*ಮೋಹನದಾಸ್ ಪೈ ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ*

*ಮೋಹನದಾಸ್ ಪೈ ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ*

ನಾಡಿನ ಹೆಸರಾಂತ ಪತ್ರಿಕೆ ಉದಯವಾಣಿ ಸಂಸ್ಥಾಪಕ ಶ್ರೀ ಟಿ. ಮೋಹನದಾಸ್ ಪೈ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಣಿಪಾಲ ಪೈ ಸಮೂಹದ ಶಕ್ತಿಯಾಗಿದ್ದ ಮೋಹನ್ ದಾಸ್ ಪೈ ಅವರು ಶಿಸ್ತು, ಕ್ರಮಬದ್ಧ ಆಡಳಿತಕ್ಕೆ ಹೆಸರಾಗಿದ್ದರು. ಪೈ ಸಮೂಹದ ಯಶಸ್ಸಿನಲ್ಲಿ ಅವರ ಕೊಡುಗೆ ಅಪಾರ.

1970ರ ಲ್ಲಿ ಉದಯವಾಣಿ ಪತ್ರಿಕೆ ಆರಂಭಿಸಿದ ಮೋಹನದಾಸ ಪೈ ಅವರು, ಅಲ್ಪ ಕಾಲದಲ್ಲಿಯೇ ಅದನ್ನು ರಾಜ್ಯದ ಪ್ರಮುಖ ಪತ್ರಿಕೆಗಳ ಪಟ್ಟಿಗೆ ಸೇರಿಸಿದರು. ಮುದ್ರಣ ಮಾಧ್ಯಮದ ತಂತ್ರಜ್ಞಾನದಲ್ಲಿ ಹೊಸ ಪ್ರಯೋಗಗಳ ಹರಿಕಾರರು ಅವರಾಗಿದ್ದರು.

ಮೋಹನದಾಸ ಪೈ ಅವರ ಅಗಲಿಕೆ ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಬಂಧುಗಳು, ಪೈ ಸಮೂಹದ ಸಮಸ್ತರಿಗೂ ಭಗವಂತ ದಯಪಾಲಿಸಲಿ ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Post a Comment

Previous Post Next Post