ವಿವಿಧ ರೀತಿಯ ಜಿಲ್ಲಾ ಸುದ್ದಿ ಗಳು... ನಿಮಗಾಗಿ

[26/08, 7:34 PM] pannangaraj1: ಆ.28ರಂದು ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಕೊಡಗು ಪ್ರವೇಶ
ಮಡಿಕೇರಿ: ಬ್ರಿಟಿಷರ ವಿರುದ್ಧ ರಣ ಕಹಳೆ ಮೊಳಗಿಸಿದ್ದ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸುಳ್ಯದ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆಯನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಪ್ರತಿಷ್ಠಾಪಿಸಲಾಗುತ್ತಿದ್ದು,  ಆಂಧ್ರಪ್ರದೇಶದ ವಿಜಯವಾಡದಲ್ಲಿ ತಯಾರಾಗಿರುವ 11 ಅಡಿ ಎತ್ತರದ ಕಂಚಿನ ಪ್ರತಿಮೆ ಆ.28ರಂದು ಮಡಿಕೇರಿ ತಲುಪಲಿದೆ..
ಆ.27 ರಂದು ಮಂಡ್ಯದ ಆದಿಚುಂಚನಗಿರಿ ಕ್ಷೇತ್ರಕ್ಕೆ ತಲುಪಲಿರುವ ಪ್ರತಿಮೆಯ ಯಾತ್ರೆಗೆ ಆ.28 ರಂದು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಲಿದ್ದು, ಅಂದು ಮಧ್ಯಾಹ್ನ 2.30 ಗಂಟೆಗೆ ಪ್ರತಿಮೆ ಕೊಡಗು ಪ್ರವೇಶಿಸಲಿದೆ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ತಿಳಿಸಿದ್ದಾರೆ.
ಭಾನುವಾರ ಶಿರಂಗಾಲದ ಮೂಲಕ ಕೊಡಗು ಜಿಲ್ಲೆಗೆ ಪ್ರತಿಮೆ ಪ್ರವೇಶ ಮಾಡಲಿದ್ದು, ಮಧ್ಯಾಹ್ನ 3 ಗಂಟೆಗೆ ಕುಶಾಲನಗರ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುವುದು. ನಂತರ ಕಾರು ನಿಲ್ದಾಣದಲ್ಲಿ ಪುಷ್ಪ ನಮನದ ಮೂಲಕ ಗೌರವ ಅರ್ಪಿಸಲಾಗುವುದು. ಪ್ರತಿಮೆ ಹೊತ್ತ ವಾಹನದ ಮುಂಭಾಗದಲ್ಲಿ ಕೆದಂಬಾಡಿ ರಾಮಯ್ಯಗೌಡರ ಅವರ ಭಾವಚಿತ್ರದೊಂದಿಗೆ ಅಲಂಕೃತ ಬೆಳ್ಳಿರಥ ಇರಲಿದೆ. ಗುಡ್ಡೆಹೊಸೂರು, ಸುಂಟಿಕೊಪ್ಪದ ಮೂಲಕ ಸಂಜೆ 4.30 ಗಂಟೆಗೆ ಸುದರ್ಶನ ವೃತ್ತಕ್ಕೆ ಬರುವ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಗುವುದು.
ಕೆದಂಬಾಡಿ ರಾಮಯ್ಯ ಗೌಡರ ಸಹವರ್ತಿ ಸ್ವಾತಂತ್ರ‍್ಯ ಹೋರಾಟಗಾರ ಅಪ್ಪಯ್ಯಗೌಡರ ಪ್ರತಿಮೆ ಬಳಿ ನಾಡಿನ ಹಿರಿಯರು, ಜನಪ್ರತಿನಿಧಿಗಳು, ಕೆದಂಬಾಡಿ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಗೌರವ ಸಲ್ಲಿಸಲಿದ್ದಾರೆ. ನಂತರ ವಾಹನ ಜಾಥಾದೊಂದಿಗೆ ತಿಮ್ಮಯ್ಯ ವೃತ್ತ, ಬಸ್ ನಿಲ್ದಾಣ, ಗುಡ್ಡೆಮನೆ ಅಪ್ಪಯ್ಯ ಗೌಡ ರಸ್ತೆಯಲ್ಲಿ ಸಾಗಿ ಕೊಡಗು ಗೌಡ ಸಮಾಜದ ಆವರಣದಲ್ಲಿ ರಥ ತಂಗಲಿದೆ.
ಆ.29 ರಂದು ಬೆಳಗ್ಗೆ 7 ಗಂಟೆಗೆ ನಗರದ ಕೋಟೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ರಥವು ಸುಮಾರು 300ಕ್ಕೂ ಹೆಚ್ಚು ವಾಹನಗಳ ಜಾಥಾದೊಂದಿಗೆ ಸುಳ್ಯ ತಲುಪಲಿದೆ.ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆ ಹುಟ್ಟೂರು ಸುಳ್ಯಕ್ಕೆ ಆ.29ರಂದು ತಲುಪಲಿದ್ದು, ಸುಳ್ಯದಿಂದ ಮಂಗಳೂರಿಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ ಎಂದು ಸೋಮಣ್ಣ ವಿವರಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ದುಷ್ಟ ಆಡಳಿತದ ವಿರುದ್ಧ ಸಮರ ಸಾರಿ ಕೊಡಗು ಹಾಗೂ ಮಂಗಳೂರು ಪ್ರಾಂತ್ಯದಿಂದ ಬ್ರಿಟೀಷ್ ಸೈನ್ಯವನ್ನು ಹೊಡೆದೋಡಿಸಿ ಸ್ವಾತಂತ್ರ‍್ಯದ ಧ್ವಜವನ್ನು ಹಾರಿಸಿ 13 ದಿವಸಗಳ ಕಾಲ ಆಡಳಿತ ನಡೆಸಿದ ಯೋಧ ಪಡೆಯ ಮುಂಚೂಣಿ ನಾಯಕರಲ್ಲಿ ಹುತಾತ್ಮರಾದ ಗುಡ್ಡೆಮನೆ ಅಪ್ಪಯ್ಯ ಗೌಡ ಹಾಗೂ ಕೆದಂಬಾಡಿ ರಾಮಯ್ಯ ಗೌಡರು ಪ್ರಮುಖರು.
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೇ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿದ, ಇತಿಹಾಸದ ಪುಟಗಳಲ್ಲಿ ಅಷ್ಟಾಗಿ ಬೆಳಕು ಚೆಲ್ಲದ ಮಹಾನ್ ನಾಯಕನ ಸಾಧನೆಗೆ ಗೌರವ ನೀಡುವ ಕಾಲ ಸನ್ನಿಹಿತವಾಗುತ್ತಿದೆ. ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮ ಆರಂಭವಾಗಿದ್ದು 1857 ರಲ್ಲಿ ಎಂದು ಉಲ್ಲೇಖಿಸಲಾಗಿದ್ದರೂ ಅದಕ್ಕೂ 20 ವರ್ಷ ಮೊದಲೇ ಬ್ರಿಟಿಷರ ದಾಸ್ಯದ ಪದ್ಧತಿಯನ್ನು ವಿರೋಧಿಸಿ ಹೋರಾಟ ನಡೆದಿದೆ ಎಂದು ಅವರು ಸ್ಮರಿಸಿದ್ದಾಎಡ.
