[31/08, 4:07 PM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*Day# 4

[31/08, 5:32 AM] vijayavitthala blr: *ನೀಲಕಂಠನ ಸುತ ಬಾಲ ಗಣೇಶನೇ*|
*ಬಾರಿಬಾರಿಗೆ ನಿನ್ನ ಭಜನೆ ಮಾಡುವೆನಯ್ಯ*||
*✍️ಸಕಲ ವಿಘ್ನ ನಿವಾರಕನಾದ ಶ್ರೀ ವಿಶ್ವಂಭರ ರೂಪಿ ಪರಮಾತ್ಮನ ಸದಾ ಕಾಲ ಉಪಾಸನೆ ಮಾಡುವ ಮತ್ತು ಆಕಾಶಕ್ಕೆ ಅಧಿಪತಿಯಾದ ಮತ್ತು ನಮ್ಮ ಗಳ ಸಾಧನಕ್ಕೆ ಬರುವ ಪ್ರತಿಬಂಧಕ ಗಳನ್ನು ಕಳೆಯುವಂತಹ ಶ್ರೀ ವಿಘ್ನೇಶ್ವರ ದೇವನ ಉಪಾಸನೆ ಮಾಡುವ ಅವನ ದಿನ.ಇದಕ್ಕೆ ಶ್ರೀ ಗಣೇಶ ಚೌತಿ ಎಂದು ಹೆಸರು.*
ನಿತ್ಯ ವು ಸಹ ಶ್ರೀ ಗಣಪತಿಯ ಸ್ಮರಣೆ, ಆಗಲೇಬೇಕು.
ಶ್ರೀ ಗಣಪತಿಯ ಬಳಿ ಹೇಗೆ ಬೇಡಿಕೊಳ್ಳಬೇಕು ಎನ್ನುವುದನ್ನು ನಮ್ಮ ಮಾನವಿ ಪ್ರಭುಗಳಾದ ಶ್ರೀ ಜಗನ್ನಾಥ ದಾಸರು ತಮ್ಮ ಮೇರು ಕೃತಿಯಾದ ಶ್ರೀ ಮದ್ ಹರಿಕಥಾಮೃತ ಸಾರದಲ್ಲಿ ಬರುವ ೨೮ ನೇ ಸಂಧಿಯಲ್ಲಿ ನಮಗೆ ತಿಳಿಸಿಕೊಡುವ ದಕ್ಕೆ ಹೇಳಿದ್ದಾರೆ. ಅದರ ಸಂಕ್ಷಿಪ್ತ ಸಾರವನ್ನು ಕೆಲ ನುಡಿಗಳನ್ನು ಇಲ್ಲಿ ಬರೆದಿದ್ದೇನೆ.
ಇದನ್ನು ಬಲ್ಲವರಿಂದ ಕೇಳಿದ್ದು.
 ಸಾರಾಂಶ..
೧.
*||ಸಜ್ಜನರ ಲಕ್ಷಣ||.*
*ದೇವರ ಸ್ತೋತ್ರ ಮಾಡುತ್ತಾ ಇರುವದು.*
*ಇಂತಹ ಭಗವಂತನ ಭಕ್ತರು ಯಾರು ಇದ್ದಾರೆ ಅವರಲ್ಲಿ ನಮಗೆ ಭಕ್ತಿ ಯನ್ನು ಕೊಡು.*
೨.
*||ದುರ್ಗುಣ ಬಿಡಿಸು||..*
*ದುರ್ಗುಣ ಗಳಿಂದ ದುಷ್ಟ ಕಾರ್ಯಮಾಡಲು ಮನಸ್ಸು ಹಾತೊರೆಯುವದು.ಅದರಿಂದ ಇಹ ಪರ ಎರಡು ಕಡೆ ದುಃಖ ಹೊರತು ಸುಖ ಇಲ್ಲ.*
*ಕೆಟ್ಟ ಕೆಲಸಗಳಿಂದ ಪಾಪಲೇಪನ.ಅದರಿಂದ ನರಕ ಲೋಕ ಪ್ರಾಪ್ತಿ.*
*ಇಂತಹ ದುರ್ಗುಣ ದುರ್ಬುದ್ದಿಯನ್ನು ಬಿಡಿಸಿದರೆ ಎನಗೆ ನರಕದ ಅಂಜಿಕೆ ಇಲ್ಲ.*
೩.
*||ದೇವರಲ್ಲಿ ಭಕ್ತಿ ಮತ್ತು ವಿಷಯದಲ್ಲಿ ವಿರಕ್ತಿ ಕೊಡು.|*
ಇವಾಗ ನಮಗೆ ಎರಡು ಅದಲು ಬದಲಾಗಿದೆ.
