ಪತ್ರ ಕರ್ತ ಮಿತ್ರರು ಗುರುಲಿಂಗ ಸ್ವಾಮಿ ಸ್ಮರಣೆ ಯನ್ನು ಅಂತರಂಗದಲ್ಲಿ

ಬೆಂಗಳೂರು: ಪತ್ರಕರ್ತ ಮಿತ್ರ, ಸದಾ ಹಸನ್ಮುಖಿ..ಮಿತಭಾಷಿ.. ನಿಗರ್ವಿ..ಸ್ಥಿತಪ್ರಜ್ಞ.. ಭಾವಜೀವಿ ಗುರುಲಿಂಗಸ್ವಾಮಿ ನಮ್ಮನ್ನೆಲ್ಲಾ ಅಗಲಿದ್ದಾರೆ.ಮುಖ್ಯಮಂತ್ರಿಗಳ ಮಾದ್ಯಮ ಕಾರ್ಯದರ್ಶಿಯಂಥ ಮಹತ್ವದ ಹಾಗೂ ಆಯಕಟ್ಟಿನ ಹುದ್ದೆಯಲ್ಲಿದ್ದರೂ ಕೊಂಚವು ಸ್ವಭಾವ ಹಾಗೂ ವ್ಯಕ್ತಿತ್ವ ಬದಲಿಸಿಕೊಳ್ಳದೆ ಸದಾ ಎಲ್ಲರೊಂದಿಗೂ ಬೆರೆತು ಬಾಳುತ್ತಿದ್ದ ಗುರುಲಿಂಗಸ್ವಾಮಿ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.ಅವರಿಗೆ 46 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.

ಜಿಮ್ –ವರ್ಕೌಟ್ ಮಾಡುವ ಅಭ್ಯಾಸವನ್ನು ಇತೀಚೆಗೆ ರೂಢಿಸಿಕೊಂಡಿದ್ದ ಗುರುಲಿಂಗಸ್ವಾಮಿ ಎಂದಿನಂತೆ ..ಇಂದು ನಾಗರಬಾವಿಯ ಜಿಮ್ ಗೆ ಹೋಗಿ ವರ್ಕೌಟ್ ಶುರುಮಾಡಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಎದೆ ನೋವು ಕಾಣಿಸಿಕೊಂಡಿದೆ.ಆದರೂ ಸಣ್ಣ ನೋವೆಂದು ನೆಗ್ಲೆಕ್ಟ್ ಮಾಡಿ ವರ್ಕೌಟ್ ಮುಂದುವರೆಸಿದ್ದಾರೆ.ಆದರೆ ಅಸಾಧಾರಣ ನೋವು ಕಾಣಿಸಿಕೊಂಡು ಕುಸಿದುಬಿದ್ದಿದ್ದಾರೆ.

ಜಿಮ್ ಸಿಬ್ಬಂದಿ ತತ್ ಕ್ಷಣಕ್ಕೆ ಅವರನ್ನು ಅಲ್ಲೇ ಇದ್ದ ಯುನಿಟ್ ಲೈಫ್ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ದಿದ್ದಾರೆ.ಆದರೆ ಮಾಗ್ಯಮದ್ಯೆಯೇ ಕೊನೆಯುಸಿರೆಳೆದಿದ್ದಾರೆ.ಇತ್ತೀಚೆಗೆ ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದ ಗುರುಲಿಂಗಸ್ವಾಮಿ ಅವರ ಸಾವಿಗೆ ಒತ್ತಡವೇ ಕಾರಣ ಎನ್ನಲಾಗುತ್ತಿದೆ.

ಮೂಲತಃ ಉತ್ತರ ಕರ್ನಾಟಕದವರಾದ ಗುರುಲಿಂಗಸ್ವಾಮಿ ಅನೇಕ ಪತ್ರಿಕೆ ಹಾಗು ನ್ಯೂಸ್ ಚಾನೆಲ್ ಗಳಲ್ಲಿ ಕೆಲಸ ಮಾಡಿದ ಅಪಾರ ಅನುಭವಿ.ಆದರೂ ಗರ್ವವನ್ನು ತಮ್ಮ ಬಳಿ ಸುಳಿಯಲಿಕ್ಕೂ ಬಿಡದಂಥ ತಮ್ಮನ್ನು ಕಾಪಾಡಿಕೊಂಡಿದ್ದರಿಂದಲೇ ಗುರುಲಿಂಗಸ್ವಾಮಿ ಎಂದ್ರೆ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದರು.ಮಾದ್ಯಮಗಳು ಹಾಗೂ ಸಿಎಂ ನಡುವೆ ಬಹುದೊಡ್ಡ ಅಂತರವನ್ನು ಕಾಯ್ದುಕೊಳ್ಳುವಂತೆ ಮಾಡುತ್ತಿದ್ದ ಕೆಲವು ಮಾದ್ಯಮ ಕಾರ್ಯದರ್ಶಿಗಳಿಗೆ ಅಪವಾದದಂತಿದ್ದ ಗುರುಲಿಂಗಸ್ವಾಮಿ, ಮುಖ್ಯಮಂತ್ರಿ ಗಳ ಕಚೇರಿಯನ್ನು ಯಾರೇ ಹುಡುಕಿಕೊಂಡು ಬಂದ್ರೂ ಅವರೊಂದಿಗೆ ಸಂಪರ್ಕ ಕಲ್ಪಿಸಿಕೊಡುವ ಮೂಲಕ ಜನಾನುರಾಗಿಯಾಗಿದ್ದರು.


