[01/08, 6:48 AM] Pandit Venkatesh. Astrologer. Kannada: *ಆಗಸ್ಟ್ 2022 ರಲ್ಲಿ ನಾವು ಹಿಂದೂಗಳು ಆಚರಿಸಲಾಗುವ ಹಬ್ಬಗಳ ಬಗ್ಗೆ ಒಂದು ಮಾಹಿತಿ*
ಹಬ್ಬಗಳ ಮಾಸ ಆಗಸ್ಟ್ ಮಾಸ. ಈ ತಿಂಗಳಲ್ಲಿ ಅನೇಕ ಪ್ರಸಿದ್ಧ ಹಬ್ಬಗಳನ್ನು ಆಚರಿಸಬಹುದಾಗಿದೆ. ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳಾವುವು ಗೊತ್ತಾ..? ಇಲ್ಲಿದೆ ಆಗಸ್ಟ್ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳು.
2022 ರ ಆಗಸ್ಟ್ ತಿಂಗಳು ಶ್ರಾವಣ ಮಾಸದ ಶುಕ್ಲ ಪಕ್ಷದ ಚತುರ್ಥಿ ಯೊಂದಿಗೆ ಪ್ರಾರಂಭವಾಗುತ್ತದೆ. 2022 ರ ಆಗಸ್ಟ್ ಮಾಸದ ಮೊದಲ ದಿನವೇ *ನಾಗ ಚತುರ್ಥಿ* ಆಚರಣೆ, ಮೊದಲನೆಯ ಶ್ರಾವಣ ಸೋಮವಾರ ಆರಂಭವಾಗುತ್ತದೆ. ನಂತರ ನಾಗರ ಪಂಚಮಿ, ಶಿರಿಯಾಳ ಷಷ್ಠೀ, ವರ ಮಹಾಲಕ್ಷ್ಮೀ ವ್ರತ, ರಕ್ಷಾಬಂಧನ, ಶ್ರೀ ಕೃಷ್ಣ ಜನ್ಮಾಷ್ಟಮಿ, ಸ್ವಾತಂತ್ರ್ಯ ದಿನಾಚರಣೆ, ಗಣೇಶ ಚತುರ್ಥಿ ಸೇರಿದಂತೆ ವಿವಿಧ ಹಬ್ಬ ಹರಿದಿನಗಳನ್ನು ಈ ಮಾಸದಲ್ಲಿ ಆಚರಿಸಲಾಗುತ್ತದೆ. ಆಗಸ್ಟ್ ಮಾಸವು ಧಾರ್ಮಿಕವಾಗಿ, ಸಾಮಾಜಿಕವಾಗಿ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದ ಮಾಸವಾಗಿದೆ.
*ನಾಗ ಚೌತಿ* :- ನಾಗದೇವತೆಗಳನ್ನು ಪೂಜಿಸುವ ಹಬ್ಬವಾದ ನಾಗ ಚವಿತಿಯು ಮುಖ್ಯವಾಗಿ ಮಹಿಳೆಯರ ಹಬ್ಬವಾಗಿದೆ. ನಾಗ ಚೌತಿಯನ್ನು ವಿವಾಹಿತ ಮಹಿಳೆಯರು ತಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ ಆಚರಿಸುತ್ತಾರೆ. ಚೌತಿ ಹಬ್ಬದಲ್ಲಿ ಮಹಿಳೆಯರು ಉಪವಾಸವಿದ್ದು ನಾಗಪೂಜೆಯನ್ನು ಆಚರಿಸುತ್ತಾರೆ. ವಾಲ್ಮೀಕಂ ಅಥವಾ ಹುತ್ತ ದಲ್ಲಿ ಸರ್ಪ ದೇವತೆಗೆ ಭಕ್ತರು ಹಾಲು ಮತ್ತು ಒಣ ಹಣ್ಣುಗಳನ್ನು ಅರ್ಪಿಸುತ್ತಾರೆ. ನಾಗ ಚತುರ್ಥಿಯ ದಿನದಂದು, ಅಷ್ಟನಾಗವನ್ನು ಪೂಜಿಸಲಾಗುತ್ತದೆ.
*ದೂರ್ವಾ ಗಣಪತಿ ವ್ರತ* :- ವಿಘ್ನ ವಿನಾಶಕ ಗಣಪತಿಯನ್ನು ಹಲವು ಬಗೆಯಲ್ಲಿ ವ್ರತದ ಮೂಲಕ ಪೂಜಿಸಬಹುದು. ಇದರಲ್ಲಿ ತುಂಬಾ ವಿಶಿಷ್ಟವಾದದ್ದು ದೂರ್ವ ಗಣಪತಿ ವ್ರತ. ಆರ್ಥಿಕ ತೊಂದರೆಗಳು ನಿವಾರಣೆಯಾಗಲು ಈ ವ್ರತವನ್ನು ಮಾಡುತ್ತಾರೆ.
*ಆಗಸ್ಟ್ 2, ಮಂಗಳವಾರ - ನಾಗರ ಪಂಚಮಿ*
ನಾಗ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲಾ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ ಮತ್ತು ಈ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಇದೆ.
*ಶ್ರಾವಣ ಸೋಮವಾರ - ಶಿವನ ಪೂಜೆ* ಆಗಸ್ಟ್ 1 - ಸೋಮವಾರ ಆಗಸ್ಟ್ 8 - ಸೋಮವಾರ ಆಗಸ್ಟ್ 15 - ಸೋಮವಾರ ಆಗಸ್ಟ್ 22 - ಸೋಮವಾರ ಆಗಸ್ಟ್ 29 - ಸೋಮವಾರ ಶ್ರಾವಣ ಮಾಸದಲ್ಲಿ ಸರ್ವಶಕ್ತ ಭಗವಾನ್ ಶಿವನನ್ನು ಪೂಜಿಸುವುದರಿಂದ ಆಧ್ಯಾತ್ಮಿಕ ಶುದ್ಧೀಕರಣದ ಸಾಧನೆ ಸೇರಿದಂತೆ ಭಕ್ತರಿಗೆ ವಿವಿಧ ಆಶೀರ್ವಾದಗಳು ದೊರೆಯುತ್ತದೆ. ಈ ತಿಂಗಳಲ್ಲಿ, ಪ್ರತಿ ಸೋಮವಾರವನ್ನು ಎಲ್ಲಾ ದೇವಾಲಯಗಳಲ್ಲಿ ಶ್ರಾವಣ ಸೋಮವಾರ ಎಂದು ಆಚರಿಸಲಾಗುತ್ತದೆ. ಈ ಮಾಸದಲ್ಲಿ ಶಿವಲಿಂಗಕ್ಕೆ ಹಗಲು, ರಾತ್ರಿಯಿಡೀ ಪವಿತ್ರ ನೀರು ಮತ್ತು ಹಾಲಿನಿಂದ ಅಭಿಷೇಕ ಮಾಡುತ್ತಾರೆ.
*ಮಂಗಳ ಗೌರೀ ವ್ರತ - ಶ್ರಾವಣ ಮಂಗಳವಾರ* ಆಗಸ್ಟ್ 2 - ಮಂಗಳವಾರ ಆಗಸ್ಟ್ 9 - ಮಂಗಳವಾರ ಆಗಸ್ಟ್ 16 - ಮಂಗಳವಾರ ಆಗಸ್ಟ್ 23 - ಮಂಗಳವಾರ ಮಂಗಳ ಯೋಗದ ಕಾರಣದಿಂದಾಗಿ ನಿಮ್ಮ ಮದುವೆಯಲ್ಲಿ ಅಡ್ಡಿ ಅಥವಾ ವಿಳಂಬವಾಗುತ್ತಿದ್ದರೆ ಶ್ರಾವಣ ಮಾಸದ ಮಂಗಳವಾರ ಮಂಗಳ ಗೌರಿ ವ್ರತವನ್ನು ಭಕ್ತಿ, ಶ್ರದ್ಧೆಯಿಂದ ಮಾಡಬೇಕು. ಮಂಗಳ ಗೌರಿ ವ್ರತ-ಪೂಜೆಯನ್ನು ಶ್ರಾವಣ ಮಾಸದ ಎಲ್ಲಾ ಮಂಗಳವಾರಗಳಂದು ಮಾಡಲಾಗುತ್ತದೆ. ಈ ದಿನ ಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ಉಪವಾಸವನ್ನು ಮಂಗಳವಾರ ಆಚರಿಸಲಾಗುತ್ತದೆ, ಆದ್ದರಿಂದ ಇದನ್ನು ಮಂಗಳ ಗೌರಿ ವ್ರತ ಎಂದು ಕರೆಯಲಾಗುತ್ತದೆ. *ಆಗಸ್ಟ್ 3, ಬುಧವಾರ - ಶಿರಿಯಾಳ ಷಷ್ಠೀ* ಶ್ರಾವಣ ಮಾಸ ಶುಕ್ಲ ಪಕ್ಷದ ಷಷ್ಠಿಯನ್ನು ಶಿರಿಯಾಳ ಷಷ್ಠಿಯನ್ನು ಆಚರಿಸಲಾಗುತ್ತದೆ. ಸ್ಕಂದ, ಷಣ್ಮುಖ, ಕುಮಾರ, ಕಾರ್ತಿಕೇಯ, ಸುಬ್ರಹ್ಮಣ್ಯ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಕುಮಾರಸ್ವಾಮಿ ಹಾಗೂ ಮಹಾದೇವನನ್ನು ಈ ದಿನ ಶ್ರದ್ಧಾ ಭಕ್ತಿಯಿಂದ ಪೂಜಿಸಿ ಅರ್ಚಿಸಲಾಗುತ್ತದೆ. ಸ್ವಾಮಿಯನ್ನು ಪೂಜಿಸುವುದರಿಂದ ಸಂತಾನ ಭಾಗ್ಯ, ಆರೋಗ್ಯ, ಕೀರ್ತಿಗಳನ್ನು ಕರುಣುಸಿವುದಾಗಿ ಭಕ್ತರ ನಂಬಿಕೆ. *ಆಗಸ್ಟ್ 5, ಶುಕ್ರವಾರ - ವರ ಮಹಾಲಕ್ಷ್ಮೀ ವ್ರತ* ವರ ಮಹಾಲಕ್ಷ್ಮೀ ವ್ರತ ಪೂಜೆ ಹೆಸರೇ ಸೂಚಿಸುವಂತೆ ಇದು ಲಕ್ಷ್ಮಿದೇವಿಯನ್ನು ಪೂಜಿಸುವ ದಿನ. ಶ್ರಾವಣ ಮಾಸದ ಶುಕ್ಷ ಪಕ್ಷದ ಶುಕ್ರವಾರನ್ನು ವರಮಹಾಲಕ್ಷ್ಮಿ ದಿನ ಎಂದು ಕರೆಯುವುದುಂಟು. ವರಮಹಾಲಕ್ಷ್ಮಿ ದಿನ ಆಚರಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಶ್ರೇಷ್ಠತೆ ಪಡೆದುಕೊಳ್ಳುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಗೃಹಿಣಿಯೂ ವರ ಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲು ಮುಂದಾಗುತ್ತಿದ್ದಾರೆ. ವರ ಮಹಾಲಕ್ಷ್ಮೀ ಹಬ್ಬ ಆಚರಣೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದ್ದು, ಆಡಂಬರವಾಗಿ ಅಲ್ಲದಿದ್ದರೂ ಚಿಕ್ಕದಾದ ಲಕ್ಷ್ಮಿ ದೇವಿಯನ್ನು ಕೂರಿಸಿ ಆಚರಣೆ ಮಾಡಲು ಜನರು ಮುಂದಾಗುತ್ತಿದ್ದಾರೆ. *ಸಂಪತ್ ಶ್ರಾವಣ ಶನಿವಾರ* - ಜುಲೈ 30 - ಶನಿವಾರ ಆಗಸ್ಟ್ 6 - ಶನಿವಾರ ಆಗಸ್ಟ್ 13 - ಶನಿವಾರ ಆಗಸ್ಟ್ 20 - ಶನಿವಾರ ಆಗಸ್ಟ್ 27 - ಶನಿವಾರ ಶ್ರಾವಣ ಮಾಸದಲ್ಲಿ ಬರುವ ಶನಿವಾರವನ್ನು ಕೆಲವೆಡೆ ಶ್ರಾವಣ ಶನಿವಾರವೆಂದು ಕರೆದರೆ ಇನ್ನೂ ಕೆಲವೆಡೆ ಸಂಪತ್ ಶ್ರಾವಣ ಶನಿವಾರವೆಂದು ಕರೆಯುತ್ತಾರೆ. ಶ್ರಾವಣ ಶನಿವಾರದಂದು ವೆಂಕಟೇಶ್ವರ ಮತ್ತು ಲಕ್ಷ್ಮಿ ದೇವಿಯನ್ನು ಹಾಗೂ ಶನೈಶ್ಚರ ಸ್ವಾಮಿಯನ್ನು ಪೂಜಿಸಲಾಗುತ್ತದೆ. ವಿವಿಧ ಸ್ಥಳಗಳಿಗೆ ಹೋದಂತೆ ಶ್ರಾವಣ ಶನಿವಾರ ಆಚರಣೆಯು ಭಿನ್ನ ಭಿನ್ನವಾಗಿರುತ್ತದೆ. *ಆಗಸ್ಟ್ 8, ಸೋಮವಾರ - ಪುತ್ರದಾ ಏಕಾದಶಿ* ಈ ಏಕಾದಶಿಯು ಅತ್ಯಂತ ಮಂಗಳಕರ ಮತ್ತು ಫಲಪ್ರದ ಏಕಾದಶಿಯೆಂದು ಪರಿಗಣಿಸಲಾಗುವುದು. ಈ ವ್ರತದ ಹೆಸರಿನ ಪ್ರಕಾರ ಇದರ ಫಲವೇನೆಂದರೆ, ದಂಪತಿಗಳು ಸಂತಾನ ಹೊಂದಲು ಬಯಸುವವರು ಈ ದಿನದಂದು ಉಪವಾಸವಿದ್ದು ಸಂತಾನ ಭಾಗ್ಯವನ್ನು ಬಯಸಿದಲ್ಲಿ ಅವರು ಬಯಸಿದ ಫಲವನ್ನು ಪಡೆಯುತ್ತಾರೆ. *ಆಗಸ್ಟ್ 9, ಮಂಗಳವಾರ - ಭೌಮ ಪ್ರದೋಷ* ಪ್ರದೋಷದ ವ್ರತವು ಮಂಗಳವಾರದಂದು ಬಂದಾಗಲೆಲ್ಲಾ ಅದನ್ನು ಭೌಮ ಪ್ರದೋಷ ಅಥವಾ ಮಂಗಳ ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. *ಆಗಸ್ಟ್ 10, ಬುಧವಾರ - ಅಂಗಾರಕ ಜಯಂತಿ* ಅಂಗಾರಕ ಅಥವಾ ಕುಜ ಎಂದು ನಾಮಾಂಕಿತನಾದ ಭೂಮಿಪುತ್ರ ಮಂಗಳನು ಜನಿಸಿದ ದಿನ. ಮಂಗಳ ಎಂದು ಕರೆಯಲ್ಪಡುವ ಇವನು ನೈಸರ್ಗಿಕ ಪಾಪಗ್ರಹ. ಈ ದಿನ ಈತನ ಆರಾಧನೆ ಮಾಡುವುದರಿಂದ ಮಂಗಳನ ಅನುಗ್ರಹ ಪಡೆಯಬಹುದು. *ಆಗಸ್ಟ್ 11, ಗುರುವಾರ - ರಕ್ಷಾ ಬಂಧನ* ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನವಾದ ಈ , ಗುರುವಾರದಂದು ರಕ್ಷಾ ಬಂಧನವನ್ನು ಆಚರಿಸಲಾಗುವುದು. ಈ ದಿನ ಸಹೋದರತ್ವದ ಬಾಂದವ್ಯವನ್ನು ಬೆಸೆಯುವ ದಿನವಾಗಿದೆ. ಅಷ್ಟು ಮಾತ್ರವಲ್ಲ, ಯಜುರ್ ಉಪಾಕರ್ಮ ಇದೇ ದಿನ ಬಂದಿರುವುದು ಈ ದಿನ ಅತ್ಯಂತ ವಿಶೇಷವಾಗಿದೆ.
*ಆಗಸ್ಟ್ 12, ಶುಕ್ರವಾರ - ನೂಲ ಹುಣ್ಣಿಮೆ, ಗಾಯತ್ರೀ ಪ್ರತಿಪತ್, ಸಂಸ್ಕೃತ ದಿನಾಚರಣೆ* *ನೂಲ ಹುಣ್ಣಿಮೆ* :- ಉಪಾಕರ್ಮ ಆಚರಣೆ ಎಂದರೆ ಉಪನಯನ ನಂತರ ಪ್ರತಿ ವರ್ಷವೂ ಉಪಾಕರ್ಮ ಆಚರಿಸಬೇಕು. ಶ್ರಾವಣದಲ್ಲಿ ನೂಲ ಹುಣ್ಣೆಮೆಯಂದು ಬರುವ ಉಪಾಕರ್ಮ ಯಜ್ಞೋಪವೀತ ಧರಿಸಿದವರಿಗೆ ಅತಿ ಮುಖ್ಯವಾಗಿದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಬರುವ ನೂಲ ಹುಣ್ಣಿಮೆ ವಿಶೇಷ. *ಗಾಯತ್ರೀ ಪ್ರತಿಪತ್* :- ಶ್ರಾವಣ ಮಾಸ ಕೃಷ್ಣ ಪಕ್ಷದ ಪ್ರಥಮ ತಿಥಿಯ ದಿನ ಗಾಯತ್ರೀ ಪ್ರತಿಪತ್‌ಅನ್ನು ಆಚರಿಸಲಾಗುತ್ತದೆ. ಪಾಡ್ಯದ ಹಿಂದಿನ ದಿನದಂದು ಉಪವಾಸವಿದ್ದು, ಮಾರನೆಯ ದಿನ ಮಂಗಳ ಸ್ನಾನದ ನಂತರ ಗಾಯತ್ರೀ ಜಪವನ್ನು ಮಾಡುವುದು ಈ ಆಚರಣೆಯ ವಿಧಿಯಾಗಿದೆ. *ಸಂಸ್ಕೃತ ದಿನಾಚರಣೆ* :- ದೇವ ಭಾಷೆ ಸಂಸ್ಕೃತವನ್ನು ಕೇವಲ ನಮ್ಮ ದೇಶದಲ್ಲಿ ಅಲ್ಲದೇ, ವಿದೇಶಗಳಲ್ಲಿ ಕೂಡ ಮಾನ್ಯತೆ ಕೊಟ್ಟು ಅದನ್ನು ಬೆಳೆಸುತ್ತಿದ್ದಾರೆ. ಅದರ ಪ್ರಯೋಜನ ಅವರು ಕೂಡ ಕಂಡುಕೊಂಡಿದ್ದಾರೆ. ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಸಂಸ್ಕೃತ ಭಾಷೆಯ ಮಹತ್ವವನ್ನು ಸಾರುವುದು ಇದರ ಉದ್ದೇಶ.
ದೇವಭಾಷಾ, ಗೀರ್ವಾಣವಾಣೀ, ಅಮೃತವಾಣೀ, ಸುರಭಾರತೀ ಎಂದೆಲ್ಲಾ ಕರೆಸಿಕೊಳ್ಳುವ ಸಂಸ್ಕೃತ ಎಲ್ಲ ವಿಷಯಗಳ ಮೂಲಾಧಾರ. *ಆಗಸ್ಟ್ 13, ಶನಿವಾರ - ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ*
ಕಲಿಯುಗದ ಕಾಮಧೇನು ಎಂದೇ ಕರೆಯಲ್ಪಡುವ ಶ್ರೀ ರಾಘವೇಂದ್ರ ಸ್ವಾಮಿಗಳು ಸಶರೀರರಾಗಿ ಬೃಂದಾವನದಲ್ಲಿ ಸಮಾಧಿ ಸೇರಿದ ದಿನವೇ ಆರಾಧನಾ ಮಹೋತ್ಸವ.
*ಆಗಸ್ಟ್ 15, ಸೋಮವಾರ - ಸಂಕಷ್ಟಹರ ಚತುರ್ಥಿ* ಗಣೇಶನನ್ನು ಪ್ರಥಮ ವಂದಿತನೆಂದು ಕರೆಯಲಾಗುತ್ತದೆ. ಎಲ್ಲಾ ಶುಭ ಕಾರ್ಯಗಳಲ್ಲೂ ಮೊದಲ ಪೂಜೆ ಗಣೇಶನಿಗೆ ಎಂಬುದು ನಮಗೆಲ್ಲಾ ತಿಳಿದಿರುವ ವಿಷಯ. ಗಣೇಶನನ್ನು ಸಂಕಷ್ಟ ಹರ, ವಿಘ್ನನಿವಾರಕನೆಂದು ಕರೆಯಲಾಗುತ್ತದೆ. ಸಂಕಷ್ಟ ಚತುರ್ಥಿಯನ್ನು ಆಚರಿಸುವುದರಿಂದ ಭಕ್ತರ ಸಂಕಷ್ಟಗಳೆಲ್ಲವೂ ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಈ ದಿನ ಪರಮೇಶ್ವರನನ್ನು ಆರಾಧಿಸುವ ಶ್ರಾವಣ ಸೋಮವಾರ.
*ಆಗಸ್ಟ್ 15, ಸೋಮವಾರ - ಸ್ವಾತಂತ್ರ್ಯ ದಿನಾಚರಣೆ*
ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸಿ, ಭಾರತೀಯರಿಗೆ ಸ್ವತಂತ್ರವನ್ನು ಘೋಷಿಸಿದ ದಿನವಾಗಿದೆ.
*ಆಗಸ್ಟ್ 17, ಬುಧವಾರ - ಸಿಂಹ ಸಂಕ್ರಮಣ*
ಸೂರ್ಯ ದೇವನು ಕಟಕ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶಿಸುವ ಪುಣ್ಯಕಾಲವೇ ಸಿಂಹ ಸಂಕ್ರಮಣ. ಈ ದಿನ ಸೂರ್ಯ ದೇವನನ್ನು ಪೂಜಿಸಲಾಗುತ್ತದೆ. ಮುಂಜಾನೆ ಅರ್ಘ್ಯವನ್ನು ನೀಡುವ ಮೂಲಕ ಸೂರ್ಯನಿಗೆ ನಮಸ್ಕರಿಸಲಾಗುವುದು. *ಆಗಸ್ಟ್ 19, ಶುಕ್ರವಾರ - ಶ್ರೀ ಕೃಷ್ಣ ಜನ್ಮಾಷ್ಟಮೀ*
ಭಗವಾನ್ ಶ್ರೀಕೃಷ್ಣನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನದಂದು ಜನಿಸಿದನು. ಕೃಷ್ಣ ಭಕ್ತರು ಈ ದಿನ ಕೃಷ್ಣನಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಸಂಪೂರ್ಣ ದಿನವೂ ಕೃಷ್ಣನ ನಾಮಸ್ಮರಣೆಯನ್ನು ಜಪಿಸಲಾಗುತ್ತದೆ. ಭಕ್ತಿ, ಭಾವದ ಶಕ್ತಿಯ ನಡುವೆ ತುಂಟಾಟದ ಕೃಷ್ಣನನ್ನು ಪೂಜಿಸಲಾಗುತ್ತದೆ.
*ಆಗಸ್ಟ್ 22, ಸೋಮವಾರ - ಅಜಾ ಏಕಾದಶಿ* ಸನಾತನ ಸಂಪ್ರದಾಯದಲ್ಲಿ, ಅಜಾ ಏಕಾದಶಿಯನ್ನು ಭಕ್ತಿ ಮತ್ತು ಪುಣ್ಯದ ಕೆಲಸಗಳಿಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶ್ರೀ ಕೃಷ್ಣನು ಅಜಾ ಏಕಾದಶಿಯ ಉಪವಾಸವನ್ನು ಆಚರಿಸುವ ಮೂಲಕ ಎಲ್ಲಾ ಪಾಪಗಳು ಮತ್ತು ಸಂಕಟಗಳಿಂದ ಮುಕ್ತಿಯನ್ನು ಪಡೆಯುತ್ತಾನೆ ಮತ್ತು ಮರಣದ ನಂತರ ಒಬ್ಬ ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆ ಎಂದು ಹೇಳಲಾಗಿದೆ.
*ಆಗಸ್ಟ್ 24, ಬುಧವಾರ - ಪ್ರದೋಷ ಪೂಜೆ*
ಈ ದಿನ ಶಿವನನ್ನು ಪೂಜಿಸಲಾಗುತ್ತದೆ. ಪ್ರದೋಷ ವ್ರತದ ಉಪವಾಸವನ್ನು ಶಿವ ಭಕ್ತರು ಕೈಗೊಳ್ಳುತ್ತಾರೆ. ಪ್ರದೋಷ ದಿನದಂದು ಉಪವಾಸವಿದ್ದು, ಶಿವನನ್ನು ಪೂಜಿಸುವುದರಿಂದ ಶಿವ ಭಕ್ತರ ಆಸೆಗಳು ಈಡೇರುವುದೆನ್ನುವ ನಂಬಿಕೆಯಿದೆ.
*ಆಗಸ್ಟ್ 17, ಗುರುವಾರ - ಮಾಸ ಶಿವರಾತ್ರಿ*
ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿ ತಿಥಿಯನ್ನು ಮಾಸಿಕ ಶಿವರಾತ್ರಿಯೆಂದು ಕರೆಯಲಾಗುತ್ತದೆ. ಮಾಸಿಕ ಶಿವರಾತ್ರಿ ದಿನದಂದು ಶಿವ ಭಕ್ತರು ಉಪವಾಸವಿದ್ದು, ಶಿವನಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಪ್ರತೀ ಮಾಸದಲ್ಲೂ ಮಾಸಿಕ ಶಿವರಾತ್ರಿ ಆಚರಿಸುವುದರಿಂದ ಇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸಲು ಸಹಕಾರಿ.