*ಭಗವಂತನ ಮತ್ತು ಅವನ ಭಕ್ತರ ಕತೆಗಳನ್ನು ಕೇಳಲು ಓದಲು ಅಥವಾ ದೇವ ಪೂಜಾದಿಗಳನ್ನು ಮಾಡಲು ಮನಸ್ಸು ವಿರಕ್ತಿ.*
*ಅದೇಲೌಕಿಕ ವಿಷಯಗಳು,ಬೇರೆಬೇರೆ ಭೋಗ ವಸ್ತುಗಳ ಕಡೆ ಮನಸ್ಸು ಭಕ್ತಿ..*
ಹೀಗೆ..
*ಇಂತಹ ಬುದ್ಧಿಯನ್ನು ಕೊಡಬೇಡ.*
*ಸದಾ ನಿನ್ನ ಮತ್ತು ನಿನ್ನ ಅಂತರ್ಗತನಾದ ಶ್ರೀ ವಿಶ್ವಂಬರ ರೂಪಿ ಪರಮಾತ್ಮನ ಧ್ಯಾನ ಕೊಡು.*
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಪೊಡವಿಯೊಳಗೆ ನಿನ್ನ ಬಿಡುವರ್ಯಾರೋ ರನ್ನ*||
*ಕಡು ಹರುಷದಿ ಕಾಯೋ ವಿಜಯ ವಿಠ್ಠಲ ದಾಸ||*
🙏ಶ್ರೀಗಣೇಶಾಯ ನಮಃ🙏
[31/08, 4:07 PM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
Day# 4
*✍️ಭಗವಂತನಾದ ಶ್ರೀ ವೇದವ್ಯಾಸ ರೂಪಿ ಪರಮಾತ್ಮನು ತಾನೇ ಸ್ವತಃ ರಚಿಸಿದ ಮಹಾನ್ ಗ್ರಂಥ.*
*ಇದು ದೇವಲೋಕದ ಅಮೃತಕ್ಕಿಂತಲು ಮಿಗಿಲು.*
*ಇದಕ್ಕೆ ಸಮನಾದದು ಯಾವುದು ಇಲ್ಲ.*
*ಸಿಹಿಯುಳ್ಳ ಪಾನೀಯ,ಕುಡಿದಾಗ ಮನಸ್ಸು ಆನಂದ ಗೊಳ್ಳಬಹುದು.*
*ಆದರೆ ಅತಿಯಾಗಿ ಕುಡಿದಾಗ ಅದರಿಂದ ಏನಾದರು ಒಂದು side effect ಆಗಿ ಚೂರು ಆರೋಗ್ಯ ವ್ಯತ್ಯಾಸವನ್ನು ಕಾಣಬಹುದು..ಆದರೆ ಈ ಭಾಗವತ ಅಮೃತ ಎಂಬ ಸಿಹಿಯಾದ ಪಾನೀಯ ಎಷ್ಟು ಬಾರಿಯಾದರು ದಿನಕ್ಕೆ ಪಾನ ಮಾಡಿರಿ.ಇದರಿಂದ ಯಾವುದೇ side effect ಇಲ್ಲ.ಇದರಿಂದ ಲಾಭವೇ ಹೊರತು ನಷ್ಟ ಇಲ್ಲವೇ ಇಲ್ಲ..*
*ಈ ಗ್ರಂಥ ಪಾರಾಯಣ ಫಲ.*👇 
*(1)ಕಾಲ ದೇಶ ಗಳಿಂದ ಮಾಡಿದ ಪಾಪಗಳನ್ನು ಸಹ ಇದು ಭಕ್ತಿಯಿಂದ ಶ್ರವಣ,ಪಠಣ ಮನನ ಮಾಡಿದರೆ ಕಳೆದು ಹಾಕುತ್ತದೆ.*
*ಇದಕ್ಕೆ ಪರಿಕ್ಷೀತ ರಾಜ ಸಾಕ್ಷಿ.*
*(2).ನಮ್ಮ ಮನೆಯಲ್ಲಿ ಹಿಂದೆ ಯಾರಾದರು ಹಿರಿಯರು ಸತ್ತು ಹೋದಾಗ,ಅವರಿಗೆ ಸರಿಯಾದ ರೀತಿಯಲ್ಲಿ ಮೃತಕರ್ಮ ಸಂಸ್ಕಾರ ನಡೆಯದೇ ಹೋದಾಗ,ಅವರು ಪ್ರೇತವಾಗಿ ಉಳಿದರೆ,ಅದರ ನಿವಾರಣೆ ಗೋಸ್ಕರ ವಾಗಿ ಸಹ ಶ್ರೀ ಮದ್ ಭಾಗವತ ಪಾರಾಯಣ,ಶ್ರವಣವನ್ನು ಮಾಡಲು ಹೇಳುತ್ತಾರೆ.*
ಇದಕ್ಕೆ  
*ಇದರಲ್ಲಿ ಬರುವ ಗೋಕರ್ಣ ಹಾಗು ಅವನ ಸಹೋದರನ ನ ಕತೆಯೇ ಸಾಕ್ಷಿ.*
*(3).ಮೋಕ್ಷ ಸಾಧನೆಗಾಗಿ ಈ ಶ್ರೀ ಮದ್ಭಾಗವತ ಶ್ರವಣ.*
*ಇದಕ್ಕೆ ಪರಿಕ್ಷೀತ ರಾಜ ಪ್ರತ್ಯಕ್ಷವಾಗಿ ಉದಾಹರಣೆ.*
*ಶ್ರೀ ಮದ್ ಭಾಗವತ ದಲ್ಲಿ 18,೦೦೦ ಗ್ರಂಥ ಶ್ಲೋಕ ಗಳಿವೆ.*.