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯು ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಬಾವುಟಗುಡ್ಡೆಯಲ್ಲಿ ಸ್ಥಾಪಿಸಲು ಅನುದಾನ ಮಂಜೂರು ಮಾಡಿದೆ. ಈಗಾಗಲೇ ಪ್ರತಿಮೆ ಪ್ರತಿಷ್ಠಾಪನೆಯ ಸ್ಥಳದ ಅಂಗಣ ಮತ್ತು ಅಡಿಪಾಯದ ಕಾಮಗಾರಿ ಪೂರ್ಣಗೊಂಡಿದೆ.
ಅಕ್ಟೋಬರ್ ತಿಂಗಳಿನಲ್ಲಿ  ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮಿಜಿಗಳ ನೇತೃತ್ವದಲ್ಲಿ ಈ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು ಹಾಗೂ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
[26/08, 7:34 PM] pannangaraj1: ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಕಾಮಗಾರಿ: ಸೂಕ್ತ ತನಿಖೆಗೆ ಶಾಸಕ ಅಪ್ಪಚ್ಚುರಂಜನ್ ಒತ್ತಾಯ
ಮಡಿಕೇರಿ: ಮಡಿಕೇರಿಯ ಜಿಲ್ಲಾಧಿಕಾರಿಯವರ ಕಚೇರಿಯ ತಡೆಗೋಡೆ ನಿರ್ಮಾಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಸಂಬಂಧಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವುದರೊಂದಿಗೆ ಇದಕ್ಕೆ ಕಾರಣರಾದ ಇಂಜಿನಿಯರ್ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಒತ್ತಾಯಿಸಿದ್ದಾರೆ.
ಈ ಸಂಬಂಧವಾಗಿ ಲೋಕೋಪಯೋಗಿ ಇಲಾಖೆಯ ಗುಣ ನಿಯಂತ್ರಣ ವಿಭಾಗದ  ಮುಖ್ಯ ಇಂಜಿನಿಯರ್ ಹಾಗೂ ಇಲಾಖೆಯ ಸರಕಾರದ ಕಾರ್ಯದರ್ಶಿಗಳಿಗೆ ಅವರು ಪತ್ರ ಬರೆದಿದ್ದಾರೆ.
ಮಡಿಕೇರಿಯ ಜಿಲ್ಲಾಧಿಕಾರಿಯವರ ಕಚೇರಿಯ ಆವರಣದಲ್ಲಿ ರಸ್ತೆಗೆ ಹೊಂದಿಕೊಂಡಂತೆ 7 ಕೋಟಿ ರೂ.ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿದ್ದು, ಈ ತಡೆಗೋಡೆ ನಿರ್ಮಿಸುವ ಸಂದರ್ಭದಲ್ಲಿ ತಾನು ಖುದ್ದು ಪರಿಶೀಲಿಸಿ ಕೈಗೊಳ್ಳುವ ಕಾಮಗಾರಿಯು ಕೊಡಗು ಜಿಲ್ಲೆಗೆ ಹೊಂದಿಕೊಳ್ಳದೇ ಇರುವುದರಿಂದ ತಡೆಗೋಡೆಯನ್ನು ತಳಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ತಳಪಾಯ ನಿರ್ಮಿಸಿ ಮೇಲ್ಭಾಗದವರೆಗೆ ಕಾಂಕ್ರಿಟ್ ಗೋಡೆ ನಿರ್ಮಿಸುವಂತೆ ಸಲಹೆ ನೀಡಿದ್ದೆ. ಈ ಸಂದರ್ಭದಲ್ಲಿ ಈ ಕಾಮಗಾರಿಯನ್ನು ದೆಹಲಿಯಿಂದ ಬಂದಿರುವ  ಇಂಜಿನಿಯರ್  ಅವರ ನಿರ್ದೇಶನದಂತೆ  ನಿರ್ಮಿಸುತ್ತಿರುವುದಾಗಿ ಇಲ್ಲಿನ ಇಂಜಿನಿಯರ್ ಮತ್ತು ಗುತ್ತಿಗೆದಾರರು ತಿಳಿಸಿದ್ದು, ನನ್ನ ಸಲಹೆಯನ್ನು ಪರಿಗಣಿಸಿರುವುದಿಲ್ಲ. ಆದರೆ ನಿರ್ಮಿಸಿದ ತಡೆಗೋಡೆಯು ಇತ್ತೀಚೆಗೆ ಸುರಿದ ಮಳೆಯಿಂದ ಬೀಳುವ ಹಂತಕ್ಕೆ ತಲುಪಿದ್ದು, ಈ ಸಂಬಂಧ ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ತೊಂದರೆಯಾಗದಂತೆ ರಾಷ್ಟ್ರೀಯ ಹೆದ್ದಾರಿಯನ್ನೇ ಬಂದ್ ಮಾಡುವ ಪರಿಸ್ಥಿತಿ ಉಂಟಾಗಿತ್ತು ಎಂದು ಶಾಸಕರು ಗಮನಸೆಳೆದಿದ್ದಾರೆ.
ತಡೆಗೋಡೆಗೆ 7 ಕೋಟಿ ರೂ. ವೆಚ್ಚ ಮಾಡಿದ್ದರೂ ಸಹ ಕಾಮಗಾರಿ ಗುಣಮಟ್ಟದಿಂದ ಕೂಡದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ‌. ಯಾವುದೇ ಕಾಮಗಾರಿಯನ್ನು ನಿರ್ಮಿಸುವ ಮೊದಲು ಅಲ್ಲಿನ ಹವಾಗುಣಕ್ಕೆ ಹೊಂದಿಕೊಂಡಂತೆ ಕಾಮಗಾರಿ ಕೈಗೊಳ್ಳಬೇಕೇ ವಿನಹ ವೈಜ್ಞಾನಿಕವೆಂದು ಇಲ್ಲಿನ ಹವಾಗುಣಕ್ಕೆ ಹೊಂದಿಕೊಳ್ಳದಂತೆ ಮಾಡದಿದ್ದಲ್ಲಿ ಯಾವುದೇ ಕಾಮಗಾರಿಯನ್ನು ಗುಣಮಟ್ಟದಲ್ಲಿ ನಿರ್ಮಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ತಾವುಗಳು ಈ ಬಗ್ಗೆ ಖುದ್ದು ಪರಿಶೀಲಿಸಿ ಸಂಬಂಧಿಸಿದ ಕಾಮಗಾರಿಯನ್ನು ಕೈಗೊಂಡ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವುದಲ್ಲದೆ, ಸಂಬಂಧಿಸಿದ ಇಂಜಿನಿಯರ್‌ ವಿರುದ್ಣದವೂ  ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಾಸಕ ಅಪ್ಪಚ್ಚುರಂಜನ್ ಒತ್ತಾಯಿಸಿದ್ದಾರೆ.
