್ಷಣೆ ಮಾಡಿ ನಾಲ್ಕು ಕೈಗಳಿಲ್ಲದಿದ್ದರೂ ವಿಷ್ಣುವೇ ಆಗಿದ್ದಾರೆ. ದುಷ್ಟರನ್ನು ಸಂಹಾರ ಮಾಡಿ, ಮಹಾತ್ಮರಿಗೆ ಶಾಂತಿಯನ್ನೂ, ಮಂಗಳವನ್ನೂ ತಂದೂ ಮೂರನೆಯ ಕಣ್ಣಿಲ್ಲದ ಶಂಭುವಾಗಿ ಲೋಕೈಕ ಗುರುವಾಗಿ ವೇದವ್ಯಾಸರು ಮೆರೆದಿದ್ದಾರೆ. ಆದ್ದರಿಂದಲೇ ಮತ್ತೆ ಮತ್ತೆ ವೇದೋಪನಿಷತ್ತುಗಳು ʼಆಚಾರ್ಯದೇವೋಭವʼ ʼಸಮಿತ್‌ ಪಾಣಿಃ ಆಚಾರ್ಯಮೇವಾಭಿಗಚ್ಛೇತ್‌ʼ ಎಂದು ಸಾರಿರುವುದು. ಇಂತಹ ಮಹಾನುಭಾವನ ಸಕಲವಿಧ ಶ್ರೇಷ್ಠತೆಯನ್ನು, ಜ್ಞಾನ ಪ್ರಚಾರವನ್ನೂ ಮನಗಂಡ ಭಾರತೀಯ ಋಷಿಮುನಿಗಳು ಆಷಾಢ ಪೂರ್ಣಿಮೆಯನ್ನು ʼಗುರು ಪೂರ್ಣಿಮೆʼ ಎಂದು ಕೊಂಡಾಡಿ - ತನ್ನ ಕೃತಜ್ಞತೆಗಳನ್ನು ಇಂದಿಗೂ ಸಲ್ಲಿಸುತ್ತ ಬಂದಿದೆ. ಇಂತಹ ಪರಂಪರೆಯಲ್ಲಿ ಬಂದರೂ, ಇಂದು ಅಂತಹ ಗುರುಗಳನ್ನು ಪಡೆಯಲು, ಗುರುಗಳನ್ನು ಪತ್ತೆ ಹಚ್ಚಿ ಅವರುಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ವಿಮುಖರಾಗುತ್ತಿದ್ದೇವೆ. ನಮ್ಮ ವಿದ್ಯಾರ್ಥಿವೃಂದವನ್ನು ಮುಂಚೂಣಿಯಲ್ಲಿ ನಡೆಸಲು ನಮಗೆ ಆಗುತ್ತಿಲ್ಲ. ಅವರಲ್ಲಿ ದಮ-ಶಮಾದಿಗಳನ್ನು ಉಂಟು ಮಾಡಿ, ಪಾಠ-ಪ್ರವಚನಗಳಲ್ಲಿ ತತ್ಪರರನ್ನಾಗಿ ಮಾಡುವುದೇ ಶಿಕ್ಷಕವೃಂದದ ಮುಖ್ಯ ಕೆಲಸವಾಗಿದೆ. ಶಿಕ್ಷಕರು ವ್ಯಾಪಾರಿಗಳಾಗಬಾರದು. ಅವರು ನಮ್ಮ ಸಂಸ್ಕೃತಿಯನ್ನು ಸಾರುವ ಜ್ಞಾನದೀಪಗಳಾಗಬೇಕು. ಕಾಳಿದಾಸನು ಮಾಲವಿಕಾಗ್ನಿಮಿತ್ರಮ ನಾಟಕದಲ್ಲಿ ತುಂಬ ಮಾರ್ಮಿಕವಾಗಿ ಮೇಲಿನಂತೆ ಗಣದಾಸನ ಮೂಲಕ ಹೇಳಿಸುತ್ತಾನೆ. ಯಸ್ಯಾಗಮಃ ಕೇವಲ ಜೀವಿಕಾಯೈ | ತಂ ಜ್ಞಾನಪಣ್ಯ ವಣಿಜಂ ವದಂತಿ || ಎಂದು.