*ಆಗಸ್ಟ್ 27, ಶನಿವಾರ - ಬೆನಕನ ಅಮಾವಾಸ್ಯೆ*
ಶ್ರಾವಣ ಮಾಸದ ಕೊನೆಯ ದಿನ, ಗಣಪತಿ ಹಬ್ಬದ ಮುನ್ನ ಬರುವ ಅಮಾವಾಸ್ಯೆಯನ್ನು ಬೆನಕನ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. *ಆಗಸ್ಟ್ 29, ಸೋಮವಾರ - ವರಾಹ ಜಯಂತಿ* ಭಾದ್ರಪದ ಮಾಸದ ಶುಕ್ಲ ಪಕ್ಷದ ಬಿದಿಗೆ ದಿನ ವಿಷ್ಣುವಿನ ಮೂರನೆಯ ಅವತಾರ ವರಾಹ ರೂಪದಲ್ಲಿ ಜನ್ಮತಾಳಿದ ಸೂಚಕವಾಗಿ ಈ ಹಬ್ಬವನ್ನು ಆಚರಣೆ ಮಾಡಲಾಗುವುದು *ಆಗಸ್ಟ್ 30, ಮಂಗಳವಾರ - ಸ್ವರ್ಣ ಗೌರೀ ವ್ರತ*
30 ರ ಮಂಗಳವಾರದಂದು ಸ್ವರ್ಣ ಗೌರಿ ಹಬ್ಬವನ್ನು ಆಚರಿಸಲಾಗುವುದು. ಹೆಚ್ಚಾಗಿ ಈ ಹಬ್ಬವನ್ನು ವಿವಾಹಿತ ಮಹಿಳೆಯರು ಆಚರಿಸುತ್ತಾರೆ. ಈ ದಿನ ಮಹಿಳೆಯರು ಉಪವಾಸವಿದ್ದು, ಪಾರ್ವತಿ ದೇವಿಯನ್ನು ಪೂಜಿಸುತ್ತಾರೆ. ಪತಿಯ ದೀರ್ಘಾಯುಷ್ಯಕ್ಕಾಗಿ, ಉತ್ತಮ ಆರೋಗ್ಯಕ್ಕಾಗಿ, ಕುಟುಂಬದ ಸಂತೋಷಕ್ಕಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
*ಆಗಸ್ಟ್ 31, ಬುಧವಾರ - ವರಸಿದ್ಧಿ ವಿನಾಯಕ ವ್ರತ*
ಗಣೇಶ ಚತುರ್ಥಿಯನ್ನು ಭಾದ್ರಪದ ತಿಂಗಳ ಶುಕ್ಲ ಪಕ್ಷದ ಚತುರ್ಥಿ ತಿಥಿಯಲ್ಲಿ ಆಚರಿಸಲಾಗುವುದು. ಈ ಬಾರಿ ಗಣೇಶ ಚತುರ್ಥಿಯನ್ನು ಆಗಸ್ಟ್ 31 ರಂದು ಬುಧವಾರ ಆಚರಿಸಲಾಗುತ್ತದೆ. ಬುದ್ಧಿವಂತಿಕೆಯ ಪ್ರತೀಕವಾದ ಗಣೇಶನನ್ನು ಈ ದಿನ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮುಂಬೈನಲ್ಲಂತೂ ಗಣೇಶ ಚತುರ್ಥಿಯೆಂದರೆ ಎಲ್ಲಿಲ್ಲದ ಸಂಭ್ರಮ, ಸಡಗರ. ಆದರೆ ಈ ಬಾರಿ ಕೊರೊನಾ ಬಹುಶಃ ಗಣೇಶ ಚತುರ್ಥಿ ಆಚರಣೆಗೆ ಅಡ್ಡಿಯಾಗಬಹುದು. ಮನೆಯಲ್ಲೂ ಕೂಡ ಗಣೇಶನ ವಿಗ್ರಹಗಳನ್ನಿಟ್ಟು ಪೂಜಿಸಲಾಗುತ್ತದೆ.🕉️
🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು 📱9482655011🙏🙏🙏
[01/08, 7:03 AM] Pandit Venkatesh. Astrologer. Kannada: 🕉️ ಓಂ ಶ್ರೀ ಗುರುಭ್ಯೋ ನಮಃ 🕉️
*ನಾಗರ ಪಂಚಮಿ : ಶುಭ ಮುಹೂರ್ತ, ಪೂಜೆ ವಿಧಾನ, ಮಂತ್ರ ಮತ್ತು ಮಹತ್ವಗಳ ಸಂಪೂರ್ಣ ವಿವರ..!*
ಭಗವಾನ್ ಶಿವನಿಗೆ ಅರ್ಪಿತವಾದ ಶ್ರಾವಣ ಮಾಸ ಪ್ರಸ್ತುತ ನಡೆಯುತ್ತಿದೆ. ಈ ತಿಂಗಳಲ್ಲಿ ವಿವಿಧ ಉಪವಾಸ ಮತ್ತು ಹಬ್ಬಗಳು ಬರುತ್ತವೆ. ಆದರೆ ಈ ಹಬ್ಬಗಳಲ್ಲಿ ನಾಗಪಂಚಮಿ ಹಬ್ಬ ಬಹಳ ವಿಶೇಷವಾಗಿದೆ. ಪಂಚಾಂಗದ ಪ್ರಕಾರ, ನಾಗರ ಪಂಚಮಿ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಶಿವನ ಜೊತೆಗೆ ಸರ್ಪಗಳನ್ನು ಪೂಜಿಸುವ ನಿಯಮವಿದೆ. ನಾಗ ಪಂಚಮಿಯಂದು ಸರ್ಪಗಳನ್ನು ಪೂಜಿಸುವುದರಿಂದ ಸರ್ಪ ದೋಷಗಳು ಮತ್ತು ಕಾಳ ಸರ್ಪದೋಷ ದೂರವಾಗುತ್ತದೆ ಎನ್ನುವ ನಂಬಿಕೆಯಿದೆ. ಈ ವರ್ಷದ ನಾಗರ ಪಂಚಮಿ ಬಹಳ ವಿಶೇಷವಾಗಿದೆ ಏಕೆಂದರೆ ಹಲವು ವರ್ಷಗಳ ನಂತರ ಈ ಬಾರಿ ಅಪರೂಪದ ಸಂಯೋಗವು ಈ ದಿನ ರೂಪುಗೊಳ್ಳಲಿದೆ. ಈ ವರ್ಷ ನಾಗರ ಪಂಚಮಿ ಹಬ್ಬವನ್ನು ಆಗಸ್ಟ್ 2 ರಂದು ಮಂಗಳವಾರ ಆಚರಿಸಲಾಗುತ್ತದೆ. ಈ ಬಾರಿ ನಾಗರ ಪಂಚಮಿಯ ಶುಭ ಮುಹೂರ್ತ ಮತ್ತು ಮಹತ್ವವೇನು ನೋಡೋಣ..
*ನಾಗರ ಪಂಚಮಿ 2022 ಶುಭ ಮುಹೂರ್ತ:*
ಶ್ರಾವಣ ಶುಕ್ಲ ಪಕ್ಷ ಪಂಚಮಿ ತಿಥಿ ಆರಂಭ: 2022 *ಆಗಸ್ಟ್ 2* ರಂದು *ಮಂಗಳವಾರ ಬೆಳಿಗ್ಗೆ 5:12* ರಿಂದ
ಶ್ರಾವಣ ಶುಕ್ಲ ಪಕ್ಷ ಪಂಚಮಿ ತಿಥಿ ಮುಕ್ತಾಯ: 2022 *ಆಗಸ್ಟ್ 3* ರಂದು *ಬುಧವಾರ ಬೆಳಿಗ್ಗೆ 5:41* ರವರೆಗೆ
ನಾಗರ ಪಂಚಮಿ ಪೂಜೆಗೆ ಶುಭ ಮುಹೂರ್ತ: 2022 *ಆಗಸ್ಟ್ 2* ರಂದು *ಮಂಗಳವಾರ ಬೆಳಿಗ್ಗೆ 5:43 ರಿಂದ ಬೆಳಿಗ್ಗೆ 8:25 ರವರೆಗೆ*
ಪೂಜೆ ಅವಧಿ: 2 ಗಂಟೆ 42 ನಿಮಿಷಗಳು
ಶಿವಯೋಗ: ಆಗಸ್ಟ್ 2 ರಂದು ಸಂಜೆ 06.38 ರವರೆಗೆ
*ನಾಗರ ಪಂಚಮಿ 2022 ಶುಭ ಸಂಯೋಗ:*
*ನಾಗರ ಪಂಚಮಿ* 2022 ನ್ನು ಆಗಸ್ಟ್ 2 ರಂದು ಮಂಗಳವಾರದಂದು ಆಚರಿಸಲಾಗುತ್ತಿದ್ದು, ಇದೇ ದಿನ *ಮಂಗಳ ಗೌರಿ ವ್ರತ* ವನ್ನೂ ಆಚರಿಸಲಾಗುವುದು. ಈ ದಿನ ಸುಮಂಗಲಿಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಪೂಜೆ ಮತ್ತು ಉಪವಾಸ ವ್ರತವನ್ನು ಆಚರಿಸುತ್ತಾರೆ. ಈ ವರ್ಷ ನಾಗರ ಪಂಚಮಿ ದಿನದಂದು ನಾಗದೇವತೆಯೊಂದಿಗೆ ಶಿವ ಮತ್ತು ಪಾರ್ವತಿ ದೇವಿಯನ್ನು ಕೂಡ ಪೂಜಿಸಲಾಗುತ್ತದೆ. ಈ ದಿನದ ಶುಭ ಸಂಯೋಗದ ನಿಯಮಗಳ ಪ್ರಕಾರ, ನಾಗದೇವತೆ, ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸುವುದರಿಂದ ಹೆಚ್ಚಿನ ಫಲವನ್ನು ಪಡೆದುಕೊಳ್ಳಬಹುದು.
[01/08, 10:23 AM] Pandit Venkatesh. Astrologer. Kannada: 🕉️ ಓಂ ಶ್ರೀ ಗುರುಭ್ಯೋ ನಮಃ 🕉️ *ಸರ್ಪದೇವತಾ ಅಷ್ಟೋತ್ತರ ಮಹತ್ವ*
ಶ್ರೀ ಸರ್ಪರಾಜ ಅಷ್ಟೋತ್ತರ ಬಹಳ ಅಪರೂಪ ಮತ್ತು ಅತ್ಯಂತ ವಿಶೇಷವಾದದ್ದು, ಪವಿತ್ರವಾದದ್ದು, ತುಂಬಾ ಶಕ್ತಿಯುತವಾದದ್ದು..
ಪರಮ ಪವಿತ್ರವಾದ ಶ್ರೀ ಸರ್ಪರಾಜ ದೇವರ ಅಷ್ಟೋತ್ತರದಲ್ಲಿ ಮಹಾವಿಶೇಷವಾದ ಸರ್ಪರಾಜರುಗಳ ನಾಮಗಳಿವೆ..
ಅನೇಕ ಚರಿತ್ರೆಗಳಲ್ಲಿ, ಪುರಾಣಗಳಲ್ಲಿ ಶಾಸ್ತ್ರಗಳಲ್ಲಿ ಈ ಸರ್ಪರಾಜರ ಬಗ್ಗೆ ಮಾಹಿತಿಗಳು ದೊರಕುತ್ತವೆ.
ಅವುಗಳಲ್ಲಿ ಮುಖ್ಯವಾಗಿ ನವನಾಗೇಂದ್ರರ ಹೆಸರುಗಳು ತುಂಬಾ ವಿಶೇಷ..
ಅನಂತ, ವಾಸುಕಿ, ತಕ್ಷಕ, ವಿಶ್ವತೋಮುಖ, ಕಾರ್ಕೋಟಕ, ಮಹಾಪದ್ಮ, ಪದ್ಮ, ಶಂಖಪಾಲ, ಧೃತರಾಷ್ಟ್ರ
ಶ್ರೀ ಸರ್ಪರಾಜರ ಹೆಸರುಗಳು ಹೇಗೆ ವಿಶೇಷವೋ ಅದೇ ರೀತಿ 16 ಜನ ನಾಗಮಾತೆಯರು ಸಹ ಬಹಳ ವಿಶೇಷ..
ಶ್ರೀ ನಾಗಮಾತೇ, ನಾಗಭಗಿನೀ, ವಿಷಹರೇ, ಮೃತಸಂಜೀವಿನೀ, ಸಿದ್ಧಯೋಗಿನೀ, ಯೋಗಿನೀ, ಪ್ರಿಯಾ, ಜರತ್ಕಾರು, ಶ್ರೀ ಜಗದ್ಗೌರಿ, ಮಾನಸಾ, ವೈಷ್ಣವೀ, ಶೈವೀ, ನಾಗೇಶ್ವರೀ, ಆಸ್ತಿಕಾ, ಮಾತಾ, ವಿಷಹರಾ ದೇವೀ.
ಮುಖ್ಯವಾಗಿ ಸ್ತ್ರೀಯರು ಪ್ರತಿದಿವಸ ಈ ದೇವಿಯರ ಸ್ಮರಣೆ ಮಾಡುತ್ತಾರೋ ಅವರು ಧೀರ್ಘ ಸುಮಂಗಲಿಯಾಗಿರುತ್ತಾರೆ.., ಮನೆಯಲ್ಲಿ ಗಂಡಹೆಂಡತಿ ಅನ್ಯೋನ್ಯವಾಗಿರುತ್ತಾರೆ, ದಾಂಪತ್ಯ ಜೀವನ ಸುಖಕರವಾಗಿರುತ್ತದೆ..
ಅಷ್ಟೋತ್ತರ ಪಾರಾಯಣ ಮಾಡುವುದರ ಫಲ..
೧. ಪ್ರತಿದಿನವೂ ಶ್ರೀ ನವನಾಗೇಂದ್ರರ ಪ್ರಾರ್ಥನೆ ಮತ್ತು ಶ್ರೀ ನಾಗಮಾತೆಯರನ್ನು ಸ್ಮರಿಸಿ, ಸರ್ಪರಾಜ ಅಷ್ಟೋತ್ತರ ಓದಿದರೆ, ನಿಮ್ಮ ಮನೆಯ ಮೇಲೆ ಸರ್ಪದೇವರ ಆಶೀರ್ವಾದವಿದ್ದು , ಸರ್ವಭಯ, ಸರ್ಪಭಯ, ಶತೃಭಯ ನಿವಾರಣೆಯಾಗುತ್ತದೆ ..
೨. ನವನಾಗೇಂದ್ರರು ಮತ್ತು ನಾಗದೇವತೆಯರ ಸ್ಮರಣೆ ಮಾಡಿ , ಸರ್ಪರಾಜ ಅಷ್ಟೋತ್ತರ ಓದಿ, ಹುತ್ತಕ್ಕೆ ನಮಸ್ಕಾರ ಮಾಡುತ್ತಾ ಬಂದರೆ, ಮನೆಯಲ್ಲಿ ಜಗಳ ನಿವಾರಣೆಯಾಗಿ , ಸಂತೋಷದ ಜೀವನ ಮಾಡುವಿರಿ. ಎಲ್ಲರೂ ಆರೋಗ್ಯವಾಗಿರುತ್ತಾರೆ..
೩. ಯಾರಿಗೆ ಸಂತಾನಭಾಗ್ಯ ಇರುವುದಿಲ್ಲವೋ ಅವರು ಅಶ್ವತ್ಥ ಮರದ ಕೆಳಗೆ ಇರುವ ನಾಗರಕಲ್ಲಿಗೆ ಪೂಜೆ ಮಾಡಿಸಿ, ಸರ್ಪರಾಜ ಅಷ್ಟೋತ್ತರ ಓದಿ, ಮಂಡಲ ಪೂಜೆ ಮಾಡಿಸಿದರೆ ಸಂತಾನ ಭಾಗ್ಯವಾಗುತ್ತದೆ..
೪. ಗಂಡ ಹೆಂಡತಿ ವಿರಸ ಇರುವವರು, ವಿಚ್ಛೇದನ ಸಮಸ್ಯೆ ಇರುವವರು, ಪಂಚಮಿ, ಷಷ್ಠಿ ಅಥವಾ ಅಷ್ಟಮಿಯ ದಿನ ಶ್ರೀ ಸರ್ಪರಾಜ ದೇವರ ಅಷ್ಟೋತ್ತರ ಪಠಿಸಿದರೆ, ತನಿ ಎರೆದರೆ ಸರ್ವ ಸಮಸ್ಯೆ ನಿವಾರಣೆಯಾಗುತ್ತದೆ ..
೫. ಯಾರಿಗೆ ಮೂರ್ಛೆರೋಗ (ಫಿಟ್ಸ್ ) ಖಾಯಿಲೆ ಇದೆಯೋ ಅಂಥವರು ಓದಿದರೆ , ಫಿಟ್ಸ್ ಬರುವುದಿಲ್ಲ..
೬. ಕಾಲಸರ್ಪದೋಷ ಇರುವವರು ಓದಿದರೆ ಕಾಲಸರ್ಪದೋಷ, ಕಾಲಸರ್ಪ ಯೋಗವಾಗಿ ಉತ್ತಮ ಫಲ ಕೊಡುತ್ತದೆ.
೭. ಯಾವುದೇ ತರಹ ಜನ್ಮ ರಾಹು, ಚತುರ್ಥ ರಾಹು, ಪಂಚಮ ರಾಹು, ಸಪ್ತಮ ರಾಹು, ಅಷ್ಟಮ ರಾಹು ದೋಷಗಳು ಶ್ರೀ ನಾಗರಾಜ ಅಷ್ಟೋತ್ತರ ಓದಿದರೆ ನಿವಾರಣೆಯಾಗುತ್ತದೆ.
೮. ಯಾರು ಸರ್ಪಸಂಸ್ಕಾರ ಮಾಡಿ ನಾಗರ ಪ್ರತಿಷ್ಠೆ ಮಾಡಿಸಿದ್ದರೂ, ತೊಂದರೆ ಅನುಭವಿಸುತ್ತಿದ್ದರೆ, ಶ್ರೀ ನಾಗರಾಜ ದೇವರ ಅಷ್ಟೋತ್ತರವನ್ನು 48 ದಿವಸ ಓದಿ ಪೂಜೆ ಮಾಡಿದರೆ ಸರ್ವ ಸಮಸ್ಯೆಗಳು ನಿವಾರಣೆಯಾಗುತ್ತದೆ.
೯. ಗರ್ಭದೋಷದ ತೊಂದರೆ ಇರುವವರು ಹಾಗೂ ರಜಸ್ವಲೆ ದೋಷ ಇರುವವರು, ಶ್ರೀ ನಾಗರಾಜ ಅಷ್ಟೋತ್ತರ ಪ್ರತಿದಿನ ಓದುತ್ತಾ ಬಂದರೆ ದೋಷ ನಿವಾರಣೆಯಾಗುತ್ತದೆ, ಆರೋಗ್ಯ ಭಾಗ್ಯವಾಗುತ್ತದೆ..
೧೦. ಅಶ್ವಿನೀ ನಕ್ಷತ್ರ, ಮಖಾ ನಕ್ಷತ್ರ, ಮೂಲಾ ನಕ್ಷತ್ರ ಜನಿಸಿದವರು ಮತ್ತು ಜಾತಕದಲ್ಲಿ ಸರ್ಪದೋಷ ಇರುವವರು, ಶ್ರೀ ನಾಗರಾಜ ಅಷ್ಟೋತ್ತರ ಓದಿದರೆ ದೋಷ ನಿವಾರಣೆಯಾಗುತ್ತದೆ.
೧೧. ಸರ್ಪದೋಷದಿಂದ ವಿವಾಹ ಸಮಸ್ಯೆ ಇರುವವರು ಪ್ರತಿದಿನ ಶ್ರೀ ಸರ್ಪರಾಜ ಅಷ್ಟೋತ್ತರ ಮತ್ತು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅಷ್ಟೋತ್ತರ ಓದಿದರೆ ವಿವಾಹ ಸಮಸ್ಯೆ ನಿವಾರಣೆಯಾಗುತ್ತದೆ, ದಾಂಪತ್ಯ ಚೆನ್ನಾಗಿರುತ್ತದೆ..
*****************************
*ಶ್ರೀ ನಾಗದೇವತಾ ಅಷ್ಟೋತ್ತರ ಶತನಾಮಾವಳೀ*
ಓಂ ಅನಂತಾಯ ನಮಃ |
ಓಂ ಆದಿಶೇಷಾಯ ನಮಃ |
ಓಂ ಅಗದಾಯ ನಮಃ |
ಓಂ ಅಖಿಲೋರ್ವೇಚರಾಯ ನಮಃ |
ಓಂ ಅಮಿತವಿಕ್ರಮಾಯ ನಮಃ |
ಓಂ ಅನಿಮಿಷಾರ್ಚಿತಾಯ ನಮಃ |
ಓಂ ಆದಿವಂದ್ಯಾನಿವೃತ್ತಯೇ ನಮಃ |
ಓಂ ವಿನಾಯಕೋದರಬದ್ಧಾಯ ನಮಃ |
ಓಂ ವಿಷ್ಣುಪ್ರಿಯಾಯ ನಮಃ | ೯
ಓಂ ವೇದಸ್ತುತ್ಯಾಯ ನಮಃ |
ಓಂ ವಿಹಿತಧರ್ಮಾಯ ನಮಃ |
ಓಂ ವಿಷಧರಾಯ ನಮಃ |
ಓಂ ಶೇಷಾಯ ನಮಃ |
ಓಂ ಶತ್ರುಸೂದನಾಯ ನಮಃ |
ಓಂ ಅಶೇಷಫಣಾಮಂಡಲಮಂಡಿತಾಯ ನಮಃ |
ಓಂ ಅಪ್ರತಿಹತಾನುಗ್ರಹದಾಯಿನೇ ನಮಃ |
ಓಂ ಅಮಿತಾಚಾರಾಯ ನಮಃ |
ಓಂ ಅಖಂಡೈಶ್ವರ್ಯಸಂಪನ್ನಾಯ ನಮಃ | ೧೮
ಓಂ ಅಮರಾಹಿಪಸ್ತುತ್ಯಾಯ ನಮಃ |
ಓಂ ಅಘೋರರೂಪಾಯ ನಮಃ |
ಓಂ ವ್ಯಾಲವ್ಯಾಯ ನಮಃ |
ಓಂ ವಾಸುಕಯೇ ನಮಃ |
ಓಂ ವರಪ್ರದಾಯಕಾಯ ನಮಃ |
ಓಂ ವನಚರಾಯ ನಮಃ |
ಓಂ ವಂಶವರ್ಧನಾಯ ನಮಃ |
ಓಂ ವಾಸುದೇವಶಯನಾಯ ನಮಃ |
ಓಂ ವಟವೃಕ್ಷಾರ್ಚಿತಾಯ ನಮಃ | ೨೭
ಓಂ ವಿಪ್ರವೇಷಧಾರಿಣೇ ನಮಃ |
ಓಂ ತ್ವರಿತಾಗಮನಾಯ ನಮಃ |
ಓಂ ತಮೋರೂಪಾಯ ನಮಃ |
ಓಂ ದರ್ಪೀಕರಾಯ ನಮಃ |
ಓಂ ಧರಣೀಧರಾಯ ನಮಃ |
ಓಂ ಕಶ್ಯಪಾತ್ಮಜಾಯ ನಮಃ |
ಓಂ ಕಾಲರೂಪಾಯ ನಮಃ |
ಓಂ ಯುಗಾಧಿಪಾಯ ನಮಃ |
ಓಂ ಯುಗಂಧರಾಯ ನಮಃ | ೩೬
ಓಂ ರಶ್ಮಿವಂತಾಯ ನಮಃ |
ಓಂ ರಮ್ಯಗಾತ್ರಾಯ ನಮಃ |
ಓಂ ಕೇಶವಪ್ರಿಯಾಯ ನಮಃ |
ಓಂ ವಿಶ್ವಂಭರಾಯ ನಮಃ |
ಓಂ ಶಂಕರಾಭರಣಾಯ ನಮಃ |
ಓಂ ಶಂಖಪಾಲಾಯ ನಮಃ |
ಓಂ ಶಂಭುಪ್ರಿಯಾಯ ನಮಃ |
ಓಂ ಷಡಾನನಾಯ ನಮಃ |
ಓಂ ಪಂಚಶಿರಸೇ ನಮಃ | ೪೫
ಓಂ ಪಾಪನಾಶಾಯ ನಮಃ |
ಓಂ ಪ್ರಮದಾಯ ನಮಃ |
ಓಂ ಪ್ರಚಂಡಾಯ ನಮಃ |
ಓಂ ಭಕ್ತಿವಶ್ಯಾಯ ನಮಃ |
ಓಂ ಭಕ್ತರಕ್ಷಕಾಯ ನಮಃ |
ಓಂ ಬಹುಶಿರಸೇ ನಮಃ |
ಓಂ ಭಾಗ್ಯವರ್ಧನಾಯ ನಮಃ |
ಓಂ ಭವಭೀತಿಹರಾಯ ನಮಃ |
ಓಂ ತಕ್ಷಕಾಯ ನಮಃ | ೫೪
ಓಂ ಲೋಕತ್ರಯಾಧೀಶಾಯ ನಮಃ |
ಓಂ ಶಿವಾಯ ನಮಃ |
ಓಂ ವೇದವೇದ್ಯಾಯ ನಮಃ |
ಓಂ ಪೂರ್ಣಾಯ ನಮಃ |
ಓಂ ಪುಣ್ಯಾಯ ನಮಃ |
ಓಂ ಪುಣ್ಯಕೀರ್ತಯೇ ನಮಃ |
ಓಂ ಪಟೇಶಾಯ ನಮಃ |
ಓಂ ಪಾರಗಾಯ ನಮಃ |
ಓಂ ನಿಷ್ಕಲಾಯ ನಮಃ | ೬೩
ಓಂ ವರಪ್ರದಾಯ ನಮಃ |
ಓಂ ಕರ್ಕೋಟಕಾಯ ನಮಃ |
ಓಂ ಶ್ರೇಷ್ಠಾಯ ನಮಃ |
ಓಂ ಶಾಂತಾಯ ನಮಃ |
ಓಂ ದಾಂತಾಯ ನಮಃ |
ಓಂ ಆದಿತ್ಯಮರ್ದನಾಯ ನಮಃ |
ಓಂ ಸರ್ವಪೂಜ್ಯಾಯ ನಮಃ |
ಓಂ ಸರ್ವಾಕಾರಾಯ ನಮಃ |
ಓಂ ನಿರಾಶಯಾಯ ನಮಃ | ೭೨
ಓಂ ನಿರಂಜನಾಯ ನಮಃ |
ಓಂ ಐರಾವತಾಯ ನಮಃ |
ಓಂ ಶರಣ್ಯಾಯ ನಮಃ |
ಓಂ ಸರ್ವದಾಯಕಾಯ ನಮಃ |
ಓಂ ಧನಂಜಯಾಯ ನಮಃ |
ಓಂ ಅವ್ಯಕ್ತಾಯ ನಮಃ |
ಓಂ ವ್ಯಕ್ತರೂಪಾಯ ನಮಃ |
ಓಂ ತಮೋಹರಾಯ ನಮಃ |
ಓಂ ಯೋಗೀಶ್ವರಾಯ ನಮಃ | ೮೧
ಓಂ ಕಲ್ಯಾಣಾಯ ನಮಃ |
ಓಂ ವಾಲಾಯ ನಮಃ |
ಓಂ ಬ್ರಹ್ಮಚಾರಿಣೇ ನಮಃ |
ಓಂ ಶಂಕರಾನಂದಕರಾಯ ನಮಃ |
ಓಂ ಜಿತಕ್ರೋಧಾಯ ನಮಃ |
ಓಂ ಜೀವಾಯ ನಮಃ |
ಓಂ ಜಯದಾಯ ನಮಃ |
ಓಂ ಜಪಪ್ರಿಯಾಯ ನಮಃ |
ಓಂ ವಿಶ್ವರೂಪಾಯ ನಮಃ | ೯೦
ಓಂ ವಿಧಿಸ್ತುತಾಯ ನಮಃ |
ಓಂ ವಿಧೀಂದ್ರಶಿವಸಂಸ್ತುತ್ಯಾಯ ನಮಃ |
ಓಂ ಶ್ರೇಯಪ್ರದಾಯ ನಮಃ |
ಓಂ ಪ್ರಾಣದಾಯ ನಮಃ |
ಓಂ ವಿಷ್ಣುತಲ್ಪಾಯ ನಮಃ |
ಓಂ ಗುಪ್ತಾಯ ನಮಃ |
ಓಂ ಗುಪ್ತತರಾಯ ನಮಃ |
ಓಂ ರಕ್ತವಸ್ತ್ರಾಯ ನಮಃ |
ಓಂ ರಕ್ತಭೂಷಾಯ ನಮಃ | ೯೯
ಓಂ ಭುಜಂಗಾಯ ನಮಃ |
ಓಂ ಭಯರೂಪಾಯ ನಮಃ |
ಓಂ ಸರೀಸೃಪಾಯ ನಮಃ |
ಓಂ ಸಕಲರೂಪಾಯ ನಮಃ |
ಓಂ ಕದ್ರುವಾಸಂಭೂತಾಯ ನಮಃ |
ಓಂ ಆಧಾರವಿಧಿಪಥಿಕಾಯ ನಮಃ |
ಓಂ ಸುಷುಮ್ನಾದ್ವಾರಮಧ್ಯಗಾಯ ನಮಃ |
ಓಂ ಫಣಿರತ್ನವಿಭೂಷಣಾಯ ನಮಃ |
ಓಂ ನಾಗೇಂದ್ರಾಯ ನಮಃ || ೧೦೮
ಇತಿ ನಾಗದೇವತಾ ಅಷ್ಟೋತ್ತರ ಶತನಾಮಾವಳಿಃ ||
[01/08, 10:33 AM] Pandit Venkatesh. Astrologer. Kannada: ಆಗಸ್ಟ್ 2, 2022 ರಂದು ಮಂಗಳವಾರದಂದು ನಾಗ ಪಂಚಮಿ
ನಾಗ ಪಂಚಮಿ ಪೂಜೆ ಮುಹೂರ್ತ - 06:05 AM ನಿಂದ 08:38 AM
ಅವಧಿ - 02 ಗಂಟೆಗಳು 32 ನಿಮಿಷಗಳು
*ನಾಗರಪಂಚಮಿ*
*ನಾಗಪಂಚಮಿ ವ್ರತ, ಪೂಜೆ ಮಾಡಿದನಂತರ ಈ ಕಥೆ ಕೇಳುವುದರಿಂದ ವೃತದ
ಫಲ ಪ್ರಾಪ್ತಿಯಾಗುತ್ತದೆ.
