*ನಿಗದಿತ ಸಮಯದೊಳಗೆ ಕಕ್ಷಿದಾರರಿಗೆ ನ್ಯಾಯವನ್ನು ಒದಗಿಸಲು ಪ್ರಯತ್ನಿಸಿ : ವಕೀಲರಿಗೆ ಮುಖ್ಯಮಂತ್ರಿಗಳ ಕಿವಿಮಾತು*

*ನಿಗದಿತ ಸಮಯದೊಳಗೆ ಕಕ್ಷಿದಾರರಿಗೆ ನ್ಯಾಯವನ್ನು ಒದಗಿಸಲು ಪ್ರಯತ್ನಿಸಿ : ವಕೀಲರಿಗೆ ಮುಖ್ಯಮಂತ್ರಿಗಳ ಕಿವಿಮಾತು*

ಸವಣೂರು, ಆಗಸ್ಟ್ 21 :

 ವಕೀಲರು ನಿಗದಿತ ಸಮಯದೊಳಗೆ ಕಕ್ಷಿದಾರರಿಗೆ ನ್ಯಾಯವನ್ನು ಒದಗಿಸಲು ಪ್ರಯತ್ನಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಸವಣೂರು ವಕೀಲರ ಸಂಘದ ನೂತನ ಕಟ್ಟಡದ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನಾ ಕಾರ್ಯವನ್ನು ನೆರವೇರಿಸಿ ಮಾತನಾಡಿದರು.

ಡಿಜಟಲೀಕರಣದಿಂದ ನ್ಯಾಯಾಂಗ ವ್ಯವಸ್ಥೆ ಚುರುಕಾಗಿದೆ. ನ್ಯಾಯಾಲಯದ ತೀರ್ಪುಗಳ ಡಿಜಿಟಲೈಸೇಷನ್ ನ್ನು ಮಾಡಲಾಗಿದೆ. ವಕೀಲರ ವಾದ, ನ್ಯಾಯಾಲಯದ ಎಲ್ಲ ಪ್ರಕ್ರಿಯೆಗಳು ಡಿಜಿಟಲೀಕರಣವಾಗುತ್ತಿದೆ. ಈ ನಿಟ್ಟಿನಲ್ಲಿ ವಕೀಲರ ಸಂಘಕ್ಕೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ನ್ಯಾಯಾಲಯ ಪ್ರಕರಣದ ಮಾನಿಟರಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ನ್ಯಾಯಾಲಯದ ಗ್ರಂಥಾಲಯಗಳು ಡಿಜಿಟಲೈಸ್ ಆಗುತ್ತಿದೆ ಎಂದರು.

*ಸವಣೂರಿನ ವಕೀಲ ಸಂಘಕ್ಕೆ ಮೂಲಭೂತ ಸೌಕರ್ಯ :*
ಸವಣೂರು ನ್ಯಾಯಾಲಯಕ್ಕೆ ದೊಡ್ಡ ಇತಿಹಾಸವಿದೆ. ಸ್ವಾತಂತ್ರ್ಯಪೂರ್ವದಲ್ಲಿಯೇ ಸವಣೂರು, ನ್ಯಾಯ ಕೊಡುವ ಸ್ಥಾನವಾಗಿತ್ತು. ಸವಣೂರಿನ ಇತಿಹಾಸದ ಪರಂಪರೆಯನ್ನು ಇಲ್ಲಿಯ ವಕೀಲರು ಉಳಿಸಿಕೊಂಡು ಬಂದಿರುವುದಕ್ಕೆ ಅಭಿನಂದನೆಗಳು. ಸವಣೂರಿನ ವಕೀಲ ಸಂಘಕ್ಕೆ ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನುಕಲ್ಪಿಸಲಾಗುವುದು ಎಂದರು.

*ಕಾನೂನಿನಲ್ಲಿ ನೈತಿಕತೆ ಮತ್ತು ಮಾನವೀಯತೆ ಇರಬೇಕು :*
ಮನುಷ್ಯ ಮಾಡಿರುವ ಕಾನೂನುಗಳು, ಸಮಾಜದಲ್ಲಿ ಶಿಸ್ತು ಪಾಲನೆಗಾಗಿ ಮಾಡಲಾಗಿದ್ದು, ಶಿಕ್ಷೆಯನ್ನು ಆಧರಿಸಿವೆ. ನೈಸರ್ಗಿಕ ಕಾನೂನುಗಳು, ಸತ್ಯ ನ್ಯಾಯ, ಧರ್ಮದ ಮಾರ್ಗವನ್ನು ತಿಳಿಸುತ್ತಿದ್ದು, ಪುರಸ್ಕಾರವನ್ನು ಆಧರಿಸಿವೆ. ನಾವು ರೂಪಿಸುವ ಕಾನೂನಿನಲ್ಲಿ ನೈತಿಕತೆ ಮತ್ತು ಮಾನವೀಯತೆ ಇರಬೇಕು. ಸಾಮಾನ್ಯ ಮನುಷ್ಯನಿಗೆ ನ್ಯಾಯ ದೊರಕಿಸಿಕೊಡುವುದೇ ಕಾನೂನಾತ್ಮಕ ನ್ಯಾಯ, ನಿಸರ್ಗದತ್ತವಾದ ನ್ಯಾಯ ಮತ್ತು ಸಾಮಾಜಿಕ ನ್ಯಾಯಗಳ ತಾತ್ಪರ್ಯವಾಗಿದೆ ಎಂದರು.

Post a Comment

Previous Post Next Post