*ಶ್ರೀ ಮದ್ ಭಾಗವತವು ಹನ್ನೆರಡು ಸ್ಕಂಧಗಳಿಂದ ಕೂಡಿದೆ.*
*ಪರೀಕ್ಷಿತ ಮಹಾರಾಜ ಹಾಗು ಶುಕ ಮುನಿಗಳನಡುವಿನ ಸಂವಾದ ರೂಪವಾಗಿದೆ.*
*ಪ್ರತಿ ಒಂದು ಸಾವಿರ ಗ್ರಂಥಗಳಿಗು ಒಂದೊಂದು ಭಗವದ್ ರೂಪ ಇದೆ.*
*ಈ ರೀತಿಯಲ್ಲಿ 18,೦೦೦ ಗ್ರಂಥ ಶ್ಲೋಕಗಳಿಗೆ 18 ಭಗವದ್ ರೂಪ ಗಳಿವೆ.*
*ಹನ್ನೆರಡು ಸ್ಕಂಧಗಳಿಗೆ ಹನ್ನೆರಡು ಭಗವಂತನ ರೂಪಗಳು ಇವೆ.*
*ಕೇಶವ,ನಾರಾಯಣ,ಮಾಧವ,ಗೋವಿಂದ,ವಿಷ್ಣು,* *ಮಧುಸೂಧನ,ತ್ರಿವಿಕ್ರಮ, ವಾಮನ,ಶ್ರೀಧರ, ಹೃಷಿಕೇಶ*, *ಪದ್ಮನಾಭ, ಮತ್ತು ದಾಮೋದರ,ಇವೇ ಭಗವಂತನ ಆ ಹನ್ನೆರಡು ರೂಪಗಳು.*.
*ಈ ಶ್ರೀ ಮದ್ಭಾಗವತ ಶ್ರವಣ,ಪಾರಾಯಣದ ಫಲ ಗಂಗಾ ನದಿ ಸ್ನಾನಕ್ಕಿಂತಲು ಮಿಗಿಲು.*
ಗಂಗಾನದಿಯ ಸ್ನಾನ *ಮಿಂದವರ ಪಾಪವನ್ನು ತೊಳೆದರೆ,*
*ಶ್ರೀ ಮದ್ ಭಾಗವತ ಸಂಸಾರದ ಜಿಡ್ಡು ನಾಶಪಡಿಸಿ ನಮಗೆಲ್ಲ ಪಾಪವನ್ನು ಲೇಪನ ವಿಲ್ಲದಂತೆ ಮಾಡುವದು.*.
*ಗಂಗಾನದಿಯನ್ನು ನಮ್ಮ ಅವಶ್ಯಕತೆ ಬೇಕಾದಷ್ಟು ಶೇಖರಣೆ ಮಾಡಲು ಒಂದು ಪಾತ್ರೆ ಬೇಕು.*
ಆದರೆ 
*ಈ ಭಾಗವತಕ್ಕೆ ಸಂಗ್ರಹ ಮಾಡಲು ನಮ್ಮ ತಲೆ ಎನ್ನುವ ಪಾತ್ರೆ ಮಾತ್ರ ಸಾಕು.*
*ಗಂಗಾ ನದಿಯಲ್ಲಿ ಇಡೀ ದೇಹವನ್ನು ಮುಳುಗಿದಾಗ ಮಾತ್ರ ಸ್ನಾನ ಮಾಡಿದ ಫಲ ಬರುತ್ತದೆ.*
ಆದರೆ 
*ನಿತ್ಯದಲ್ಲಿ ಈ ಭಾಗವತ ಇಡೀ ಗ್ರಂಥದ,ಎಲ್ಲಾ ಶ್ಲೋಕಗಳನ್ನು ಪಾರಾಯಣ ಮಾಡಲು ಆಗದಿದ್ದರೆ,ಕೊನೆಗೆ ಒಂದು ಶ್ಲೋಕವಾದರು ಹೇಳುವದು.ಅದು ಸಹ ಆಗದಿದ್ದರೆ*
ಕೊನೆಯಲ್ಲಿ 
*ಶ್ಲೋಕದ ಕಾಲುಭಾಗ ವಾದರು ಸರಿ,ಕಿವಿಗೊಟ್ಟು ಭಕ್ತಿ ಇಂದ ಕೇಳಿದರೆ,ಸಾವಿರ ಗೋದಾನದ ಫಲ ಬರುತ್ತದೆ.*
*ಶ್ರೀಹರಿಯ ಪ್ರೀತಿ ಎಂಬ ಉಡುಗೊರೆ ನಮಗೆ ಸಿಗುತ್ತದೆ.*.