ಪಾಂಡು ಚಕ್ರವರ್ತಿಯ ಮಕ್ಕಳಲ್ಲಿ ಪ್ರಸಿದ್ಧ ಧನುರ್ಧಾರಿ ಅರ್ಜುನನ ಮಗ ಅಭಿಮನ್ಯು. ಅಭಿಮನ್ಯುವಿನ ಮಗ ಪರೀಕ್ಷಿತ.
ಧರ್ಮರಾಯನ ಕಾಲಾನಂತರ ಭರತಖಂಡವನ್ನು ಆಳಿದವನು ಅವನೇ.
ದ್ವಾಪರಾ ಯುಗದ ಅಂತ್ಯದಲ್ಲಿ ಪ್ರವೇಶಿಸಿದ
#ಕಲಿಪುರುಷನು ಪರೀಕ್ಷಿತನನ್ನು ಶನಿಯಂತೆ ಕಾಡುತ್ತಾನೆ.
ಪರೀಕ್ಷಿತನನ್ನು ಮೃಗಬೇಟೆಗೆ ಪ್ರೇರೇಪಿಸುತ್ತಾನೆ. ಮೃಗಬೇಟೆಗೆಂದು ಕಾಡಿಗೆ ಹೋದ ಪರೀಕ್ಷಿತನಿಗೆ ಆಯಾಸವಾಗುತ್ತದೆ. ಸಮೀಪದಲ್ಲೇ ಇದ್ದ ಋಷಿಯ ಆಶ್ರಮವೊಂದನ್ನು ಪ್ರವೇಶಿಸುತ್ತಾನೆ. ಆಗ ಅಲ್ಲಿ ಧ್ಯಾನಸ್ಥನಾಗಿರುವ ಶಮೀಕ ಮುನಿಗಳ ಹೊರತಾಗಿ ಬೇರಾರೂ ಇದ್ದಿರುವುದಿಲ್ಲ. ಧ್ಯಾನಸ್ಥನಾದ ಮುನಿಗಳಲ್ಲಿ ಪರೀಕ್ಷಿತನು ನೀರು ಕೇಳುತ್ತಾನೆ. ತನ್ನಷ್ಟಕ್ಕೇ ತಾನು ಧ್ಯಾನದಲ್ಲಿ ಮಗ್ನನಾಗಿರುವ ಮುನಿಯು ಕುಳಿತಲ್ಲಿಂದ ಏಳದೇ ಇದ್ದಾಗ, ಕಲಿಯ ಪ್ರೇರಣೆಯಿಂದಾಗಿ ಅರಸನಿಗೆ ಮುನಿಯ ಮೇಲೆ ಕ್ರೋಧ ಉಕ್ಕೇರುತ್ತದೆ. ಕುಪಿತನಾದ ಪರೀಕ್ಷಿತನು ಸಮೀಪದಲ್ಲೇ ಇದ್ದ ಸತ್ತ ನಾಗರ ಹಾವೊಂದನ್ನು ಮುನಿಯ ಕೊರಳಿಗೆ ಸುತ್ತಿ ಅರಮನೆಗೆ ತೆರಳುತ್ತಾನೆ.
ಕುಶ ,ಸಮಿದೆಗಳನ್ನು ತರಲೆಂದು ಹೊರಗಡೆ ಹೋಗಿದ್ದ ಶಮೀಕ ಮುನಿಯ ಪುತ್ರ ಶೃಂಗಿ ಮುನಿಯು ಸ್ವಲ್ಪ ಸಮಯದ ನಂತರ ಆಶ್ರಮಕ್ಕೆ ಮರಳುತ್ತಾನೆ. ತಂದೆಯ ಕೊರಳಲ್ಲಿದ್ದ ಸತ್ತ ನಾಗರ ಹಾವನ್ನು ನೋಡಿ ಆತನಿಗೆ ವಿಪರೀತ ಕೋಪ ಬರುತ್ತದೆ. ಕುಪಿತನಾದ ಶೃಂಗಿಯು “ಯಾರು ಈ ಕೃತ್ಯವನ್ನು ಮಾಡಿದ್ದಾರೋ ಅವರು ಇನ್ನು ಏಳು ದಿನಗಳಲ್ಲಿ ತಕ್ಷಕನಿಂದ ಕಚ್ಚಲ್ಪಟ್ಟು ಮರಣ ಹೊಂದಲಿ” ಎಂದು ಶಪಿಸುತ್ತಾನೆ. ಸ್ವಲ್ಪ ಸಮಯದ ಬಳಿಕ ಧ್ಯಾನವನ್ನು ಮುಗಿಸಿ ಎಚ್ಚೆತ್ತ ಶಮೀಕ ಮುನಿಯು ತನ್ನ ಮಗನು ಧರ್ಮಿಷ್ಠನಾದ ಭರತಖಂಡದ ಚಕ್ರವರ್ತಿಯನ್ನು ಶಪಿಸಿದ್ದನ್ನು ತಿಳಿದು ಪಶ್ಚಾತ್ತಾಪ ಪಡುತ್ತಾನೆ. ತನ್ನ ಶಿಷ್ಯಂದಿರಲ್ಲಿಯೇ ಓರ್ವನನ್ನು ಪರೀಕ್ಷಿತನಲ್ಲಿಗೆ ಕಳುಹಿಸಿ ಆತನಿಗೆ ತನ್ನ ಮಗನ ಶಾಪದ ವೃತ್ತಾಂತವನ್ನು ತಿಳಿಸಿ , ಸೂಕ್ತ ಪರಿಹಾರಗಳನ್ನು ಮಾಡಿಕೊಳ್ಳುವಂತೆ ಸಲಹೆಗಳನ್ನು ನೀಡುತ್ತಾನೆ.
ಮುನಿಯ ಶಾಪದ ವಿಚಾರವನ್ನು ತಿಳಿದು ಪರೀಕ್ಷಿತನಿಗೆ ಅಪಾರ ದುಃಖವಾಗುತ್ತದೆ. ಸಿಟ್ಟಿನ ಭರದಲ್ಲಿ ತಾನು ಶಮೀಕ ಮುನಿಗಳಿಗೆ ಮಾಡಿದ ಅಪಚಾರದ ವಿಷಯವನ್ನು ನೆನಪಿಸಿಕೊಂಡು ವ್ಯಥೆ ಪಡುತ್ತಾನೆ. ತಾನು ಮಾಡಿದ ಅಂತಹ ಘೋರವಾದ ತಪ್ಪಿಗೆ ಶೃಂಗಿ ಮುನಿಯು ಶಪಿಸಿದ್ದು ಸರಿಯಾಗಿಯೇ ಇದೆ. ತಪ್ಪು ಮಾಡಿದ ತಾನು ಶಿಕ್ಷೆಯನ್ನು ಅನುಭವಿಸುತ್ತೇನೆ, ತಕ್ಷಕ ಬರಲಿ, ತನ್ನನ್ನು ಕಚ್ಚಿ ಸಾಯಿಸಲಿ ಎಂದುಕೊಂಡು ಸಾಯಲು ಸಿದ್ಧನಾಗುತ್ತಾನೆ. ಆದರೆ ಅರಸನ ಮಂತ್ರಿಗಳು , ಕುಲಪುರೋಹಿತರು , ಪರಿವಾರದವರೆಲ್ಲ ಸೇರಿ ಪರೀಕ್ಷಿತನನ್ನು ತಕ್ಷಕನಿಂದ ರಕ್ಷಿಸಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅರಸನನ್ನು ಒಂದು ರಕ್ಷಿತ ಗೃಹದಲ್ಲಿ ಇರಿಸಿ ಒಂದು ಹುಳುವೂ ಕೂಡಾ ಒಳಗೆ ಪ್ರವೇಶಿಸದಂತೆ ಭದ್ರವಾದ ಕಾವಲನ್ನು ಇರಿಸುತ್ತಾರೆ.
ಆದರೆ ಇಂತಹ ಯಾವುದೇ ಭದ್ರತೆಯು ಮುನಿಯ ಶಾಪದಿಂದ ಉಂಟಾಗಬಹುದಾದ ತನ್ನ ಮರಣವನ್ನು ತಪ್ಪಿಸಲಾರದು, ತನ್ನ ಮರಣವು ನಿಶ್ಚಿತ ಎಂಬುದನ್ನು ಅರಿತಿದ್ದ ಪ್ರಾಜ್ಞನಾದ ಪರೀಕ್ಷಿತನು ತನ್ನ ಜೀವನದ ಕೊನೆಯ ಆ ಏಳು ದಿನಗಳನ್ನು ಪುಣ್ಯ ಕಥಾ ಶ್ರವಣ ಮಾಡುತ್ತಾ ಸಂತೋಷದಿಂದ ಕಳೆಯಲು ಬಯಸುತ್ತಾನೆ. ಅವನ ಇಚ್ಛೆಯಂತೆ ಶುಕ ಮುನಿಗಳು ಆತನಿಗೆ ಭಾಗವತ ಪುರಾಣಗಳ ಕಥೆಗಳನ್ನು ಹೇಳುತ್ತಾರೆ. ಅರಸನು ತನ್ನ ರಾಣಿ ಇರಾವತಿಯೊಡಗೂಡಿ ದೇವರ ಭಜನೆಯಲ್ಲಿಯೇ ಆ ಏಳು ದಿನಗಳನ್ನು ಕಳೆಯುತ್ತಾನೆ.
ಶೃಂಗಿ ಮುನಿಯ ಶಾಪದಿಂದ ತಕ್ಷಕನು ಪೇಚಿಗೆ ಸಿಲುಕುತ್ತಾನೆ. ತನಗೂ ಪರೀಕ್ಷಿತನಿಗೂ ನೇರವಾಗಿ ಯಾವುದೇ ದ್ವೇಷ ಇಲ್ಲದಿದ್ದರೂ ವಿನಾಕಾರಣ ಧರ್ಮಿಷ್ಠನಾದ ಆ ಚಕ್ರವರ್ತಿ ಪರೀಕ್ಷಿತನನ್ನು ಕಚ್ಚಿ ಕೊಲ್ಲಬೇಕು. ಇಲ್ಲದಿದ್ದಲ್ಲಿ ಶೃಂಗಿ ಮುನಿಯ ಶಾಪ ಹುಸಿಯಾಗಿ ಆತನ ಕೋಪಕ್ಕೆ ತಾನು ಕಾರಣನಾಗಬೇಕಾಗುತ್ತದೆ ಎಂದು ಚಿಂತಿಸುತ್ತಾನೆ. ಏನು ಮಾಡಲಿ ಎಂಬುದಾಗಿ ಚಿಂತಿಸುತ್ತಾನೆ. ಆಗ ಅವನಿಗೆ ಈ ಹಿಂದೆ ಅರ್ಜುನನು ಖಾಂಡವ ವನವನ್ನು ದಹಿಸುವ ಸಂದರ್ಭದಲ್ಲಿ ಅನೇಕ ನಾಗಗಳ ಜೊತೆಯಲ್ಲಿ ತನ್ನ ಹೆಂಡತಿಯನ್ನು ಕೂಡಾ ಕೊಂದು ತನ್ನ ಮಗ ಅಶ್ವಸೇನನನ್ನು ಅರೆಗಡಿದುದು ನೆನಪಾಗುತ್ತದೆ.
ಆ ದ್ವೇಷವನ್ನೇ ನೆಪವಾಗಿ ಇಟ್ಟುಕೊಂಡು ತಾನು ಇಂದು ಆ ಅರ್ಜುನನ ಮೊಮ್ಮಗನಾದ ಈ ಪರೀಕ್ಷಿತನನ್ನು ಕಚ್ಚಿ ಕೊಲ್ಲುತ್ತೇನೆ ಎಂಬುದಾಗಿ ಹೊರಡುತ್ತಾನೆ.
ಆದರೆ ಪರೀಕ್ಷಿತನು ಇರುವ ಆ ರಕ್ಷಿತ ಗೃಹಕ್ಕೆ ಬಿಗಿಯಾದ ಭದ್ರತೆ ಇದೆ. ತನಗೆ ಒಳಗಡೆ ಪ್ರವೇಶಿಸಲು ಸಾಧ್ಯವೇ ಇಲ್ಲ ಎಂಬುದು ತಕ್ಷಕನಿಗೆ ಅರಿವಾಗುತ್ತದೆ. ಅಷ್ಟರಲ್ಲಿ ಪರಿಚಾರಕರು ಅರಸನಿಗೆ ಹಣ್ಣುಗಳನ್ನು ಕೊಂಡೊಯ್ದು ಕೊಡುತ್ತಿರುವುದು ಆತನ ಗಮನಕ್ಕೆ ಬರುತ್ತದೆ. ತಕ್ಷಣ ಆತನು ಒಂದು ಉಪಾಯವನ್ನು ಮಾಡುತ್ತಾನೆ. ತಾನು ಒಂದು ಚಿಕ್ಕ ಹುಳುವಿನ ರೂಪ ಧರಿಸಿ ಆ ಹಣ್ಣಿನೊಳಗೆ ಸೇರಿಕೊಳ್ಳುತ್ತಾನೆ. ಅರಸನು ಆ ಹಣ್ಣನ್ನು ಕತ್ತರಿಸಿದಾಗ ಅದರಲ್ಲಿ ಹುಳ ಇರುವುದನ್ನು ನೋಡುತ್ತಾನೆ.
ಪ್ರಾಜ್ಞನಾದ ಪರೀಕ್ಷಿತನಿಗೆ ಆ ಹುಳವೇ ತಕ್ಷಕ ಎಂಬುದು ವಿಧಿತವಾಗುತ್ತದೆ. ಹುಳದ ರೂಪದಲ್ಲಿದ್ದ ತಕ್ಷಕನು ಬೆಳೆ ಬೆಳೆದು ದೊಡ್ಡದಾಗಿ ನಿಜರೂಪ ಧರಿಸಿ ಪರೀಕ್ಷಿತನನ್ನು ಕಚ್ಚಿ ಕೊಲ್ಲುತ್ತಾನೆ.
ಸಾಯುವ ಸಂದರ್ಭದಲ್ಲಿ ಅರಸನು ದುಃಖಿಸುತ್ತಿರುವ ತನ್ನ ರಾಣಿಯಾದ ಇರಾವತಿಯನ್ನು ಕರೆದು “ನನ್ನೊಡನೆ ನೀನೂ ಕೂಡಾ ಸಹಗಮನ ಮಾಡಿಕೊಳ್ಳಬೇಡ , ನೀನು ಕ್ಷತ್ರಿಯಾಣಿಯಾಗಿ ನಿನ್ನ ಕರ್ತವ್ಯವನ್ನು ಮಾಡು , ಮಗನಾದ ಜನಮೇಜಯನು ಇನ್ನೂ ತುಂಬಾ ಚಿಕ್ಕವನು , ಏನೂ ಅರಿಯದವನು , ಆತನನ್ನು ಬೆಳೆಸಿ ದೊಡ್ಡವನನ್ನಾಗಿ ಮಾಡು , ನಂತರ ಅವನಿಗೆ ಪಟ್ಟವನ್ನು ಕಟ್ಟು , ನನ್ನ ಮರಣದ ಗುಟ್ಟನ್ನು ಅವನಿಗೆ ತಿಳಿಸಬೇಡ , ಸರ್ಪ ದಂಶನದಿಂದ ನಾನು ತೀರಿಕೊಂಡೆ ಎಂಬ ಸತ್ಯವನ್ನು ಯಾವುದೇ ಕಾರಣಕ್ಕೂ ಆತನಿಗೆ ತಿಳಿಸಬೇಡ , ತಿಳಿದರೆ ಸಹಜವಾಗಿಯೇ ಅವನಲ್ಲಿಯೂ ನಾಗಕುಲದ ಮೇಲೆ ವೈರತ್ವ ಬೆಳೆಯುತ್ತದೆ , ನಾಗದ್ವೇಷ ಒಳ್ಳೆಯದಲ್ಲ” ಎಂದು ಹೇಳಿ ಆತ ಪ್ರಾಣ ಬಿಡುತ್ತಾನೆ.
ಪರೀಕ್ಷಿತನ ಮರಣಾ ನಂತರ ಆತನ ಮಗ ಜನಮೇಜಯನು ಪಟ್ಟವೇರುತ್ತಾನೆ. ಜನಮೇಜಯನು ಭರತ ಖಂಡವನ್ನು ಆಳಿದ ದ್ವಾಪರಾ ಯುಗದ ಕೊನೆಯ ಚಕ್ರವರ್ತಿಯಾಗಿದ್ದಾನೆ. ದ್ವಾಪರಾ ಯುಗವು ಮುಗಿದು ಕಲಿಯುಗವು ಪ್ರಾರಂಭವಾಗುವ ಆ ಯುಗಸಂಧಿ ಕಾಲದಲ್ಲಿ ಆಳಿಕೊಂಡಿದ್ದವನು ಜನಮೇಜಯ. ಹೀಗಾಗಿ ಕಲಿಯುಗದ ಪ್ರಥಮ ಚಕ್ರವರ್ತಿಯೂ ಅವನೇ ಆಗಿದ್ದಾನೆ. ಒಂದು ರೀತಿಯಲ್ಲಿ ಆತನೊಬ್ಬ ಯುಗ ಪ್ರವರ್ತಕ.
ಚಿಕ್ಕಂದಿನಲ್ಲಿಯೇ ಚಕ್ರವರ್ತಿ ಪಟ್ಟವನ್ನು ಸ್ವೀಕರಿಸಿ ಹಲವು ವರ್ಷಗಳವರೆಗೆ ಭರತ ಖಂಡವನ್ನು ಆಳಿ ಬೆಳೆದು ದೊಡ್ಡವನಾಗಿದ್ದರೂ ಆತನಿಗೆ ತನ್ನ ತಂದೆಯ ಸಾವಿನ ರಹಸ್ಯವು ತಿಳಿದಿರಲಿಲ್ಲ. ಏಕೆಂದರೆ ಆತನ ತಾಯಿ ಇರಾವತಿಯಾಗಲೀ , ಮಂತ್ರಿಗಳಾಗಲೀ , ಕುಲಪುರೋಹಿತರಾಗಲೀ ಯಾರೂ ಕೂಡಾ ಆತನಿಗೆ ಆ ವಿಷಯವನ್ನು ತಿಳಿಸಿರಲಿಲ್ಲ.
ಹೀಗಿರುವಾಗ ವೇದ ಮುನಿಗಳ ಆಶ್ರಮದಲ್ಲಿ ಆತನ ಶಿಷ್ಯನಾದ ಉತ್ತಂಕ ಎಂಬ ವಟುವೊಬ್ಬನು ವಿದ್ಯಾಭ್ಯಾಸವನ್ನು ಮೂರೈಸಿದ ಬಳಿಕ ತನ್ನ ಗುರುಗಳಿಗೆ ಗುರುಕಾಣಿಕೆಯನ್ನು ಕೊಡಬೇಕೆಂದು ತೀರ್ಮಾನಿಸಿದನು. ಆದರೆ ವೇದ ಮುನಿಗಳು ಶಿಷ್ಯರಿಂದ ಕಾಣಿಕೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಆದರೂ ಉತ್ತಂಕನು ಬಂದು ಗುರುಗಳಿಗೆ ವಂದಿಸಿ “ಗುರುಗಳೇ ನಿಮ್ಮ ದಯೆಯಿಂದಲೇ ನಾನು ವಿದ್ಯೆಯನ್ನು ಕಲಿತೆ , ನಾನು ನಿಮಗೆ ಗುರುದಕ್ಷಿಣೆಯನ್ನು ಕೊಡಲು ಬಯಸಿದ್ದೇನೆ , ನಿಮಗೆ ಏನು ಬೇಕೆಂಬುದನ್ನು ಹೇಳಿ , ತಂದು ಕೊಡುವೆ , ಅದನ್ನು ದಯವಿಟ್ಟು ಸ್ವೀಕರಿಸಬೇಕು” ಎನ್ನುತ್ತಾನೆ.
ಆಗ ವೇದಮುನಿಗಳು “ನೀನು ಉತ್ತಮ ಪ್ರಜೆಯಾದರೆ ಅದೇ ನನಗೆ ಗುರುಕಾಣಿಕೆ , ನಾನು ಕಾಣಿಕೆಗಳನ್ನು ಸ್ವೀಕರಿಸುವುದಿಲ್ಲ , ಬೇಕಿದ್ದರೆ ನೀನು ಗುರುಪತ್ನಿಯನ್ನು ಕೇಳಿ ನೋಡು” ಎಂದು ಉತ್ತಂಕನನ್ನು ತನ್ನ ಹೆಂಡತಿಯೆಡೆಗೆ ಕಳುಹಿಸುತ್ತಾನೆ.
ಉತ್ತಂಕನು ಗುರುಪತ್ನಿ ಇದ್ದೆಡೆಗೆ ಹೋಗಿ ವಂದಿಸಿ “ತಾಯಿ ನನ್ನ ವಿದ್ಯಾಭ್ಯಾಸ ಮುಗಿದಿದೆ , ನೀವು ನನ್ನನ್ನು ಮಗನಂತೆ ಸಾಕಿ ಸಲಹಿದ್ದೀರಿ , ನಾನು ಗುರುಕಾಣಿಕೆಯನ್ನು ಕೊಡಲು ಬಯಸಿದ್ದೇನೆ , ನಿಮಗೆ ಏನು ಬೇಕು ಹೇಳಿ” ಎನ್ನುತ್ತಾನೆ. ಆಗ ಆಕೆಯು “ನಾನು ಪೂಜೆಗೆಂದು ಸುಮಂಗಲಿಯರನ್ನು ಆಹ್ವಾನಿಸಿದ್ದೇನೆ , ಅವರೆಲ್ಲ ಬರುವಾಗ ನಾನು ಬರಿ ಕಿವಿಯಲ್ಲಿ ಇರುವುದು ಸರಿಯಲ್ಲ , ಹೀಗಾಗಿ ಆ ಒಂದು ದಿನದ ಮಟ್ಟಿಗೆ ಪೌಷ್ಯ ರಾಜನ ಹೆಂಡತಿಯ ಕಿವಿಯ ಓಲೆಗಳನ್ನು ತಂದು ಕೊಡುವೆಯಾ” ಎಂದು ಕೇಳುತ್ತಾಳೆ.
ಉತ್ತಂಕನು ಆದೀತು ಎಂದು ಹೇಳಿ ಅವಳಿಗೆ ವಂದಿಸಿ ಪೌಷ್ಯ ರಾಣಿಯಲ್ಲಿಗೆ ಹೋಗುತ್ತಾನೆ. ರಾಣಿಯು ಬಂದಿರುವ ವಟುವಿಗೆ ವಂದಿಸಿ ಉಪಚರಿಸಿ ಬಂದಿರುವ ಕಾರಣವನ್ನು ಕೇಳುತ್ತಾಳೆ. ಉತ್ತಂಕನು ವಿಷಯವನ್ನು ತಿಳಿಸಿದಾಗ , ರಾಣಿಗೆ ತುಂಬಾ ಸಂತೋಷವಾಗುತ್ತದೆ. “ಋಷಿ ಪತ್ನಿಯೋರ್ವಳು ನನ್ನ ಆಭರಣಗಳನ್ನು ಬಯಸಿದ್ದಾಳೆ ಎಂದರೆ ಅದು ನನ್ನ ಭಾಗ್ಯವೆಂದೇ ತಿಳಿಯುತ್ತೇನೆ , ಕೇವಲ ಒಂದು ದಿನದ ಮಟ್ಟಿಗಲ್ಲ ಶಾಶ್ವತವಾಗಿ ಅವುಗಳನ್ನು ಆ ಮುನಿ ಪತ್ನಿಗೆ ನೀಡುತ್ತೇನೆ , ಆದರೆ ಕೊಂಡು ಹೋಗುವಾಗ ಜಾಗ್ರತೆ , ಇವು ಮೂರು ಲೋಕಗಳಲ್ಲಿಯೂ ಪ್ರಸಿದ್ಧವಾದ ಆಭರಣಗಳಾಗಿವೆ , ಈ ಹಿಂದೆ ತಕ್ಷಕನು ಅವುಗಳನ್ನು ಅಪರಿಸಲು ಪ್ರಯತ್ನಿಸಿದ್ದಾನೆ , ಹೀಗಾಗಿ ವಿಶೇಷವಾಗಿ ಎಚ್ಚರವಹಿಸಿ” ಎಂದು ಹೇಳಿ ಉತ್ತಂಕನಿಗೆ ನವರತ್ನ ಖಚಿತವಾದ ಆ ಆಭರಣಗಳನ್ನು ನೀಡುತ್ತಾಳೆ.
ಉತ್ತಂಕನು ಆಭರಣಗಳನ್ನು ಗಂಟು ಕಟ್ಟಿಕೊಂಡು ಬರುವಾಗ ಪೌಷ್ಯ ರಾಣಿಯು ಹೇಳಿದಂತೆಯೇ ದಾರಿಯಲ್ಲಿ ತಕ್ಷಕನು ಅವನನ್ನು ಅಡ್ಡಯಿಸುತ್ತಾನೆ. ಫಣಿಗಳಿಗೆ ಮಣಿ ರತ್ನಗಳ ಮೇಲೆ ವ್ಯಾಮೋಹ ಜಾಸ್ತಿ ತಾನೇ ? ಹೀಗಾಗಿ ಅವನು ಉತ್ತಂಕನನ್ನು ವಂಚಿಸಿ ಅವನ ಬಳಿಯಿದ್ದ ಆಭರಣಗಳನ್ನು ಬಲಾತ್ಕಾರವಾಗಿ ಕೊಂಡೊಯ್ದು ಪಾತಾಳದಲ್ಲಿ ಬಚ್ಚಿಡುತ್ತಾನೆ. ಅಸಹಾಯಕನಾದ ಉತ್ತಂಕನು ಅಳುತ್ತಾನೆ , ಹೇಗಾದರೂ ಮಾಡಿ ತಕ್ಷಕನ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದುಕೊಂಡು ನೇರವಾಗಿ ಹಸ್ತಿನಾವತಿಗೆ ಹೋಗುತ್ತಾನೆ.