ಕೆಲವು ದಿನಗಳ ಹಿಂದೆ ನಡೆದಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾದ್ಯಮಸ್ನೇಹಿತರೊಂದಿಗೆ ಲವಲವಿಕೆಯಲ್ಲಿ ಪಾಲ್ಗೊಂಡಿದ್ದ ಗುರುಲಿಂಗಸ್ವಾಮಿ..
ಕೆಲವು ದಿನಗಳ ಹಿಂದೆ ನಡೆದಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾದ್ಯಮಸ್ನೇಹಿತರೊಂದಿಗೆ ಲವಲವಿಕೆಯಲ್ಲಿ ಪಾಲ್ಗೊಂಡಿದ್ದ ಗುರುಲಿಂಗಸ್ವಾಮಿ..
ಬಸವರಾಜಬೊಮ್ಮಾಯಿ ಅವರ ಅತ್ಯಾಪ್ತ ಬಳಗದಲ್ಲಿದ್ದುದ್ದರಿಂದಲೇ ಗುರುಲಿಂಗಸ್ವಾಮಿ ಅವರಿಗೆ ಅನಾಯಾಸವಾಗಿ ಮುಖ್ಯಮಂತ್ರಿಗಳ ಮಾದ್ಯಮ ಕಾರ್ಯದರ್ಶಿ ಸ್ಥಾನ ಒಲಿದಿತ್ತು.ಆದರೆ ಆ ಸಮಯದಲ್ಲಿ ಅವರ ಕಾಲೆಳೆಯುವ ಸಾಕಷ್ಟು ಪ್ರಯತ್ನಗಳು ಕೂಡ ಮಾದ್ಯಮದಲ್ಲಿರುವ ಆಕಾಂಕ್ಷಿಗಳಿಂದಲೇ ನಡೆದಿತ್ತು.ಅವರ ಜತೆ ಆತ್ಮೀಯವಾಗಿ ಇದ್ದವರೇ ಸಿಎಂ ಕಿವಿ ಚುಚ್ಚುವ ಕೆಲಸ ಮಾಡಿದ್ದರೆನ್ನುವ ಮಾತುಗಳಿವೆ.ಆದರೆ ಗುರುಲಿಂಗಸ್ವಾಮಿ ಅವರ ಸ್ವಭಾವ-ವ್ಯಕ್ತಿತ್ವದ ಬಗ್ಗೆ ಸ್ಪಷ್ಗತೆ ಹಾಗೂ ಮಾಹಿತಿ ಇದ್ದುದ್ದರಿಂದ ಯಾರ ಚಾಡಿ ಮಾತಿಗು ಕಿವಿಕೊಡದೆ ಮಾದ್ಯಮ ಕಾರ್ಯದರ್ಶಿ ಸ್ಥಾನ ನೀಡಿದ್ದರು.

ತಮಗೆ ಕೊಟ್ಟ ಹುದ್ದೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಗುರುಲಿಂಗಸ್ವಾಮಿ ಅವರು ಸಿಎಂಗೆ ನಿಷ್ಟರಾಗಿದ್ದರು.ಅಧಿಕಾರ ಸಿಕ್ಕಾಕ್ಷಣ ದುಡ್ಡಿನ ಆಸೆಗೆ ಕೈ-ಹೆಸರು ಹಾಳುಮಾಡಿಕೊಳ್ಳುವವರ ನಡುವೆ ವಿಭಿನ್ನವಾಗಿ ತಮ್ಮನ್ನು ಗುರುತಿಸಿಕೊಂಡಿದ್ದರು..ತುಂಬಾ ಸರಳವಾಗಿ ಬಾಳುತ್ತಿದ್ದರು ಸಹ..46 ವರ್ಷದಲ್ಲಿ ಅವರು ನಮ್ಮನ್ನೆಲ್ಲಾ ಅಗಲಿರುವುದು ಪತ್ರಿಕೋದ್ಯಮಕ್ಕೆ ನಿಜಕ್ಕೂ ತುಂಬಲಾರದ ನಷ್ಟ..ಅವರ ನಿಧನಕ್ಕೆ ಸಿಎಂ ಆದಿಯಾಗಿ ಸಚಿವ ಸಂಪುಟ ಸಹದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ.ಮುದ್ರಣ-ವಿದ್ಯುನ್ಮಾನ ಮಾದ್ಯಮಗಳ ಸಂಘಟನೆಗಳು ಶೋಕ ವ್ಯಕ್ತಪಡಿಸಿವೆ.ಗುರುಲಿಂಗಸ್ವಾಮಿ ಅವರ ನಿಧನಕ್ಕೆ ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ತೀವ್ರ ಸಂತಾಪ ಸೂಚಿಸುತ್ತದೆ.

Post a Comment

Previous Post Next Post