[26/08, 7:34 PM] pannangaraj1: ಕೊಡಗಿನವರಿಗೆ ಬೇಕಿರುವುದು ರಾಜಕೀಯ ಗೊಂದಲದ-ಹಿಂಸೆಯ ಕೊಡಗು ಅಲ್ಲ: ಶಿವಕುಮಾರ್ ನಾಣಯ್ಯ
ಮಡಿಕೇರಿ: ಕೊಡಗಿನವರಿಗೆ ಬೇಕಿರುವದು ಕಾವೇರಿ ತಾಯಿ ಭೂಮಿಯೇ ಹೊರತು ರಾಜಕೀಯ ರಣರಂಗದ ಕೊಡಗು ಅಲ್ಲ ಎಂದು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಾರಂಪರಿಕತೆ, ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಮತ್ತು  ತಳಹದಿಯ ಮೇಲೆ ಪರಸ್ಪರ ನೆಮ್ಮದಿಯ ಮತ್ತು ಶಾಂತಿಯಿಂದ ಇದ್ದ ಕೊಡಗು ಜಿಲ್ಲೆಯನ್ನು ಕಾಂಗ್ರೆಸ್ ಪಕ್ಷ ವ್ಯವಸ್ಥಿತವಾಗಿ ವಿಭಜಿಸುವ ಮತ್ತು ಶಾಂತಿ ಕದಡುವ ಪ್ರಯತ್ನ ನಡೆಸುತ್ತಿದೆ.  ಕೊಡಗಿನ ಜನತೆ ಜಾಗೃತರಾಗದಿದ್ದರೆ ವೈಭವದ ಕೊಡಗನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಕೊಡಗು ಜಿಲ್ಲೆಗೆ ಆಗಮಿಸಿದ ಬಳಿಕ ತಲೆದೋರಿದ ಸಾಮಾಜಿಕ ವೈಪರೀತ್ಯಕ್ಕೆ ಸ್ವತಃ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷವೇ ಕಾರಣ ಎಂದು  ಅವರು ಆರೋಪಿಸಿದ್ದಾರೆ.
ರಣರಂಗ ಮಾಡಲು ಹೊಂಚು:ಭಾರತೀಯ ಜನತಾ ಪಕ್ಷದ ವಿರುದ್ಧ ಮತ್ತು ಕೊಡಗಿನ ದಕ್ಷ ಪೊಲೀಸ್ ವ್ಯವಸ್ಥೆ ಹಾಗೂ ನಿಷ್ಟ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲಚೀರ ಅಯ್ಯಪ್ಪ ಅವರನ್ನು ವರ್ಗಾಯಿಸಲು ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಗೆ ನೆರೆಯ ಕೇರಳ ಹಾಗೂ  ಇತರ ಕಡೆಗಳಿಂದ ಮತೀಯ ಉಗ್ರ ಸಂಘಟನೆಗಳು ಪಾಲ್ಗೊಳ್ಳಲು ಮತ್ತು ಕೊಡಗನ್ನು ರಣರಂಗ ಮಾಡಲು ಹೊಂಚು ಹಾಕಿದ್ದವು ಎಂಬ ಪೊಲೀಸ್ ಗುಪ್ತಚರ ಮಾಹಿತಿ ಹೊರಬಿದ್ದ ತಕ್ಷಣ ಪ್ರಕೃತಿ ರಮಣೀಯ ನೈಜ ಕೊಡಗು ಮತ್ತು ನೆಮ್ಮದಿ, ಸೌಹಾರ್ದತೆಯಿಂದಿದ್ದ ಕೊಡಗಿನ ಜನತೆ ಬೆಚ್ಚಿ ಬೀಳುವಂತಾಗಿದೆ ಎಂದು ಶಿವಕುಮಾರ್ ನಾಣಯ್ಯ ವಿವರಿಸಿದ್ದಾರೆ..
ಕೊಡಗಿಗೆ ಬೇಡವಾದ ಮತಾಂಧ ಕ್ರೂರಿ ಟಿಪ್ಪು ಜಯಂತಿಯನ್ನು ಕೊಡಗಿನ ಜನತೆ ಮೇಲೆ ಅನಗತ್ಯವಾಗಿ ಹೇರಿ ಕೇರಳದ ಮತಾಂಧರನ್ನು ಟಿಪ್ಪು ಜಯಂತಿಗೆ ಅಹ್ವಾನಿಸಿ ಅಮಾಯಕರನ್ನು ಆಹುತಿ ತೆಗೆದುಕೊಂಡ ಕಾಂಗ್ರೆಸ್ ಇನ್ನಷ್ಟು ಬಲಿಗಾಗಿ ಕಾಯುತ್ತಿದೆ. ಕಾಂಗ್ರೆಸ್ ಪಕ್ಷ ಕೇರಳದ ಮತೀಯ ಸಂಘಟನೆಗಳಿಗೆ ಕೊಡಗಿನಲ್ಲಿ ಆಶ್ರಯ ನೀಡಲು ಮುಂದಾಗಿದೆ ಎಂದರೆ ಅದು ಕೊಡಗಿನ ಮೂಲ ತಳಹದಿಯನ್ನೇ ನಾಶ ಮಾಡಲು ಹೂಡಿರುವ ಹೊಂಚು ಎಂದು ಕೊಡಗಿನ ಮೂಲ ನಿವಾಸಿಗಳು, ಬೆಳೆಗಾರರು, ರೈತರು, ಕೃಷಿ ಕಾರ್ಮಿಕರು ಮನಗಾಣಬೇಕಾಗಿರುವದು ಅಗತ್ಯವಾಗಿದೆ ಎಂದೂ ಅವರು‌ ಹೇಳಿದ್ದಾರೆ.
ಕೊಡಗಿನ ಜನತೆ ರಾಷ್ಟ್ರಪ್ರೇಮಿಗಳು, ದೇಶ ಸೇವೆಗೆ ಮನೆ, ಸುಖ ಜೀವನ ತ್ಯಾಗ ಮಾಡಿ ಸೇನೆಗೆ ಹಾಗೂ ದೇಶ ಕಟ್ಟುವ ಕೆಲಸಕ್ಕೆ ಹೋದವರು. ಕೊಡಗಿನ ಜನತೆ ಎಂದಿದ್ದರೂ ನೈಜ ಕೊಡಗು, ಪ್ರಾಕೃತಿಕ ಕೊಡಗನ್ನು ಬಯಸುವವರು.  ಕೊಡವರು, ಕ್ರೈಸ್ತರು, ನಾಯರ್'ಗಳು ಮುಂತಾದ ಸಮುದಾಯದ ಹೆಂಗಸರು, ಹೆಣ್ಣು ಮಕ್ಕಳನ್ನು ,ಕುತಂತ್ರದಿಂದ ಅಮಾನುಷವಾಗಿ ಹತ್ಯೆ ಮಾಡಿದ ಮತಾಂಧ, ಕ್ರೂರಿ ಟಿಪ್ಪು ಈ ದೇಶದ ಮೊಟ್ಟ ಮೊದಲ ಭಯೋತ್ಪಾದಕ. ಅಂತಹ ಟಿಪ್ಪುವನ್ನು ಸಿದ್ದರಾಮಯ್ಯ ಹಾಗೂ ಅವರ ಕಾಂಗ್ರೆಸ್ ವೈಭವೀಕರಿಸಿದಾಗ, ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್'ರನ್ನು  ಸಿದ್ದರಾಮಯ್ಯ ಅವಮಾನ,ಅವಹೇಳನ ಮಾಡಿದಾಗ  ಸಹಜವಾಗಿ ಸ್ವಾರ್ಥ, ಅಧಿಕಾರದ ವಾಂಛೆಗೆ ಮುಗಿಬೀಳದ ಕೊಡಗು ಮೂಲ ನಿವಾಸಿಗಳು ವಿರೋಧ ವ್ಯಕ್ತಪಡಿಸಿ ಸಿದ್ದರಾಮಯ್ಯನವರಿಗೆ ಘೆರಾವ್ ಹಾಕಿದ್ದಾರೆ. ಆದರೆ ಅಂತಹ ಕೊಡಗನ್ನು ಜಾತಿ, ಧರ್ಮದ ಹೆಸರಿನಲ್ಲಿ  ವಿಂಗಡಿಸಲು  ಆಸ್ಪದ ಕೊಡುವಷ್ಟು ಕೊಡಗಿನ ಜನತೆ  ಮೂರ್ಖರಲ್ಲ ಎಂದೂ ಶಿವಕುಮಾರ್ ನಾಣಯ್ಯ ತಿಳಿಸಿದ್ದಾರೆ.