ಅಲ್ಲಿ ಅರಸನಾದ ಜನಮೇಜಯನನ್ನು ಗುಪ್ತವಾಗಿ ಭೇಟಿಮಾಡಿ ಆತನಿಗೆ ಆತನ ತಂದೆ ಪರೀಕ್ಷಿತನ ಮರಣ ರಹಸ್ಯವನ್ನು ತಿಳಿಸುತ್ತಾನೆ. ತನ್ನ ತಂದೆಯ ಮರಣಕ್ಕೆ ತಕ್ಷಕನೇ ಕಾರಣ ಎಂಬ ವಿಷಯವನ್ನು ತಿಳಿದ ಜನಮೇಜಯನು ಸಿಟ್ಟಿನಿಂದ ಹಾರಾಡುತ್ತಾನೆ. ಆಗ ಉತ್ತಂಕನು “ತಕ್ಷಕನ ಮೇಲೆ ಸೇಡು ತೀರಿಸಿಕೊಳ್ಳುವ ಇಚ್ಛೆ ನಿನಗಿದ್ದರೆ ಈ ಕೂಡಲೇ ಸರ್ಪಯಾಗವನ್ನು ಮಾಡು , ನಾಗಕುಲವನ್ನೇ ನಾಶ ಮಾಡು” ಎಂದು ಹೇಳಿ ಆತನಲ್ಲಿ ನಾಗದ್ವೇಷದ ಬೀಜವನ್ನು ಬಿತ್ತಿ ಹೊರಟುಹೋಗುತ್ತಾನೆ.
ತಾಯಿಯಾಗಲೀ , ಮಂತ್ರಿಗಳಾಗಲೀ , ಕುಲಪುರೋಹಿತರಾಗಲೀ ಎಷ್ಟೇ ಹೇಳಿದರೂ ಕೇಳದ ಜನಮೇಜಯನು ತಕ್ಷಕನ ಮೇಲೆ ಕುಪಿತನಾಗಿ ಸಂಪೂರ್ಣ ನಾಗಕುಲವನ್ನೇ ನಾಶಪಡಿಸುತ್ತೇನೆ ಎಂಬುದಾಗಿ ಸರ್ಪಯಾಗವನ್ನು ಮಾಡಲು ಸಂಕಲ್ಪಿಸುತ್ತಾನೆ. ಜಗತ್ತಿನಲ್ಲಿ ಈ ಹಿಂದೆ ಯಾರೂ ಮಾಡದೇ ಇದ್ದ , ಮುಂದೆ ಕೂಡಾ ಯಾರೂ ಮಾಡದಂತಹ ಸರ್ಪಯಾಗವನ್ನು ಮಾಡಲು ಉದ್ಯುಕ್ತನಾಗುತ್ತಾನೆ. ಅದಕ್ಕಾಗಿ ಬೃಹತ್ ಯಾಗ ಶಾಲೆಯನ್ನು ನಿರ್ಮಿಸಿ , ಋಷಿ ಮುನಿಗಳನ್ನು ಬ್ರಾಹ್ಮಣರನ್ನೆಲ್ಲ ಆಮಂತ್ರಿಸಿ , ಬೇಡಿದ ವಿಪ್ರರಿಗೆ ಅವರಿಗೆ ಬೇಕಾದುದನ್ನು ದಾನ ಮಾಡುತ್ತಾ ವಿಜೃಂಭಣೆಯಿಂದ ಯಾಗವನ್ನು ನಡೆಸುತ್ತಾನೆ. ಅಧ್ವರ್ಯುವಾಗಿ ತಾನೇ ಕುಳಿತುಕೊಳ್ಳುತ್ತಾನೆ. ಪುರೋಹಿತರು ಮಂತ್ರೋಚ್ಛಾರಣೆ ಮಾಡಿ ಆಹ್ವಾನಿಸಿದಂತೆ ಮಂತ್ರದ ವಶೀಕರಣಕ್ಕೆ ಸಿಲುಕಿದ ನಾಗಗಳು ಒಂದೊಂದಾಗಿ ಬಂದು ಯಜ್ಞಕುಂಡಕ್ಕೆ ಬಿದ್ದು ಆಹುತಿಯಾಗತೊಡಗುತ್ತವೆ.
ಹಲವು ನಾಗ ಸಂತತಿಗಳು ಅಳಿದು ಹೋಗುತ್ತವೆ. ಎಲ್ಲಾ ನಾಗಗಳು ಸುಟ್ಟು ಹೋದರೂ ತಕ್ಷಕನ ಸುಳಿವೇ ಇರಲಿಲ್ಲ. ಆತನನ್ನು ಸ್ವರ್ಗದಲ್ಲಿ ದೇವೇಂದ್ರನು ರಕ್ಷಿಸಿ ಹಿಡಿದಿಟ್ಟುಕೊಂಡಿದ್ದ. ಇದನ್ನು ಅರಿತ ಪುರೋಹಿತರು “ದೇವೇಂದ್ರ ಸಹಿತನಾಗಿ ತಕ್ಷಕನು ಬರಲಿ” ಎಂಬುದಾಗಿ ಮಂತ್ರ ಉಚ್ಛರಿಸುತ್ತಾರೆ. ಹೆದರಿದ ದೇವೇಂದ್ರ ತಾನು ತಪ್ಪಿಸಿಕೊಳ್ಳುತ್ತಾನೆ. ಇನ್ನೇನು ತಕ್ಷಕ ಬಂದು ಬೆಂಕಿಯಲ್ಲಿ ಬೀಳುತ್ತಾನೆ ಎಂಬಾಗ , ಆಸ್ತೀಕನೆಂಬ ವಟುವು ಬಂದು ತಡೆಯುತ್ತಾನೆ. ಜನಮೇಜಯನಿಗೆ ಕೋಪ ಬರುತ್ತದೆ. “ಎಲೈ ವಟುವೇ , ನಿನಗೇನು ಬೇಕೋ ಕೇಳು , ಕೊಡುವೆ , ಯಾಗವನ್ನು ನಿಲ್ಲಿಸಬೇಡ” ಎನ್ನುತ್ತಾನೆ. ಆಗ ಆಸ್ತೀಕನು ಜನಮೇಜಯನನ್ನು ಸಂತೈಸಿ , ಆತನ ತಂದೆಯ ಮರಣದ ನಿಜ ವೃತ್ತಾಂತವನ್ನು ತಿಳಿಸುತ್ತಾನೆ.
“ತಕ್ಷಕನದ್ದೇನೂ ತಪ್ಪಿರಲಿಲ್ಲ , ಅವನು ಕಚ್ಚುವುದಕ್ಕೆ ಮುನಿಯ ಶಾಪವೇ ಕಾರಣ. ಹಾಗಂತ ಮುನಿಯದ್ದೂ ತಪ್ಪಿರಲಿಲ್ಲ. ಅವನು ಶಪಿಸಲು ನಿನ್ನ ತಂದೆ ಆತನ ತಂದೆಗೆ ಮಾಡಿದ ಅಪಚಾರವೇ ಕಾರಣ. ಮತ್ತೆ ನಿನ್ನ ತಂದೆಯದ್ದೂ ತಪ್ಪಿರಲಿಲ್ಲ. ಆತ ಹಾಗೆ ತಪ್ಪಿ ನಡೆಯಲು ಕಲಿಯ ಪ್ರೇರಣೆಯೇ ಕಾರಣ. ಇದೆಲ್ಲವೂ ಕಲಿ ಕಾಲದ ಮಹಿಮೆ. ಆದ್ದರಿಂದ ನೀನು ಯಜ್ಞವನ್ನು ನಿಲ್ಲಿಸು. ಸುಮ್ಮನೇ ನಾಗ ಶಾಪಕ್ಕೆ ಒಳಗಾಗಬೇಡ” ಎನ್ನುತ್ತಾನೆ.
ಅಂತೆಯೇ ಜನಮೇಜಯನು ಸರ್ಪಯಾಗವನ್ನು ನಿಲ್ಲಿಸುತ್ತಾನೆ. ಸರ್ಪಗಳಲ್ಲಿ ತಕ್ಷಕನ ಕುಲವೊಂದು ಉಳಿಯುತ್ತದೆ. ಸರ್ಪಯಾಗವನ್ನು ನಿಲ್ಲಿಸಿದ ತರುವಾಯ ಜನಮೇಜಯನು ತಕ್ಷಕನ ಕ್ಷಮೆ ಯಾಚಿಸುತ್ತಾನೆ. ತಕ್ಷಕನು ಆತನನ್ನು ಕ್ಷಮಿಸಿದರೂ ಅಷ್ಟರಲ್ಲಾಗಲೇ ಹಲವು ನಾಗ ಕುಲಗಳು ದಹಿಸಿ ಹೋಗಿದ್ದರಿಂದ ಜನಮೇಜಯನಿಗೆ ನಾಗದೋಷ ಬರುತ್ತದೆ. ಪರಿಣಾಮವಾಗಿ ಆತನನ್ನು ಕುಷ್ಟರೋಗವು ಬಾಧಿಸುತ್ತದೆ.
ಮುಂದೆ ಗುರುವಾಯೂರು ಕ್ಷೇತ್ರದಲ್ಲಿ ಹರಿದರ್ಶನವಾದೊಡನೆ ಆತನ ದೋಷಗಳೆಲ್ಲವೂ ಪರಿಹಾರವಾಗುತ್ತವೆ. ಮುಂದೆ ಹಲವು ಕಾಲಗಳವರೆಗೆ ಜನಮೇಜಯನು ಈ ಕಲಿಯುಗದಲ್ಲಿಯೂ ಚಕ್ರವರ್ತಿಯಾಗಿ ಮೆರೆಯುತ್ತಾನೆ. ಆಸ್ತೀಕನು ತನ್ನನ್ನು ಹಾಗೂ ತನ್ನ ಕುಲದವರನ್ನು ಉಳಿಸಿದ್ದರಿಂದಾಗಿ ಹರುಷಗೊಂಡು “ಯಾರು ಆಸ್ತೀಕ, ಆಸ್ತೀಕ, ಆಸ್ತೀಕ ಎಂಬುದಾಗಿ ಮೂರು ಬಾರಿ ಉಚ್ಛರಿಸುತ್ತಾರೋ ಅವರಿಗೆ ನಾಗದೋಷ ತಟ್ಟದೇ ಇರಲಿ” ಎಂಬ ವರವೊಂದನ್ನು ತಕ್ಷಕನು ಕರುಣಿಸುತ್ತಾನೆ.
ಹೀಗೆ ಜನಮೇಜಯನು ಸರ್ಪಯಾಗವನ್ನು ನಿಲ್ಲಿಸಿದ ದಿನವೇ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ. ಅದನ್ನೇ ನಾವು ನಾಗರ ಪಂಚಮಿ ಎಂಬುದಾಗಿ ಆಚರಿಸುತ್ತೇವೆ. ಅಷ್ಟಕುಲ ನಾಗಗಳಾದ ಅನಂತ(ಶೇಷ) , ವಾಸುಕಿ , ಪದ್ಮ , ಮಹಾಪದ್ಮ , ತಕ್ಷಕ , ಕುಲೀಕ , ಕಾರ್ಕೋಟಕ ಮತ್ತು ಶಂಖಪಾಲ ಇವುಗಳನ್ನು ನಾವು ಆ ದಿನ ಪೂಜಿಸುತ್ತೇವೆ.
ಅರಿಶಿನ , ಕುಂಕುಮ , ಅಕ್ಕಿ ಮತ್ತು ಹೂವನ್ನು ನಾಗದೇವರಿಗೆ ಅರ್ಪಿಸುತ್ತೇವೆ. ಹಸಿಹಾಲು , ತುಪ್ಪ , ಸಕ್ಕರೆಯನ್ನು ನಾಗದೇವರ ಮೂರ್ತಿಗೆ ಅರ್ಪಿಸುತ್ತೇವೆ. ಪೂಜೆ ಪೂರ್ಣಗೊಂಡ ಬಳಿಕ ನಾಗದೇವರಿಗೆ ಆರತಿ ಬೆಳಗುತ್ತೇವೆ. ಹಾವಾಡಿಗರಿಗೆ ದಾನ ಮಾಡುವ ಕ್ರಮವೂ ಕೆಲವು ಕಡೆ ಇದೆ. ಪೂಜೆಯ ಅಂತ್ಯದಲ್ಲಿ ನಾಗ ಪಂಚಮಿಯ ಈ ಕಥೆಯನ್ನು ಕೇಳುವುದು ಒಳ್ಳೆಯದು.
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
[01/08, 7:33 PM] Pandit Venkatesh. Astrologer. Kannada: *ಶ್ರೀ ವರ ಮಹಾಲಕ್ಷ್ಮೀ ವ್ರತ*
"ಶುಕ್ಲೇ ಶ್ರಾವಣೇ ಮಾಸಿ ಪೂರ್ಣಿಮೋಪಾಂತ್ಯ ಭಾರ್ಗವೇ
" ವರಮಹಾಲಕ್ಷ್ಮೀ ವ್ರತ ಕಾರ್ಯಂ :-
ಎಂಬ ಶ್ಲೋಕದ ಪ್ರಕಾರ ಶ್ರಾವಣ ಮಾಸದಲ್ಲಿ ಬರುವ ಶುಕ್ಲ ಹುಣ್ಣಿಮೆಯ ಹತ್ತಿರದ ಶುಕ್ರವಾರ 05-08-2022 ಅಥವಾ ಹುಣ್ಣಿಮೆಯ ಶುಕ್ರವಾರದಲ್ಲಿ 12-08-2022ಆಚರಿಸಲ್ಪಡುವ ವ್ರತಪೂಜೆಯೇ
"ಶ್ರೀ ವರಮಹಾಲಕ್ಷ್ಮೀ ವ್ರತ"..
ಹಿಂದೆ ರಾಕ್ಷಸರು ಹಾಗೂ ದೇವತೆಗಳು ಮಂದಾರ ಪರ್ವತವನ್ನು ಕಡೆಯುವಾಗ ಶ್ರೀಲಕ್ಷ್ಮಿಯು ಸ್ವಯಂಭೂವಾಗಿ ಪದ್ಮದಲ್ಲಿ ಆವಿರ್ಭವಿಸುತ್ತಾಳೆ..
ಮಹಾಪದ್ಮ ಸಂಸ್ಥಳಾದ ದೇವಿಯು ಶ್ರೀಮಹಾಲಕ್ಷ್ಮೀ ಸ್ವರೂಪಿಣಿಯಾಗಿದ್ದಾಳೆ.
ಶ್ರೀ ಲಕ್ಷ್ಮಿಯು ಅಷ್ಟಲಕ್ಷ್ಮಿಯಾಗಿ ಎಲ್ಲರನ್ನೂ ಸಲಹುತ್ತಾಳೆ.
ಆದಿಲಕ್ಷ್ಮೀ, ಗಜಲಕ್ಷ್ಮೀ, ಧನಲಕ್ಷ್ಮೀ, ಧಾನ್ಯಲಕ್ಷ್ಮೀ, ಸಂತಾನಲಕ್ಷ್ಮೀ, ವೀರಲಕ್ಷ್ಮೀ, ವಿದ್ಯಾಲಕ್ಷ್ಮೀ, ಜಯಲಕ್ಷ್ಮೀ.
ಈ ರೀತಿ ಅಷ್ಟಲಕ್ಷ್ಮಿಯರಾಗಿ ಭಕ್ತರ ಕೋರಿಕೆಗಳನ್ನು ಅತೀ ಶೀಘ್ರದಲ್ಲೇ ನೆರವೇರಿಸುವ ಅಮೃತಾನಂದ ಮಯಿಯಾಗಿದ್ದಾಳೆ.
ವರಮಹಾಲಕ್ಷ್ಮೀ ವ್ರತವನ್ನು ಅತ್ಯಂತ ಮಹತ್ವದ ಮತ್ತು ಶಕ್ತಿಯುತವಾದ ಆಚರಣೆಯೆಂದು ಪರಿಗಣಿಸಲಾಗಿದೆ. ಏಕೆಂದರೆ ಶಿವನು ಪಾರ್ವತಿ ದೇವಿಗೆ ಈ ವ್ರತ ಮಾಡಲು ಇದರ ಪ್ರಾಮುಖ್ಯತೆ ಬಗ್ಗೆ ಹೇಳಿದ್ದಾನೆ. ವರಮಹಾಲಕ್ಷ್ಮೀ ವ್ರತವನ್ನು ಮಾಡುವ ಜನರು ಎಲ್ಲಾ ರೀತಿಯ ನೋವು ಮತ್ತು ದುಃಖಗಳಿಂದ ಮುಕ್ತರಾಗುತ್ತಾರೆ ಮತ್ತು ವಿಷಯವನ್ನು ಅನುಭವಿಸುತ್ತಾರೆ. ಅಲ್ಲದೆ, ಭಕ್ತರ ಜೀವನ ಮತ್ತು ಮನೆಯಲ್ಲಿ ಸಾಮರಸ್ಯ ಮತ್ತು ಶಾಂತಿ ಮೇಲುಗೈ ಸಾಧಿಸುತ್ತದೆ.
" ಶ್ರೀ ವರಲಕ್ಷ್ಮೀ ವ್ರತ ಕಥಾ "
ಒಂದುಸಾರಿ ಸೂತ ಪುರಾಣಿಕರು ಸನಕಾದಿ ಋಷಿಗಳು ಆಶ್ರಮಕ್ಕೆ ಬಂದಾಗ ಸನಕಾದಿ ಋಷಿಗಳು ಸೂತ ಪುರಾಣಿಕರನ್ನು ಅರ್ಘ್ಯ ಪಾದ್ಯಾದಿಗಳಿಂದ ಗೌರವಿಸಿದರು.
ಲೋಕಾನುಗ್ರಹಾರ್ಥವಾಗಿ ಯಾವುದಾದರೂ ವ್ರತವನ್ನು ಹೇಳಿ ಎಂದು ಕೇಳಿದರು. ಸೂತ ಪುರಾಣಿಕರೇ! ಯಾವ ವ್ರತವನ್ನು ಮಾಡಿದರೆ ಮಾನವರಿಗೆ ಸಕಲ ಸೌಭಾಗ್ಯವೂ, ಐಶ್ವರ್ಯವೂ ಉಂಟು ಮಾಡುವದೋ ಅಂಥಾ ವ್ರತದ ಪೂಜಾ ವಿಧಾನವನ್ನು ವಿವರಿಸಬೇಕೆಂದು ಕೇಳಲಾಗಿ ಆಗ ಸೂತ ಪುರಾಣಿಕರು ಹೀಗೆಂದರು.
ಸನಕಾದಿ ಋಷಿಗಳಿರೆ ಕೇಳಿರಿ. ಶಿವನ ವಾಸ ಸ್ಥಾನವಾದ ಕೈಲಾಸವು ಅತ್ಯಂತ ರಮಣೀಯವಾದ ಪ್ರದೇಶ. ಶ್ರೀ ಪಾರ್ವತೀದೇವಿಯರೊಡನೆ ಶ್ರೀ ಮಹಾರುದ್ರದೇವರು ಆನಂದವಾಗಿ ಅಲ್ಲಿ ವಾಸವಾಗಿರುವರು. ಪ್ರಥಮ ಗಣಗಳೂ ಇರುವುವು. ಕಲ್ಪವೃಕ್ಷ, ಕಾಮಧೇನು ಮುಂತಾದ ಅಮೂಲ್ಯವಾದ ವಸ್ತುಗಳೂ ಅಲ್ಲಿವೆ.
ಅನೇಕ ಬೆಲೆ ಬಾಳುವ ವೃಕ್ಷಗಳಾದ ಅಶ್ವತ್ಥ, ಆಲ, ದೇವದಾರು, ಶ್ರೀಗಂಧ ಮುಂತಾದ ಮರಗಳು ಗಗನಚುಂಬಿಯಾಗಿ ಬೆಳೆದು ಕೈಲಾಸದ ಶೋಭೆಯನ್ನು ಹೆಚ್ಚಿಸುತ್ತಿದೆ. ಬ್ರಹ್ಮರ್ಷಿಗಳೂ, ಮುನಿಗಳೂ ಶ್ರೀ ರುದ್ರದೇವರ ಸೇವೆಯಲ್ಲಿ ತೊಡಗಿರುವರು. ಯಕ್ಷ, ಗಂಧರ್ವ, ಕಿನ್ನರ, ಕಿಂಪುರುಷಾದಿಗಳು ಗಣಾ ಮಾಡುತ್ತಾ, ನರ್ತಿಸುತ್ತಾ ಶ್ರೀ ರುದ್ರದೇವರನ್ನು ಸ್ತುತಿಸುತ್ತಿರುವರು.
ಅವರೆಲ್ಲರ ಸೇವೆಯನ್ನು ಸ್ವೀಕರಿಸುತ್ತಾ ಶ್ರೀ ರುದ್ರದೇವರು ಆನಂದದಿಂದಿರಲು ಒಂದು ದಿನ ಶ್ರೀ ಪಾರ್ವತಿಯು ಶ್ರೀ ರುದ್ರದೇವರನ್ನು ಕುರಿತು....
" ಸ್ವಾಮೀ! ಲೋಕಾನುಗ್ರಹಾರ್ಥ ಒಂದು ವ್ರತವನ್ನು ಹೇಳು " ಎಂದು ಕೇಳಲು ಶ್ರೀ ರುದ್ರದೇವರು...
ಪಾರ್ವತೀ! " ವರಲಕ್ಷ್ಮೀ ವ್ರತ್ರ " ಎಂಬ ಒಂದು ವ್ರತವಿದೆ. ಆ ವ್ರತವನ್ನು ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರ ಅಂದರೆ 2ನೆಯ ಶುಕ್ರವಾರ ಈ ವ್ರತವನ್ನು ಆಚರಿಸಬೇಕು. ಆಗ ಪಾರ್ವತಿಯು ಎಲೈ ಸ್ವಾಮೀ!
ಈ ವ್ರತವನ್ನು ಮಾಡುವ ವಿಧಾನವೇನು?ಹಿಂದೆ ಯಾರು ಈ ವ್ರತವನ್ನು ಮಾಡಿದ್ದರು?
ಎಂದು ಕೇಳಲು ಶ್ರೀ ರುದ್ರದೇವರು " ಚಾರುಮತೀ " ಯ ಕಥೆಯನ್ನು ಹೇಳಿದರು.
ವಿದರ್ಭ ದೇಶದ ಕುಂಡಿನ ನಗರವು ಸಕಲೈಶ್ವರ್ಯ ಸಮೃದ್ಧವಾಗಿ ಕಂಗೊಳಿಸುತ್ತಿತ್ತು. ಇದೇ ನಗರದಲ್ಲಿ " ಚಾರುಮತೀ " ಎಂಬ ಒಬ್ಬ ಬ್ರಾಹ್ಮಣ ಪತಿವ್ರತಾ ಸ್ತ್ರೀ ಇದ್ದಳು. ಅವಳು ಪತಿ ಶುಶ್ರೂಷಾ ಪರಾಯಣಳೂ, ಮೃಧುಭಾಷಿಯೂ ಆಗಿದ್ದಳು. ಈ ಬ್ರಾಹ್ಮಣ ಸ್ತ್ರೀಯು ತುಂಬಾ ಬಡತನದಿಂದ ಕಷ್ಟ ಪಡುತ್ತಿದ್ದರೂ, ಪತಿಗೆ ಏನೂ ತೊಂದರೆಯಾಗದಂತೆ ಅವನ ಸೇವೆ ಮಾಡುತ್ತಿದ್ದಳು.
ಚಾರುಮತಿ ಯ ಪಾತಿವ್ರತ್ಯದ ಬಗ್ಗೆ ಸಂತುಷ್ಟಳಾದ ಶ್ರೀ ಮಹಾಲಕ್ಷ್ಮೀದೇವಿಯರು ಚಾರುಮತಿಯ ಸ್ವಪ್ನದಲ್ಲಿ ಕಾಣಿಸಿಕೊಂಡು...
ಮಹಾ ಪತಿವ್ರತೆಯಾದ ಚಾರುಮತೀ! ನೀನು ಪುಣ್ಯವಂತೆ. ನಿನಗೆ ವರವನ್ನು ಕೊಡಲು ಬಂದ ನಾನು ಶ್ರೀ ವರಮಹಾಲಕ್ಷ್ಮೀ!
ಶ್ರಾವಣ ಮಾಸದ ೨ನೆಯ ಶುಕ್ರವಾರ ನನ್ನನ್ನು ಯಾರು ಶ್ರದ್ಧಾ ಭಕ್ತಿಗಳಿಂದ ಪೂಜಿಸುತ್ತಾರೋ ಅವರಿಗೆ ಸಕಲ ಸಂಪತ್ತುಗಳನ್ನೂ ಕೊಡುತ್ತೇನೆ. ಯಾರು ಮಹಾ ಪುಣ್ಯಶಾಲಿಗಳೋ ಅವರಿಗೆ ಮಾತ್ರ ನನ್ನ ವ್ರತವನ್ನು ಮಾಡಬೇಕೆಂಬ ಇಚ್ಛೆ ಉಂಟಾಗುತ್ತದೆ. ಯಾವ ಪುರುಷನು ನನ್ನ ಪೂಜೆ ಮಾಡುವನೋ ಅವನೇ ಧನ್ಯನು! ಅವನೇ ಪರಾಕ್ರಮಿಯೂ, ಅವನೇ ಕೀರ್ತಿಶಾಲಿಯೂ ಆಗುತ್ತಾನೆ.
ನನ್ನ ಶ್ರೀ ವರಮಹಾಲಕ್ಷ್ಮೀ ವ್ರತವನ್ನು ಮಾಡುವ ಭಕ್ತರಿಗೆ ಧನ - ಧಾನ್ಯ, ಸಂಪತ್ತು, ಸಂತಾನಗಳನ್ನು ಕರುಣಿಸುತ್ತೇನೆ. ಕೊನೆಗೆ ಮೋಕ್ಷ ಪ್ರಾಪ್ತಿಯಾಗುವುದರಲ್ಲಿ ಸಂಶಯವಿಲ್ಲ!
ಎಂದು ಹೇಳಿ ಅಂತರ್ಧಾನಳಾದಳು. ಚಾರುಮತೀ ನಿದ್ರೆಯಿಂದ ಎಚ್ಚೆತ್ತು ಪತಿ ಹಾಗೂ ಬಂಧುಗಳಿಗೆ ಸ್ವಪ್ನ ವೃತ್ತಾಂತವನ್ನು ತಿಳಿಸಿದಾಗ ಎಲ್ಲರೂ ಚಾರುಮತಿಯ ಅದೃಷ್ಟವನ್ನು ಹೊಗಳಿದರು. ಅನಂತರ ಚಾರುಮತಿಯು ಶ್ರಾವಣ ಮಾಸದ ಎರಡನೆಯ ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮೀ ವ್ರತವನ್ನು ಕಲ್ಪೋಕ್ತವಾಗಿ
ಬಂಧು ಬಾಂಧವರೊಡನೆ ಸಂಭ್ರಮದಿಂದಲೂ, ಶ್ರದ್ಧಾ ಭಕ್ತಿಗಳಿಂದಲೂ ಆಚರಿಸಿದಳು.
ಇದರಿಂದ ಶ್ರೀ ವರಮಹಾಲಕ್ಷ್ಮೀದೇವಿಯ ಪರಮಾನುಗ್ರಹಕ್ಕೆ ಪಾತ್ರಳಾಗಿ ಸಕಲೈಶ್ವರ್ಯವನ್ನು ಪಡೆದು ಪುತ್ರ, ಪೌತ್ರ ಪರಿವೃತಳಾಗಿ ಅನ್ನದಾನ ಮಾಡುತ್ತಾ ಬಂಧು ಜನರನ್ನು ಪೋಷಿಸುತ್ತಾ ಇಹದಲ್ಲಿ ಸಕಲ ಸುಖಗಳನ್ನೂ ಪಡೆದು ಅಂತ್ಯದಲ್ಲಿ ವಿಷ್ಣುಲೋಕವನ್ನು ಪಡೆದಳು.
ಆದ್ದರಿಂದ ಗಿರಿಜೇ! ಈ ವ್ರತವನ್ನು ಯಾರು ಮಾಡುತ್ತಾರೋ ಅವರಿಗೆ ಸಕಲ ಸಂಪತ್ತುಗಳೂ ಪ್ರಾಪ್ತವಾಗುವುವು ಎಂದು ಹೇಳಲು ಶ್ರೀ ಪಾರ್ವತೀದೇವಿಯು....
