ಗುರುವಾರ ವಿಶಿಷ್ಟವಾದ ಹಾಗೂ ಅಪೂರ್ವವಾದ ಗುರುಪುಷ್ಯಾಮೃತ ಯೋಗ*ಹಾಗೂ ಸ್ತ್ರೀ ಮಚ್ಚೆ ಮಾಹಿತಿ

ಗುರುವಾರ ವಿಶಿಷ್ಟವಾದ ಹಾಗೂ ಅಪೂರ್ವವಾದ ಗುರುಪುಷ್ಯಾಮೃತ ಯೋಗ*

 *ಗುರುಪುತ್ರರಿಗೆ ಹಾಗೂ ಗುರು ಭಕ್ತರಿಗೊಂದು ಸುಯೋಗ*

 ಗುರುಗಳ ದರ್ಶನ, ಗುರುಗಳ ಪಾದಪೂಜೆ, ಗುರು ಪಾದುಕಾ ಪೂಜೆ, ಗುರು ನಾಮಜಪ, ಗುರು ಕ್ಷೇತ್ರವಾಸ ಅನಂತ ಪುಣ್ಯ ಫಲಗಳನ್ನು ನೀಡಲಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ.

 ಗುರು ಪುಷ್ಯ ಅಮೃತ ಯೋಗ ಕೂಡಿ ಬರುವುದು ಬಹಳ ಅಪರೂಪ.

ಈ ದಿನ ಗುರುಗಳಿಗೆ ಕಡಲೆಕಾಳು, ಹುರಿಗಡಲೆ, ಬೆಲ್ಲ,  ಹಳದಿ ಬಣ್ಣದ ಪುಷ್ಪಗಳು, ಹಳದಿ ವಸ್ತ್ರಗಳು, ಕಡಲೇಹಿಟ್ಟು ಅಥವಾ ಕಡಲೇಕಾಳಿನಿಂದ ಮಾಡಿದ ನೈವೇದ್ಯ ಯಥಾಶಕ್ತಿ ದಕ್ಷಿಣಾ ತಾಂಬೂಲದೊಂದಿಗೆ ಸಮರ್ಪಣೆ ಮಾಡಿ,  ಹಳದಿ ವಸ್ತ್ರಗಳನ್ನು ಧರಿಸಿ ವಿಶೇಷವಾಗಿ ಸಂಕಲ್ಪ ಮಾಡಿ ಉತ್ತರಾಭಿಮುಖವಾಗಿ ಕೂತು ಮಂತ್ರ ಜಪ ಮಾಡಿದರೆ ಗುರು ಕೃಪೆಯಿಂದ ಪುತ್ರ ಸಂತಾನಪ್ರಾಪ್ತಿ, ಅಲಕ್ಷ್ಮೀ ನಿವಾರಣೆ, ವಿಶೇಷ ಧನಯೋಗ, ವಿದ್ಯಾರ್ಥಿಗಳಿಗೆ ವಿದ್ಯೆ, ವಿವಾಹ ಬಯಸುವವರಿಗೆ ಕಂಕಣಯೋಗ, ಹಾಗೂ ವಿಶೇಷ ಜ್ಞಾನಯೋಗಗಳನ್ನು ಪಡೆಯಬಹುದು.

ಇಚ್ಛೆಯಂತೆ ಫಲ ಪಡೆಯಲು ಬೇಕಾದ ಮಂತ್ರವನ್ನು ಗುರುಗಳಿಂದ ಉಪದೇಶ ಪಡೆದು ಕೊಳ್ಳಲು ಬಹುದು

ಪೌರಾಣಿಕ ಕಥೆಯ ಪ್ರಕಾರ ಬ್ರಹ್ಮನು ತನ್ನ ಪುತ್ರಿಯಾದ ಸರಸ್ವತಿಯ ಮದುವೆ ಮಾಡಲು ನಿರ್ಧರಿಸುತ್ತಾನೆ. ಮದುವೆ ದಿನ ಬ್ರಹ್ಮನು ತನ್ನ ಮಗಳ ಅಪ್ರತಿಮ ಸೌಂದರ್ಯವನ್ನು ನೋಡಿ, ಆಕರ್ಷಿತನಾಗುತ್ತಾನೆ. ಮನಸ್ಸು ಗೊಂದಲಕ್ಕೊಳಗಾಗುತ್ತದೆ. ತಾನೇ ತನ್ನ ಸ್ವಂತ ಪುತ್ರಿಯನ್ನು ಮದುವೆಯಾಗಲು ನಿರ್ಧರಿಸುತ್ತಾನೆ. 