ಸಿದ್ದರಾಮಯ್ಯನವರ ಇನ್ನೊಂದು ಚಾಮುಂಡೇಶ್ವರಿ ಕ್ಷೇತ್ರವನ್ನು, ಜಮೀರ್ ಅಹಮದ್'ನ ಚಾಮರಾಜಪೇಟೆಯನ್ನು ಸೃಷ್ಟಿಸಲು ಸಾಧ್ಯವಿದೆ ಆದರೆ ದಕ್ಷಿಣ ಕಾಶ್ಮೀರ, ಭಾರತದ ಸ್ವಿಜರ್ಲ್ಯಾಂಡ್  ಎಂಬ ವರ್ಣಾತೀತ ಉಪಮೆಗಳಿಗಿಂತಲೂ ದಕ್ಷಿಣ ಕರ್ನಾಟಕ, ತಮಿಳುನಾಡಿಗೆ ನೀರು  ಮಾತ್ರವಲ್ಲ ಪವಿತ್ರ ತೀರ್ಥ ಸ್ವರೂಪಿಣಿಯ   ಕೊಡಗನ್ನು ಸೃಷ್ಟಿ ಮಾಡಲು ಯಾರಿಂದಲು ಸಾಧ್ಯವಿಲ್ಲ. ದೇಶದ ಜನತೆಗೆ ಬೇಕಿರುವದು ನೈಜ ಕೊಡಗು, ಪ್ರಾಕೃತಿಕ ಕೊಡಗು, ಸಾಂಸ್ಕೃತಿಕ ಕೊಡಗು ಹೊರತು ಕಲುಷಿತ ಕೊಡಗು,ರಾಜಕೀಯ ಗೊಂದಲದ ಕೊಡಗು,ಹಿಂಸೆಯ ಕೊಡಗು ಅಲ್ಲ ಎಂದೂ ತೇಲಪಂಡ ಶಿವಕುಮಾರ್ ನಾಣಯ್ಯ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
[26/08, 7:34 PM] pannangaraj1: ಶೀಘ್ರವೇ ಚಿತ್ತಾಪುರದ ಕಡೆ ನಮ್ಮ ನಡೆ: ವಾಣಿಶ್ರೀ

ಕೊಪ್ಪಳ: ಪ್ರಿಯಾಂಕ್ ಖರ್ಗೆ ಹೇಳಿಕೆ ಖಂಡಿಸಿ ಚಿತ್ತಾಪುರದ ಕಡೆ ನಮ್ಮ ನಡೆ ಘೋಷವಾಕ್ಯದೊಂದಿಗೆ ಚಿತ್ತಾಪುರದಲ್ಲಿ ಶೀಘ್ರವೇ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವಾಣಿಶ್ರೀ ಹಿರೇಮಠ ಹೇಳಿದರು.
ನಗರದ ಮೀಡಿಯಾ ಕ್ಲಬ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳಬೇಕು. ಚಿತ್ತಾಪುರದ ಕಡೆ ನಮ್ಮ ನಡೆ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಲು ಇನ್ನು ದಿನಾಂಕ ನಿಗದಿ ಪಡಿಸಿಲ್ಲ. ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷರು ಇನ್ನರೆಡು ದಿನದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಪ್ರತಿಭಟನೆ ಗೆ ಜಿಲ್ಲಾಕೇಂದ್ರದಿಂದ 30 ಮಹಿಳೆಯರು ಭಾಗವಹಿಸಲಿದ್ದಾರೆ ಎಂದರು.
ಮಹಿಳಾ ಮೋರ್ಚಾದ ಜಿಲ್ಲಾ ಸಂಚಾಲಕಿ ಸುನಂದ ಹಂಚಿನಾಳ, ಪ್ರಧಾನ ಕಾರ್ಯದರ್ಶಿ ಗೀತಾ, ಖಜಾಂಚಿ ಕೀರ್ತಿ, ರಾಜ್ಯ ಕಾರ್ಯಕಾರಣಿ ಸದಸ್ಯೆ ಶೋಭಾರಾಣಿ,  ಸೇರಿ ಮತ್ತಿತರರಿದ್ದರು.
[26/08, 7:34 PM] pannangaraj1: ವಿಜಯಪುರ / ಮನೆಗೆ ನುಗ್ಗಿ ದುಷ್ಕರ್ಮಿಗಳಿಂದ ಗೃಹಿಣಿ ಬರ್ಬರ ಹತ್ಯೆ

ದಿಗಂತ ವರದಿ ವಿಜಯಪುರ: ಮನೆಗೆ ನುಗ್ಗಿದ ದುಷ್ಕರ್ಮಿಗಳು ಗೃಹಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಹಲಗುಣಕಿ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಪಲ್ಲವಿ ವಠಾರ್ (21) ಹತ್ಯೆಯಾಗಿರುವ ಮಹಿಳೆ.

ದುಷ್ಕರ್ಮಿಗಳು ಏಕಾಏಕಿ ಮನೆಗೆ ನುಗ್ಗಿ ಆಯುಧದಿಂದ ಮಹಿಳೆಯ ಹತ್ಯೆಗೈದು ಪರಾರಿಯಾಗಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
[26/08, 7:34 PM] pannangaraj1: ಪ್ರಿಯಾಂಕ ಖರ್ಗೆ ಹೇಳಿಕೆಗೆ ಕೊಡಗು ಬಿಜೆಪಿ ಮಹಿಳಾ ಮೋರ್ಚಾ ಖಂಡನೆ
ಮಡಿಕೇರಿ: ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಅವರು ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡಗು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಅನಿತಾ ಪೂವಯ್ಯ ಹಾಗೂ ಬಿ.ಎನ್.ಭುವನೇಶ್ವರಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರುಗಳು, ಉದ್ಯೋಗದ ವಿಚಾರದಲ್ಲಿ ಸರ್ಕಾರವನ್ನು ಟೀಕಿಸುವ ನೆಪದಲ್ಲಿ ಕಾಂಗ್ರೆಸ್ ಶಾಸಕರು, ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದು ರಾಜ್ಯದ ಎಲ್ಲಾ ಮಹಿಳಾ ಸಮೂಹಕ್ಕೆ ಮಾಡಿದ ಅಪಮಾನವಾಗಿದೆ. ಇವರ ಹೇಳಿಕೆ ಕಾಂಗ್ರೆಸ್ ಸಂಸ್ಕೃತಿಯನ್ನು ಪ್ರತಿಬಿಂಬಿಸಿದೆ ಎಂದು ಆರೋಪಿಸಿದ್ದಾರೆ.