ವ್ರತ ಮಾಡುವ ವಿಧಾನವನ್ನು ತಿಳಿಸಬೇಕೆಂದು ಪ್ರಾರ್ಥಿಸಲು ಶ್ರೀ ರುದ್ರದೇವರು...
ಈ ವ್ರತವನ್ನು ಮಾಡುವವರು ಪ್ರಾತಃ ಕಾಲದ ನಿತ್ಯಕರ್ಮ ಮುಗಿಸಿ, ಅಭ್ಯಂಜನ ಸ್ನಾನ ಮಾಡಿ ಶುಚೀರ್ಭೂತರಾಗಿ ಮಡಿ ಬಟ್ಟೆಗಳನ್ನುಟ್ಟು ಪೂಜೆಗೆ ಸಿದ್ಧ ಮಾಡಿಕೊಳ್ಳಬೇಕು.
ಸಾರಿಸಿ ರಂಗವಲ್ಲಿ ಹಾಕಿ, ಭೂಮಿಯ ಮೇಲೆ ಸುಂದರವಾದ ಮಂಟಪವನ್ನು ನಿರ್ಮಿಸಬೇಕು. ಮಂಟಪದ ಮಧ್ಯ ಭಾಗದಲ್ಲಿ ಪಂಚ ವರ್ಣಗಳಿಂದ ಅಷ್ಟ ದಳ ಪದ್ಮವನ್ನು ಬರೆದು ತಟ್ಟೆಯಲ್ಲಿ ಅಕ್ಕಿ ಹಾಕಿ ಅದರ ಮೇಲೆ ಕಳಶವನ್ನಿಟ್ಟು ಪ್ರಾಣ ಪ್ರತಿಷ್ಠೆ ಮಾಡಿ ಕಲ್ಪೋಕ್ತ ಪ್ರಕಾರ ಪೂಜಿಸಬೇಕು.
5 ವಿಧವಾದ ಅನ್ನ, ಭಕ್ಷ್ಯಗಳನ್ನೂ, ವಿವಿಧವಾದ ಫಲಗಳನ್ನೂ ನೈವೇದ್ಯ ಮಾಡಿ ಯೋಗ್ಯನಾದ ಬ್ರಾಹ್ಮಣನಿಗೆ ಉಪಾಯನ ದಾನ ಕೊಡಬೇಕು.
ಸುವಾಸಿನಿಯರಿಗೆ ಅರಿಶಿನ, ಕುಂಕುಮ, ಬಳೆ, ಗಂಧ, ಪುಷ್ಪ, ದಕ್ಷಿಣೆ, ತಾಂಬೂಲವನ್ನು ಕೊಟ್ಟು ಬ್ರಾಹ್ಮಣ ಸುವಾಸಿನೀಯರ ಪೂಜಿ ಮಾಡಬೇಕು ಶ್ರದ್ಧೆಯಿಂದ ಕಥೆ ಕೇಳಬೇಕು ಎಂದು ಶ್ರೀ ರುದ್ರದೇವರು ಪಾರ್ವತಿಗೆ ಹೇಳಿದ ವಿಚಾರವನ್ನು ಶ್ರೀ ಸೂತ ಪುರಾಣಿಕರು ಸನಕಾದಿ ಋಷಿಗಳಿಗೆ ಹೇಳಿದರು!
ಯಾರು ವ್ರತ ಕಥೆಯನ್ನು ಶ್ರದ್ಧೆಯಿಂದ ಕೇಳುವರೋ, ಹೇಳುವರೋ ಅಂಥವರು ಸಕಲ ದಾರಿದ್ರ್ಯದಿಂದ ವಿಮುಕ್ತರಾಗಿ ಸಕಲೈಶ್ವರ್ಯವನ್ನು ಅನುಭವಿಸಿ ಅಂತ್ಯದಲ್ಲಿ ವಿಷ್ಣು ಸಾಯುಜ್ಯವನ್ನು ಹೊಂದುವರು ಎಂದು ಭವಿಷ್ಯೋತ್ತರ ಪುರಾಣೋಕ್ತ ಶ್ರೀ ವರಮಹಾಲಕ್ಷ್ಮೀ ವ್ರತ ಕಥೆಯು ಸಂಪೂರ್ಣವಾಯಿತು!!!
ಶ್ರೀ ವರಮಹಾಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ
ಓಂ ಪ್ರಕೃತ್ಯೈ ನಮಃ
ಓಂ ವಿಕೃತ್ಯೈ ನಮಃ
ಓಂ ವಿದ್ಯಾಯೈ ನಮಃ
ಓಂ ಸರ್ವಭೂತಹಿತಪ್ರದಾಯೈ ನಮಃ
ಓಂ ಶ್ರದ್ಧಾಯೈ ನಮಃ
ಓಂ ವಿಭೂತ್ಯೈ ನಮಃ
ಓಂ ಸುರಭ್ಯೈ ನಮಃ
ಓಂ ಪರಮಾತ್ಮಿಕಾಯೈ ನಮಃ
ಓಂ ವಾಚೇ ನಮಃ
ಓಂ ಪದ್ಮಾಲಯಾಯೈ ನಮಃ (10)
ಓಂ ಪದ್ಮಾಯೈ ನಮಃ
ಓಂ ಶುಚ್ಯೈ ನಮಃ
ಓಂ ಸ್ವಾಹಾಯೈ ನಮಃ
ಓಂ ಸ್ವಧಾಯೈ ನಮಃ
ಓಂ ಸುಧಾಯೈ ನಮಃ
ಓಂ ಧನ್ಯಾಯೈ ನಮಃ
ಓಂ ಹಿರಣ್ಮಯ್ಯೈ ನಮಃ
ಓಂ ಲಕ್ಷ್ಮ್ಯೈ ನಮಃ
ಓಂ ನಿತ್ಯಪುಷ್ಟಾಯೈ ನಮಃ
ಓಂ ವಿಭಾವರ್ಯೈ ನಮಃ (20)
ಓಂ ಅದಿತ್ಯೈ ನಮಃ
ಓಂ ದಿತ್ಯೈ ನಮಃ
ಓಂ ದೀಪ್ತಾಯೈ ನಮಃ
ಓಂ ವಸುಧಾಯೈ ನಮಃ
ಓಂ ವಸುಧಾರಿಣ್ಯೈ ನಮಃ
ಓಂ ಕಮಲಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕ್ರೋಧಸಂಭವಾಯೈ ನಮಃ
ಓಂ ಅನುಗ್ರಹಪರಾಯೈ ನಮಃ (30)
ಓಂ ಋದ್ಧಯೇ ನಮಃ
ಓಂ ಅನಘಾಯೈ ನಮಃ
ಓಂ ಹರಿವಲ್ಲಭಾಯೈ ನಮಃ
ಓಂ ಅಶೋಕಾಯೈ ನಮಃ
ಓಂ ಅಮೃತಾಯೈ ನಮಃ
ಓಂ ದೀಪ್ತಾಯೈ ನಮಃ
ಓಂ ಲೋಕಶೋಕ ವಿನಾಶಿನ್ಯೈ ನಮಃ
ಓಂ ಧರ್ಮನಿಲಯಾಯೈ ನಮಃ
ಓಂ ಕರುಣಾಯೈ ನಮಃ
ಓಂ ಲೋಕಮಾತ್ರೇ ನಮಃ (40)
ಓಂ ಪದ್ಮಪ್ರಿಯಾಯೈ ನಮಃ
ಓಂ ಪದ್ಮಹಸ್ತಾಯೈ ನಮಃ
ಓಂ ಪದ್ಮಾಕ್ಷ್ಯೈ ನಮಃ
ಓಂ ಪದ್ಮಸುಂದರ್ಯೈ ನಮಃ
ಓಂ ಪದ್ಮೋದ್ಭವಾಯೈ ನಮಃ
ಓಂ ಪದ್ಮಮುಖ್ಯೈ ನಮಃ
ಓಂ ಪದ್ಮನಾಭಪ್ರಿಯಾಯೈ ನಮಃ
ಓಂ ರಮಾಯೈ ನಮಃ
ಓಂ ಪದ್ಮಮಾಲಾಧರಾಯೈ ನಮಃ
ಓಂ ದೇವ್ಯೈ ನಮಃ (50)
ಓಂ ಪದ್ಮಿನ್ಯೈ ನಮಃ
ಓಂ ಪದ್ಮಗಂಥಿನ್ಯೈ ನಮಃ
ಓಂ ಪುಣ್ಯಗಂಧಾಯೈ ನಮಃ
ಓಂ ಸುಪ್ರಸನ್ನಾಯೈ ನಮಃ
ಓಂ ಪ್ರಸಾದಾಭಿಮುಖ್ಯೈ ನಮಃ
ಓಂ ಪ್ರಭಾಯೈ ನಮಃ
ಓಂ ಚಂದ್ರವದನಾಯೈ ನಮಃ
ಓಂ ಚಂದ್ರಾಯೈ ನಮಃ
ಓಂ ಚಂದ್ರಸಹೋದರ್ಯೈ ನಮಃ
ಓಂ ಚತುರ್ಭುಜಾಯೈ ನಮಃ (60)
ಓಂ ಚಂದ್ರರೂಪಾಯೈ ನಮಃ
ಓಂ ಇಂದಿರಾಯೈ ನಮಃ
ಓಂ ಇಂದುಶೀತುಲಾಯೈ ನಮಃ
ಓಂ ಆಹ್ಲೋದಜನನ್ಯೈ ನಮಃ
ಓಂ ಪುಷ್ಟ್ಯೈ ನಮಃ
ಓಂ ಶಿವಾಯೈ ನಮಃ
ಓಂ ಶಿವಕರ್ಯೈ ನಮಃ
ಓಂ ಸತ್ಯೈ ನಮಃ
ಓಂ ವಿಮಲಾಯೈ ನಮಃ
ಓಂ ವಿಶ್ವಜನನ್ಯೈ ನಮಃ (70)
ಓಂ ತುಷ್ಟ್ಯೈ ನಮಃ
ಓಂ ದಾರಿದ್ರ್ಯ ನಾಶಿನ್ಯೈ ನಮಃ
ಓಂ ಪ್ರೀತಿಪುಷ್ಕರಿಣ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಶುಕ್ಲಮಾಲ್ಯಾಂಬರಾಯೈ ನಮಃ
ಓಂ ಶ್ರಿಯೈ ನಮಃ
ಓಂ ಭಾಸ್ಕರ್ಯೈ ನಮಃ
ಓಂ ಬಿಲ್ವನಿಲಯಾಯೈ ನಮಃ
ಓಂ ವರಾರೋಹಾಯೈ ನಮಃ
ಓಂ ಯಶಸ್ವಿನ್ಯೈ ನಮಃ (80)
ಓಂ ವಸುಂಧರಾಯೈ ನಮಃ
ಓಂ ಉದಾರಾಂಗಾಯೈ ನಮಃ
ಓಂ ಹರಿಣ್ಯೈ ನಮಃ
ಓಂ ಹೇಮಮಾಲಿನ್ಯೈ ನಮಃ
ಓಂ ಧನಧಾನ್ಯ ಕರ್ಯೈ ನಮಃ
ಓಂ ಸಿದ್ಧಯೇ ನಮಃ
ಓಂ ಸ್ತ್ರೈಣ ಸೌಮ್ಯಾಯೈ ನಮಃ
ಓಂ ಶುಭಪ್ರದಾಯೈ ನಮಃ
ಓಂ ನೃಪವೇಶ್ಮ ಗತಾನಂದಾಯೈ ನಮಃ
ಓಂ ವರಲಕ್ಷ್ಮ್ಯೈ ನಮಃ (90)
ಓಂ ವಸುಪ್ರದಾಯೈ ನಮಃ
ಓಂ ಶುಭಾಯೈ ನಮಃ
ಓಂ ಹಿರಣ್ಯಪ್ರಾಕಾರಾಯೈ ನಮಃ
ಓಂ ಸಮುದ್ರ ತನಯಾಯೈ ನಮಃ
ಓಂ ಜಯಾಯೈ ನಮಃ
ಓಂ ಮಂಗಳಾಯೈ ನಮಃ
ಓಂ ದೇವ್ಯೈ ನಮಃ
ಓಂ ವಿಷ್ಣು ವಕ್ಷಃಸ್ಥಲ ಸ್ಥಿತಾಯೈ ನಮಃ
ಓಂ ವಿಷ್ಣುಪತ್ನ್ಯೈ ನಮಃ
ಓಂ ಪ್ರಸನ್ನಾಕ್ಷ್ಯೈ ನಮಃ (100)
ಓಂ ನಾರಾಯಣ ಸಮಾಶ್ರಿತಾಯೈ ನಮಃ
ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ
ಓಂ ಸರ್ವೋಪದ್ರವ ವಾರಿಣ್ಯೈ ನಮಃ
ಓಂ ನವದುರ್ಗಾಯೈ ನಮಃ
ಓಂ ಮಹಾಕಾಳ್ಯೈ ನಮಃ
ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ
ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ
ಓಂ ಭುವನೇಶ್ವರ್ಯೈ ನಮಃ (108)
ಸಂಗ್ರಹ
ಪ್ರಶಾಂತ ಭಟ್ ಕೋಟೇಶ್ವರ
[02/08, 7:14 AM] Pandit Venkatesh. Astrologer. Kannada: ನಾಗರ ಪಂಚಮಿ ಹಬ್ಬದ ಪ್ರಯುಕ್ತ ಪೌರಾಣಿಕ ಕಥೆ :-
"ಜನಮೇಜಯ ಸರ್ಪಗಳನ್ನು ಬಲಿಹಾಕುವ ಯಾಗ ನಡೆಸಿದ್ದೇಕೆ..? ಅದನ್ನು ತಡೆದವರು ಯಾರು ಮತ್ತು ಏಕೆ...?"
ಸರ್ಪವನ್ನು ಕಂಡಾಗ ಕೆಲ ಹಿರಿಯರು "ಆಸ್ತಿಕ… ಆಸ್ತಿಕ…" ವೆಂದು ಪಠಿಸುವರು. ಯಾರು ಈ ಆಸ್ತಿಕ..? ಅದ್ಯಾಕೆ "ಆಸ್ತಿಕ" ಎಂದು ಸಂಬೋಧಿಸುವರು..? ಸರ್ಪಗಳಿಗೂ ಅವನಿಗೂ ಏನು ಸಂಬಂಧವಿದೆ..? ಜನಮೇಜಯನು ಯಾಗ ನಡೆಸಿ ಸರ್ಪಸಂತತಿಯನ್ನೇ ನಾಶ ಮಾಡಲು ಹೊರಟಿದ್ದೇಕೆ….? ಈ ಎಲ್ಲಾ ವಿಚಾರಗಳನ್ನು ತಿಳಿಯಲು ಈ ಸಣ್ಣ ಕಥೆಯನ್ನು ಓದಬೇಕು.
ಕೌಶಿಕಿ ನದಿಯ ಸುಂದರ ಪರಿಸರದಲ್ಲಿ ಋಷಿ ಶಮಿಕರ ಆಶ್ರಮವಿತ್ತು. ಅಲ್ಲಿ ಸಾಕಷ್ಟು ಋಷಿಕುಮಾರರು ವೇದಾಧ್ಯಯನದಲ್ಲಿ ನಿರತರಾಗಿದ್ದರು. ಅವರಲ್ಲಿ ಋಷಿ ಶಮಿಕರ ಪುತ್ರನಾದ ಶೃಂಗಿಯೂ ಒಬ್ಬನಾಗಿದ್ದನು. ಒಂದು ದಿನ ಋಷಿಕುಮಾರರು ಹೋಮ ಹವನಾದಿಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಒಟ್ಟು ಮಾಡಲು ಹೋಗಿದ್ದರು. ಋಷಿ ಶಮಿಕರು ಆ ಸಮಯದಲ್ಲಿ ಬ್ರಹ್ಮಧಾನ್ಯದಲ್ಲಿ ನಿರತರಾಗಿದ್ದರು. ಈ ಸ್ಥಿತಿಯಲ್ಲಿ ಅವರಿಗೆ ಹೊರ ಪ್ರಪಂಚದ ಪರಿವೆಯೇ ಇರುತ್ತಿರಲಿಲ್ಲ.
ಇದೇ ಸಮಯದಲ್ಲಿ ಕುರುಕ್ಷೇತ್ರ ಯುದ್ಧ ಮುಗಿದು ಕೆಲವು ವರ್ಷಗಳ ಕಾಲ ರಾಜ್ಯಾಡಳಿತ ನಡೆಸಿದ ಪಾಂಡವರು ಸಶರೀರ ಸ್ವರ್ಗಾರೋಹಣಕ್ಕೆ ತೆರಳಿದರು. ಅವರ ನಂತರ ಅಭಿಮನ್ಯು ಮತ್ತು ರಾಜಕುಮಾರಿ ಉತ್ತರೆಯರ ಮಗನಾದ ಪರೀಕ್ಷಿತನು ಹಸ್ತಿನಾವತಿಯ ಅರಸನಾದನು. ಅಭಿಮನ್ಯುವನ್ನು ಕೌರವರು ಮೋಸದಿಂದ ನಿರ್ದಯವಾಗಿ ಕುರುಕ್ಷೇತ್ರ ಯುದ್ಧದಲ್ಲಿ ಕೊಂದಾಗ ಉತ್ತರೆ ಇನ್ನೂ ಗರ್ಭಿಣಿ. ಇದರ ನಂತರ ಅಶ್ವತ್ಥಾಮನು ಗರ್ಭದಲ್ಲಿರುವ ಮಗುವನ್ನು ಕೊಲ್ಲುವ ಸಲುವಾಗಿ ಬ್ರಹ್ಮಾಸ್ತ್ರವನ್ನು ಉಪಯೋಗಿಸಿದಾಗ ಅಭಿಮನ್ಯುವಿನ ಸೋದರ ಮಾವನಾದ ಕೃಷ್ಣನು ಮಗುವನ್ನು ಉಳಿಸುತ್ತಾನೆ. ಈತನು ಕೃಪಾಚಾರ್ಯರ ನೇತೃತ್ವದಲ್ಲಿ ಮೂರು ಅಶ್ವಮೇಧ ಯಜ್ಞಗಳನ್ನು ಪೂರೈಸುತ್ತಾನೆ. ಈತನು ಉತ್ತರನ ಮಗಳಾದ ಭದ್ರವತಿ ಅಥವಾ ಇರಾವತಿ ಎಂಬ ತರುಣಿಯನ್ನು ಮದುವೆಯಾಗಿ ಜನಮೇಜಯ, ಶ್ರುತಸೇನ, ಉಗ್ರಸೇನ ಮತ್ತು ಭೀಮಸೇನ ಎಂಬ ನಾಲ್ವರು ಪುತ್ರರನ್ನು ಪಡೆದನು.
ಈ ಪರೀಕ್ಷಿತ ರಾಜನು ಒಮ್ಮೆ ಅರಣ್ಯಕ್ಕೆ ಬೇಟೆಗೆಂದು ತೆರಳಿದನು. ತುಸು ಸಮಯ ಕಳೆದ ನಂತರ ಬಿಸಿಲಿನ ಬೇಗೆ ಮತ್ತು ಬೇಟೆಯಾಡಿದ ಆಯಾಸದಿಂದ ಆಶ್ರಯವನ್ನು ಹುಡುಕುತ್ತಾ, ಸಮೀಪದಲ್ಲಿರುವ ಋಷಿ ಶಮಿಕರ ಆಶ್ರಮಕ್ಕೆ ಬರುತ್ತಾರೆ. ಋಷಿ ಶಮಿಕರು ಆಳವಾದ ಧಾನ್ಯದಲ್ಲಿದ್ದು, ಮಹಾರಾಜರು ಆಶ್ರಮ ಪ್ರವೇಶಿಸಿದ್ದು, ನಮಸ್ಕಾರವನ್ನು ಮಾಡಿದ್ದು ಗಮನಕ್ಕೆ ಬರುವುದೇ ಇಲ್ಲ. ಮಹಾರಾಜರು ಪುನಃ “ನಮಗೆ ಬಹಳ ಬಾಯಾರಿಕೆಯಾಗಿದೆ, ನೀರು ಬೇಕು’ ಎಂದು ಕೇಳುತ್ತಾರೆ. ಅದರೆ, ಬ್ರಹ್ಮನ ಸ್ಮರಣೆಯಲ್ಲಿ ಮಗ್ನರಾಗಿದ್ದ ಋಷಿ ಶಮಿಕರಿಗೆ ರಾಜನ ಮಾತುಗಳು ಮೂರ್ನಾಲ್ಕು ಸಲ ಕೂಗಿದರೂ ಕೇಳಿಸುವುದಿಲ್ಲ. ರಾಜನಾದ ಪರೀಕ್ಷಿತರಿಗೆ ಸಿಟ್ಟು ಬಂದು ಅಂಗಳದಲ್ಲಿ ಸತ್ತು ಬಿದ್ದಿರುವ ಹಾವನ್ನು ಬಾಣದ ತುದಿಯಲ್ಲಿ ಎತ್ತಿ ಅದನ್ನು ಋಷಿ ಶಮಿಕರ ಕೊರಳಿಗೆ ಹಾಕುತ್ತಾರೆ. ಆಶ್ರಮಕ್ಕೆ ಮರಳಿ ಬಂದ ಋಷಿಕುಮಾರರು, ರಾಜಾ ಪರೀಕ್ಷಿತನು ಹೊರಡುತ್ತಿರುವುದನ್ನು ನೋಡುತ್ತಾರೆ ಮತ್ತು ಶೃಂಗಿಯನ್ನು ಕರೆದುಕೊಂಡು ಬರುತ್ತಾರೆ.
ಶೃಂಗಿಯು ಪರೀಕ್ಷಿತರನ್ನು ಆಶ್ರಮಕ್ಕೆ ಬರಮಾಡಿಕೊಳ್ಳಲು ಧಾವಿಸಿ ಬರುತ್ತಾನೆ. ಆದರೂ ಕೋಪಗೊಂಡ ಮಹಾರಾಜರು ಹಿಂದಿರುಗದೆ ಹೋಗುತ್ತಾರೆ. ಆಶ್ರಮವನ್ನು ಪ್ರವೇಶಿಸಿದ ಶೃಂಗಿಯು ಋಷಿ ಶಮಿಕರು ಧ್ಯಾನ ಮಗ್ನರಾಗಿರುವುದನ್ನೂ, ಅವರ ಕೊರಳಲ್ಲಿರುವ ಸತ್ತ ಹಾವು ಮತ್ತು ಅದರ ಸುತ್ತ ಒಡಾಡುವ ಇರುವೆಗಳನ್ನೂ ನೋಡಿ ಉದ್ರಿಕ್ತನಾಗುತ್ತಾನೆ. ಕೋಪಗೊಂಡು ಒಂದು ಕೋಲಿನಿಂದ ಹಾವನ್ನು ತೆಗೆದು, “ಯಾರು ಈ ಪಾಪವನ್ನು ಮಾಡಿದ್ದಾರೋ ಅವರು ಇಂದಿನಿಂದ ಏಳು ದಿನಗಳ ಒಳಗೆ ಸರ್ಪರಾಜನಾದ ತಕ್ಷಕನಿಂದ ಮರಣ ಹೊಂದಲಿ’ ಎಂದು ಶಾಪ ಕೊಟ್ಟು, ಕಮಂಡಲದಿಂದ ನೀರನ್ನು ಭೂಮಿಗೆ ಚಿಮಿಕಿಸುತ್ತಾನೆ.
ಅಷ್ಟರಲ್ಲಿ ಎಚ್ಚರಗೊಂಡ ಋಷಿಗಳು ಮಗನು ಕೋಪದಿಂದ ನಡುಗುತ್ತಿರುವುದು ಮತ್ತು ಶಿಷ್ಯರ ಮೊಗದಲ್ಲಿರುವ ಭೀತಿಯನ್ನು ನೋಡಿ ಏನಾಯಿತು ಎಂದು ವಿಚಾರಿಸುತ್ತಾರೆ. ಆಗ ಶೃಂಗಿಯು ನಡೆದ ವಿಷಯವನ್ನು ತಿಳಿಸಿದಾಗ “ಮನುಷ್ಯನು ಸಣ್ಣ ವಿಷಯಕ್ಕೆಲ್ಲ ಕೋಪಿಸಿಕೊಳ್ಳಬಾರದು. ಇಂಥ ವಿಷಯಕ್ಕೆಲ್ಲ ಶಾಪ ಹಾಕಬಾರದು’ ಎಂದು ಶೃಂಗಿಗೆ ಬುದ್ಧಿವಾದ ಹೇಳುತ್ತಾರೆ. “ಮಹಾರಾಜ ಪರೀಕ್ಷಿತರು ವಿಷ್ಣುವಿನ ಅವತಾರವಾಗಿದ್ದು, ರಾಜನಲ್ಲಿ ಕ್ಷಮೆಯನ್ನು ಯಾಚಿಸಿ ಅವರಿಗೆ ಶಾಪದಿಂದ ವಿಮುಕ್ತನಾಗಿ ಮಾಡು’ ಎಂದು ಹೇಳುತ್ತಾರೆ
ಮುನಿಗಳ ಶಾಪ ತಿಳಿದು ಪರೀಕ್ಷಿತ ಮಹಾರಾಜನು ಭೀತಿಯಿಂದ ತತ್ತರಿಸಿಹೋದನು. ತನ್ನ ಹತ್ತಿರ ಯಾರೂ ಸುಳಿಯದಂತೆ ರಕ್ಷಣೆಯ ಕೋಟೆ ಕಟ್ಟಿಕೊಂಡು ಶಾಪವನ್ನು ನಿಷ್ಕ್ರಿಯಗೊಳಿಸಲು ಪರೀಕ್ಷಿತ ಮಹಾರಾಜನು ನಿರ್ಧರಿಸಿದನು. ಮನುಷ್ಯರು ಅಥವಾ ಜೀವಜಂತುಗಳು ಪ್ರವೇಶಿಸಲಾಗದಂತಹ ಉಪ್ಪರಿಗೆಯ ಅಭೇದ್ಯ ಅರಮನೆಯೊಂದನ್ನು ಕಟ್ಟಿಸಿದನು. ಅರಮನೆಯನ್ನು ಎಂತಹ ಕೌಶಲದಿಂದ ನಿರ್ಮಿಸಲಾಗಿತ್ತೆಂದರೆ, ಅದರೊಳಕ್ಕೆ ಪ್ರವೇಶಿಸಿದ ಗಾಳಿಯೂ ಹೊರಹೋಗುವಂತಿರಲಿಲ್ಲ. ದೊರೆಗೆ ತಿಳಿಸದೆ ಯಾರೂ ಅವನನ್ನು ಕಾಣುವಂತಿರಲಿಲ್ಲ. ತಾನಿನ್ನು ಹಾವಿನ ಕಡಿತದಿಂದ ಮುಕ್ತ ಎಂದು ದೊರೆ ಭಾವಿಸಿದನು. ಆದರೆ, ತಕ್ಷಕನೆಂಬ ಸರ್ಪನು ಸಾಧುಸಂತರ ರೂಪದಲ್ಲಿ ಕೆಲವು ಹಾವುಗಳನ್ನು ಪರೀಕ್ಷಿತನ ಬಳಿಗೆ ಕಳುಹಿಸಿದನು. ದೊರೆಗೆ ಗೌರವ ಸಮರ್ಪಣೆಯಾಗಿ ಹೂವು-ಹಣ್ಣುಗಳನ್ನೂ ಕಳುಹಿಸಿದ್ದನು. ತಕ್ಷಕನು ಈ ಹಣ್ಣುಗಳಲ್ಲಿ ಒಂದರಲ್ಲಿ ಅವಿತುಕೊಂಡಿದ್ದನು. ಮಹಾರಾಜನು ಹಣ್ಣೊಂದನ್ನು ತಿನ್ನುತ್ತಿದ್ದಾಗ ತಕ್ಷಕನು ಹೊರಬಂದು ಕಾಳಿಂಗ ಸರ್ಪದ ರೂಪ ಧರಿಸಿ ದೊರೆಯ ಮೈಗೆ ಸುತ್ತಿಕೊಂಡು ಅವನನ್ನು ಕಚ್ಚಿದನು. ದೊರೆ ಪರೀಕ್ಷಿತ ಮರಣ ಹೊಂದಿದನು.