ಆದರೆ ಬ್ರಹ್ಮನ ಈ ಮೋಹವು ಭಂಗವಾಗುತ್ತದೆ. ಇದರಿಂದ ಕೋಪಿಷ್ಠನಾದ ಬ್ರಹ್ಮನು ಪುಷ್ಯಾ ನಕ್ಷತ್ರವನ್ನು ಶಾಪಕ್ಕೀಡು ಮಾಡುತ್ತಾನೆ. ಅದೇನೆಂದರೆ ಯಾರು ಪುಷ್ಯಾ ನಕ್ಷತ್ರದಲ್ಲಿ ಮದುವೆಯಾಗುತ್ತಾರೋ ಅವರ ವೈವಾಹಿಕ ಜೀವನವು ವಿಫಲವಾಗಲಿ ಎಂದು ಈ ನಕ್ಷತ್ರಪುಂಜವನ್ನು ಶಪಿಸಿದನು. ಅಂದಿನಿಂದ ಪುಷ್ಯಾ ನಕ್ಷತ್ರದಲ್ಲಿ ವಿವಾಹ ವಿಧಿಗಳನ್ನು ನೆರವೇರಿಸಲಾಗುವುದಿಲ್ಲ

ಶ್ರೀಮತೋ ರಾಘವೇಂದ್ರಸ್ಯ ನಮಾಮಿ ಪದ ಪಂಕಜೇ !
ಕಾಮಿತಾ ಶೇಷ ಕಲ್ಯಾಣ ಕಲನಾ ಕಲ್ಪ ಪಾದಪೌ !!
ಇಂದು ಗುರು ಪುಷ್ಯಾರ್ಕ ಯೋಗವಿದೆ.ಗುರು ಪುಷ್ಯ ಯೋಗ ಎಂದರೆ ಯಾವಾಗ ಪುಷ್ಯಾ ನಕ್ಷತ್ರವು ಗುರುವಾರದ ದಿನ ಬೀಳುತ್ತದೆಯೋ ಆ ಶುಭ ಯೋಗವನ್ನು ಗುರು ಪುಷ್ಯ ಯೋಗವೆಂದು ಕರೆಯುತ್ತಾರೆ. 

ಈ ಯೋಗವನ್ನು ಗುರು ಪುಷ್ಯ ಅಮೃತ ಯೋಗವೆಂದೂ ಕರೆಯುತ್ತಾರೆ.
🌺🌺🌺🌺🌺🌺🌺🌺
*ಗುರು ಪುಷ್ಯಾಮೃತ ಯೋಗ*
🌺🌺🌺🌺🌺🌺🌺🌺🌺

ಪುಷ್ಯ ನಕ್ಷತ್ರದ ಅರ್ಥ ಸಂತೃಪ್ತಿ ಹಾಗೂ ಸಮೃದ್ಧಿ ಎಂಬುದು. *ಪಂಡಿತರು ಹಾಗೂ ಗುರುಹಿರಿಯರು ಈ ನಕ್ಷತ್ರವನ್ನು ಶುಭ ಲಾಭ ತರುವ ನಕ್ಷತ್ರ ಎಂದು ಪರಿಗಣಿಸುತ್ತಾರೆ.*

ಪುಷ್ಯ ನಕ್ಷತ್ರವು ಚಂದ್ರ ಬಲದಿಂದ ಸಂಪತ್ತು ಮತ್ತು ಜ್ಞಾನ ಎರಡನ್ನೂ ನೀಡುತ್ತದೆ ಎಂದು ಹೇಳಲಾಗುತ್ತದೆ. ಬೇರೆ ಬೇರೆ ನಕ್ಷತ್ರಗಳಲ್ಲಿ ಚಂದ್ರನು ಬಂದಾಗ ಬೇರೆ ಬೇರೆ ರೀತಿಯ ಪರಿಣಾಮಗಳು ಬರುತ್ತವೆ...