*ಬರಿಯ ಕಾಲುಭಾಗದಷ್ಟು ಶ್ರವಣ ಮಾಡಿದರೆ ನಮಗೆ ಕಾವಲು ಕಾಯುವ, ನಮ್ಮನ್ನು ರಕ್ಷಣೆ ಮಾಡುವ,ನಮ್ಮ ಕುಲವನ್ನು ಉದ್ದಾರ ಮಾಡುವ ಈ ಭಾಗವತಕ್ಕೆ ಎಣೆಯುಂಟೆ??..*
*ಗಂಗಾ ಸ್ನಾನ ಸಂಕಲ್ಪ ಪೂರ್ವಕವಾಗಿ ಮಾಡಿದರೆ ಮಾತ್ರ ಫಲ.*
*ಅದಕ್ಕೆ ಮೋಕ್ಷ ನೀಡಲು ಸಾಧ್ಯವಿಲ್ಲ.*.
*ಆದರೆ ಶ್ರೀ ಮದ್ಭಾಗವತ ಹಾಗಲ್ಲ ನಮಗೆ ಮೋಕ್ಷವನ್ನು ಸಹ ಕೊಡುತ್ತದೆ.*.
*ಶ್ರೀ ಮದ್ ಭಾಗವತ ವನ್ನು ರಚಿಸಿದವರು ಶ್ರೀ ವೇದವ್ಯಾಸರು.*
*ರಚನೆಯನ್ನು ಮಾಡಿದ ಸ್ಥಳ ಶಮ್ಯಾಪ್ರಾಸ*.
*(ಸರಸ್ವತಿ ಮತ್ತು ಅಲಕನಂದಾ(ಗಂಗಾದೇವಿ ಇನ್ನೊಂದು ಹೆಸರು) ನದೀ ಸಂಗಮದ ಸ್ಥಳ.*)
*ಇದನ್ನು ಶ್ರೀವೇದವ್ಯಾಸ ರಿಂದ ಕೇಳಿದವರು ಗಂಗಾಧರ ನಾದ ಶ್ರೀಶುಕ ಮುನಿಗಳು..*.
*ಅವರು ಉಪದೇಶ ಮಾಡಿದ್ದು ಪರೀಕ್ಷಿತ ರಾಜನಿಗೆ ಗಂಗಾನದಿಯ ತಟದಲ್ಲಿ.*
*ಹಾಗಾಗಿ ಪರಮ ಪವಿತ್ರ ವಾದುದು ಈ ಭಾಗವತ ಪುರಾಣ.*.
*ಇದನ್ನು ಯಾರು ಹೇಳುವರೊ,* ಮತ್ತು 
*ಯಾರು ಕೇಳುವರೊ*,
ಮತ್ತು 
*ಯಾರು ಹೇಳಿಸುವರೊ*, *ಈ ಮೂವರನ್ನು ಪಾವನಗೊಳಿಸಿ ಉದ್ದಾರ ಮಾಡುತ್ತದೆ.*
*ಇಂತಹ ಪರಮ ಮಂಗಳಕರವಾದ ಭಾಗವತ ವನ್ನು ವಿಶೇಷವಾಗಿ ಪಾರಾಯಣ , ಮತ್ತು ಶ್ರವಣವನ್ನು ಮಾಡೋಣ.*
*ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಪ್ರಯತ್ನ ಪಡೋಣ.*
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಹಾಳು ಹರಟೆಯಾಡಿ ಮನವ* |
*|ಬೀಳು ಮಾಡಿ ಕೊಳ್ಳಲು ಬೇಡಿ|*
*|ಏಳು ದಿನದ ಕಥೆಯು ಕೇಳಿ|*
*|ಏಳಿರೋ ವೈಕುಂಠಕೆ|*

✍️ಅ.ವಿಜಯವಿಠ್ಠಲ🙏

Post a Comment

Previous Post Next Post