ಪರಿಕ್ಷೀತನ ಮರಣದ ನಂತರ ಆತನ ಪುತ್ರ ಜನಮೇಜಯನಿಗೆ ಪಟ್ಟಾಭಿಷೇಕ ಮಾಡಲಾಯಿತು. ಮಹಾರಾಜ ಪರೀಕ್ಷಿತನ ಪ್ರಸಿದ್ಧ ಪುತ್ರ ಮತ್ತು ರಾಜರ್ಷಿ ದೊರೆಗಳಲ್ಲಿ ಒಬ್ಬನಾಗಿದ್ದನು. ಆತನ ತಾಯಿಯ ಹೆಸರು ಇರಾವತಿ ಅಥವಾ ಮಾದ್ರವತಿ. ಜನಮೇಜಯ ಮಹಾರಾಜನಿಗೆ ಜ್ಞಾತನೀಕ ಮತ್ತು ಶಂಕುಕರ್ಣ ಎಂಬ ಇಬ್ಬರು ಮಕ್ಕಳು. ಈತನು ಕುರುಕ್ಷೇತ್ರ ಪುಣ್ಯಸ್ಥಳದಲ್ಲಿ ಅನೇಕ ಯಜ್ಞಗಳನ್ನು ಮಾಡಿದನು. ತನ್ನ ತಂದೆಯನ್ನು ಉಳಿಸಿಕೊಳ್ಳಲು ರಹಸ್ಯ ಭವನ ನಿರ್ಮಿಸಿ ಎಷ್ಟೆಲ್ಲ ಕಷ್ಟಪಟ್ಟಿದ್ದರೂ ತಕ್ಷಕ ಅದನ್ನು ಪ್ರವೇಶಿಸಿ ಕಚ್ಚಿ ಸಾಯಿಸಿದ್ದು ಅವನಿಗೆ ಮರೆಯಲಾಗಿರಲಿಲ್ಲ. ಅದಕ್ಕೆ ಸರಿಯಾಗಿ, ಸರ್ಪಗಳ ಮೇಲೆ ದ್ವೇಷವಿದ್ದ ಉತ್ಥಂಕನು ಜನಮೇಜಯನನ್ನು ಭೇಟಿಯಾಗಿ ಅವನನ್ನು ಸೇಡಿಗಾಗಿ ಪ್ರಚೋದಿಸಿದನು. “ಸರ್ಪಯಾಗ ನಡೆಸಿ ನಿನ್ನ ತಂದೆಯ ಸಾವಿಗೆ ಕಾರಣವಾದ ಸರ್ಪಕುಲವನ್ನೇ ನಾಶ ಮಾಡು” ಎಂದು ಹುರಿದುಂಬಿಸಿದನು.
ಅದರಂತೆ ಜನಮೇಜಯನು ಆಸ್ಥಾನದ ಪುರೋಹಿತರನ್ನು ಕರೆಸಿ ಸರ್ಪಯಾಗಕ್ಕೆ ದಿನ ನಿಶ್ಚಯಿಸಿದನು. ಋತ್ವಿಜರನ್ನು, ಬ್ರಾಹ್ಮಣ ಶ್ರೇಷ್ಠರನ್ನೂ ಯಾಜ್ಞಿಕರನ್ನು ಕರೆಯಿಸಿ ಅದಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡಿಕೊಳ್ಳಲು ಸೂಚಿಸಿದನು. ಸರ್ಪ ಯಾಗವು ಶುರುವಾಯಿತು. ಋತ್ವಿಜರು ಒಂದೊಂದೇ ಸರ್ಪದ ಹೆಸರು ಹೇಳಿ ಆವಾಹನೆ ಮಾಡಿ, ಅದನ್ನು ಅಗ್ನಿಯ ಬಳಿಗೆ ಆಕರ್ಷಿಸಿ ‘ಸ್ವಾಹಾ’ ಅನ್ನುತ್ತಿದ್ದರು. ಕೂಡಲೇ ಸರ್ಪವು ಪ್ರಜ್ವಲಿಸಿ ಉರಿಯುತಿದ್ದ ಯಾಗ ಕುಂಡದೊಳಗೆ ಬಿದ್ದು ಒದ್ದಾಡಿ ಬೆಂದು ಹೋಗುತ್ತಿದ್ದವು. ಎಲ್ಲಾ ಲೋಕಗಳ, ಎಲ್ಲ ಬಗೆಯ ಹಾವುಗಳು ಸರಸರನೆ ಬಂದು ಅಗ್ನಿಕುಂಡದೊಳಗೆ ಬೀಳುವುದನ್ನು ನೋಡಿದರೆ ಎಂಥವರು ತಲ್ಲಣಿಸಬೇಕು..! ಆದರೆ ಜನಮೇಜಯನು ತನ್ನ ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಬದ್ಧನಾಗಿದ್ದನು. ಅವನ ಮನಸ್ಸು ಬದಲಾಗಲಿಲ್ಲ. ಜೊತೆಗೆ ಸರ್ಪಗಳು ಹೀಗೆ ಕುಂಡದೊಳಗೆ ಸುಟ್ಟು ಸಾಯಬೇಕೆನ್ನುವುದು ನಿಯತಿಯ ಇಚ್ಛೆಯಾಗಿತ್ತು. ಜನಮೇಜಯನು ನಿಮಿತ್ತ ಮಾತ್ರನಾಗಿದ್ದನು. ಸರ್ಪಕುಲದ ತಾಯಿ ಕದ್ರು ನೀಡಿದ ಶಾಪವೇ ಸರ್ಪಯಾಗಕ್ಕೆ ವೇದಿಕೆ ಒದಗಿಸಿತ್ತು.
ಜನಮೇಜಯನು ಯಜ್ಞಕ್ಕೆ ತನ್ನ ಬಾಂಧವರು ಬಲಿಯಾಗುತ್ತಿರುವುದನ್ನು ಕಂಡು ತಕ್ಷಕನು ತಲ್ಲಣಿಸಿಹೋದನು ಸಹಾಯಕ್ಕಾಗಿ ದೇವೇಂದ್ರನ ಬಳಿ ಧಾವಿಸಿದನು. ತಕ್ಷಕನಿಗೆ ಅಭಯ ನೀಡಿದ ದೇವೇಂದ್ರ, “ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಲ್ಲು, ಯಾಗ ಮಂತ್ರ ನಿನ್ನನ್ನು ಸೆಳೆಯಲಾರದು” ಎಂದು ಸೂಚಿಸಿದನು. ದೇವೆಂದ್ರನ ಅಣತಿಯಂತೆ ತಕ್ಷಕನು ಇಂದ್ರನನ್ನು ಗಟ್ಟಿಯಾಗಿ ಹಿಡಿದು ನಿಂತನು. ಆದರೆ, ಯಾಗ ಮಂತ್ರದ ಆಕರ್ಷಣೆಯ ಬಲದೆದುರು ತಕ್ಷಕನ ಆಟ ನಡೆಯಲಿಲ್ಲ. ಮಂತ್ರವು ದೇವೇಂದ್ರನನ್ನೂ ಸೇರಿಸಿಕೊಂಡೇ ತಕ್ಷಕನನ್ನು ಯಾಗ ಕುಂಡದೆಡೆ ಸೆಳೆಯಲಾರಂಭಿಸಿತು.
ಇದನ್ನು ಕಂಡು ಭೀತರಾದ ವಾಸುಕಿ ಮೊದಲಾದ ಅಳಿದುಳಿದ ಸರ್ಪಗಳು ತಮ್ಮ ಕುಲಕ್ಕೆ ಹೊರಗಿನವನಾದ, ಸೋದರಳಿಯ ಆಸ್ತಿಕ ಋಷಿಯ ಬಳಿ ಹೋದರು. “ನಮ್ಮ ತಾಯಿಯ ಶಾಪದ ಪರಿಣಾಮವಾಗಿ ನಾವೆಲ್ಲರೂ ಯಜ್ಞ್ಯಕುಂಡದಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ನಿನಗೊಬ್ಬನಿಗೆ ಮಾತ್ರ ನಮ್ಮನ್ನು ಈ ದುರವಸ್ಥೆಯಿಂದ ಪಾರುಮಾಡಲು ಸಾಧ್ಯ. ದಯವಿಟ್ಟು ನಮಗೆ ಸಹಾಯಮಾಡು” ಎಂದು ಕೇಳಿಕೊಂಡರು. ಆಸ್ತಿಕನು ಸಂತೋಷದಿಂದಲೇ ಸಮ್ಮತಿಸಿ, “ಹೇಳಿ, ನಾನೇನು ಮಾಡಿದರೆ ಸರ್ಪ ಸಂತತಿ ಉಳಿಯುತ್ತದೆ..?” ಎಂದು ಪ್ರಶ್ನಿಸಿದನು.
ಆಗ ವಾಸುಕಿಯು “ಮಗೂ, ಜನಮೇಜಯನು ಸರ್ಪಯಾಗವನ್ನು ಮಾಡುತಿದ್ದಾನೆ. ಬ್ರಹ್ಮಚಾರಿಯಾದ ನೀನು ಅವನ ಬಳಿಗೆ ಹೋಗಿ ಆ ಯಜ್ಞ್ಯವನ್ನು ನಿಲ್ಲಿಸುವಂತೆ ಮಾಡು” ಎಂದು ಸಲಹೆ ನೀಡಿದ. ಆಸ್ತಿಕನು ತಡಮಾಡದೆ ಅಲ್ಲಿಂದ ಹೊರಟು ಯಾಗಶಾಲೆಯನ್ನು ತಲುಪಿದನು. ಜನಮೇಜಯನ ಮುಂದೆ ಹೋಗಿ ನಿಂತನು. ಇನ್ನೇನು ಮಂತ್ರಾಕರ್ಷಣೆಗೆ ಸಿಲುಕಿ ದೇವೇಂದ್ರ ಸಹಿತನಾಗಿ ತಕ್ಷಕ ಕುಂಡದಲ್ಲಿ ಬೀಳುವುದರಲ್ಲಿದ್ದನು. ಆದರೆ ಅದಕ್ಕೆ ಅಡ್ಡಿಯಾಗಿ ನಿಂತ ಆಸ್ತಿಕ, “ಬ್ರಹ್ಮಚಾರಿಗೆ ದಕ್ಷಿಣೆ ಕೊಡದೆ ಯಾಗ ಹೇಗೆ ಮುನ್ನಡೆಸುತ್ತೀರಿ..?” ಎಂದು ಜನಮೇಜಯನನ್ನು ಇಕ್ಕಟ್ಟಿಗೆ ಸಿಲುಕಿಸಿದನು. ಜನಮೇಜಯ, “ಬ್ರಹ್ಮಚಾರಿ..! ನಿನಗೇನು ಬೇಕು ಕೇಳು. ಕೊಡುತ್ತೇನೆ” ಎಂದು ವಾಗ್ದಾನ ನೀಡಿಬಿಟ್ಟನು. ಇದಕ್ಕಾಗಿಯೇ ಕಾದಿದ್ದ ಆಸ್ತಿಕನು “ಈಗಿಂದೀಗಲೇ ಸರ್ಪಯಾಗವನ್ನು ನಿಲ್ಲಿಸಬೇಕು. ಇದೇ ನೀವು ನನಗೆ ಕೊಡುವ ದಕ್ಷಿಣೆ!!” ಅಂದುಬಿಟ್ಟ.
ಮಾತಿಗೆ ಬದ್ಧನಾದ ಜನಮೇಜಯನಿಗೆ ಬೇರೆ ದಾರಿಯೇ ಉಳಿಯಲಿಲ್ಲ. ತನ್ನ ತಂದೆಯ ಸಾವಿಗೆ ಕಾರಣನಾದ ತಕ್ಷಕ ಕಣ್ಣೆದುರೇ ಇದ್ದರೂ ಏನೂ ಮಾಡುವಂತಿಲ್ಲ. ಆದರೂ ಆಸ್ತಿಕನಿಗೆ ಕೊಟ್ಟ ಮಾತಿನಂತೆ ಯಾಗವನ್ನು ನಿಲ್ಲಿಸಿದನು. ದೇವೇಂದ್ರ ಅವನನ್ನು ಸಮಾಧಾನ ಪಡಿಸಿ, ಶೃಂಗಿಯ ಶಾಪವೇ ಕಾರಣವಾಗಿ ನಿನ್ನ ತಂದೆಯ ಮೃತ್ಯುವಾಯಿತು. ಇದರಲ್ಲಿ ತಕ್ಷಕನ ಪಾತ್ರವೇನೂ ಇಲ್ಲ. ಅವನು ನಿಮಿತ್ತ ಮಾತ್ರ ಎಂದು ಅನುನಯಿಸಿದ. ಇದರಿಂದ ಜನಮೇಜಯನೂ ದ್ವೇಷ ಕಳೆದು ಸಮಾಧಾನ ಹೊಂದಿದನು.
ಆದರೆ, ಜನಮೇಜಯನು ಯಜ್ಞವನ್ನು ನಿಲ್ಲಿಸಿದರೂ ಆತ ಸಂಬಂಧಪಟ್ಟ ಎಲ್ಲರಿಗೂ ಸೂಕ್ತ ಬಹುಮಾನ ನೀಡಿ ತೃಪ್ತಿಪಡಿಸಿದನು. ಆ ಸಮಾರಂಭದಲ್ಲಿ ಮಹಾಮುನಿ ವೇದವ್ಯಾಸರೂ ಹಾಜರಿದ್ದು, ಸ್ವತಃ ಅವರೇ ರಾಜನ ಮುಂದೆ ಕುರುಕ್ಷೇತ್ರ ಯುದ್ಧದ ಇತಿಹಾಸವನ್ನು ನಿರೂಪಿಸಿದರು ಮತ್ತು ತಕ್ಷಕನನ್ನು ಕೊಲ್ಲುವುದು ಸಾಧ್ಯವಿಲ್ಲ ಏಕೆಂದರೆ ಅವನು ಅಮೃತ ಪಾನವನ್ನು ಮಾಡಿದ್ದಾನೆ ಎಂದು ಹೇಳಿದರು. ಅನಂತರ ವೇದವ್ಯಾಸರ ಆದೇಶದಂತೆ ಅವರ ಶಿಷ್ಯ ವೈಶಂಪಾಯನ ಮಹಾಭಾರತದ ವಸ್ತುವಿಷಯವನ್ನು ರಾಜನ ಮುಂದೆ ನಿರೂಪಿಸಿದನು. ತನ್ನ ಪ್ರಸಿದ್ಧ ತಂದೆಯ ಅಕಾಲಿಕ ಮರಣದಿಂದ ಆತ ಬಹಳ ನೊಂದು ಮತ್ತೆ ಆತನನ್ನು ನೋಡಬಯಸಿ, ತನ್ನ ಅಪೇಕ್ಷೆಯನ್ನು ಮಹಾಮುನಿ ವೇದವ್ಯಾಸರ ಮುಂದೆ ವ್ಯಕ್ತಪಡಿಸಿದನು. ವೇದವ್ಯಾಸರೂ ಸಹ ಆತನ ಅಪೇಕ್ಷೆಯನ್ನು ಈಡೇರಿಸಿದರು. ಅವನ ತಂದೆ ಪರೀಕ್ಷಿತನು ಅವನ ಮುಂದೆ ಬಂದನು. ಜನಮೇಜಯ ತನ್ನ ತಂದೆ ಮತ್ತು ವೇದವ್ಯಾಸರಿಬ್ಬರನ್ನೂ ಬಹಳ ಗೌರವ ಮತ್ತು ವೈಭವದಿಂದ ಪೂಜಿಸಿದರು. ಸಂಪೂರ್ಣ ತೃಪ್ತನಾದ ಆತನು ಯಾಗಕ್ಕೆ ಬಂದಿದ್ದ ಬ್ರಾಹ್ಮಣರಿಗೆ ಅತ್ಯಂತ ಉದಾರವಾಗಿ ದಾನ ನೀಡಿದನು.
ಇದೇ ಸಂದರ್ಭದಲ್ಲಿ ತಮ್ಮ ಸೋದರಳಿಯನ ಸಹಾಯಕ್ಕೆ ಕೃತಜ್ಞರಾದ ಸರ್ಪಗಳು “ನಿನ್ನನ್ನು ಯಾರು ಸ್ಮರಿಸುತ್ತಾರೋ ಅವರನ್ನು ನಾವು ಬಾಧಿಸುವುದಿಲ್ಲ” ಎಂದು ವಾಗ್ದಾನ ನೀಡಿದವು. ಇಂದಿಗೂ ಕೆಲವು ಕಡೆಗಳಲ್ಲಿ ಬಹುತೇಖ ವೃದ್ಧರು ಹಾವನ್ನು ಕಂಡಕೂಡಲೇ “ಆಸ್ತಿಕ… ಆಸ್ತಿಕ…” ಎಂದು ಪಠಿಸುವುದು ಇದೇ ಕಾರಣಕ್ಕೆ. ಆಸ್ತಿಕನನ್ನು ಸ್ಮರಿಸಿದರೆ ಸರ್ಪ ತೊಂದರೆ ಕೊಡದೆ ಹೊರಟು ಹೋಗುತ್ತದೆ ಅನ್ನುವ ನಂಬಿಕೆಗೆ ಈ ಕಥೆಯೇ ಹಿನ್ನೆಲೆ.
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
ಸರ್ವರಿಗೂ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು 💐💥⚡✨🙏
[02/08, 8:07 AM] Pandit Venkatesh. Astrologer. Kannada: ಶ್ರೀ ನಾಗ ಸ್ತೋತ್ರಂ
(ನವನಾಗ ಸ್ತೋತ್ರಂ)
ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್ | ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ ಕಾಳಿಯಂ ತಥಾ || ೧ ||
ಫಲಶೃತಿ |
ಏತಾನಿ ನವ ನಾಮಾನಿ ನಾಗಾನಾಂ ಚ ಮಹಾತ್ಮನಾಮ್ | ಸಾಯಂಕಾಲೇ ಪಠೇನ್ನಿತ್ಯಂ ಪ್ರಾತಃಕಾಲೇ ವಿಶೇಷತಃ || ೨ || manasa
ಸಂತಾನಂ ಪ್ರಾಪ್ಯತೇ ನೂನಂ ಸಂತಾನಸ್ಯ ಚ ರಕ್ಷಕಾಃ | ಸರ್ವಬಾಧಾ ವಿನಿರ್ಮುಕ್ತಃ ಸರ್ವತ್ರ ವಿಜಯೀ ಭವೇತ್ || ೩ ||ವಿಜಯೀ ಭವೇತ್ || ೩ ||manasa
ಸರ್ಪದರ್ಶನಕಾಲೇ ವಾ ಪೂಜಾಕಾಲೇ ಚ ಯಃ ಪಠೇತ್ | ತಸ್ಯ ವಿಷಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್ || ೪ || [ಸರ್ಪ]
ಓಂ ನಾಗರಾಜಾಯ ನಮಃ ಪ್ರಾರ್ಥಯಾಮಿ ನಮಸ್ಕರೋಮಿ ||
ಇತಿ ನವನಾಗ ಸ್ತೋತ್ರಮ್ |
– ಶ್ರೀ ಮನಸಾ ದೇವೀ - ದ್ವಾದಶನಾಮ ಸ್ತೋತ್ರಂ (ನಾಗಭಯ ನಿವರಣ ಸ್ತೋತ್ರಂ)
ಓಂ ನಮೋ ಮನಸಾಯ್ಕೆ |
ಜರತ್ಕಾರುರ್ಜಗದ್ಗರೀ ಮನಸಾ ಸಿದ್ಧಯೋಗಿನೀ |
ವೈಷ್ಣವೀ ನಾಗಭಗಿನೀ ಶೈವೀ ನಾಗೇಶ್ವರೀ ತಥಾ || ೧ ||
ಜರತ್ಕಾರುಪ್ರಿಯಾಽಽಸ್ತೀಕಮಾತಾ ವಿಷಹರೀತೀ ಚ | ಮಹಾಜ್ಞಾನಯುತಾ ಚೈವ ಸಾ ದೇವೀ ವಿಶ್ವಪೂಜಿತಾ || ೨ || manasa
ದ್ವಾದಶೈತಾನಿ ನಾಮಾನಿ ಪೂಜಾಕಾಲೇ ಚ ಯಃ ಪಠೇತ್ | ತಸ್ಯ ನಾಗಭಯಂ ನಾಸ್ತಿ ತಸ್ಯ ವಂಶೋದ್ಭವಸ್ಯ ಚ || ೩ || manasa
ನಾಗಭೀತೇ ಚ ಶಯನೇ ನಾಗಗ್ರಸ್ತ ಚ ಮಂದಿರೇ | ನಾಗಕ್ಷತೇ ನಾಗದುರ್ಗೇ ನಾಗವೇಷ್ಟಿತವಿಗ್ರಹೇ || ೪ ||
ಇದಂ ಸ್ತೋತ್ರಂ ಪಠಿತ್ವಾ ತು ಮುಚ್ಯತೇ ನಾತ್ರ ಸಂಶಯಃ | ನಿತ್ಯಂ ಪಠೇದ್ಯಸ್ತಂ ದೃಷ್ಟಾ ನಾಗವರ್ಗಃ ಪಲಾಯತೇ || ೫ || manasa
ದಶಲಕ್ಷಜಪೇನೈವ ಸ್ತೋತ್ರಸಿದ್ಧಿರ್ಭವೇನ್ದ್ರಣಾಮ್ | ಸ್ತೋತ್ರಂ ಸಿದ್ಧಿಂ ಭವೇದ್ಯಸ್ಯ ಸ ವಿಷಂ ಭೋಕ್ತುಮೀಶ್ವರಃ || ೬ ||
ನಾಗೌಘಂ ಭೂಷಣಂ ಕೃತ್ವಾ ಸ ಭವೇನ್ನಾಗವಾಹನಃ | ನಾಗಾಸನೋ ನಾಗತಲ್ಲೋ ಮಹಾಸಿದ್ದೋ ಭವೇನ್ನರಃ || ೭ || manasa
ಇತಿ ಶೀಬ.ಹ.ವೆ.ವರ್ತಮಹಾಪುರಾಣೇ ಪ್ರಕೃತಿಖಂಡೇ ಪಂಚಚತ್ವಾರಿಂಶೋಽಧ್ಯಾಯೇ ಶ್ರೀ ಮನಸಾದೇವೀ ದ್ವಾದಶನಾಮ ಸ್ತೋತ್ರಮ್ ||
ಶ್ರೀ ಮನಸಾ ದೇವೀ ಸ್ತೋತ್ರಂ (ಮಹೇಂದ್ರ ಕೃತಂ)
ದೇವಿ ತ್ವಾಂ ಸ್ತೋತುಮಿಚ್ಛಾಮಿ ಸಾಧೀನಾಂ ಪ್ರವರಾಂ ಪರಾಮ್ | ಪರಾತ್ಪರಾಂ ಚ ಪರಮಾಂ ನ ಹಿ ಸ್ತೋತುಂ ಕ್ಷಮೋsಧುನಾ ||೧ ||
ಸ್ತೋತ್ರಾಣಾಂ ಲಕ್ಷಣಂ ವೇದೇ ಸ್ವಭಾವಾಖ್ಯಾನತಃ ಪರಮ್ | ನ ಕ್ಷಮಃ ಪ್ರಕೃತಿಂ ವಕ್ತುಂ ಗುಣಾನಾಂ ತವ ಸುವ್ರತೇ || ೨ ||
ಶುದ್ಧಸತ್ತ್ವ ಸ್ವರೂಪಾ ತ್ವಂ ಕೋಪಹಿಂಸಾವಿವರ್ಜಿತಾ ನ ಚ ಶಪ್ಪೋ ಮುನಿಸ್ತೇನ ತ್ಯಕ್ತಯಾ ಚ ತ್ವಯಾ ಯತಃ || ೩ ||
ಚ ಯಥಾಽದಿತಿಃ |
ತ್ವಂ ಮಯಾ ಪೂಜಿತಾ ಸಾಧೀ ಜನನೀ ದಯಾರೂಪಾ ಚ ಭಗಿನೀ
ಕ್ಷಮಾರೂಪಾ ಯಥಾ ಪ್ರಸೂಃ || ೪
ತ್ವಯಾ ಮೇ ರಕ್ಷಿತಾಃ ಪ್ರಾಣಾ ಪುತ್ರದಾರಾಃ ಸುರೇಶ್ವರಿ | ಅಹಂ ಕರೋಮಿ ತ್ವಾಂ ಪೂಜ್ಯಾಂ ಮಮ ಪ್ರೀತಿಶ್ಚ ವರ್ಧತೇ || ೫ ||
ನಿತ್ಯಂ ಯದ್ಯಪಿ ಪೂಜ್ಯಾ ತ್ವಂ ಭವೇತ್ರ ಜಗದಂಬಿಕೇ | ತಥಾಪಿ ತವ ಪೂಜಾಂ ವೈ ವರ್ಧಯಾಮಿ ಪುನಃ ಪುನಃ || ೬ ||
ಯೇ ತ್ವಾಮಾಷಾಢಸಂಕ್ರಾಂತ್ಯಾಂ ಪೂಜಯಿಷ್ಯಂತಿ ಭಕ್ತಿತಃ | ಪಂಚಮ್ಯಾಂ ಮನಸಾಖ್ಯಾಯಾಂ
ಮಾಸಾಂತೇ ವಾ ದಿನೇ ದಿನೇ || ೭ || ಪುತ್ರಪೌತ್ರಾದಯಸ್ತೇಷಾಂ ವರ್ಧಂತೇ ಚ ಧನಾನಿ ಚ | ಯಶಸ್ವಿನಃ ಕೀರ್ತಿಮಂತೋ ವಿದ್ಯಾವಂತೋ ಗುಣಾನ್ವಿತಾಃ || ೮ ||
ಯೇ ತ್ವಾಂ ನ ಪೂಜಯಿಷ್ಯಂತಿ ನಿಂದಂತ್ಯಜ್ಞಾನತೋ ಜನಾಃ | ಲಕ್ಷ್ಮೀಹೀನಾ ಭವಿಷ್ಯಂತಿ ತೇಷಾಂ ನಾಗಭಯಂ ಸದಾ || ೯ ||
ತ್ವಂ ಸ್ವರ್ಗಲಕ್ಷ್ಮೀಃ ಸ್ವರ್ಗೇ ಚ ವೈಕುಂಠೇ ಕಮಲಾಕಲಾ | ನಾರಾಯಣಾಂಶೋ ಭಗವಾನ್ ಜರತ್ಕಾರುರ್ಮುನೀಶ್ವರಃ || ೧೦ || ತಪಸಾ ತೇಜಸಾ ತ್ವಾಂ ಚ ಮನಸಾ ಸಸೃಜೇ ಪಿತಾ |
ಅಸ್ಮಾಕಂ ರಕ್ಷಣಾಯ್ಕವ ತೇನ ತಂ ಮನಸಾಭಿಧಾ || ೧೧ ||
ಮನಸಾ ದೇವಿ ತು ಶಕ್ತಾ ಚಾತ್ಮನಾ ಸಿದ್ಧಯೋಗಿನೀ | ತೇನ ತ್ವಂ ಮನಸಾದೇವೀ ಪೂಜಿತಾ ವಂದಿತಾ ಭವೇ || ೧೨ ||
ಯಾಂ ಭಕ್ಯಾ ಮನಸಾ ದೇವಾಃ ಪೂಜಯಂತ್ಯನಿಶಂ ಭಶಮ್ | ತೇನ ತ್ವಾಂ ಮನಸಾದೇವೀಂ ಪ್ರವದಂತಿ ಪುರಾವಿದಃ || ೧೩ ||
ಸತ್ತ್ವರೂಪಾ ಚ ದೇವೀ ತ್ವಂ ಶಶ್ವತ್ಪತ ನಿಷೇವಯಾ | ಯೋ ಹಿ ಯದ್ಭಾವಯೇನ್ನಿತ್ಯಂ ಶತಂ ಪ್ರಾಪ್ಪೋತಿ ತತ್ಸಮಮ್ || ೧೪ ||
ಇದಂ ಸ್ತೋತ್ರಂ ಪುಣ್ಯಬೀಜಂ ತಾಂ ಸಂಪೂಜ್ಯ ಚ ಯಃ ಪಠೇತ್ |
ತಸ್ಯ ನಾಗಭಯಂ ನಾಸ್ತಿ ತಸ್ಯ ವಂಶೋದ್ಭವಸ್ಯ ಚ || ೧೫ || ಚ
ವಿಷಂ ಭವೇತ್ಸುಧಾತುಲ್ಯಂ ಸಿದ್ಧಸ್ತೋತ್ರಂ ಯದಾ ಪಠೇತ್ | ಪಂಚಲಕ್ಷಜಪೇನೈವ ಸಿದ್ಧಸ್ತೋತ್ರೋ ಭವೇನ್ನರಃ | ಸರ್ಪಶಾಯೀ ಭವೇತ್ತೋಽಪಿ ನಿಶ್ಚಿತಂ ಸರ್ಪವಾಹನಃ || ೧೬ ||
ಇತಿ ಶ್ರೀಬ್ರಹ್ಮವೈವರ್ತೇ ಮಹಾಪುರಾಣೇ ಪ್ರಕೃತಿಖಂಡೇ ಷಟ್ಟತ್ವಾರಿಂಶೋSಧ್ಯಾಯೇ ಮಹೇಂದ್ರ ಕೃತ ಶ್ರೀ ಮನಸಾದೇವೀ ಸ್ತೋತ್ರಮ್ ||
[02/08, 11:48 AM] Pandit Venkatesh. Astrologer. Kannada: 🕉️ ಹರಿಃ ಓಂ
🙏 ನಾಗಪಂಚಮೀ ಹಬ್ಬ
ವೇದಾಂತ ಜ್ಞಾನ ಯವರಿಂದ ನಾಗರ ಪಂಚಮಿ ಹಬ್ಬದ ಶುಭಾಶಯಗಳು 🙏💝🙏
🎙️ ನಾಗ~ಗರಡು ಪಂಚಮಿ • ಹಾವುಗಳ ಹಬ್ಬ!!