ಪುಷ್ಯ ನಕ್ಷತ್ರ ಇರುವ ಮಹೂರ್ತದಲ್ಲಿ ಯಾವುದೇ ಕಾರ್ಯಕ್ಕೆ ಕೈ ಹಾಕಿದರೆ ಆ ಕಾರ್ಯ ಸಿದ್ಧಿಸುತ್ತದೆ ಎಂದು ಪಂಚಾಂಗದಲ್ಲಿ ಹಾಗೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. *ಅದರಲ್ಲೂ ಅಪರೂಪಕ್ಕೆ ಗುರುವಾರ ಬೀಳುವ ಗುರು ಪುಷ್ಯಾಮೃತ ಯೋಗವನ್ನು ಬಹಳ ಶುಭಕರ ಎಂದು ಪರಿಗಣಿಸಲಾಗಿದೆ.*

*ಈ ಯೋಗದಲ್ಲಿ ಕೈ ಹಾಕುವ ಕೆಲಸಗಳು ಯಶಸ್ವಿಯಾಗುತ್ತದೆ. *ಉದ್ಯಮಿಗಳಿಗೆ  ಅಥವಾ ವ್ಯಾಪಾರ ಮಾಡುವವರಿಗೆ ಈ ಗುರುಪುಷ್ಯಾಮೃತ ಯೋಗವು ಲಾಭವನ್ನುಂಟುಮಾಡುತ್ತದೆ.*

*ಸೋಮವಾರ, ಗುರುವಾರ ಹಾಗೂ ಭಾನುವಾರ ಪುಷ್ಯ ನಕ್ಷತರ ಬಿದ್ದರೆ ಅದನ್ನು ವರ ನಕ್ಷತ್ರ ಯೋಗ ಎಂದು ಕರೆಯುತ್ತಾರೆ.*  ಈ ಸಮಯದಲ್ಲಿ ಕೈ ಹಾಕುವ ಕೆಲಸಗಳು ಸಿದ್ಧಿಸುತ್ತವೆ. *ಅದರಲ್ಲೂ ಗುರುವಾರ ಬೀಳುವ ಗುರು ಪುಷ್ಯ ಯೋಗವು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ.*
*ಈ ಸಮಯದಲ್ಲಿ ಪುಷ್ಯ ನಕ್ಷತ್ರವು ಎಂಟನೇ ಸ್ಥಾನದಲ್ಲಿರುವ ಕಾರಣ ಅದು ಶುಭಕರ ಎಂದು ಹೇಳುತ್ತಾರೆ.* 

*ಗುರು ಪುಷ್ಯ ನಕ್ಷತ್ರದಲ್ಲಿ ಯಾವುದೇ ವಸ್ತುಗಳನ್ನು ಖರೀದಿಸಿದರು ಆದು ದ್ವೀಗುಣ ಹಾಗೂ ಶುಭಗಳಿಗೆ ಎಂದು ಹೇಳಬಹುದು...*

*ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಈ ದಿನ ತುಂಬಾ ಶುಭಕರ*

● *ಪ್ರವಾಸ ಆರಂಭಿಸಲು ಹೊಸ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಲು*

● *ಗುರುವಿನಿಂದ ಮಂತ್ರಗಳನ್ನು ಕಲಿಯಲು*

● *ಕಾರ್ಯಕ್ರಮಗಳನ್ನು ಆಯೋಜಿಸಲು.*

● *ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು.* ತುಂಬಾ ಅನಕೂಲಕರವಾಗಿದೆ...

*ಈ ನಕ್ಷತ್ರದ ಶುಭ ಮುಹೂರ್ತದಲ್ಲಿ ಖರೀದಿಸಿದ ವಸ್ತುಗಳು ದೀರ್ಘಕಾಲದವರೆಗೆ ಉಪಯುಕ್ತ ಮತ್ತು ಎಂದು ಹೇಳಲಾಗುತ್ತದೆ.*

*ಪುಷ್ಯ ನಕ್ಷತ್ರದ ದೇವರನ್ನು ಗುರು ಎಂದು ಪರಿಗಣಿಸಲಾಗುತ್ತದೆ ಮತ್ತು ಶನಿಯು ಈ ನಕ್ಷತ್ರಪುಂಜದ ನಿರ್ದೇಶನ ಪ್ರತಿನಿಧಿಯಾಗಿ ಪರಿಗಣಿಸಲ್ಪಡುತ್ತಾನೆ. ಬೃಹಸ್ಪತಿ ಶುಭ, ಬುದ್ಧಿವಂತ ಮತ್ತು ಜ್ಞಾನವನ್ನು ನೀಡುತ್ತಾನೆ.*  ಆದರೆ ಶನಿ ಸ್ಥಿರತೆಯ ಸಂಕೇತವಾಗಿದ್ದಾನೆ ಆದ್ದರಿಂದ ಈ ಎರಡು ರಾಶಿಗಳ ಶುಭ ಯೋಗ `ಪುಶ್ಯ ನಕ್ಷತ್ರ`ವನ್ನು ಶುಭ ಮತ್ತು ಶಾಶ್ವತವಾಗಿಸುತ್ತದೆ.