ಆದ್ದರಿಂದ ಮಹಾನುಭಾವರ ಸಾಲಿನಲ್ಲಿ ಬಂದ ಈ ಆಚಾರ್ಯರು ವಿದ್ಯಾರ್ಥಿಗಳಲ್ಲಿ, ಜನಗಳಲ್ಲಿ ಶಿಸ್ತು, ಸಂಯಮ, ಭಗವದ್ಭಕ್ತಿ, ಸತ್ಕಥಾಶ್ರವಣ, ಪಾಠ ಪ್ರವಚನಗಳಲ್ಲಿ ಆಸಕ್ತಿಯನ್ನು ಹುರಿದುಂಬಿಸಲು. ತಮ್ಮ ಹೆಸರನ್ನು ಅನ್ವರ್ಥವಾಗಿಸಿಕೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಲಿ, ನಾಗರಿಗೆ, ಪಾಶ್ಚಾತ್ಯ ಸಂಸ್ಕೃತಿಯ ಒತ್ತಡ, ಸಿನಿಮಾ, ಟಿವಿ ಮಾಧ್ಯಮಗಳಿಂದ, ಅವರಲ್ಲಿ ಕೆಲವು ನ್ಯೂನತೆಗಳು ಬಂದಿರಬಹುದು. ಒಬ್ಬ ಉತ್ತಮ ಗುರುವಿನ ಪ್ರಚೋದನೆಯಿಂದ ವಿದ್ಯಾರ್ಥಿಗಳ   ಜೀವನ ಹಸನಾಗುವುದರಲ್ಲಿ ಸಂಶಯವಿಲ್ಲ. ವಿದ್ಯಾರ್ಥಿ ಆಚಾರ್ಯನಿಂಗ ಕಾಲುಭಾಗ ವಿದ್ಯೆಯನ್ನು - ಸಂಸ್ಕಾರವನ್ನೂ ಪಡೆದು, ಉಳಿದಿರುವುದನ್ನು ತನ್ನ ಮೇಧೆಯಿಂದ, ಸಹಪಾಠಿಗಳಿಂದ, ಕಾಲದಿಂದ ಕಲಿಯುತ್ತಾನೆ.
ಆಚಾರ್ಯಾತ್‌ ಪಾದಮಾದತ್ತೇ ಪಾದಂ ಶಿಷ್ಯಃ ಸ್ವಮೇಧಯಾ | ಪಾದಂ ಸಬ್ರಹ್ಮಚಾರಿಭ್ಯಃ ಪಾದಂ ಕಾಲಕ್ರಮೇಣ ಚ|| 
ಇಂದು ವಿದ್ಯಾರ್ಥಿಗಳು ವಾತ್ಸಲ್ಯ- ಹಿತಗಳಿಂದ ವಂಚಿತರಾಗುತ್ತಿದ್ದಾರೆ. ಒಂದು ವೇಳೆ ಅಧ್ಯಾಪಕನಾಗಲಿ, ಆಚಾರ್ಯನಾಗಲೀ, ಗುರುವಾಗಲೀ ಮಾತೃಪ್ರೇಮ, ತಂದೆಯ ಹಿತ, ಗುರುಪರಂಪರೆಯ ಜ್ಞಾನ, ಇವುಗಳನ್ನು ತನ್ನಲ್ಲಿ ಅಳವಡಿಸಿಕೊಂಡಲ್ಲಿ ವಿದ್ಯಾರ್ಥಿಗಳ ಮನಸ್ಸನ್ನು ಅಪಹರಿಸಿ ನಿಜವಾದ ಮಾರ್ಗದರ್ಶಕನಾಗುತ್ತಾನೆ.
ಆನಂದಮಾನಂಜತಕರಂ ಪ್ರಸನ್ನಮ ಜ್ಞಾನಸ್ವರೂಪಂ ನಿಜಬೋಧಯುಕ್ತಂ |
ಯೋಗೀಂದ್ರಮೀಡ್ಯಂ ಭವರೋಗ ವೈದ್ಯಂ ಶ್ರೀಮದ್ಗುರುಂ ನಿತ್ಯಮಹಂನಮಾಮಿ ||
ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ |
ತತ್‌ ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||

ಶ್ರೀಕೃಷ್ಣಾರ್ಪಣಮಸ್ತು


ಸಂಗ್ರಹ

Post a Comment

Previous Post Next Post