🛑ಹಾವು಼ಗಳು ಅಥವಾ ನಾಗಗಳು ಯಾವಾಗಲೂ ಹಿಂದೂ ಪುರಾಣ ಮತ್ತು ಧಾರ್ಮಿಕ ವಿಧಿಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿವೆ.. ನಾಗರಹಾವು ನಾಗರ ಸಂಕೇತವಾಗಿದೆ. ನಾಗ ಪಂಚಮಿ ಹಾವುಗಳನ್ನು ಪೂಜಿಸಲು ಭಾರತದಲ್ಲಿ ಆಚರಿಸುವ ಹಿಂದೂ ಹಬ್ಬ. ಇದನ್ನು ನೇಪಾಳ ಮತ್ತು ಭಾರತದ ಬಹುತೇಕ ಭಾಗಗಳಲ್ಲಿ, ವಿಶೇಷವಾಗಿ ವಿವಾಹಿತ ಮಹಿಳೆಯರಿಂದ ಆಚರಿಸಲಾಗುತ್ತದೆ. ಮಹಾರಾಷ್ಟ್ರದ ಶಿರಲೆ ಗ್ರಾಮವು಼ ಹಬ್ಬದ ಸಮಯದಲ್ಲಿ ಆಚರಿಸುವ ವಿಶಿಷ್ಟ ಸಂಪ್ರದಾಯಗಳಿಗೆ ಪ್ರಸಿದ್ಧವಾಗಿದೆ..
🔮ಶ್ರಾವಣ ಶುದ್ಧ ಚತುರ್ಥಿಯಂದು ತಾಯಂದಿರು ಅಭ್ಯಂಜನ ಮಾಡಿ ನಾಗಪ್ಪನಿಗೆ ಹಾಲಿನ ಅಭಿಷೇಕ ಮಾಡುತ್ತಾರೆ. ಈ ದಿನ ಉಪವಾಸವಿದ್ದು ಮಾರನೇ ದಿನ ಮತ್ತೆ ಕ್ಷೀರಾಭಿಷೇಕ ಮಾಡಿ ನಂತರ ಭೋಜನ ಮಾಡುತ್ತಾರೆ. ಇಲ್ಲಿ ಕೆಲವರು ಉಪವಾಸವನ್ನೂ, ಕೆಲವರು ಉಪ್ಪು ಖಾರವಿಲ್ಲದ ಆಹಾರವನ್ನೂ, ಕೆಲವರು ಫಲಾಹಾರವನ್ನೂ ಮಾಡುವ ಸಂಪ್ರದಾಯ ಭೇದವಿದೆ. ನಿಮ್ಮ ನಿಮ್ಮ ಸಂಪ್ರದಾಯ ಪಾಲಿಸಿ. ಇಂದು ಸ್ತ್ರೀಯರು ನಾಗಪ್ಪನಿಗೆ ತನಿ ಎರೆದು ಹಸಿಯಾದ ಕಡ್ಲೇಕಾಳು, ನುಚ್ಚಿನ ಉಂಡೆ ಮುಂತಾದವನ್ನು ನೈವೇದ್ಯ ಮಾಡುತ್ತಾರೆ.
🛑ಗರುಡ, ಹದ್ದು, ಭಗವಾನ್ ವಿಷ್ಣುವಿನ ವಾಹನವಾಗಿದ್ದು, ಬಹುತೇಕ ವಿಷ್ಣು ದೇವಸ್ಥಾನಗಳಲ್ಲಿ ದ್ವಾರಪಾಲಕ ಮತ್ತು ಅಂಗದೇವತೆಯ ಪ್ರಮುಖ ಸ್ಥಾನವನ್ನು ಹೊಂದಿದೆ.
🔮ಮಹಿಳೆಯರು ತಮ್ಮ ಮಕ್ಕಳ ಕಲ್ಯಾಣ ಮತ್ತು ಉತ್ತಮ ಆರೋಗ್ಯಕ್ಕಾಗಿ ಆಚರಿಸುವ ಗರುಡ ಪಂಚಮಿಗೆ ಸಂಬಂಧಿಸಿದ ಪೂಜೆ ಮತ್ತು ವ್ರತ. ನಾಗ ಪಂಚಮಿಯ ದಿನವನ್ನು ಸಹ ಆಚರಿಸಲಾಗುತ್ತದೆ಼.
🎙️ ನಾಗ ಪಂಚಮಿಯನ್ನು ಯಾವಾಗ ಆಚರಿಸಲಾಗುತ್ತದೆ!!
ನಾಗರ ಪಂಚಮಿಯನ್ನು ಶ್ರಾವಣ ಮಾಸದಲ್ಲಿ ಶುಕ್ಲ ಪಕ್ಷದಲ್ಲಿ (ಪ್ರಕಾಶಮಾನವಾದ ಅರ್ಧ, ಅಮಾವಾಸ್ಯೆಯ ನಂತರ) ಐದನೇ ದಿನ (ಪಂಚಮಿ) ಆಚರಿಸಲಾಗುತ್ತದೆ. ಇದು ಜುಲೈ ಅಥವಾ ಆಗಸ್ಟ್‌ನಲ್ಲಿ ಬರುತ್ತದೆ.
🎙️ ಇದನ್ನು ಹೊರತುಪಡಿಸಿ, ದೇವರನ್ನು ಪ್ರಾರ್ಥಿಸುವ ಮೂಲಕ (ನಿಯಮಿತವಾಗಿ ಮಂತ್ರ ಪಠಿಸುವುದು) ಗರುಡ ಸ್ವರವನ್ನು ಮಾಡಬಹುದು:
🔹ಹಾವುಗಳು ಮತ್ತು ಇತರ ವಿಷಕಾರಿ ಜೀವಿಗಳ ಭಯವನ್ನು ತೊಡೆದುಹಾಕಿ
🔹ದುಷ್ಟ ಕಣ್ಣು, ಮಾಟ, ಮತ್ತು ಎಲ್ಲಾ ಇತರ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಿ
🔹ಸರ್ಪ ದೋಷದ ದುಷ್ಪರಿಣಾಮಗಳಿಂದ ಉಂಟಾಗುವ ಗುಣಪಡಿಸಲಾಗದ ರೋಗಗಳನ್ನು ಗುಣಪಡಿಸಿಕೊಳ್ಳಿ
🔹ಎಲ್ಲಾ ನ್ಯಾಯಯುತ ಆಸೆಗಳನ್ನು ಕ್ರಮೇಣ ಈಡೇರಿಸಿ
ಎಲ್ಲಾ ಚಿಂತೆಗಳಿಂದ ಮುಕ್ತರಾಗಿರಿ
🔹ಖ್ಯಾತಿ, ಹೆಸರು ಮತ್ತು ಸಂಪತ್ತನ್ನು ಗಳಿಸಿ
🔹ಆತ್ಮ ವಿಶ್ವಾಸ ಮತ್ತು ಧೈರ್ಯದಲ್ಲಿ ಹೆಚ್ಚಳವನ್ನು ಸಾಧಿಸಿ
🔹ಹಾವು಼ಗಳು ಮತ್ತು ಇತರ ಸರೀಸೃಪಗಳ ಭಯವನ್ನು ನಿವಾರಿಸಿ
ಎಲ್ಲಾ ಜೀವನದ ಸಮಸ್ಯೆಗಳನ್ನು ಜಯಿಸಲು ತಾರ್ಕಿಕ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಪಡೆಯಿರಿ
ನಾಗ ಚತುರ್ಥಿ ಮತ್ತು ಪಂಚಮಿಯಂದು ಹಾವಿನ ಬಾಧೆಗಳನ್ನು ನಿವಾರಿಸಲು ಮತ್ತು ನಾಗರ ಆಶೀರ್ವಾದ ಪಡೆಯಲು ನಾಗರ ದೇವರ ಆಶೀರ್ವಾದವನ್ನು ಆವಾಹಿಸಿ.
🛑ಗರುಡ ಪಂಚಾಕ್ಷರ ಮಂತ್ರ
ಅಸ್ಯಶ್ರೀ ಗರುಡ ಮಂತ್ರಸ್ಯ ಕಾಶ್ಯಪ ಋಷಿ: ! ಪಂಕ್ತಿಶ್ಚಂಧ: ! ಶ್ರೀ ಗರುಡೋ ದೇವತಾ !🙏🐍🙏
💠ನ್ಯಾಸ : ಓಂ ಕ್ಷಿಂ ಹೃದಯಾಯ ನಮಃ: ! ಓಂ ಪಂ ಶಿರಸೇ ಸ್ವಾಹಾ ! ಓಂ ಶಿಖಾಯೈ ವೌಷಟ್! ಸ್ವಾಂ ಕವಚಾಯ ಹುಂ ! ಹಾಂ ಅಸ್ತ್ರಾಯ ಫಟ್!🙏🐍🙏
🛑ಧ್ಯಾನ :
ಗರುಡ: ಸರ್ವದಾ ಧ್ಯೇಯ ; ಸುಧಾಪೂರ್ಣಂ ಹಿರಣ್ಮಯಂ!
ದಧಾನ: ಕುಂಭಮಭಯಂ ಪೀತಶುಕ್ಲಾರುಣೋ ಹರಿ: !!🙏🐍
💠ಮಂತ್ರ :
ಓಂ ಕ್ಷಿಪ ಓಂ ಸ್ವಾಹಾ ಓಂ !!🙏🐍🙏
🛑ಶೇಷ ಷಡಕ್ಷರ ಮಂತ್ರ
ಅಸ್ಯ ಶ್ರೀ ಶೇಷ ಮಂತ್ರಸ್ಯ ಸನತ್ಕುಮಾರ ಋಷಿ; ! ಯಾಜುಷೀ ಗಾಯತ್ರೀ ಛಂದ: ! ಶ್ರೀ ಶೇಷೋ ದೇವತಾ !🙏🐍🙏
💠ನ್ಯಾಸ :
ಓಂ ಶೇಂ ಹೃದಯಾಯ ನಮಃ ! ಓಂ ಶೇಂ ಶಿರಸೇ ಸ್ವಾಹಾ಼ ! ಓಂ ಷಾಂ ಶಿಖಾಯೈ ವೌಷಟ್ ! ಓಂ ಯಂ ಕವಚಾಯ ಹುಂ ! ಓಂ ಪಂ ನೇತ್ರಾಭ್ಯಾಂ ವೌಷಟ್ ! ಮಂ ಅಸ್ತ್ರಾಯ ಫಟ್ !🙏🐍🙏
🛑ಧ್ಯಾನ ;
ದಧಾನೋ ಹಾಲು ಸೌನಂದೋ ಶ್ವೇತವರ್ಣಾ ಕೃತಾಂಜಲಿ !
ಸಹಸ್ರಮೂರ್ಧಾsದ್ವಿತೀಯ ಕರ್ಣ ಭೂಷ: ಪ್ರಿಯಾಯುತ: !
ವನಮಾಲೀ ನೀಲವಾಸಾ ಧ್ಯೇಯೋ ವಿಷ್ಣೋಸ್ತು ಪೃಷ್ಟತ: !!🙏
💠ಮಂತ್ರ :
!! ಓಂ ಶೇಷಾಯ ನಮಃ: ಓಂ !!🙏🐍🙏
🎙️ಪೂಜಾ ಸಂದರ್ಭದಲ್ಲಿ ಹಾಲು ತುಪ್ಪ ಎರೆಯುವಾಗ ಹೇಳಬೇಕಾದ ಶ್ಲೋಕ :
ಅನಂತಶಯನಂ ದೇವಂ ಸರ್ವಶೋಕವಿನಾಶನಂ !
ಲೋಕಾಧಾರಂ ವಾರುಣೀಶಂ ನಾಗೇಂದ್ರಂ ಸನ್ನಮಾಮ್ಯಹಂ !!🙏🐍🙏
ಅನಾದಿಕಾಲದಿಂದಲೂ ಸರ್ವೋತ್ತಮನಾದ ಶ್ರೀ ಹರಿಗೆ ಶಯನನಾದ, ದೇವಶ್ರೇಷ್ಟನಾದ, ಸರ್ವಶೋಕವನ್ನೂ ನಿವಾರಿಸುವ ವಾರುಣೀಪತಿಯಾದ ಶೇಷದೇವರಿಗೆ ಭಕ್ತಿಯಿಂದ ನಮಿಸುವೆನು.
🎙️ ಗರುಡನ ಶಕ್ತಿಯುತ ಮಂತ್ರ
ಪುರಾಣದ ಪ್ರಕಾರ, ಎಲ್ಲಾ ರೀತಿಯ ನಾಗ ದೋಷದಿಂದ (ಹಾವುಗಳ ಬಾಧೆ) ವ್ಯಕ್ತಿಯನ್ನು ನಿವಾರಿಸಲು ಗರುಡ ಶಕ್ತಿಯುತ . ಅವರು ಕೇವಲ ಮಂತ್ರಗಳನ್ನು ಪಠಿಸುವುದರಿಂದ ಸಂತೋಷಪಡುತ್ತಾರೆ.
ಗರುಡ ಗಾಯತ್ರಿ, ಗರುಡ ವಶೀಕರಣ, ಗರುಡ ದಂಡಕಂ ಮತ್ತು ಗರುಡ ಕವಚದಂತಹ ಅನೇಕ ಮಂತ್ರಗಳಿವೆ. ಗರುಡನ ಆಶೀರ್ವಾದಕ್ಕಾಗಿ ಈ ಮಂತ್ರಗಳನ್ನು ಪ್ರತಿದಿನ 108 ಬಾರಿ ಪಠಿಸಬಹುದು.
🐍 ಗರುಡ ಗಾಯತ್ರಿ
! ಗ್ಯಾಮ್! ಗಣಪತಯೇ! ನಮಃ!
ಓಂ! ಶ್ರೀ ರಾಘವೇಂದ್ರಾಯ ನಮಃ!
ಓಂ! ನಮೋ! ಭಾಗವತೇ! ವಾಸುದೇವಾಯ!
ಓಂ! ಹ್ಯಾಮ್! ಹನುಮಠೆ! ಶ್ರೀ ರಾಮ ದೂತಾಯ ನಮಃ!
ಓಂ ತತ್ಪುರುಷಾಯ ವಿಧ್ಮಹೆ
ಸುವರ್ಣ ಪಕ್ಷದ ಧೀಮಹಿ
ತನ್ನೋ ಗರುಡ ಪ್ರಚೋದಯಾತ್ 🙏🐍🙏
ಈ ಎಲ್ಲಾ ಗರುಡ ಮಂತ್ರಗಳು ಈ ಕಲಿಯುಗದಲ್ಲಿ ಅತ್ಯಂತ ಶಕ್ತಿಶಾಲಿ ಮಂತ್ರಗಳಾಗಿವೆ. ಪಂಚಮಿ ತಿಥಿ (5 ನೇ ವ್ಯಾಕ್ಸಿಂಗ್ ಮೂನ್) ದಿನದಿಂದ ಶುಕ್ಲ ಪಕ್ಷದ ದಿನ (ಗರುಡ ಪಂಚಮಿ ದಿನ ಆರಂಭವಾದರೆ ಬಹಳ ಶುಭ) ರಿಂದ ಈ ಮಂತ್ರವನ್ನು ಯಾರಾದರೂ 108 ದಿನಗಳವರೆಗೆ 1008 ಬಾರಿ ಜಪಿಸಿದರೆ, ಆ ವ್ಯಕ್ತಿಯು ಸಿದ್ಧಿ ಮತ್ತು 12 ತಲೆಮಾರುಗಳನ್ನು ಸಾಧಿಸಬಹುದು ಎಂದು ನಂಬಲಾಗಿದೆ. ಎಲ್ಲಾ ರೀತಿಯ ಸರ್ಪ ದೋಷ ( ಕಾಲ ಸರ್ಪ ದೋಷ ), ನಾಗ ದೋಷ, ರಾಹು ದೋಷ ಮತ್ತು ಕೇತು ದೋಷ, ದುರದೃಷ್ಟಗಳಿಂದ ಮುಕ್ತರಾಗಿರಿ, ಮತ್ತು ಉತ್ತಮ ಆರೋಗ್ಯ, ಸಂಪತ್ತು ಸಮೃದ್ಧಿ, ಸಂತೋಷದ ವೈವಾಹಿಕ ಜೀವನ ಮತ್ತು ಒಳ್ಳೆಯ ಮಕ್ಕಳನ್ನು ನೀಡಬಹುದು.
🎙️ ಗರುಡ ಪಂಚಮಿ!!
ಈ ದಿನ ಗರುಡ ದೇವರು ದೇವಲೋಕದಿಂದ ಅಮೃತವನ್ನು ತಂದು ಅದನ್ನು ಸರ್ಪಗಳಿಗೆ ಕೊಟ್ಟು ತನ್ನನ್ನೂ ಮತ್ತು ತನ್ನ ತಾಯಿಯಾದ ವಿನತೆಯನ್ನು ದಾಸ್ಯದಿಂದ ಮು಼ಕ್ತಿ ಗೊಳಿಸಿದ ದಿನ.
ಅನಂತಂ ವಾಸುಕಿಂ ಶೇಷಂ ಪದ್ಮಕಂಬಲಕೌ ತಥಾ |
ತಥಾ ಕಾರ್ಕೋಟಕಂ ನಾಗಂ ಭುಜಂಗಶ್ವತರೌ ತಥಾ ||
ಧೃತರಾಷ್ಟ್ರಂ ಶಂಖಪಾಲಂ ಕಾಲೀಯಂ ತಕ್ಷಕಂ ತಥಾ |
ಪಿಂಗಲಂ ಚ ಮಹಾನಾಗಂ ಸಪತ್ನೀಕಾನ್ ಪ್ರಪೂಜಯೇತ್ ||🙏
ಧರ್ಮಗ್ರಂಥಗಳ ಪ್ರಕಾರ, ಗರುಡನ ದಯೆಯ ನೋಟದಿಂದ ಆಶೀರ್ವದಿಸಲ್ಪಟ್ಟ ವ್ಯಕ್ತಿಗೆ ವಿಜಯದ ಭರವಸೆ ಇದೆ. ಅವನು ಬಲಶಾಲಿ ಮತ್ತು ಬಲಶಾಲಿ. ಗರುಡವು಼ ವಿಷ್ಣುವಿಗೆ ಬಹಳ ನಿಕಟ ಸಂಬಂಧ ಹೊಂದಿದೆ ಮತ್ತು ವಿಷ್ಣುವಿನ ಎಲ್ಲಾ ಭಕ್ತರಿಂದ ಪೂಜಿಸಲ್ಪಡುತ್ತದೆ. ಆತ ಭಕ್ತರಿಗೆ ಎಂಟು ಬಗೆಯ ಸಿದ್ಧಿಗಳನ್ನು ಅನುಗ್ರಹಿಸಬಹುದು.
🌀ಅನಿಮಾ: ದೇಹದ ಗಾತ್ರವನ್ನು ಕಡಿಮೆ ಮಾಡುವುದು
🛑ಮಹಿಮಾ: ದೇಹದ ಗಾತ್ರವನ್ನು ಹೆಚ್ಚಿಸುವುದು
🌀ಲಾಗಿಮಾ: ಗರಿಗಳಂತೆಯೇ ತುಂಬಾ ಹಗುರವಾಗುವ ಸಾಮರ್ಥ್ಯ
🛑ಗರಿಮಾ: ಭಾರವಾಗಿ ಬೆಳೆಯುವ ಸಾಮರ್ಥ್ಯ
🌀ಇಸಿತ್ವಮ್: ದೈವಿಕ ಶಕ್ತಿಯನ್ನು ಹೊಂದಲು
🛑ವಸಿತ್ವಂ: ಇತರರನ್ನು ಆಕರ್ಷಿಸುವ ಮತ್ತು ನಿಯಂತ್ರಿಸುವ ಶಕ್ತಿ
🌀ಪ್ರಾಪ್ತಿ: ಯಾವುದನ್ನಾದರೂ ಭದ್ರಪಡಿಸುವ ಸಾಮರ್ಥ್ಯ
🛑ಪ್ರಾಕಮ್ಯ: ಅದೃಶ್ಯವಾಗುವ ಸಾಮರ್ಥ್ಯ
ಅವರು ಭಗವಾನ್ ವಿಷ್ಣುವಿನ ಆರು ಮಂಗಳಕರ ಗುಣಗಳನ್ನು ಹೊಂದಿದ್ದಾರೆ. ಅವುಗಳೆಂದರೆ ಜ್ಞಾನ, ಬಾಲ, ಐಶ್ವರ್ಯ, ಶಕ್ತಿ, ತೇಜಸ್ ಮತ್ತು ವಾತ್ಸಲ್ಯ.
🎙️ಬೆನ್ನು ತೊಳೆಯುವುದು
ನಾಗರಪಂಚಮಿ ದಿನದಂದು ಅಕ್ಕತಂಗಿಯರು ಅಣ್ಣತಮ್ಮಂದಿರ ಬೆನ್ನು ತೊಳೆಯುವುದು ಸಂಪ್ರದಾಯ. ಹಿಂದೆ ಸರ್ಪಗಳು ವರ ನೀಡಿದ್ದವು. ” ಈದಿನ ಸರ್ಪದಂತಿರುವ ಯಾವುದೇ ವಸ್ತುಗಳಿಗೆ ಹಾಲೆರೆದರೂ ನಾವು ಸಂತುಷ್ಟರಾಗುವೆವು” ಎಂದು. ಅದರಂತೆ ಬೆಳಿಗ್ಗೆ ನಾಗಪ್ಪನಿಗೆ ಅಭಿಷೇಕ ಮಾಡಿದ ಹುತದ ಮಣ್ಣು ಮತ್ತು ಹಾಲನ್ನು ತೆಗೆದುಕೊಂಡು ಅಣ್ಣ ತಮ್ಮಂದಿರ ಸರ್ಪಾಕಾರದಲ್ಲಿರುವ ಬೆನ್ನಿನ ಹುರಿಗೆ ಹಚ್ಚಿ ತೊಳೆಯುವು಼ದರಿಂದ , ಸರ್ಪಗಳು ಸಂತುಷ್ಟರಾಗಿ ಹಚ್ಚಿದವರಿಗೂ, ಹಚ್ಚಿಸಿಕೊಂಡವರಿಗೂ ಅನುಗ್ರಹ ಮಾಡುವುವು. ಅದಕ್ಕೇ ಈ ಸಂಪ್ರದಾಯ. ಹೀಗೆ ಸಹೋದರಿಯಿಂದ ಬೆನ್ನು ತೊಳೆಸಿಕೊಂಡ ಸಹೋದರ, ಸಹೋದರಿಗೆ ಉಡುಗೊರೆ / ಕಾಣಿಕೆ ನೀಡುವುದು ವಾಡಿಕೆ.
🎙️ ನಾಗ ಪಂಚಮಿಯ ಬಗ್ಗೆ ದಂತಕಥೆ
ಕಥೆ ಓದುವ ಸಮಯದಲ್ಲಿ ಅಕ್ಷತೆ ಕೈಯಲ್ಲಿ ಹಿಡಿದುಕೊಂಡು
ನಾಗ ಪಂಚಮಿಯ ಹಬ್ಬದ ಬೇರುಗಳನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಕಾಣಬಹುದು. ಸೃಷ್ಟಿಕರ್ತ ಬ್ರಹ್ಮನ ಮಗನಾದ ಕಶ್ಯಪನ ಮೂರನೇ ಹೆಂಡತಿಯಿಂದ ನಾಗರು ಜನಿಸಿದರು. ಹಾಗಾಗಿ, ನಾಗರು ದೇವರುಗಳಿಗೆ ಅಥವಾ ದೇವತೆಗಳಿಗೆ ಮಲತಾಯಿ ಸಹೋದರರಾಗಿದ್ದರು. ಅವರು ಪಾತಾಳ ಲೋಕ ಅಥವಾ ಪಾತಾಳ ಲೋಕವನ್ನು ಆಳಿದರು. ಎಂಟು ಪ್ರಮುಖ ನಾಗಗಳನ್ನು ಧರ್ಮಗ್ರಂಥಗಳಲ್ಲಿ ವಿವರಿಸಲಾಗಿದೆ. ಅವರಲ್ಲಿ ಒಬ್ಬರು ದುಷ್ಟರಾಗಿದ್ದ ಕಲಿಯಾ. ಕೃಷ್ಣ - ಭಗವಾನ್ ವಿಷ್ಣುವಿನ ಅವತಾರವು ಕೇವಲ ಹುಡುಗನಾಗಿದ್ದಾಗ, ಅವನು ಕಾಳಿಯನ್ನು ಸೋಲಿಸಿದನು ಮತ್ತು ಅವನ ತಲೆಯ ಮೇಲೆ ನೃತ್ಯ ಮಾಡಿದನು, ಅವನ ದುಷ್ಕೃತ್ಯಗಳನ್ನು ಕೊನೆಗೊಳಿಸಿದನು. ಕೃಷ್ಣನು ಕಾಳಿಯನ್ನು ಸೋಲಿಸಿದ ದಿನವನ್ನು ನಾಗ ಪಂಚಮಿ ಆಚರಿಸುತ್ತದೆ.