ಪ್ರಿಯಾಂಗ ಖರ್ಗೆ ಅವರು ತಾವು ನೀಡಿದ ಹೇಳಿಕೆಯನ್ನು ಹಿಂದಕ್ಕೆ ಪಡೆದು ಮಹಿಳೆಯರ ಕ್ಷಮೆ ಕೇಳಬೇಕು ಮತ್ತು ಕಾಂಗ್ರೆಸ್ ಪಕ್ಷ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಶರೀನ್ ಸುಬ್ಬಯ್ಯ ಒತ್ತಾಯಿಸಿದ್ದಾರೆ.
[26/08, 7:34 PM] pannangaraj1: ಹೆತ್ತವ್ವಗೆ ಬೇಡವಾದ ಹಸುಗೂಸು:ಕಾಫಿ ತೋಟದೊಳಗೆ ಪತ್ತೆ
ಸೋಮವಾರಪೇಟೆ: ಹೆಣ್ಣಿಗೆ ತಾಯ್ತನ ದೈವ ಕೊಟ್ಟ ಮಹಾನ್ ವರ. ಒಂಭತ್ತು ತಿಂಗಳು ಹೊತ್ತು, ಹೆತ್ತು ಸಂತೃಪ್ತಿ ಪಡೆಯುವ ಹೆಣ್ಣು ಜೀವ, ಎಲ್ಲೋ ಒಮ್ಮೊಮ್ಮೆ ತನ್ನಿಚ್ಛೆಯೋ, ಅಥವಾ ಬಲಾತ್ಕಾರಕ್ಕೋ ಗರ್ಭಧರಿಸಿ,  ಜನ್ಮ ನೀಡಿದ ನಂತರ  ತನ್ನ ಕರುಳ ಕುಡಿಯನ್ನೇ ಎಸೆಯುವ, ಕೊಲ್ಲುವ ಮೂಲಕ ತನ್ನ ಕಠೋರ ಹೃದಯ ತೋರಿಸಿಬಿಡುತ್ತದೆ.
ಅಂತಹ ಘಟನೆಯೊಂದು ಸೋಮವಾರಪೇಟೆಯ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ.
ಯಾರ ಹೊಟ್ಟೆಯಲ್ಲಿ ಹುಟ್ಟಿದ ಮಗುವೋ ಏನೋ, ಎರಡು ದಿನದ ಹಿಂದೆ ಜನಿಸಿದ ಗಂಡು ಮಗುವಿನ ಮೃತದೇಹ ಕಾಫಿ ತೋಟದೊಳಗೆ ಪತ್ತೆಯಾಗಿದೆ. 
ಹುಟ್ಟಿದಾಗ ಹೊಕ್ಕಳು ಬಳ್ಳಿಯನ್ನೂ ಸರಿಯಾಗಿ ಕತ್ತರಿಸದೆ ಹೆತ್ತಾಕೆ ತೋಟದೊಳಗೆ ಎಸೆದಿದ್ದಾಳೆ.
ಸ್ಥಳಕ್ಕೆ ಪೊಲೀಸರು, ಆಸ್ಪತ್ರೆ ಸಿಬ್ಬಂದಿಗಳು ತೆರಳಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಶಕ್ಕೆ ಪಡೆದಿದ್ದಾರೆ.
[26/08, 7:34 PM] pannangaraj1: ಕೊರೋನಾ ಕಾಲದಲ್ಲಿ ’ಮಿಸ್ ಕಾಲ್ ಕೊಡಿ ಪಾಠ ಕೇಳಿ ಅಭಿಯಾನ’ ಆರಂಭಿಸಿದ ಶಿಕ್ಷಕ 
ಕ್ರೀಯಾಶೀಲ ಶಿಕ್ಷಕ ಟಿ.ಪಿ.ಉಮೇಶ್ ಅವರಿಗೆ ರಾಷ್ಟ್ರೀಯ ಅತ್ಯತ್ತಮ ಶಿಕ್ಷಕ ಪ್ರಶಸ್ತಿ
ಎಂ.ಜೆ.ತಿಪ್ಪೇಸ್ವಾಮಿ
ಚಿತ್ರದುರ್ಗ, ಆ.೨೬
ಹೊಳಲ್ಕೆರೆ ತಾಲ್ಲೂಕಿನ ಅಮೃತಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಟಿ.ಪಿ.ಉಮೇಶ್ ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಇವರ ಉತ್ತಮ ಸೇವೆಯನ್ನು ಗುರುತಿಸಿರುವ ಶಿಕ್ಷಣ ಇಲಾಖೆ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕೇಂದ್ರ ಶಿಕ್ಷಣ ಇಲಾಖೆಯಿಂದ ಶಿಕ್ಷಕರಿಗೆ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಸೆಪ್ಟೆಂಬರ್ ೫ ರಂದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.  
 ಹೊಳಲ್ಕೆರೆ ತಾಲ್ಲೂಕಿನ ತೊಡರನಹಾಳ್ ಗ್ರಾಮದ ಸಾಸಲರ ಪರಮೇಶ್ವರಪ್ಪ ಹಾಗೂ ಜಯಮ್ಮ ದಂಪತಿಯ ಜೇಷ್ಟ ಪುತ್ರರಾಗಿ ೨೦.೦೭.೧೯೮೧ ರಂದು ಉಮೇಶ್ ಜನಿಸಿದರು. ತಾಯಿಯ ತವರೂರು ಸಿರಿಗೆರೆ ಬಳಿಯ ಹನುಮನಹಳ್ಳಿಯಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಮುಗಿಸಿದರು. ಬಳಿಕ ಸಿರಿಗೆರೆಯಲ್ಲಿ ಪ್ರೌಢಶಿಕ್ಷಣ, ಪಿಯುಸಿಯಲ್ಲಿ ೯ನೇ ರ‍್ಯಾಂಕ್ ಗಳಿಸಿದರು. ಬಡತನದ ಕಾರಣ ಉನ್ನತ ಶಿಕ್ಷಣದ ಬದಲು ಚಿತ್ರದುರ್ಗದ ಸರ್ಕಾರಿ ಶಿಕ್ಷಕರ ತರಬೇತಿ ಶಾಲೆಯಲ್ಲಿ ಟಿಸಿಹೆಚ್ ಮುಗಿಸಿದರು.