ಈ ಯೋಗದಲ್ಲಿ ಮಂತ್ರ ಪಠಣೆ, ಧ್ಯಾನ ಹಾಗೂ ದಾನ ಮಾಡಿದರೆ ತುಂಬಾ ಒಳ್ಳೆಯ ಫಲಗಳು ಸಿಗುತ್ತವೆ.

ಮೇಲೆ ತಿಳಿಸಿರುವ ಹಾಗೆ ಬರುವ ಜನೇವರಿ 28 ನೇ ತಾರಿಖನಂದು ಬನದ ಹುಣ್ಣಿಮೆ, ಗುರುವಾರ ಹಾಗೂ ಪುಷ್ಯ ನಕ್ಷತ್ರ ಬಂದಿರುತ್ತದೆ...

*ಗುರು ಪುಷ್ಯಾಮೃತ ಯೋಗ*  ಎಂದು ಈ ದಿನ ಹೇಳುತ್ತಾರೆ, ಆದ್ದರಿಂದ ಈ ದಿನ *ಶ್ರೀ ರಾಘವೇಂದ್ರ ಸ್ತೋತ್ರ* 108 ಸಲ ಪಠಣ ಮಾಡಬೇಕು...

*ಈ ರೀತಿ ಪಠಣ ಮಾಡಿದರೆ ನಮ್ಮ ಕಠಿಣವಾದ ಕೆಲಸಗಳು ಅಥವಾ ಸಮಸ್ಯೆಗಳು ದೂರವಾಗತ್ತವೆ...*

*ಮಕ್ಕಳಿಗೆ ಗುರು ಭೋಧನೇ ಮಾಡಿಸಲು ತುಂಬಾ ಯೋಗ್ಯವಾದ ದಿನ....*

*ಬ್ರಾಹ್ಮಣ ರಿಗೆ ಧವಸಧಾನ್ಯ ಗಳನ್ನು ದಾನ ಮಾಡಿದರೆ ನಮ್ಮ ಗಳ ಕೆಲವು ಅನಾರೋಗ್ಯ ದ ಸಮಸ್ಯೆಗಳು ದೂರವಾಗುತ್ತವೆ...*

*ಗುರು ಪುಷ್ಯಾಮೃತ ಯೋಗ ಪೂಜೆ ಮಾಡುವ ವಿಧಾನ*

ಅಂದು ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಸ್ನಾನ ಮುಗಿಸಿ, ನಿತ್ಯ ಸಂಧಾವಂಧನೆ ಕರ್ಮಾದಿಗಳು ಮುಗಿಸಬೇಕು...
ತದನಂತರ ಒಂದು ಮಣೆ ಹಾಕಿ ಅದರ ಮೇಲೆ ರಾಯರ ಫೋಟೋ ಇಡಿ. ಹೂ ಮಾಲೆ ಹಾಕಿ. ಎರಡು ತುಪ್ಪದ ದೀಪಗಳನ್ನು ಹಚ್ಚಿ.. ಕೆಂಪು ಕಲ್ಲುಸಕ್ಕರೆ ಹಾಗೂ ಬಾಳೆಹಣ್ಣು ನೇವಿದ್ಯ ಕ್ಕೆ ಇಟ್ಟುಕೊಳ್ಳಿ...

ಸಾದ್ಯವಾದರೆ ಮನೆಯ ಪುರುಷ ಸದಸ್ಯರೆಲ್ಲರೂ  *ಶ್ರೀ ರಾಘವೇಂದ್ರ ಸ್ತೋತ್ರ* ವನ್ನೂ 54 / 108 ಸಲ ಹೇಳಿ... ತುಂಬಾ ಒಳ್ಳೆಯ ಫಲಗಳು ಲಭೀಸುತ್ತವೆ... ಸಾದ್ಯವಾದಷ್ಟೂ ಪ್ರಯತ್ನ ಮಾಡಿ... 
ಓಂ ಶ್ರೀ ಗುರು ರಾಘವೇಂದ್ರಾಯ ನಮ:🙏🙏🙏🙏💐💐💐💐

ಆಗಸ್ಟ್ 25, 2022, ಗುರುವಾರ
ಗುರುಪುಷ್ಯಾಮೃತ ಯೋಗದ ಸಮಯ

  06:08 AM ನಿಂದ 04:16 PM.

  

    ▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬

Post a Comment

Previous Post Next Post