ಪರ್ಯಾಯವಾಗಿ, ನಾಗಾಗಳು ಸಿಂಧೂ ಕಣಿವೆ ನಾಗರೀಕತೆಯ ಸಮಯದಲ್ಲಿ ವಾಸಿಸುತ್ತಿದ್ದ ಮತ್ತು ಹಾವುಗಳನ್ನು ಪೂಜಿಸುವ ಬುಡಕಟ್ಟು ಎಂದು ಭಾವಿಸಲಾಗಿದೆ. ಆರ್ಯರ ನಾಗರೀಕತೆಯು ಭಾರತದಲ್ಲಿ ಉತ್ತಮವಾಗಿ ಸ್ಥಾಪಿತವಾದಾಗ, ನಾಗರು ಆರ್ಯರ ಜನಸಂಖ್ಯೆಯಲ್ಲಿ ಲೀನವಾದರು ಮತ್ತು ಅವರ ಆಚರಣೆಗಳ ಅವಶೇಷಗಳನ್ನು ಆರ್ಯರು ನಾಗ ಪಂಚಮಿಯಾಗಿ ಅಳವಡಿಸಿಕೊಂಡರು. ನೇಪಾಳದ ಹಿಂದೂಗಳು ನಾಗ ಪಂಚಮಿಯನ್ನು ಕೂಡ ಆಚರಿಸುತ್ತಾರೆ. ಇಲ್ಲಿ, ಕಾಠ್ಮಂಡು ಕಣಿವೆಯು ಹಾವುಗಳು ಅಥವಾ ನಾಗರು ಆಕ್ರಮಿಸಿಕೊಂಡ ಸರೋವರ ಎಂದು ಪುರಾಣ ಹೇಳುತ್ತದೆ. ಜನರು ಇಲ್ಲಿ ನೆಲೆಸಲು ಪ್ರಯತ್ನಿಸಿದಾಗ, ನಾಗರು ಕೋಪಗೊಂಡರು. ಆದುದರಿಂದ, ಅವರನ್ನು ಪೂಜಿಸಲು ಮತ್ತು ವಾಸಿಸಲು ಧಾರ್ಮಿಕ ಮಹತ್ವದ ವಿಶೇಷ ಸ್ಥಳಗಳನ್ನು ನೀಡಲಾಯಿತು.
ಕಥೆ ಓದಿದ ನಂತರ ಸ್ವಲ್ಪ ಅಕ್ಷತೆ ದೇವರಿಗೆ ಮತ್ತು ಅಣ್ಣತಮ್ಮರಿಗೇ ಹಾಕುವುದು.
🎙️ನಾಗರ ಪಂಚಮಿ ವಿಶೇಷತೆ ಏನು !!
ಸರ್ಪಗಳು ಒಮ್ಮೆ ಲೋಕಹಿಂಸಕವಾಗಿದ್ದಾಗ ಚತುರ್ಮುಖ ಬ್ರಹ್ಮ ದೇವರು ನೀವೆಲ್ಲ ಸಾಯಿರೆಂದು ಶಪಿಸಿದರು. ಆಗ ಸರ್ಪಗಳೆಲ್ಲ ತಮ್ಮ ತಪ್ಪಿನ ಅರಿವಾಗಿ ಬ್ರಹ್ಮದೇವರಲ್ಲಿ ಕ್ಷಮೆಯಾಚಿಸಿದಾಗ ಬ್ರಹ್ಮನು ಅವುಗಳಿಗೆ ಸಂರಕ್ಷಿತರಾಗಿರೆಂದು ಅನುಗ್ರಹಿಸಲ್ಪಟ್ಟ ದಿನವೇ ನಾಗರಪಂಚಮಿ.
ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ತಕ್ಷಕನೆಂಬ ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪ ಕುಲವನ್ನೇ ನಿರ್ನಾಮ ಮಾಡಲು ‘ಸರ್ಪಯಜ್ಞ’ವನ್ನು ಆರಂಭಿಸುತ್ತಾನೆ. ಆ ಸಂದರ್ಭದಲ್ಲಿ ಸರ್ಪಗಳ ದೂರದ ಬಂಧುವಾದ ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನ ಮನವೊಲಿಸಿ ಸರ್ಪಯಾಗ ನಿಲ್ಲಿಸಿದನು.. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿಯಾಗಿತ್ತು.
ನಾಗರ ಚೌತಿಯಂದು ಸ್ತ್ರೀಯರು ಮಾತ್ರ ತನಿ ಎರೆದರೆ ನಾಗರ ಪಂಚಮಿ ಎಲ್ಲರೂ ತನಿ ಎರೆಯುತ್ತಾರೆ. ಕರಿದ ಪದಾರ್ಥಗಳನ್ನು ಈ ದಿನ ಮಾಡುವಂತಿಲ್ಲ.
🎙️ ನಾಗ ಪಂಚಮಿಯ ಆಚರಣೆಗಳು!!
🔮ನಾಗ ಪಂಚಮಿಯನ್ನು ಭಾರತದಾದ್ಯಂತ ಆಚರಿಸಲಾಗುತ್ತದೆಯಾದರೂ, ಹಬ್ಬವು ಕೆಲವು ಭಾಗಗಳಲ್ಲಿ ಹೆಚ್ಚಿನ ವ್ಯತ್ಯಾಸವನ್ನು ಗಳಿಸಿದೆ. ಅನುಸರಿಸಿದ ವಿವಿಧ ಆಚರಣೆಗಳು ಹೀಗಿವೆ:
🛑ನೇಪಾಳದಲ್ಲಿ ನಾಗ ಪಂಚಮಿ ಒಂದು ಜನಪ್ರಿಯ ಹಬ್ಬವಾಗಿದೆ. ದುಷ್ಟತನವನ್ನು ದೂರಮಾಡಲು ನಾಗರ ಚಿತ್ರಗಳನ್ನು ಬಾಗಿಲಿನ ಮೇಲೆ ಇರಿಸಲಾಗಿದೆ. ಹಾಲು ಮತ್ತು ಜೇನುತುಪ್ಪದಂತಹ ಆಹಾರಗಳನ್ನು ನಾಗಾಗಳಿಂದ ತುಂಬಿದ ಹೊಲಗಳಲ್ಲಿ ಇರಿಸಲಾಗುತ್ತದೆ. ಕೆಲವರು ರಾಕ್ಷಸ ಮುಖವಾಡಗಳನ್ನು ಧರಿಸಿ ಬೀದಿಗಳಲ್ಲಿ ಸಂಚರಿಸುತ್ತಾರೆ.
🔮ನಾಗ ಪಂಚಮಿ ದಕ್ಷಿಣ ಭಾರತದ ಪ್ರಮುಖ ಹಬ್ಬ. ಒಡಹುಟ್ಟಿದವರ ಆಶೀರ್ವಾದವನ್ನು ಆಚರಿಸಲು ಇದನ್ನು ಬಳಸಲಾಗುತ್ತದೆ. ವಿವಾಹಿತ ಮಹಿಳೆಯರು ಸಾಮಾನ್ಯವಾಗಿ ಆಚರಣೆಗೆ ತಮ್ಮ ತಂದೆಯ ಮನೆಗೆ ಭೇಟಿ ನೀಡುತ್ತಾರೆ. ಅವರು ಮುಂಜಾನೆ ಎದ್ದು ಸ್ನಾನ ಮಾಡುತ್ತಾರೆ ಮತ್ತು ಹಾವುಗಳ ಮನೆಯಾಗಿರುವ ಇರುವೆ ಬೆಟ್ಟಗಳಿಗೆ ಪೂಜೆ ಸಲ್ಲಿಸುತ್ತಾರೆ. ಜೀವಂತ ನಾಗರಹಾವು ಅಥವಾ ನಾಗರ ಮೂರ್ತಿಗಳನ್ನು ಪೂಜಿಸಲಾಗುತ್ತದೆ. ಹಾಲು ಅತ್ಯಂತ ಸಾಮಾನ್ಯ ಕೊಡುಗೆಯಾಗಿದ್ದು ಹಾಲಿನ ಒಂದು ಭಾಗವನ್ನು ಪ್ರಸಾದವಾಗಿ ಮರಳಿ ತರಲಾಗುತ್ತದೆ. ಹೂವುಗಳನ್ನು ಈ ಹಾಲಿನಲ್ಲಿ ಮುಳುಗಿಸಲಾಗುತ್ತದೆ ಮತ್ತು ಮಹಿಳೆಯರು ಅದನ್ನು ತಮ್ಮ ಸಹೋದರನ ಬೆನ್ನಿಗೆ ಹಚ್ಚುತ್ತಾರೆ.
🛑ಮುಂಬೈ ಸಮೀಪದ ಶಿರಾಲೆಯಲ್ಲಿ, ಹಾವುಗಳನ್ನು ಅಗೆದು ಹಾಲು ಮತ್ತು ಇಲಿಗಳೊಂದಿಗೆ ನೀಡಲಾಗುತ್ತದೆ಼. ಪೂಜೆಯನ್ನು ನಡೆಸುವ ಪಾತ್ರೆಗಳಲ್ಲಿ ಅವುಗಳನ್ನು ದೇವಸ್ಥಾನಕ್ಕೆ ಕೊಂಡೊಯ್ಯಲಾಗುತ್ತದೆ.
🔮ಮಹಿಳೆಯರಿಗೆ ಮರಗಳಿಗೆ ಹಸಿ ದಾರ ಕಟ್ಟುವುದು ಸಾಮಾನ್ಯ ಆಚರಣೆ.
🛑 ಗರುಡ ಪಂಚಮಿ ಪೂಜೆಯನ್ನು ಮುಖ್ಯವಾಗಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಗುಜರಾತ್ ಮತ್ತು ಕೆಲವು ಹಿಂದೂ ಸಮುದಾಯಗಳು ಆಚರಿಸುತ್ತಾರೆ ಮಹಾರಾಷ್ಟ್ರ.
▶️ Naga-Garuda Panchami
▶️Nagara Chouti
▶️Shravana Shukla Chaturthi
▶️Garuda/Naga Panchami
▶️Shravana Shukla panchami
▶️Nagarachouti day
▶️Nagantargata Sankarshanaroopi paramathma
ವೇದಾಂತ ಜ್ಞಾನ ಯವರಿಂದ ಗರುಡ ಪಂಚಮಿ ಹಬ್ಬದ ಶುಭಾಶಯಗಳು 🙏💝🙏
▶️ ನಮ್ಮ ಹಿಂದೂ ಸಂಸ್ಕೃತಿ ಉಳಿಸಲು ನಿಮ್ಮ ಕೊಡುಗೆ ಇರಲಿ 😊👍
ಹರಿಯೇ ಪರದೈವ 🙏
ಜಗತ್ತು ಸತ್ಯ 🙏
ದೇವರ ಸ್ಮರಣೆ ಮುಖ್ಯ 🙏🙏
[02/08, 11:55 AM] Pandit Venkatesh. Astrologer. Kannada: ನಾಳೆ ಬುಧವಾರ ಸಿರಿಯಾಳ ಷಷ್ಠಿ –
ಶ್ರಾವಣ ಮಾಸ ಶುಕ್ಲ ಪಕ್ಷದಲ್ಲಿ ಬರುವ ಸಿರಿಯಾಳ ಷಷ್ಠೀಯು ಅತ್ಯಂತ ಪವಿತ್ರವಾದಂತಹ ದಿನ.
ಇಂದು ಸಿರಿಯಾಳ ಷಷ್ಠಿ ಸುಬ್ರಮಣ್ಯನ ಆರಾಧನೆ ವಿಶೇಷ ವಟುವಿನ ಆರಾಧನೆ ಕೆಲವರು 5 ತರಹದ ಮಾಡಿ ವಟುಗಳಿಗೆ ಕೊಡುವ ವಾಡಿಕೆ.
ಸಿರಿಯಾಳ ಷಷ್ಠಿ ಪೂಜಾ ವಿಧಿವಿಧಾನ:
ಮಣ್ಣಿನಲ್ಲಿ ಸಿರಿಯಾಳನನ್ನು (ವಿರುದ್ಧ ದಿಕ್ಕಿನಲ್ಲಿ ತಲೆಮಾಡಿ ಮಲಗಿರುವ ಎರಡು ಹಸುಳೆಗಳ ಪ್ರತಿಕೃತಿ) ಮಾಡಿ ಷೋಡಶೋಪಚಾರಗಳಿಂದ ಪೂಜಿಸಿ ಮೊಸರನ್ನವನ್ನೂ ಕಡುಬನ್ನೂ ನೈವೇದ್ಯ ಮಾಡುತ್ತಾರೆ. ಅನಂತರ ಚಿಕ್ಕ ಮಕ್ಕಳಿರುವ ಮನೆಗೆ ಬುತ್ತಿ ಮತ್ತು ಕಡುಬು ಬೀರಿ ಬರುವುದು ವಾಡಿಕೆ.
ಪ್ರಾತಃ ಕಾಲದಲ್ಲಿ ಮಂತ್ರ ಪಠಿಸುವುದರಿಂದ ಯಾವುದೇ ಜನ್ಮದ ಪಾಪವನ್ನು ಕಳೆದುಕೊಳ್ಳಬಹುದಾಗಿದೆ , ಜೊತೆಗೆ ಮಾಂತ್ರಿಕ ಭಾದೆ, ಆರೋಗ್ಯ ವೃದ್ಧಿ, ವಿಜಯ ಪ್ರಾಪ್ತಿ ಸಕಲವು ಸಿದ್ದಿ ಸುತ್ತದೆ.
1).ಷಡಾನನಂ ಚಂದನ ಲೇಪಿತಾಂಗಂ ಮಹೋರಸಂ ದಿವ್ಯ ಮಯೂರ ವಾಹನಂ
ರುದ್ರಸ್ಯ ಸೂನಂ ಸುರಲೋಕ ನಾದಂ ಬ್ರಾಹ್ಮಣ್ಯ ದೇವಂ ಶರಣಂ ಪ್ರಪದ್ಯೇ
2. ಓಂ ತತ್ಪುರುಷಾಯ ವಿದ್ಮಹೇ ಮಹಾಸೇನಾಯ ಧೀಮಹಿ ತನ್ನೋ ಷಣ್ಮುಗ ಪ್ರಚೋದಯಾತ್
3. ಅನಂತಂ ವಾಸುಕೀಂ ಶೇಷಂ ಪದ್ಮನಭಂ ಚ ಕಂಬಲಂ
ಶಂಖಪಾಲಂ ದಾರ್ತರಾಷ್ಟ್ರಂ ತಕ್ಷಕಂ ಕಾಲೀಯಂ ತಥಾ
ಪೌರಾಣಿಕ ಹಿನ್ನಲೆ
ಒಂದಾನೊಂದು ಕಾಲದಲ್ಲಿ ಸಿರಿಯಾಳನೆಂಬ ಶ್ರೇಷ್ಠ ಶಿವಭಕ್ತನಿದ್ದನು. ಅವನ ಶಿವಭಕ್ತಿ ಲೋಕಪ್ರಸಿದ್ಧವಾಗಿತ್ತು. ಆದರೂ ಶಿವನಿಗೆ ಒಮ್ಮೆ ತನ್ನ ಭಕ್ತನನ್ನು ಪರೀಕ್ಷಿಸಬೇಕೆಂಬ ಮನಸಾಯಿತು. ಅದಕ್ಕಾಗಿ ಜಂಗಮನಂತೆ ವೇಷ ಮರೆಸಿಕೊಂಡು ಸಿರಿಯಾಳನ ಮನೆಗೆ ಬಂದನು. ತನಗೆ ಹಸಿವಾಗಿದೆ ಎಂದು ಉಣ್ಣಲು ಏನಾದರೂ ಕೊಡೆಂದೂ ಕೇಳಿದನು.
ಆ ಕ್ಷಣದಲ್ಲಿ ಸಿರಿಯಾಳನ ಮನೆಯಲ್ಲಿ ಹಿಡಿ ಅಕ್ಕಿಗೂ ತತ್ವಾರವಿತ್ತು. ಇತ್ತ ಜಂಗಮ ವೇಷದ ಶಿವನು ತನ್ನ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ “ಹಸಿವು… ಹಸಿವು…” ಎಂದು ಕ್ರೋಧಗೊಳ್ಳುತ್ತಿದ್ದನು. ಕೊನೆಗೆ ದಿಕ್ಕು ತೋಚದೆ ಸಿರಿಯಾಳನು ತನ್ನ ಮಗನನ್ನು ಕೊಂದು, ಬೇಯಿಸಿ, ಅಡುಗೆ ಮಾಡಿ, ಅದನ್ನೇ ಜಂಗಮನಿಗೆ ಉಣಬಡಿಸಿದನು.
ಸಂತೃಪ್ತನಾಗಿ ಉಂಡ ಜಂಗಮನು ಸಿರಿಯಾಳನ ಅತಿಥಿಸೇವೆಯನ್ನು ಕೊಂಡಾಡಿದನು. ನಂತರದಲ್ಲಿ ಸಂತುಷ್ಟನಾಗಿ “ಅತಿಥಿಗಳನ್ನು ಸಂತೈಸುವವನೇ ಶಿವಭಕ್ತ”ನೆಂದು ಘೋಷಿಸಿ, ಸಿರಿಯಾಳನಿಗೆ ಆಶೀರ್ವಾದ ನೀಡಿದನು. ಅವನ ಮಗನನ್ನೂ ಬದುಕಿಸಿಕೊಟ್ಟನು.
ಸುಬ್ರಹ್ಮಣ್ಯ ಅಷ್ಟೋತ್ತರ ಶತ ನಾಮಾವಳಿ
ಓಂ ಸ್ಕಂದಾಯ ನಮಃ
ಓಂ ಗುಹಾಯ ನಮಃ
ಓಂ ಷಣ್ಮುಖಾಯ ನಮಃ
ಓಂ ಫಾಲನೇತ್ರ ಸುತಾಯ ನಮಃ
ಓಂ ಪ್ರಭವೇ ನಮಃ
ಓಂ ಪಿಂಗಳಾಯ ನಮಃ
ಓಂ ಕ್ರುತ್ತಿಕಾಸೂನವೇ ನಮಃ
ಓಂ ಸಿಖಿವಾಹಾಯ ನಮಃ
ಓಂ ದ್ವಿಷನ್ಣೇ ತ್ರಾಯ ನಮಃ || 10 ||
ಓಂ ಶಕ್ತಿಧರಾಯ ನಮಃ
ಓಂ ಫಿಶಿತಾಶ ಪ್ರಭಂಜನಾಯ ನಮಃ
ಓಂ ತಾರಕಾಸುರ ಸಂಹಾರ್ತ್ರೇ ನಮಃ
ಓಂ ರಕ್ಷೋಬಲವಿಮರ್ದ ನಾಯ ನಮಃ
ಓಂ ಮತ್ತಾಯ ನಮಃ
ಓಂ ಪ್ರಮತ್ತಾಯ ನಮಃ
ಓಂ ಉನ್ಮತ್ತಾಯ ನಮಃ
ಓಂ ಸುರಸೈನ್ಯ ಸ್ಸುರಕ್ಷ ಕಾಯ ನಮಃ
ಓಂ ದೀವಸೇನಾಪತಯೇ ನಮಃ
ಓಂ ಪ್ರಾಙ್ಞಾಯ ನಮಃ || 20 ||
ಓಂ ಕೃಪಾಳವೇ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಉಮಾಸುತಾಯ ನಮಃ
ಓಂ ಶಕ್ತಿಧರಾಯ ನಮಃ
ಓಂ ಕುಮಾರಾಯ ನಮಃ
ಓಂ ಕ್ರೌಂಚ ದಾರಣಾಯ ನಮಃ
ಓಂ ಸೇನಾನಿಯೇ ನಮಃ
ಓಂ ಅಗ್ನಿಜನ್ಮನೇ ನಮಃ
ಓಂ ವಿಶಾಖಾಯ ನಮಃ
ಓಂ ಶಂಕರಾತ್ಮಜಾಯ ನಮಃ || 30 ||
ಓಂ ಶಿವಸ್ವಾಮಿನೇ ನಮಃ
ಓಂ ಗುಣ ಸ್ವಾಮಿನೇ ನಮಃ
ಓಂ ಸರ್ವಸ್ವಾಮಿನೇ ನಮಃ
ಓಂ ಸನಾತನಾಯ ನಮಃ
ಓಂ ಅನಂತ ಶಕ್ತಿಯೇ ನಮಃ
ಓಂ ಅಕ್ಷೋಭ್ಯಾಯ ನಮಃ
ಓಂ ಪಾರ್ವತಿಪ್ರಿಯನಂದನಾಯ ನಮಃ
ಓಂ ಗಂಗಾಸುತಾಯ ನಮಃ
ಓಂ ಸರೋದ್ಭೂತಾಯ ನಮಃ
ಓಂ ಅಹೂತಾಯ ನಮಃ || 40 ||
ಓಂ ಪಾವಕಾತ್ಮಜಾಯ ನಮಃ
ಓಂ ಜ್ರುಂಭಾಯ ನಮಃ
ಓಂ ಪ್ರಜ್ರುಂಭಾಯ ನಮಃ
ಓಂ ಉಜ್ಜ್ರುಂಭಾಯ ನಮಃ
ಓಂ ಕಮಲಾಸನ ಸಂಸ್ತುತಾಯ ನಮಃ
ಓಂ ಏಕವರ್ಣಾಯ ನಮಃ
ಓಂ ದ್ವಿವರ್ಣಾಯ ನಮಃ
ಓಂ ತ್ರಿವರ್ಣಾಯ ನಮಃ
ಓಂ ಸುಮನೋಹರಾಯ ನಮಃ
ಓಂ ಚತುರ್ವ ರ್ಣಾಯ ನಮಃ || 50 ||
ಓಂ ಪಂಚ ವರ್ಣಾಯ ನಮಃ
ಓಂ ಪ್ರಜಾಪತಯೇ ನಮಃ
ಓಂ ಆಹಾರ್ಪತಯೇ ನಮಃ
ಓಂ ಅಗ್ನಿಗರ್ಭಾಯ ನಮಃ
ಓಂ ಶಮೀಗರ್ಭಾಯ ನಮಃ
ಓಂ ವಿಶ್ವರೇತಸೇ ನಮಃ
ಓಂ ಸುರಾರಿಘ್ನೇ ನಮಃ
ಓಂ ಹರಿದ್ವರ್ಣಾಯ ನಮಃ
ಓಂ ಶುಭಕಾರಾಯ ನಮಃ
ಓಂ ವಟವೇ ನಮಃ || 60 ||
ಓಂ ವಟವೇಷ ಭ್ರುತೇ ನಮಃ
ಓಂ ಪೂಷಾಯ ನಮಃ
ಓಂ ಗಭಸ್ತಿಯೇ ನಮಃ
ಓಂ ಗಹನಾಯ ನಮಃ
ಓಂ ಚಂದ್ರವರ್ಣಾಯ ನಮಃ
ಓಂ ಕಳಾಧರಾಯ ನಮಃ
ಓಂ…
ಶಿರಿಯಾಳ ಷಷ್ಠಿ ಕಥೆ
ಕೆಲವು ಕಾಲಗಳಹಿಂದೆ ಗ್ರಾಮದಲ್ಲೊಬ್ಬ ಬ್ರಾಹ್ಮಣನ ಸಂಸಾರ
ಇರುತಿರಲು ತಂದೆ ತಾಯಿಗಳು ಇಬ್ಬರು ಮಕ್ಕಳೊಂದಿಗೆ ಅವ್ವ ತಾತ
ಇರುತಿರಲು||ಪಲ್ಲ||
ಊರಿಗೆ ದೊಡ್ಡ ಕೆರೆಯ ಕಟ್ಟಿಸಿರಲು ನೀರುರಭಸದಿ ತೂಬಿನಿಂದ ಹರಿಯೆ
ಏನು ಮಾಡಲು ತೋಚದೆ ತಾತ ಚಿಂತಾಕ್ರಾಂತರಾಗಿ ಇರುತಿರಲು
ಸ್ವಪ್ನದಿ ಪೇಳಿದ ಸ್ವಾಮಿಯು ತಾನು ಚೊಚ್ಚಿಲಮಗನ ತೂಬಿನಲ್ಲಿ ಮಲಗಿಸೆ ನೀರಿನ ರಭಸವು ಕಡಿಮೆಯಾಗುವುದೆಂದು ನಿರ್ಧಾರವಾಗಿ
ಪೇಳಲು||೧||
ಬೆಳಗಾಗಲೆದ್ದು ವನಿತೆಯರು ಮನೆಯ ಕೆಲಸಗಳ ಮಾಡುತ್ತಿರೆ
ಯಾರು ನೋಡದಲೆ ಹಿರಿಯ ತಾತನು ತಾನು ಮೊಮ್ಮಗನ ಎತ್ತಿಕೊಂಡು
ಕೆರೆಯ ಬಳಿಗೆ ಶಾಲಿನಲ್ಲಿ ಸುತ್ತಿದ ಮಗವನ್ನು ತೂಬಿನಲ್ಲಿ ಮಲಗಿಸೆ
ಹರಿಯುತಿದ್ದ ನೀರಿನ ರಭಸವು ಹಿಂದಲೆ ಕಡೆಯಾಗಲು||೨||
ಮನದಲ್ಲಿ ಚಿಂತಿಸುತ ಬಂದನು ತಾತನು ವಿಷಾದ ಮನಸಿನಿಂದ
ಸೊಸೆಯು ಮೊಸರನ್ನ ಕಲಸಿ ಉಪ್ಪಿನಕಾಯಿ ಗಿಲಗಂಚಿ ತಂದು
ಶಿರಿಯಾಳ ಬಾರೋ ಎಂದು ಕೂಗಲು ತಾತ ಆಶ್ಚರ್ಯ ಪಡುತಿರೆ
ಹಿಂದಲೆ ಓಡಿ ಬಂದನುಶಿರಿಯಾಳ ಅಮ್ಮನ ಕರೆಗೆ ಓ ಗೊಟ್ಟು||೩||
ಶ್ರಾವಣ ಮಾಸದ ಶುಧ್ಧ ಷಷ್ಟಿ ದಿನದಿ ಶಿರಿಯಾಳ ಷಷ್ಟಿ ಎಂದು
ಮಣ್ಣಿನಿಂದ ತೊಟ್ಟಿಲು ಮಾಡಿ ಕೂಸಿನಗೊಂಬಿ ಮಲಗಿಸಿ
ಅರಿಷಿಣ ಕುಂಕುಮ ಹೂವು ಗೆಜ್ಜೆವಸ್ತ್ರದಿ ಭಕ್ತಿಂದ ಪೂಜಿಸಿ
ಹಣ್ಣು ಕಾಯಿ ನೈವೇದ್ಯ ಮಾಡಿ ಸಂಭ್ರಮದಿ ಹಬ್ಬ ಆಚರಿಸಿ||೪||
ಮೊಸರು ಅನ್ನವು ಉಪ್ಟಿನಕಾಯಿ ಗಿಲಗಂಚಿಗಳನೆ ಮಾಡಿ
ಶ್ಯಾವಿಗೆ ಪಾಯಸದೊಡನೆ ಕೆಲವು ಮನೆಗಳಿಗೆ ಬೀರಿಸಬೇಕೆಂದು
ಮದುವೆಯಾದ ಹೆಣ್ಣುಮಕ್ಕಳು ತಪ್ಪದೆ ಆಚರಿಸಬೇಕೆಂದು
ಮಧ್ವೇಶಕೃಷ್ಣನ ದಯವು ದೊರಕುವುದೆಂದು ಹಿರಿಯರು ಶಿಸ್ತಿಲಿ
ಪೇಳುವರು||೫||
▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬
Post a Comment