 ಬಳ್ಳಾರಿ ಜಿಲ್ಲೆ ಚಿಕ್ಕಬಳ್ಳಾರಿಯಲ್ಲಿ ೨೦೦೪ ರ ಜನವರಿಯಲ್ಲಿ ಪ್ರಪ್ರಥಮವಾಗಿ ಶಿಕ್ಷಕ ವೃತ್ತಿ ಆರಂಭಿಸಿದರು. ನಂತರ ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ಕೇಶವಾಪುರ ಶಾಲೆಯಲ್ಲಿ ಸೇವೆ ಸಲ್ಲಿಸಿದರು. ಬಳಿಕ ಹೊಳಲ್ಕೆರೆಯ ಸರ್ಕಾರಿ ಪ್ರಾಥಮಿಕ ಶಾಲೆ ಅಮೃತಾಪುರ ಶಾಲೆಗೆ ವರ್ಗಾವಣೆಗೊಂಡರು. ಎಂಎ ಎಇಡಿ ಪದವೀಧರ ಟಿ.ಪಿ.ಉಮೇಶ್ ಕಳೆದ ೧೨ ವರ್ಷಗಳಿಂದ ಅಮೃತಾಪುರ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
 ಕೊರೋನಾ ಸಂಕಷ್ಟದ ಸಮಯದಲ್ಲಿ ಕೆಲಸಕ್ಕೆ ರಜೆ ಹಾಕದೆ ಕರ್ತವ್ಯ ನಿರ್ವಹಿಸಿದ್ದಾರೆ. ಶಾಲೆಯಲ್ಲೇ ಉಳಿದು ಆನ್‌ಲೈನ್ ಪಾಠ ಬೋಧಿಸಿರುತ್ತಾರೆ. ನೆಟ್ ಇಲ್ಲದ ಮಕ್ಕಳ ಮೊಬೈಲ್‌ಗೆ ಇವರೇ ಕರೆಮಾಡಿ ಪಾಠ ಹೇಳಿದ್ದಾರೆ. ಕರೆನ್ಸಿ ಇಲ್ಲದ ಬಡಮಕ್ಕಳು ಮಿಸ್‌ಕಾಲ್ ಕೊಟ್ಟರೆ ಇವರೇ ಕರೆಮಾಡಿ ಪಾಠ ಬೋಧಿಸಿದ್ದಾರೆ. ಕೊರೋನಾ ಕಾಲದಲ್ಲಿ ’ಮಿಸ್ ಕಾಲ್ ಕೊಡಿ ಪಾಠ ಕೇಳಿ ಅಭಿಯಾನ’ ಆರಂಭಿಸಿದ ಇವರು ಎರಡು ವರ್ಷದಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ. 
 ಇವರ ನಿಸ್ವಾರ್ಥ ಹಾಗೂ ಪರಿಶ್ರಮದ ಶೈಕ್ಷಣಿಕ ಸೇವೆಗೆ ೨೦೧೭ ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ೨೦೧೩ ಹಾಗೂ ೨೦೧೯ ರಲ್ಲಿ ರೋಟರಿ ಇಂಟರ್ ನ್ಯಾಷನಲ್‌ನಿಂದ ನೇಷನ್ ಬಿಲ್ಡರ್ ಅವಾರ್ಡ್ ಪಡೆದಿದ್ದಾರೆ. ಪತ್ನಿ ಟಿ.ಬಿ.ಅನಿತಾ ಸಹ ವಿಜ್ಞಾನ ಶಿಕ್ಷಕರಾಗಿದ್ದು, ನ್ಯಾಷನಲ್ ಇನ್ನೋವೇಟಿವ್ ಟೀಚರ್ ಅವಾರ್ಡಿ ಆಗಿದ್ದಾರೆ. ಈ ಬಹುಮುಖ ಪ್ರತಿಭೆಯ ಶಿಕ್ಷಕನ ಶ್ರಮದಿಂದ ಹಿಂದುಳಿದ ಹೊಳಲ್ಕೆರೆ ಅಮೃತಾಪುರ ಶಾಲೆ ಹೈಟೆಕ್ ಆಗಿದೆ.
 ಶಾಲೆಯಲ್ಲಿದ್ದ ಮೂರು ಕೊಠಡಿಗಳಲ್ಲಿ ಪ್ರಕೃತಿ ವಿಕೋಪದಿಂದ ೨೦೧೫ ರಲ್ಲಿ ಎರಡು ಕೊಠಡಿಗಳು ಬಿದ್ದು ಹೋದವು. ಸರ್ಕಾರದ ನೆರವು ಸಿಗದಿದ್ದಾಗ ಎರಡು ವರ್ಷ ಗ್ರಾಮದ ಗುಡಿ, ಮರದ ನೆರಳಿನಲ್ಲಿ, ತಾತ್ಕಾಲಿಕ ಟೆಂಟ್‌ನಲ್ಲಿ ತರಗತಿಗಳನ್ನು ನಡೆಸಿದ್ದರು. ೨೦೧೬ ರಲ್ಲಿ ಖಾಸಗಿ ಓಉಔ ಓಸಾಟ್ ಮತ್ತು ರೋಟರಿ ಬೆಂಗಳೂರು ಎಂಬ ಸಂಸ್ಥೆ ಸಂಪರ್ಕಿಸಿ ಅವರ ಒಪ್ಪಿಸಿ ೩೦ ಲಕ್ಷ ರೂಗಳಲ್ಲಿ ಸುಸಜ್ಜಿತ ನಾಲ್ಕು ಕೊಠಡಿಗಳು ಹಾಗೂ ಬಾಲಕ, ಬಾಲಕಿಯರಿಗೆ ಶೌಚಾಲಯ ನಿರ್ಮಿಸಲು ನೆರವು ಪಡೆದರು.
 ಮಕ್ಕಳಿಗೆ ಬೆಂಗಳೂರು ರೋಟರಿಯಿಂದ ೨೦ ಮರದ ಡೆಸ್ಕ್ ಹಾಗೂ ೬೦ ರೀಡಿಂಗ್ ಟೇಬಲ್ ಮತ್ತು ವಾಟರ್ ಫಿಲ್ಟರ್ ಸೇರಿ ೩ ಲಕ್ಷ ರೂ.ಗಳ ವಸ್ತುಗಳ ದೇಣಿಗೆ ಪಡೆದಿದ್ದಾರೆ. ಸ್ಥಳೀಯ ದಾನಿಗಳಿಂದ ೩ ಲಕ್ಷ ರೂ.ಗಳಲ್ಲಿ ರಂಗಮಂದಿರ ನಿರ್ಮಿಸಿದ್ದಾರೆ. ಸ್ನೇಹಿತ ದಾನಿಗಳಿಂದ ೧ ಲಕ್ಷ ರೂ. ಮೌಲ್ಯದ ೩ ಲ್ಯಾಪ್‌ಟಾಪ್ ಪಡೆದು Iಅಖಿ ಲ್ಯಾಬ್ ನಿರ್ಮಿಸಿ ಪಾಠ ಮಾಡುತ್ತಿದ್ದಾರೆ.  ಶಾಲೆಯಲ್ಲಿ ಏನೇ ತೊಂದರೆ ಇದ್ದರೂ ಯಾವತ್ತೂ ಮಕ್ಕಳ ದಾಖಲಾತಿ ಕಡಿಮೆಯಾಗದಂತೆ ನೋಡಿಕೊಂಡಿದ್ದಾರೆ.
 ಕೇವಲ ಶಿಕ್ಷಕರಾಗಿ ಕೆಲಸ ಮಾಡಿದ್ದಲ್ಲದೇ ವಿವಿಧ ವಿಷಯಗಳ ಶಿಕ್ಷಕರಿಗೂ ತರಬೇತಿ ನೀಡಿದ್ದಾರೆ. ನಲಿ-ಕಲಿ, ಕನ್ನಡ ಸಮಾಜ ಪರಿಸರ ವಿಷಯಾಧಾರಿತ, ಜೀವನ ವಿಜ್ಞಾನ, ಯೋಗ ಮುಂತಾದ ಪಠ್ಯಾಧಾರಿತ ಹಾಗೂ ಅಅಇ  ಮೌಲ್ಯಮಾಪನ ಮತ್ತು ಖಿPಆ ಯಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಸಂಪನ್ಮೂಲ ಸಾಹಿತ್ಯ ತಯಾರಿಯಲ್ಲಿ ತೊಡಗಿಕೊಂಡು ೨ ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ಶೇಕ್ಷಣಿಕ ತರಬೇತಿ ನೀಡಿದ್ದಾರೆ.
 ಶಿಕ್ಷಕರು, ಸೃಜನಶೀಲ ಬರಹಗಾರರಾಗಿರುವ ಇವರು, ೬ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.  ಬರೆದಿದ್ದಾರೆ. ನನ್ನಯ ಸೈಕಲ್ ಟ್ರಿಣ್ ಟ್ತಿಣ್ ಟ್ರಿಣ್, ವಚನಾಂಜಲಿ, ಫೋಟೊಕ್ಕೊಂದು ಫ್ರೇಮು, ಅಪ್ಪ ಕೊಡಿಸಿದ ಮೊದಲ ಪುಸ್ತಕ, ವಚನವಾಣಿ, ದೇವರಿಗೆ ಬೀಗ ಎಂಬ ಸಾಹಿತ್ಯಿಕ ಶೈಕ್ಷಣಿಕ ಕೃತಿಗಳ ರಚಿಸಿದ್ದಾರೆ. ಇವರ ಪರಿಶ್ರಮಕ್ಕೆ ೨೦೨೧ನೇ ಸಾಲಿನಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಈಗ ೨೦೨೨ನೇ ಸಾಲಿನ ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
[26/08, 7:34 PM] pannangaraj1: ಜಿಲ್ಲೆಗೆ ಹೊಸ ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಧಾರ, ಖೂಬಾ ಹರ್ಷ
ಬೀದರ, ಆ. 26 ಃ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಬೀದರ
ಜಿಲ್ಲೆಗೆ ಹೊಸ ವಿಶ್ವವಿದ್ಯಾಲಯ ಸ್ಥಾಪನೆಯ ನಿರ್ಧಾರಕ್ಕೆ ಕೇಂದ್ರ
ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಮತ್ತು
ರಸಾಯನಿಕ ಹಾಗೂ ರಸಗೊಬ್ಬರ ರಾಜ್ಯ ಖಾತೆ ಸಚಿವರು ಸ್ವಾಗತಿಸಿ
ಹರ್ಷ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ.ಎನ್. ಅಶ್ವಥನಾರಾಯಣ ಅವರಿಗೆ
ಬೀದರ ಲೋಕಸಭಾ ಕ್ಷೇತ್ರದ ಜನತೆಯ ಪರವಾಗಿ
ಧನ್ಯವಾದಗಳು ತಿಳಿಸಿದ್ದಾರೆ.
ಮಾತೃ ಹೃದಯಿ ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿಯವರು, ಕೆಲ ದಿನಗಳ ಹಿಂದಷ್ಟೆ ರೂ. 1, 110
ಕೋಟಿಯಡಿ ಭಾಲ್ಕಿ ಹಾಗೂ ಔರಾದ ತಾಲೂಕಿನ ನೀರಾವರಿ
ಯೋಜನೆಗಳಿಗೆ ಮಂಜೂರಾತಿ ನೀಡಿದ್ದರು ಮಾನ್ಯ
ಮುಖ್ಯಮಂತ್ರಿಗಳು ಜಿಲ್ಲೆಯ ಅಭಿವೃದ್ದಿಯ ಕುರಿತಾಗಿ ವಿಶೇಷ
ಕಾಳಜಿಯನ್ನು ಇಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಈ ಹೊಸ ವಿಶ್ವವಿದ್ಯಾಲಯದಡಿ 140 ಪ್ರಥಮ ದರ್ಜೆ
ಕಾಲೇಜುಗಳು ಸೇರಲಿದ್ದು, ಜಿಲ್ಲೆಯ ಶೈಕ್ಷಣೀಕ
ಅಭಿವೃದ್ದಿಯೊಂದಿಗೆ, ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ
ಹೆಚ್ಚಿನ ಒಳಿತಾಗಲಿದೆ, ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹೆಚ್ಚಿನ
ಅನುಕೂಲವಾಗಲಿದೆ ಮತ್ತು ಪ್ರಾದೇಶಿಕ ಅಸಮಾನತೆ
ನಿವಾರಣೆಯಾಗಲಿದೆ.
ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ದಿ ಮಾಡುವುದಾಗಿ
ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ್ದರು, ಅದರಂತೆಯೆ
ನಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯ ಜನತೆ ನಮ್ಮ ಸರ್ಕಾರ
ನೀಡುತ್ತಿರುವ ಕೊಡುಗೆಗಳು, ಯೋಜನೆಗಳನ್ನು ಸದಾಕಾಲ
ನೆನಪಿಟ್ಟುಕೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ರೈತ ವಿದ್ಯಾನಿಧಿ
ಯೋಜನೆಯ ವಿಸ್ತಾರ, ಗ್ರೂಪ್-ಡಿ ಹುದ್ದೆಗೆ ಸಂದರ್ಶನ
ರದ್ದುಗೊಳಿಸಿರುವುದು, ಹುತಾತ್ಮ ಯೋಧರ ಅವಲಂಬಿತರಿಗೆ
ಸರ್ಕಾರಿ ಉದ್ಯೋಗ ನೀಡುವ ಇತ್ಯಾದಿ ಎಲ್ಲಾ ನಿರ್ಧಾರಗಳು
ಸಮಂಜಸವಾಗಿವೆ, ಸಮಾಜದ ಎಲ್ಲಾ ವರ್ಗದ ಜನರಿಗೆ ಒಳಿತಾಗುವ
ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿ, ರಾಜ್ಯ ಸರ್ಕಾರದ
ನಿರ್ಧಾರಗಳನ್ನು ಕೇಂದ್ರ ಸಚಿವರು ಸ್ವಾಗತಿಸಿದ್ದಾರೆ.
[26/08, 7:34 PM] pannangaraj1: ಯಲ್ಲಾಪುರ : ತಾಲೂಕಿನ ಪಣಸಗುಳಿಯ ಬ್ರಿಡ್ಜ್ ಬಳಿ ಲಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದ ಸಂದೀಪನ ಮೃತ ದೇಹವು ಶುಕ್ರವಾರ ಪತ್ತೆಯಾಗಿದೆ. ಸೇತುವೆಯ ಮೇಲಿನಿಂದ ನದಿಗೆ ಬಿದ್ದ ಲಾರಿಯನ್ನು ಗುರುವಾರ ಮೇಲಕ್ಕೆತ್ತಲಾಗಿತ್ತು. 
 ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಆ ಸಂದರ್ಭದಲ್ಲಿ ಲಾರಿ ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಸಲಾಯಿತು. ಗ್ರಾಮಸ್ಥರ ನೆರವಿನೊಂದಿಗೆ ಜೆಸಿಬಿ, ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಲಾಯಿತು. ಲಾರಿ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಲಾರಿಯಲ್ಲಿ ಸಿಲುಕಿದ್ದಾನೆಂದು ಹೇಳಲಾದ ವ್ಯಕ್ತಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿರಬಹುದೆಂದು ಅಂದಾಜಿಸಲಾಗಿತ್ತು. 
 ಕಾರ್ಯಾಚರಣೆಯಲ್ಲಿ ಕರ್ನಾಟಕ ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್.ಡಿ.ಆರ್.ಎಫ್) ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು  ತೊಡಗಿಕೊಂಡಿದ್ದರು. ಸ್ಥಳದಲ್ಲಿ ತಹಶೀಲ್ದಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.
[26/08, 7:34 PM] pannangaraj1: ಸುಳ್ಳು ಹೇಳಿಕೆ ಕೊಡುವುದನ್ನು ಸಿದ್ದರಾಮಯ್ಯ ನಿಲ್ಲಿಸಬೇಕು : ಸಚಿವ ಉಮೇಶ ಕತ್ತಿ 

ಗದಗ :  ೪೦-೫೦ % ಕಮೀಷನ್  ಕುರಿತು ಭ್ರಷ್ಟಾಚಾರ ನಡೆದಿದ್ದರೆ ರಾಜ್ಯದ  ಜನ ನಮ್ಮನ್ನು ರಸ್ತೆಯಲ್ಲಿ  ಓಡಾಡುವದಕ್ಕೂ  ಬಿಡುತ್ತಿರಲಿಲ್ಲ. ಮಾಜಿ ಮುಖ್ಯಮಂತ್ರಿಗಳಾಗಿ ಇತಿಮಿತಿಯಲ್ಲಿ ಏನಾಗಿದೆ ಎಂದು ಚರ್ಚೆ ಮಾಡಬೇಕು, ದೂರು ನೀಡಬೇಕು.  ಆದರೆ, ಸುಳ್ಳು  ಹೇಳಿಕೆಗಳನ್ನು ನೀಡಬಾರದು ಎಂದು ಸಚಿವ ಉಮೇಶ ಕತ್ತಿ ಅವರು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು. 

 ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ಕೆಂಪಯ್ಯ ಯಾರು ಅನ್ನವುದು ಗೊತ್ತಿಲ್ಲ ಬಹಳ ಜನ ಅಸೋಸಿಯೇಶನ್ ಅಧ್ಯಕ್ಷರು ಇದ್ದಾರೆ ಅವರಲ್ಲಿ ಕೆಂಪಯ್ಯ ಅವರು ಒಬ್ಬರು. ಭ್ರಷ್ಟಾಚಾರ ನಡೆದಿದ್ದರೆ ಕುಮಾರಸ್ವಾಮಿ ಆದಿಯಾಗಿ ಕೆಂಪಯ್ಯ, ಸಿದ್ದರಾಮಯ್ಯ  ಕಂಪ್ಲೇಟ್  ಕೊಡಬೇಕು. ಸರಕಾರದ ಬಗ್ಗೆ, ಮಂತ್ರಿಗಳ ಬಗ್ಗೆ ಮತ್ತು ನನ್ನ ವಿರುದ್ದ ಆರೋಪ ಇದ್ದರೂ ಕಂಪ್ಲೇಟ್ ಕೊಡಬೇಕು ಅದನ್ನು ಬಿಟ್ಟು ಬಾಯಿಗೆ ಬಂದದ್ದನ್ನು ಹೇಳಿದರೆ ಸುಳ್ಳು ನಿಜವಾಗುತ್ತಾ ಎಂದು ಎಂದು ಹೇಳಿದರು. 

ಉತ್ತರ ಕರ್ನಾಟಕ್ಕೆ ಅನ್ಯಾಯ ಆದರೆ ರಾಜೀನಾಮೆಗೂ ಸಿದ್ಧ : 
ಮಹದಾಯಿ, ಕೃಷ್ಣ, ಆಲಮಟ್ಟಿ ಅಭಿವೃದ್ಧಿಗೆ ದ್ರೋಹ ಮಾಡಿದರೆ ರಾಜೀನಾಮೆಗೆ ಸಿದ್ದ ಎಂದು ಉತ್ತರ ಕರ್ನಾಟಕ ಪರವಾಗಿ ಮತ್ತೊಮ್ಮೆ ಉಮೇಶ ಕತ್ತಿ ಅವರು ಧ್ವನಿ ಎತ್ತಿದ್ದರು.  ಪ್ರತ್ಯೇಕ ಉತ್ತರ ಕರ್ನಾಟಕ ಧ್ವನಿ ಎತ್ತಬೇಕು. ಉತ್ತರ ಕರ್ನಾಟಕ ವಿಷಯವಾಗಿ ಮಾಧ್ಯಮದವರು ಸ್ಪಂಧಿಸಬೇಕು.  ಅಭಿವೃದ್ಧಿ ನಿಂತರೆ  ಹೋರಾಟ ಇದ್ದೇ ಇರುತ್ತೆ ಎಂದು ಹೇಳಿದರು. 

ಅಖಂಡ ಕರ್ನಾಟಕ ಸಿಎಂ ಆಗುವ ಯೋಗ್ಯತೆ ನನಗಿದೆ : 
ನಮ್ಮವರೇ ಸಿಎಂ  ಆಗಿರುವಾಗ  ಸಿಎಂಗಾಗಿ  ಆಸೆ ಪಡುವದಿಲ್ಲ  ಸಿಎಂ ಅವಕಾಶ ಬಂದರೆ  ಅದೃಷ್ಠ ಅನ್ನಬೇಕು. ನಾನು ಬೆನ್ನು ಹತ್ತಿ  ಹೋಗುವದಿಲ್ಲ ನಾನು  ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗಬೇಕು. ನಾನು ಹಿರಿಯ ರಾಜಕಾರಣಿ, ಅನುಭವ ಇದ್ದವನು, ಇನ್ನೂ ೧೫ ವರ್ಷ ರಾಜಕೀಯ ಜೀವನ ಇದೆ, ಭವಿಷ್ಯದಲ್ಲಿ ನೋಡೋಣ ಎಂದು ಸಚಿವ ಉಮೆಶ ಕತ್ತಿ ಅವರು ಹೇಳಿದರು.

Post a Comment

Previous Post Next Post